ಶ್ರೀ ಕ್ಷೇತ್ರ ನಾಯಕನಹಟ್ಟಿ

ತಲುಪುವುದು ಹೇಗೆ ?
ಚಳ್ಳಕೆರೆ-ಜಗಳೂರು ರಸ್ತೆಯಲ್ಲಿದೆ.

ದೂರ
ಜಿಲ್ಲಾ ಕೇಂದ್ರದಿಂದ: ೨೯ ಕಿ.ಮೀ.
ತಾಲ್ಲೂಕು ಕೇಂದ್ರದಿಂದ: ೨೦ ಕಿ.ಮೀ.

ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟ ಕರ್ನಾಟಕದಲ್ಲೆ ಅಲ್ಲದೇ ಆಂಧ್ರಪ್ರದೇಶಗಳಿಂದಲೂ ಭಕ್ತಾದಿಗಳನ್ನು ಆಕರ್ಷಿಸುವ ಪುಣ್ಯಕ್ಷೇತ್ರವಾಗಿದೆ. ಪಂಚಗಣಾಧೀಶರಲ್ಲಿ ಒಬ್ಬರಾದ ರುದ್ರದೇವರ ತಿಪ್ಪೇಯಲ್ಲಿ ಪವಾಡ ತೋರಿಸಿದ ಪರಿಣಾಮವಾಗಿ ತಿಪ್ಪೇರುದ್ರ ನಾಮಾಂಕಿವನ್ನು ಪಡೆದು ಅಲ್ಲಿಯೇ ನೆಲೆಸಿ ಈ ಸ್ಥಳವನ್ನು ಪುಣ್ಯಕ್ಷೇತ್ರವಾಗಿಸಿದ್ದಾರೆ. ಧರ್ಮಸಂಸ್ಥಾಪನೆಗಾಗಿ ಆಗಮಿಸಿದ ಇವರು ಲೋಕಕಲ್ಯಾಣಾರ್ಥವಾಗಿ ಕೆರೆಯೊಂದನ್ನು ನಿರ್ಮಿಸಲು ಬಯಸಿದರು. ನಿರ್ಮಾಣ ಕಾರ್ಯದಲ್ಲಿ ಭಾಗವಹಿಸಿದ ಕೂಲಿಕಾರರಿಗೆ ಮಂತ್ರ ಶಕ್ತಿಯಿಂದ ಮಾಡಿದಷ್ಟು ನೀಡು ಭಿಕ್ಷೆ ನೀಡಿದ ಜಗದ್ಗುರು ಇವರು. ಸುಮಾರು ೬೫ ಅಡಿ ಎತ್ತರದ ಒಳಮಠದ ಗಪುರವು ನೋಡುಗರ ಗಮನ ಸೆಳೆಯುತ್ತದೆ.

 

ಶ್ರೀ ಕ್ಷೇತ್ರ ನಾಯಕನಹಟ್ಟಿ (ಹೊರಮಠ)

ತಲುಪುವುದು ಹೇಗೆ ?
ಚಳ್ಳಕೆರೆ-ಜಗಳೂರು ರಸ್ತೆಯಲ್ಲಿದೆ.

ದೂರ
ಜಿಲ್ಲಾ ಕೇಂದ್ರದಿಂದ: ೨೯ ಕಿ.ಮೀ.
ತಾಲ್ಲೂಕು ಕೇಂದ್ರದಿಂದ: ೨೦ ಕಿ.ಮೀ.

ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟ ಕರ್ನಾಟಕದಲ್ಲೆ ಅಲ್ಲದೇ ಆಂಧ್ರಪ್ರದೇಶಗಳಿಂದಲೂ ಭಕ್ತಾದಿಗಳನ್ನು ಆಕರ್ಷಿಸುವ ಪುಣ್ಯಕ್ಷೇತ್ರವಾಗಿದೆ. ಪಂಚಗಣಾಧೀಶರಲ್ಲಿ ಒಬ್ಬರಾದ ತಿಪ್ಪೇರುದ್ರಸ್ವಾಮಿಯು ಲಿಂಗೈಕ್ಯರಾದ ಗದ್ದುಗೆಯನ್ನು ಹೊಂದಿರುವ ಹೊರಮಠವು ಇಂಡೊ ಇಸ್ಲಾಮಿಕ್‌ಶೈಲಿಯಲ್ಲಿದೆ. ಮಕ್ಕಳೇ ಇಲ್ಲದ ಹೈದರಾಲಿಯು ಪುತ್ರ ಸಂತಾನವನ್ನು ಬಯಸಿ ತಿಪ್ಪೇರುದ್ರಸ್ವಾಮಿಗೆ ಹರಕೆ ಹೊತ್ತನಂತೆ, ಇದರ ಫಲವಾಗಿ ಗಂಡು ಮಗು ಜನಿಸಿದನು. ಅವನಿಗೆ ತಿಪ್ಪುಸುಲ್ತಾನ್‌(ಟಿಪ್ಪುಸುಲ್ತಾನ್‌) ಎಂದು ನಾಮಕರಣ ಮಾಡಿದುದ್ದಲ್ಲದೇ ಗುರುಗಳು ಲಿಂಗೈಕ್ಯರಾದ ಸ್ಥಳದಲ್ಲಿ ಮಠವನ್ನು ಕಟ್ಟಿಸಿದ ಇವರ ಗುಮ್ಮಟ ಇಸ್ಲಾಂ ಶೈಲಿಯಲ್ಲಿದೆ ಎಂದು ಸ್ಥಳೀಯರು ಇದರ ಬಗ್ಗೆ ವಿವರಿಸುತ್ತಾರೆ.

 

ಹೊಸಗುಡ್ಡದ ಗುಹಾಂತರ ದೇವಾಲಯ

ತಲುಪುವುದು ಹೇಗೆ ?
ನಾಯಕನಹಟ್ಟಿಯಿಂದ ೬ ಕಿ.ಮೀ. ದೂರದಲ್ಲಿದೆ.

ದೂರ
ಜಿಲ್ಲಾ ಕೇಂದ್ರದಿಂದ: ೩೦ ಕಿ.ಮೀ.
ತಾಲ್ಲೂಕು ಕೇಂದ್ರದಿಂದ: ೨೬ ಕಿ.ಮೀ.

ಚಳ್ಳಕೆರೆ ತಾಲ್ಲೂಕಿನ ನಾಯಕನಹಟ್ಟಿ ಬಳಿಯ ಹೊಸಗುಡ್ಡ(ರಾಮದುರ್ಗ)ದಲ್ಲಿ ನಾಯಕನಹಟ್ಟಿ ಪಾಳೇಯಗಾರರ ಕಾಲದಲ್ಲಿ ನಿರ್ಮಾಣವಾದ ಶ್ರೀ ರಾಮಲಿಂಗೇಶ್ವರ ದೇವಾಲಯ ವಿಶೇಷವಾಗಿದೆ. ಕಾರಣ ಇದೊಂದು ಏಕಶಿಲಾ ಗುಹಾಂತರ ದೇವಾಲಯವಾಗಿದೆ ಅಲ್ಲದೆ ಅತ್ಯಂತ ಕಠಿಣವಾದ ಗ್ರಾನೈಟ್ ಬಂಡೆಯನ್ನು ಕೊರೆದು ಶಿಲ್ಪವನ್ನು ಅರಳಿಸಿರುವುದು ಶಿಲ್ಪಕಲೆಯ ಶ್ರೇಷ್ಠತೆಗೆ ಉತ್ತಮ ಉದಾಹರಣೆ.

 

ತೇರುಮಲ್ಲೇಶ್ವರ ಸ್ವಾಮಿ ದೇವಾಲಯ

ತಲುಪುವುದು ಹೇಗೆ ?
ಹಿರಿಯೂರು ನಗರದಲ್ಲಿದೆ.

ದೂರ
ಜಿಲ್ಲಾ ಕೇಂದ್ರದಿಂದ: ೪೨ ಕಿ.ಮೀ.
ತಾಲ್ಲೂಕು ಕೇಂದ್ರದಿಂದ: ೦ ಕಿ.ಮೀ.

ಹಿರಿಯೂರು ವೇದಾವತಿ ನದಿ ತೀರದ ಸುಂದರ ನಗರ. ಹದಿನಾರನೆ ಶತಮಾನದ ಪ್ರಾರಂಭದಲ್ಲಿ ಮಾಯಸಂದ್ರದ ದೊರೆ ಕೇಶವ ನಾಯಕನು ಹಿರಿಯೂರನ್ನು ಸ್ಥಾಪಿಸಿದನು. ನಗರದ ಮಧ್ಯದಲ್ಲಿರುವ ತೇರಮಲ್ಲೇಶ್ವರ ಸ್ವಾಮಿ ದೇವಾಲಯ ಕ್ರಿ.ಶ. ೧೪೬೬ರಲ್ಲಿ ಹಿರಿಯೂರಿನ ಪಾಳೇಗಾರನಾಗಿದ್ದ ಕೆಂಚಪ್ಪ ನಾಯಕನಿಂದ ನಿರ್ಮಿಸಲ್ಪಟ್ಟಿತ್ತು. ಇದರ ಶಿಖರವನ್ನು ಚಿತ್ರದುರ್ಗದ ಪಾಳೇಗಾರರು ಕಟ್ಟಿಸಿದ್ದರು. ೪೫ ಅಡಿ ಎತ್ತರದ ದ್ರಾವಿಡ ಶೈಲಿಯ ನಯನ ಮನೋಹರವಾದ ಇದನ್ನು ನೋಡಿದಾಗ ಹಂಪೆಯ ಗೋಪುರಗಳ ನೆನಪಾಗುತ್ತದೆ.

ಮಹಾದ್ವಾರವನ್ನು ದಾಟಿ ಒಳಹೋದರೆ ಎರಡು ಕಡೆ ವಿಶಾಲವಾದ ಜಗಲಿಗಳಿವೆ. ಮುಖಮಂಟಪದ ಒಳಮೈಮೇಲೆ ಕಿರಾತಾರ್ಜುನೀಯ, ಗಿರಿಜಾಕಲ್ಯಾಣ, ಶಿವಪುರಾಣ ಮತ್ತು ಗೋಕರ್ಣ ಮಹಿಮೆಯ ಸುಂದರ ಜಲವರ್ಣ ಭಿತ್ತಿಚಿತ್ರಗಳಿವೆ.

 

ವಾಣಿವಿಲಾಸ ಸಾಗರ ಅಣೆಕಟ್ಟು (ಮಾರಿಕಣಿವೆ)

ತಲುಪುವುದು ಹೇಗೆ ?
ಹಿರಿಯೂರು ಹೊಸದುರ್ಗ ಮಾರ್ಗದಲ್ಲಿದೆ.

ದೂರ
ಜಿಲ್ಲಾ ಕೇಂದ್ರದಿಂದ: ೫೬ ಕಿ.ಮೀ.
ತಾಲ್ಲೂಕು ಕೇಂದ್ರದಿಂದ: ೧೮ ಕಿ.ಮೀ.

ಹಿರಿಯೂರು ತಾಲ್ಲೂಕಿನ ವಾಣಿವಿಲಾಸಪುರದ ಬಳಿ ಎರಡು ಗುಡ್ಡಗಳ ಕಣಿವೆಯಲ್ಲಿ ಹರಿದು ಬರುವ ವೇದಾವತಿ ನದಿಗೆ ಅಣೆಕಟ್ಟೆಯನ್ನು ಕಟ್ಟ ಸಾವಿರಾರು ಎಕರೆ ಭೂಮಿಯ ದಾಹವನ್ನು ತಣಿಸಲಾಗುತ್ತದೆ. ೧೮೯೮ರಲ್ಲಿ ಪ್ರಾರಂಭಿಸಿ ೧೯೦೭ರಲ್ಲಿ ಪೂರ್ಣಗೊಂಡ ಈ ಜಲಾಶಯವನ್ನು ಮೈಸೂರಿನ ದಿವಾನರಾಗಿದ್ದ ಶ್ರೀ ಶೇಷಾದ್ರಿ ಅಯ್ಯರ್‌ರವರು ಕೃಷ್ಣರಾಜ ಒಡೆಯರ ತಾಯಿ ಕೆಂಪನಂಜಮ್ಮಣ್ಣಿ ವಾಣಿವಿಲಾಸರವರ ಹೆಸರಿನಲ್ಲಿ ನಿರ್ಮಿಸಿದರು. ಈ ಅಣೆಕಟ್ಟಿನ ಉದ್ದ ೧೩೩೦ ಅಡಿ ಮತ್ತು ಅಗಲ ೧೫೦ ಅಡಿ ಹಾಗೂ ಎತ್ತರ ೧೪೨ ಅಡಿಗಳು. ೧೯೦೭ರಲ್ಲಿ ನಿರ್ಮಾಣಗೊಂಡಾಗ ಭಾರತದ ಅತಿದೊಡ್ಡ ಅಣೆಕಟ್ಟು ಎಂಬ ಖ್ಯಾತಿಯನ್ನು ಪಡೆದಿತ್ತು. ಇದನ್ನು ಗಾರೆ ಮತ್ತು ಸುಟ್ಟ ಇಟ್ಟಿಗೆಗಳಿಂದ ನಿರ್ಮಿಸಲಾಗಿದೆ.

 

ಗಾಯತ್ರಿ ಜಲಾಶಯ

ತಲುಪುವುದು ಹೇಗೆ ?
ಹಿರಿಯೂರು ಬೆಂಗಳೂರು ಮಾರ್ಗದಲ್ಲಿದೆ.

ದೂರ
ಜಿಲ್ಲಾ ಕೇಂದ್ರದಿಂದ: ೬೪ ಕಿ.ಮೀ.
ತಾಲ್ಲೂಕು ಕೇಂದ್ರದಿಂದ: ೧೮ ಕಿ.ಮೀ.

ಹಿರಿಯೂರು ತಾಲ್ಲೂಕಿನ ಜವಗೊಂಡನಹಳ್ಳಿಯಿಂದ ಆರು ಕಿ.ಮೀ. ದೂರದಲ್ಲಿದೆ. ಮೊದಲು ಕರಿಯಾಲಕೆರೆಯೆಂದು ಕರೆಯಲ್ಪಡುತ್ತಿದ್ದು ನಂತರ ನಾಲ್ವಡಿ ಕೃಷ್ಣರಾಜ ಒಡೆಯರ್‌ಅವರ ಮೊಮ್ಮಗಳು ಗಾಯತ್ರಿ ಹೆಸರಿನಿಂದ ಕರೆಯಲ್ಪಡುತ್ತಿದೆ. ೧೯೫೮ರಲ್ಲಿ ದೊಡ್ಡ ಹಳ್ಳಕ್ಕೆ ಅಣೆಕಟ್ಟೆಯನ್ನು ಕಾಂಪೊಸಿಟ್‌ವಿಧಾನದಲ್ಲಿ ಕಟ್ಟಲಾಗಿದೆ ಅಂದರೆ ಕೆರೆ ತುಂಬಿದ ನಂತರ ಮಧ್ಯದಲ್ಲಿ ನೀರು ಹೊರ ಹೋಗಲು ಕಲ್ಲು ಮತ್ತು ಗಾರೆಗಳ ಕೋಡಿಯನ್ನು ನಿರ್ಮಿಸಿದೆ. ಕೆರೆಯ ನೀರಿನ ಒಟ್ಟು ಸಾಮರ್ಥ್ಯ ೦.೯೭ ಟಿ.ಎಂ.ಸಿ.