ಅಳಧರ ನರುಗುಂದ ಸಂಸ್ಥಾನ
ಫಿತೂರ ಮಾಡಿದಾನ ಕಾರಕುನ
ಯಂದೆಂದಿಗಿ ಹೊಗದಂಥಾ
ಹಡ ತಗೊಂಡುರ ಮಂಗಳಾರ ದಿನಾ||ಪಲ್ಲಾ||

ಸಮಾಚ್ಯರ ಕುಂತ್ತಿರಚನಾ
ಮುಚ್ಚೆ ಮದಲ ಹುಟ್ಟಿದ ಕದನಾ
ಮುಚ್ಚಿ ಯೀಡುದಿಲ್ಲ ಬಿಚ್ಚಿ ಹೆಳತಿನ
ತೊಳೆದ ಕಾಲ್ಲಾಗ ಹುಟ್ಟಿದ ಕದನಾ
ಕರsಮಿಕದ ತೊಟ್ಟಿವಹಿನಾ
ಕೆಟ್ಟ ಸರದಾರ ಮಾಡಿಕವನಾ
ಹಲ್ಲಿಗೆ ಹರದ ಗುಂಡ ಹಾಕಿ ವಗಿರುತ್ತಾ
ಝಟಿ ಮುಟ್ಟಿ ಹೆಳ್ಯಾರ ವತನಾ
ದಂಡಿಗೆ ಬಿದ್ದಿತ ಅನಮಾನಾ
ಗೊತ್ತಾ ಹಚ್ಯರ ತೇಳೆದ ಖುನಾ
ಶಿಟ್ಟಿಗೆರಮದರ‍್ತಾಪಟಾಲಮ
ಶಿಡದ ನಿಂತು ಯೆಲ್ಲಾ ಶೆನಾ
ಚ್ಯಕರ ಮಾಡದೆವು ಯೀದಿನಾ
ಕೊಟ್ಟಾನಂಮ್ಮ ಹೊಟ್ಟಿಗೆ ಆಂನ್ನಾ
ಯಿಂನ್ನ ನಂಮ್ಮ ಕೈಲೆ ಆಗುದಿಲ್ಲುಂತ್ತಾ
ಹೋಗಿಬಿದ್ದಾರ ನಾನಾನ ಬೆಂನ್ನ
ಹಾರತ ಸಾಹೆಬನ ಅವಸಾನಾ
ಬರದ ಪತ್ತರಾ ಕಾರಕೂನಾ
ಯಿಲಾತಿದೊಳಗೆ ಯೊಳಮಂದಿ
ಗೊರನರ ಕೆಳ್ಯಾರು ವರ್ತಮಾನಾ
ಕರ ಮಂದಿ ಕರ್ನಾಟ ಚನಾ
ಆದಾರ ನಂಮ್ಮ ಮ್ಯಾಲೆ ಬೆಮಾನಾ
ಹುಕುಂ ಪರಕಾರ ಕಾರಕುನಾ
ಹೊಕ್ಕಿ ನೊಡ್ಯಾರೊ ಮನಿತಾನಾ
ಹತ್ಯಾರ ಯಿದ್ದವರು ಹಚವ ಮಾಡಾರ
ಯಿಲ್ಲದಿದ್ದರ ಕಳದಿನ ಮಾನಾ||ಚಾಲ||

ನಂಮ ಹಿರೆರ ಮಾಡಿದಂಥಾ
ಸಾಸರ ಹೊದಾರ ಯಲ್ಲಾ
ಚು ಕಡೆದ ಮ್ಯಾಲೆ ಹೆರ ಹ್ವಾದಾವ್ಹಣಾ
ಆಂದಿ ಕೈಮಿರ ಆದೆವೆಲ್ಲಾ
ಹೆಂಣ ಮಕ್ಕಳ ಸರ ಚ್ಯಪ್ಪೀನ ಟಂಬಾಕಿ
ಯಿತ್ತಾನಂದಾ ಕೈಯಾಗ ಹಿಡದ ಕರವಲ್ಲಾ
ಹೆಚಿಂದ ಪಿಸ್ತುಲಾ ಚಕ್ರ ವಗುವಾಗ ಭಾಲೆ
ಮಾಹಿತ ಯಿಲ್ಲಧಾಂಗ ಝಗಡತಿ ತಗೊರ
ಯಿರು ಅಂಥಾದೆಲ್ಲ ಸಾಮಾನಾ….*

[1]
…..ವ್ಯಾಡತ ಪಟೆ ಯಿತ್ತಾನಂದಾ
ಸುಳ್ಳಲ್ಲ ಸುರತಿ ಢಾಲ್ಲಾ
ಶುಣ ರಂಗಲಾಲ ತಕೊಂಡಾರ ಬಿರದಾ
ಟುಬಾಕಿ ಯಿತ್ತಾನಂದಾ ಕೈಯಾಗ ಹಿಡದ ಕರವಲ್ಲಾ
ಹೆಚಿಂದ ಪಿಸ್ತುಲಾ ಚಕ್ರವಗುವಾಗ ಭಾಲೆ
ಶರಚಿ ಭಿಲ್ಲ ಹೆಚ್ಚವಾದಾ ಬಾಕಿ
ಬಿಚ್ಯಾವ ಕತ್ತಿ ಕಟಾರ
ಶಂಣ್ಣ ಕೈಚುರ ವಟ್ಟಿಗೆ ಹನೊಂದಾ
ತಿರವ್ಯಾಡತ ಪಟೆ ಯಿತ್ತಾನಂದಾ
ಸುಳ್ಳಲ್ಲ ಸುರತಿ ಢಾಲ್ಲಾ
ಶುಣ ರಂಗಲಾಲ ತಕೊಂಡಾರ ಬಿರದಾ
ನಂಮ್ಮಾ ದುಖಾ ಹೇಳುಣ ಯಾರ ಮುಂದಾ
ಯಿರು ಹಂಥಾ ಶಿಪಾಯೆರ ನೋಡಿ
ಅಳತಾನ ಹೊಳ್ಳಿಡಿ ಕಂಣಿಗೆ ನಿರತಂದಾ
ಮಾಚ್ಚಿ ಕಾಲಿಲೆ ಹೊಕ್ಕಿತ ಚನಾ
ಮರೆದಿ ವುಳಿಲಿಲ್ಲ ಯೆನೆನಾ
ಚಲಮ ಮಾಡಿರ ಭೊಲಿ ಬಡದ ಕಂಡದರೊ
ವುಳಶಿ ಬಿಟ್ಟರೊ ಹಾಲು ಹೈನಾ||೧||

ಅಳಧರ ನರಗುಂದ ಸಂಸ್ಥಾನ || ಯೊಡನೆ
ಹು || ಶುತ್ತಾ ಮರದಿವಸಾ
ಮಾಡಬ್ಯಾಡರ ಅಲೆಸಾ
ಪಾಳೆಗಾರರಿಗೆ ಫಂದಿಗೆ ಹಚ್ಚಿ
ಹಿಡಿಬಾರದ ಅವರ ವಿಸ್ವಾಸಾ
ಮೆಣಶಿನ ಸಾಹೆಬ ಕೆಳ ಕ್ಯಾಶ್ಯಾ
ಹಡದ ಚರೆ ಮಾಡ್ಯಾನ ಮೊಸಾ
ಭೆಟಿಗೆ ಬಂದರೆ ಫಟ್ಟಿಲಹಿಡದು
ಲುಟಿ ಮಾಡಿದಾರ ಮುರತಾಸಾ
ಮುಧೋಳ ಮಾಹರಾತ ಕೆಳಿಕ್ಯಾಸಾ
ಮರುದಿನಾ ಕುತ್ತಾ ವುಪವಾಸಾ
ತಂನ್ನ ಮಡದಿಗೆ ಕರದ ಹೆಳತಾನ
ಬಂತ್ತಾ ನಮಗ ಮನದೆಸಾ
ಚಾಂಬುಟಿ ದೆಸಾಯಿ ವಳೆ ಖಾಸಾ
ಘಟ್ಟಿ ಮಾಡಿಕೊಂಡಾನ ಮನಸಾ
ಹತ್ಯಾರ ಯೆಲ್ಲಾ ವೊದ ಕೊಟ್ಟರೆ
ಬಿಡತಾನಂಬೊದು ಭರವಸಾ||ಚಾಲ||

ಶಿರಸಂಗಿ ದೇಸಾಯಂನ ಕರಶಿ
ಹತ್ಯಾರ ಕೆಳ್ಯಾರೊ ರುಮೊಶಿ
ಹುದಲಿ ಅಂಣಾ ಸಾಹೆಬನ ಬೆದ್ದರರೆ
ಹತ್ಯಾರ ಹೊರಗಳ ಹೊರಶಿ
ತೊರಗಲ್ಲ ಚಿಮಣಾ ಸಾಹೋಗ ಕರಶಿ
ಕೊಟ್ಟ ಹತ್ಯಾರ ಕಂಣಾಗಿ ನೀರ ಸುರಶಿ
ರಾಮದುರಗದ ಅಪ್ಪಾ ಸಾಹೇಬಗ ತರಶಿ
ಹತ್ಯಾರ ಕೊಟ್ಟಾರೊ ವಪ್ಪಿಶಿ
ಸುರಪುರ ನಾಯಿಕ ಅಂವ ಭಂಟಾ
ನಿತ್ತ ಮಾಡಲಿಲ್ಲ ಲಡಾಯಿ
ಸುಳ್ಳ ಬಂಡಾಯಿ ಹಳ್ಳಿಗೊಳ ಸುಟ್ಟ
ಮಲ್ಹಾಡ ನಾಡಗ ಅಂವ ಶಿಷ್ಟ
ತಳೆವಾಡಿ ಪೂಂಡ
ಸಂವತ್ತಾ ಮಾಡ್ಯಾನ ಕಸರತಾ
ಕೊಧಾಂಗ ಹಶಿಧಂಟ್ಟಾ
ಮುಂಡರಗಿ ಭಿಮರಾಯನ ಆಟಾ
ನಿತ್ತಾ ಮಾಡಲಿಲ್ಲ ಲಢಾಯಿ ಸುಳ್ಳ ಬಂಡಾಯಿ
ಹೊದಾರ ಬಿಟಕೊಟ್ಟ
ಯಿಂಗ್ರಚರಗೆ ಹೊಗಿ ಬಿತ್ತಾ ಗಂಟ
ಮುರದಿತ್ತಾ ಸೊಜರ ದಂಡಾ
ಹೆಣಾ ಹೊತಕೊಂಡ ದಿನಾಯೊಳೆಂಬ
ಹಿಡದ ಹಳ್ಳಿ ಹಳಬರನ ಕಟ್ಟಿ||ಯಿಲ್ಲ||

ಸಾಮೊದ ಜನಾ ಛಂದ ಮಾಡಿ
ಹಿಡಬೆಕಂದರ ಆಗಲಿಲ್ಲ ಆವರ ಸ್ವಾಧಿನಾ ||
ಆಳಧರ ನರಗುಂದ ಸಂಸ್ಥಾನ ||೨||

ಕವಿ : ಅಜ್ಞಾತ
ಕೃತಿ : ಪ್ಲೀಟರು ಸಂಗ್ರಹಿಸಿದ ಲಾವಣಿಗಳು


[1] *  ಒಂದು ಪುಟದ ಅಡಿಯಲ್ಲಿ ಇನ್ನೊಂದು ಪುಟ ಸೇರಿ, ಅಡಿಯ ಪುಟ ಪೂರ್ತಿ ಆಗಿಲ್ಲವೆನ್ನಿಸುತ್ತದೆ.