ಮೊದಲಿಗೆ ಮಂಡ್ರೊಲ ಸಾಹೆಬ ಬಂದು ಬೇತಮಾಡೀ |
ಠಣೆವ್ಹಾಕಲಿಬೇಕೆಂದೊಳ್ಳೇ ಕಿಲ್ಲೆವ ನೋಡೀ ||ಪಲ್ಲ||
ಶ್ರೀಮಂತರ ದೌಲತ ಏನು ಮೌಜಿಲಿತ್ತೂ | ಪುಂಡ ಪಾಳಗಾರರು ಕೂಡೀ | ನೆಲೆಯಿಲ್ಲದಾಯಿತೂ ನೀವು ಕೇಳಿರೀಗ | ಧಾರವಾಡದ ಕಿಲ್ಲೆವ ಠಾಣೆವ ಹಾಕತಾರಾ | ಡೊಂಬಳದ ಕಿಲ್ಲೆವ ನೋಡಿದಾರು | ಕಡದಾಡಲಿಲ್ಲ ಕರ್ನಾಟ ದೇಶದ ಮಂದೀ | ಸುತ್ತಲೀ ರಾಜೆವ ಠಾಣೆವ ಹಾಕುತಾಲೀ | ಆಕೆ ಹೇಳಿದ ವಚನಾದಿಂದ | ರೋಣದಾಸಮತ ತಾಲೂಕ ಸುದ್ದಿಯೇನು | ಎಂತೆಂತ ಕಿಲ್ಲೆವು ಬಿದ್ದುಹೋದವಲ್ಲ ಗೋಡೀ | ಸರದಾರ ಸಾಹೆಬ ಸಿಟ್ಟೀಲಿ | ಧರಿಯೊಳಗ ಮೆರವ ಬ್ರಹ್ಮೇಶ ಬಟ್ಟಿಗೇರಿ | ಸಮಾಪ್ತ ||* ೪ ಊ.ಪ. *ಪರಿಯ್ಯಾ ಬಿಂನ ವೀರಭದ್ರಯ್ಯಾ ಗಣಾಚಾರಿ ಬಾದಾಮಿ, ೫ನೇ ಫೇಬ್ರುಅರಿ ಸನ್ ೧೮೭೪ ಇಸವಿ. ಕವಿ : ಬ್ರಹ್ಮೇಶ ಬಜ್ಜಗೇರಿ
ಬಲೆ ಭಲೇ ಶಿಪಾಯಿ ಬಿಟ್ಟು ೧ಹೋದರು೧
ಆ ಸಾಹೆಬ ಗೋಕುಲ್ಯಾ ಲಡಾಯಿ ಮಾಡಿ ಸತ್ತೂ |
ಇಂಗ್ರೇಜರ ದಂಡು ಬಿಡದಲೆ ಬೆನ್ಹತ್ತೂ ||ಚಾಲು||
ತಂಮೊಳಗ ತಾವು ಮಾತಾಡಿ |
ಕಳಕೊಂಡರು ನೆಂಬಿದ ಗೋಡೀ |
ಬಿಟುಕೊಟ್ಟು ಹೋದರವರೋಡಿ ||ಏರು||
ಪರಂಗೇರ ಠಾಣೆವು ಬಿದ್ದಿತು ಪುಂಣೇದಾಗ||೧||
ಅಲ್ಲಿಂದ ತಕ್ಕೊಂಡಾರು ಬೆಳಗಾವಿ ಶಾಪೂರಾ |
ಬಾದಾಮಿ ಮೇಲೆ ದಂಡು ಕೂಡಿತೆ ಬಲು ಪೂರಾ |
ಗದಿಗಿನಾ ಸೀಮೆ ೨ಮೇಲೆ೨[2] ನವಲಗುಂದ ಜೇರಾ ||ಚಾಲು||
ಸನ್ಮಾತದಿಂದ ಬೇಡಿದಾರು |
೩ದೊಡ್ಡ೩[3] ತೋಪ ತುಂಬಿ ಹೊಡಸಿದಾರೂ |
ಕಲ್ಲುಗೋಡಿ ಒಡು ಕೆಡಿಸಿದಾರು | ||ಏರು||
ಜಗಳಕೆ ಜರಿದು ಕೊಟ್ಟು ೧ಹೋದರು೧ ತಾವಂಜಿ||೨||
ರೈತರಿಗೆ ರಾಜಿ ಮಾಡಿ ಬರದು ಕೊಟ್ಟರೋಲಿ |
ಹಿಂಗ ತಿಳಿಯದ್ಹೋದಿತು ಪರಂಗೇರ ನೇಲಿs
ಏಕರಾಜ್ಯ ಮಾಡಿದಳು ಕುಪಣಿ ಹೆಂಣ ಬಾಲಿ ||ಚಾಲು||
ಬಾರ ನೆಡಿತು ಸಾಹೆಬರಾ ಮುಂದ |
ತುರ್ಪಿನಾ ಫೌಜು ಹಿಂದಿಂದ |
ಬಲಕಚೆರಿ ನೆರದತೆ ದುಂದ ||ಏರು||
ಇಂಗ್ರೇಜಿ ಮುನಶಿ ಕುಂತು ವಿಚಾರ ಮಾಡಿದಾನು||೩||
ಮೇಗಿನ ತೋಪಗಳು ಕಿತ್ತರು ಈಡ್ಯಾಡೀ |
ತಂಮ ರಾಜ್ಯೆದ ನಡತಿ ದೇಶಕೆಲ್ಲ ಮಾಡೀ |
ರೊಕ್ಕ ತಿಂದವರಿಗ್ಯಲ್ಲಾ ಹಾಕುತಾರ ಬೇಡೀ ||ಚಾಲು||
ಕುಂತನು ಕುರ್ಸೆದ ಮೇಲೆ |
ದಂಡ ಯಿಳವಿದ ಸುತ್ತಮುತ್ತಾಲಿ |
ರೈತರಿಗೆ ಬರದು ಕೊಟ್ಟರೋಲಿ ೪[ಏರು]೪
ಆತನ ಕರುಣವಸಕರಡಿ ಬಾಲ ಸಾರಿ||೪||
ಕೃತಿ : ಪ್ಲೀಟರು ಸಂಗ್ರಹಿಸಿದ ಲಾವಣಿಗಳು
Leave A Comment