ಪವಿತ್ರಕ್ಷೇತ್ರಗಳಲ್ಲಿ ವಿಹರಿಸಿ ಆ ದಿಗ್ಭಾಗ ಪ್ರದೇಶಗಳನ್ನೆಲ್ಲ ತನ್ನ ಆಜ್ಞಾನುವರ್ತಿಗಳನ್ನಾಗಿ ಮಾಡಿಕೊಂಡನು. ಚಂದ್ರಬಿಂಬದಿಂದ ಸ್ರವಿಸುತ್ತಿರುವ ಅಮೃತದ ಹನಿಗಳೆಂಬ ದುರ್ದುನದಿಂದ ಒದ್ದೆಯಾದ ಶ್ರೀಗಂಧದಿಂದ ಕೂಡಿದುದೂ ಸೂರ್ಯನ ಕುದುರೆಯ ಗೊರಸಿನ ತುದಿಯಿಂದ ಕತ್ತರಿಸಲ್ಪಟ್ಟ ಲವಂಗದ ಬಳ್ಳಿಯ ಚಿಗುರನ್ನುಳ್ಳದ್ದೂ ಐರಾವತವೆಂಬ ಇಂದ್ರನ ಆನೆಯ ಸೊಂಡಲಿನಿಂದ ಮುರಿಯಲ್ಪಟ್ಟ ಆನೆಬೇಲದ ಮರದ ವಿವಿಧ ಬಣ್ಣಗಳಿಂದ ಕೂಡಿದ ಪೂರ್ವದಿಕ್ಕಿಗೆ ಬಂದನು. ನಂದೆ, ಅಪರನಂದೆ, ಅಶ್ವಿನಿ, ಮಹಾನಂದೆಯೆಂಬ ತೀರ್ಥೋದಕಗಳಲ್ಲಿ ವಿಹರಿಸಿ ಪ್ರತಿಭಟಿಸಿದ ರಾಜರುಗಳನ್ನು ಸೋಲಿಸುತ್ತ ಅಲ್ಲಿಂದ ಹೊರಟು ಚಪಳವಾದ ಕಪಿಗಳ ಸಮೂಹದಿಂದ ನಾಶಮಾಡಲ್ಪಟ್ಟ ಬಳ್ಳಿವನೆಗಳಿಂದಲೂ ಅಕ ಬಳವಂತನಾದ ನಳನು ಸಾವಿರಾರು ಕುಲಪರ್ವತಗಳನ್ನು ಸೇರಿಸಿ ನಿರ್ಮಿಸಿದ ಸೇತುವೆಯಿಂದಲೂ ಅತಿ ರಮಣೀಯವಾದ ದಕ್ಷಿಣಸಮುದ್ರದ ತೀರಪ್ರದೇಶವನ್ನು ಅನುಸರಿಸಿ ಬಂದು (ಹಿಂದೆ) ರಾಮಚಂದ್ರನು ವಿಹರಿಸಿದ ಸ್ಧಳಗಳನ್ನು ನೋಡಿ-

೧೯. ಹಿಂದೆ ತ್ರೇತಾಯುಗದಲ್ಲಿ ಸೀತೆಯೊಡನೆ ಸೇರಿ ನಿಂತ ಸ್ಥಳವಿದು, ಆ ಖರದೂಷಣರನ್ನು ಕೊಂದ ಸ್ಥಳವಿದು, ಹೋಗಿ ಚಿನ್ನದ ಜಿಂಕೆಯನ್ನು ಹೊಡೆದ ಸ್ಥಳವಿದು, ಆಗಿರಬೇಕು ಎಂದು ವಿಶೇಷಕೋಪದಿಂದ ದೇವತೆಗಳಿಗೆ ಕಂಟಕನಾಗಿದ್ದ ಆ ಹತ್ತುತಲೆಯ ರಾವಣನನ್ನು ಕೊಲ್ಲಲು ಅವತರಿಸಿದ ರಾಮನ ಅಂದಿನ ಸಾಹಸವು ಅಕಳಂಕರಾಮನಾದ ಅರ್ಜುನನ ಮನಸ್ಸಿನಲ್ಲಿ ಪುನ ಅಂಕುರಿಸಿತು

ವ|| ರಾಮಾವತಾರದಲ್ಲಾದ ಅಂದಿನ (ತನ್ನ ಹಿಂದಿನ) ಸಾಹಸಗಳನ್ನು ನೆನೆಯುತ್ತ ಬಂದು ಅಗಸ್ತ್ಯತೀರ್ಥವನ್ನು ಕಂಡನು. ೨೦. ವಿಂಧ್ಯಪರ್ವತವು ತನ್ನಾಜ್ಞೆಯನ್ನು ಮೀರಿ ಬಳೆಯಲಾಗಲಿಲ್ಲ, ಸಮುದ್ರವು ತನಗೆ ಬಾಯ್ಮುಕ್ಕಳಿಸಲೂ ಸಾಕಾಗಲಿಲ್ಲ. ಜಗತ್ತನ್ನೇ ನುಂಗಿದ ವಾತಾಪಿಯೆಂಬ ರಾಕ್ಷಸನು ಪ್ರವೇಶಮಾಡಿ ಉರಿಯುತ್ತಿದ್ದ ತನ್ನ ಜಠರಾಗ್ನಿಯಿಂದ ಹೊರಟುಬರಲು ಸಮರ್ಥನಾಗಲಿಲ್ಲ. ಭೂಮಿಯು ತನ್ನ ಭಾರಕ್ಕೆ ಮುಳುಗದೆ ಉತ್ತರಕ್ಕೆ ಸರಿಯಿತು ಎಂಬ (ಮಹಿಮೆ) ವೈಭವವು ಅಗಸ್ತ್ಯಋಷಿಗಳಿಗಲ್ಲದೆ ಮತ್ತಾರಿಗುಂಟು ವ|| ಎಂದು ಆಲೋಚಿಸುತ್ತ ಅಗಸ್ತ್ಯತೀರ್ಥ, ಸೌಭದ್ರ, ಪೌಳೋಮ, ಕಾಂಭೋಜ, ಭಾರದ್ವಾಜವೆಂಬ ಅಯ್ದು ತೀರ್ಥಗಳಲ್ಲಿ ಸಂಚರಿಸಿ ವರ್ಧಮಾನನೆಂಬ ಋಷಿಯ ಶಾಪದಿಂದ ಭಯಂಕರವಾದ ಮೊಸಳೆಯ ಆಕಾರದಲ್ಲಿದ್ದ ಅಪ್ಸರಸ್ತ್ರೀಯರನ್ನು ಶಾಪ ವಿಮೋಚಿತರನ್ನಾಗಿ ಮಾಡಿ ಮಳಯಪರ್ವತಕ್ಕೆ ಬಂದು ಸೇರಿದನು. ೨೧. ಇದು ಮಲಯಪರ್ವತ, ಶ್ರೀಗಂಧಕ್ಕೆ ಮಲಯಜನೆಂದು ತಂಪಾದ ಗಾಳಿಗೆ ಮಲಯಾನಿಲ ಎಂದೂ ಹೆಸರು ಬಂದುದು ಇಲ್ಲಿ ಹುಟ್ಟಿದುದರಿಂದಲೇ, ವಸಂತಋತುವೂ ಇಲ್ಲಿ ಹುಟ್ಟಿ ಮತ್ತೆಲ್ಲಿಗೂ ಹೋಗುವುದಿಲ್ಲ.

ಮ|| ಇದಱಭ್ರಂಕಷ ಕೂಟ ಕೋಟಿಗಳೊಳಿರ್ದಂಭೋಜ ಷಂಡಂಗಳಂ
ಪುದಿದುಷ್ಣಾಂಶುವಿನೂರ್ದ್ವಗಾಂಶುನಿವಹಂ ಮೆಯ್ಯಿಟ್ಟಲರ್ಚುತ್ತುಮಿ|
ರ್ಪುದು ಮಾದ್ಯದ್ಗಜ ಗಂಡ ಭಿತ್ತಿ ಕರ್ಷಣಪ್ರೋದ್ಭೇದದಿಂ ಸಾರ್ದು ಬಂ
ದಿದಿರೊಳ್ ಕೂಡುವುದಿಲ್ಲಿ ಚಂದನ ರಸಂ ಕೆಂಬೊನ್ನ ಟಂಕಂಗಳೊಳ್|| ೨೨

ಮ||ಸ್ರ|| ನೆಗ್ದ ಕರ್ಪೂರ ಕಾಳಾಗರು ಮಳಯ ಮಹೀಜಂಗಳೇಳಾ ಲತಾಳೀ|
ಸ್ಧಗಿತಂಗಳ್ ಕಣ್ಗೆವಂದಿರ್ದುವನಿವನೆ ವಲಂ ಕೊಂಬುಗೊಂಡಂಗಜಂ ಮೆ|
ಲ್ಲಗೆ ಪಾರ್ದಾರ್ದಾಗಳುಂ ಕಿನ್ನರ ಯುವತಿ ಮೃಗೀವ್ರಾತಮಂ ತನ್ನ ನಲ್ಲಂ
ಬುಗಳಿಂದೆಚ್ಚೆಚ್ಚು ಮೆಚ್ಚಂ ಸಲಿಸುವನದಱಂ ರಮ್ಯಮಿಂತೀ ನಗೇಂದ್ರಂ|| ೨೩

ಮ|| ಇದಿರೊಳ್ ನಿಂದೊಡೆ ವಜ್ರಿ ಸೈರಿಸನಿರಲ್ವೇಡೆಮ್ಮೊಳೊಳ್ವೊಕ್ಕು ನಿ
ಲ್ವುದು ನೀನೆಂದು ಕಡಂಗಿ ಕಾಲ್ವಿಡಿವವೋಲ್ ತನ್ನೂರ್ಮಿಗಳ್ ಬಂದುವಂ|
ದಿದಱಂ ಪೋದ ತಪೋಪಳಂ (?) ಗಗನಮಂ ಮಾರ್ಪೊಯ್ಯೆ ಕಣ್ಗೊಪ್ಪಿ ತೋ
ರ್ಪುದಿದುತ್ಪ್ರೇಂಖದಸಂಖ್ಯ ಶಂಖ ಧವಳಂ ಗಂಭೀರ ನೀರಾಕರಂ|| ೨೪

ಚಂ|| ಚಳದನಿಳಾಹತ ಕ್ಷುಭಿತ ಭಂಗುರ ತುಂಗ ತರಂಗ ಮಾಳಿಕಾ
ವಳನ ಸಮುಚ್ಚಳನ್ಮಣಿಗಣಾತ್ತ ಮರೀಚಿ ಲತಾ ಪ್ರತಾನ ಸಂ|
ವಳಯಿತ ವಿದ್ರುಮ ದ್ರುಮ ವಿಳಾಸ ವಿಶೇಷಿತ ಬಾಡವಾನಳಾ
ವಿಳ ಜಳಮಂ ಮನಂ ಬಯಸಿ ನೋಡಿದನರ್ಣವಮಂ ಗುಣಾರ್ಣವಂ|| ೨೫

ವ|| ಅಂತು ನೋಡುತ್ತುಂ ಬಂದು ಮುಂದೊಂದೆಡೆಯೊಳದಭ್ರಾಭ್ರವಿಭ್ರಮ ಭ್ರಾಜಿತೋತ್ತುಂಗಶೈಲಮಂ ಕಂಡು-

ಮ|| ವಿನತಾಪುತ್ರನ ವಜ್ರತುಂಡಹತಿಗಂ ಮೆಯ್ಯಾಂತು ಕಂಡಂಗಳು
ಳ್ಳಿನಮಂಗಂಗಳನೊಡ್ಡಿಯೊಡ್ಡಿ ತನುವಂ ಕೊಟ್ಟಂತು ಜೀಮೂತವಾ|
ಹನನೆಂಬಂಕದ ಚಾಗಿ ನಿಚ್ಚಟಿಕೆಯಿಂದೀ ಶೈಳದೊಳ್ ಶಂಖಚೂ
ಡನನಾದಂದದೆ ಕಾದ ಪೆಂಪೆಸೆಯೆ ನಾಗಾನಂದಮಂ ಮಾಡಿದಂ|| ೨೬

ಇಲ್ಲಿಯ ಕೋಗಿಲೆಯ ಮೂಕತೆಯನ್ನು ಪಡೆಯುವುದಿಲ್ಲ, ಫಲ ಬಿಟ್ಟ ಮಾವು ಎಂದೂ ಮುನಿದುಹೋಗುವುದಿಲ್ಲ. ಇಲ್ಲಿಯ ನಂದನವನಗಳಲ್ಲಿ ಮನ್ಮಥನ ಆಜ್ಞೆ ಎಂದೂ ತಪ್ಪುವುದಿಲ್ಲ. ೨೨. ಇದರ ಅನೇಕ ಆಕಾಶಗಾಮಿಯಾದ ಶಿಖರಗಳ ಮೇಲಿರುವ ತಾವರೆಗಳ ಸಮೂಹವನ್ನು ಸೂರ್ಯನ ಊರ್ಧ್ವಗಾಮಿಯಾದ ಉಷ್ಣ ಕಿರಣಗಳು ಪ್ರವೇಶಿಸಿ ಅರಳಿಸುತ್ತವೆ. ಮದ್ದಾನೆಗಳ ಗಂಡಸ್ಥಳವೆಂಬ ಗೋಡೆಗಳ ಉಜ್ಜುವಿಕೆಯಿಂದ ಮುರಿದು (ಸ್ರವಿಸುತ್ತಿರುವ) ಶ್ರೀಗಂಧದ ರಸವು ಹರಿದುಬಂದು ಇಲ್ಲಿಯ ಅಪರಂಜಿಯ ಬಣ್ಣದ ಪರ್ವತದ ತಪ್ಪಲುಗಳನ್ನು ನಂದಿಸುತ್ತದೆ. ೨೩. ಏಲಕ್ಕಿ ಬಳ್ಳಿಗಳಿಂದ ವ್ಯಾಪ್ತವಾಗಿ ಪ್ರಸಿದ್ಧವಾಗಿರುವ ಇಲ್ಲಿಯ ಕರ್ಪೂರ, ಕರಿ ಅಗಿಲು, ಗಂಧದ ಮರಗಳು ಬಹು ರಮಣೀಯವಾಗಿವೆ. ಇದನ್ನೇ ಅಲ್ಲವೇ ಮನ್ಮಥನು ತನ್ನ ಸಂಕೇತಸ್ಥಳವನ್ನಾಗಿ ಮಾಡಿಕೊಂಡು ಮೃದುವಾಗಿ ನೋಡಿ ಆರ್ಭಟಿಸಿ ಕಿನ್ನರಯುವತಿಯೆಂಬ ಜಿಂಕೆಯ ಸಮೂಹವನ್ನು ಯಾವಾಗಲೂ ತನ್ನ ಉತ್ತಮ ಬಾಣಗಳಿಂದ ಹೊಡೆದು ಅವರ ಇಷ್ಟಾರ್ಥವನ್ನು ಸಲ್ಲಿಸುತ್ತಾನೆ. ಆದುದರಿಂದ ಈ ಪರ್ವತಶ್ರೇಷ್ಠವು ರಮಣೀಯವಾಗಿದೆ. ೨೪. ನೀನು ಎದುರುಗಡೆ ನಿಂತರೆ ಇಂದ್ರನು ಸೈರಿಸುವುದಿಲ್ಲ. ಇಲ್ಲಿರಬೇಡ; ನಮ್ಮೊಳಗೆ ಪ್ರವೇಶ ಮಾಡಿ ನಿಲ್ಲತಕ್ಕದ್ದು ಎಂದು ಉತ್ಸಾಹದಿಂದ ಕಾಲನ್ನು ಹಿಡಿಯುವ ಹಾಗೆ ಸಮುದ್ರದ ಅಲೆಗಳು ಪಕ್ಕದಲ್ಲಿರುವ ಪರ್ವತಗಳ ಬುಡವನ್ನು ಆಶ್ರಯಿಸಿವೆ. ಇಲ್ಲಿಂದ ಹೋದ ತಪೋಪಳವು (?) ಗಮನವನ್ನು ಪ್ರಿತಭಟಿಸಲು ಮೇಲೆ ತೇಲುತ್ತಿರುವ ಅಸಂಖ್ಯಾತವಾದ ಶಂಖಗಳಿಂದ ಬೆಳ್ಳಗಿರುವ ಗಂಭೀರವಾದ ಸಮುದ್ರವು ಕಣ್ಣಿಗೆ ಒಪ್ಪಿ ತೋರಿತು. ೨೫. ಚಲಿಸುತ್ತಿರುವ ಗಾಳಿಯ ಹೊಡೆತದಿಂದ ಕದಡಿದುದೂ ಅಸ್ಥಿರವೂ ಎತ್ತರವೂ ಆದ ಅಲೆಗಳ ಹೊರಳಿಕೆಯಿಂದ ಚಂಚಲವಾದುದು. ಮೇಲಕ್ಕೆ ಚಿಮ್ಮಿದ ರತ್ನಕಾಂತಿಗಳಿಂದ ಕೂಡಿದುದೂ ಹವಳದ ಬಳ್ಳಿಗಳ ಸೊಗಸಿನಿಂದ ವಿಶಿಷ್ಟವಾಗಿ ಮಾಡಲ್ಪಟ್ಟುದೂ ಬಡಬಾಗ್ನಿಯ ಬೆಂಕಿಯಿಂದ ಕದಡಲ್ಪಟ್ಟ ನೀರುಳ್ಳದೂ ಆದ ಸಮುದ್ರವನ್ನು ಗುಣಾರ್ಣವನಾದ ಅರ್ಜುನನು ತೃಪ್ತಿಯಿಂದ ನೋಡಿದನು. ವ|| ಹಾಗೆ ನೋಡುತ್ತ ಬಂದು ಮುಂಭಾಗದಲ್ಲಿ ಅತಿಶಯವಾದ ಮೋಡಗಳ ವಿಲಾಸದಿಂದ ಪ್ರಕಾಶಿತವಾದ ಎತ್ತರವಾದ ಪರ್ವತವನ್ನು ನೋಡಿದನು. ೨೬. ವಿನತೆಯ ಮಗನಾದ ಗರುಡನ ವಜ್ರದಷ್ಟು ಕಠಿಣವಾದ ಪೆಟ್ಟಿಗೂ ಶರೀರವನ್ನೊಡ್ಡಿ ಮಾಂಸಖಂಡಗಳಿರುವವರೆಗೂ ಅವಯವಗಳನ್ನು ಚಾಚಿ ಶರೀರ ದಾನಮಾಡಿ ಪ್ರಸಿದ್ಧನಾದ ಜೀಮೂತವಾಹನನೆಂಬ ಪ್ರಖ್ಯಾತನಾದ ತ್ಯಾಗಿಯು ಮನಸ್ಸಿನ ನಿಶ್ಚಲತ್ವದಿಂದ ಶಂಖಚೂಡ

ವ|| ಎಂದಭಿನವ ಜೀಮೂತವಾಹನಂ ಜೀಮೂತವಾಹನನ ಪರೋಪಕಾರದ ಬೀರದ ಪೆಂಪಂ ಮೆಚ್ಚುತ್ತುಂ ಬಂದು ಗೋಕರ್ಣನಾಥನಂ ಗೌರೀನಾಥನನವನಿ ಪವನ ಗಗನ ದಹನ ತರಣಿ ಸಲಿಲ ತುಹಿನಕರ ಯಜಮಾನ ಮೂರ್ತಿಯಂ ತ್ರಿಳೋಕೈಕ ಸಂಗೀತ ಕೀರ್ತಿಯಂ ಕಂಡು ಕೆಯ್ಗಳಂ ಮುಗಿದು-

ಪೃಥ್ವಿ|| ಪ್ರಚಂಡ ಲಯ ತಾಂಡವ ಕ್ಷುಭಿತಯಾಶು ಯಸ್ಯಾನಯಾ
ಸದಿಗ್ವಳಯಯಾ ಭುವಾ ಸ ಗಿರಿ ಸಾಗರ ದ್ವೀಪಯಾ|
ಕುಲಾಲ ಕರ ನಿರ್ಭರ ಭ್ರಮಿತ ಚಕ್ರಲೀಲಾಯಿತಂ
ಸ ಸರ್ವ ಜಗತಾಂ ಗುರುರ್ಗಿರಿಸುತಾಪತಿ ಪಾತು ನ|| ೨೭

ವ|| ಎಂದು ಬಾಳೇಂದುಮೌಳಿಯಂ ಸ್ತುತಿಸಿ-

ಚಂ|| ಸೊಗಯಿಸಿ ಬಂದ ಮಾಮರನೆ ತಳ್ತೆಲೆವಳ್ಳಿಯೆ ಪೂತ ಜಾತಿ ಸಂ
ಪಗೆಯೆ ಕುಕಿಲ್ವ ಕೋಗಿಲೆಯೆ ಪಾಡುವ ತುಂಬಿಯೆ ನಲ್ಲರೊಳ್ಮೊಗಂ|
ನಗೆಮೊಗದೊಳ್ ಪಳಂಚಲೆಯೆ ಕೂಡುವ ನಲ್ಲರೆ ನೋೞ್ಪೊಡಾವ ಬೆ
ಟ್ಟುಗಳೊಳಮಾವ ನಂದನವನಂಗಳೊಳಂ ಬನವಾಸಿ ದೇಶದೊಳ್|| ೨೮

ಉ|| ಚಾಗದ ಭೋಗದಕ್ಕರದ ಗೇಯದ ಗೊಟ್ಟಿಯಲಂಪಿನಿಂಪುಗ
ಳ್ಗಾಗರವಾದ ಮಾನಸರೆ ಮಾನಸರಂತವರಾಗಿ ಪುಟ್ಟಲೇ|
ನಾಗಿಯುಮೇನೊ ತೀರ್ದಪುದೆ ತೀರದೊಡಂ ಮಱದುಂಬಿಯಾಗಿ ಮೇಣ್
ಕೋಗಿಲೆಯಾಗಿ ಪುಟ್ಟುವುದು ನಂದನದೊಳ್ ವನವಾಸಿ ದೇಶದೊಳ್|| ೨೯

ತೆಂಕಣ ಗಾಳಿ ಸೋಂಕಿದೊಡಮೊಳ್ನುಡಿಗೇಳ್ದೊಡಮಿಂಪನಾಳ್ದ ಗೇ
ಯಂ ಕಿವಿವೊಕ್ಕೊಡಂ ಬಿರಿದ ಮಲ್ಲಿಗೆಗಂಡೊಡಮಾದ ಕೆಂದಲಂ|
ಪಂಗೆಡೆಗೊಂಡೊಡಂ ಮಧುಮಹೋತ್ಸವಮಾದೊಡಮೇನನೆಂಬೆನಾ
ರಂಕುಸವಿಟ್ಟೊಡಂ ನೆನೆವುದೆನ್ನ ಮನಂ ವನವಾಸಿ ದೇಶಮಂ|| ೩೦

ನೆಂಬುವವನನ್ನು ರಕ್ಷಿಸಿದ ಹಿರಿಮೆಯನ್ನು ಪ್ರಕಾಶಿಸಿ ನಾಗರಿಗೆ ಆನಂದವನ್ನುಂಟುಮಾಡಿದುದು ಈ ಬೆಟ್ಟದಲ್ಲಿಯೇ ವ|| ಎಂದು ಅಭಿನವ ಜೀಮೂತವಾಹನನಾದ (ಅರ್ಜುನನು) ಅರಿಕೇಸರಿಯು ಜೀಮೂತವಾಹನನ ಪರೋಪಕಾರದ, ವೀರ್ಯದ ಆಕ್ಯವನ್ನು ಮೆಚ್ಚುತ್ತ ಬಂದು ಗೌರೀನಾಥನೂ ಭೂಮಿ, ವಾಯು, ಆಕಾಶ, ಅಗ್ನಿ, ಸೂರ್ಯ, ಅಪ್, ಚಂದ್ರ, ಯಜಮಾನ ಎಂಬು ಅಷ್ಟಮೂರ್ತಿಯತನೂ ಮೂರು ಲೋಕಗಳಿಂದ ಸ್ತೋತ್ರಮಾಡಲ್ಪಡುವ ಕೀರ್ತಿಯುಳ್ಳವನೂ ಆದ ಗೋಕರ್ಣನಾಥನನ್ನು ಕಂಡು ಕೈ ಮುಗಿದನು. ೨೭. ಯಾರ ಅತಿವೇಗವಾದ ತಾಳಗತಿಯನ್ನುಳ್ಳ ತಾಂಡವ ನೃತ್ಯದಿಂದ ದಿಙ್ಮಂಡಲಗಳಿಂದಲೂ ಪರ್ವತಗಳಿಂದಲೂ ಸಮುದ್ರಗಳಿಂದಲೂ ದ್ವೀಪಗಳಿಂದಲೂ ಕೂಡಿದ ಭೂಮಿಯು ತಿರುಗಿಸಲ್ಪಟ್ಟು ಕುಂಬಾರನ ಕೈ ಚಕ್ರದಂತೆ ವೇಗವಾಗಿ ಸುತ್ತುವ ಲೀಲೆಗೆ ಒಳಗಾಯಿತೋ ಆ ಸರ್ವಜಗತ್ಪತಿಯೂ ಪಾರ್ವತಿ ರಮಣನೂ ಆದ ಶಿವನು ನಮ್ಮನ್ನು ಕಾಪಾಡಲಿ ಎಂದು ವ|| (ಬಾಲಚಂದ್ರನನ್ನು ತಲೆಯಲ್ಲಿ ಉಳ್ಳ) ಈಶ್ವರನನ್ನು ಪ್ರಾರ್ಥಿಸಿ ಮುಂದೆ ಬನವಾಸಿಯ ಸೊಬಗನ್ನು ಸವಿಯಲಾರಂಭಿಸಿದನು. ೨೮. ಆ ಬನವಾಸಿ ದೇಶದ ಯಾವ ಬೆಟ್ಟಗಳಲ್ಲಿಯೂ ಉದ್ಯಾನವನಗಳಲ್ಲಿಯೂ ನೋಡುವುದಾದರೆ ಸೊಗಸಾಗಿ ಫಲ ಬಿಟ್ಟಿರುವ ಮಾವಿನ ಮರಗಳೇ; ದಟ್ಟವಾಗಿ ಸೇರಿಕೊಂಡಿರುವ ವಿಳ್ಳೆಯದೆಲೆಯ ಬಳ್ಳಿಗಳೇ, ಹೂವನ್ನು ಬಿಟ್ಟಿರುವ ಜಾಜಿ ಮತ್ತು ಸಂಪಗೆ ಗಿಡಗಳೇ; ಸುಸ್ವರವಾಗಿ ಧ್ವನಿಮಾಡುವ ಕೋಗಿಲೆ, ಝೇಂಕರಿಸುವ ದುಂಬಿಗಳೇ, ಪ್ರೇಯಸಿಯರ ಒಳ್ಳೆಯ ಮುಖಗಳೇ, ನಗುಮುಖದಲ್ಲಿ ಪ್ರತಿಭಟಿಸಿ ಕೂಡುವ ನಲ್ಲರೇ. ೨೯. ಆ ಬನವಾಸಿ ದೇಶದಲ್ಲಿ ತ್ಯಾಗ, ಭೋಗ, ವಿದ್ಯೆ, ಸಂಗೀತ-ಗೋಷ್ಠಿಗಳ ಸಂತೋಷ ಸೌಖ್ಯಕ್ಕೆ ಅನರಾಗಿರುವ ಮನುಷ್ಯರೇ ಮನುಷ್ಯರು. ಅಂತಹ ಅದೃಷ್ಟಶಾಲಿಗಳಾದ ಮನುಷ್ಯರಾಗಿ ಹುಟ್ಟಲು ಏನಾದರೂ ತಾನೇ ಸಾಧ್ಯವೇ? ಹಾಗೆ ಸಾಧ್ಯವಾಗದಿದ್ದರೂ ಆ ಬನವಾಸಿ ದೇಶದ ನಂದನವನಗಳಲ್ಲಿ ಮರಿದುಂಬಿಯಾಗಿಯೋ ಅಥವಾ ಕೋಗಿಲೆಯಾಗಿಯೋ ಹುಟ್ಟಬೇಕು. ೩೦. (ಅತಿಸುಖಹೇತುಗಳಾದ) ದಕ್ಷಿಣ ದಿಕ್ಕಿನ ತಂಪಾದ ಗಾಳಿಯ ಸ್ಪರ್ಶವಾದರೂ ಒಳ್ಳೆಯ ಮಾತನ್ನು ಕೇಳಿದರೂ ಇಂಪಾದ ಗಾನವು ಕಿವಿಯನ್ನು ಪ್ರವೇಶಿಸಿದರೂ ಅರಳಿದ ಮಲ್ಲಿಗೆಯ ಹೂವನ್ನು ಕಂಡರೂ ನಿದ್ರಾಮುದ್ರಿತವಾದ ರತಿಸೌಖ್ಯಕ್ಕೆ ಪಾತ್ರವಾದರೂ ವಸಂತೋತ್ಸವ ಪ್ರಾಪ್ತವಾದರೂ ಏನು ಹೇಳಲಿ ಯಾರು (ಬೇಡವೆಂದು ತಡೆದು) ಅಂಕುಶದಿಂದ ತಿವಿದರೂ ನನ್ನ ಮನಸ್ಸು ಬನವಾಸಿ ದೇಶವನ್ನು

ಮ|| ಅಮರ್ದಂ ಮುಕ್ಕುಳಿಪಂತುಟಪ್ಪ ಸುಸಿಲೊಂದಿಂಪುಂ ತಗುಳ್ದೊಂದು ಗೇ
ಯಮುಮಾದಕ್ಕರಗೊಟ್ಟಿಯುಂ ಚದುರರೊಳ್ವಾತುಂ ಕುಳಿರ್ ಕೋೞ್ಪ ಜೊಂ|
ಪಮುಮೇವೇೞ್ವುದನುಳ್ಳ ಮೆಯ್ಸುಕಮುಮಿಂತೆನ್ನಂ ಕರಂ ನೋಡಿ ನಾ
ಡೆ ಮನಂಗೊಂಡಿರೆ ತೆಂಕನಾಡ ಮಯಲ್ಕಿನ್ನೇಂ ಮನಂ ಬರ್ಕುಮೇ|| ೩೧

ವ|| ಎಂದರಿಕೇಸರಿ ತೆಂಕನಾಡಂ ನಾಡಾಡಿಯಲ್ಲದೆ ಮೆಚ್ಚುತ್ತುಮಾ ನಾಡನೊಂದೆ ಬಿಲ್ಲೊಳುಂಡಿಗೆ ಸಾಧ್ಯಂ ಮಾಡಿ ಪಶ್ಚಿಮ ದಿಗ್ವಿಭಾಗಾಭಿಮುಖನಾಗಿ ಬಂದು-

ಖಚರಪ್ಲುತ|| ಸಾರ ವಸ್ತುಗಳಿಂ ನೆದಂಭೋರಾಶಿಯೆ ಕಾದಿಗೆ ಕಾವನುಂ
ಸೀರಪಾಣಿ ವಿಳಾಸದಿನಾಳ್ದಂ ಚಕ್ರಧರಂ ಬಗೆವಂಗೆ ಸಂ|
ಸಾರಸಾರಮಿದೆಂಬುದನೆಂದೆಯ್ತಂದನಸಂಚಳ ಕಾಂಚನ
ದ್ವಾರ ಬಂಧುರ ಬಂಧ ಗೃಹೋದ್ಯದ್ದ್ವಾರವತೀಪುರಮಂ ನರಂ|| ೩೨

ವ|| ಅನ್ನೆಗಂ ತನ್ನ ಮಯ್ದನನಪ್ಪಮೋಘಾಸ್ತ್ರ ಧನಂಜಯನ ಬರವಿನ ಸಂತಸದೊಸಗೆಪಡೆಮಾತಂ ಮುಂದುವರಿದಱಪುವಂತೆ-

ಮ|| ಪಲವುಂ ಜನ್ಮದೊಳಾದ ನಿನ್ನ ಕೆಳೆಯಂ ಬಂದಪ್ಪನಾತಂಗೆ ಬೆಂ
ಬಲಮಿನ್ನೀಂ ನಿನಗಾತನಾತನನಿಳಾವಿಖ್ಯಾತನಂ ಕೂರ್ತು ನೋ|
ಡಲುಮೞ್ಕರ್ತಮರ್ದಪ್ಪಲುಂ ಪಡೆವೆಯಿಂದೆಂಬಂತೆ ಕೆತ್ತಿತ್ತು ದಲ್
ಬಲಗಣ್ಣುಂ ಬಲದೋಳುಮಾ ಬಲಿ ಬಲಪ್ರಧ್ವಂಸಿಗಂದಿಟ್ಟಳಂ|| ೩೩

ವ|| ಅಂತು ದಕ್ಷಿಣಾಕ್ಷಿ ಸ್ಪಂದನದೊಳಂ ಸೂಚಿಸುವ ಶುಭಸೂಚನೆಯೊಳಂ ನಾರಾಯಣನುದಾತ್ತನಾರಾಯಣನ ಬರವನಱದು ಬಲದೇವ ಸಾತ್ಯಕಿ ಕೃತವರ್ಮಾದಿಗಳಪ್ಪ ತನ್ನೊಡವುಟ್ಟಿದರುಂ ವೃಷ್ಣಿಕಾಂಭೋಜಕುಳತಿಳಕರಪ್ಪ ಯಾದವರುಂಬೆರಸು ಮದಕರಿ ಕರೇಣು ತುರಗಾದಿ ನಾನಾವಿಧವಾಹನಂಗಳನೇಱ ಮಯ್ದುನಂಗಿದಿರ್ವಂದು ತಮ್ಮಲಂಪಿನೞ್ಕಱನ ರೂಪನೆ ಕಾಣ್ಬಂತೆ ಕಂಡು ದಿಕ್ಕರಿಕರಾನುಕಾರಿಗಳಪ್ಪ ಬಾಹುಗಳಿಂದಮೋರೊರ್ವರಂ ತೆಗೆದಪ್ಪಿ ನಿಬಿಡಾಲಿಂಗ ನಂಗೆಯ್ದಾನಂದಜಳಪರಿಪೂರ್ಣವಿಸ್ತೀರ್ಣವಿಲೋಚನಂಗಳಿಂದಂ ಮುಹುರ್ಮುಹು ರಾಲೋಕನಂ ಗೆಯ್ಯುತ್ತುಮುತ್ತುಂಗ ಮತ್ತವಾರಣಂಗಳನೇಱ ಪೊೞಲಂ ಪುಗೆ-

ನೆನೆಯುತ್ತದೆ. ೩೧. ಅಮೃತವನ್ನೂ ಮೀರಿಸುವಷ್ಟು ಹಿತಕರವಾದ ರತಿಕ್ರೀಡೆಯ ಮಾಧುರ್ಯವೂ ಬೆನ್ನಹಿಂದೆಯೇ ಅಟ್ಟಿ ಬರುತ್ತಿರುವ ಸಂಗೀತವೂ ನೆರೆದಿರುವ ವಿದ್ವಾಂಸರ ಗೋಷ್ಠಿಯೂ ಜಾಣರ ಒಳ್ಳೆಯ ಮಾತುಗಳೂ ತಂಪನ್ನುಂಟುಮಾಡುವ ಹೂಗೊಂಚಲುಗಳೂ ಯಾವ ಸುಖವನ್ನುಂಟುಮಾಡುವುವೋ ಆ ಸುಖಗಳು ನನ್ನ ಮನಸ್ಸನ್ನಾಕ್ರಮಿಸಿದ್ದರೂ ದಕ್ಷಿಣ ದೇಶವನ್ನು ಮರೆಯಲು ನನ್ನ ಮನಸ್ಸು ಒಪ್ಪುವುದಿಲ್ಲ. ವ|| ಎಂದು ಅರಿಕೇಸರಿಯು ದಕ್ಷಿಣ ದೇಶವನ್ನು ವಿಶೇಷವಾಗಿ ಮೆಚ್ಚುತ್ತ ಆ ನಾಡನ್ನು ಶ್ರಮವಿಲ್ಲದೆಯೇ ಜಯಿಸಿ ವಶಪಡಿಸಿಕೊಂಡು ಪಶ್ಚಿಮ ದಿಕ್ಕಿಗೆ ಎದುರಾಗಿ ಬಂದನು. ೩೨. ಸಾರವತ್ತಾದ ಪದಾರ್ಥಗಳಿಂದ ತಂಬಿದ ಸಮುದ್ರವೇ ಅಗುಳು (ಕಂದಕ) ಅದರ ರಕ್ಷಕ ಬಲರಾಮ, ವೈಭವದಿಂದ ಅದನ್ನು ಆಳುವವನು ಶ್ರೀಕೃಷ್ಣ, ವಿಚಾರ ಮಾಡುವವನಿಗೆ ಇದೇ ಸಂಸಾರಸಾರ ಎಂದೆನಿಸಿಕೊಳ್ಳುವ ಸ್ಥಿರವೂ ಚಿನ್ನದ ಬಾಗಿಲುಗಳಿಂದ ಕೂಡಿದ ಎತ್ತರವಾದ ಉಪ್ಪರಿಗೆಗಳನ್ನುಳ್ಳದೂ ಆದ ದ್ವಾರಾವತೀ ಪಟ್ಟಣವನ್ನು ಅರ್ಜುನನು ಬಂದು ಸೇರಿದನು. ವ|| ಅಷ್ಟರಲ್ಲಿ ತನ್ನ ಮಯ್ದುನನಾದ ಅಮೋಘಾಸ್ತ್ರಧನಂಜಯನ ಬರುವಿಕೆಯ ಸಂತೋಷ ಸಮಾಚಾರವನ್ನು ತನಗೆ ಮೊದಲೇ ತಿಳಿಸುವಂತೆ ೩೩. ನಿನ್ನ ಹಿಂದಿನ ಅನೇಕ ಜನ್ಮಗಳ ಸ್ನೇಹಿತನು ಬರುತ್ತಾನೆ. ಆತನಿಗೆ ನೀನು ಬಲ, (ಸಹಾಯಕ) ನಿನಗೆ ಆತನು ಸಹಾಯಕ; ಲೋಕಪ್ರಸಿದ್ಧನಾದ ಆತನನ್ನೂ ಕಣ್ತುಂಬ ನೋಡಿ ಪ್ರೀತಿಯಿಂದ ಗಾಢಾಲಿಂಗನ ಮಾಡುವ ಸುಯೋಗವನ್ನು ಪಡೆಯುವೆ (ಎಂಬುದನ್ನು ಸೂಚಿಸುವ) ಎನ್ನುವ ಹಾಗೆ (ಬಲಿ ಚಕ್ರವರ್ತಿಯ ಬಲವನ್ನು ನಾಶಪಡಿಸಿದ) ಕೃಷ್ಣನಿಗೆ ಬಲಗಣ್ಣೂ ಬಲದೋಳೂ ಏಕಪ್ರಕಾರವಾಗಿ ಅದುರಿದುವು. ವ|| ಹಾಗೆ ಬಲಗಣ್ಣಿನ ಅದುರುವಿಕೆ (ಕುಣಿತ, ಸ್ಪಂದನ) ಯಿಂದಲೂ ಸೂಚಿತವಾದ ಶುಭಶಕುನಗಳಿಂದಲೂ ನಾರಾಯಣನಾದ ಕೃಷ್ಣನು ಉದಾತ್ತ ನಾರಾಯಣನಾದ ಅರ್ಜುನನ ಬರುವಿಕೆಯನ್ನು ತಿಳಿದು ಬಲರಾಮ, ಸಾತ್ಯಕಿ, ಕೃತವರ್ಮ ಮೊದಲಾದ ಒಡಹುಟ್ಟಿದವರನ್ನು ವೃಷ್ಣಿ ಮತ್ತು ಕಾಂಭೋಜಕುಲಶ್ರೇಷ್ಠರಾದ ಯಾದವರನ್ನೂ ಕೂಡಿಕೊಂಡು ಮದ್ದಾನೆ, ಹೆಣ್ಣಾನೆ, ಕುದುರೆ ಮೊದಲಾದ ಅನೇಕ ವಾಹನಗಳನ್ನು ಹತ್ತಿ ಮಯ್ದುನನಿಗೆ ಇದಿರಾಗಿ ಬಂದು ತಮ್ಮ ಸಂತೋಷಕ್ಕೂ ಪ್ರೀತಿಗೂ ಕಾರಣವಾದ ಆಕಾರವನ್ನೇ ಕಾಣುವ ಹಾಗೆ ಕಂಡು ದಿಗ್ಗಜಗಳ ಸೊಂಡಲಿನಂತಿದ್ದ ತೋಳುಗಳಿಂದ ಒಬ್ಬೊಬ್ಬರನ್ನೂ ಬಿಗಿದು ಆಲಿಂಗನ ಮಾಡಿಕೊಂಡರು. ಆನಂದ ಜಲ (ಸಂತೋಷದ ಕಣ್ಣೀರು) ದಿಂದ ತುಂಬಿದ ವಿಸ್ತಾರವಾದ ಕಣ್ಣುಗಳಿಂದ ಪುನ ಪುನ

ಚಂ|| ಸುರ ನರ ಕಿನ್ನರೋರಗ ನಭಶ್ಚರ ಕಾಂತೆಯರೇವರೆಂದು ಮಾಂ
ಕರಿಸುವ ಕೆಯ್ತದಂದದ ಮುರಾರಿಯ ತಂಗೆಯನಪ್ಪುಕೆಯ್ದು ಚ|
ಚ್ಚರಮೊಳಪೊಯ್ದು ನೀಂ ನಿನಗೆ ಮಾಡುವುದೇಂದಮರೇಂದ್ರಪುತ್ರನಂ
ಕರೆವವೊಲಾದುವಾ ಪುರದ ವಾತ ವಿಧೂತವಿನೂತ ಕೇತುಗಳ್|| ೩೪

ವ|| ಆಗಳ್ ಮೊೞಗುವ ಬದ್ಧವಣದ ಪಗಳುಂ ಪಿಡಿದ ಕೆಂಬೊನ್ನ ತಳಿಗೆಯೊಳ್ ತೆಕ್ಕನೆ ತೀವಿದ ಬಿಡುಮುತ್ತಿನ ಸೇಸೆಯುಂ ಬೆರಸು-

ಚಂ|| ಒದವಿದ ನೂಲ ತೊಂಗಲುಲಿ ದೇಸೆಯನಾಂತು ವಿಳಾಸದಿಂದಿಱುಂ
ಕಿದ ನಿಱ ಗಂಡರಳ್ಳೆರ್ದೆಗಳಂ ತುೞವೋಜೆಯನುಂಟುಮಾಡುವಂ|
ದದೆ ನಿಡುಗಣ್ಗಳೊಳ್ನಡೆ ಮನೋಭವನೊಡ್ಡಣದಂತೆ ತಂಡ ತಂ
ಡದೆ ಪರಿತಂದು ಸೂಸಿದುದು ಸೇಸೆಯನಂದು ಪುರಾಂಗನಾಜನಂ|| ೩೫

ಮಿಳಿರ್ವ ಕುರುಳ್ಗಳೊಳ್ ಪೊಳೆವ ಕಣ್ಗಳ ಬೆಳ್ದು ಪಳಂಚಿ ಚಿನ್ನ ಪೂ
ಗಣೆಗೆಣೆಯಾಗೆ ಪುರ್ವುಮೆಮೆಗಳ್ ಬಿಡದಳ್ಳಿಱದಿಕ್ಷುಚಾಪದೊಳ್|
ಖಳ ಕುಸುಮಾಸ್ತ್ರನಿಟ್ಟ ಗೊಣೆಯಕ್ಕೆಣೆಯಾಗಿರೆ ನಿಳ್ಕಿ ನಿಳ್ಕಿ ಕೋ
ಮಳೆ ನಡೆ ನೋಡಿದಳ್ ಕರಿಯನೇಱದನಂ ಪಡೆಮೆಚ್ಚೆಗಂಡನಂ|| ೩೬

ವ|| ಮತ್ತೊರ್ವಳತಿ ಸಂಭ್ರಮ ತ್ವರಿತದಿಂ ಮೇಖಳಾಕಳಿತ ರುಚಿರ ಲುಳಿತಾಧರ ಪಲ್ಲವೆ ನೋೞ್ಪ ದಂಡುಗಳೊಳಂಡುಗೊಂಡು ಸೊರ್ಕಿದಾನೆ ಬರ್ಪಂತೆ ಬಂದು-

ಉ|| ಕಾಯದೆ ಕಾಮನಾರ್ದಿಸೆ ತೊವಲ್ವಿಡಿರಂತೆಡಗಯ್ಯೊಳೊಪ್ಪೆ ತೋ
ರ್ಪಾಯೆಲೆ ನೋಟ ಬೇಟದ ಕೊನರ್ ತಲೆದೋರ್ಪವೊಲಾಗೆ ಬಾಯೊಳಿ
ರ್ದಾಯೆಲೆ ಕಣ್ಗೆವಂದೆಸೆಯೆ ಕಯ್ಯೆಲೆ ಕಯ್ಯೊಳೆ ಬಾಯ ತಂಬುಲಂ
ಬಾಯೊಳೆ ತೋೞೆ ಮೆಯ್ಮ ದು ನೋಡಿದಳ್ ಸಮರೈಕಮೇರುವಂ|| ೩೭

ನೋಡುತ್ತ ಎತ್ತರವಾದ ಮದ್ದಾನೆಯನ್ನು ಹತ್ತಿ ಪುರಪ್ರವೇಶ ಮಾಡಿದರು. ೩೪. ದೇವ, ಮಾನವ, ಕಿನ್ನರ, ಉರಗ, ಖೇಚರ ಸ್ತ್ರೀಯರು (ಇವಳ ಮುಂದೆ) ಅವರು ಯಾರು ಎಂತಹವರು ಎಂದು ತಿರಸ್ಕರಿಸುವ ರೂಪವುಳ್ಳ ಸೌಂದರ್ಯವತಿಯೂ ಆದ ಶ್ರೀಕೃಷ್ಣನ ತಂಗಿಯಾದ ಆ ಸುಭದ್ರೆಯನ್ನು ಅಂಗೀಕಾರಮಾಡಿ ಜಾಗ್ರತೆಯಾಗಿ ಒಲಿಸಿಕೊಂಡು ನಿನ್ನವಳನ್ನಾಗಿಮಾಡಿಕೊ ಎಂದು ಇಂದ್ರಪುತ್ರನಾದ ಅರ್ಜುನನನ್ನು ಕರೆಯುವ ಹಾಗೆ ಆ ನಗರದ ಗಾಳಿಯಿಂದ ಅಲುಗಾಡುತ್ತಿರುವ ಪ್ರಸಿದ್ಧವಾದ ಧ್ವಜಗಳು ತೋರಿದುವು. ವ|| ಆಗ ಮಂಗಳವಾದ್ಯಗಳು ಭೋರ್ಗರೆಯುತ್ತಿರಲು ಅಪರಂಜಿಯ ಆ ನಗರದ ಸ್ತ್ರೀಯರು ಚಿನ್ನದ ತಟ್ಟೆಯನ್ನು ಬಿಡಿಮುತ್ತಿನ ಅಕ್ಷತೆಯನ್ನು ತುಂಬಿಕೊಂಡು ೩೫. ಧರಿಸಿದ ನಡುಪಟ್ಟಿಯ ಕುಚ್ಚಿನ ಶಬ್ದಗಳೂ ಸೌಂದರ್ಯದಿಂದ ಕೂಡಿ ವೈಭವದಿಂದ ತೊಡೆಗಳ ಮಧ್ಯೆ ಸೇರಿಸಿಕೊಂಡಿರುವ ಸೀರೆಗಳ ನೆರಿಗೆಗಳೂ ಶೂರರಾದ ಪುರುಷರ ಹೃದಯವನ್ನು ತುಳಿದು ಯಮನಂತಿರಲು ಆಕರ್ಷಕವಾಗಿರುವ ದೀರ್ಘದೃಷ್ಟಿಯಿಂದ ಕೂಡಿ ಮನ್ಮಥನ ಸೈನ್ಯದ ಹಾಗೆ ಗುಂಪುಗುಂಪಾಗಿ ಓಡಿ ಬಂದು ಅರ್ಜುನನಿಗೆ ಅಕ್ಷತೆಯನ್ನು ಚೆಲ್ಲಿದರು (ಆಶೀರ್ವದಿಸಿದರು). ೩೬. ಚಲಿಸುತ್ತಿರುವ ಮುಂಗುರುಳುಗಳಲ್ಲಿ ಹೊಳೆಯುವ ಕಣ್ಣುಗಳ ಬಿಳಿಯ ಬಣ್ಣವು ಸೇರಿಕೊಂಡು ಚಿನ್ನದ ಪುಷ್ಪಬಾಣಕ್ಕೆ ಸಮಾನವಾಗಿರಲು ಹುಬ್ಬುಗಳೂ ಕಣ್ಣಿನ ರೆಪ್ಪೆಗಳೂ ಒಂದೇ ಸಮನಾಗಿ ಕುಣಿಯುತ್ತ ದುಷ್ಟನಾದ ಮನ್ಮಥನು ಕಬ್ಬಿನ ಬಿಲ್ಲಿನಲ್ಲಿ ಹೂಡಿದ ಬಿಲ್ಲಿನ ಹೆದೆಗೆ ಸಮಾನವಾಗಿರಲು ನೀಡಿನೀಡಿ ನಿಂತು ಆನೆಯ ಮೇಲಿದ್ದ ಅರ್ಜುನನನ್ನು ಸುಂದರಿಯೊಬ್ಬಳು ದೀರ್ಘವಾಗಿ ನೋಡಿದಳು. ವ|| ನಡುಪಟ್ಟಿಯಿಂದ ಕೂಡಿದ ಮನೋಹರವಾಗಿ ಬಾಗಿರುವ ಚಿಗುರಿನಂತಿರುವ ತುಟಿಯುಳ್ಳ ಮತ್ತೊಬ್ಬಳು ಓಡಿಬಂದು ನೋಡಬೇಕೆಂಬ ಸಂಭ್ರಮದಿಂದ ಆನೆಯು ಬರುವ ಹಾಗೆ ಬರುತ್ತಿದ್ದ ಅರ್ಜುನನ ಹತ್ತಿರಕ್ಕೆ ಬಂದು. ೩೭. ಕಾಮನು ಕರುಣೆಯಿಲ್ಲದೆ ಬಾಣಪ್ರಯೋಗ ಮಾಡಲು ಹೆದರಿ ಚಿಗುರನ್ನು ಹಿಡಿಯುವ ಹಾಗೆ ಎಡಗಯ್ಯಲ್ಲಿ ವೀಳೆಯದೆಲೆಯು ಒಪ್ಪಿರಲು ಪ್ರೇಮದ ಚಿಗುರು ಕಾಣಿಸಿಕೊಂಡ ಹಾಗೆ ಬಾಯಲ್ಲಿದ್ದ ತಾಂಬೂಲವು ಮನೋಹರವಾಗಿರಲು, ಕಯ್ಯಿನೆಲೆಯು ಕಯ್ಯಲ್ಲಿಯೂ ಬಾಯಿದಂಬುಲವು ಬಾಯಲ್ಲಿಯೂ ಇರುವ ಹಾಗೆಯೇ ತನ್ನನ್ನು ತಾನು ಮರೆತುಕೊಂಡು ಸಮರೈಕಮೇರುವಾದ ಅರ್ಜುನನನ್ನು

ವ|| ಮತ್ತೊರ್ವಳ್ ಕರ್ವಿನ ಬಿಲ್ಲ ತಿರುವಿಂ ಬರ್ದುಂಕಿ ಬರ್ಪಲರಂಬು ಬರ್ಪಂತೆ ಬಂದು-

ಮ|| ಸ್ಮರನಂ ರೂಪಿನೊಳಿಂದ್ರನಂ ವಿಭವದೊಳ್ ಪೋ ಮೆಚ್ಚಿನಾನಾವ ಗಂ
ಡರುಮಂ ಕಚ್ಚೆಯೊಳಿಟ್ಟು ಕಟ್ಟುವೆನೆನುತ್ತಿರ್ಪಾಕೆ ಗಂಧೇಭ ಕಂ|
ಧರ ಬಂಧ ಪ್ರವಿಭಾಸಿಯಪ್ಪರಿಗನಂ ಕಾಣುತ್ತೆ ಕಣ್ಸೋಲ್ತು ಕಾ
ಮರಸಂ ಭೋಂಕನೆ ಸೂಸೆ ತಾಳ್ದಲರಿದೆಂದಿರ್ಕಚ್ಚೆಯಂ ಕಟ್ಟಿದಳ್ ೩೮

ವ|| ಅಂತು ನೋಡಿದ ಪೆಂಡಿರೆಲ್ಲಂ ಕಾಮದೇವನೆಂಬ ಬೇಂಟೆಕಾಱಂಗೊಡ್ಡಿದ ಪುಲ್ಲೆಗಳಂತರಲಂಬಿನ ಮೊನೆಗೆ ಪೂಣೆ ಪೊಕ್ಕು ಪಕ್ಕಾಗಿರೆ ಪೊೞಲೊಳಗಣಿಂ ಬಂದು ದಿವಿಜೇಂದ್ರ ವಿಳಾಸೋಪಹಾಸಿತಮಪ್ಪ ನಿಜಮಂದಿರಮಂ ಪುಗೆ-

ಮ|| ಲತೆಗಳ್ ಜಂಗಮರೂಪದಿಂ ನೆರೆದುವೋ ದಿವ್ಯಾಪ್ಸರೋವೃಂದವಿ
ಕ್ಷಿತಿಗೇನಿಂದ್ರನ ಶಾಪದಿಂದಿೞದುವೋ ಪೇೞೆಂಬ ಶಂಕಾಂತರಂ|
ಮತಿಗಂ ಪುಟ್ಟುವಿನಂ ಕರಂ ಪರಕೆಗಳ್ ತಳ್ಪೊಯ್ಯೆ ಸೇಸಿಕ್ಕಿತಿಂ
ದ್ರತನೂಜಂಗಿದಿರ್ವಂದು ಷೋಡತ ಸಹಸ್ರಾಂತಪುರಂ ಕೃಷ್ಣನಾ|| ೩೯

ವ|| ಆಗಳ್ ನಾರಾಯಣನ ತಂಗೆ ಸುಭದ್ರೆಯೆಂಬ ಕನ್ನೆ ಕೆಮ್ಮುಗಿಲ ತೆರೆಯ ಪೊರೆಯೊಳ್ ನೆಗೆದು ಪೊಱಮಡುವ ವಿದ್ಯಾಧರಿಯಂತೆ ತನ್ನ ಚೆಂಬೊನ್ನ ಕನ್ನೆಮಾಡದ ಮೇಗಣ ನೆಲೆಯ ಚೌಪಳಿಗೆಯ ಬಾಗಿಲೊಳ್ ನಿಂದು-

ಚಂ|| ಬಳಸಿದ ಗುಜ್ಜುಗಳ್ ನೆರೆದ ಮೇಳದ ಕನ್ನೆಯರೆತ್ತಮಿಕ್ಕೆ ಸಂ
ಚಳಿಸುವ ಚಾಮರಂ ಕನಕ ಪದ್ಮದ ಸೀಗುರಿ ತೊಟ್ಟ ಮಾಣಿಕಂ|
ಗಳ ಬೆಳಗಿಟ್ಟಳಂ ತನಗೊಡಂಬಡೆ ದೇಸೆ ವಿಳಾಸಮಂ ಪುದುಂ
ಗೊಳಿಸೆ ಮರಲ್ದು ಕನ್ನೆ ನಡೆ ನೋಡಿ ಗುಣಾರ್ಣವನೆಂಬನೀತನೇ|| ೪೦

ವ|| ಎಂದು ತನ್ನ ಮೇಳದಾಕೆಗಳಂ ಬೆಸಗೊಂಡೊಡಾಕೆಗಳಾಕೆಯ ಪತ್ತಿದ ಕಣ್ಣುಮನೞದ ಮನಮುಮಂ ಜೋಲ್ದ ನಾಣುಮಂ ನೇಲ್ದ ಸರಮುಮನಱದು ಸಹಜಮನೋಜನ ಕುಲದ ಚಲದ ಚಾಗದ ಬೀರದ ಭಾಗ್ಯದ ಸೌಭಾಗ್ಯದಗುಂತಿಗಳನಂತುಮಳವಲ್ಲದೆ ಪೊಗೞೆ-

ನೋಡಿದಳು. ವ|| ಮತ್ತೊಬ್ಬಳು ಕಬ್ಬಿನ ಬಿಲ್ಲಿನ ಹೆದೆಯಿಂದ ಬದುಕಿ ಬರುವ ಹೂಬಾಣವು ಬರುವ ಹಾಗೆ ಬಂದು ೩೮. ರೂಪದಲ್ಲಿ ಮನ್ಮಥನನ್ನೂ ವೈಭವದಲ್ಲಿ ಇಂದ್ರನನ್ನೂ ನಾನು ಮೆಚ್ಚುವುದಿಲ್ಲ, ಬಿಡು ಎಂತಹ ಶೂರನನ್ನಾದರೂ ನನ್ನ ಕಚ್ಚೆಯಲ್ಲಿಟ್ಟು ಕಟ್ಟಿಬಿಡುತ್ತೇನೆ ಎನ್ನುತ್ತಿದ್ದವಳೂ ಮದ್ದಾನೆಯ ಕುಂಭಸ್ಥಳದಲ್ಲಿ ಪ್ರಕಾಶಮಾನವಾಗಿದ್ದ ಅರಿಗನನ್ನು ನೋಡಿದ ತಕ್ಷಣವೆ ಅವನಿಗೆ ಅನಳಾಗಿ ಕಾಮರಸವು ಇದ್ದಕ್ಕಿದ್ದ ಹಾಗೆ ಸೂಸುತ್ತಿರಲು ಸಹಿಸುವುದಕ್ಕಸಾಧ್ಯವೆಂದು ಎರಡು ಕಚ್ಚೆಯನ್ನು ಬಿಗಿಯಾಗಿ ಕಟ್ಟಿದಳು. ವ|| ಹಾಗೆ ನೋಡಿದ ಹೆಂಗಸರೆಲ್ಲರೂ ಕಾಮದೇವನೆಂಬ ಬೇಟೆಗಾರನಿಗೆ ಒಡ್ಡಿದ ಹುಲ್ಲೆಗಳ ಹಾಗೆ ಪುಷ್ಪಬಾಣದ ತುದಿಗೆ ಪ್ರತಿಜ್ಞೆ ಮಾಡಿ ಪ್ರವೇಶಿಸಿ ಅದಕ್ಕನವಾಗಿರಲು ಅರ್ಜುನನು ನಗರದ ಒಳಭಾಗದಿಂದ ಬಂದು ದೇವೇಂದ್ರನ ವೈಭವವನ್ನೂ ತಿರಸ್ಕರಿಸುವಂತಿದ್ದ ತನಗಾಗಿ ಏರ್ಪಡಿಸಿದ್ದ ಅರಮನೆಯನ್ನು ಪ್ರವೇಶಿಸಿದನು. ೩೯. ಲತೆಗಳೇ ಜಂಗಮರೂಪದಿಂದ ಸೇರಿಕೊಂಡಿವೆಯೋ ಸ್ವರ್ಗದ ಅಪ್ಸರಸ್ತ್ರೀಯರು ಇಂದ್ರನ ಶಾಪದಿಂದ ಭೂಮಿಗೆ ಇಳಿದಿದ್ದಾರೆಯೋ ಎಂಬ ಸಂದೇಹವನ್ನುಂಟು ಮಾಡುತ್ತಿದ್ದ ಕೃಷ್ಣನ ಅಂತಪುರದ ಹದಿನಾರು ಸಾವಿರ ಸ್ತ್ರೀಯರು ಎದುರಾಗಿ ಬಂದು ಅರ್ಜುನನಿಗೆ ವಿಶೇಷವಾದ ಆಶೀರ್ವಾದಪೂರ್ವಕವಾಗಿ ಅಕ್ಷತಾರೋಪಣೆ ಮಾಡಿದರು. ವ|| ಆಗ ನಾರಾಯಣನ ತಂಗಿಯಾದ ಸುಭದ್ರೆಯೆಂಬ ಕನ್ನೆಯು ಕೆಂಪಾದ ಮೋಡವೆಂಬ ತೆರೆಯ ಮಧ್ಯಭಾಗದಿಂದ ಹೊರಟು ಬರುವ ವಿದ್ಯಾಧರ ಸ್ತ್ರೀಯ ಹಾಗೆ ತನ್ನ ಸುವರ್ಣಖಚಿತವಾದ ಕನ್ಯಾಮಾಡದ ಮೇಲಂತಸ್ತಿನ ತೊಟ್ಟಿಯ ಬಾಗಿಲಲ್ಲಿ ನಿಂತುಕೊಂಡು- ೪೦. ತನ್ನ ಸುತ್ತಲೂ ಬಳಸಿಕೊಂಡಿರುವ ಕನ್ಯಾಂತಪುರದ ಸೇವಕರಾದ ಕುಳ್ಳರೂ ಅಲ್ಲಿ ಸೇರಿಕೊಂಡಿದ್ದ ಜನರೂ ಎಲ್ಲ ಕಡೆಯಿಂದಲೂ ಬೀಸಲು ಚಲಿಸುತ್ತಿರುವ ಚಾಮರವೂ ಚಿನ್ನದ ತಾವರೆಯ ಕೊಡೆಯೂ ಧರಿಸಿದ್ದ ಮಾಣಿಕ್ಯರತ್ನದ ಕಾಂತಿಯೂ ಚೆಲುವಾಗಿ ತನಗೆ ಒಪ್ಪಿರಲು ಸೌಂದರ್ಯ ಸೌಭಾಗ್ಯಗಳೂ ಹೊಂದಿಕೊಂಡಿರಲು ಕನ್ಯೆಯಾದ ಸುಭದ್ರೆಯು ದೀರ್ಘದೃಷ್ಟಿಯಿಂದ ನೋಡಿ ಗುಣಾರ್ಣವನೆಂಬುವನೀತನೇ ಎಂದು ತನ್ನ ಸಖಿಯರನ್ನು ಕೇಳಿದನು. ವ|| ಅವರು ಅವಳ ನಟ್ಟದೃಷ್ಟಿಯನ್ನೂ ಪ್ರೀತಿಯಿಂದ ಕೂಡಿದ ಮನಸ್ಸನ್ನೂ ಸಡಿಲವಾದ ಲಜ್ಜೆಯನ್ನೂ ಮೆಲ್ಲಗಾದ ಧ್ವನಿಯನ್ನೂ ತಿಳಿದು ಸಹಜಮನ್ಮಥನಾದ ಅರ್ಜುನನ ಕುಲದ, ಛಲದ, ತ್ಯಾಗದ,

ಚಂ|| ಒದವಿದ ತನ್ನ ಜವ್ವನದ ರೂಪಿನ ಮೆಯ್ಯೊಳೆ ತಪ್ಪುದಪ್ಪು ನೋ
ಟದೊಳೆ ಪೊಡರ್ಪು ತಪ್ಪು ಬಗೆ ತಪ್ಪು ಮನೋಜನ ಪೂವಿನಂಬು ತೀ|
ವಿದ ದೊಣೆ ತೀವಿ ತನ್ನನಿಸೆ ಜಾಣನೆ ತಪ್ಪದೆ ತಪ್ಪುದಪ್ಪ ನೋ
ಡಿದುದದಱಂ ಗುಣಾರ್ಣವನನಾ ಸತಿ ತಪ್ಪದೆ ತಪ್ಪು ನೋಟದೊಳ್|| ೪೧

ವ|| ಅಂತು ತಳತಳ ತೊಳಗುವ ದುಕೂಲದ ಸಕಳವಟ್ಟೆಯೊಳ್ ನಿಮಿರ್ಚಿದಂತಾನು ಮರಲ್ದ ತಾವರೆಯೆಸೞ್ಗಳೊಳ್ ಪುದಿದು ಪುದುಂಗೊಳಿಸಿದಂತಾನುಮನಂಗಾಮೃತವರ್ಷಮನೊದವಿಸಿದಂತಾನುಮೆರ್ದೆಯೊಳೆಡೆವಱಯದ ಪೊಳಪಿನೊಳ್ ತಳ್ಪೊಯ್ದು ಕಡೆಗಣ್ಣ ಬೆಳ್ಪುಗಳ್ ಸೊಗಯಿಸುವ ಕುವಳಯದಳನಯನೆಯ ನೋಟಂ ತನ್ನ ಮನದೊಳಳ್ಳಾಟಮಂ ಪಡೆಯೆ-

ಮ|| ನನೆಯಂಬಂಬನೆ ಕರ್ಚಿ ಪಾಱದಪುದೋ ಶೃಂಗಾರ ವಾರಾಶಿ ಭೋಂ
ಕನೆ ಬೆಳ್ಳಂಗೆಡೆದತ್ತೊ ಕಾಮಂ ನೆ ಮೆಯ್ವೆರ್ಚಿತ್ತೊ ಪೇಕೆಗೆಂ|
ಬಿನೆಗಂ ಸೋಲಮನುಂಟುಮಾಡೆ ಹರಿಗಂ ಕರ್ಣಾಂತ ವಿಶ್ರಾಂತ ಲೋ
ಚನನಾಲೋಚನಗೋಚರಂಬರೆಗಮೊಲ್ದಾ ಕನ್ನೆಯಂ ನೋಡಿದಂ|| ೪೨

ವ|| ಅಂತು ಸುರತಮಕರಧ್ವಜನ ಕಡೆಗಣ್ಣ ನೋಟಂ ಕಾಮನ ಕಿಸುಗಣ್ಚಿ ದ ನೋಟದಂತೊ ರ್ಮೊದಲೆ ತನ್ನ ಮನದೊಳಳ್ಳಾಟಮಂ ಪಡೆಯೆ-

ಉ|| ಸೋಲದೊಳೆಯ್ದೆ ಪೀರ್ದ ತೆಱದಿಂದೆಮೆಯಿಕ್ಕದೆ ನೋೞ್ಪ ಕಣ್ಗೆ ಕಣ್
ಪೀಲಿವೊಲಾಗೆ ಬಂದು ಪೆಱತೊಂದು ಮನಂಬುಗೆ ಪತ್ತಿ ಚಿತ್ತದೊಳ್|
ಕೀಲಸೆ ಕಾವನಂಬವಱ ಬಿಣ್ಪಿನೊಳೊಯ್ಯನೆ ಜೋಲ್ದವೋಲೆ ತಾಂ
ಬೂಲಕರಂಕವಾಹಿನಿಯ ಮೇಲೆ ನೆಱಲ್ದಿರೆ ಬಾಲೆ ಲೀಲೆಯಿಂ|| ೪೩

ವ|| ಆಗಳಾ ನಾರಾಯಣನುಮುದಾತ್ತನಾರಾಯಣನುಮಾನೆಯಿಂದಮಿೞದು ನವ ಕಿಸಲಯ ವಂದನಮಾಳಾಳಂಕೃತಮಪ್ಪ ಸಪ್ತ ತಾಳೋತ್ತುಂಗ ರಮ್ಯ ಹರ್ಮ್ಯದೆರಡನೆಯ ಮೊಗಸಾಲೆಯೊಳಿಟ್ಟ ಪೊನ್ನ ಪಡಿಗಂಗಳೊಳಮಿಕ್ಕಿದ ಪೞಯ ಸುಖಾಸನಂಗಳೊಳಂ ಕಟ್ಟಿದ ಚಿನ್ನದ ಬೊಂದರಿಗೆಯೊಳಮೆಸೆದಿರ್ದ ಮಣಿಮಯಪೀಠದೊಳೊಡನೇಱ ಕಿಱದು ಪೊೞ್ತು ಕುಳ್ಳಿರ್ದು ಮಜ್ಜನ ಭೋಜನ ತಾಂಬೂಲಾನುಲೇಪನ ವಿಭೂಷಣ ಸುರಭಿ ಕುಸುಮ ದಾಮಾದಿಗಳಿಂ ಸಂತಸಂಬಡಿಸಿ ದಾಮೋದರನುದರದೊಳಿಟ್ಟುಕೊಳ್ವನಿತೞ್ಕಱ ಳಪಗತ ಪಥ ಪರಿಶ್ರಮನಂ ಮಾಡಿ-

ವೀರದ, ಭಾಗ್ಯದ, ಸೌಭಾಗ್ಯದ ಅತಿಶಯಗಳನ್ನು ಅಳತೆಯಿಲ್ಲದೆ ಹೊಗಳಿದರು. ೪೧. ಆಗ ಅವಳಿಗೆ ಯವ್ವನಪ್ರಾಪ್ತವಾದ ಶರೀರದ ಸೌಂದರ್ಯವು ಅಸ್ತವ್ಯಸ್ತವಾಯಿತು. ನೋಡದಲ್ಲಿನ ಉತ್ಸಾಹವೂ ಅಸ್ತವ್ಯಸ್ತವಾಯಿತು. ಮನಸ್ಸೂ ಅಸ್ತವ್ಯಸ್ತವಾಯಿತು. ಮನ್ಮಥನು ಪುಷ್ಪಬಾಣದಿಂದ ತುಂಬಿದ ಬತ್ತಳಿಕೆಯಿಂದ ತನ್ನನ್ನು ಹೊಡೆಯುತ್ತಿರಲು ತನ್ನ ಜಾಣ್ಮೆಯೇ ವ್ಯತ್ಯಸ್ತವಾಗಿ ಆ ಸತಿಯು ಗುಣಾರ್ಣವನನ್ನು ತಪ್ಪು ನೋಟಗಳಿಂದ ನೋಡಿದಳು (?) ವ|| ಹಾಗೆ ತಳತಳನೆ ಪ್ರಕಾಶಿಸುವ ರೇಷ್ಮೆಯ ವಿವಿಧ ಬಣ್ಣಗಳ ಬಟ್ಟೆಯನ್ನು ಹರಡಿದಂತೆಯೂ ಅರಳಿದ ತಾವರೆಯ ದಳದಲ್ಲಿ ಸೇರಿಕೊಂಡು ಹದಗೊಳಿಸಿದಂತೆಯೂ ಕಾಣುವ ಮಳೆಯನ್ನು ಉಂಟುಮಾಡಿದಂತೆಯೂ ಹೃದಯದ ಅವಿಚ್ಛಿನ್ನವಾದ ಕಾಂತಿಯಲ್ಲಿ ಪ್ರತಿಭಟಿಸಿ ಕಡೆಗಣ್ಣಿನ ಬಿಳಿಯ ಬಣ್ಣಗಳು ಸೊಗಯಿಸುತ್ತಿರುವ ಕನ್ನೆ ದಿಲೆಯ ಎಸಳಿನಂತೆ ಕಣ್ಣುಳ್ಳ ಆ ಸುಭದ್ರೆಯ ನೋಟವು ಅರ್ಜುನನ ಮನಸ್ಸಿನಲ್ಲಿ ತಳಮಳವನ್ನುಂಟುಮಾಡಿತು. ೪೨. ಈ ಸುಭದ್ರೆಗಾಗಿ ಪುಷ್ಪಬಾಣವೇ ಪುಷ್ಪಬಾಣ ಕಚ್ಚಿಕೊಂಡು ಹಾರಿಬರುತ್ತಿದೆಯೋ ಶೃಂಗಾರ ಸಮುದ್ರವು ಇದ್ದಕ್ಕಿದ್ದ ಹಾಗೆ ತಟ್ಟನೆ ಅಕ ಪ್ರವಾಹದಿಂದ ಹರಿದಿದೆಯೋ ಕಾಮನ ರಸಪ್ರವಾಹವು ಅಕವಾಯಿತೊ ಹೇಳು ಎನ್ನುವ ಹಾಗೆ ತನಗೆ ಸೋಲನ್ನುಂಟು ಮಾಡಲು ಕರ್ಣಾತವಿಶ್ರಾಂತನಾದ ಅರ್ಜುನನು ಕಣ್ಣಿಗೆ ನಿಲುಕಿಸುವವರೆಗೂ ಆ ಕನ್ಯೆಯನ್ನು ಪ್ರೀತಿಯಿಂದ ನೋಡಿದನು. ವ|| ಸುರತಮಕರಧ್ವಜನಾದ ಅರ್ಜುನನ ಕಡೆಗಣ್ಣಿನ ನೋಟವು ಕಾಮನ ಕೆಂಪೇರಿದ ನೋಟದಂತೆ ತಕ್ಷಣವೇ ತನ್ನ ಮನಸ್ಸಿನಲ್ಲಿ ನಡುಕವನ್ನುಂಟುಮಾಡಲು ೪೩. ಪ್ರೇಮದಿಂದ ಚೆನ್ನಾಗಿ ಹೀರುವ ರೀತಿಯಲ್ಲಿ ರೆಪ್ಪೆ ಹೊಡೆಯದೇ ನೋಡುವ ಕಣ್ಣಿಗೆ ಬೇರೊಂದು ಕಣ್ಣು (ಅಂದರೆ ಅರ್ಜುನನ ಕಣ್ಣು) ನವಿಲುಗರಿಯ ಕಣ್ಣಿನ ಹಾಗಾಗಿ ಮನಸ್ಸನ್ನು ಪ್ರವೇಶಿಸಲು ಕಾಮಬಾಣವು ಮನಸ್ಸಿನಲ್ಲಿ ನಾಟಿರಲು ಆ ಬಾಣಗಳ ಭಾರದಿಂದ ಮೆಲ್ಲಗೆ ಜೋತುಬಿದ್ದ ಹಾಗೆ ಸುಭದ್ರೆಯು ವಿಲಾಸದಿಂದ ತನ್ನ ತಾಂಬೂಲಕರಂಕವಾಹಿನಿಯು ಮೇಲೆ ಒರಗಿಕೊಂಡು ನಿಂತಳು. ವ|| ಆಗ ಕೃಷ್ಣನೂ ಅರ್ಜುನನೂ ಆನೆಯಿಂದ ಇಳಿದು ಹೊಸದಾದ ಚಿಗುರುಗಳ ತೋರಣಮಾಲೆಯಿಂದ ಅಲಂಕೃತವಾದ ಎತ್ತರವಾದ ಏಳುತಾಳೆಯ ಮರಗಳಷ್ಟು ಎತ್ತರವೂ ರಮಣೀಯವೂ ಆದ ಉಪ್ಪರಿಗೆಯ ಮುಖಮಂಟಪವನ್ನೇರಿ ಅಲ್ಲಿ ಇಟ್ಟಿದ್ದ ಚಿನ್ನದ ಪೀಕದಾನಿಗಳಲ್ಲಿಯೂ ಬಟ್ಟೆಗಳಿಂದ ಮುಚ್ಚಿದ್ದ ಸುಖಾಸನಗಳಲ್ಲಿಯೂ ಸಿದ್ಧಪಡಿಸಿದ್ದ ಚಿನ್ನದ ದಿಂಬುಗಳಲ್ಲಿಯೂ ಚೆಲುವಾಗಿದ್ದ ರತ್ನಮಯಪೀಠಗಳಲ್ಲಿಯೂ ವಿಶ್ರಮಿಸಿ ಕೆಲವುಕಾಲ