ಗಿಳಿಯಿತ್ತ ಮಹಾಶ್ವೇತಾ
ವಳೋಕನೋತ್ಕಂಠೆಯಿಂದೆ ಜೀವಂ ಬಿಟ್ಟ
ತ್ತೆಳಸುತಿರಲಮೃತಕರಮಂ
ಡಳಮಧ್ಯದ ಪುಂಡರೀಕದೇಹಮದಾಗಳ್      ೬೦

ಉದಯಂ ರಾಜೇಂದ್ರಚಂದ್ರಾತ್ಮಕನೆನಿಸಿದ ಚಂದ್ರಂಗೆ ಸಾರ್ತಂದುದಿನ್ನ
ಭ್ಯುದಯಂ ಲೋಕತ್ರಯಕ್ಕೆಂಬುದನಱಪುವೆನಾಂ ರಾಗದಿಂದೀಗಳೇಂಬಂ
ದದೆ ರಕ್ತಾಶೋಕಚೂತದ್ರುಮಸಮುದಿತ ಬಾಲಪ್ರವಾಳಧ್ವಜಂ ಬಂ
ದುದು ಚಂಚಚ್ಚಂಚರೀಪ್ರಕರ ಶುಕಕುಲಾಲಾಪಕಾಂತಂ ವಸಂತಂ          ೬೧

ಎಳಮಾವಿನ ಚೆಲ್ವಿಂ ಪೊಂ
ಬಳೆಗಂಪಿಂ ತೆಂಕಣೆಲರಿನೆಳನೀರ್ಗಳಿನಿಂ
ದೊಳದಿಂ ತಣಿಯಿಪುದು ಜನಂ
ಗಳ ಪಂಚೇದ್ರಿಯಮನಂದು ಬಂದ ವಸಂತಂ            ೬೨

ತಳಿರಿಂ ತಳ್ತಿತ್ತಶೋಕದ್ರುಮವೆಳಗೊನರಿಂದೊಂದಿತಿಮ್ಮಾವು ಬಲ್ಪೊಂ
ಬಳೆಯಿಂ ಬಳ್ಕಿತ್ತು ಕೌಂಗಚ್ಚಲರ ತುಱುಗಲಂ ಪೇಱಕೊಂಡಿರ್ದುದೆತ್ತಂತಿಳಕಂ
ಪೂಗೊಂಚಲಿಂದೊಂದಿದುದು ಕುರವಕಂ ಕಂಜಕಿಂಜಲ್ಕದಿಂ ಕ
ಣ್ಗೊಳಿಸಿತ್ತಬ್ಚಾಕರಂ ತಂಪಲೆವ ಮಲಯಮಂದಾನಿಲಾಂದೋಳದಿಂದಂ      ೬೩

ಬನವಂ ಕೆಂದಳಿರಿಂದೆ ಬಾಸಣಿಸುತಂ ದಿಗ್ರಾಜಿಯಂ ಬಂದ ಮಾ
ವಿನ ಕಂಪಿಂದಮೆ ಪೂಸುತಂ ಬಿರಯಿಯಂ ಮತ್ತಾಳಿನೀ ಕೋಕಿಲ
ಧ್ವನಿಯಿಂದಂಜಿಸುತಂ ಸಮಸ್ತ ಜನಮಂ ಪುಷ್ಪಾಸವಾಸಾರ ದು
ರ್ದಿನದಿಂ ಸೊರ್ಕಿಸುತಂ ಪೊದೞ್ದುದು ಜಗತ್ಕಾಂತಂ ವಸಂತಾಗಮಂ    ೬೪

ಬಿರಯಿಗಳಂ ಬೆರ್ಚಿಸಲಿದೆ
ಪರಮಾಸ್ತ್ರಂ ಮನುಮತಂಗೆನಿಪ್ಪ ವಸಂತಂ
ಬರಲೊಡನೊರ್ಮೆಯೆ ಗಂಧ
ರ‍್ವರಾಜಸುತೆ ಮನದೊಳಾಗಳಾಕುಲೆಯಾದಳ್      ೬೫

ನಿರಾತಂಕವಾದ ಸುಖವನ್ನುಂಟುಮಾಡುತ್ತೇನೆ !” ಎಂದು ಪ್ರೀತಿಯಿಂದ ನಿಶ್ಚ್ಚಯಿಸಿ ರಾಜನು ತನ್ನ ಜೀವವನ್ನು ಒಪ್ಪಿಸಿಬಿಟ್ಟನು. ಮಹಾತ್ಮರು ಕೊಡದಿರುವುದು ಯಾವುದಿದೆ? (ಶೂದ್ರಕರಾಜನು ಪ್ರಾಣವನ್ನು ಬಿಟ್ಟನು.) ೬೦. ಈಕಡೆ ಗಿಳಿಯು ಮಹಾಶ್ವೇತೆಯನ್ನು ನೋಡಬೇಕೆಂಬ ಹೆಬ್ಬಯಕೆಯಿಂದ ಚಂದ್ರಮಂಡಲದ ಮಧ್ಯದಲ್ಲಿರುವ ಪುಂಡರೀಕದೇಹವನ್ನು ಬಯಸುತ್ತಿರುವಂತೆಯೇ ತನ್ನ ಜೀವವನ್ನು ಬಿಟ್ಟಿತು. ೬೧. “ಚಂದ್ರಾಪೀಡಮಹಾರಾಜನ ಸ್ವರೂಪನಾದ ಚಂದ್ರನಿಗೆ ಇನ್ನು ಏಳಿಗೆಯ ಕಾಲವು ಸನ್ನಿಹಿತವಾಗಿಬಿಟ್ಟಿತು. ಆದ್ದರಿಂದ ಇನ್ನು ಮೂರು ಲೋಕಗಳಿಗೂ ಏಳಿಗೆಯುಂಟಾಗುತ್ತದೆ ಎಂಬ ಈ ವಿಚಾರವನ್ನು ನಾನು ಪ್ರೀತಿಯಿಂದ ಮೂರು ಲೋಕಗಳಿಗೂ ತಿಳಿಸುತ್ತೇನೆ” ಎಂಬ ಇಚ್ಛೆಯಿಂದಲೋ ಎಂಬಂತೆ ವಸಂತಕನು ಕೆಂಪು ಅಶೋಕ ಮತ್ತು ಮಾವಿನ ಮರಗಳ ಆಗತಾನೆ ಬಿಡುತ್ತಿರುವ ಎಳೆಚಿಗುರೆಂಬ ಬಾವುಟವನ್ನು ಮೆರೆಸುತ್ತಾ ಹಾರಾಡುತ್ತಿರುವ ದುಂಬಿಗಳ ಗುಂಪು ಮತ್ತು ಗಿಳಿಗಳ ಸಮೂಹದ ಧ್ವನಿಯಿಂದ ಮನೋಹರನಾಗಿ ಬಂದನು. ೬೨. ಬಂದ ವಸಂತನು ಎಳಮಾವಿನ ಸೌಂದರ್ಯದಿಂದಲೂ ಹೊಂಬಾಳೆಯ ಸುವಾಸನೆಯಿಂದಲೂ ಪಂಚೇಂದ್ರಿಯಗಳನ್ನು ತೃಪ್ತಿಪಡಿಸಿದನು. ೬೩. ತಂಪಾಗಿ ಮಲಯಪರ್ವತದ ಕಡೆಯಿಂದ ಬೀಸುವ ಮಂದಮಾರುತದ ತೂಗುವಿಕೆಯಿಂದ ಅಶೋಕವೃಕ್ಷಗಳು ಚಿಗುರಿನಿಂದ ಕೂಡಿಕೊಂಡಿದ್ದುವು. ಸಿಹಿಮಾವಿನ ಮರಗಳು ಎಳೆಯ ಚಿಗುರುಗಳಿಂದ ಕೂಡಿಕೊಂಡಿದ್ದುವು. ಅಡಕೆಮರಗಳು ಬಹಳವಾಗಿ ಬಿಟ್ಟಿರುವ ಹೊಂಬಾಳೆಗಳಿಂದ ಬಗ್ಗಿಹೋಗಿದ್ದುವು, ತಿಲಕದ ಮರಗಳು ಬೆಳ್ಳಗಿರುವ ಹೂವುಗಳ ಸಮೂಹದಿಂದ ಎಲ್ಲೆಲ್ಲೂ ತುಂಬಿದ್ದುವು. ದೊಡ್ಡ ಗೋರಂಟೆಮರಗಳು ಹೂವಿನ ಗೊಂಚಲುಗಳಿಂದ ಕೂಡಿದ್ದುವು. ತಾವರೆಗೊಳಗಳು ತಾವರೆಯ ಕೇಸರಗಳಿಂದ ಶೋಭಿಸುತ್ತಿದ್ದುವು. ೬೪. ಕಾಡುಗಳನ್ನೆಲ್ಲ ಕೆಂಪಾದ ಚಿಗುರುಗಳಿಂದ ಮುಚ್ಚುತ್ತಲೂ, ದಿಕ್ಕುಗಳ ಸಮೂಹವನ್ನು ಮಾವಿನ ಮರಗಳ ಸುವಾಸನೆಯಿಂದ ಬಳಿಯುತ್ತಲೂ (ತುಂಬುತ್ತಲೂ), ವಿರಹಿಗಳನ್ನು ಮದವೇರಿದ ಹೆಣ್ಣುದುಂಬಿ ಮತ್ತು ಕೋಕಿಲೆಗಳ ಧ್ವನಿಯಿಂದ ಹೆದರಿಸುತ್ತಲೂ, ಜನರೆಲ್ಲರನ್ನೂ ಹೂವಿನ ರಸದ ಮಳೆಯನ್ನು ಕರೆಯುತ್ತಿರುವ ಮಳೆದಿನದಿಂದ ಕೊಬ್ಬಿಸುತ್ತಲೂ ಜಗನ್ಮನೋಹರವಾದ ವಸಂತಋತು ವ್ಯಾಪಿಸಿತು. ೬೫. ‘ವಿರಹಿಗಳನ್ನು ಹೆದರಿಸಲು ಮನ್ಮಥನಿಗಿರುವ ಅಮೋಘವಾದ ಮಂತ್ರಾಸ್ತ್ರವೇ ಇದು’ ಎಂಬಂತಿರುವ ವಸಂತ

ವ|| ಅನ್ನೆಗಂ ಕಾಮದೇವನುಕ್ಕೆವದಲ್ಲಿ ಮುನ್ನಮೆ ಕಟ್ಟಿದ ಮಾಂದಳಿರ ತೋರಣಂಗಳೊಳಮೆತ್ತಿದ ಶೋಕಪಲ್ಲವಪತಾಕೆಯೊಳಂ ನೇಱಲ ರಕ್ತ ಚಾಮರಂಗಳೊಳಂ ಬಿಗಿದ ನಾರಂಗದ ಮೇಲ್ಕಟ್ಟಿನೊಳಂ ಮಾಂಗಾಯ ಫಲಾವಲಿಗಳೊಳಂ ತೊಡರ್ಚಿದ ಪುನ್ನಾಗದ ಸೂಸಕಂಗಳೊಳಂ ನಾಗದ ಝಳುಂಬಕಂಗಳೊಳಂ ಸಂಪಗೆಯಲರ ಕಿಂಕಿಣಿಗಳೊಳಂ ಕೆಂದಾವರೆಯ ಗಂಟೆಗಳೊಳಂ ದವನದ ಕೇರ್ಗಟ್ಟಿನೊಳಂ ಜವೆಯ ಜಾಗರದೊಳಮಲರ್ವಂಡಿನ ಜಗಲಿಯೊಳಂ ಸಹಕಾರದ ಸಾರಣೆಯೊಳಂ ಅಲ್ಲಲ್ಲಿಗಲರ್ದ ಪೂವಲಿಗಳೊಳಂ ಶತಪತ್ರದ ಸಿತಾತಪತ್ರದೊಳಂ ಪೊಂಬಾೞೆಯ ಚಾರುರಂಗಳೊಳಮೆಸೆವ ಮಂಟಪಂಗಳ ನಡುವಣ ಪದ್ಮರಾಗದ ಪಟ್ಟವಣೆಯೊಳ್ ನಿಲಿಸಿದ ಕಾಮದೇವನನತಿಪ್ರೀತಿಯಿಂದರ್ಚಿಸಿ

ನಿನ್ನನೆ ಪೂಜಿಸಿ ಪಡೆದರ್
ಕನ್ನೆಯರಭಿಮತನಾದವಾರಾಸಲಾ
ನಿನ್ನೆವರಂ ರತಿಪತಿ ನೀ
ನೆನ್ನ ಮನೋರಥಮನೇಕೆ ಪೇೞು ತಡೆಯಿಸಿದೈ         ೬೬

ವ|| ಎಂದು ವಿಷಮಾಸ್ತ್ರಂಗೆ ವಿಷಾದದೊಳೆ ಪೊಡಮಟ್ಟು

ಸುರಭಿಜಲಂಗಳಿಂದಮಭಿಷಿಕ್ತನನಾ ನೃಪರೂಪಚಂದ್ರನಂ
ತರದೊಳೆ ಮಾಡಿ ಕೇಸಡಿಗಳಂ ಹರಿಚಂದನದಿಂದಮೂಡಿ ಕೇ
ಸರದ ತುಱುಂಬನಿಕ್ಕಿ ಸಿರಿಕಂಡಮನೊಯ್ಯನೆ ಪೂಸಿ ಕಂಪಿನೊಳ್ ಪೊ
ರೆದ ವಸಂತದೊಳ್ಮುಗುಳ ತಣ್ತೊಡವಂ ತುಡಿಸಲ್ಕೊಡರ್ಚಿದಳ್             ೬೭

ವ|| ಅದೆಂತೆನೆ ಸುರಗಿಯಲರ ಮುಗುಳ ಮುತ್ತಿನ ಮಾಲೆಯಿಂ ಸುರಹೊನ್ನೆಯ ರನ್ನವಟ್ಟಿಗೆಯಿಂ ರಕ್ತಾಶೋಕರಚಿತ ರತ್ನಕಟಕದಿಂ ಕಪ್ಪುರದ ಪೂವಸರಿಗೆಯಿಂ ಕುಂಕುಮದ ಕುಟ್ಮಲದ ಪದಕದಿಂ ಸಿಂಧುವಾರತಾರಹಾರದಿಂ ಕುರವಕದ ಕೇಯೂರದಿಂ ಪಾರಿಜಾತದ ಕರ್ಣಪೂರದಿಂ ತಿಲಕದ ತಿಲಕದಿನಲಕಂರಿಸಿ

ಅಳಿಪಿನೊದವಿಂ ನೀಡುಂ ಪೀರ್ವಂದದಿಂ ನಡೆನೋಡಿ ಸಂ
ಗಳಿಸೆ ನಿಡುಸುಯ್ ರೋಮಾಂಚಂ ಪೊಣ್ಮೆ ಘರ್ಮಜಲಂ ಪೊದ
ೞಳಿಯೆ ನಡುಗುತ್ತಕ್ಕಂ ಕಂಡಪ್ಪಳೆಂದು ಮೃಗಾಕ್ಷಿ ಪೆ
ಪ್ಪಳಿಸಿ ದೆಸೆಯಂ ನೋಡುತ್ತಂ ಪೊರ್ದಿದಳ್ ನೃಪಚಂದ್ರನಂ     ೬೮

ಸಮಯವು ಬರಲಾಗಿ ಗಂಧರ್ವರಾಜಕುಮಾರಿಯಾದ ಕಾದಂಬರಿಯು ಮನಸ್ಸಿನಲ್ಲಿ ಬಹಳ ತಳಮಳಗೊಂಡಳು. ವ|| ಅಷ್ಟರಲ್ಲಿ ಕಾಮದೇವನ ಹಬ್ಬ ಬಂದಿತು. ಆಗ ಮೊದಲೇ ಕಟ್ಟಿದ ಮಾವಿನ ಚಿಗುರಿನ ಧ್ವಜಗಳಿಂದಲೂ ಮತ್ತು ಕಟ್ಟಿರುವ ಮಾವಿನ ಫಲಗಳಿಂದಲೂ, ತೊಡಿಸಿರುವ ಸುರಗಿಹೂವಿನ ಕುಚ್ಚುಗಳಿಂದಲೂ, ನಾಗಕೇಸರದ ತೆರೆಗಳಿಂದಲೂ, ಸಂಪಿಗೆಹೂವಿನ ಕಿರುಗೆಜ್ಜೆಗಳಿಂದಲೂ, ಕೆಂದಾವರೆಯ ಗಂಟೆಗಳಿಂದಲೂ, ದವನದ ತಡಿಕೆಗಳಿಂದಲೂ, ಜವೆಯ ಅಂಕುರಾರ್ಪಣದ ಪೈರಿನಿಂದಲೂ, ಹೂವಿನ ಪುಡಿಗಳಿಂದ ಮಾಡಿದ ಜಗಲಿಗಳಿಂದಲೂ, ಸಿಹಿಮಾವಿನ ಹೂವಿನ ರಸದಿಂದ ಮಾಡಿದ ಸಾರಣೆಗಳಿಂದಲೂ, ಅಲ್ಲಲ್ಲಿ ಅರಳಿರುವ ಹೂವಿನ, ತಳಿಯುವಿಕೆಯಿಂದಲೂ, ಬಿಳಿಕಮಲದಿಂದ ನಿರ್ಮಿತವಾದ ಬಿಳಿಕೊಡೆಗಳಿಂದಲೂ, ಹೊಂಬಾಳೆಯ ಚಾಮರಗಳಿಂದಲೂ ಶೋಭಿಸುವ ಮಂಟಪಗಳ ಮಧ್ಯದ ಪೀಠದಲ್ಲಿ ಪ್ರತಿಷ್ಠೆ ಮಾಡಿರುವ ಕಾಮದೇವನ ಮೂರ್ತಿಯನ್ನು ಭಕ್ತಿಯಿಂದ ಪೂಜಿಸಿದಳು. ೬೬. “ಭಗವಂತ, ಕಾಮದೇವ. ಅನೇಕ ಕನ್ನಿಕೆಯರು ನಿನ್ನನ್ನು ಪೂಜಿಸಿ ತಮ್ಮ ಇಷ್ಟಾರ್ಥವನ್ನು ಬಹಳಮಟ್ಟಿಗೆ ಪಡೆದುಕೊಂಡಿದ್ದಾರೆ. ನಾನು ಇಷ್ಟುದಿನ ಪೂಜೆಮಾಡಿದರೂ ನೀನು ನನ್ನ ಮನೋರಥವನ್ನು ನೆರವೇರಿಸದೆ ಏಕೆ ತಡಮಾಡುತ್ತಿರುವೆ?” ವ|| ಎಂದು ವಿಷಾದದಿಂದ ಕಾದಂಬರಿ ಮನ್ಮಥನಿಗೆ ನಮಸ್ಕರಿಸಿದಳು. ೬೭. ಬಳಿಕ ಚಂದ್ರಾಪೀಡನ ಶರೀರವನ್ನು ಸುವಾಸನೆಯಾದ ನೀರಿನಿಂದ ಸ್ನಾನ ಮಾಡಿಸಿದಳು. ಕೆಂಪಾದ ಅವನ ಕಾಲುಗಳಿಗೆ ಶ್ರೀಗಂಧವನ್ನು ಲೇಪಿಸಿದಳು. ಕೂದಲಿನ ಗಂಟಿಗೆ ಬಕುಳ ಕುಸುಮದ ದಂಡೆಯನ್ನು ಮುಡಿಸಿದಳು. ಮೈಗೆ ಶ್ರೀಗಂಧವನ್ನು ಬಳಿದಳು. ಅಲ್ಲದೆ ವಸಂತಕಾಲದಲ್ಲಿ ಬಿಡುವ ಸುವಾಸನೆಯನ್ನು ಬೀರುವ ಮೊಗ್ಗುಗಳ ತಂಪಾದ ಒಡವೆಗಳನ್ನು ತೊಡಿಸಲು ಆರಂಭಿಸಿದಳು. ವ|| ಅದು ಹೇಗೆಂದರೆ, ಸುರಗಿಹೂವಿನ ಮೊಗ್ಗುಗಳಿಂದ ಮಾಡಿದ ಮುತ್ತಿನ ಸರದಿಂದಲೂ, ಸುರಹೊನ್ನೆಯ ಹೂವಿನಿಂದ ಮಾಡಿದ ರತ್ನದ ಪಟ್ಟಿಕೆಯಿಂದಲೂ, ಕೆಂಪು ಅಶೋಕಕುಸುಮಗಳಿಂದ ಮಾಡಿದ ರನ್ನಗಡಗಗಳಿಂದಲೂ, ಕರ್ಪೂರವೃಕ್ಷದ ಹೂವಿನಿಂದ ಮಾಡಿದ ಕಂಠಾಭರಣದಿಂದಲೂ, ಕುಂಕುಮವೃಕ್ಷದ ಮೊಗ್ಗಿನ ಪದಕದಿಂದಲೂ, ಲಕ್ಕಿಹೂವಿನಿಂದ ಮಾಡಿದ ದೊಡ್ಡ ಮುತ್ತಿನಸರದಿಂದಲೂ, ದೊಡ್ಡ ಕೆಂಪು ಗೋರಂಟಿಹೂವಿನ ತೋಳುಬಂದಿಯಿಂದಲೂ, ಪಾರಿಜಾತಕುಸುಮದಿಂದ ಮಾಡಿದ ಕರ್ಣಾಭರಣದಿಂದಲೂ, ತಿಲಕಪುಷ್ಪದ ಪರಾಗದ ತಿಲಕದಿಂದಲೂ ಅಲಂಕಾರಮಾಡಿದಳು. ೬೮. ಅನುರಾಗವುಂಟಾದುದದರಿಂದ

ವ|| ಅದಲ್ಲದೆಯುಂ

ಉೞಯಲೆನಸುಂ ಲಜ್ಜಾಭಾರಂ ಸಮಂಚಿತ ಸಾಧ್ವಸಂ
ಕೞಯಲೆಡೆವೆತ್ತಾಗಳ್ ಸಾರಾರುಮಿಲ್ಲದಿರಲ್ಕೆ ಕಂ
ಡೆಳಸಿ ನಿಲಿಸಲ್ ತನ್ನಂ ತಾನಾಱದೊಯ್ಯನೆ ಕಣ್ಮಲರ್
ಮಲರೆ ನೃಪನಂ ಭೋಂಕಲ್ ಮೇಲ್ವಾಯ್ದು ತಳ್ತಿರದಪ್ಪಿದಳ್     ೬೯

ವ|| ಆಗಳ್ ತದಾಲಿಂಗನಾಮೃತವರ್ಷದಿಂ ಜೀವಂ ಬಂದು

ಪ್ರಸರಚ್ಚಂದ್ರಪ್ರಭಾಲಿಂಗಿಂತ ಕುಮುದಮಯಂ ತಾನಿದೆಂಬಂತಿರುತ್ಸಾ
ಹಿಸೆ ಮೆಲ್ಸುಯ್ಗುತ್ತಿನಿಂದೊಂದಿದ ಹೃದಯಮುಷಸ್ಸಂಗಪದ್ಮಂಬೊಲುನ್ಮೀ
ಳಿಸೆ ಕಂಗಳ್ ಕೂಡೆ ಚೈತನ್ಯದೊಳಳವಡೆ ಸರ್ವಾಂಗಮೆಚ್ಚೆತ್ತನಾಗಳ್
ಪಸೆಯೊಳ್ ಮುನ್ನಿದ್ರೆಗೆಯ್ದೆಚ್ಚಱುವರಸನವೋಲಂದು ರಾಜೇಂದ್ರಚಂದ್ರಂ            ೭೦

ವ|| ಅಂತು ಮೆಯ್ ಮುರಿದೆಚ್ಚೆತ್ತು ತನ್ನಂ ತಳ್ತಪ್ಪಿರ್ದ ಗಂಧರ್ವರಾಜನಂದನೆಯಂ ಕಂಡು

ಪಡೆದೆಂ ಮತ್ಪುಣ್ಯದಿಂದೀ ಪದಮನಿನಿತುಕಾಲಕ್ಕೆನುತ್ತುಂ ನರೇಂದ್ರಂ
ನಿಡುದೋಳಿಂದಪ್ಪಿ ಪ್ಪ್ವೆ ಭೋಂಕಲ್ ಭಯದೆ ನಡುಗುತಂ ಕಣ್ಗಳಂ ಮುಚ್ಚಿ ತಳ್ತಿ
ರ್ದೊಡಲಂ ಪೊಕ್ಕಪ್ಪಳೆಂಬಂದದೆ ಬೆಡಗಿನೊಳಪ್ಪುತ್ತಮಾಗಳ್ ಬಿಡಲ್ಕಂ
ಪಿಡಿಯಲ್ಕಂ ತಾನದೇನೆಂದಱಯದಬಲೆ ನಾನಾರಸಾಕ್ರಾಂತೆಯಾದಳ್     ೭೧

ವ|| ಅಂತಿರ್ದಳಂ ಮನುಜೇಂದ್ರಚಂದ್ರಂ ನೋಡಿ

ಭಯಮಂ ಮಾಣ್ ಜೀವಂ ನಿ
ನ್ನಯ ಪರಿರಂಭಣದೆ ಬಂದುದಲ್ತೆ ಸುಧಾಸೂ
ತಿಯ ಕಾಂತಿಯೊಳೊಗೆದಚ್ಚರ
ಸಿಯರನ್ವಯದಲ್ಲಿ ದೇವಿ ಜನಿಯಿಸಿದವಳಯ್             ೭೨

ಕುಡಿದುಬಿಡುವಳೋ ಎಂಬಂತೆ ಬಹಳ ಹೊತ್ತಿನವರೆಗೆ ಚಂದ್ರಾಪೀಡನ ದೇಹವನ್ನು ಚೆನ್ನಾಗಿ ನೋಡಿದಳು. ನಿಟ್ಟುಸಿರು ಪ್ರಾರಂಭವಾಯಿತು. ರೋಮಾಂಚನವು ಹೊರಹೊಮ್ಮಿತು. ಬೆವರು ಹೊರಟು ಇಳಿಯುತ್ತಿತ್ತು. ಆಘ ಕಾದಂಬರಿಯು ನಡುಗುತ್ತಾ ಮಹಾಶ್ವೇತೆಯು ಕಂಡುಬಿಟ್ಟಾಳೆಂಬ ಗಾಬರಿಯಿಂದ ಎಲ್ಲಾ ಕಡೆಗೂ ದೃಷ್ಟಿಯನ್ನು ಹರಿಸುತ್ತಾ ಚಂದ್ರಾಪೀಡನ ಬಳಿಗೆ ಬಂದಳು.ವ|| ಅದಲ್ಲದೆ ೬೯. ಮಿಗಿಲಾದ ನಾಚಿಕೆಯು ಬಹಳ ಮಟ್ಟಿಗೆ ಬಿಟ್ಟುಹೋಯಿತು. ಇದ್ದ ಭಯವು ಹೋಯಿತು. ಹತ್ತಿರದಲ್ಲಿ ಯಾರೂ ಇರಲಿಲ್ಲ. ಆಗ ಅವಕಾಶ ಸಿಕ್ಕಿತು. ನೋಡಿದಳು. ಆಸೆಯುಂಟಾಯಿತು. ತನ್ನನ್ನು ತಾನು ಹತೋಟಿಗೊಳಿಸದೆ ಹೋದಳು. ಮೆಲ್ಲನೆ ಕಣ್ಣು ಅರಳಿತು. ಚಂದ್ರಾಪೀಡನನ್ನು ಆಕ್ರಮಿಸಿ ಬಿಗಿಯಾಗಿ ತಬ್ಬಿಕೊಂಡಳು ! ವ|| ಆಗ ಅವಳ ಆಲಿಂಗನವೆಂಬ ಅಮೃತದ ಮಳೆಯಿಂದ ಚಂದ್ರಾಪೀಡನಿಗೆ ಜೀವ ಬಂದಿತು. ೭೦. ಮೃದುವಾಗಿ ಉಸಿರಾಡಲಾರಂಭಿಸಿದ ಅವನ ಹೃದಯವು ವಿಕಾಸವನ್ನು ಹೊಂದಿತು! ಆಗ ಅದು ಹರಡುತ್ತಿರುವ ಬೆಳದಿಂಗಳಿನ ಸಂಪರ್ಕವನ್ನು ಹೊಂದಿದ ಕನ್ನೈದಿಲೆಯಂತೆ ಶೋಭಿಸಿತು. ಬೆಳಗಿನ ಜಾವವು ಒದಗಲು ತಾವರೆಯು ಅರಳುವಂತೆ ಅವನ ಕಣ್ಣುಗಳು ಅರಳಿದುವು. ಸರ್ವಾಂಗಗಳೂ ಚೈತನ್ಯದಿಂದ ಕೂಡಿಕೊಂಡುವು. ಆ ರಾಜೇಂದ್ರಚಂದ್ರನು (ಚಂದ್ರಾಪೀಡನು) ಹಾಸಿಗೆಯಲ್ಲಿ ಮಲಗಿದ್ದು ಎಚ್ಚರಗೊಂಡ ರಾಜನಂತೆ ಎಚ್ಚೆತ್ತನು. ವ|| ಹಾಗೆ ಮೈಮುರಿದು ಎಚ್ಚೆತ್ತು ತನ್ನನ್ನು ಗಟ್ಟಿಯಾಗಿ ತಬ್ಬಿಕೊಂಡಿದ್ದ ಕಾದಂಬರಿಯನ್ನು ನೋಡಿ, ೭೧. “ಇಷ್ಟು ಕಾಲ ಕಾಲಕಳೆದ ಮೇಲೆ ನನ್ನ ಪುಣ್ಯದಿಂದ ಈ ಅವಕಾಶ ಸಿಕ್ಕಿತು” ಎಂದು ಹೇಳುತ್ತಾ ಕೂಡಲೆ ತನ್ನ ನೀಳವಾದ ತೋಳುಗಳಿಂದ ಅವಳನ್ನು ತಬ್ಬಿಕೊಂಡನು. ಅವಳು ಭಯದಿಂದ ನಡುಗುತ್ತಾ ಕಣ್ಮುಗಳನ್ನು ಮುಚ್ಚಿ ತಬ್ಬಿಕೊಂಡಿದ್ದ ಚಂದ್ರಾಪೀಡನ ದೇಹವನ್ನೇ ಪ್ರವೇಶಿಸುತ್ತಿರುವವಳಂತೆ ಬೆಡಗಿನಿಂದ ಶೋಭಿಸುತ್ತಾ, ಅವನ ಶರೀರವನ್ನು ತಬ್ಬಿಕೊಂಡಿರುವುದಕ್ಕೂ ಬಿಡಿಸಿಕೊಳ್ಳುವುದಕ್ಕೂ ಏನೂ ತೋಚದೆ ಬಗೆಬಗೆಯ ಮನೋಭಾವಗಳನ್ನು ತಾಳಿದಳು. ಟಿ|| ಹರ್ಷ ಭಯ ಲಜ್ಜೆ ಜಡತೆ ಶಂಕೆ ವಿತರ್ಕ ಮೊದಲಾದ ಚಿತ್ತವೃತ್ತಿಗಳಿಂದ (ಭಾವ) ಅವಳ ಮನಸ್ಸು ಆವರಿಸಲ್ಪಟ್ಟಿದ್ದಿತು ಎಂದು ತಾತ್ಪರ್ಯ. ವ|| ಹಾಗೆ ಇದ್ದ ಕಾದಂಬರಿಯನ್ನು ಚಂದ್ರಾಪೀಡನು ನೋಡಿ ೭೨. “ದೇವಿ. ಕಾದಂಬರಿ, ಭಯವನ್ನು ಬಿಡು. ನಿನ್ನ ಆಲಿಂಗನದಿಂದ ನನಗೆ ಜೀವ ಬಂದಿತು. ನೀನು

ವ|| ಅದಲ್ಲದೆಯುಂ

ಇದು ಬೇಂದೆನ್ನ ತೇಜೋಮಯಮೆನೆ ಮೊದಲೊಳ್ ನಿತ್ಯಮೀ ದೇಹಮಂತ
ಲ್ಲದೆಯುಂ ಕಾದಂಬರೀದೇವಿಯ ಕರತಲಸಂಸ್ಪರ್ಶದಿಂ ತಾಳ್ದಿಕೊಂಡಿ
ರ್ಪುದೆನಲ್ಕೇವೇೞ್ವುದೀ ದೇಹದೊಳೆ ನೆರೆಗುವೆಂದಾದಲಂಪಿಂ ನಭೋಮ
ಧ್ಯದೊಳಿರ್ದಾನಂದೆ ಪೇೞ್ದೆನ್ನಯ ನುಡಿಯನದಂ ಭಾವಿಸಂಭೋಜನೇತ್ರೇ           ೭೩

ವ|| ಇನ್ನೆವರಂ ನಿನ್ನ ಕರತಲಸ್ಪರ್ಶದಿನಾಪ್ಯಾಯಿತ ಶರೀರನಾಗಿಯುಂ ಶಾಪದೋಷದಿಂ ಪ್ರತ್ಯುಜ್ಜೀವಿತ ನಾಗದಾನೀಗಳ್ ಮಾಹಾಶ್ವೇತೆಯ ಪ್ರಿಯತಮನಪ್ಪ ಮದೀಯ ವಯಸ್ಯಂಬೆರಸು ವಿಗತದೋಷನಾಗಿ ನಿನ್ನ ದೂಸಳಿಲ್ಲಿ ನಿಲಿಸಿದ ಮದೀಯ ದೇಹಕ್ಕವರಿಸಿದೆನೆಂದು ಚಂದ್ರಮನನುಭೂತಪೂರ್ವಮಪ್ಪ ಗಂಭೀರಪೂರ್ವವಚನದಿಂ ನುಡಿದು ಗಂಧರ್ವ ರಾಜನಂದನೆಯನಾನಂದಿಸುತ್ತಮಿರ್ಪುದುಂ

ಕುಳಿರುತ್ತಿರ್ಪಮೃತಾಂಶುಮಂಡಲದೊಳಿರ್ದಾದಂ ಸುಧಾಮೋದಮಂ
ತಳೆದಂಗಂ ಬೆಳರ್ಗೆಂ ರ್ಗಂ ಪನಾಳ್ದಿರೆ ಮಹಾಶ್ರೇತಾಂಗಮೌಕ್ತಿಕಾ
ವಳಿ ವಕ್ಷಸ್ಥಲದೊಳ್ ತೆಱಂಬೊಳೆಯಲಾಗಳ್ ಪುಂಡರೀಕಂ ಕಪಿಂ
ಜಳಕಂ ಕೈಗುಡಲಿಷ್ಟಮಿತ್ರನೆ ಬರುತ್ತಿರ್ದಂ ಮರುನ್ಮಾರ್ಗದಿಂ       ೭೪

ಮನದೊಂದಾಹ್ಲಾದದಿಂದಂ ಗಗನತಳದಿನೆೞ್ತಂದು ರಾಜೇಂದ್ರಚಂದ್ರಾಂ
ಕನ ಪಾದಾಂಬೋಜಯುಗ್ಮಕ್ಕೆಱಗೆ ತೆಗೆದು ತೞ್ಕೈಸುತಂ ಪುಂಡರೀಕಾ
ಖ್ಯನಿಜಪ್ರಾಗ್ಜನ್ಮಸಂಬಂಧದಿನೊಗೆದ ಸುಹೃತ್ಸೆ ಹದಿಂ ಮತ್ತೆಯುಂ ಪಿಂ
ತನೆ ಬಂದೈ ನೀನೆನುತ್ತೞ್ಕಳೆ ಕೆಳೆಯನೊಳ್ ಮಾತೆನಾಡುತ್ತಮಿರ್ದಂ    ೭೫

ವ|| ಅನ್ನೆಗಂ ಕೇಯೂರಕಂ ಚಿತ್ರರಥಹಂಸರ್ಗೆ ತನ್ಮಹೋತ್ಸವಮಂ ಪೇೞಲ್ಕೆ ಪೋದನಿತ್ತ ಮೃತ್ಯುಂಜಯಜಪವ್ಯಗ್ರನಾಗಿ ವಿಲಾಸವತೀಮಹಾದೇವಿವೆರಸಿರ್ದ ತಾರಾಪೀಡನಲ್ಲಿಗೆ ಮದಲೇಖೆ ಪರಿತಂದು ವೈಶಂಪಾಯನಂಬೆರಸು ಯುವರಾಜಂ ಪ್ರತ್ಯುಜ್ವೇವಿತನಾದನೆಂದು ಷೇೞ್ವುದುಮತ್ಯಾನಂದರಭಸದಿಂ ವಿಲಾಸವತೀಮಹಾದೇವಿಯುಮಾರ್ಯ ಶುಕನಾಸನುಮಂ ಜರಾಶಿಥಿಲ ದೀರ್ಘಬಾಹುಯುಗಳದಿಂದ ೞ್ಕಳೆ ತೞ್ಕೈಸಿ

ಅಮೃತಮಯನಾದ ಚಂದ್ರನ ಕಿರಣಗಳಿಂದ ಹುಟ್ಟಿದ ಅಪ್ಸರೆಯರ ವಂಶದಲ್ಲಿ ಹುಟ್ಟಿದವಳಲ್ಲವೆ? ವ|| ಅದಲ್ಲದೆ ೭೩. ಈ ಚಂದ್ರಾಪೀಡನ ಶರೀರವು ಅಮೃತಕಿರಣ ನೆನಿಸಿದ ನನ್ನ ತೇಜಸ್ಸಿನಿಂದಲೇ ಉಂಟಾದುದು. ಆದ್ದರಿಂದ ಸ್ವಭಾವದಿಂದಲೇ ನಾಶವಾಗತಕ್ಕದ್ದಲ್ಲ. ಅದಲ್ಲದೆ ಕಾದಂಬರೀದೇವಿಯ ಕರತಲಸ್ಪರ್ಶದ ಪ್ರಭಾವದಿಂದ ಯಾವ ವಿಕಾರವನ್ನೂ ಹೊಂದದೆ ಇದ್ದಂತೆಯೆ ಇರುತ್ತದೆ. ಇನ್ನು ಹೇಳುವುದೇನು? ನನ್ನ ಆತ್ಮವು ಈ ದೇಹದಲ್ಲೇ ಮತ್ತೆ ಕೂಡುತ್ತದೆ” ಎಂದು ಚಂದ್ರರೂಪನಾದ ನಾನು ನಿನ್ನ ಮೇಲಿನ ಪ್ರೀತಿಯಿಂದ ಹಿಂದೆಯೆ ಆಕಾಶಮಧ್ಯದಲ್ಲಿ ಕಾಣಿಸಿಕೊಂಡು ಹೇಳಿದ್ದೇನೆ. ಎಲೈ ತಾವರೆಯಂತೆ ಕಣ್ಣುಳ್ಳವಳೆ, ಆ ಮಾತನ್ನು ಈಗ ನೆನಪಿಗೆ ತಂದುಕೊ. ವ|| ಇದುವರೆಗೂ ನಿನ್ನ ಕರತಲ ಸ್ಪರ್ಶದಿಂದ ತಂಪುಗೊಳಿಸಲ್ಪಟ್ಟರೂ ಶಾಪದೋಷದಿಂದ ಜೀವವನ್ನು ಪಡೆಯಲಿಲ್ಲ. ಈಗ ನಾನು ಮಹಾಶ್ವೇತೆಯ ಪ್ರಿಯತಮನಾದ ನನ್ನ ಸ್ನೇಹಿತನೊಂದಿಗೆ ಶಾಪವಿಮೋಚನೆಯನ್ನು ಪಡೆದು ನಿನಗಾಗಿ ಇಲ್ಲಿ ಬಿಟ್ಟಿದ್ದ ಶರೀರಕ್ಕೆ ಅವತರಿಸಿದ್ದೇನೆ.” ಎಂದು ಚಂದ್ರಮೂರ್ತಿಯು ಹಿಂದೆ ಪರಿಚಿತವಾಗಿದ್ದ ಗಂಭೀರವಾದ ಮಾತುಗಳಿಂದ ಹೇಳಿ ಗಂಧರ್ವರಾಜಪುತ್ರಿಯನ್ನು ಸಂತೋಷಪಡಿಸುತ್ತಿದ್ದನು. ಆಗ ೭೪. ಶೀತಳವಾದ ಚಂದ್ರಮಂಡಲದಲ್ಲಿದ್ದು ಬಹಳವಾಗಿ ಅಮೃತದ ಸುವಾಸನೆಯನ್ನು ಪಡೆದ ಶರೀರವು ಉಜ್ವಲವಾದ ಸುಗಂಧವನ್ನು ಬೀರುತ್ತಿರಲು, ಹಿಂದೆ ಮಹಾ ಶ್ವೇತೆಯು ಕೊಟ್ಟಿದ್ದ ಮುಕ್ತಾವಳಿಯು ಸ್ಪಷ್ಟವಾಗಿ ವಕ್ಷಸ್ಥಳದಲ್ಲಿ ಹೊಳೆಯುತ್ತಿರಲು ಪುಂಡರೀಕನು ಆಪ್ತಮಿತ್ರನಾದ ಕಪಿಂಜಲನ ಕೈಹಿಡಿದುಕೊಂಡು ಆಕಾಶಮಾರ್ಗದಿಂದ ಬರುತ್ತಿದ್ದನು. ಟಿ|| ಇಲ್ಲಿ ಬೆಳರ್ಗೆಂಪು ಎಂಬ ಪಾಠವಿತ್ತು. ಇದು ಮೂಲ ಕಾದಂಬರಿಗೂ ಪ್ರಕೃತ ಸಂದರ್ಭಕ್ಕೂ ವಿರುದ್ಧವಾಗಿರುವುದರಿಂದ ಬೆಳರ್ಗಂಪು ಎಂಬ ಪಾಠವನ್ನು ಇಟ್ಟುಕೊಳ್ಳಲಾಗಿದೆ. ೭೫. ಆಗ ಪುಂಡರೀಕನು ಆನಂದದಿಂದ ಕೂಡಿ, ಆಕಾಶದಿಂದ ಕೆಳಗಿಳಿದು ಬಂದು ಚಂದ್ರಾವತಾರನಾದ ಚಂದ್ರಾಪೀಡನ ಅಡಿದಾವರೆಗಳಿಗೆ ನಮಸ್ಕರಿಸಿದನು. ಚಂದ್ರಾಪೀಡನು ಅವನನ್ನು ಬಾಚಿ ತಬ್ಬಿಕೊಂಡು “ಪುಂಡರೀಕ, ಹಿಂದಿನ ಜನ್ಮದ ಸಂಸ್ಕಾರದಿಂದ ಉಂಟಾದ ಮಿತ್ರಸ್ನೇಹದಿಂದ ಮತ್ತೆ ನನ್ನ ಹಿಂದೆಯೇ ಬಂದುಬಿಟ್ಟೆಯಲ್ಲ !” ಎಂದು ಸ್ನೇಹಿತನೊಡನೆ ಪ್ರೀತಿಪೂರ್ವಕವಾಗಿ ಮಾತಾಡುತ್ತಿದ್ದನು. ವ|| ಅಷ್ಟರಲ್ಲಿ ಕೇಯೂರಕನು ಚಿತ್ರರಥನಿಗೂ ಹಂಸನಿಗೂ ಆ ಪರಮಾನಂದದ ಸುದ್ದಿಯನ್ನು ತಿಳಿಸುವುದಕ್ಕಾಗಿ ಹೋದನು. ಈ ಕಡೆ ಮದಲೇಖೆಯು ಮೃತ್ಯುಂಜಯಜಪದಲ್ಲಿ ತತ್ಪರನಾಗಿದ್ದ ವಿಲಾಸವತೀಮಹಾರಾಣಿಯ ಜೊತೆಯಲ್ಲಿದ್ದ

ಜರಿಯೆಂ ತಳ್ಪೊಯ್ವ ತನ್ನೊಳ್ ದೊರೆಯೆನಿಸಿದ ರಾಜರ್ಷಿಗಳ್ ಸುತ್ತುಗೊಂಡೆ
ೞ್ತರೆ ಮುಯ್ಪಿಂದಾವಗಂ ಸಂಭ್ರಮದೆ ರುಚಿವರಲ್ಕೋತ್ತರೀಯಾಂಚಲಂ ಜೋ
ಲ್ತಿರೆ ಲೋಕಾಹ್ಲಾದಿ ಚೈತ್ರಾನಿಲವಿಲುಳಿತಪದ್ಮಾಕರಂ ತಾನಿದೆಂಬಂ
ತಿರೆ ತಾರಾಪೀಡದೇವಕ್ಷಿತಿಪತಿಯತಿ ಬಂದಂ ಮಹೋತ್ಸಾಹದಿಂದಂ       ೭೬

ವ|| ಅಂತತಿಹರ್ಷಪರವಶನಾಗಿ ಬರುತಿರ್ದ ತಂದೆಯಂ ಕಂಡು ರಾಜೇಂದ್ರಚಂದ್ರಂ ಸಾಷ್ಟಾಂಗಪ್ರಣಾಮಪುರಸ್ಸರಂ ಪಾದಾರವಿಂದ ಕ್ಕೆಱಗಿದಾಗಳ್

ನಿನಗಾಂ ತಂದೆಯೆನಾದೆನೆಮ್ಮ ಬಸುಱಂದಂ ಬಂದೆ ನೀನೆಂಬ ಪೆಂ
ಪೆನಗೇಂ ಸಾಲದೆ ಕಂದ ಚಂದ್ರನೆನಲುಂ ತ್ರೈಲೋಕ್ಯದಿಂ ವಂದನೀ
ಯನೆಯೆಂದಂದೆಮಗಲ್ತೆ ವಂದ್ಯನವೊಲೆಂದಾನಂದದಿಂದಾತ್ಮನಂ
ದನನಂ ಚಂದ್ರನನಪ್ಪಿದಂ ತೆಗೆದು ತಾರಾಪೀಡಚಕ್ರೇಶ್ವರಂ       ೭೭

ವ|| ಅಂತು ತೞ್ಕೈಸೆ ನಿರ್ಭರಹರ್ಷಪರವಶೆಯಪ್ಪ ತಾಯಂ ಚಂದ್ರಾಪೀಡಂ ನೋಡಿ

ಪೊಡೆವಡೆ ತಾಯ್ ಬಸುಳಗಿಡ
ಲೊಡರಿಸಿಪಳಿರದೆ ಮಗುೞ್ದುಮೆನೆ ಮೊಲೆವಾಲ್ಗಳ್
ಬಿಡದೆಚ್ಚುಪಾಯೆ ಪದಪಿಂ
ದಡಿಗಡಿಗಾತ್ಮಜನನಾದವಪ್ಪಿದಳಾಗಳ್        ೭೮

ವ|| ಅನಂತರಂ ಮನೋರಮಾಸಮೇತನಪ್ಪ ಶುಕನಾಸನಲ್ಲಿಗೆ ವಂದು

ವಿನಯಭರದಿಂದೆ ನಮಿತಾ
ನನನ್ಭೆನಿಸಿದ ಪುಂಡರೀಕನಂ ವೈಶಂಪಾ
ಯನನೆಂದವಧರಿಸಿಂ ನೀ
ವೆನುತಂ ಕಾಣಿಸಿದನಂದು ಚಂದ್ರಾಪೀಡಂ     ೭೯

ವ|| ಅಂತಾ ಸಮಯದೊಳ್ ಕಪಿಂಜಲಕಂ ಶುಕನಾಸನನಿಂತೆಂದಂ

ತಾರಾಪೀಡನ ಹತ್ತಿರಕ್ಕೆ ಓಡಿಬಂದು “ವೃಶಂಪಾಯನನೊಂದಿಗೆ ಯುವರಾಜನು ಪ್ರಾಣವನ್ನು ಪಡೆದಿದ್ದಾನೆ” ಎಂದು ಹೇಳಿದಳು. ಕೂಡಲೆ ತಾರಾಪೀಡನು ಅತ್ಯಾನಂದಭರಿತನಾಗಿ ರಭಸದಿಂದ ವಿಲಾಸವತಿಯನ್ನು ಶುಕನಾಸನನ್ನು ಮುಪ್ಪಿನಿಂದ ಕೃಷವಾದ ನೀಳವಾದ ತೋಳುಗಳಿಂದ ಪ್ರೀತಿಪೂರ್ವಕವಾಗಿ ತಬ್ಬಿಕೊಂಡನು . ೭೬. ರಾಜರ್ಷಿಯಾದ ತಾರಾಪೀಡನು, ಸರಿಸಮಾನರಾದ ವೃದ್ಧರಾಜರ್ಷಿಗಳು ಸುತ್ತುವರಿದು ಬರುತ್ತಿರಲಾಗಿ, ಹೋಗುವ ಸಡಗರದಲ್ಲಿ ಸುಂದರವಾದ ನಾರಿನ ಹೊದೆಯುವ ಬಟ್ಟೆಯ ಅಂಚು ಹೆಗಲಿನಲ್ಲಿ ಒಂದೇಸಮನೆ ಜೋಲಾಡುತ್ತಿರಲು ಬಹಳ ಉತ್ಸಾಹದಿಂದ ಬಂದನು. ಆಗ ಅವನು ಲೋಕಕ್ಕೆ ಆಹ್ಲಾದವನ್ನುಂಟುಮಾಡುವ ಚೈತ್ರಮಾಸದ ಗಾಳಿಯಿಂದ ಚಲಿಸುತ್ತಿರಲು ತಾವರೆಬಳ್ಳಿಯ ಗುಂಪಿನಂತಿದ್ದನು. ವ|| ಹಾಗೆ ಬಹಳ ಸಂತೋಷದಿಂದ ಪರವಶನಾಗಿ ಬರುತ್ತಿದ್ದ ತನ್ನ ತಂದೆಯನ್ನು ಕಂಡು ಚಂದ್ರಾಪೀಡನು ಸಾಷ್ಟಾಂಗಪ್ರಣಾಮಪೂರ್ವಕವಾಗಿ ಅವನ ಅಡಿದಾವರೆಗಳಿಗೆ ನಮಸ್ಕರಿಸಿದನು. ೭೭. ತಾರಾಪೀಡಚಕ್ರವರ್ತಿಯು “ಕಂದ, ನಾನು ನಿಮಗೆ ತಂದೆಯಾಗಿದ್ದೇನೆ. ನಮ್ಮ ಬಸುರಿನಿಂದ ನೀನು ಬಂದೆ ಎಂಬ ಒಂದು ಹಿರಿಮೆಯೇ ನನಗೆ ಸಾಲದೆ? ನೀನು ಮೂರು ಲೋಕಗಳಿಂದಲೂ ವಂದನೀಯನಾದ ಚಂದ್ರನೆಂದ ಮೇಲೆ ನಮಗೂ ವಂದನೀಯನಂತೆಯೇ ಆಗಲಿಲ್ಲವೆ?” ಎಂದು ಆನಂದದಿಂದ ತನ್ನ ಮಗನಾದ ಚಂದ್ರನನ್ನು ಬಾಚಿ ತಬ್ಬಿಕೊಂಡನು. ವ|| ಹಾಗೆ ಆಲಿಂಗಿಸಿಕೊಳ್ಳಲಾಗಿ ಅತ್ಯಕವಾದ ಹರ್ಷದಿಂದ ಪರವಶೆಯಾದ ತಾಯಿಯನ್ನು ಚಂದ್ರಾಪೀಡನು ನೋಡಿ ೭೮. ನಮಸ್ಕಾರ ಮಡಲಾಗಿ, ತಾಯಿಯು ಅವನನ್ನು ತನ್ನ ಗರ್ಭದಲ್ಲಿ ಮತ್ತೆ ಸೇರಿಸಿಕೊಳ್ಳಲು ಪ್ರಯತ್ನಿಸುವಳೋ ಎಂಬಂತೆ ಮಗನನ್ನು ಮತ್ತೆ ಮತ್ತೆ ಪ್ರೀತಿಯಿಂದ ಗಾಢವಾಗಿ ತಬ್ಬಿಕೊಂಡಳು, ಪುತ್ರವಾತ್ಸಲ್ಯದಿಂದ ಅವಳ ಮೊಲೆಹಾಲು ಉಕ್ಕಿ ಹರಿಯಿತು. ವ|| ಬಳಿಕ ಮನೋರಮೆಯೊಂದಿಗೆ ಕೂಡಿಕೊಂಡಿರುವ ಶುಕನಾಸನ ಸಮೀಪಕ್ಕೆ ಬಂದು ೭೯. “ವಿನಯದ ಭಾರದಿಂದ ಬಗ್ಗಿರುವ ಮುಖವುಳ್ಳ ಪುಂಡರೀಕನನ್ನು ವೈಶಂಪಾಯನನೆಂದೇ ನೀವು ತಿಳಿದು ಕೊಳ್ಳಬೇಕು” ಎಂದು ಚಂದ್ರಾಪೀಡನು ಪುಂಡರಿಕನನ್ನು ಅವರಿಗೆ ತೋರಿಸಿದನು. ವ|| ಕಪಿಂಜಲನು ಶುಕನಾಸನನ್ನು ಕುರಿತು ಹೀಗೆಂದನು.