ಕಿತ್ತೂರಾ ಚಂನವ್ವನ ಸೊಸಿ
ಹೊಂಗಲ ಬಿಟ್ಟು ಹೋಗುವಾಗ
ಮಾಡುತಾಳು ಮಹಾ ದುಃಖವಾ ||
ಮತ್ತೆ ನಂಮ ಮಲ್ಲಾಸರ್ಜ
ಸತ್ತುಹೋಗದಿದ್ದರಿಂತ ಹೊತ್ತುಬಂದು
ಹೋಗೋದ್ಯಾಕ ನಂಮ ಬದಕೂ||ಪಲ್ಲಾ||

ಮಲ್ಲಸರ್ಜಾ ಮಾಡಿದ ಬದಕು
ಮಾಜಾದಲೆ ಪೇಳ್ವೆನು
ಸೋಜಗಾದಾ ಬದಕೆಲ್ಲ ಸೂರೀ |
ಆರೂ ಆನಿ ಹದನಾರೊಂಟಿ
ಹನ್ನೆರಡ ಸಾವಿರ ಕಾಲ್ಬಾಲಾ
ಮಾರಾಯಾ ತೋಪೂಗಳ್ಹೋದಾವೇರಿ |
ಹತ್ತುವೋಲಿ ಮುತ್ತಿನ ಪಲ್ಲಕ್ಕಿ
ಸುತ್ತಾಲಿ ಹಿಡೂಸುವಂಥ
ಬೆಳ್ಳೀಕಾವಿನಪ್ತಾಗೀರೀ |
ಚಂದಾದಿಂದ ಚಕ್ಕಡಿಗಾಳು
ಒಂದ ಉಳಿಯದ ಹೋದಾವು
ತುರಂಗ ರಥದ ಚೇವುರೀ |
ಶಿಟ್ಟಿನ ಶಿಪಾಯಿಗಳು
ಧಿಟ್ಟತನದಾ೧ಲ್ಹ೧

[1]ತ್ತುವಂಥ ಕುದರೀ
ಇದ್ದಾವಲ್ಲಿ ಜನರ ಮಾರೀ |
ಹಂತೀಲಿದ್ದಾ ಸರದಾರೆಲ್ಲ
ಕಾಂತಾರ ಬಿದ್ದು ಹೋದಾರು
ಎಂತಾದು ಬಂದೀತು ಬೆಂಕಿ ಮಾರೀ |
ಕಲ್ಲೂರಾ ಕಲಬಸಪ್ಪ ಕಂನೂರಾ ಮಲ್ಲಪ್ಪ
ಅವರಾದಿ ಈರಪ್ಪ ಇದ್ದಾರು ಕಾರಬಾರೀ |
ಅಷ್ಟು ಹೋಗಿ ಎಷ್ಟು ಆದಿತು
ಕಷ್ಟಾವು ನಮಗ ಬಂದೀತು
ಕಂತುಹರನ ನೆನದಳು ಸಾರೀ||ಪ್ರಳಾಪ||

ಪಾಂಡವರಿಗೊನದೇಶಾ
ಬಂದಂತೇ ಆದೀತು |
ಪಾಪಿ ದುಶ್ಯಾಸ
ದ್ರೌಪತಿ ಶೀರಿಯಾ ಶಳಿಯಾಲು |
ಭೂಪತಿಗಳೇನುಮಾಡುವರು |
ನಂಮನೌ ಶರಿಯ ಬಿಡಿಸು
ಇನ್ನೊಬ್ಬರ‍್ಯಾರಿಲ್ಲ |
ಸಿಕೆಯದಾ ಮೊಮಗನೊಬ್ಬ
ಸಿಗದ ಹೋದವನ |
ಬಗಿದು ತರುವೆನಂಬುವರು ||
ಪಾಪಿಕೇಳ್ನಂಮಂಥ ಪಾತಕರ‍್ಯಾರಿಲ್ಲ |
ಪಂನಂಗಾಧಾರನ ಸ್ತುತಿಸುತಾಲೀರವ್ವಾ
ಪಾರ್ವತೀ ೧ಅರಸ೧[2] ಗ್ಹೇಳಿದಳೂ ||
ಪೂರ್ವದೀಜನ್ಮದ ಲಿಖಿತ ಪೂರ್ಣಾ
ನಮಗ ತಪ್ಪದೆಂದು
ಬ್ರಹ್ಮ ಬರದನ್ಯಾಕ ೨’ಅರಸ’೨[3]ಬ ರೀ||೧||

ಹೆಂಣಮಕ್ಕಳಿಡುವ ವಸ್ತ
ಬಂಣಿಸಿ ನಾ ಪೇಳ್ವೆನು
ಸಂಣ ನಡುವಿನ ಡಾಬಾ ಭಂಗಾರಾ |
ಬುಗಡಿ ಬಾವಲಿ ಜಮಕಿನವಾಲಿ
ಚಳತುಂಬು ಚಂದಾದಲ್ಲಿಡುವ
ರಾಗೂಟಿ ಚೆವರಿ ಹೆರಳು ಭಂಗಾರಾ |
ಸಾವಿರ ಹೊಂನಿನ ಸರದಾಳಿಗಳು
ಮೋಹರದಾ ೩ಮು೩[4]ತ್ತಿನಾ ಮೂಗುತಿ
ಮೇಲೆ ಕೆಚ್ಚಿಸಿದ ವಜ್ಜಾರಾ |
ಕಂಠಕ ಧರಿಸು ಕರಡಿಗಿ ಸರ್ಪಳಿ
ಕ೪ಠಾ೪[5]ಣಿ ಕರೇಮಣಿ ದ್ವಾರೇ ಚಿಂತಾಕ
ಹರಡಿಗಿ ಹವಳಸ್ಸಾರಾ |
ಹಿರಿಪಿಲ್ಲಿಗಳು ಕಿರಿಪಿಲ್ಲಿಗಳು
ಲುಲ್ಲಮೆಂಟಿಗಿ ರುಳಿಯು
ಗೆಜ್ಜಿ ಕಾಲ್ಗಡಗಾ
ಕಾಲ ಸರ್ಪಳಿ ಕಾಲುಂಗಾರಾಗಿ
ಮಂದರಧರನಾ ಕರುಣಾ ತಪ್ಪಿ
ಒಂದ ಉಳಿಯದ ಹೋದಾವು
ಮುಂದೆ ಇಲ್ಲ ನಮಗಾಸಾರಾ||ಪ್ರಳಾಪ||

ವಕಾಲಾಗಿತ್ತೇರು | ಸಕಲ ಜನರೆಲ್ಲಾರು |
ಸತ್ಯಕ ಶರಣಾರ ಸಾಕ್ಷಿ ಪೇಳುವೆನೆಂದು
ಅಕ್ಕ ನಿಲ್ಲಿಸ ದುಃಖವೆನುತಾ ||
ರಾಮಲಕ್ಷೂಮಣನು | ಪ್ರೇಮಂದಿರುತಿಹರು |
ಕೆಟ್ಟ ರಾವಣ ಜಾನಕೆಯ ವನದೊಳಗಿಟ್ಟು
ಹನುಮಂತಾ ಹೋಗೀ ೧ಲಂಕ೧[6]ಸುಟ್ಟ ||
ವಿಭೀಷಣಗಾದಿತು ಪಟ್ಟ |
ಇಂನು ಸಿಕೆಯವ ಕೊಟ್ಟ |
ಹಿಂಡ ದೈತ್ಯರನೆಲ್ಲ ಭಂಡ ಮಾಡಿದ ಭೂಪಾ |
ತಾಯಿ ತಂದನು ಕುಲದೀಪಾ||ಏರೂ||

ಹೋದಂತ ಮಗನಿಗೆ ಆದನೇಳ ತಾಯಿಯೆನುತ
ಶೋಧಿಸಿ ಹೇಳಿದರೆಲ್ಲಾರೂ||೨||

ಹೊದವಂತ ಹೊದಿಕೆಯ ಭೇದವನು ಹೇಳ್ವೆನು
ಹೋದವೆಲ್ಲ ರಾಜೇದ ಮೇಲೆ ಹೇರೀ |
ರಾಣೇರುಡುವ ರಾಗಾವಳಿ ಸೀರಿ
ಬಾಲೇರುಡುವ ಬಾಳಿಪಟ್ಟಿ ಸೀರಿ |
ಚದುರೇರುಡುವ ಚಂದ್ರಕಾಳಿ ಸೀರೀ |
ಸಂಣವರುಡುವ ೨ಸಾ೨[7]ಸಿ ಬಂಣದ ಸೀರಿ |
ಹುಡಿಗೇರುಡುವ ಹುವ್ವಿನ ಶೀರಿ
ಕಂನೇರುಡುವ ಕಂಬಾವತಿ ಸೀರೀ |
ಮಕ್ಕಳುಡುವ ಮಂಜಿನ ಸೀರಿ |
ತೊತ್ತುಗಳುಡುವ ತೋಪಿನ ಸೀರಿ |
ಉತ್ತುಮರುಡುವ ಉರಳೀ ಗೆರೀ ಸೀರಿ |
ಕೂಸುಗಳ್ಹೊದುವ ಕುಲಾಯ ಕುಂಚಿಗಿ |
ಏಸೊಂದು ನಾ ಪೇಳ್ವೆನು
ಬಿಂದಾಲಿ ಅರಳೆಲಿ ನಾಗ್ಮುರೀ |
ಶಲ್ಲೆ ಮುಂಡಾಸು ಶಾಲು ಶಕಲಾತಿ
ಪಶ್ಚದಂಗಿ ಪರಿಮಳ ಪಾವುಡ
ವುಡವಂಥಾ ಧೋತ್ರನಾಗ್ಯೂರೀ |
ಎಲ್ಲಾ ಹೋಗಿ ಇಲ್ಲಾದಾಯ್ತು
ಮಲ್ಲಸರ್ಜಾ ಮಾಡಿದ ಬದಕು
ಬಲ್ಲಷ್ಟು ಹೇಳುವೆ ನಾದಸೂರೀ||ಪ್ರಳಾಪ||

ಅಷ್ಟು ಹೋಗೀ ನಂಮಾಗ | ಕಷ್ಟ ಬಿಡಲಿಲ್ಲೆಂದು |
ಪಟ್ಟನೇ ಹಣಿ ನೆಲಕ ಬಡವುತಾಲೀರವ್ವಾ |
ಕಟ್ಟಿ ಹಾಯ್ವೆನು ಅಲಾಗೆನುತ ||
ತೊತ್ತಗಾಳೆಲ್ಲಾರು ಸುತ್ತವೇ ಮುತ್ತಿದರು |
ಮು೧ಕ್ಕಂ೧[8]ಣ ಹರನ ದಯದಿಂದ ನಿಂನ |
ಮಕ್ಕಳೈದಾರೇ ತಾಯಿ ಯೆನುತಾ
ತಂಮನೈದಾನೆ ತಾಯಿ ನಿನಗ ಬಂದದೆಯಂದು |
ಉಂಮಾಯದಿಂದವರು ಹೇಳಿದಾರೀರವ್ವಗ |
ಸುಂಮನೀರದೆ ಅಳುವಾಳು||ಏರು||

ಹಂನೆರಡಾ ಸಾವೀರಾ ದಂಡು
ಹರದೂ ಹೋಯಿತು ನಂಮನ ಬಿಟ್ಟು
ಒಡದಂತೆ ತುಂಬಿದಕೇರೀ||೩||

ಅಂಥಾ ದೊರಿಗಳಿಗಿಂತಾದಾಯಿತು
ಕಂತುಹರನೆ ಕೇಳವರಿಗೆಂತ
ಹೊತ್ತು ಬಂತು ಈಶ್ವರಾ |
ನಾಡನಾಳ್ವ ಧೊರಿಗಳಿಗಿಂತ
ಕೇಡು ಬರಬಾರದೆಂದು
ರಾಜೇವು ಮರಿಗಿತು ಮಾರಾಮಾರಾ |
ಮಾಂನೆರೂ ಆಳುವಂಥ
ಹಂನೆರಡು ಸಾವಿರ ಕರಡಿಗಿ ಹಳ್ಳಿ
ಹುಂನಾರದಿಂದ ಹೋದವು ಮುಂನೂರಾ |
ಸತ್ತೆಕ್ಕೆ ಶ್ರಾವಣಮಾಸಕೆಪ್ಪತ್ತೇಳನೂರ ಮಂದಿ
ಸ್ತುತಿ ಮಾಡುವಾರು ಜಂಗ್ಮರಾ |
ಹಸ್ತಿನಂದರ ಕಿವಿಯಲಿ ಕೇಳದೆ
ಹಂಣು ಸಕ್ಕರಿ ಉಣಸಿ
ದಾನ ಕೊಡುವರು ನಾನಾ ವಸ್ತಾರಾ ||
ಧರ್ಮಾ ಮುಳಿಗಿ ಕರ್ಮಾ ಹೆಚ್ಚಿ
ವರ್ಮಾವಾನು ಪೇಳೆನು
ವರ್ಮಾ ಸಾಗಿ ಹೋದರ ಮೂರಾರಾ||ಪ್ರಳಾಪ||

ರಾಜೆಕ ರಾಯಿನಾಯಿಕಾ
೧ಇಂಥಾ೧[9]ಗೋಜು ಹಚ್ಚದಿದ್ದರೆ
ಸಾಜಾಗಿ ದೌಲಾತ ಸಾಗಿಹೋಗುವದೆಂದು
ಮಾ ಜನಾರೆಲ್ಲಾ ಮರಗುವರೂ ||
ಪಟ್ಟಿಗಟ್ಟಿ ದೇಸಾಯಿಗೆ ಸಿಕೆವ್ಹಾಕಿದಳೆಂದು |
ಆಕಿ ಚಂನವ್ವ ೨[]೨[10]ನೊಯ್ದು
ಹಾಕಿದರು ಹೊಂಗಲದಾಗ |
ಸಾಕಿದಾ ಮಗನೆಂಬುವರೂ ||
ಟಾಕರಾ ಸಾಹೇಬ ಬಂದು
ಸ್ಥಿರವಾಗಿರಲಿಲ್ಲೆಂದು |
ಧೀರ ರಣದೊಳು ಹೊಕ್ಕು |
ಊರ ತಕ್ಕೊಂಡನೆಂದು
ಭೋರಿಡುತ ಜನರೆಲ್ಲ ಅಳುವಾರು||ಏರು||

ಆಕಾಶದ ಮೇಲೀನಾ ಚಂದ್ರ
ಲೇಸಾಗಿ ಬೆಳಕಾ ತೋರವಾನು
ಏಸಿದ್ದಾರೇನು ನಕ್ಷತ್ರಾ||೪||

ವ್ಯಾಳೆವ್ಯಾಳೆಕ್ಕ ವತ್ರ ಮಾಡಿ
ಬ್ಯಾಗದಿಂದ ಹೇಳೀದಾರು
ನಾಳೆ ಹೊರಡೆಂಬು ಉತ್ತಾರಾ |
ಒಡವೀ ವಸ್ತಾವನೆಲ್ಲ
ಪೊಡವೀ ಮೇಲೆ ವಗದಾಳು
ಬಿಡದ ಸುರಿಸೂವಳು ಕಂಣೀರಾ |
ಸಾಗಡೆಲ್ಲ ೧ಹೇರಿ೧[11] ಭಂಡಿಗಾಳು
ಮುಂದಕ್ಕ ಸಾಗಿ ನಡದಾವು
ಬಿಟು ಹೊಂಟರಲ್ಲೊ ದನಕಾರಾ |
ಹತ್ತುವಂತ ಕುದರಿಗೆ
ಮುತ್ತಿನಾ ಜೀನವ ಬಿಗಿದು
ಹಿಡದಾ ನಿಂತಾನಣ್ಣಾ ಮೋತದ್ದಾರಾ |
ಗುರುವಿನ ತರಿಸಿ
ಪಾಲ್ಲಿಕ್ಕಿಯಾ ಮ್ಯಾಲೇ ಅಪ್ತಗೀರೀ ಹಿಡಿಸಿ
ಹಾರೀಸೂತ ನಡದಳ ಚಾಮಾರಾ |
ಸಂಣ ಮಾಗಳೈಯ್ಯಾ ನಾನು
ಸಾರಿ ನಿನಗ ಪೇಳ್ವೆನು ತಾಪಾ
ಕೇಳೊ ಅಪೈ ಸರದಾರಾ||ಪ್ರಳಾಪ||

ಹೊಂಡೆಂದೂ ನಿಂತಾರೋ |
ಮಂಡಾಟಾ ಹಿಡಿದಾಳೋ |
ಬಂಡಾಟಾ ಮಾಡಿ |
ಕೈಹಿಡದೊಂಮೆಳದಾರೋ |
ಕಂಡವರಾ ಕಾಲಾ ಹಿಡಿದಾಳೊ ||
ಮಂಡಾಲಾನಾಳುವಂಥ |
ಪುಂಡರೂ ಮಡದ್ಹಾಂಗ |
ಕೆಂಡವ ಹಾಯಿದಿಂನು |
ಪ್ರಾಣವಾ ಕೊಡಲೆಂದು |
ಗಂಡನಾ ನೆನದೂ ಅಳುವಾಳೋ||ಏರು||

ನೀರ ಇಲ್ಲದ ಮಲ್ಲಿಗೀ ಹುವ್ವಿನ
ಬೇರ ವಣಗೀದಂತೆ
ಆಸರಿಲ್ಲದ ಪಾರೇ ಕೊಟ್ಟರುಂಣ ಪರಂಗೇರಾ||೫||

ಎಷ್ಟು ಮಾಡೀದಾರ
ನಮ್ಮನ ಬಿಟ್ಟೂ ಹೋಗೂದಿಲ್ಲವೆಂದು
ಮಾಡೂತ ನಡದಾಳು ವೀರನ ಸ್ತುತೀ |
ಅತ್ತೀ ಮಾವನ ನೇನಸಿ
ಹತ್ತೀದಾಳು ಡೋಲೀಯಾನು
ಹೊತ್ತಾರಂಣ ಬೋವೇರೆತ್ತೀ |
ರಾಯಿನಾಯಿಕ ಬಂದಾನೆಂದು
ರೌಡಮಾಡಿ ನಡದಾರು ಎಡಬಲಕ
ಹಿರದ ಬಿಚ್ಚಗತ್ತೀ |
ಹಿಂದ ಇಂನೂರ ಬಾರಿನ ಮಂದಿ
ಮುಂದ ಮುನ್ನೂರ ಕುಡತಿ ಮಂದಿ
ಮಾಡೂತ ನಡದಾರು ಪಾರಾಗಸ್ತೀ |
ದಾಸೋಗದಿಂದ ದಾರಿ ೧ಹಿಡದು೧[12]
ಧಾರವಾಡಕ ಬಂದಮ್ಯಾಲೆ
ಸರದಾರಾ ಕೇಳೀದ ಅವರ ಸ್ಥಿತೀ
೨ಕೊಟ್ಟಂಥಾ೨[13] ಅಂನದ ಮೇಲೆ
ಬಿಟ್ಟು ಎರ್ಡನೆ ಮಾಡತೀರಿ
ನಂಮ ಮೇಲೆ ಮಾಡೊದ್ಯಾಕ ಜಾಸ್ತೀ ||
ರಾಯಿನಾಯ್ಕನ ಹಚ್ಚಿ
ಸುತ್ತಮುತ್ತ ಹಳ್ಳಿನೆಲ್ಲ
ಫಿತೂರ ಮಾಡಿ ನೀನು ಸೂಡಸ್ತೀ ||
ಕೊಲ್ಲಬ್ಯಾಡ್ರಿ ಇವಳುನು
ಕುಸೂಗಲ್ಲ ಕಿಲ್ಲೇದೋಳಗೊಬ್ಬಳ
ನೀಡಂದಾನು ವಸ್ತಿ||ಪ್ರಳಾಪ||

ಹೊತ್ತಾರೋ ಬೋವೇರು
ಕುಸುಗಲ್ಲೀಗೆ ತಂದಾರೊ |
ಮೆಲ್ಲಾನೆ ಕಿಲ್ಲೇವಾ ಹೊಗುವಾಗ
ಈರವ್ವಾ ಬಲ್ಲಾಂಗ ದುಃಖಾ ಮಾಡಿದಳೂ |
ತಾಯಿಲ್ಲವ ಮಕ್ಕಳಿಗೆ ಆಯಿಲ್ಲಾ ಶಿರಿಯಿಲ್ಲ |
ಬಾಯಿಬಿಡುತಲೀರವ್ವಾ
ತಾಯಿಲ್ಲದಿಡಬಾರದೆಂದು |
ಸಾವು ಬೇಡಿದಳು ಶಿವನೀಗೇ||ಏರು||

ನೀರ ವಳಗಿನ ಮೀನಾ ವೈದು
ಬೇರೆ ಹೊರಿಯಾಕೆ ಚೆಲ್ಲೀದಂತೆ
ಆದೇವೈಯ್ಯ ನಾವು ಆನಸ್ತೀ||೬||

ಇಂನು ಈ ಧರಿಯೋಳು
ಮುಂನ ಇರಬಾರದೆಂದು
ಅಂನ ಉದಕವಾ ಬಿಟ್ಟಾಳೋ |
ಸಂಗ್ರಾಣಿ ಬ್ಯಾನೀ ಹಾಂಗ
ಸರ್ವಗಾ ದೇಹಾವಂನು |
ಸುಂಣದಂತೆ ಕರಗಿಸಿಬಿಟ್ಟಾಳೋ |
ಸಂಣವಾದ ಕೈಕಾಲು |
ಮಂಣಪಾಲುವಾಗಲೆಂದು
ಮೈ ಬಂಣಾ ಒಣಗೀಸಿಬಿಟ್ಟಾಳೋ |
ನಾಡವೋಳು ನವಲಗುಂದ
ಕಾಡಸಿದ್ದನ ಹಂತಿಲಿ ಹೋಗಿ
ನೀರಾ ಮಿಂದು ಮಡಿಯಾನುಟ್ಟಾಳೋ |
ಜಂಗಮಾ ತೀರ್ಥವ ಪಡಿದು
ಅಂಗೈ ವಳಗ ಲಿಂಗಾ ಯಿಟ್ಟು
ಲಿಂಗದ ಮೇಲೇ ಧ್ಯಾನಾ ಇಟ್ಟಾಳೋ |
ಭಕ್ತಿಯಿಂದ ಜಂಗಾಮರಿಗೆ
ತಕ್ಕಡಿ ಭಂಗಾರ ತರಿಸಿ
ದಾನಾ ಧರ್ಮಾವಂನು ಕೊಟ್ಟಾಳೋ |
ಮುಂದ ಮುಕ್ತಿಯ ಕೋಡು
೧ಮುಕ್ಕಂಣ೧ ಶಂಕರನೆಂದು
ಧಾರವಾಡದ ದಾರಿ ಹಿಡದಾಳೋ||ಪ್ರಳಾಪ||

ಚಿಕ್ಕ೨ಮsಗಾ೨ಮಲ್ಲಸರ್ಜಾ
ಸಿಕ್ಕನಂಬುದು ಕೇಳೀ |
ಬಕ್ಕನೇ ಹಣಿ ನೆಲಕ |
ಬಡವುತಾಲೀರವ್ವಾ
ಜಕ್ಕನೇ ಧರೀಗಿಳಿದಾಳೋ ||
ಕೊಡ ಹೊಂನಿದ್ದಾರೇನು
ಬಡಿವ್ಯಾಗಿರವೂದೆ ಲೇಸು |
ಮಡದಿಗೇ ರಾಯಾನೊಬ್ಬ |
ಮನಿಯೊಳಗಿರಲೇಸು |
ಹೀಗೆಂದೂ ದುಃಖಾ ಮಾಡಿದಳೋ||ಏರು||

ಧಾರವಾಡ ಬಂದೂ ಮ೧ರು೧ ದಿವಸ
ಸತ್ತು ಹೆಬ್ಬಳ್ಳೀ ಬಸವಾನ
ಪಾದಾಕ್ಹೊಂದ್ಯಾಳೋ||೭||


ಕವಿ :
ಹೆಬ್ಬಳ್ಳಿ ಬಸವ
ಕೃತಿ : ಪ್ಲೀಟರು ಸಂಗ್ರಹಿಸಿದ ಲಾವಣಿಗಳು


[1] ಲ್ಹೆ

[2] ಅಸ

[3] ಇಥ

[4]

[5] ರಾ

[6] ಲಕ, ನಾ

[7] ನಾ

[8] ಕಂ

[9] ಇಥಾ

[10] ನೌ

[11] ಹೆರಿ

[12] ಹಿದು

[13] ಕೊಟಂಥ