ಶಖ ಇಂಗ್ರೆಜಿ ಬಹದುರ ೧ಕುಂ೧

[1]ಪಣಿ ಸರಕರ
ಆತಿ ಜಾಹಿರ ಅವರ ಕಾರ್ಬರ ಸುತ್ತಿನ ರಾಜೇಕ |
ತಂಮನಾಡಿಗಿಟ್ಟುದರ ಸುಖ
ಮಾಡಂದಿಲ್ಲ ದುಖ್ಖ ಈಗಿನ ವ್ಯಾಳೆಕ||ಪಲ್ಲ||

ಪಾಣೆ ಹಾಕೆರ ಸುತ್ತಿನ ವಾಡ ಹತ್ತಲಿಲ್ಲ ತಡ
ಬೆಳಗಾಂವಿ ಧಾರವಾಡ ಇರುವ ಅವರ ಜ್ಯಾಗ
ತಂಮ ದಂಡಿಗಿಟ್ಟರ ಬಂದುಬಸ್ತ
ದಿನ ಕವಾತ ಯರಡು ವ್ಯಾಳೆದಾಗ
ಮಂಮಯದೊಳಗ ಹುಕುಮ ಅತಿ ಜೋರ
ಬರದರ ವುತ್ತರ ವೊದಿಕೊಂಡ ಸರದಾರ
ನಾಡನ ಹತಿಯರ ಕಳಸಬೇಕ ಬ್ಯಾಗ
ಇಷ್ಟ ವೋದಿಕೊಂಡರ ಪಿರಂಗೆರ
ಹೊಡಶರ ಡಂಗೂರ ತಾಲುಕದ ತೆಳಗ |
ಬಾಲೆ ಬಾಕ ಕತ್ತಿ ಕಠಾರಿ ಕಂಜುರ ಕೈಚೂರಿ
ಟೋಪ ಪಿಸ್ತುಲ ಬ್ಯಾರಿ
ಬಂಡಿ ಮೇಲೆ ಹೇರಿ ಕಳವಿದರ ಆಗ |
ಹಲಗಲಿ ವೂರ ರೈತರ ಕೊಡಲಿಲ್ಲ ಹತಿಯರ
ಸುಟ್ಟರ ಗಳಿಗ್ಯಾಗ |
ಸುರಪುರ ಧೊರಿ ಮಾಡೆನ ಹಿಕಮತಿ
ಕೊಡಬಾರದಂಣ ಕತ್ತಿ ದಂಡ ಬಹಳತಿ
ಲಡಾಯ ಮಾಡು ೨ಪ್ರೀ೨[2]ತಿ ಅವನ ಮನದಾಗ |
ಸುದ್ದಿಕೇಳಿ ಪಿರಂಗ್ಯಾ ಬಂದ
ಸುರಪುರ ಹೊಡದ ವಂದ ಕ್ಷಣದಾಗ||ಚ್ಯಾಲ||

ಮೇನಶಿನ ಸಾಹೆಬ ಇದ್ದನೊ ಧಿಟ್ಟಾ
ಜೆಮಖಂಡಿಗೆ ಹೊಂಟ ಅಂವ ಸರದೀಂದ
ಡೇರೆ ಹೊಡದಿಳದಾ |
ರಾವಸಾಬನ ಕರಿಯ ಕಳಸಿ
ಮಾಡೆರ ಚವಕಶಿ ತಿಳದ ೩ನೋ೩[3]ಡೀದಾ |
ಕಲ್ಬಣದಿಂದಾ |
ರಾವಸಾಬಗ ಮಾಡೆರ ಬಹು೧ಪ್ರೀ೧[4]ತಿ
ಮದಗುಂಡ ಯೆಲ್ಲೆತಿ ಕೊಡರಿ ನಮ೨[5]ಗಿಂ೨ದಾ |
ಲಗುಬಗಿದಿಂದಾ |
ಸಾಹೆಬನ ಮಾತ ಕೇಳಿಕೊಂಡ
ಕೊಟ್ಟರ ಮದ್ದಗುಂಡ
ಸುರವಿದರ ಮುಂದ |
ಬೆಳಗಾಂವಿಗೆ ಕಳವೀದಾ||ಯೇರ||

ವಳಗಿಂದೊಳಗ ಬರದ ಟಪಾಲ |
ಕಲಾದ್ಗಿ ದಂಡೆಲ್ಲಾ ಬಂದಿತೊ ಹಲ್ಲಾ
ಜೆಮಖಂಡಿ ವೂರ ಮೇಲಾ |
ಹೋತಿ ಟಾಕೊಟಾಕ |
ಅಲ್ಲಿ ತಂಮ ಪಾಣೆವು ಹಾಕ್ಯಾರ
ರಾವಸಬನೋದರು ಬೆಳಗಾಂವಿಯ೩ಸ್ಥ೩[6]ಳಕ||೧||

ಜೆಮಖಂಡೆ ವಂದ ಆತಿ
ಈ ಹಾಡ ದೊಡ್ಡದೊಡ್ಡಗಡಾ
ಇದ್ದವು ಬಹುಚಡಾ
ಜ್ಯಾಗ ಅವಗಡ ಮುಂನೂರ ಅರವತ್ತ |
ಹಿಂತಾವ ತೊಗೊಂಡ್ರ ಪಿರಂಗೆರ
ಇಲ್ಲ ದರಕರ ಮಾಡಿ ಕಸರತ್ತ |
ಮೇನಶಿನ ಸಾಹೆಬ ಅಕಲ ತಗದ
ವುಳಿತ ನರಗುಂದ ಹೋಗಬೇಕಂದ
ಮನಶಿಗೆ ತಂದ ಹೊಂಟ ನಗನಗತಾ ||
ಬಾಬಾ ಸಾಬಗ ಹಚ್ಚರ ಸಂದಾನ
ಹತಾರ ಕೊಡರಿನ್ನ ಯಲ್ಲ ದರುಬಸ್ತಾ ||
ಮದ್ದಗುಂಡ ಟೋಪ ಬಂದುಕ |
ಕೊಡರಿ ಗಂದಕ ವುಳಿಯಬಾರದ ಸಿಲ್ಕ
ನಿಂ೪ಮ೪[7] ಹಂತಕ ಯಾಕ ಸಾಹಿತ |
ಈಗ ನಂಮ ಜಿವಕ
ಬಂದಾಗ ಕೊಡಬೇಕ ನೀವ ಈಗ |
ಯೆನಂತೆ ೧ಹೇ೧[8]ಳ ತುರತ |
ಬಾಬಾ ಸಾಹೇಬ ೨ಕೇ೨[9]ಳೆನ ಇಷ್ಟಮಾತ
ಇಲ್ಲ ನಿಂಮ ಹೊರ್ತ
ಮಾಡ್ತೆನ ತಾಕಿತ
ಕೆಲಸ ಹರಕತ ಮಾಡಂದಿಲ್ಲಂತ |
ಇಷ್ಟ ಹೇಳಿ ಬರದಕೊಟ್ಟರು
ಸಾಹೆಬನ ಕಳಸಿರು ಮಾಡಿಕೆರ ಬೇತ||ಚ್ಯಾಲ||

ಬಾಬಾಸಾಬನ ಸತಿಗೆ ಹತ್ತಿ ಸುದ್ದಿ
೩ನೀ೩[10]ವೆಲ್ಲಿ ಇಟ್ರಿ ಬುದ್ಧಿ
ಇಲ್ಲೆನ ಕಾರ್ಬಾರ ತಿಳದ ೪ನೋ೪[11]ಡ್ರಿ ಪೂರಾ |
ಮದ್ದಗುಂಡ ಯಲ್ಲ ಸಾಹಿತ ಕೊಟ್ಟ
ಇಲ್ಲೆನತಿ ಗಂಟ ಮಾಡರಿ ವಿಚಿಯಾರ |
೫ಹೋ೫[12]ದಂಗ ಸತಿಯರ |
ಹಿಂದ ಮುಂದ ಇಲ್ಲ ಮಕ್ಕಳ
ಮಾಡುನ ಜೆಗಳ
ಆದಿತ ಹೆ೬ಸ೬[13]ರ ರಾಜೆದ ೭ಮೇ೭[14]ಗ ದೂರಾ |
ಗಡದಲ್ಲಿ ಹೋಗಲಿ ನಂಮ ತೆಲಿ
ಸಿಗಬಾರ‍್ದ ಕೈ೮ಯ೮[15]ಲಿ
ಹಿಡಿರಿ ನೀವದೀರ ಬಹಳ ಹುಷಿಯಾರಾ||ಯೇರ||

ನಂಮನ ಕಾಯಂವ ಯಂಕಟರಮಣ
ಅವನ ದಯ ಕರಣ ೯ಅ೯[16]ತಿ ಸಂಪೂರ್ಣ
ಮಾಡಿಕೆರ ಶರಣ ಬಿದ್ದರ ಪಾದಕ್ಕ |
ದೇವರನ ಕೇಳೆರ
ಕವಲ ಕೊಟ್ಟನು ಬಲ ಹೊಡಸತರ ಡಂಕ||೨||

ಬಾಬಾ ಸಾಹೆಬ ಆದನು ಖುಷಿ
ನೋಡಿದನು ಸೋಸಿ
ಕಾರ್ಕುನರ ಕರಶಿ ೧೦ಹೇ೧೦[17]ಳೆನ ೧೧ತಿ೧೧[18]ಳಸಿ
ಆದ ಕುಸಿಯಾಲಾ |
ನಂಮ ದಂಡ ಮಾಡರಿ ತಯಾರಾ
ಹೊಡಸರಿ ಡಂಗರ ಸಭೇದ ಹಳ್ಳಿಗೆಲ್ಲಾ |
ದಂಡ ಕೂಡಿತ ಮೂರ ಸಾವಿರ |
ಅನಿ ಕುದರಿ ಸ್ವಾರಾ
ತೊಗೊಂಡ್ರ ಹತಿಯರ
ಬಂದಂಗ ಹೊಳಿಪೂರಾ ಅತಿ ಗದ್ದಲಾ |
ಪಿರಂಗ್ಯಾನ ದಂಡ
ನದರಾಗ ಇಲ್ಲ ಯಾಂವೆಂವಗ |
ಜೀವದ ಪರಿವಿಲ್ಲಾ ||
ಯಲ್ಲ ಅಗಸಿಗಿಟ್ಟರ ಚವಕಿ
ಮುಂನುರ ಹಳಿಬಿ
ಇಲ್ಲ ಅಂಜಿಕಿ ಜೀವದಲಿ
ಬೆಂಕಿ ಇಟ್ಟರ ಕಾವಲಾ |
ವಳಗಿನ ಮಂದಿಯ ವಳಗ
ಬಿಡಂದಿಲ್ಲ ಹೊರಗ
ಹಾಕೆರ ಬಾಗಿಲಾ |
ವಳಗಿತ್ತ ಅನ್ನ ನೀರ ಜೋರ
ಕೊಟ್ಟರ ರೈತರ ವುಣಸಿ ಹಾರುರ
ಮಾಡೆರ ನಮಸ್ಕಾರಾ ಬಿದ್ದರೊ ಕಾಲಾ
ಇಲ್ಲಿಗೆ ಹರಿತರಣನ ಬಂದ ವುಳದರ
ಮುಂದ ಕೊಟ್ಟೆನ ಕವಲಾ
ಗಡ ಟೋಪ ಪೂಜಿ ಮಾಡಶಿ
ಕುರಿಯ ಕಡಶಿ
ಮಾಡಿದರ ೧ಶಾಂ೧[19]
ಬೇಡಿಕೊಂಡ್ರ ನಿಂತ |
ಯಲ್ಲ ಅಗಶಿಗೆ ಕೋಣ ಕಡದ
ಮಾಡಿ ದರದುಂದ ಚೆಲ್ಲಸೆರ ರಕ್ತಾ
ಗಡದ ಸುತಮುತ್ತ |
ಟೋಪ ೨ಏ೨[20]ರಶಾರ ಮೇಲಕ
ನೋಡಿಕೆರ ದಿಕ್ಕ ಇದ್ದುವ ವಂಭತ್ತ |
ಇಟ್ಟುದರ ಸರ್ತ |
ಸುದ್ದಿ ಕೇಳಿ ಬಂದ ಗೊಲಂದಾಸ
ಶುಕ್ಕರವಾರ ದಿವ್ಸ ಹಾರಸ್ಯಾನ ಟೋಪ ಮಸ್ತ
ಲಡಾಯಕ ಬರೆಂತ||ಯೇರ||

ಪಿರಂಗ್ಯಾಗ ಸುದ್ದಿ ೧ಹೋ೧ತಿ
ಮತ್ತ ಬಂದರ ವೋಡುತ
ಮುಂಗಯ್ಯ ಕಡಕೊಂತ ಹಲ್ಲ ತಿನ್ನುತ |
೨ಹೋ೨ದರ ರಾಮದುರ್ಗ್ಗಕ
ನರಗುಂದಿ ಸುದ್ದಿ ಕೇಳಿ
ಗಟ್ಟಿ ಬರದ ಲಕುಟಿ
ದಂಡ ಕುಡಸುಂದಕ||೩||

ಅಪ್ಪ ಸಾಹೆಬಗ ತಾಕಿತ ಮಾಡಿದ |
ರಾಮದುರ್ಗ್ಗ ಬಿಟ್ಟು ಬಂದ
ಸೂರೆಬಾನಕಿಳದಾ |
ಡೇರೆ ಹೊಡಶಿದಾ ದೀವ್ಸ ಶನಿವಾರಾ |
ಮೆನಶಿನ ಸಾಬಗ ಬಂತ ವೂಮೆದ
ಮಂನಶಿನ ಕರದ |  ೩ಹೇ೩[21]ಳೆನ ಯಚ್ಚರಾ ||
ನಾಳಿ ಹೋಗಬೇಕ ನರಗುಂದಕ |
ಬಾಬಾ ಸಾಹೆಬನ ಹಂತೆಕ |
ಹೇಳುನು ಟೀಕ
ದಂಡ ಯಾತಕ ಮಾಡ್ತನ ತಯಾರಾ |
ನಂಮ ಪದರಿ ನನ್ನ ದೇಸ್ಗತಿ
ಸೊಕ್ಕ ಬಂದತಿ ಇಳಸುನು ನೀರಾ ||
ಇದ್ದ ಸುದ್ದಿ ಹತ್ತಿತು ಬಾಬಾ ಸಾಬಗ |
ಮಾತಾಡತಿದ್ರ ಹೀಂಗ ಸೂರೆಬನದಾಗ |
ಕುಂತ ೪ಡೇ೪[22]ರೆದಾಗ ಅಂದ ಸರದಾರಾ
ಇಷ್ಟ ಕೇಳಿ ಆದನೊ ಸಿಟ್ಟಾ
ಹಾರಸುನು ಚೆಟ್ಟಾ ನಡಿರಿ ಯಲ್ಲಾರ ||
ಅಂವ ಹೊಂಟ ರಾತೊರಾತರಿ |
೧ಐ೧[23]ವತ್ತ ಕೂದರಿ ಶಿಪಾಇ ಮಂದಿ
ಬ್ಯಾರಿ ಹಾಕೆರ ಸರವಾರಿ |
ಕತ್ತಿ ತಿವಳೆ ಜೋರಾ |
ಅಲ್ಲಿ೨ಗ್ಹೊ೨[24]ಗಿ ಮಾಡೆರ ಗಡಬಡಿ
ಯೆಲ್ಲೈದನ ಹಿಡಿರಿ ಅಂತಾರ ವಾಲಿಕರ||ಚ್ಯಾಲ||

ಮೆನಶಿನ ಸಾಹೆಬ ನೋಡಿದ ಗದ್ದಲ |
ವೋಡಿ೩ಹೋ೩[25]ದನಲ್ಲಾ ಗುಡಿಯ ಮರೀಗೆ
ಅಂಜಿ ಗಾಬರ‍್ಯಾಗಿ |
ಸಾಹೆಬನ ಮಂದಿಯ ಕಡದ
ಕುದರಿಯ ಬಡದ
ಹಾಕ್ಕಾರ ಮುತ್ತೀಗಿ ಅನಮನ ಇಲ್ಲವರ‍್ಗಿ |
ಮೆನಶಿನ ಸಾಹೆಬನ ಹಿಡದರೊ ಬಂದ |
ಹೆಡಮುರಗಿಯ ಬಿಗದ
ಧನೆನ ಇದರೀಗೆ | ನಿಂದರಸೆರ ಹೋಗಿ |
ಮೆನಶಿನ ಸಾಹೆಬ ಅಂತನ
ಕೊಲ್ಲಬೇಡ್ರಿ ಬಿಡರಿ ಕೈಶರಿ
ಬಿದ್ದೆನ ಕಾಲೀಗೆ ಇರತೆನ ಮಗನಾಗಿ |
ಬಾಬಾ ಸಾಹೆಬ ಮಾಡಲಿಲ್ಲ ದರಕರ
ಕೋದರೊ ಸಿರಾ |
ಇದ ಮೊದಲೀಗಿ ರಗತ ಬಟ್ಟ ಹಣಿಗೆ||ಯೇರ||

ಮೇನಶಿನ ಸಾಹೆಬನ ಮಾಡೆರ ಮೂರ ತುಂಡ |
ತೊಕೊಂಡರ ರುಂಡ | ತಿರಗಿತೊ ದಂಡ |
ನರಗುಂದ ವೂರ ಕಂಡ ಹೊಕ್ಕರ ವಳಿಯೇಕ |
ಪಿರಂಗ್ಯಾಗ ಸುದ್ದಿ ೪ಹೋ೪[26]ತಿ ಜಲ್ದ |
ಟೊಪ್ಪಿಗಿ ನೆಲಕ ವಗದಾ ಮಾಡತರ ದುಃಖ||೪||

ದಂಡ ತೊಗೊಂಡ ಬಂದರ ಪಿರಂಗೆರ |
ಮುಂನೂರ ಸೋಜರ | ಸಾವಿರ ಕರಿಬಾರಾ |
ಬಂತ ವತ್ತರ ವಳೆ ಸಿಟ್ಟೀಲಿ |
ಸುತಮುತ್ತ ಹಾಕಿದರ ಜ್ಯಾಲಾ
ಗಡದವರ್ಗೆ ಹಾದಿಲ್ಲ ಹೋಗತರ ಮೇಲೆ ||
ಗಡದವರು ವಗದರೊ ಗುಂಡ |
ಪಿರಂಗೆರನ ಕಂಡ |
ಸತ್ತಿತೊ ದಂಡ ಆದರೊ ಬಂಡಾ |
ಬಿದ್ದರೊ ಜಕಿಮಿಲಿ |
ಹೀಂಗ ಲಡಾಇ ಹತ್ತಿತೊ ಕಡಕ |
ಗುಂಡ ಯೇಕ ದುಮಕಬಿಟ್ಟರ ವತ್ತರಲಿ ||
ದಂಡ ಸತ್ತಿತಣ್ಣ ವಂದ ನೂರಾ |
ಅಂತರ ನಿರನೀರ ಇಲ್ಲ ಖಬರ |
ಕಯ್ಯನ ಹತಿಯರವುಳೆಡತರ ಚೆಲ್ಲಿ |
ಹೀಂಗಾತಿ ಪರಂಗೆನ ಗತಿ |
ಹೌವ್ವಹಾರೆತಿ | ಬಿದ್ದರ ಭೂಮಿ ಮೇಲೆ
ಮಸಲತ ಮಾಡಿದ ಸರ್ದರಾ |
ಮುಂನೂರ ಸೋಜರ | ಜಾಗಕೊಂನರ |
ತುಂಬಿಕೆರಬಾರ ಇಟ್ಟನ ಕದ್ದಿಲಿ |
ವಳಗಿಂದೊಳಗ ಪಿತುರ ಸಂದಾನಾ
ಮಾಡಿದ ಕಾರ್ಕುನ ಗಡಾದಮೇಲಿ||ಚ್ಯಾಲ||

ಪಿರಂಗೆರ ಹೋದ್ರ ಮೇಲಕ
ಗಡದ ಸನಿಯಕ ಹೋದರೊ ೧ಏ೧[27]ರಿ |
೨ಐ೨[28]ವತ್ತ ಕೂದರಿ |
ಗೊಲಂದಾಸ ನೋಡಿಕೆರತಾನ
ಮಾಡ್ಲಿಲ್ಲ ಅನಮಾನ
ಹಿಡದ ಮುಂಜ್ಯಾರಿ | ಹೊಡದ ತರತೂರಿ |
ಗಡದವರು ಇಳದರೊ ತೆಳಗ
ಸಿಟ್ಟ ಮನದಾಗ ಬೆಂಕಿಯಾ ಚೂರಿ
ಹಾರಿತೊ ಖಬರಿ |
ಗಡದವರ ತಿರಿವಿದರ ಬಂದ |
ಹತ್ತೆರ ೧ಬೆ೧[29]ನ್ಹಿಂದ
ಬಾಬಾ ಸಾಬ ದೊರಿ ಮಾಡೆನ ಶರಿಸೂರಿ||ಯೇರ||

ಗಪ್ಪಾದ ದಂಡ ಯೆದ್ದಿತಲ್ಲಾ
ಆದಿತ ಗಲಬಲ
ಗಡದವರ ಕೈಕಾಲ ಬಿಟ್ಟರೊ ಯಲ್ಲ
ಆಗಿನಾ ಕ್ಷಣಕ |
ಗಡದವರು ಹೋದರು ಮುರದ |
ಹಿಂದಕ ಸರದ ಅಗಸಿ ಬಾಗಿಲಕ||೫||

ದುಡ್ಡಿಗಾಸಿ ಮಾಡಿದ ಕಾರ್ಕುನ
ವುಂಡ ಅವರನ್ನ ತಿರಿಗಿಬಿದ್ದ ತಾನ
ಬರಲಿಲ್ಲ ಅಂತಃಕರಣ ಅವನ ಮನದಾಗ |
ಅಗಶಿ ಹಾಕ್ಸಿದಾನ ತಾನಿಂದ |
ದಂಡ ಬಾಳ ಬಂತ ತಗಿಯಬ್ಯಾಡ್ರೆಂವಗ |
ಇಷ್ಟ ಹೇಳಿ ಹೋದ ಗಡದ ಮೇಗ
ಮದ್ದ ತೊಶನಾಗ ಗೊಲಂದಾಸಗ
ಚೆಲ್ಲೆನ ಗಡದ ತೆಳಗ
ಮೋಸ ಮಾಡೆನಾಗ |
ಸಂಸ್ಥನಕ ಹಿಡರೊ ನೀರ |
ಹಿಂತ ಹಾರೂರ | ದುಡ್ಡಿನ ಕಾಲಾಗ |
ಪಿರಂಗ್ಯಾ ಮಾಡಿದನ ತಡಕ |
ಅಗಶಿ ಬಾಗಿಲಕ |
ಟೋಪ ಹಚಿ ನಾಕ
ವರದ ರಂಜಕ ಶಿಟ್ಟ ಮನದಾಗ |
ಅಗಶ್ಯಾಗ ಅತಿ ಗದ್ದಲ
ಹೊಗಿ ಕತ್ತಲ ಕಾಳಗಂವದಾಂಗ |
ಯರ್ಡು ದಂಡ ಬಿದ್ದವು ತಳಕ
ಕಡುತರ ಹೊಕ್ಕ ತೆಪ್ಪಸೆರ ದಿಕ್ಕ
ಇಲ್ಲದಲೆ ಲೆಬ್ಬ ಬಿದ್ದವ ಅಗಶ್ಯಾಗ |
ವೊಬ್ಬನ ಮಾರಿ ವೊಬ್ಬಗ ಕಾಣಂದಿಲ್ಲಾ
ಕೆಂದೂಳ ಹಾರಿತಲ್ಲಾ ತೆಕ್ಕಿ ಮಂಕ್ಕಿ ವಳಗ||ಚ್ಯಾಲ||

ದರಜಿಲ್ಲದ ಕಡುತರ ದಂಡ
ಹಾಕಿದತವರುಂಡ ಮುರುತರಗೋಗಿ
ಹೋಗತವ ಪ್ರಾಣ |
ವದ್ದಾಡತಾವ ಅವರ ದಡಾ
ಮುರದ್ದವ ನಡ ಹೊರಬಿದ್ದವ ಕಂಣ |
ಬಾಇ ತುಂಬ ಮಂಣ |
ಕಂದರೀವ ಕಡುತರ ಕಾಲಾ
ಬಿದ್ದವೊ ಬಾರಲ ಚುಂಚಿ ಬಾಲೇನ
ಅಂತಾರ ಧಿನಧೀನ |
ಹೆಣ ಆಗಿದಾವ ಚಿಪ್ಪಡಿ
ರಗತ ಸೂರೆಡಿ
ಮುಕ್ರಿದವ ನೊಣ ಸಾಂಬ ಭಗವಾನಾ |
ಸಪ್ಪಳಾಗತಾವ ತಡಪಡ ತೋಪ
ಧಡಬಡ ಬಿಟ್ಟರ ವಂದಸ೧ವs೧[30]ನ |
ಮಂಣಸೆರ೨ಸೈ೨[31]ನ||ಯೇರ||

ಅಗಸ್ಯಾಗ ದಿಕ್ಕಿಲ್ಲ ಯಾರೆರ |
ಹೆಕ್ಕರ ಸೋಜರ ಹಿಂಬಲ ಸರದರ
ಹಲ್ಲ ಕರಕರ ತಿಂನುತ ವಳಗ್ಹೊಕ್ಕಾ |
ಬಾಬ ಸಾಹೆಬ ಗಡದ ಆಸೆ ಬಿಟ್ಟಾ
ಕಯ್ಯ ಮುಗದ ಹೊಂಟ ಅಡಿವಿ ಅರೆಣಕ||೬||

ಬಾಬಾ ಸಾಹೆಬ ಹೋದನು ವೋಡಿ
ಪೊಲೊಸಿ ಸಾಹೆಬನ ನೋಡಿ
ಸುತಮುತ ಹುಡಿಕ್ಯಾಡಿ
ಹೋದನ ತೊರಗಲ ಕಡಿ
ಗುಡ್ಡ ನೋಡಿ ಸೋಸಿ |
ಕುದರಿ ಹೆಜ್ಜಿ ಹಿಡದರೊ ಕುನಾ
ಹೋದರ ಬೆಂನಬೆಂನ
ಹಿಡದರ ಅಡರಾಸಿ |
ಬಾಬಾ ಸಾಹೆಬ ಕಂಣಿಗ ತಂದ ನೀರ |
ಮನದ ಈಶ್ವರ
ಸ್ವಾಮಿ ಚಿದಂಬರ ವೆಂಕಟಪತಿ
ಪೂರ ಬಿಟ್ಟ ಮಂಣಗಸಿ
೧ಏ೧[32]ನಿಲ್ಲ ದೇವರ ಹಂತಕ
ಈಗಿನ ವ್ಯಾಳೆಕ ಆದ್ನಿ ಪರದೇಸಿ |
ಸುತಮುತ್ತ ಬಿಚಗತ್ತಿ ಸೋಜರ ಪಾರಾ |
ವೋದರ ಚಮತ್ಕಾರಾ
ಯೊಳ ಮಂದಿ ಸರದಾರಾ
ಮಾಡುನು ಅಂತಾರ ಚೂರ |
ಇವನ ಕಡಿಕಡಿಸಿ
ಬಾಬಾ ಸಾಬನ ಹಾಕಿದರ ಗಲ್ಲ
ತಡಾ ಮಾಡಲಿಲ್ಲ ತೀರಿತವನಾಸಿ ||
ನರಗುಂದದಾಗ ಇಲ್ಲ ಒಂದ ಪ್ರಾಣಿ
ಹೋದನೊ ಧಣಿ ಬಿಟ್ಟರೊ ಮನಿ
ಬಡಕೊಂಡರ‍್ಹಣಿಹಣಿ
ತಾಯಿ ಅತ್ತಿ ೨ಸೊ೨[33]ಸಿ
ಮಗನ ನೆನಸಿ ತಾಇ ಗಳಗಳ
ಆದಳ ತಳಮಳ
ಸತ್ತರು ನೆನ ನೆನಸಿ||ಚ್ಯಾಲ||

೩ಜೇ೩[34]ಷ್ಟ ಅಧಿಕ ಶುದ್ಧ ಪೂರ್ಣಮಾ
ಕಾಳಾಯುಂಕ್ತಾಕ್ಷಿ ನಾಮ ಇತ್ತ ಸಂವ೪ತ್ಸ೪[35]ರ |
ವಾರ ಮಂಗಳಾರ |
ಶ೫ಕ೫ಸತ್ರಾಸೆ ೬ಐಂ೬ಸಿ ವರಷ
ಅತಿ ಕೈವಸ
ಜೆಂಡೆ ಜರತರ ಹಚೆರ ಪಿರಂಗೇರ |
ಬಾಳ ದಿನ ಕುಂತ ಕಡದಾಡಿ
ಬಹದೂರ ಹೋದ ವೋಡಿ
ಬಂತ ಹುಂನಾರ ತೊಗೊಂಡರ ಇವರ |
ನರಗುಂದ ಮಾಡಿದರ ಲೂಟಿ
ಬಡದರೊ ಪ್ಯಾಟಿ
ಹೊಕ್ಕರ ಸೋ೧ಜ೧ರ ಕೆಡಸಿ ಹೆಂಗಸರ |
ಮುರಗೋಡ ವೂರ ಬಾಳ ಚಂದ
ಗಂವಿಶಿದ್ದಂದ ದಯಾ ಬರಪೂರ |
ಮುಗಿತ ಆಇತವಾರಾ||ಯೇರ||

ಧೊಂಡು ಪರಸ ಹೇಳಿದರ ಪದ |
ಡಬ್ಬಿನ ಮೇಗಿಂದಾ ನಿಶಾನಿ ಕಲ್ಲಿದಾ
ಬಾಬಾಜಿ ಅಂದ ಟೀಕ |
ರಾಣಂಕು ಬಂಣ ಮಾಡೆರ ಪಾವಡ
ಹಾಡತರ ಜೋಡ ವೈರಿಗೆ ಬಿತ್ತದಾಕ||೭||

ಕವಿ : ಪರಸ ಮತ್ತು ಬಾಬಾಜಿ
ಕೃತಿ : ಪ್ಲೀಟರು ಸಂಗ್ರಹಿಸಿದ ಲಾವಣಿಗಳು[1] ಕು

[2] ಪ್ರಿ

[3] ನೊ

[4] ಪ್ರಿ

[5] ಗೀಂ

[6] ಸ್ತ

[7]

[8] ಹೆ

[9] ಕೆ

[10] ನಿ

[11] ನೊ

[12] ಹೊ

[13] ಸೇ

[14] ಮೆ

[15] ಯ್ಯ

[16]

[17] ಹೆ

[18] ತೀ

[19] ಶಾಂ

[20]

[21]  ಹೆ

[22] ಡೆ

[23]

[24] ಗ್ಹೊ

[25] ಹೊ

[26] ಹೊ

[27]

[28]

[29] ಬೆಂ

[30] ವೇ

[31] ಶೈ, ಸೈ

[32]

[33] ಸೋ

[34] ಜೆ

[35] ತ್ಸ