ಧೀರ ಕುಂಪಣಿ ಸರದಾರ ಟಲ್ಲರ ಸಾಹೇಬಗ್ಯಾರು
ಸರಿಯೊ ಯಿ ಜಗದೊಳಗೆ |
ಸಾರಿ ಹೇಳಿದ ಹನ್ನೆರಡು ಘಂಟೆಗೆ ಸೂರಿಮಾಡಿದ
ಭೀಮರಾಯ ಧೊರಿಗೇ
ದೇಶದೇಶದೊಳು ಯಲ್ಲಿ ಕುಂಪಣಿಯವರು
ಹುಕುಮಂ ಮಾಡಿದರೂ ||
ದೊಡ್ಡ ದೊಡ್ಡ ಕಿಲ್ಲೇಗಳನು ಕೆಡಹಿದರು |
ಮೀರಿದ ಧೊರೆಗಳ ಸೆರೆ ಹಾಕಿದರು |
ತಪ್ಪಿಲಿ ಸಿಗಲು ಶಿವನ ಬಿಡದಿಹರು |
ಧರ್ಮರಾಜ್ಯನೆಲ್ಲಾನಾಳುವರು ||
ಹುಮಿಗಿ ದೇಶಾಯಿ ಭೀಮರಾಯರು
ತಿಳಿಯದ್ಹಾಗೆಯ ಮಾಡಿದರೂ||೧||
ಚಂನಪಟ್ಟಣ ಹೊಂನಭರತಿ ಪುರಪುರ
ಪುಂಣ್ಯಶಾರ ಡಿಳ್ಳಿವಳಗೆ |
ಮೀರಿದ ಧೊರಿಗಳ ಜಗಳದೊಳಗೆ |
ಸೋತು ಧರೆಯೊಳಿಹ್ರು ಇಂದೀಗೆ |
ದೊಡ್ಡ ಟೀಪು ಯಂದರೆ ತ್ರಿಭೂಮಿಗೇ |
ದೊಡ್ಡ ದೊಡ್ಡ ಕಿಲ್ಲೆಗಳು ಕಟ್ಟಿಸಿದವನಿಗೇ |
ಸೋತುಕೊಂಡರೆ ಸಾಟಿಯುಂಟೆ
ಯೀರೇಟಕ ಭೀಮರಾಯರಿಗೆ||೨||
ಮದ್ದುಗುಂಡು ಸೋರುಪ್ಪು ಗಂಧಕ
ಯಿದ್ದಡಗಿಸಿಕೊಂಡವರು |
ಭಾರಿ ಶೀಕ್ಷಕಕೆ ವಳಗಾಗುವರು |
ಕುಂಪಣಿಯವರು ಸಾರಿ ಹೇಳಿದರು |
ದೇಶದ ಮದ್ದುಗುಂಡು ಕೊಂಡಾರು |
ಹುಮಿಗಿ ದೇಶಾಯಿ ಬಳಿಗೆ ಬಂದಾರು ||
ಮದ್ದುಗುಂಡು ಕಠಾಕತ್ತಿ
ನಿಮಗಿದ್ದರೆ ಕೊಡು ಯಂದಾರು||೩||
ಕೇಳಿ ಮಾತವ ಹೇಳಿದ ನೆಂನೊಳು
ಬಹಳ ಬೇಡ ತುಸ ನೀವು |
ಹುಲುಬಿಸಿ ಕೊಟ್ಟರೆ ಶೀಕ್ಷಕ ನಾವು |
ಪಾತ್ರರು ಯನಲಿಕೆ ಕೊಟ್ಟರು ಟಾವು |
ಯಿವರಲಿ ಬಹಳ ಆಯುಧ ಯಿದ್ದಾವು |
ಶ್ಯಾನಭೋಗ ತಿಳಿದು ಬರದ ವುತ್ತರವು ||
ಧಾರವಾಡಕೆ ವುತ್ರ ಮುಟ್ಟಲು
ಆಗೆ ಕಂದರಿ ಬಂದಾವು||೪||
ಯೆಲ್ಲಿ ಹಂಮಿಗಿ ಯಲ್ಲೆ ದೇಶಾಯಿ
ಯಲ್ಲೆ ಮದ್ದುಗುಂಡು ಯೆನುತಾ |
ಟಣ ಪೂಲಸಿ ಬಂದನು ನಗುತಾ |
ಕರಸಿದ ಶಾನುಭೋಗನ ತುರ್ತ |
ತೋರಿಸು ಮದ್ದುಗುಂಡು ನಮಗೆನುತಾ |
ದೇಶಾಯಿ ||ಬಳಿಗೆ|| ಬಂದರು ತುರುತಾ ||
ಮೆಲ್ಲನಿವರು ಯಂನ ಕೊಲ್ಲಬಂದರೆಂದು
ನಿಲ್ಲದೋಡಿದ ದೇಶಾಯಿ ಅಳುತಾ||೫||
ಬಂಣಗುಂದಿ ಮಾರಿ ಸಂಣದು ಮಾಡಿ
ಬೆಂಣಿ ಹಳ್ಳಿಗೆ ವೋಡಿ ಬಂದು |
ಭೀಮರಾಯಗ್ಹೇಳುತಾನೆ ಶಿವಶಿವ ಯಂದು |
ಸಾವಿನ ಕಾಲ ನಮಗೆ ಬಂತೆಂದು |
ಆದ ವರ್ತಮಾನ ಯಿಂತೆಂದು |
ತಿಳುಹಿದ ಕಂಣ ತುಂಬ ನೀರ ತಂದು ||
ಯಂನ ಹಣವು ದಳ ನಿಂನದು
ಮರಣಕ್ಕಿಂನು ಭಯವು ಬೇಡೆಂದು||೬||
ಕಷ್ಟ ಬಂದ ಕಾಲಕ್ಕೆ ಮಾತುಗಳು ಬಿಡುಬಿಡು ದೇಶಾಯಿ ಹಿಡಿಹಿಡಿ ಕತ್ತಿಯ ಕೊರತಿಯಿಲ್ಲ ಹಣ ಭರತಿ ಚಕ್ಕಡಿ ಗಜಿಬಿಜಿ ಆದಿತು ನಿಜವಿದು ಭೀಮರಾಯ ಹೆಂಡರ ಶೆರಿಯನು ಕಂಡು ಬದುಕುವ ಭೀಮರಾಯ ಕೊಪ್ಪಳವ ಹೊಕ್ಕಾನೆಂದು ಪುಂಡ ಭೀಮರಾಯ ಕುಂಡಿ ಚುಣ ಧಡಾ ಯಂದಡೆ ಬಲದೊಳು ಬಿಡದೆ ಕೊಪ್ಪಳದೊಳಗೆ ಸಪ್ಪಳಡಗಿತಾಪದ ಕಂಡ ಸರದಾರಾ | ಕಾಲ ತುಳವುತ ಧೂಳ ಮುಸುಕಲು ಹಿಂದಣ ಯುಗದೊಳು ಯಿಂದ್ರ ಜಿತನು ಕಿತ್ತು ಕತ್ತಿ ಕೈಯ್ಯತ್ತಿ ಸುತ್ತಾಮುತ್ತಾ ಸತ್ತಾ ಭೀಮರಾಯ ವರ್ಥವಾಯಿತೆಂದು ದಾರು ಹೇಳಿದರು ವೂರು ವಳಗೆ ಯಲ್ಲಿ ನೋಡಿದರಲ್ಲೆ ಮದ್ದುಗುಂಡು ಪೂರ್ವಜನ್ಮದೊಳು ಯೀರ್ವರೇನಾಹರು ಐಯ್ಯಯ್ಯೊ ಯಂದು ಭೀಮರಾಯನ ಕಾಳಮೂಳ ಮತ್ತೇಳಲಿಲ್ಲ ಬಹಳ ರಂಗರಾಯನ ತಾಯಿ ಭೀಮರಾಯ ಸತ್ತ *ಧಾಟಿ
ಕವಿ : ಪುಂಡರೀಕ [1] ೧. ಕುಂಪಣಿಯವರ ಮ್ಯಾಲೆ (?)
ಯಷ್ಟಾದರು ಆಡಬಹುದು |
ಮರಣವು ಬಂದ ಕಾಲಕಿದು ಯಿರದು |
೧ಕುಂಪಣಿಯವರು ರಮ್ಯೊಲೆ೧
ಟೋಪು ಬಾಜಿರಾಯನ ಮುರಿದು |
ನಂಮಿಂದೇನಾಗುವುದರಿದರಿದು ||
ದಿಟ್ಟ ಭೀಮರಾಯ ಮುಟ್ಟಹಣಿಯರಿದು
ರುಷ್ಟಯಂದು ಮೀಸಿ ಮುರಿದೂ||೭||
ನಡಿನಡಿ ಕುದರಿಯನೇರು |
ಕರಿಯ ಖರಿಯ ಸಾಹೇಬರಿಬ್ಬಾರು |
ಹೊಂನು ತಿಂನೊ ಭಂಟರ ಕರಸಿದರು |
ಹುಮಿಗಿ ಪುರವಾಕ್ಷಣ ಹೊಕ್ಕಾರು |
ಕಿವಿಮೂಗು ಶಾನಭೋಗನೆ ಕೊಯಿಸಿದರು ||
ಬಂದ ಸವಾರರ ಕಡಿಬಡಿಯಂದು
ದುಂದು ಕರ ಮಾಡಿಬಿಟ್ಟಾರು||೮||
ತಿರಗದೆಳಿಯದೆತ್ತುಗಳು |
ಬಂದು ಹೊಕ್ಕನು ಡೊಂಬಳದೋಳು |
ಸುಲಿಗಿ ಮಾಡಿ ತೆಗದ ಹಣಗಾಳು |
ಹಾರೋರಗೇರಿ ಬಡದ ಹಗಲೊಳು |
ಕೌಲುರ ಮ್ಯಾಲೆ ಯಿಳಿದ ಯಿರಳೋಳು |
ಚೋರನಾಗಿ ತಾ ದಾರಿ ಹಿಡಿದು
ಮೇಲೇರಿ ಕುಳತ ಕುಂಮಟದೋಳು||೯||
ತಜವಿಜಿ ಮಾಡಿದನೆಂದು |
ಪ್ರಜಗಳುರಿತಿ ಭಯದಲಿ ಮನ ನೊಂದು |
ಲಿಂಗಸೂರ ಚ್ಯಾವಣಿ ಭುಗಿಲೆಂದು |
ಭೀಮರಾಯನ ಹೆಂಡರ ಯಿಬ್ಬರ ಹಿಡತಂದು |
ಕೊಪ್ಪಳ ಕಿಲ್ಲೆದೊಳಗೆ ಯಿಟ್ಟರಂದೂ ||
ಕಾಳಾಯುತ್ತಾಕ್ಷಿ ನಾಮಸಂತ್ಸರ
ಜೇಷ್ಟ ಬಹುಳ ಮುಂದೆ ತಿಥಿ ವಂದೂ||೧೦||
ಭಂಡನೆ ಭೀಮರಾಯ ತಾನು |
ರಾತ್ರಿಲಿ ಕುಮಟ ಬಿಟ್ಟು ಹೊಂಟಾನು |
ಬೆಳಗೊ ಜಾವದೊಳಗೆ ಬಂದಾನು |
ಕೊಪ್ಪಳ ಅಗಸಿ ಮುರದು ಹೊಕ್ಕಾನು |
ಹೆಂಡರ ಮಕ್ಕಳನೆ ಕೂಡಿದನು |
ವಳಗೆ ಶಿಕ್ಕ ಜನರನ್ನು ಜುಲುಮಿಲೆ
ಸಂಬಳ ಗೊತ್ತು ಮಾಡಿದನು||೧೧||
ನಬರಸುಭೇದಾರ
ಲಿಂಗಸೂರ ಚ್ಯಾವಣಿಲಿಂದ ಸಾವೀರ |
ತುರಪಿನ ಮಂದಿ ತಂದ ಸರದಾರಾ |
ಕೊಪ್ಪಳ ಸುತ್ತಾ ಕುದರಿಗಳು ಪಾರಾ |
ನಾಲ್ಕು ಕಡಿಗೆ ತೋಪು ತಯ್ಯಾರಾ |
ಹೊಡಿಹೊಡಿ ಯನಲಿ ಯಿಲ್ಲದೆ
ಗುಂಡುಗಳು ಕಿಲ್ಲೆ ಮಾಡಿದ ಚೂರ್ಚೂರ||೧೨||
ಜೋಡು ಗುಂಡಿನ ಕರೂಲಿ ಪಿಡಿದು |
ಭಾರ ಜರಿಗಸಿ ತೋಪು ಝಡಿದು |
ಹೊರಗಣ ದಂಡಿಗೆ ಹೊಡದ ಹಲ್ಲು ಕಡಿದು |
ಹಶಿದ ಶಿಂಹ್ವನಂತೆ ಕೂಗ್ಹೊಡಿದು |
ಕೊಪ್ಪಳ ಮಂದಿಯಲ್ಲಿ ಭಯ ಹಿಡಿದು |
ಯತ್ತಾಣ ಪೀಡಿ ಹತ್ತಿಕೊಂಡಿತೆಂದು |
ಜನಗಳು ಮೌನವ ಹಿಡಿದು||೧೩||
ಹೊಡದ ತೋಪುಗಳು ಗುಂಡು |
ಹೊಡಿಯಲಿಕಾಯ್ತು ಅಗಸಿ ತುಂಡು ತುಂಡು |
ಹುಮಿಗಿ ದೇಶಾಯಿ ಭೀಮರಾಯ ಕಂಡು |
ಗಚೀಕೋಟಿ ಹೊಕ್ಕಾರು ಭಯಗೊಂಡು |
ಕಡಿತನಕ್ಹಾರವಿಲ್ಲ ಮದು ಗುಂಡೂ ||
ಗಡಬಡ ಗದ್ದಲ ಕೂಗಾರ್ಭಟದೊಳು
ಅಡಗಿ ನಿಂತಿತು ವಳದಂಡೂ||೧೪||
ಖರಖರ ಹಲ್ಲ ತಿಂದನು ಬಲ್ಲ ಭಾರಾ |
ಹಲ್ಲಾ ಬಿಟ್ಟ ಕೆಂಪ ಮಾರಿಯವರಾ |
ಪಡಪಡ ಗುಂಡು ಸುಡುತ ಮಲತವರಾ |
ಬೆಂನ್ಹತ್ತಿ ಕಡಿದಾನು ಮುಂನೂರಾ ||
ಗಚ್ಚಿನ ಕೋಟಿವಳಗೆ ಭೀಮರಾಯ
ಹಚೀ ಹೊಡದನು ರಣಶೂರ||೧೫||
ಕಾಳಗವಾದಿತು ಪೂರಾ |
ಹಾಲಕೋಟಿ ಬಾವಿವಳಗೆ ಸಂಹ್ವಾರಾ |
ಯತ್ತಿ ಕಡಿದ ಮಲತ ಬಂಟಾರಾ |
ಕಣನೊಳು ಬಿದ್ದೇಳದೆ ಹೊರಳುವರಾ |
ಜಗಳದ ಹೋಲ್ಕಿ ಕರ್ನ ಅರ್ಜುನರಾ ||
ಹೇಳಬೇಕು ಹುಮಿಗಿ ದೇಶಾಯಿ
ಭೀಮರಾಯರಿಬ್ಬಾರಾ||೧೬||
ರಾಮಚಂದ್ರನ ಬಲ ಹೊಡದಂತೆ |
ಅಂಗದ ರಾಕ್ಷಸ ಭಯ ಹೊಕ್ಕಂತೆ |
ಭೀಮರಾಯ ಜಗಳ ಯಿದರಂತೆ |
ಗುಂಡಿನ ಶಬ್ದ ಅಳ್ಳ ಹುರದಂತೆ |
ದೇಶಾಯಿಗಾಗೆ ಹೇಳುತಾನೆ ನಿಂತೆ ||
ಯಿಂದಿನದೋಳೇನಾದ್ರೆ ನಂಮದು
ಮಂದಿ ಬಂದಿತೆಂಬುದಿಲ್ಲ ಚಿಂತೇ||೧೭||
ಕೇಳೊ ಬಂಟಾರಾ |
ಕಡಿಯಲಿ ಹಾರುತಿದ್ದವು ಸೀರಾ |
ಭೀಮರಾಯ ಕೂಡಿ ಹೊಡದ ಸರದಾರಾ |
ಹರವುತಲಿತ್ತು ಕೆಂಪು ನೆತ್ತಾರಾ |
ಹಾರಿತು ಗುಂಡು ವಮಿಗೆ ಸಾವೀರಾ |
ಹುಮಿಗಿ ದೇಶಾಯಿ ಭೀಮರಾಯರು
ಅದೇ ಕ್ಷಣಕೆ ಸಂಹ್ವಾರಾ||೧೮||
ವತ್ತಿಲಿರುವ ಭಂಟಾರಾ |
ಹೊತ್ತ ಕತ್ತಿ ತಂಬಾಕಿ ಬಿಸಟುವರಾ ||
ಹತ್ತು ಹತ್ತು ಜನರನ್ನು ನಿಲ್ಲಿಸಿ
ಗುಂಡಿಲೆ ಹೊಡದು ಕೊಂದರು||೧೯||
ಪಿತೂರ ನಡದ ಸುದ್ದಿಯನು |
ಟೆಲ್ಲೆರ ಸಾಹೇಬನೆಲ್ಲ ಕೇಳಿದನು |
ಮೋದಿಂ ನಾಯಕ ರಾಜಿ ನಾಯಕನು |
ಅರೇರ ದರಮೋಜಿ ರಾಯಂಣನು |
ದರಿಯಾಪ್ತಿ ಮಾಡಿ ಹಾಕಿಸಿದ ಬೇಡಿಯನು ||
ಬೆಂಣಿ ಹಾಲು ವುಂಣುವ ಬಾಯಲಿ
ಮಂಣು ವಗಿಯಂದವನು||೨೦||
ಯಿಲ್ಲದಿಲ್ಲ ಕಿಲ್ಲೆವೆಲ್ಲ |
ದೊಡ್ಡ ದೊಡ್ಡ ತೋಪುಗಳ ವಡಶಿದರಲ್ಲಾ |
ಹರಿಯಿದ್ದ ಗೋಡಿಯನೆಲ್ಲಾ |
ಕೆಡಹಿಸಿಲಯವ ಮಾಡಿಸಿ ಬಿಟ್ಟರಲ್ಲ |
ಜಗದೊಳು ಕುಂಪಣಿ ಧೊರಿಗಣಿಯಿಲ್ಲಾ ||
ಯಿದ್ದ ಮದ್ದುಗುಂಡು ನೀರೊಳಗೆ
ಹಾಕಿಸಿಬಿಟ್ಟದ್ದು ಯಷ್ಟು ಲೆಕ್ಕವಿಲ್ಲಾ||೨೧||
ಪಾರ್ವತಿನಲ್ಲೆ ಬಲ್ಲರಿದನು |
ಹುಮಿಗಿ ದೇಶಾಯಿ ಭೀಮರಾಯರನು |
ಕಾಲ್ಹಿಡದು ಯಳಸಿ ತಂದರು ಶ್ರವಗಳನು |
ಗವಿಯ ಮಠದ ಬಯಲೊಳು ಹಾಕಶಿದನು |
ಸುತ್ತಾಲು ವೂರ ಜನರು ಮರುಗಿ
ಅಳುತಾರೆ ನೋಡಿ ಹೆಣಗಳನು||೨||
ಹೆಂಡರು ಹೊಡಕೊಂಡರು ಹಣಿಹಣಿಯಾ |
ಭೋರೆಂದು ಅಳುತಾ ಹರಿದು ಕರೆಮಣಿಯಾ |
ಕೊಲ್ಲುವರೇನೊ ಶಿವನ ಗುಣಮಣಿಯ |
ಯಂದಿಗೆ ಕೂಡೆವು ನಿಂನಂತ ಧಣಿಯ |
ಕಾಣುತ ಸುರಿದವು ಕಂಣೀರು ಹನಿಯಾ ||
ಕಾಣುತ ಸರದಾರ ಕಳುಹಲು ಕರುಣದಿ
ಬಂದ ಹೊಕ್ಕರ ಬೆಂಣಿಹಳ್ಳಿಯಾ||೨೩||
ಬಾಧೆಗಳಾದವೆಂದು |
ಹಾಸಲು ಕಲುಮು ಇದ್ದದನೊಂದು |
ಮುಂದಿನ ಜನಕಿದು ಗೊತ್ತಿರಲೆಂದು |
ಭೀಮರಾಯ ಮಾಡಿದಾಟ ಇಂತೆಂದು |
ಹೇಳಿದ ಬಾವಾಸಾಹೇಬ ಯಿಂನೊಂದು ||
ಭೀಮರಾಯ ಕೊಪ್ಪಳ ಕಿಲ್ಲೆದಲ್ಲಿ
ಯಿಂನೆರಡು ದಿವಸ ಯಿರಲೆಂದೂ||೨೪||
ಸುದ್ದಿ ಕೇಳಿದಳು |
ಹಾಹಾ ಕಂದನೆಂದು ಮರುಗಿದಳು
ಹಿಂದೆ ಚಕ್ರಭಿಂಹ್ವ ಕೋಟಿಯೊಳು |
ಅಭಿಮಾನ್ಯ ಮಾಡಿದನು ಕೌರುವರೊಳು |
ಆ ಪರಿ ಆಯಿತು ಕೊಪ್ಪಳದೋಳು |
ಪುಂಡರೀಕ ವರನಯನ ಮುನಿದ
ಶ್ರೀ ಭಂಡಿರು ನನೆದಳೂ||೨೫||
ಕೃತಿ : ಪ್ಲೀಟರು ಸಂಗ್ರಹಿಸಿದ ಲಾವಣಿಗಳು
Leave A Comment