ಪಲ್ಲವಿ : ಚಾಡಿ ಮಾತಿನ ಚಡಿಯ ಏಟನು ತಡೆಯಲಾರೆ ಕೃಷ್ಣಾ
ಬೀದಿ ಸುತ್ತದೆ ತೆಪ್ಪಗೆ ನೀ ಇರು ಮನೆ ಹಿಡಿದು ಕೃಷ್ಣ
ಚರಣ : ಬೆಣ್ಣೆ ಕಳ್ಳನೆಂದು ಹೇಳುತ
ಮಾನ ತೆಗೆಯುವರು ಕೃಷ್ಣ
ಎಷ್ಟು ಹೇಳಲಿ ಏನು ಮಾಡಲಿ
ನಿನ್ನ ಪಡೆಯುವುದೇ ಭಾಗ್ಯ ಕೃಷ್ಣ
ಕೈಯನು ಮುಗಿಯುವೆ ಕೈಯನು ಕಟ್ಟುವೆ
ಕೈಯಿಗೆ ಬೆಣ್ಣೆಯ ಕೊಡುವೆ ಕೃಷ್ಣಾ
ಮಾತನು ಕೇಳಿ ಗಂಭೀರದಿಂದಿರು
ಅಪಜಯ ಎಂಬದೇ ಇಲ್ಲ ನಿನಗೆ
Leave A Comment