ಚಿಕ್ಕಬಳ್ಳಾಪುರ ಜಿಲ್ಲೆ

 ಚಿಕ್ಕಬಳ್ಳಾಪುರ ತಾಲ್ಲೂಕು :

ಸ್ಕಂದಗಿರಿ ಅಥವಾ ಕಳವಾರಬೆಟ್ಟ: ಮನಸೂರೆಗೊಳ್ಳುವ ಸೂರ್ಯೋದಯ ದೃಶ್ಯಕ್ಕಾಗಿ ಪ್ರಸಿದ್ಧ ತಾಣ.

ಜರಮಡಗು ಜಲಪಾತ: ಚಿಕ್ಕಬಳ್ಳಾಪುರದ ವಾಯುವ್ಯ ದಿಕ್ಕಿನ ಬೆಟ್ಟ ಸಾಲುಗಳಲ್ಲಿರುವ ಸುಂದರ ತಾಣ.

 

ಗೌರಿಬಿದನೂರು ತಾಲ್ಲೂಕು

ಚನ್ನಸೋಮೇಶ್ವರಸ್ವಾಮಿ ದೇವಾಲಯ: ಗೌರಿಬಿದನೂರು ತಾಲ್ಲೂಕು ಅಲಕಾಪುರದಲ್ಲಿರುವ ಶ್ರೀ ಚನ್ನ ಸೋಮೇಶ್ವರ ದೇವಾಲಯ ಪುರಾಣ ಕಾಲದಿಂದಲೂ ಪ್ರಸಿದ್ಧಿ ಹೊಂದಿದೆ.

ಶ್ರೀ ಭೀಮೇಶ್ವರ ಬೆಟ್ಟ : ನಾಮಗೊಂಡ್ಲು ಗ್ರಾಮದಿಂದ ೩ ಕಿ.ಮೀ. ದೂರದಲ್ಲಿರುವ ಭೀಮೇಶ್ವರ ಬೆಟ್ಟ ಒಂದು ಸುಂದರ ಐತಿಹಾಸಿಕ ಸ್ಥಳವಾಗಿದೆ.

ಕೋಡಿ ಬ್ರಹ್ಮ ದೇವರ ಜೈನ ಮಂದಿರ : ತಾಲ್ಲೂಕಿನ ಮಂಚೇನಹಳ್ಳಿ ಸಮೀಪವಿರುವ ದಂಡಿಗಾನಹಳ್ಳಿ ಕೆರೆ ಕೋಡಿಯ ಪಕ್ಕದಲ್ಲಿ ಯಕ್ಷ ಬ್ರಹ್ಮ ದೇವರ ದೇವಾಲಯವಿದೆ.

 

ಗುಡಿಬಂಡೆ ತಾಲ್ಲೂಕು:

ಧ್ವಜ ಸ್ತಂಭ : ಗುಡಿಬಂಡೆ ಪಟ್ಟಣದ ಶ್ರೀ ಲಕ್ಷಿ  ಆದಿನಾರಾಯಣ ಸ್ವಾಮಿ ದೇವಾಲಯದ ಮುಂಭಾಗದಲ್ಲಿರುವ ಈ ಧ್ವಜಸ್ತಂಭವು ೬೦ ಅಡಿ ಎತ್ತರವಿದ್ದು, ಒಂದೇ ಕಲ್ಲಿನಿಂದ ಕೆತ್ತನೆಯಾಗಿದೆ.

 

ಬಾಗೇಪಲ್ಲಿ ತಾಲ್ಲೂಕು

ಮಾನವ ಧರ್ಮಪೀಠ : ಡಾ|| ಶ್ರೀ ಜ.ಚ.ನಿ ರವರ ಉತ್ತರಾಧಿಕಾರಿಯಾಗಿರುವ ಶ್ರೀ ವೀರಭದ್ರ ಚನ್ನಮಲ್ಲ ದೇಶೀ ಕೇಂದ್ರ ಮಹಾಸ್ವಾಮಿಗಳು ಉತ್ತಮ ಜ್ಞಾನಿಗಳು ವಿಚಾರವಂತರು ಆಗಿದ್ದೂ ಪೀಠದ ವತಿಯಿಂದ ಬಾಲವಾಡಿಯಿಂದ ಪದವಿ ಶಿಕ್ಷಣದವರೆಗೂ ಶಿಕ್ಷಣ ಸೌಲಭ್ಯವನ್ನು ಒದಗಿಸುತ್ತಿರುತ್ತಾರೆ.

 

ಶಿಡ್ಲಘಟ್ಟ ತಾಲ್ಲೂಕು

ಒಡೆಯರ ಕೆರೆ:- ಬಶೆಟ್ಟಹಳ್ಳಿಗೆ ಹೋಗಿ ಅಲ್ಲಿಂದ ೦೩ ಕಿ.ಮೀ ಹೋದರೆ ಒಡೆಯರ ಕೆರೆ, ಈ ಕೆರೆಯಲ್ಲಿ ೧೨ ಅಡಿ ಎತ್ತರದ ೪ ಕಂಬಗಳ ಮೇಲೆ “ಶ್ರೀ ಅನಂತ ಪದ್ಮನಾಭಸ್ವಾಮಿ” ದೇವಾಲಯವಿದೆ. ಪಾಂಡವರ ಗವಿ:- ಶಿಡ್ಲಘಟ್ಟದಿಂದ ಉತ್ತರಕ್ಕೆ ೯ ಕಿ.ಮೀ ದೂರದಲ್ಲಿ ದ್ಯಾವಪ್ಪನಗುಡಿ ಇದ್ದು, ಇಲ್ಲಿಂದ ಪೂರ್ವಕ್ಕೆ ೦೨ ಕಿ.ಮೀ ದೂರದಲ್ಲಿ ಬೈರಗಾನಹಳ್ಳಿ ಅಲ್ಲಿಂದ ದಕ್ಷಿಣಕ್ಕೆ ಚಾಗೆಯ ಕಡೆಯ ಹೊರಟಾಗ ವಿಸ್ಮಯಗಳಿಂದ ಕೂಡಿರುವ ಸ್ಥಳವೇ “ಪಾಂಡವರ ಗವಿ”

ಬ್ಯಾಟರಾಯಸ್ವಾಮಿ ದೇವಸ್ಥಾನ:-ಈ ದೇವಾಸ್ಥಾನವು ಐತಿಹಾಸಿಕ ಮಹತ್ವವನ್ನು ಪಡೆದಿದ್ದು ಕ್ರಿ.ಶ.೧೧೧೨ ನೇ ಇಸ್ವಿ ಹೊಯ್ಸಳರ ಕಾಲದ ದೇವಸ್ಥಾನವಾಗಿದೆ.

ಚೆನ್ನಕೇಶವ ದೇವಸ್ಥಾನ : ಸುಗಟೂರು ಎಂಬ ಗ್ರಾಮ ಹಲವು ವೈಶಿಷ್ಟ್ಯಗಳಿಗೆ ಹೆಸರುವಾಸಿಯಾಗಿದೆ. ಸುಗಟೂರು ಗ್ರಾಮವನ್ನು “ಹಲವು ದೇವಾಲಯಗಳ ತವರೂರು” ಎಂದು ಕರೆಯುತ್ತಾರೆ.

ಗವಿಗುಟ್ಟ:-ಶಿಡ್ಲಘಟ್ಟದಿಂದ ಚಿಂತಾಮಣಿ ಕಡೆಗೆ ೦೩ ಕಿ.ಮೀ ಹೋದರೆ ವೀರಾಪುರ ಎಂಬ ಹಳ್ಳಿ, ರಸ್ತೆಯ ಬದಿಯಲ್ಲೆ ಗಣೇಶನ ದರ್ಶನ ಪಡೆದು, ಉತ್ತರಕ್ಕೆ ಕಾಣುವ ಗುಟ್ಟವೆ ಗವಿಗುಟ್ಟ.

 

ಚಿಂತಾಮಣಿ ತಾಲ್ಲೂಕು

ಕೋನಕುಂಟ್ಲು : ಚಿಂತಾಮಣಿಯಿಂದ ಉತ್ತರಕ್ಕೆ ೨೦ ಕಿ.ಮೀ ದೂರದಲ್ಲಿರುವ ಕೋನಕುಂಟ್ಲು ಬಟ್ಲಹಳ್ಳಿಗೆ ಸಮೀಪವಾಗಿದೆ. ಇದು ಆಕರ್ಷಕ ಬೆಟ್ಟ ಗುಡ್ಡಗಳಿಂದ ಕೂಡಿರುವ ರಮ್ಯತಾಣವಾಗಿದ್ದು, ಜಿಲ್ಲೆಯ ಹಲವು ಪುಣ್ಯಕ್ಷೇತ್ರಗಳಲ್ಲಿ ಒಂದೆನಿಸಿದೆ. ಬೂರಗಮಾಕಲಹಳ್ಳಿ

ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ : ಚಿಂತಾಮಣಿ ಶ್ರೀನಿವಾಸಪುರ ಮಾರ್ಗದಲ್ಲಿ ರಸ್ತೆಗೆ  ಹೊಂದಿಕೊಂಡಿರುವಂತಹ ದೇವಾಲಯ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯ. ಇದನ್ನು ಬುರಗಮಾಕಲಹಳ್ಳಿ ವೀರಾಂಜನೇಯ ಸ್ವಾಮಿ ದೇವಸ್ಥಾನವೆಂದು ಕರೆಯುತ್ತಾರೆ.

ಚಿಂತಾಮಣಿ ಅಬ್ಬಗುಂಡು ನಾಗನಾಥೇಶ್ವರ ದೇವಾಲಯ : ಚಿಂತಾಮಣಿ ನಗರದಲ್ಲಿರುವ ಪ್ರಸಿದ್ಧ ದೇವಾಲಯಗಳಲ್ಲಿ ನಾಗನಾಥೇಶ್ವರ ದೇವಾಲಯ ಇತಿಹಾಸ ಪ್ರಸಿದ್ದವಾದ ದೇವಾಲಯವಾಗಿದೆ. ಪಟ್ಟಣದ ಅಬ್ಬಗುಂಡು ವ್ಯಾಪ್ತಿಯಲ್ಲಿರುವ ಈ ದೇವಾಲಯ ನಗರದ ಹೃದಯ ಭಾಗದಲ್ಲಿದೆ ಹಾಗೂ ಎನ್.ಎನ್.ಟಿ ರಸ್ತೆಯಲ್ಲಿದೆ.

 

ಕೋಲಾರ ಜಿಲ್ಲೆ

ಶ್ರೀನಿವಾಸಪುರ ತಾಲ್ಲೂಕು

ತಾಡಿಗೋಳ್ ಗ್ರಾಮ ಪಂಚಾಯತಿ ಕೇಂದ್ರವಾಗಿರುವ ಇದು ತೆಲುಗಿನ ಮಹಾಕವಿಯೊಬ್ಬನ ಹುಟ್ಟಿದೂರು. ಅವನ ಹೆಸರು ಪಾಲವೇಕರಿ ಕದಿರೀಪತಿನಾಯಕ.

ನಂಬಿಹಳ್ಳಿ : ಹಿಂದೆ ಇದು ಪಂಚಲಿಂಗ ಕ್ಷೇತ್ರವೆಂದು ಹೆಸರು ಪಡೆದಿತ್ತು. ಇದು ತಾಲೂಕಿನ ಐತಿಹಾಸಿಕ ಸ್ಥಳ. ಈ ಗ್ರಾಮದ ೫ ದಿಕ್ಕುಗಳಲ್ಲಿ ಶಿವಲಿಂಗಗಳನ್ನು ಪ್ರತಿಷ್ಠಾಪಿಸಲಾಗಿದೆ. ಇಲ್ಲಿ ಅತ್ಯಂತ ಹಳೆಯದಾದ ಬೃಹತ್ ಸಾಲಿಗ್ರಾಮ ಶಿಲೆಯೊಂದಿದೆ.
ಗಾಂಡ್ಲಹಳ್ಳಿ: ಇಲ್ಲಿರುವ ಕರಿ ಕಲ್ಲಿನಲ್ಲಿ ಕೆತ್ತಿದ ಪಾರ್ಶ್ವನಾಥ ವಿಗ್ರಹ ದರ್ಶನ ಯೋಗ್ಯವಾದುದು. ಇಲ್ಲಿ ಮೃತರ ಹೆಸರಿನಲ್ಲಿ ಗೋಕಲ್ಲುಗಳನ್ನು ನೆಡುವುದು ರೂಢಿಯಲ್ಲಿದೆ.

ಯಲ್ದೂರು : ಇಲ್ಲಿ ಸಂದರ್ಶನ ಯೋಗ್ಯವಾದ ಹಜರತ್ ಗೈಬಾನೆ ಪೀರ್ಬಾಬಾ ದರ್ಗಾವಿದೆ.  ಇದೊಂದು ಭಾವೈಕ್ಯತೆಯ ತಾಣ. ಕ್ರಿ.ಸ. ೧೬-೧೭ನೇ ಶತಮಾನದಲ್ಲಿ ನಿರ್ಮಾಣ ಗೊಂಡಿರುವುದಾಗಿ ಹೇಳಲಾಗಿದೆ. ನಾಲ್ಕೂ ದಿಕ್ಕುಗಳ ಗೋಡೆ ಒಂದೇ ರೀತಿಯಲ್ಲಿರುವುದು ಇದರ ನಿರ್ಮಾಣದ ವೈಶಿಷ್ಟ್ಯ. ಇದಕ್ಕೆ ಹಿಂದೂ ಮುಸಲ್ಮಾನರಿಬ್ಬರು ಒಂದೇ ರೀತಿಯಲ್ಲಿ ‘ದುವ’ (ಪ್ರಾರ್ಥನೆ, ಹರಕೆ,) ಮಾಡುತ್ತಾರೆ. ಇಲ್ಲಿ ಮೇ ತಿಂಗಳಿನಲ್ಲಿ ನಡೆಯುವ ಉರುಸ್ ಪ್ರಸಿದ್ಧ. ಈ ಸಂದರ್ಭದಲ್ಲಿ ಏರ್ಪಡಿಸುವ ಕವ್ವಾಲಿ ಕಾರ್ಯಕ್ರಮ ಜನಪ್ರಿಯ.

ಓಲ್ದಾರ್ ಗುಡಿ(ಓಹಿಲೇಶ್ವರ ದೇವಾಲಯ) : ಕರ್ಣಾಟಕ-ಆಂಧ್ರದ ಗಡಿಯ ಬೆಟ್ಟ ಸಾಲಿನ ನಡುವೆ ಇರುವ ಓಲ್ದಾರ್ ಕೊಂಡದ ತಪ್ಪಲಿನ ಎತ್ತರವಾದ ವಿಶಾಲ ಗುಡ್ಡದ ಮೇಲೆ ಈ ದೇವಾಲಯ ನೆಲೆಗೊಂಡಿದೆ. ಇಲ್ಲಿನ ಕ್ಷೇತ್ರಾಧಿಪತಿ ಓಹಿಲೇಶ್ವರ. ದೇವಾಲಯದ ಪಕ್ಕದಲ್ಲಿ ನಿಸರ್ಗ ನಿರ್ಮಿತ ಪುಟ್ಟ ಕೋನೇರು(ಕಲ್ಯಾಣಿ) ಇದೆ.

 

ಮುಳಬಾಗಿಲು ತಾಲ್ಲೂಕು

ಹರಪನಾಯಕನಹಳ್ಳಿ : ತಾಲ್ಲೂಕಿನ ಒಂದು ಹಿರಿಮೆಯ ಗ್ರಾಮ ಹರಪನಾಯಕನ ಹಳ್ಳಿ. ಗ್ರಾಮದಲ್ಲಿ ಹುಟ್ಟಿದ ಬಿಸೇಗೌಡ ಇಂದಿಗೂ ಜನಮನದಲ್ಲಿ ದಂತಕಥೆಯಾಗಿ ಉಳಿದಿದ್ದಾರೆ. ಗ್ರಾಮದಲ್ಲಿ ಪುಟ್ಟದಾದ ಪಾಳೇ ಪಟ್ಟನ್ನು  ಕಟ್ಟಿಕೊಂಡು ಪರಾಕ್ರಮಕ್ಕೆ ಹೆಸರಾಗಿದ್ದಾನೆ. ಬಿಸೇಗೌಡ ಟಿಪ್ಪುವಿನ ನಂತರ ಮೈಸೂರು ಮಹಾರಾಜರ ಅಧೀನದಲ್ಲಿದ್ದ ಕೆಲವೇ ಪರಾಕ್ರಮಿಗಳಲ್ಲಿ ಒಬ್ಬನು.

ಕೂತಾಂಡ್ಲಹಳ್ಳಿ: ಮುಳಬಾಗಿಲು ತಾಲ್ಲೂಕಿನಲ್ಲಿ ಹಲವಾರು ಪುರಾತನ ದೇವಾಲಯಗಳು ಇವೆ. ಇವುಗಳಲ್ಲಿ ಈಚೆಗೆ ಪೊದೆಗಳಲ್ಲಿ ಮುಚ್ಚಿಹೋದ ಅಪೂರ್ವ ಶಿಲ್ಪಕಲೆಯ ಸೋಮೇಶ್ವರ ದೇವಾಲಯ ಕೂತಾಂಡ್ಲಹಳ್ಳಿ ಸಮೀಪ ಸಿಕ್ಕಿದೆ.

 

ಮಾಲೂರು ತಾಲ್ಲೂಕು

ಚಿಕ್ಕತಿರುಪತಿ: ಪುರಾಣ ಪ್ರಸಿದ್ದ ಚಿಕ್ಕತಿರುಪತಿ ಗ್ರಾಮವು ಮಾಲೂರು ತಾಲ್ಲೂಕಿನಲ್ಲಿದ್ದು, ತಾಲ್ಲೂಕು ಕೇಂದ್ರಕ್ಕೆ ನೈಋತ್ಯ ದಿಕ್ಕಿನಲ್ಲಿದೆ ಸುಮಾರು ೧೭ ಕಿ.ಮೀ ದೂರದಲ್ಲಿದೆ. ಲಕ್ಕೂರು ಹೋಬಳಿಗೆ ಸೇರಿದ ಈ ಗ್ರಾಮ ಪ್ರಸಿದ್ದವಾಗಿರುವುದು ಇಲ್ಲಿನ ಶ್ರೀ.ಪ್ರಸನ್ನ ವೆಂಕಟರಮಣ ದೇವಾಲಯದಿಂದಾಗಿ

ಕೋಲಾರದ ಫತ್ತೆ ಮಹಮದನ ಗೋರಿ

ಗಂಗ ರಾಜರ ಮೊದಲ ರಾಜಧಾನಿಯಾಗಿ ಮೆರೆದ ಕೋಲಾಋದಲ್ಲಿ ಹೈದರಾಲಿಯ ತಂದೆ ಫತ್ತೆ ಮಹಮದನ ಸಮಾಧಿ ಇದೆ. ಹೈದರಾಲಿಯ ಪೂರ್ವಿಕರು ಪಂಜಾಬ್ ನಿಂದ ಬಂದಿದ್ದು, ಬಾಡಿಗೆ ಸೈನಿಕರಾಗಿದ್ದರು. ಫತ್ತೆ ಮಹಮದನು ಶಿರಾದ ಸುಬೇದಾರನ ಆಳ್ವಿಕೆಗೆ ಒಳಪಟ್ಟಿದ್ದ ಕೋಲಾರ ನಗರಕ್ಕೆ ಕಾರಕೂನನಾಗಿ ಬಂದನು. ಗಂಜಿಕೋಟೆಯ ಯುದ್ದದಲ್ಲಿ ತೋರಿಸಿದ ಸಾಹಸಕ್ಕಾಗಿ ಫತ್ತೆ  ಮಹಮದನಿಗೆ ನಾಯಕ್ ಎಂಬ ಹುದ್ದೆ ಸಿಕ್ಕಿತು. ನಂತರದಲ್ಲಿ ಇವನು ಕೋಲಾರ ನಗರಕ್ಕೆ ಪೌಜ್ದಾರನಾದವು. ಆಗಲೇ ಅವನಿಗೆ ಶಿರಾದ ಸುಬೇದಾರನಿಂದ ಬೂದಿಕೋಟೆಯು ಜಗಿ ರಾಗಿ ಸಿಕ್ಕಿತು. ಇಲ್ಲಿಯೇ ೧೭೨೨ರಲ್ಲಿ ಹೈದರಾಲಿಯು ಜನಿಸಿದನು. ಫತ್ತೆ ಮಹಮದನು ೧೭೨೯ ರಲ್ಲಿ ನಡೆದ ಚಿತ್ತೂರಿನ ಕದನದಲ್ಲಿ ಸಾವನಪ್ಪಿದನು.

 

ಉಪನಿರ್ದೇಶಕರ ದೂರವಾಣಿ ಸಂಖ್ಯೆ :

 • ಕೋಲಾರ ೯೫೮೧೫೨-೨೨೨೦೨೦/೯೪೪೮೯೯೯೩೪೫
 • ಚಿಕ್ಕಬಳ್ಳಾಪುರ ೦೮೧೫೬-೨೭೪೮೭೩/೯೪೪೮೯೯೯೩೩೩
 • ಕ್ಷೇತ್ರ ಶಿಕ್ಷಣಾಧಿಕಾರಿಗಳ ದೂರವಾಣಿ ಸಂಖ್ಯೆ :
 • ಬಂಗಾರಪೇಟೆ ೯೫೮೧೫೩-೨೫೫೨೭೧/೯೪೮೦೬೯೫೨೬೬
 • ಕೆ.ಜಿ.ಎಫ್. ೯೫೮೧೫೩-೨೬೦೮೦೨/೯೪೮೦೬೯೫೨೬೭
 • ಕೋಲಾರ ೯೫೮೧೫೨-೨೨೨೨೬೭/೯೪೮೦೬೯೫೨೬೮
 • ಮಾಲೂರು ೯೫೮೧೫೧-೨೩೨೨೪೨/೯೪೮೦೬೯೫೨೬೯
 • ಮುಳಬಾಗಿಲು ೯೫೮೧೫೯-೨೪೨೧೩೦/೯೪೮೦೬೯೫೨೭೦
 • ಶ್ರೀನಿವಾಸಪುರ ೯೫೮೧೫೭-೨೪೬೩೦೫/೯೪೮೦೬೯೫೨೭೧
 • ಬಾಗೇಪಲ್ಲಿ ೦೮೧೫೦-೨೮೨೨೬೭/೯೪೮೦೬೯೫೧೧೬
 • ಚಿಕ್ಕಬಳ್ಳಾಪುರ ೦೮೧೫೬-೨೭೨೨೯೫/೯೪೮೦೬೯೫೧೧೭
 • ಚಿಂತಾಮಣಿ ೦೮೧೫೪-೨೫೩೧೯೨/೯೪೮೦೬೯೫೧೧೮
 • ಗೌರಿಬಿದನೂರು ೦೮೧೫೫-೨೮೫೩೮೩/೯೪೮೦೬೯೫೧೧೯
 • ಗುಡಿಬಂಡೆ ೦೮೧೫೬-೨೬೧೦೩೭/೯೪೮೦೬೯೫೧೨೦
 • ಶಿಡ್ಲಘಟ್ಟ ೦೮೧೫೮-೨೫೬೫೨೮/೯೪೮೦೬೯೫೧೨೧

 

ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿಗಳ ದೂರವಾಣಿ ಸಂಖ್ಯೆ :

 • ಕೋಲಾರ ೯೫೮೧೫೨-೨೨೫೨೪೧/೯೪೪೮೯೯೯೪೦೧
 • ಚಿಕ್ಕಬಳ್ಳಾಪುರ ೦೮೧೫೬-೨೭೩೩೯೫/೯೪೪೮೯೯೯೪೨೯
 • ಕ್ಷೇತ್ರ ಸಮನ್ವಯಾಧಿಕಾರಿಗಳ ದೂರವಾಣಿ ಸಂಖ್ಯೆ :
 • ಬಂಗಾರಪೇಟೆ ೯೫೮೧೫೩-೨೫೫೮೮೩/೯೪೮೦೬೯೫೨೭೨
 • ಕೆ.ಜಿ.ಎಫ್. ೯೪೮೦೬೯೫೨೭೩
 • ಕೋಲಾರ ೯೫೮೧೫೨-೨೨೬೬೫೪/೯೪೮೦೬೯೫೨೭೪
 • ಮಾಲೂರು ೯೫೮೧೫೧-೨೩೩೭೭೪/೯೪೮೦೬೯೫೨೭೫
 • ಮುಳಬಾಗಿಲು ೯೫೮೧೫೯-೨೪೪೩೬೧/೯೪೮೦೬೯೫೨೭೬
 • ಶ್ರೀನಿವಾಸಪುರ ೯೫೮೧೫೭-೨೪೬೮೭೧/೯೪೮೦೬೯೫೨೭೭
 • ಬಾಗೇಪಲ್ಲಿ ೦೮೧೫೦-೨೮೨೫೯೩/೯೪೮೦೬೯೫೧೨೨
 • ಚಿಕ್ಕಬಳ್ಳಾಪುರ ೦೮೧೫೬-೨೭೪೬೩೨/೯೪೮೦೬೯೫೧೨೩
 • ಚಿಂತಾಮಣಿ ೦೮೧೫೪-೨೫೩೧೯೨/೯೪೮೦೬೯೫೧೨೪
 • ಗೌರಿಬಿದನೂರು ೦೮೧೫೫-೨೫೬೬೬೨/೯೪೮೦೬೯೫೧೨೫
 • ಗುಡಿಬಂಡೆ ೦೮೧೫೬-೨೬೧೦೮೪/೯೪೮೦೬೯೫೧೨೬
 • ಶಿಡ್ಲಘಟ್ಟ ೦೮೧೫೮-೨೫೪೨೬೫/೯೪೮೦೬೯೫೧೨೭

 

ಆಧಾರಗಳು

 •   ಸಿರಿನಂದಿ
 •   ಗಿರಿಸಾಲು ಕೆರೆಮಾಲೆ
 •   ಅಂತರ್ಜಾಲ (ಇಂಟರ್‌ನೆಟ್)
 •   ಪ್ರಮುಖ ದಿನಪತ್ರಿಕೆಗಳು ಮತ್ತು ಮಾಸಪತ್ರಿಕೆಗಳು
 •   ಗ್ಯಾಸೇಟಿಯರ್ – ಕೋಲಾರ