ಈ ನಗರ
ಜನರನ್ನು ಜೀವಂತವಾಗಿ ಹುಗಿದಿರುವ
ಶ್ಮಶಾನ.
ಮೊದಮೊದಲು
ನಾವೆಲ್ಲ ಯಾವತ್ತಿನಿಂದಲೊ ಸತ್ತವರಂತೆ
ನಟಿಸಿದೆವು.
ನಂಬದ ಅವರು, ನಮಗೆ ತಲೆ ಸರಿಯಿಲ್ಲೆಂದು
ಘೋಷಿಸಿದರು, ಮತ್ತು
ಉಳಿದವರ ಜತೆ ಕುಡಿಯುವ ಹಾಗೆ
ಬಲವಂತ ಮಾಡಿದರು.
ನಾವು ಕುಡಿದದ್ದು ಸಿಹಿಯಾಗಿತ್ತು
ಹಾಗೆಯೇ, ಭಯಾನಕ ಕೂಡ.

ಒಂದು ದಿನ
ಹೀಗೆ ಹೂತವರ ಮಧ್ಯೆ ಬದುಕೀ ಬದುಕೀ
ವಾಕರಿಕೆಯಾಯಿತು ನಮಗೆ.
ಬಿಸಿ ನೆತ್ತರಿನ ಜತೆಗೆ
ಹೊಂದಿಳ್ಳಲು ಕಲಿತ, ನಮ್ಮ
ಗೋರಿಗಳನ್ನು ನಾವೇ ತೋಡುವ ಹಾಗೆ
ಬಲಾತ್ಕಾರ ಮಾಡಿದರು.
ನಮ್ಮನ್ನು ಹಿಂದಿನಿಂದಲೆ ನೇರವಾಗಿ
ತಲೆಗೆ ಗುಂಡಿಟ್ಟು ಕೊಂದರು.
ಈಗ ನಿಜವಾಗಿಯೂ ನಾವು
ಸತ್ತಿದ್ದೇವೆ. ಇದೇ ನಮ್ಮ ಕೊನೆ
ಅಂದುಕೊಂಡೆವು.
ಆದರೆ ಅವರು ಮತ್ತೆ ನಮ್ಮನ್ನು
ಎಬ್ಬಿಸಿದರು. ಜೀವಂತವಾಗಿ
ಹೂಳಲೆಂದು.

– ಆಂಟೋನಿನ್ ಬಾರ್ಜೊಸಿಕ್ (ಜೆಕ್ ಭಾಷೆಯ ಕವಿ)