ಚಿಕ್ಕನಾಯಕನಹಳ್ಳಿ ಬಯಲು ಸೀಮೆಯ ಭವ್ಯತಾಣ ಕಾಡು ಕಡಿಮೆ ಮಳೆಯು ಕಡಿಮೆ ಅಲ್ಲಲ್ಲಿ ಬೋಳುಕಣಿವೆ ಗುಡ್ಡಗಳಿವೆ. ಸಮೃದ್ದ ಖನಿಜ ಸಂಪತ್ತಿದೆ. ಇತಿಹಾಸ ಕಾಲದಲ್ಲಿ ರಾಷ್ಟ್ರಕೂಟರು ಕಲ್ಯಾಣ ಚಾಲುಕ್ಯರು ಹೊಯ್ಸಳರು ವಿಜಯನಗರ ಮತ್ತು ಮೈಸೂರು ಅರಸರು ಆಳಿದ ಪ್ರದೇಶ ಪಾಳೇಗಾರರಲ್ಲಿ ಎರಡನೆಯವನಾದ ಸಾಲಿನಾಯಕನು (೧೫೫೪ ರಿಂದ ೧೫೮೦) ತನ್ನ ತಮ್ಮ ಚಿಕ್ಕನಾಯಕನ ಶೌರ್ಯ ಸಾಹಸಗಳನ್ನು ಮೆಚ್ಚಿ. ಅವನ ಹೆಸರನ್ನು ತಾನು ಸ್ಥಾಪಿಸಿದ ಪಟ್ಟಣಕ್ಕೆ ಇಟ್ಟನಂತೆ ಅದೇ ಚಿಕ್ಕನಾಯಕನಹಳ್ಳಿ ಎಂದು ಹೆಸರಾಗಿದೆ.

 

ಗೋಡೆಕೆರೆ ಗುರುಸಿದ್ದರಾಮೇಶ್ವರ ಸ್ವಾಮಿ ತಪೋವನ

ದೂರ ಎಷ್ಟು?
ತಾಲ್ಲೂಕು : ಚಿ.ನಾ.ಹಳ್ಳಿ
ತಾಲ್ಲೂಕು ಕೇಂದ್ರದಿಂದ: ೧೦ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೭೦ ಕಿ.ಮೀ

ಇದಕ್ಕೆ ಮೊದಲು ಕಾರೆಹಳ್ಳಿ ಎಂಬ ಹೆಸರಿತ್ತು. ವೀರಶೈವ ಶರಣರಲ್ಲಿ ಒಬ್ಬನಾದ ಸಿದ್ಧರಾಮರು ಸಂಚರಿಸುವಾಗ ಮಾರ್ಗ ಮದ್ಯದಲ್ಲಿ ಭಕ್ತನೊಬ್ಬನಿಂದ ತುಂಡು ಗೋಡೆಯೊಂದನ್ನು ಬಿಕ್ಷೆಯಾಗಿ ಪಡೆದು, ಅದರ ಮೇಲೆ ಕುಳಿತು ಆಕಾಶ ಮಾರ್ಗವಾಗಿ ಸಂಚರಿಸಿ ಕಾರೆಹಳ್ಳಿಯ ಕೆರೆಯೊಳಕ್ಕೆ ಇಳಿದು ಅಲ್ಲಿ ಗದ್ದುಗೆಯನ್ನು ಸ್ಥಾಪಿಸಿದನು ಇದರಿಂದ ಆ ಊರಿಗೆ ಗೋಡೆಕೆರೆ ಎಂದು ಹೆಸರು ಬಂದಿತು. ಇಲ್ಲಿ ವಿಶಾಲವಾದ ತಪೋವನ ಇದ್ದು ಯಲವತ್ತಹಣ್ಣು ವಿಶೇಷವಾಗಿದೆ.

 

ತೀರ್ಥಪುರ

ದೂರ ಎಷ್ಟು?
ತಾಲ್ಲೂಕು : ಚಿ.ನಾ.ಹಳ್ಳಿ
ತಾಲ್ಲೂಕು ಕೇಂದ್ರದಿಂದ: ೧೦ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೮೦ ಕಿ.ಮೀ

ತೀ.ನಂ.ಶ್ರೀಕಂಠಯ್ಯ ( ೧೯೦೬ ರಿಂದ ೧೯೬೬ ) “ಸಂಯಮ ಬಾಳಿನ ಒಂದು, ಆಂತರಿಕ ರೀತಿ ಸಭ್ಯತೆ, ಅದು ಹೊರಗೆ ವ್ಯಕ್ತವಾಗುವ ರೀತಿ” ಎಂದು ನುಡಿದಿರುವ ತೀ.ನಂ ಶ್ರೀ ರವರು ಜನಿಸಿದ್ದು ತೀರ್ಥಪುರದಲ್ಲಿ, ತಂದೆ ನಂಜುಂಡಯ್ಯ ತಾಯಿ ಬಾಗೀರಥಮ್ಮ. ತೀ.ನಂ.ಶ್ರೀರವರು ರೆವಿನ್ಯೂ ಇಲ್ಲಖೆಯಲ್ಲಿ ಕೆಲಸಕ್ಕೆ ಸೇರಿ, ಅದನ್ನು ತ್ಯಜಿಸಿ ಅಧ್ಯಾಪಕ ವೃತ್ತಿಗೆ ಬಂದರು. ಭಾರತೀಯ ಕಾವ್ಯ ಮೀಮಾಂಸೆ ಇವರ ಪ್ರಮುಖ ಕೃತಿ. ಈ ಕೃತಿಗೆ ಪಂಪ ಪ್ರಶಸ್ತಿ ದೊರೆತಿದೆ.

 

ಹಿಂದೂ ಮುಸ್ಲಿಮ್ ಭಾವೈಕ್ಯತೆ ಸಂಕೇತವಾದ ತಾತಯ್ಯನವರ ಘೋರಿ

ದೂರ ಎಷ್ಟು?
ತಾಲ್ಲೂಕು : ಚಿ.ನಾ.ಹಳ್ಳಿ
ತಾಲ್ಲೂಕು ಕೇಂದ್ರದಿಂದ: ೦ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೭೦ ಕಿ.ಮೀ

ಜಾತಿ ಧರ್ಮಗಳ ಬೇದವಿಲ್ಲದೆ ಹಿಂದೂ ಮುಸ್ಲಿಮ್ ಭಾವೈಕ್ಯತೆಯ ಸಂದೇಶವನ್ನು ಸಾರಿ ತಮ್ಮ ಪವಾಡಗಳಿಂದ ಜನಮನ ಸೂರೆಗೊಂಡಿದ್ದರು. ಭಕ್ತನೊಬ್ಬನು ಬಡತನದ ನೋವಿನಿಂದ ತಾತಯ್ಯನವರನ್ನು ಕೇಳಿಕೊಂಡು ಪರಿಹಾರ ಕಾಣಲು ಬಂದಾಗ, ಹುತ್ತದೊಳಗೆ ಹೋಗುತ್ತಿದ್ದ ಹಾವನ್ನು ಕಂಡ ತಾತಯ್ಯನವರು ಅದನ್ನು ಹಿಡಿದುಕೊ, ನಿನ್ನ ಕಷ್ಟ ಪರಿಹಾರವಾಗುವುದು ಎಂದಾಗ, ಭಕ್ತನು ಹೆದರಿದನು. ಆಗ ತಾತಯ್ಯನವರು ಹೆದರಬೇಡ ದೈರ್ಯವಾಗಿ ಹಿಡಿದುಕೊ ಎನ್ನುವಷ್ಟರಲ್ಲಿ ಹಾವಿನ ಬಾಲ ಮಾತ್ರ ಹುತ್ತದ ಹೊರಗಿತ್ತು. ಭಕ್ತನು ಆ ಬಾಲವನ್ನು ಹಿಡಿದ ತಕ್ಷಣ, ಅದು ಚಿನ್ನವಾಗಿ ಮಾರ್ಪಟ್ಟಿತು. ಹೀಗೆ ನೂರಾರು ಪವಾಡಗಳಿಂದ ಪವಾಡಪುರುಷರೆನಿಸಿದ್ದಾರೆ. ಘೋರಿ ಸ್ಥಳದಲ್ಲಿ ನಡೆಯುವ ತಾತಯ್ಯನ ಉರುಸ್ ಪ್ರಸಿದ್ದಿಯಾಗಿದೆ.

 

ಮದಲಿಂಗ ಕಣಿವೆ

ದೂರ ಎಷ್ಟು?
ತಾಲ್ಲೂಕು : ಚಿ.ನಾ.ಹಳ್ಳಿ
ತಾಲ್ಲೂಕು ಕೇಂದ್ರದಿಂದ: ೧೦ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೮೦ ಕಿ.ಮೀ

ಇದನ್ನು ಸುತ್ತು ಕಣಿವೆಯಂತಲೂ ಕರೆಯುತ್ತಾರೆ. ಚಿಕ್ಕನಾಯಕನಹಳ್ಳಿಯಿಂದ ತೀರ್ಥಪುರಕ್ಕೆ ಹೋಗುವ ಹಾದಿಯಲ್ಲಿ ಈ ಕಣಿವೆಯನ್ನು ಕಾಣಬಹುದು. ಸಹಜ ಸುಂದರ ನಿಸರ್ಗದ ಈ ತಾಣ ಕಾವ್ಯಸ್ಪೂರ್ತಿಯ ತಾಣವಾಗಿದೆ.

ಮಾಸ್ತಿಯವರ “ಮದಲಿಂಗ ಕಣಿವೆ”- ನೀಳ್ಗವನ ಈ ಕಣಿವೆಯನ್ನಾದರಿಸಿದೆ.

 

ಗಾಳಿಯಂತ್ರಗಳಿಂದ ವಿದ್ಯುತ್ ತಯಾರಿಸುವ ನೋಟ:

ದೂರ ಎಷ್ಟು?
ತಾಲ್ಲೂಕು : ಚಿ.ನಾ.ಹಳ್ಳಿ
ತಾಲ್ಲೂಕು ಕೇಂದ್ರದಿಂದ: ೩೦ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೮೦ ಕಿ.ಮೀ

ಗಾಣದಾಳು-ಶಿರಾ ರಸ್ತೆಯಲ್ಲಿ ಹೊಯ್ಸಳ ಕಟ್ಟೆ ಗೀಟ್ ನಿಂದ ೮ ಕಿ.ಮೀ ದೂರದಲ್ಲಿ ಮಲೇನೂರು ಸಮೀಪದ ಬೆಟ್ಟಾಗುಡ್ಡಗಳ ಕಣಿವೆಯಲ್ಲಿ ಸ್ಥಾಪಿಸಿದೆ, ಗಾಳಿಯಿಂದ ವಿದ್ಯುತ್ ಉತ್ಪಾದನೆ ಮಾಡುವಲ್ಲಿ ಇವು ಸಹಕಾರಿಯಾಗಿವೆ. ಹೊಸದುರ್ಗ-ಶಿರಾ ತಾಲ್ಲೂಕು ಗುಡ್ಡದ ಸಮೀಪದಲ್ಲಿ ೧೨ ಸ್ವೀಕೃತಿ ಕೇಂದ್ರಗಳು ಮತ್ತು ೪೩ ಯಂತ್ರಗಳು ಕಾರ್ಯನಿರ್ವಹಿಸುತ್ತಿವೆ. ಇವು ಖಾಸಗಿ ಕಂಪನಿಯ ಒಡೆತನದಲ್ಲಿದ್ದು, ಆಂಧ್ರಪ್ರದೇಶ ರಾಜ್ಯಕ್ಕೆ ವಿದ್ಯುತ್ ಪೂರೈಕೆ ಮಾಡುತ್ತಿವೆ.

 

ಯೋಗಮಾಧವ ಸ್ವಾಮಿ ದೇವಾಲಯ, ಶೆಟ್ಟೀಕೆರೆ

ದೂರ ಎಷ್ಟು?
ತಾಲ್ಲೂಕು : ಚಿ.ನಾ.ಹಳ್ಳಿ
ತಾಲ್ಲೂಕು ಕೇಂದ್ರದಿಂದ: ೮ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೭೮ ಕಿ.ಮೀ

ಹೊಯ್ಸಳರ ಕಾಲದ ಅಗ್ರಹಾರ ವಿದ್ದಿತು. ಈ ಗ್ರಾಮದಲ್ಲಿ ಕಲಾ ದೃಷ್ಟಿಯಿಂದ ಮುಖ್ಯವಾದ ದೇವಾಲಯ ಯೋಗಮಾದವ ದೇವಾಲಯವಾಗಿದ್ದು, ಇದು ತ್ರಿಕೂಟ ಮಾದರಿಯಲ್ಲಿದೆ. ಈ ದೇವಾಲಯವು ನಕ್ಷತ್ರಾಕಾರವಾಗಿರುವ. ಈ ದೇವಾಲಯವು ನಕ್ಷತ್ರಾಕಾರವಾಗಿರುವ. ಮೂರು ಅಡಿ ಎತ್ತರದ ಜಗಲಿಯ ಮೇಲೆ ನಿರ್ಮಿತವಾಗಿದೆ. ದೇವಾಲಯದ ಗೋಡೆಯು ಐದು ಚಿತ್ರಪಟ್ಟಿಕೆಗಳನ್ನು ಒಳಗೊಂಡಿದೆ. ಗೋಡೆಯ ಮೇಲೆ ಸಣ್ಣ ಗೋಪುರಗಳಿವೆ. ವಿಮಾನವು ನಾಲ್ಕು ಸಾಲು ಶಿಖರಗಳನ್ನು ಹಾಗೂ ಕಲ್ಲಿನ ಕಳಸವನ್ನು ಹೊಂದಿದೆ. ಗರುಡ ಪೀಠದ ಮೇಲೆ ೯ ಅಡಿ ಯೋಗಮಾಧವನ ಸುಂದರ ವಿಗ್ರಹವಿದೆ.

 

ಬೋರನ ಕಣಿವೆ ಜಲಾಶಯ

ದೂರ ಎಷ್ಟು?
ತಾಲ್ಲೂಕು : ಚಿ.ನಾ.ಹಳ್ಳಿ
ತಾಲ್ಲೂಕು ಕೇಂದ್ರದಿಂದ: ೩೫ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೧೦೦ ಕಿ.ಮೀ

ಬೋರನ ಕಣಿವೆ ನೀರಾವರಿ ಯೋಜನೆಯನ್ನು ಸರ್.ಎಂ. ವಿಶ್ವೇಶ್ವರಯ್ಯನವರ ಮಾರ್ಗದರ್ಶನದಲ್ಲಿ ಕ್ರಿ.ಶ. ೧೮೬ ರಲ್ಲಿ ನಿರ್ಮಿಸಲಾಗಿದೆ. ಮೈಸೂರು ಅರಸರು ಶಂಕು ಸ್ಥಾಪನೆಯನ್ನು ಮಾಡಿದ್ದಾರೆ. ಈ ಯೋಜನೆ ೩೬ ಅಡಿ ಎತ್ತರವಿದ್ದು, ಸುವರ್ಣಮುಖಿ ನದಿಗೆ ನಿರ್ಮಿಸಲಾಗಿದೆ. ಈ ಅಲಾಶಯ ೧೯೭೫ ಮತ್ತು ೨೦೦೦ ನೇ ವರ್ಷಗಳಲ್ಲಿ ಮಾತ್ರ ಪೂರ್ಣ ತುಂಬಿದ ಉದಾಹರಣೆಗಳಿವೆ. ಜಿಲ್ಲೆಯ ರೈತರ ಪ್ರಮುಖ ಜೀವನಾಡಿಯಾಗಿದೆ.