ಕರ್ನಾಟಕ ಮಾದರಿ ಸರ್ಕಾರಿ ಪ್ರಾಥಮಿಕಶಾಲೆ-ಚಿಕ್ಕಬಳ್ಳಾಪುರ

ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರದಿಂದ ದೂರ : ೦೦ಕಿ.ಮೀ

 

ಸರ್.ಎಮ್. ವಿ. ಮಾಧ್ಯಮಿಕ ವಿದ್ಯಾಭ್ಯಾಸ ಮಾಡಿದ ಶಾಲೆ

ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯನವರು ಮಾಧ್ಯಮಿಕ ಶಿಕ್ಷಣವನ್ನು ಪಡೆದಶಾಲೆ ಈಗಿನ ಕರ್ನಾಟಕ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ.ಪೌಂಡೇಷನ್ ರವರು ಸರ್,ಎಮ್. ವಿ ಅಗಸ್ತ  ವಿಜ್ಞಾನಕೇಂದ್ರವನ್ನು ಪ್ರಾರಂಭಿಸಿ ಜಿಲ್ಲೆಯ ಶಿಕ್ಷಕರಿಗೆ ಹಾಗೂ ಮಕ್ಕಳಿಗೆ ವಿಜ್ಞಾನ ವಿಷಯಗಳ ಮಾರ್ಗದರ್ಶನ ನೀಡುತ್ತಿದ್ದಾರೆ.ಈ ಶಾಲೆಯು ಆವರಣದಲ್ಲಿ ಸರ್ಕಾರಿ ಸಂಯುಕ್ತ ಪದವಿ ಪೂರ್ವಕಾಲೇಜು,ಉಪನಿದೇರ್ಶಕರ ಕಚೇರಿ, ಡಿ.ವೈ.ಪಿ.ಸಿ.ಒ ಕಚೇರಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ. ಬಿ.ಆರ್.ಸಿ., ಸಿ.ಆರ್.ಸಿ ಉರ್ದು ಮಾಧ್ಯಮಿಕ ಶಾಲೆ ಇತ್ಯಾದಿ ಸರ್ಕಾರಿ ಶಕ್ಷಣಿಕ ಸಂಸ್ಥೆಗಳ ಸಮುಚ್ಛಯವೇ ಇದೆ.

 

ನಂದಿಬೆಟ್ಟ

ತಾಲ್ಲೂಕು ಮತ್ತು ಜಿಲ್ಲಾಕೇಂದ್ರ :೨೧ ಕೀ.ಮೀ
ಎತ್ತರ : ಸಮುದ್ರಮಟ್ಟದಿಂದ ೪೮೫೦ ಅಡಿ.

ನಂದಿಬೆಟ್ಟ

ಗಂಗರ, ಚೋಳರ ಶಾಸನಗಳಲ್ಲಿ ನಂದಿಗಿರಿ ಎಂದು ಗುರುತಿಸಲ್ಪಟ್ಟಿರುವ ಇದು ಕರ್ನಾಟಕದ ಪ್ರಸಿದ್ಧ ಗಿರಿಧಾಮ. ಉತ್ತರ ಪಿನಾಕಿನಿ, ದಕ್ಷಿಣ ಪಿನಾಕಿನಿ, ಚಿತ್ರಾವತಿ, ಅರ್ಕಾತಿ ಮತ್ತು ಪಾಪಾಘ್ನಿ ನದಿಗಳ ಮೂಲವಾದ ಈ ಬೆಟ್ಟಕ್ಕೆ ಕೂಷ್ಮಾಂಡ ಗಿರಿಯೆಂಬ ಹೆಸರು ಇದೆ,ಬೆಟ್ಟದ ಮೇಲಿನ ಕೋಟೆಯನ್ನು ಕಟ್ಟಲು ಪ್ರಾರಂಭಿಸಿದವರು ಚಿಕ್ಕಬಳ್ಳಾಪುರದ ಪಾಳೇಗಾರರು. ನಂತರ ಹೈದರಾಲಿ ಮತ್ತು ಟಿಪ್ಪು ಇದನ್ನುಪೂರ್ಣಗೊಳಿಸಿದರು.ದ್ರಾವಿಡ ಶೈಲಿಯಲ್ಲಿ ಚೋಳರಕಾಲದಲ್ಲಿ ನಿರ್ಮಿಸಲ್ಪಟ್ಟ ಯೋಗನಂದೀಶ್ವರ ದೇವಸ್ಥಾನ ಇಲ್ಲಿನ ಪ್ರಮುಖ ಆಕರ್ಷಕ. ೧೯೨೭ರಲ್ಲಿ ಮಹಾತ್ಮ ಗಾಂಧಿಯವರು ೪೭ ದಿನ ತಂಗಿದ್ದರು. ಆಗ ಅವರು ಉಳಿದುಕೊಂಡಿದ್ದ ಕನ್ನಿಂಗ್ ಹ್ಯಾಂ ಲಾಡ್ಜ್ ಇಂದು ಗಾಂಧಿ ನಿಲಯವೆಂದು ಹೆಸರುವಾಸಿಯಾಗಿದೆ.೧೯೩೨ ನವೆಂಬರ್ನಲ್ಲಿ ರಾಷ್ಟ್ರಕವಿ ಕುವೆಂಪುರವರು ಸಹ ಭೇಟಿಯಿತ್ತಿದ್ದರು.೧೯೮೫ ರಲ್ಲಿ ಇಲ್ಲಿ ಸಾರ್ಕ್ ಸಮ್ಮೇಳನವೂ ನಡೆದಿತ್ತು. ಟಿಪ್ಪು ಡ್ರಾಪ್,ಹೈದರ್ ಡ್ರಾಪ್,ಅಮೃತಸರೋವರ,ಕಬ್ಬನ್ ಹೌಸ್,ಟಿಪ್ಪುವಿನ ಬೇಸಿಗೆ ಅರಮನೆ,ಕುದುರೆ ಮೆಟ್ಟಿಲು ಮತ್ತು ವೀರಭದ್ರ ದೇವಾಲಯ ಇಲ್ಲಿನ ಪ್ರಮುಖ ಆಕರ್ಷಣೆಗಳು.

 

ನಂದಿಗ್ರಾಮ

ಜಿಲ್ಲಾ ಕೇಂದ್ರದಿಂದ : ೮ ಕಿ.ಮೀ.


ನಂದಿಗ್ರಾಮದಲ್ಲಿರುವ ಭೋಗನಂದೀಶ್ವರ ದೇವಸ್ಥಾನ, ಕರ್ನಾಟಕದಲ್ಲಿನ ದ್ರಾವಿಡ ಶೈಲಿಯ ದೇವಸ್ಥಾನಗಳಲ್ಲಿ ಇದು ಅತ್ಯಂತ ಪ್ರಮುಖವಾದದ್ದು.ಉತ್ತಮ ಕಲಾತ್ಮಕತೆಯಿಂದ ಕೂಡಿದ ಶಿಲ್ಪಕಲೆ ಈ ದೇವಸಸ್ಥಾನದ ಮುಖ್ಯ ಆಕರ್ಷ್‌ಣೆಯ ಮೂಲ.ಗರ್ಭಗೃಹ ಗಂಗರ  ಕಾಲದ್ದಾದರೂ  ನಂತರ ಚೋಳರು, ಹೊಯ್ಸಳರು, ವಿಜಯನಗರದ ಅರಸರ ಕಾಲಗಳಲ್ಲಿಯೂ ಇದು ವಿಸ್ತರಿಸಲ್ಪಟ್ಟಿದೆ. ಸುಮಾರು ಕ್ರಿ.ಶ ೪೦೦ ರ ಕಾಲಕ್ಕೆ ಬಾಣರ ರಾಜ ವಿದ್ಯಾಧರನ ರಾಣಿ ರತ್ನಾವಳಿಯು ಈ ದೇವಾಲಯವನ್ನು ನಿರ್ಮಿಸಿದಳೆಂಬ ಅಭಿಪ್ರಾಯವಿದೆ. ಈ ಗ್ರಾಮದ ಪಶ್ಚಿಮಕ್ಕೆ ಸುಮಾರು ೩ ಕಿ.ಮೀ. ದೂರದಲ್ಲಿ ಕಣಿವೆ ಬಸವನ ದೊಡ್ಡ ಶಿಲಾವಿಗ್ರಹವೊಂದಿದೆ. ನೈರುತ್ಯಕ್ಕೆ ಜೈನ ಶಾಸನ ದೊರೆತ ಗೋಪಿನಾಥಬೆಟ್ಟವಿದೆ.

 

ಮುದ್ದೇನಹಳ್ಳಿ

ತಾಲ್ಲೂಕು ಕೇಂದ್ರದಿಂದ: ೬ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೬ ಕಿ.ಮೀ

ವಿಶ್ವೇಶ್ವರಯ್ಯನವರ ಸಮಾದಿ

ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯನವರ ಜನ್ಮ ಸ್ಥಳ.ಅವರು ಹುಟ್ಟಿ ಬೆಳೆದ ಮನೆಯನ್ನು ನೋಡಬಹುದು.ಅವರು ಕಟ್ಟಿಸಿ ವಾಸಿಸುತ್ತಿದ್ದ ಮನೆಯನ್ನು ಈಗ ವಸ್ತು ಸಂಗ್ರಹಾಲಯವನ್ನಾಗಿ ಮಾರ್ಪಡಿಸಲಾಗಿದೆ.ದೇಶ ವಿದೇಶಗಳಲ್ಲಿ ಅವರು ಪಡೆದ ಅನೇಕ ಪ್ರಶಸ್ತಿಗಳು,ಗೌರವಗಳು.ಅವರ ಜೀವನದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ ಚಿತ್ರಗಳನ್ನು ನೋಡಬಹುದು. ಶ್ರೀಯುತರು ಆಂಧ್ರ – ಮಂgಂμಂಔಛಿUಂಳಲ್ಲೂ ತಮ್ಮ ನಿರ್ಮಾಣ ಪರಿಣಿತ ಜ್ಞಾನದಿಂದಾಗಿ ಅಲ್ಲಿಯೂ ನಿತ್ಯ ಸ್ಮರಣೀಯರಾಗಿದ್ದಾರೆ. ಸಮೀಪದಲ್ಲೆ ಸತ್ಯಸಾಯಿ ವಿದ್ಯಾಸಂಸ್ಥೆಗಳನ್ನು ನೋಡಬಹುದು

 

ಪಾಪಾಗ್ನಿ

ತಾಲ್ಲೂಕು ಕೇಂದ್ರದಿಂದ: ೪ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೪ ಕಿ.ಮೀ

ಬೆಟ್ಟಸಾಲುಗಳ ನಡುವೆ ಮನಮೋಹಕ ಪರಿಸರದಲ್ಲಿರುವ ಈ ಸ್ಥಳ ಆಕರ್ಷಕವಾಗಿದೆ. ತೆಲುಗಿನಲ್ಲಿ ಕಾಲಜ್ಞಾನಿ ಎಂದು ಪ್ರಸಿದ್ಧರಾಗಿರುವ ಶ್ರೀ ಪೋತಲೂರಿ ವೀರಬ್ರಹ್ಮಯ್ಯನವರು ಹುಟ್ಟಿದ ಜಾಗವೆಂದು ಇಲಿರುವ ಮಠವನ್ನು ಗುರ್ತಿಸುತ್ತಾರೆ.

 

ರಂಗಸ್ಥಳ

ತಾಲ್ಲೂಕು ಕೇಂದ್ರದಿಂದ: ೪ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೪ ಕಿ.ಮೀ

ಇಲ್ಲಿನ ರಂಗನಾಥ ಸ್ವಾಮಿಯ ದೇವಾಲಯವು ಹೊಯ್ಸಳರ ಕಾಲದ ಬೃಹತ್ ದೇಗುಲ. ದೇವಾಲಯದ ಮಹಾದ್ವಾರ ದಕ್ಷಿಣಾಭಿಮುಖವಾಗಿದ್ದು ಸುಂದರವಾದ ಮುಖಮಂಟಪವನ್ನು ಒಳಗೊಂಡಿದೆ. ಮುಖಮಂಟಪದ ಸುತ್ತಲೂ ಸುಂದರ ಕೆತ್ತನೆಯಿಂದ ಕೂಡಿದ ೨೪ ಶಿಲಾಸ್ತಂಭಗಳಿರುವ ಹಜಾರವಿದೆ. ವಿಜಯನಗರ ಶೈಲಿಯಲ್ಲಿರುವ ಈ ದೇವಸ್ಥಾನದ ಸೂರಿನಲ್ಲಿರುವ ಕಲ್ಲಿನ ಬಳೆಗಳು ಪ್ರಮುಖ ಆಕರ್ಷಣೆ. ಈ ದೇವಾಲಯದ ಪಶ್ಚಿಮಕ್ಕೆ ಜ್ವಾಲಾ ನರಸಿಂಹಸ್ವಾಮಿ ಬೆಟ್ಟ ಇದೆ.

 

ಶ್ರೀನಿವಾಸ ನಗರ
ತಾಲ್ಲೂಕು ಕೇಂದ್ರದಿಂದ: ೪ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೪ ಕಿ.ಮೀಕೆರೆ ಕೋಡಿ ಹೋದಾಗ ಕಟ್ಟೆಯ ಮುಂದೆ ಕಾಣುವ ಸುಂದರ ದೃಶ್ಯ. 3

ಜಿಲ್ಲೆಯ ಅತಿ ದೊಡ್ಡ  ಕೆರೆಗಳಲ್ಲಿ ಇದೂ ಒಂದು. ಚಿಕ್ಕಬಳ್ಳಾಪುರದಿಂದ ಗೌರಿಬಿದನೂರು ಮಾರ್ಗದಲ್ಲಿರುವ ಈ ಕೆರೆಯು ಸರ್. ಎಂ. ವಿಶ್ವೇಶ್ವರಯ್ಯನವರ ಮಾರ್ಗದರ್ಶನದಲ್ಲಿ ನಿರ್ಮಾಣವಾಗಿದೆ. ಹೆಚ್ಚು ಅಗಲ ಮತ್ತು ಎತ್ತರದ ಕಟ್ಟೆ ಹೊಂದಿರುವ ಕೆರೆ. ಮೀನುಗಾರಿಕೆ ಮತ್ತು  ವ್ಯವಸಾಯಕ್ಕೆ ಉಪಯೋಗವಾಗುತ್ತಿರುವ ಕೆರೆ.