ಗುಣಮಟ್ಟದ ಶಿಕ್ಷಣಕ್ಕಾಗಿ ಸರ್ವಶಿಕ್ಷಣ ಅಭಿಯಾನದಿಂದ ಕೈಗೊಂಡಿರುವ “ಚಿಣ್ಣರ ಜಿಲ್ಲಾದರ್ಶನ”ವು ಮಗುವಿನ ಪರಿಪೂರ್ಣ ವ್ಯಕ್ತಿತ್ವ ವಿಕಸನ, ಗುಣಾತ್ಮಕ ಕಲಿಕೆ ಹಾಗೂ ಸ್ಥಳೀಯ ವೈವಿಧ್ಯಮಯ ಪ್ರಾಕೃತಿಕ, ಐತಿಹಾಸಿಕ, ಸಾಹಿತ್ಯಿಕ, ಧಾರ್ಮಿಕ, ಸಾಂಸ್ಕೃತಿಕ ಅರಿವನ್ನು ವಿದ್ಯಾರ್ಥಿ ದಿಸೆಯಲ್ಲಿಯೇ ಮೂಡಿಸಿ ಪರಿಪೂರ್ಣ ನಾಗರೀಕನನ್ನಾಗಿ ಸೃಜಿಸುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಇದರಿಂದಾಗಿ ಶಾಲೆಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ಪ್ರತಿಭಾವಂತ ವಿದ್ಯಾರ್ಥಿಗಳ ಹಾಜರಾತಿ ಹಾಗೂ ಶೈಕ್ಷಣಿಕ ಪ್ರಗತಿಗೆ ದಿಕ್ಸೂಚಿಯಾಗಿದೆ.

“ದೇಶ ಸುತ್ತ, ಕೋಶ ಓದು” ನಾಣ್ಣುಡಿಯ ಹಿನ್ನೆಲೆಯಲ್ಲಿ ಚಿಣ್ಣರ ಕರ್ನಾಟಕ ದರ್ಶನ ಮಗುವಿನ ಜ್ಞಾನಕ್ಷಿತಿಜವನ್ನು  ರ್ದ್ವಮುಖಿಯಾಗಿಸಬಲ್ಲದು. ಸಾಂಸ್ಕೃತಿಕ ಪರಂಪರೆ, ವೈಜ್ಞಾನಿಕ ದೃಷ್ಟಿಕೋನ, ಕಲೆ ಸಾಹಿತ್ಯದ ಬಗ್ಗೆ ಮಗುವಿನಲ್ಲಿ ವೈಚಾರಿಕತೆಯ ಬೆಳಕನ್ನು ಚೆಲ್ಲುತ್ತದೆ. ಮಗುವು ತನ್ನ ಸುತ್ತಲಿನ  ತಾಲ್ಲೂಕು ಮತ್ತು ಜಿಲ್ಲೆಯ ಪರಿಸರವನ್ನು ಅರಿಯಬೇಕು. ತನ್ನ ಜಿಲ್ಲೆಯ ಸಾಂಸ್ಕೃತಿಕ ಹಿರಿಮೆಯನ್ನು, ಜನಪದ ಹಾಗೂ ಶಿμಂಔ ಸಾಹಿತ್ಯದ ಕಂಪನ್ನೂ ಪ್ರಾಕೃತಿಕ, ಐತಿಹಾಸಿಕ, ಧಾರ್ಮಿಕ ಮಹತ್ವವನ್ನು ಅರಿಯಬೇಕೆಂಬ ಸದುದ್ದೇಶದಿಂದ “ಚಾಮರಾಜನಗರ ಜಿಲ್ಲಾದರ್ಶನ” ಪ್ರವಾಸಕ್ಕೆ ಅನುಕೂಲವಾಗುವಂತೆ ಪ್ರಸ್ತುತ ಕೈಪಿಡಿಯನ್ನು ರೂಪಿಸಲಾಗಿದೆ.

ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಶಿಕ್ಷಕರು ಹಾಗೂ ವಿವಿಧ ಹಂತದ ಅಧಿಕಾರಿಗಳು ಪ್ರಸ್ತುತ ಕೈಪಿಡಿಯನ್ನು ಸದುಪಯೋಗಪಡಿಸಿಕೊಳ್ಳುವರೆಂದು ಆಶಿಸಿದೆ. ಜಿಲ್ಲೆಯ ಪ್ರವಾಸ ಚಿಣ್ಣರಿಗೆ ಸಂತಸವು, ಸುಖಕರವೂ ಆಗಿರಲೆಂದು ಹಾರೈಸುತ್ತೇವೆ.

 

(ಎಸ್.ಜೆ. ಸತ್ಯನಾರಾಯಣ)                  

ಪ್ರಾಂಶುಪಾಲರು

ಡಯಟ್, ಚಾಮರಾಜನಗರ.

 

(ಎನ್.. ರಾಮಸ್ವಾಮಿ)                                    

ಉಪನಿರ್ದೇಶಕರು

ಚಾಮರಾಜನಗರ.

 

(ಕೆ. ಸುಂದರನಾಯ್ಕ)

ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳು

ಚಾಮರಾಜನಗರ