ಮೊದಲಿತ್ತ ಕೊಲ್ಲಾಪುರ ಊರಾ | ಅತಿ ದೊಡ್ಡ ಶಾರಾ |
ಶಾಜಕ ಜಾಹಿರಾ | ದೇವ ಅವತಾರಾ |
ರಂಕಾಳಿ ಪದ್ಮಾಳಿ | ಅಂಬುದು ಎರಡು ಹೆಸರಾ||ಪಲ್ಲಾ||

ಆಗ ಗರದಿತ ಹೊನ್ನಿನ ಮಳಿ |
ಅಂಬು ಭೂಮಿಗೆ ಕಳಿ |
ರಂಕಾಳಿ ಪದ್ಮಾಳಿ ಸಮಸ್ತ ಕೇಳಾರಿ ||
ನಿಂವ ಆತ್ಮಜ್ಞಾನಿಗಳ
ಸಭಾದೊಳಗ ಕುಂತೀರಿ ||
ದೇವಲೋಕದ ಮಂದಿ ಆವಾಗ ಇತ್ತ ಭೂಮಿಮ್ಯಾಗ |
ದ್ರವ್ಯವ ಕೆರಿಯಾಗ | ಆವ ಪರಿಪರಿ ||
ಲೆಕ್ಕಿಲ್ಲದ ಬದಕ ಇಟ್ಟಾರ | ಗೊತ್ತಯಾರಿಗಿಲ್ಲರಿ ||
ಆ ದ್ರವ್ಯಕ ಕಾವಲ್ಯಾರದಾ ಯ್ಯೋಳ ಹ್ಯಾಡಿದಾ |
ಸರ್ಪ ಹುಟ್ಟಿಸಿದಾ | ಬ್ರಹ್ಮನಿಸ್ತಾರಿ ||
ಮಹಾಶೇಷನ ಬದಿಯಲಿ ರತ್ನ ಕೊಟ್ಟಾರ ರಾತರಿ ||
ಐದು ಮಂದಿ ೧ದು೧

[1] ರಾತ್ಮರ ಕೂಡಿ |
ಸಮ ಮಸಲತ್ತಾ ಮಾಡಿ |
ಚಲೋ ಕಲ್ಲ ನೋಡಿ | ಬರದ್ದಾರ ಭಾರಿ ||
ಅಲ್ಲಿ ಹುಟ್ಟಿಶಾರ ನೀಛೆದ ಕಲ್ಲ |
ಯಾರಿಗೆ ತಿಳದಿಲ್ಲ | ಹಾಕಿ ಮುದ್ದರಿ ||
ಎಂಟರಾವಗಳ ಸಾಧಿಸಿ | ಜ್ಯಾಗ ಬಲಿ ಬೇಸಿ |
೨ನೋ೨[2]ಡ್ಯಾರ ಪುರಮಾಸಿ | ಕುಂತ ಬರಾವರಿ ||
ಅಷ್ಟಪಾಲಕರೆಂಟ ದಿಕ್ಕ |
ಸುತ್ತಲೆ ನೋಡ್ಯಾರತ್ಯಾರಿ||ಚಾಲ||

ನಾ ನಿಮಗ ಹೇಳತೆ | ಕೇಳಿರಿ ಶಾಸ್ತ್ರ ಸಿದ್ಧಾಂತಾ |
ಇದು ದೇವಲೋಕದ ಮಾತಾ |
ಇದ ಆದ ಪುರಾತ್ಮ ಆಗೆತಿ ಆಗಿನ ಅರ್ಥಾ |
ಅವ ಬಲ್ಲ ಕೇವಲ ಭಗವಂತಾ ||
ಆ ಕೊಲ್ಲಾಪುರದಾ ಲಕ್ಷುಮಿ ಮಾಡಿದ ಬೇತಾ |
ಕಲಿ೧ಯುಗ೧[3]ದೊಳಗ ತಿಳಿದಂತಾ ||
ಇಪ್ಪತ್ತ ಯ್ಯೋಳ ನಕ್ಷತ್ರ ಬಿಟ್ಟಿದಿ ಗುಣವಂತಾ |
ಹಿಂಗ ಹಾಕಿ ಮಾಡಬೆಕ ಗಣತಾ ||
ಅರವತ್ತ ಸಂವತ್ಸರ | ಹಿಡದ ಆಗೆತಿ ಈ ಮಾತಾ |
ರಂಕಾಳಿ ಅಂಬುದು ಪೂರ್ತಾ||೨ಯೇ೨[4]ರ||

ಮುಂಚೆ ಹೀಂಗ ಈತ್ತ ಪ್ರಮಾಣ |
ಬ್ರಹ್ಮನ ವಾರಣ | ಅವನ ಕಾರಣ | ಆತಿ ತಯ್ಯಾರಾ||೧||

ಪೂರ‍್ವ ಪಶ್ಚಿಮಕ್ಕೆ ಯ್ಯೋಳ ಮಂದಿ ರುಷಿ
ಬಂದರ ಸಾಧಿಸಿ | ನೋಡತಾರ ಸೊಸಿ |
ಕೆರಿ ೩ದಂ೩[5]ಡಿಲಿ |
ಆ ಶಿಲ್ಪಿ ತಾಡವಾಲಿ ಇತ್ತ ಅವರ ಹಂತಿಲಿ ||
ಆಗ ತಗದ ನೋಡಿದರ ಕುಂತ |
ಮನಸ ಬಲಸುತ | ಅತಿ ಅವರಂತ | ಅದ ಸ್ಥಳದಲ್ಲಿ |
ಆನಂದನಾಮ ಸಂವತ್ಸರ ಗುರು ಬೆನ್ನಮಾಲಿ ||
ಅಲಿ “ನಿಛೆದ4[6]ಕಲ್ಲ ಒಂದಿತ್ತ | ನೋಡ್ಯಾರ ದ್ರಷ್ಟಾಂತ |
ಒಲದ ಭಗವಂತ | ಅವರ ಮನದಲ್ಲಿ ||
ಆಗ ಮ್ಯಾಣದ ಹಲಗಿ ಮಾಡಿ ತಕ್ಕೊಂಡ್ರ ತಮ್ಮ ಕೈಲಿ ||
ಆ ನಿಛೆದ ಕಲ್ಲಿಗೆ ಒತ್ತ್ಯಾರು |
ತಗದ ನೋಡ್ಯಾರು | ಓದಿಕೊಂಡಾರು |
ಓಜನಾಥ ಅಲ್ಲಿ |
ಆ ರಂಕಾಳಿ ಕೆರಿಯಾಗ |
ದ್ರವ್ಯವ ಇರುದ ನಿಛೆಯದಲ್ಲಿ ||
ಕೆರಿಯೊಳಗ ಯ್ಯೋಳ ಹೆಡಿ ಸ೫ರ್ಪ೫[7] |
ಅದರ ತಾರೀಫ | ಕೆಳರಿ ನಿಂವ ಸ್ವಲ್ಪ |
ಬರುದ ರಾತ್ರಿಲಿ ||
ಆ ಸರ‍್ಪ ಮಾಡತಿತ್ತ ೬ಜ೬[8]ತ್ನ |
ಇರುದ ಒಂದ ರತ್ನ | ಅದರ ಬಾಯಲಿ||ಚಾಲ||

ಆ ಸರ‍್ಪ ಬರುವಾಗ ನೀರು ಬದಿಗಿ ಆಗೂತಾ |
ಇದು ಇರುದ ಶಾಸ್ತ್ರ ಸಿದ್ಧಾಂ೭ತಾ೭ ||
ಯ್ಯೋಳ ಮಂದಿ ರುಷಿಗಳ ಮಾಡತಾರ ಮಸಲತ್ತಾ |
ಆ ಸರ‍್ಪ ಹಿಡಿಬೇಕಂತಾ ||
ಆ ಸರ‍್ಪಿನ ತೆಲಿ ತಿಂದವಗ ಆಗುದ ದೌಲತ್ತಾ |
ಯಾರು ತಿಳದಲ್ಲ ಪೂರ‍್ವದ ಮಾತಾ ||
ಆಗ ಕಬ್ಬಿಣ ಪಿಂಜರ |
ಉಕ್ಕಿನ ಅಲಗ ಸುತಮುತ್ತಾ |
ಸುದ್ದಿ ಇಲ್ಲದ ಮಾ೧ಡ್ಯಾ೧[9]ರ ಗೊತ್ತಾ ||
ಆ ರಾತ್ರಿ ವೆಳೆದಲ್ಲಿ
ಆಲದ ಮರದ ಮೆಲೆ ಕುಂತಾ |
ಆ ಸರ‍್ಪ ಹಿಡಿಬೇಕಂತಾ||ಯೇರ||

ಆರ ತಾಸ ಆಗ ರಾತರಿ |
ಸರ‍್ಪ ಬೆಂಕಿ ವುರಿ ಬಿಟ್ಟಿತೊ ಕೆರಿ
ಬಿಚ್ಚತಿತ್ತ ನೀರಾ||೨||

ಆ ಸರ‍್ಪ ಬಂತೊ ೨ಭೋ೨[10]ರ‍್ಯಾಡಿ |
ತಗದ ಯ್ಯೋಳ ಹೈಡಿ | ಸುತ್ತಲೆ ನೋಡಿ |
ಕೆರಿಯ ಡಿದು ಮ್ಯಾಗ |
ಆ ಸರ‍್ಪಿಗೆ ಬಂತ ೩ಉಲ್ಲಾಸ೩[11] |
ಜೀಂವಕ ಹರ್ಷ | ಆತಿ ತನ್ನೊಳಗ
ಸರ‍್ಪ ಉತ್ತರ ದಕ್ಷಿಣ ನೋಡಿತು |
ರತ್ನ ಇಟ್ಟಿತು ಬೆಳಕ ಬಿದ್ದಿತು |
ಚಂದ್ರ ೪ಹೊಂಟ್ಹಾಂಗ೪[12]
ಆ ಬೆಳಕಿನ ಅಮೃತ ಮೇಂವುದ ರಾತ್ರಿವಳಗ ||
ಸರ‍್ಪ ಮೆಂವುತಿತ್ತ ಅಮೃತಾ |
ಬೆಳಕ ಸುತಮುತ್ತಾ |
ಬ್ರಹ್ಮನಲಕೀತಾ | ಒದಗಿತಾವಾಗ ||
ಆ ಸರ‍್ಪಿಗೆ ಬಂತ ಮರುಣಾ |
ದೇವರ ಕರಣಾ | ಆತಿ ಇಲ್ಲದ್ಹಾಂಗ ||
ಋಷಿಗಳ ಆದಾರ ತಯಾರಾ |
ಕಂಡಾರ ಕಂಣ್ಹಾರಾ | ದೇವರ ಹೆಸರಾ |
ತಮ್ಮ ಮನದಾಗ ಹಿಂಗ ಮಾಡ್ಯಾರ ಸಂಭನ ಸ್ತುತಿ |
ಆದ ಸಾರಥಿ | ದಯಾ ಅವರ ಮ್ಯಾಗ ||
ಆಗ ತಗೊಂಡ ಪಿಂಜರ ಕೈಗ |
ಕುಂತ ಗಿಡದಾಗ |
ಇಳಸಿದರ ಹ್ಯಾಂಗ ರತ್ನದ ಮ್ಯಾಗ ||
ಆ ರತ್ನದ ಜೋತಿ ಕಡಿಮ್ಯಾದಿತ
ಕತ್ತಲ ಗಂವದೀತ |
ಚಂದ್ರ ಮುಣಗಿದ್ಹಾಂಗ||ಚಾಲ||

ಆ ಸರ‍್ಪ ಆತಿ ಬೆಂಕಿ ಪಾರ್ಜ |
ಪಂಚವರಣಾ |
ಮುನಿದಾನ ಹರಿನಾರಾಯಣಾ ||
ಆ ಸರ‍್ಪಿಗೆ ದಿಕ್ಕ ತೆಪ್ಪೀತ |
ಹಾರಿತ ಹಲ್ಲಣಾ |
ಆ ರತ್ನದ್ಹೋತಿ ಕೀರಣಾ ||
೧ಯ್ಯೋಳ೧[13] ಹೆಡಿ ತೆಗದ
ಪಿಂಜರಕ ಬಡಿತೋ ಪೂರ‍್ಣಾ |
ಇದ ಆತಿ ಯೇನ ಕಾರಣಾ ||
ಗಡಬಡಶ ಅಬರಶ
ಬಂತ ನೋಡ ಆ ಕ್ಷಣಾ |
ಬಡದ್ಹಾಂಗ ಆದಿತೊ ಬಾಣಾ ||
ಆ ಅಲಗ ನಟ್ಟ ನಂವಚಿತ್ರ
ಆತಿ ಗೆಣಗೆಣಾ |
ಆ ಸರ‍್ಪ ಕೊಟ್ಟಿತೊ ಪ್ರಾಣಾ||ಯೇರ||

ಋಷಿಗಳ ಗಿಡ ೨ಇ೨[14]ಳದ ಅಲ್ಲಿಗೆ ಬಂದ |
ಆತಿ ಪಾಸಂದಾ ಮಾಡ್ಯಾರ ಹುನ್ನಾರಾ||೩||

ಋಷಿಗಳಿಗೆ ದೊರಿತ ರತನಾ |
ಮಾಡ್ಯಾರ ಜ್ಯಾತನಾ ಅವರ ಸ್ವಾಧೀನಾ |
ಯೋಳ ಮಂದಿವಳಗ ||
ಬೆಳಗೀನ ಬೆಳ್ಳಿ ಮೂಡೀತ ||
ಹೊತ್ತ ಯೇರಿತ |
ಬಿಟ್ಟಾರ ಆ ಜ್ಯಾಗ |
ಆ ಸರ‍್ಪ ಕೈಲಿ ತಕ್ಕೊಂಡ
ಮಾಡ್ಯಾರ ತುಂಡ ತುಂಡ |
ವಿಷಾ ತೊಳಕೊಂಡ | ಅದ ಕೆರಿ ವಳಗ ||
ಅವರ ಮನಸ ಆತಿ ದಿಲ್ಪಾಕ |
ಕೊಲ್ಲಾಪೂರಕ | ಬಂದಾರ ಊರಾಗ ||
ಅವರ ಹಿಡದ ತಿರಗತಾರ ಪ್ಯಾಟಿ |
ಮುದಕಿ ಮಾರಾಟಿ |
ಆದಿತೊ ಭೆಟ್ಟಿ |
ಕೂಡಿತ ವಳತಾಂಗ ||
ನಮಗ ಮಾಡಿ ಉಣಸ ಭೋಜಣ |
ತಗೊ ಹಿಡಿ ಮೀನಾ |
ನಿನ್ನ ಮನಿವಳಗ ||
ನಮಗ ಕುಡಸಿಕೊಟ್ಟ ಭಗವಾನಾ |
ಭರತಿ ಮದ್ದಿನಾ | ಮಾಡಲಾಕ ಸ್ನಾನಾ |
ಹೊಂಟರಾವಾಗ ||
ಆ ಪಂಚಗಂಗ೧ನ೧[15]ದಿಯಾಗ |
ಯ್ಯೋಳ ಮಂದಿ ಹ್ಯಾಂಗ |
ಮಾತಾಡದಾರ ಹೀಂಗ ||
ಮುದಕಿ ಅಡಗಿ ಮಾಡ್ಯಾಳ ಗಡಬಡಿ |
ಯೆಲ್ಲಾ ಮಡಿ ಹುಡಿ |
ನೀರ ಲಗುಮಾಡಿ |
ತರಾಕ ೨ಹೋ೨[16]ದಾಳಾಗ ||
ಆ ಮುದಕಿ ಮಗ ೩ನೋ೩ಡಬಂದ |
ಸರ‍್ಪಿನ ತಲಿ ತಿಂದ ಹೋದ ಲಗುಬ್ಯಾಗ||ಚಾಲ||

ತುಂಬಿದ ನೀರ ಕೊಡದಾಗ ತಂದಳ ಲಗುಮಾಡಿ |
ಅವರು ಬರುವ ಹಾದಿಯಾ ನೋಡಿ |
ಯ್ಯೋಳ ಮಂದಿ ಋಷಿಗಳ
ಬಂದರ ಸ್ನಾನಾಮಾಡಿ |
ಸಾಲಾಗಿ ಕುಂತರ ಸಂವ ಜೋಡಿ ||
ಆ ಮುದಕಿ ನೀಡಿದಳ
ಯ್ಯೋಳ ಯಡಿ ಒಳೆ ನೋಡಿ |
ಅವರಿಗೆ ನೀಡಿದಾಳ ಸಂವ ಮಾಡಿ ||
ಯ್ಯೋಳ ಮಂದಿ ಋಷಿಗಳ
ಮುದಕಿನ ೧ಕೇ೧[17]ಳ್ಯಾರ ಲಗುಮಾಡಿ |
೨ಇದರ೨[18]ತಲಿ ಹೋತಿ ಯಾವ ಕಡಿ ||
ಆ ಮುದಕಿ ನೋಡತಾಳ
ಅಡಗಿ ಮನ್ಯಾಗ ಹುಡಕ್ಯಾಡಿ |
ತೆಲಿ ಇಲ್ಲ ಕೆಳರಿ ದಯಮಾಡಿ||ಯೇರ||

ಆ ಮುದಕಿ ಹೇಳತಳ ಆಗ |
ಅದನ ನನ ಮಗ | ಕರಸತೆನ ಅವಗ |
ಕೆಳರಿ ನಿಮ ಹುಜರಾ||೪||

ಮುದಕಿ ಮಗ ಬಂದ ಅಡರಸಿ |
ಯ್ಯೋಳ ಮಂದಿ ಋಷಿ |
ಕೇಳ್ಯಾರ ರಮಸಿ |
ವಿನಂತಿಲೆ ಅವಗ ||
ನೀ ನಡಿ ನಮ್ಮ ಹಿಂಬಾಲ |
ಇರತೆವ ಭೆನ್ನ ಮ್ಯಾಲ |
ಭೇದ ಇಲ್ಲ೩ದ್ಹಾ೩[19]ಂಗ ||
ಮುದಕಿ ಮಗಾ ಹೊಂಟ ಬೆನ್ನಹತ್ತಿ |
ಹೊತ್ತ ಮುಣಗೆತಿ |
ಕೆರಿದೂರತಿ ಅರ‍್ಯಾಣದ ಒಳಗ ||
ಅಲ್ಲಿ ಇತ್ತ ಗುಡ್ಡ ಕಾಂತರ |
ಸುಳವ ಇಲ್ಲ ಯಾರಾ |
ರಾತ್ರಿಯಾ ಒಳಗ ||
ಆ ಹುತ್ತಗ ಹೇಳ್ಯಾರ ಪೂರಣಾ |
ನಿನ್ನ ಪ್ರಮಾಣಾ | ಕೆರಿ ವಳಗ ನೀನಾ |
ಹೋಗುದ ಅತಿ ಈಗ ||
ಕೆರಿ ವಳಗ ಇರವುದು
ದ್ರವ್ಯದ ತರಂದ ನಿನ ದೈವ
ಹೋಗ ಬಲ್ಹಾಂಗ ||
ಮುದಕಿ ಮಗಾ ಹೊಂಟ ಕೆರಿಯಾಗ |
ಹಾದಿ ಬಿಟ್ಟಿತವಗ |
ನಡುನೀರಾಗ | ಹೊಕ್ಕನಾವಾಗ ||
ಅಲ್ಲಿ ಇತ್ತ ಭಂಗಾರದ ಗುಡಿ |
ಕಂಣ ತುಂಬ ನೋಡಿ |
ದ್ರವ್ಯವ ಅದರೊಳಗ ||
ಪುತ್ರ ತಗೊಂಡ ಮುತ್ತ ಮಾಣಿಕಾ |
ಬೆಳ್ಳಿ ಭಂಗಾರ ಬದಕಾ |
ಬಂದನಾ೧ಕ್ಷ೧[20]ಣಕಾ |
ಕೆರಿ ಬಿಟ್ಟ ಹೊರಗ ||
ಋಷಿಗಳ ಅಂತಾರ ಯೇನೇನ |
ಅತಿ ಪ್ರಸನ್ನ | ಮಾತಾಹಿದಾರ ಹ್ಯಾಂಗ||ಚಾಲ||

ಆ ಮುದಕಿ ಮಗ ಮುಂದ ಮಾತ
ಹೇಳತಾನ ಹ್ಯಾಂಗ |
ಯ್ಯೋಳ ಮಂದಿ ಋಷಿಗಳ ಬೆನ್ನಮ್ಯಾಗ ||
೨ಅ೨[21]ನಂತ ಕೋಟಿ ದ್ರವ್ಯವ
ಇತ್ತ ಕೆರಿಯಾಗ |
ತಂದ ಇಟ್ಟಾರ ಪುತ್ರನ ಮನಿಯಾಗ ||
ಶಿವರಾಯನ ಕರಣ
ತಿಳಿಯದ ನೋಡ ಹೆಂತವಗ |
ದೌಲತ್ತ ಆತಿ ಪುತ್ರಾಗ ||
ಶಿವರಾಜ೩ಜ೩[22] ಮಾರಾಜಾ ಅಂತ ಹೆಸರ ಆಂವಾಗ |
ಅರಸುಕಿ ಕೊಲ್ಲಾಪುರದಾಗ ||
ಕೊಲ್ಲಾಪುರಾ ಶಾರ ಜಾಹಿತ ಆತಿ ನಾಡಾಗ |
೪ಕೇ೪[23]ಳ ಶಿವನ ಸದರ ಇದ್ಹಾಂಗ||ಯೇರ||

ದೇವರಾಟ ಹೀಂಗ |
ದೇಶದ ವಳಗ | ಅತಿ ಜಾಹಿರಾ||೫||

ಭೋಜರಾಜ ಅಂತಾರ ಮಾರಾಜ |
ಬಹಳ ಸಮಾಜ |
೧ಕುಂತಕೆರ೧ಸಜಾ | ಸಭೇದ ವಳಗ ||
ನಮ್ಮ ಹಿರಿಯರ ಪುಣ್ಯ ಯೇನ ಇತ್ತ |
ಅತಿ ದೌಲತ್ತ | ಅರಸುಕಿ ಬಂತ ನಮಗ ||
ಹಿಂಗ ದೌಲತ್ತ ಆಳ್ಯಾರ ಬಲುದಿನಾ |
ಪನ್ನಾಳಿಪಾವನಾ |
ಗಡಾ ೨ಸಾಮಾನಾ೨[24] ಕಟಸಿದಾರ ಆಗ ||
ಮೂರು ಲಕ್ಷ ದಂಡ ತಯ್ಯಾರ ಆತಿ
ಭರಪೂರ ಕೊಲ್ಲಾಪುರದಾಗ ||
ಮನಹಾರ ಮನಾ ಸಂತೋಷ
ಐವತ ಆರ ದೇಶ |
ಅವರ ಕೈವಾಸ | ಮಾಡಿಕೊಂಡರಾಗ ||
ಆ ಭರತ ಶಾಸ್ತ್ರ ಗುಣ
ರಾಮಲಕ್ಷಂಮಣ ಅಂಣತಮ್ಮರಿದ್ದ್ಹಾಂಗ ||
ಕೈಲಾಸ್ಥ ಮ್ಯಾಲೆ ಚಂದರಾ |
ಒಳೇಕಂಭಿದಾರಾ |
ಅಲ್ಲಿ ದೇವಿಂದರಾ | ಇಲ್ಲಿ ಇಧ್ಹಾಂಗ ||
ಇರಬೇಕ ಹಿಂತಾಂವ ಶ್ರೀಮಂತ |
ಅಂತಾರ ಪುಣ್ಯವಂತ | ಅರಸ ಮಾರಾಜಗ ||
ಈಗ ನಡುದ ಇಂಗ್ರೇಜಿ ದೌಲತ್ತಾ |
ಬಹಳ ಬಂದೊಬಸ್ತಾ |
ಮಾಡ್ಯಾರ ತಾಕಿತಾ | ತಮ್ಮ ರಾಜೆದಾಗ ||
ಈಗ ದೊಡ್ಡ ದೊಡ್ಡ ದೌಲತ ಬಿಟ್ಟ |
ಹೋಗಿದರ ಹೊಂಟ | ಗೊತ್ತ ಇಲದ್ಹಾಂಗ||ಚಾಲ||

೩ನಿಂವ೩[25]ಆತ್ಮಜ್ಞಾನಿಗಳ
ಕುಂತಿರಿ ಬುದ್ಧಿವಂತರಾ |
ನಮಕಿಂತ ನಾಂವು ಸಂಣವರಾ ||
ಉರ ಬೈಲಹೊಂಗಲ ದೊಡ್ಡ ಶಾರ
ಇರುವ ಜಾಹಿರಾ |
ಪ್ರಸನ್ನ ಬಸವಂಣ ದೇವರಾ ||
ನಮ್ಮ ವಸ್ತಾದ ಮೋದಿನ ಸಾಹಬ
ಬಲ್ಲ ಶಾಸ್ತರಾ |
ದೇವಂಣ್ಣ ಹೇಳಿದ ಉತ್ತರಾ ||
ಕವಿ ಅಮೋಜಿ ಲಾವಣಿ ಮಾಡಿದಾನ ತಯಾರಾ |
ನೀಂವು ಸೋಸಿ ತಗಿರಿ ಅಕ್ಷರಾ ||
ಅವರ ಡಬ್ಬಿನ ಮ್ಯಾಗ
ತುರಾಯಿ ಮುತ್ತಿ ಸಾರಾ |
ನೀಸಾನಿ ಹಚ್ಯಾರ ಜರತಾರಾ||ಯೇರ||

ಸಂತು ಬಸಣ್ಣ ಇಬ್ಬರು ಜೋಡಿ |
೧ಹೇ೧[26]ಳ್ಯಾರ ನಿಮ ತೋಡಿ |
ವೈರಿ ಹಿಮ್ಮಾಡಿ | ಕೇಳಿ ಓಡವರಾ||೬||

ಕವಿ : ಆಮೋಜಿ
ಕೃತಿ : ಪ್ಲೀಟರು ಸಂಗ್ರಹಿಸಿದ ಲಾವಣಿಗಳು


[1] ವು

[2] ನೊ

[3] ಯವ

[4]

[5] ರಂ

[6] ನಿಫೆದ

[7] ಫ|

[8] ಥಾ

[9] ದ್ಯಾ

[10] ಭೊ

[11] ಉಲ್‌ಲ್ಲಾಸ

[12] ಹೊಂಟಾಗ

[13] ಯ್ಯೊ

[14]

[15]

[16] ಹೊ

[17] ಕೆ

[18] ಇದ  ದರ   

[19] ಧ್ಹಾ

[20] ಕ್ಷಾ

[21]

[22] ಜಿ

[23] ಕೆ

[24] ಸಾಮಾನಾಗ

[25] ಸಿಂವ

[26] ಕುಂತರಕೆರ