ಮಹಿಬೂಬ ಸುಬಾನಿ ಚರಿತ್ರ ಹೇಳಬೇಕಾದರ
ಒಂದೇ ನಾಲಗಿಲಿ ತೀರದು ಶರಣ ಗಾನ  ||
ಮಹಿಬೂಬ ಸುಬಾನಿಗಿ ಹರಕಿ ಬೇಡಿದ
ಧನವಂತನಿದ್ದ ಒಬ್ಬ ಸಾಹುಕಾರ  ||
ಬೆಳ್ಳಿ ಬಂಗಾರ ದೇವರ ಮಸ್ತ ಕೊಟ್ಟು ಮರತಿದ್ದ
ಅವರ ಹೊಟ್ಟಿಲೆ ಇದ್ದಿರಲ್ಲ ಒಬ್ಬ ಪುತ್ತರ  ||
ಏಸೋ ದೇವರಿಗಿ ಹರಕಿ ಬೇಡಿದಾರ
ಮಗ ಹುಟ್ಟಿದ್ದಿಲ್ಲ ಎಂತದ್ದು ಅವರ ಹಣಿಬಾರ  ||
ಅರವತ್ತು ವರ್ಷಿನ ವಯ್ಯಾದವರು
ಒಂದಿನ ಮಾತಾಡತಾರ ವಿಚಾರ  ||

ಸತಿ ಪತಿ ಕೇಳ್ರಿ ಇಬ್ಬರ
ನಮ್ಮ ಊರಾಗೆ ಹಣ ಮಹಿಬೂಬ ಶರಣರ  ||
ಇಬ್ಬರು ಹೋಗ್ಯಾರ ಭೇಟ್ಟಿ ಆಗ್ಯಾರ
ನಮ್ಮ ಹೊಟ್ಟಿಲೆ ಇಲ್ರಿ ಒಂದು ಪುತ್ತರ ||
ಮಹಿಬೂಬ ದುಬಾನಿ ಅಂತಾನ ಕೊಡಾಂವ ಬ್ಯಾರೆ ಹನಾ
ಭಾವ ಭಕ್ತಿ ಇರಲಿ ನಿಮ್ಮ ನಿರ್ಧಾರ  ||

ಒಂದು ವರ್ಷದ ತುಂಬದರಾಗೆ ಹುಟ್ಟತಾದ ಒಂದು ಗಂಡ ಪುತ್ತರ
ಇಷ್ಟ ಕೇಳಿ ಸತಿ ಪತಿ ಮಗಿಗಿ ಬಂದಾರ  ||
ಅವಸರಲೆ ಅಂತಾರ ಗಂಡ ಕೂಸ ಹುಟ್ಟಿದರ
ಮಗನ ತೂಕ ಕೊಡತಿನಿ ಬಂಗಾರ  ||

ದುಮಾಲಿ
ವರ್ಷ ತುಂಬದರಾಗ ಗಂಡಸ ಮಗ ಹುಟ್ಯಾನ ಹೌದು ಹುಟ್ಯಾನ
ತಾಯಿಗ್ ಹಿಗ್ಗ ಆಗ್ಯಾದ  || ಗೀ ||
ಮುಂದ ಮಗಾ ಹುಟ್ಟಿದ ಮ್ಯಾಗ ಸಾವುಕಾರಗ ಚಿಂತಿ ಆಗ್ಯಾದ ಹೌದು ಆಗ್ಯಾದ  ||
ಕುರಸಲ್ಯಾ ಮಕ್ಕಳ ಕಾಲಾಗ ಎಲ್ಲಾ ಬಂಗಾರ ಹೋಗತಾದ  || ಗೀ ||

ಇಂದ ಕೊಡಬೇಕು ನಾವು ನಾಳಿಗಿ ಕೊಡಬೇಕು ಎಂದು
ಆರು ತಿಂಗಳು ದಿನಾ ಹೋದಾವು ಆವಾಗ  |
ಕೂಸೆ ಬಿರಸ ಆಯಿತು ಮನಿಯೊಳಗ
ಮಹಿಬೂಬ ಸುಬಾನಿ ಕಣ್ಣ ತೆರದ ಒಂದಿನ ಆವಾಗ

ಫಕೀರನ ವೇಷ ತಾಳಿ ಸಾವುಕಾರನ ಮನಿಗಿ ಬಂದ
ಸ್ವಲ್ಪ ನಿಗಾ ಎತ್ತಿ ನೋಡಿದಾನೋ ಕೂಸಿನ ಮ್ಯಾಗ
ಮಹಿಬೂಬ ಸುಬಾನಿ ನಿಗಾ ಕೂಸಿನ ಮ್ಯಾಲ ಬಿದ್ದಾದ
ತೊಟ್ಟಿಲಾನ ಕೂಸ ಹಾರಿ ಬಿದ್ದಾದ ಹೊರಗ
ಮುಂದೆ ಪ್ರಾಣ ಹೋಯಿತು ಒಂದೇ ಏಟಿಗ ||

ದುಃಖ ಮಾಡತಾರ ಆವಾಗ
ಕೊಟ್ಟಿದಿ ದೇವರ ಕಸಕೊಂಡೆ ಹ್ವಾದಿ
ಹೇಳದು ಮುಂದ ಇನ್ನ ಯಾರಿಗ
ಅತ್ತರ ಕದರಾರ ಮಣ್ಣ ಮಾಡಿಬಂದಾರ
ಮರದಿವಸ ಮಹಿಬೂಬ ಮತ್ತ ಬಂದ ಅಲ್ಲಿಗ
ಭೀಕ್ಷ ನೀಡರೆಂತ ಅಂದ ನಿಂತ ಬಾಗಲಾಗ
ಸಾವಕಾರ ಕುತ್ತಿದ ಬಳೆ ದುಃಖಿನ ಒಳಗೆ
ಬಂಗಾರರಿತ ಮಗನಿಗಿ ಒಯ್ದು ಮಣ್ಣಾಗ ಇಟ್ಟಿದಿ
ಯಾರ ಭಿಕ್ಷಾ ನೀಡಬಕು ತಂದ ನಿನಗ  || ಗೀ ||

ನಮದ ನಮಗಾಗ್ಯಾದ ಮುಂದಿನ ಮನಿಗಿ ಹೋಗಂದ
ಮಹಿಬೂಬ ಸುಬಾನಿ ಕೇಳತಾನ ಸಾವಕಾರಗ
ಹಂತದೇನ ಜಡ್ಡ ಆಗಿತ ನಿನ್ನ ಮಗನೀಗ
ನೀವು ಮಣ್ಣಾಗಯಾಕ ಇಟ್ರಿ ಬಂಗಾದಂತ ಮಗನಿಗ
ಈಗ ಬರುವಾಗ ನಾ ಸ್ಮಶಾನದದಂದೆ ಬಂದಿನಿ
ಒಂದು ಸಣ್ಣ ಕೂಸ ಆಡಳಾದ ಕುಣಿತಗ್ಗನ್ಯಾಗ ||

ಸಾವಕಾರ ಸಿಟ್ಟಿಗಿ ಬಂದಾನ ಫಕೀರಗ ಬಯ್ತಾನ
ಚಲ್ಲಾಟ ಆಗ್ಯಾದೇನೋ ಮಗಾ ಸತ್ತಾಗ
ಸುಳ್ಳಂತು ಹೇಳೋದಿಲ್ರಿ ಸಾವಕಾರ ನಿನಗ
ಇದು ಖರೆ ಸುಳ್ಳ ನಡಿರಿ ನನ್ನ ಜೊತಿ ನೋಡಿಗ ||

ದುಮಾಲಿ
ಮಹಿಬೂಬ ಸುಬಾನಿ ಸಾವಕಾರ ಕೂಡಿಹೋಗ್ಯಾರ
ಹೋಗಿ ನಿಂತಾರ ಆತನ ಶವದಾಗ
ಖರೆನೆ ಕೂಡ ಕುಣಿ ತಗ್ಗನ್ಯಾಗ ಅಳತಿತ್ತು
ಸಾವಕಾರ ಮಣ್ಣ ತೆಗೆದು ನೋಡ್ಯಾನಾವಾಗ
ಧನ್ಯ ಧನ್ಯ ಅಂತಾನಾವಾಗ
ಮಹಿಬೂಬ ಶರಣ ಇವನೆ ಜಗದಾಗದ
ನಿನ್ನ ಹರಕಿ ನಾನು ಕೊಡತಿನಿ ನಡಿರಿ
ಮಹಿಬೂಬ ಗುರುವಿಗಿ ಕರದಾರಾಗ  || ಗೀ ||