ಜನತೆಯ ಮನಸಿನ ಅನುಮತಿ ಇಲ್ಲದೆ |
ರಾಜ್ಯವಾಳುವ ಹುಚ್ಚು | ಚು | ಚು ||
ಏನ ಆದರೇನ ನಾನೇ ಅನ್ನುವ |
ಮಾನಗೇಡಿಗಳ್ಹೆಚ್ಚು | ಚು | ಚು ||


ದಡಪ ಶಾಹಿಯಿಂದ ನಡಿಸುವ ಅಧಿಕಾರ
ಗಿಡಕ ಬೀಳುವ ಕಚ್ಚು | ಚು | ಚು ||
ಒಡಲ ತಾಪದ ಕೊಡಲಿಯ ಹೊಡತಕ |
ಸಿಡದ ನುಚ್ಚ ನುಚ್ಚು | ಚು | ಚು ||


ಆಧುನಿಕ ಜಗತ್ತು ಬದಲು ಆಗುವಾಗ |
ಸ್ವಾರ್ಥಿಗಳಿಗೆ ಪೇಚು | ಚು | ಚು |
ಹೃದಯ ಕ್ರೋಧದ ಕ್ಷುದೆಯು ಉದಯವಾಗಿ |
ಉದರದೊಳಗೆ ಕಿಚ್ಚು | ಚ | ಚು ||


ಇನ್ನು ಮೇಲೆ ಜನಾ ಸುಣ್ಣಾ ಹಿರಿಯಲಿಕ್ಕೆ |
ಹಾಕ್ಯಾರ ಒಳಸಂಚು | ಚು | ಚು |
ಬಲ್ಲಿದ ಹುಲಕಂದ ಭೀಮೇಶ ಎಲ್ಲರಿಗೆ |
ಮೂಲಬೆಲ್ಲದಚ್ಚು | ಚು | ಚು ||

ಕವಿ :  ಹುಲಕುಂದ ಭೀಮಕವಿ
ಕೃತಿ :  ಸರ್ವೋದಯ ಗ್ರಾಮೀಣ ಜನಪದ ಗೀತೆಗಳು