ಸೋಮಾನಗಡದ ಪದಾ ಬರಿಯುವುದಕ್ಕೆ ಪ್ರಾರಂಭ ||
ಪ್ರತಮ ಜಗಳದಾಕಾರಾ | ಕೇಳ ಚಾತೂರಾ |
ಆಗಿ ಗಡಕರ‍್ಯಾರಾ | ಮಾಡ್ಯಾರ ಹೆಸರಾ |
ಹೋಗುತನಕಾ ಪ್ರಾಣಾ |
ಗಂಡಮೆಟ್ಟ ಜಾಗೆ ಬಾದೂರ ಗಡಾ ಸೋಮಾನಾ||ಪಲ್ಲ||

ಸೋಮನಗಡಾ ಜಾಗ ಬಿಕ್ಕಟ್ಟ | ಮಂದಿ ಬಹು ತೇಟ |
ತೆಲಿಲೆ ಯೊಳೆಂಟ | ವತನದರಿಕಲ್ಲೆ |
ಸೌರಾಜ  ಮಾರಾಜಾ ಯಿಟ್ಟಾನ ಬಹು ಪ್ರೀತಿಲೆ |
ಸೌರಾಜಾ ಕಂಣಿಲೆ ಕಂಡನಲ್ಲಾ | ಬಂತ ಮೊಗಲಾ |
ಮೂರ ಲಕ್ಷ ಬಲಾ | ಸೋಮಾನ ಗಡಕ ಹಲ್ಲಾ ||
ಯೇರ‍್ಯಾರ ದುಮಕಿಲೆ | ಐನೂರ ಟೋಪ ವಂದ ಭಾರ |
ರಂಜಕವರದಾರ | ವಳೇ ಶಿಟ್ಟಿಲೆ ||
ವುಚ ಮುಸಲ ಮೊಗಲ ಪಾಟಿಣಾ |
ಮಾಡ್ಲಿಲ್ಲೊ ಅನಮನಾ ಅಂಬುತ ದಿನದಿನಾ |
ಟೋಪ ಗರ್ದಿ ಬಾಣಾ | ಬಿಟ್ಟಾರ ಹೊಂದಿಕಿಲೆ |
ಅರವತ್ತ ಸಾವಿರ ಅರಬಿಕಿ | ಯೇರಿತ ಚಿಕಿಚಿಕಿ |
ಹಿಡದಾರೊ ಕಿಲ್ಲೆ |
ಚೋಳೊಬನಸುಬಗಚ್ಯಾರಕವಲಾ |
ಭೀಮರಾವ ಕೊಟ್ಟ ಬಲ್ಲಾ | ಗಡಕರ‍್ಯಾರೆಲ್ಲಾ |
ಟವಳಿ ಅಂಗ್ಯಾರಲ್ಲೆ |
ಗೋಲಂದಾಸ ಟೋಪ ಹಚ್ಯಾನ ಬದಿಲೆ
ಕುಮಾರ ನಿಂತಾರ ಜೋಡಿಲೆ||ಚಾಲ||

ಭೀಮೋಜಿನಾಯಕಗಾತಿ ಅನಕುಲಾ |
ತೊಗೊಂಡ ಕತ್ತಿ ಡಾಲಾ |
ಯೋಳನೂರ ಕಾಲ ಬಲಾ
ಹಿಂದಕ ತಿರಗವರಲ್ಲಾ ||
ಭೀಮೋಜಿ ಮಗೇರ‍್ಯಾರಚಲಾ |
ಕೈಯಾಗ ತ್ರಿಸೂಲಾ |
ಹಿಂದ ಮುಂದ ನೋಡಲೀಲ್ಲಾ |
ವುಪ್ಪಿಗ್ಹಲಾಲಾ ||
ರಾಣೋಜಿ ತೊಂಡ್ಯಾ ತಿಂದಾರ ಹಲ್ಲಾ |
ತಡಾಪ ಮಾಡಲಿಲ್ಲಾ |
ಅಗಶಿಬಾಗಲಾ | ತೆರದಬಿಟ್ಟಾರಲ್ಲಾ ||
ಅರಬರ ಮಾತ ಕಿಲಬಿಲಾ |
ಕಯಾಗ ಪಿಸ್ತುಲಾ |
ಗಡಕರ‍್ಯಾರ ಮ್ಯಾಲಾ |
ಬಾದ್ರಿವತ್ತ್ಯಾರಲಾ |
ಗಡಕರ‍್ಯಾರ ಬಿದ್ದಾರ ಬಾರಲಾ |
ತೆಲಿಗಿ ಹಚ್ಚಿ ಡಾಲಾ |
ಲಾಗು ಆಗಲಿಲ್ಲಾ |
ಗುಂಡ ಹೋದುವ ಮ್ಯಾಲಾ ||
ತಾಶೀಮ ಹೊಡಂತಾರಲ್ಲಾ |
ಗಡಕರ‍್ಯಾರ‍್ಯಾಲ್ಲಾ |
ಕಮರಿ ಬಿದ್ದಾರಲ್ಲಾ |
ಸುತ್ತ ಹಾಕ್ಯಾರ ಜಾಲಾ||ಯೇರ||

ದಂಡಿನೊಳಗ ಹೊಕ್ಕಾಂಗ ಹೆಬ್ಬುಲಿ |
ಹೆಣಾ ವಂದರ ಮ್ಯಾಲಿ |
ಬಿದ್ದಾವ ಜೆಕಿಮಿಲಿ |
ನೆತ್ತರ ಕಾವಲಿ | ಹರಿತೋ ಜಾಣಾ |
ಹಿಂಗ ದಂಡ ಕಡದಾರ ಸುತ್ತಾಡಿ |
ಆದಿತ ಹಿಂಮೊಡಿ |
ಸಾವಿರ ಬಿದ್ದುವ ಹೆಣಾ||೧||

ರಣಮಂಡಲಾತಿ ಜಗಳಾ |
ಕುರ‍್ಯಾಗ ಹೊಕ್ಕಾಂಗ ತೊಳಾ |
ಮಾಡ್ಯಾರ ಹಿಂಗ ಗೋಳಾ |
ಬಿದ್ದಾವ ಹೆಣಗೊಳಾ | ಇಲ್ಲದ ಗಣತಿ |
ಅರಬರ ಅಂತ್ತಾರ ಅರೆ ಅಲ್ಲಾ |
ಕಚ್ಚಿದಾರ ಹುಲ್ಲಾ | ಚೆಲ್ಲಿದರ ಕತ್ತಿ |
ಮೋರ್ಚೆದ ಆತಿ ಹಿಂಮೊಡಿ |
ಹೋಗತಾರ ವೋಡಿ | ಡೆರೆದಾ ಕಡಿ |
ಮೊಗಲ ಹಿಂಗ ನೋಡಿ |
ಕರಗ ಮಾಡಿದ ಮೋತಿ |
ಲುಟಿ ತೊಕ್ಕೊಂಡ ಗಡಕರ‍್ಯಾರೆಲಾ
ಅಗಶಿ ಹೊಕ್ಕಾರಲ್ಲಾ | ಹೊತ್ತ ಮುಣಿಗೆತಿ ||
ಮೊಗಲ ಕಡಕೋಲಾನ ತಂನ ತೂಟಿ |
ಇರೆಶಾಬಲಿಕೊಟ್ಟಿ |
ಮಂದಿ ಹಿಡದ ಬಿಟ್ಟಿ |
ಮಂಣಿನ ಹಂಡೆ ಕಟ್ಟಿ |
ಇಟ್ಟಗಡದಳತಿ |
ಹಿಂಗ ಮಾಡಿದಾನ ಸಂಜೊಕಾ |
ಬೆಳಗ ಆಗು ತನಕಾ |
ಹಚ್ಚಿ ಕ್ಯಾರಯಾತಿ ||
ಮೊಗಲ ತಾ ಆದ ತಯಾರಾ |
ಟೋಪ ಹದನಾರಾ |
ಕುಂಪಿ ಮ್ಯಾಗ ಪೂರಾ |
ಮಾಡಿದ ವಂದ ಭಾರಾ |
ಕೊಟ್ಟ ಪರಬತ್ತಿ |
ಗುಂಡ ಹಾರತ್ತಾವ ದಡಧಡಾ |
ಅವಾಜ ತಡಪಡಾ |
ಅಳ್ಳ ಹುರದ್ಹಾಂಗಾತಿ ||
ಗನಚಕ್ರಟೋಪಿನವಾಜ |
ಮದ್ದಗುಂಡಿನ ಮೋಜ |
ಹೋಗಿ ಹಿಡಶಾರ ಮಂಜ |
ಯಾರದಿಲ್ಲ ಅಜ್ಜಿ | ಅಲ್ಲಿ ನಡದತಿ |
ಗಡಕಂವಶಾರ ಕಾಳಗತ್ತಲಾ |
ಸುರದ್ಹಾಂಗ ಗರಗಲ್ಲಾ |
ಗುಂಡಿಂದಿಲ್ಲ ಅಳತಿ ||
ಗಡಕರ‍್ಯಾರ ಆಗ್ಯಾರ ವುಲ್ಲಾಸಾ |
ಶನಿವಾರ ದಿವಸಾ |
ಕುಮಾರ ಗೊಲಂದಾಸ |
ಹುಕುಂ ತಂದ ಕಾಸಾ |
ಬಂದ ಟೋಪಿ ನಂತಿ |
ಹಚ್ಚಿ ನೋಡಿದ ಕೊಳಿವಿದುರದುಂಬಿ |
ಟೋಪಿಂದ ಗರದಿ | ಹೊರಗ ನಡದತಿ||ಚಾಲ||

ಗೋಲಂದಾಸ ಯಿದ್ದ ಬಹಳ ಸೂರ |
ಹಿಡದನ್ಯಾವರ |
ಟೋಪಯಿಟ್ಟಗೂರಿ |
ಹೊಡದ ವಂದ ಬಾರಿ ||
ಟೋಪಿನ ಬಾಯಾಗ ಬಡಿತೊ ಗುಂಡಾ |
ಮುರದ ಆತ ತುಂಡಾ |
ಮೊಗಲ ನೋಡಿಕ್ಯಾರಿ |
ಆದಾನ ಗಾಬರಿ |
ಗೋಲಂದಾಸಗ ಬಂದಿತೊ ಶಿಟ್ಟ |
ವಗದ ಮತ್ತೊಂದಿಟ್ಟ |
ಹರಿತೊ ಡೇರಿ | ಮಾಡಿದ ಹೀಂಗ ಸೂರಿ ||
ಜಗಳಾ ಆತಿ ಬಹಳ ದಿವಸಾ |
ಹನ್ನೆರಡೊರುಷಾ | ಕುಂತಾರ ತುಂಬಿಕ್ಯಾರಿ |
ನೋಡತ್ತಾರ ಹವ್ವಹಾರಿ ||
ತಾಂವ ಬಂದಾಗ ಹಟ್ಟದರ ಮಾವಿನ ಗಿಡಾ |
ಹಂಣ ತಿಂದ್ರ ಪಾಡಾ |
ಹೋದಾರ ತಿರಿಗಿಕ್ಯಾರಿ | ರಾತರಾತುರಿ||ಯೆರ||

ಗಡಾ ಆಗಲಿಲ್ಲಾ ಕೈವಾಸಾ |
ಕುಂತ್ತಾರ ಹಂನೆರಡ ವರುಷಾ |
ಮೊಗಲವುದ್ದಾಸಾ | ಆಗಿದುರದೇಶಾ |
ಬಹಳ ಹೈರಾಣಾ |
ಹೀಂಗ ವಡಿ ಹೋದಾರ ಬೆಳತನಕ |
ತಪ್ಪಿಕ್ಯಾರದಿಕ್ಕ | ಹಾರಿತ ಹಲ್ಲಣಾ||೨||

ಬಾಹು ಸಾಹೇಬ ಬಂದ ಶ್ರೀಮಂತ |
ಗಡಾ ತೊಗೊ ಬೇಕಂತ |
ಮಂದಿ ಕರಮಿಸ್ತ |
ಪೋಣಾ ಲಕ್ಷಯಿತ್ತ ಹೋದ ಅಬ್ಬರಲಿ |
ಗಡಕರ‍್ಯಾರ ವಗದಾರೋ ಗುಂಡಾ |
ಮುರದ ಹೋತ ದಂಡಾ | ಬಂದ ಹಾದೀಲಿ ||
ಕರಣಿಸ್ತಂವನಿರಾಣಿಕಾರಾ |
ದಂಡ ತಯ್ಯಾರಾ |
ಸಂಗಾಟ ಕೋಮಟಿಗೆರಾ |
ಸೋಮಾನಗಡಕ್ಯಾರಾ |
ಹಚ್ಚಿದಾನ ಗುದಲಿ |
ಗೋಲಂದಾಸ ಗುಂಡ ವಗದಾ ಮೂರಾ |
ವೋಡಿದ ನಿಪಾಣಿಕಾರಾ |
ನಿಂದರಲಿಲ್ಲ ಅಲ್ಲಿ ||
ಹಂತ ಹಿಂತಾವದಾದಿತ ಈ ಗತಿ |
ಜಗದ ಕರಮತಿ | ಮುನಸೂಬನಸತಿ |
ಚೋಳೋಬ ಸಾರತಿ |
ಭೀಮರಾವಮೋ ಅಲ್ಲಿ |
ಹಿಂಗ ಪಿರಂಗ್ಯಾ ಹಚ್ಚಿದ ಸಂಜಾನಾ |
ಆರತಿಂಗಳ ದಿನಾ | ಕೊಲ್ಲಾಪೂರದಲ್ಲಿ ||
ಅರಸ ಮಾರಾಜನ ಮಕ್ಕಳಿಬ್ಬರಾ |
ಸಂಣಾವ ಹರ‍್ಯಾಮಿಕೊರಾ |
ಅಂವಗ ಪಿರಂಗ್ಯಾರಾ |
ಮಾತಿನ ಮಜಕೂರಾ |
ಕೇಳ್ಯಾನ ಯಿ ಗತಿಲಿ |
ನಾವ ಬಿಡತ್ತೇವ ನಿಂಮಾ ನಾಡಾ |
ಕೊಡರಿ ಸೋಮಾನಗಡಾ |
ಮಾಡಿಕ್ಯಾರ ಖಾಲಿ ||
ಸಂಣ ಅರಸ ಸಾಹೇಬ ಹೇಳತಾನಲ್ಲಾ |
ಮಾತಿನ ಅನಕೂಲಾ |
ಗಡಕರ‍್ಯಾರೆಲ್ಲಾ |
ನಮ್ಮ ಕಯಾಗಿಲ್ಲಾ |
ಹ್ಯಾಂಗ ಮಾಡಂನ ಖಾಲಿ |
ನೀವ ಮಾಡರಿ ನಿಂಮ ತಿಳದಾಂಗ |
ನಿಂಮ ಕಯಾಗ | ರಾಜೆದಾ ಕೀಲಿ||ಚಾಲ||

ಅರಸನ ಮಾತ ಸಾಹೇಬ ಕೇಳಿದ ಸಾಪ |
ಹೊಂಟ ಗಪಚೂಪ |
ನೋಡಿಕೊಂಡ ಖರಾನಾ |
ಮಂಗಳವಾರ ದಿನಾ ||
ಅಂವ ಬಿಟ್ಟಾನ ಬೆಳಗಾಂವಿ ಸ್ತಳಾ |
ವಾರ ಮಂಗಳಾ |
ಮಂದ ಯಿತ್ತ ಹೋಣಾ | ದಣಿಶಿತೋ ಅವನಾ ||
ಬಾದ್ರಿಪದಾ ಶುದ್ಧ ಅಷ್ಟಮಿ |
ಯಿತ್ತ ಕುಮಿಕುಮಿ |
ಮಾಡಿದ ಹೊರಪ್ಯಾಣಾ | ಬಂದ ಗುಂಮಾನಾ ||
ಯಿಟ್ಟಣಿಗಿ ವೂರ ಬದಿಯಲಿ |
ಹೊಳಿ ದಾಟಿದಲ್ಲಿ |
ಆತ ಅಸ್ತಮಾನಾ | ಯಿಳಿತೋ ಶೈನಾ ||
ಸಾಹೆಬ ತಗದ ನೋಡಿದ ಚವಕಾಶಿ |
ಗಡದಾಗ ಪಡನೇಶಿ |
ತರಶಿಕೊಂಡವಂನಾ | ಪಿತೂರ ಸಂಜಾನಾ ||
ಪಡನೇಶಿಗೆ ಹೇಳತಾನ ಸಾಹೇಬ ಕಾಸ |
ರೂಪಾಯಿ ನೋಡ ಲಕ್ಷ |
ಕೊಟ್ಟ ರಾಕ್ಷಣಾ | ಪಿತೂರ ಕಾಗದನಾ||ಯೇರ||

ಪಡನೇಶಿ ಹಿಡದ ಪಿತುರದೇಲಿ |
ಸಾಹೇಬನ ಹಂತೆಲಿ |
ಬುದವಾರ ವುದಿಯಾಲಿ |
ಬರಿ ಅಂತ ಮ್ಯಾಲಿ | ಹಿಂಗ ಆತಿ ವಚಿನಾ |
ರೊಕ್ಕ ಕಾಶ ಮಾಡಿದ ಹಾರವ್ವ
ತೊಳದ ರಾಜ್ಯವ್ವಾ | ಆಳದ ಸಂಸ್ತಾನಾ||೩||

ಕಿವಡ ಸಾಹೇಬ ಮಾಡಿದ ಮಸಲೊತ್ತಾ |
ಡೆರೆದಾಗ ಕುಂತ್ತಾ |
ದಂಡಿಗಿ ತಾಕಿತ್ತಾ | ಬದ್ದರಗಡಕುತ್ತಾ |
ಅವಾಯಿಹಾಕಿದಾ |
ಹಿಂಗ ಹೋದಾನ ರಾತುರಾತರಿ |
ಕುಚೆಮಾಡಿಕ್ಯಾರಿ | ಹಲಕರಣಿಗೆ ಯಿಳದಾ ||
ಸಾಹೇಬಾ ನೋಡತ್ತಾನ ಗಡಾ ಹಣಿಹಣಿಕಿ |
ಬಂದ ಅಂಜಿಕಿ |
ಪೂರಾಣಾ ತಿರಿತಿರಿವಿಹಾಕಿ |
ನೋಡಿ ಆದ ದುಕಿ |
ಹನಾರ ಬಂತ ಮಂದಾ |
ಯಿಷ್ಟಾದರೇನ ಚಾತೂರಾ |
ಇಂಗ್ರೇಜಿ ಬಹಾದೂರಾ |
ತಿರಗಲಿಲ್ಲ ಹಿಂದಾ ||
ಸಾಹೇಬ ದುರದುಂಬಿ ಹಚ್ಚಿ ನೋಡಿದಾ |
ಆಕಾರ ತಳಗಿಂದಾ | ಸುಳವ ಮಂದಿದಾ |
ಯಾರ ಯಿಲ್ಲದಾ | ತುಸ ಯಿತ್ತ ಮದ್ದಾ |
ಮೂರ ಮಂದಿ ಕಂಡ ಕಂಣಿಲಿ |
ನಕ್ಕ ಕಿಲಿಕಿಲಿ | ಬಂತ ವುಂಮೆದಾ ||
ಗವರ್ನಲ್ ಸಾಹೇಬ ಆದ ತಯ್ಯಾರಾ |
ಆಗಿ ಮಸಲೊತ್ತಕೊರಾ |
ರಾತ್ರಿ ಬುದಂವಾರಾ |
ಐದ ಮಂದಿ ಸೋದರಾ |
ತೊಕ್ಕೊಂಡ ಮುಂದ ಹೋದಾ |
ಇಂನ ಹರದಿದ್ದಿಲ್ಲ ಮೂಡಲಾ |
ಅಗಶಿ ಬಾಗಲಾ | ದಾಟಿ ವಳಗ್ಹೋದಾ ||
ಸೋಮಾನಗಡದವರ ಯಿದ್ದಾರ ಬೇಪೊಮ |
ಕಾದ ಶ್ರೀರಾಮ |
ಪಿರಂಗ್ಯಾಗ ಬಂತ ಹಂಮ |
ಇಟ್ಟ ಅಂವ ದಂಮ |
ಚವಿಕಿ ವಲಗ್ಹೊದಾ |
ಚವಿಕೆವರ ಅಂತ್ತಾರ ನೀವ್ಯಾರ |
ಲಗಾಮ ಹಿಡದಾರ |
ಬಿಡಲಿಲ್ಲೊ ಮುಂದಾ||ಚಾಲ||

ಸಾಹೇಬನ ಕಯೊಗ ಇತ್ತ ನೋಡ ಸಾಂಗ |
ವಗದ ಅವ ಹಾಂಗ |
ಸತ್ತ ವದ್ದಾಡಿ | ಕಾಲ ಹೊಸದಾಡಿ ||
ಮತ್ತೊಬ್ಬ ಚವಿಕ್ಯಾಂವ ಯಿದ್ದ ಕಾರ |
ತುಂಬಿದಾನ ಬಾರ |
ಸಾಹೇಬನ ಯದಿ ನೋಡಿ |
ಹೊಡದ ಲಗು ಮಾಡಿ ||
ಐದ ಮಂದಿ ಸೋದರನ ಕೊಂದ |
ಶಿಟ್ಟಿಗೆಂವ ಬಂದ |
ರಂಗ ಚಾವಡಿ | ಹೆಣಾ ಬಿದ್ದುವ ಕೂಡಿ ||
ಚವಿಕ್ಯಾಗ ಆತಿ ಗಲಬಿಲಾ |
ಗಡದಾನ ನಾಯಿಕರೆಲ್ಲಾ |
ಬಂದಾರೋ ವೋಡಿ | ನಿಂತ್ತಾರ ಹೆಣಾ ನೋಡಿ ||
ಕಿವಡ ಸಾಹೆಬ ಕಂಣಿಲಿಂದ ಕಂಡ |
ಯಬ್ಬಶಾನ ಸೋದರ ದಂಡ |
ಬೆಂಕಿ ಹಂತ್ತಾ ಕೀಡಿ | ಬಂತ ತಾರ್ತಡಿ ||
ಗಡಕರ‍್ಯಾರ ಕಂಡ ತಿಂತಾರ ಹಲ್ಲಾ |
ತೆಳಗ ಇಳದಾರಾಲ್ಲಾ |
ನವಕೊಳ್ಳದ ಮಡ್ಡಿ | ಬಿತ್ತ ಅಲ್ಲಿ ರಗಡಿ||ಯೆರ||

ಜಗಳಾ ಆತಿ ಯಿದರಬದರಾ |
ಕಾದ ಈಶ್ವರಾ | ಕಡದಾರ ಗಡಕರ‍್ಯಾರಾ |
ಐನೂರ ಸೋದರನ | ಕಾಣಿಶಾರ ಮಂಣಾ |
ಅವರಿಗೆ ಲೇಸ ಕೊಟ್ಟಿತೊ ಕತ್ತಿ |
ತಿರಿವ್ಯಾರ ಬೆಂನ್ಹತ್ತಿ | ಇಳಶಾರ ಗುಡ್ಡನಾ||೪||

ಪಡನೇಶಿಗೆ ಸಾಧಿಸಿತ ಆಗ |
ನೀರ ಕೊಡದಾಗ | ತೊಕ್ಕೊಡವ ಬ್ಯಾಗ |
ಹೊಕ್ಕಾನ ಗಡದಾಗ | ಮದ್ದಯಿಟ್ಟ ತೋಶಿ |
ಇಕಡೆ ಕೊಟ್ಟಾನ ಪಿರಂಗ್ಯಾಗ ಕೂಲಾ |
ಬರಿ ಅಂತ ಮ್ಯಾಲಾ | ಕರದ ಶಿಲ್ಲೆ ಬೀಶಿ ||
ಮೋರ್ಚೆ ಯೇರಿದಾನ ಇಂಗ್ರೇಜಾ |
ಐನೂರ ಸೋದರ ಪೋಜಾ |
ಮುಂದ ಆನಿ ಜಾಜಾ |
ಬೆಂನಿಲೆ ನಡಿಶಿ |
ಮದ್ದ ಗುಂಡಿಂದ ಮಾಡುತ ಗೋಳಾ |
ಹಾರುತ ಕೆಂದುಳಾ | ಸನೇವುಳಿತಗಶಿ ||
ಗಡಕರ‍್ಯಾರದ ನಡಿವಲ್ಲದ ಆಟ|
ಯಳ್ಳಕಾಳಷ್ಟ |
ಗೋಲಂದಾಸ ಬಂಟ | ತಿದ್ದಿದಾನ ಮೀಶಿ
ಗರದ ನೋಡಿದ ಜೆಕೆರಿ ಬಾಗಲಾ |
ಮದ್ದ ತೋಶಿಟ್ಟ ವಡಿದ ಪಡನೇಶಿ ||
ಗೋಲಂದಾಸಾ ಮಗಾ ಅಂವ ಜಾತ |
ಕುಮಾರ ಮಾಡಿದಾ ಕಸ್ತ |
ಟೋಪ ಇಟ್ಟ ಸರತ | ಅಂವಾ ಬಹು ಬೇಶಿ |
ಮದ್ದ ಹುರದ ಮಾಡಿದಾನ ಜಲ್ದ |
ಟೋಪ ಇಟ್ಟ ತೆಗ್ಗಶಿ ||
ಮುಂಜಾವ ನಾಯಿಕಗ ಹೇಳ್ಯಾನ ಗೋಲಂದಾಸಾ |
ನೋಡರಿ ನಿವೊಂದ ತುಸಾ |
ಟೋಪ ಹಾರಿಶಾನ ಕಾಸಾ |
ಐನೂರ ಸೋದರ ಸರಸಾ |
ಬಿದ್ದಾವ ಹೆಣಾ ಹಾಶಿ |
ಆನಿ ಅಂಬಾರಿದ್ಹಾರಿತೊ ತೆಲಿ |
ಸತ್ತಾವ ಮೀನಲಿ | ತಡದ ಬಂತ ಆಶಿ||ಚಾಲ||

ಅಲ್ಲಿ ಆಡ ಹತ್ತ್ಯಾವ ರಣಾ |
ಬಿದ್ದಾವ ಅಲ್ಲಿ ಹೆಣಾ |
ಬೋರಪಿರಂಗಿ | ಟೆಪಿಗಿ ಸೂರ‍್ಯಾಗಿ ||
ಕಿವಡ ಸಾಹೆಬ ಆಂಜಿ ಆದ ಗಾಬ |

ಇತ್ತ ಅವಗ ಜರ್ಬ |
ಬಿಟ್ಟಾನು ಜಾಗಿ | ಇಳದ ಬೈಲಿಗಿ |
ಮರದಿನಾ ಮೂರು ಸಂಜಿ ವೇಳೆ |
ಗಡಕರ‍್ಯಾರಾಗ್ಯಾರ ಗೋಳೆ |
ಬಿದ್ದಾರ ಸ…..ಹೋಗಿ | ಸಾಹೇಬನ ಡೇರೆಗಿ ||
ಮಾರಾರ ಇಪ್ಪತ್ತ ಕಡದ ಹಾಕಿ |
ಬಂದಾರೊ ಶಿಗದ | ಅವರ ಕೈಯಿಗಿ |
ಹೊಕ್ಕಾರ ಗಡ ಹೋಗಿ ||
ಕಿವಡ ಸಾಹೆಬ ಮಾಡಿದಾನ ಜಲ |
ಕಾಗದ ಅವ ಬರದ |
ಪಟವರ ದಂಡಿಗಿ | ಬರ‍್ಯೋಕುವಿಂಕಿಗಿ||ಯರ||

ಪಿರಂಗ್ಯಾನ ಕುಮಕ ಆದಾರಲ್ಲಾ |
ಪಡವರಧನೆರ‍್ಯಾಲ್ಲಾ |
ದೇಶಾಯಿ ದೇಶಪಾಂಡೆ ಖಲ್ಲಾ |

ಕವಿ : ………?
ಕೃತಿ : ಪ್ಲೀಟರು ಸಂಗ್ರಹಿಸಿದ ಲಾವಣಿಗಳು