ಸಹೋದ್ಯೋಗಿಯಾಗಿದ್ದ ಡಾ. ಹರಿಶ್ಚಂದ್ರ ದಿಗ್ಸಂಗಿಕರ್ ಅವರು ನಮ್ಮ ಜಾನಪದ ಅಧ್ಯಯನ ವಿಭಾಗದಲ್ಲಿ ನೆನಪುಗಳನ್ನು ಮಾತ್ರ ಬಿಟ್ಟುಹೋಗಿದ್ದಾರೆ. ವಿಭಾಗದ ಅನೇಕ ಶೈಕ್ಷಣಿಕ ಚಟುವಟಿಕೆಗಳಲ್ಲಿ ಅವರು ಉತ್ಸಾಹದಿಂದ ತಮ್ಮನ್ನು ತೊಡಗಿಸಿಕೊಂಡಿದ್ದರು. ಅವರು ರೂಪಿಸಿದ ಕೆಲವು ಯೋಜನೆಗಳು ಈಗಾಗಲೇ ಪ್ರಸಾರಾಂಗದ ಮೂಲಕ ಪ್ರಕಟವಾಗಿವೆ. ಪ್ರಸ್ತುತ ಚಾರಿತ್ರಿಕ ಲಾವಣಿಗಳು ಪುಸ್ತಕದ ಮೂಲಕ ಅವರು ಮತ್ತೊಮ್ಮೆ ನಮ್ಮ ಮುಂದದೆ ಬಂದಿದ್ದಾರೆ. ಇಂತಹ ಕೆಲಸಗಳ ಮೂಲಕ ಬೌದ್ಧಿಕವಾಗಿ ಹರಿಶ್ಚಂದ್ರ ನಮ್ಮ ಜೊತೆಗಿದ್ದಾರೆ ಎಂದು ತಿಳಿಸಲು ಸಂತೋಷವಾಗುತ್ತದೆ.

ಡಾ. ಹರಿಶ್ಚಂದ್ರ ದಿಗ್ಸಂಗಿಕರ್ ಅವರು ಗುಲ್ಬರ್ಗಾ ಹಾಗೂ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಗಳ ವಿವಿಧ ಊರುಗಳಿಗೆ ಭೇಟಿ ನೀಡಿ ಲಾವಣಿ ಪದಗಳನ್ನು ಸಂಗ್ರಹಿಸಿ ಅವನ್ನು ಅಕ್ಷರ ರೂಪಕ್ಕೆ ಇಳಿಸಿ ಮುದ್ರಣಕ್ಕೆ ಸಿದ್ಧಪಡಿಸಿ ನಮಗೆ ಕೊಟ್ಟುಹೋಗಿದ್ದಾರೆ. ಅವರ ಈ ಕೆಲಸಗಳಿಗೆ ನೆರವಾದವರಿಗೆ ಅವರ ಪರವಾಗಿ ಹಾಗೂ ವಿಭಾಗದ ಪರವಾಗಿ ಕೃತಜ್ಞತೆಗಳು ಸಲ್ಲುತ್ತವೆ ಎಂದು ಹೇಳುವುದು ಮಾತ್ರ ನನಗೆ ಉಳಿದಿರುವ ಕೆಲಸ.

ಡಾ. ಮಂಜುನಾಥ ಬೇವಿನಕಟ್ಟಿ
ವಿಭಾಗದ ಮುಖ್ಯಸ್ಥರು