ಸಂಪಿಗೆ ಸಿದ್ದೇಶ್ವರ ದೇವಾಲಯ

ಅತ್ಯಂತ ಕಠಿಣವಾದ ಗ್ರಾನೈಟ್‌ಹಾಗೂ ಅಚ್ಚುಗಾರೆಯಿಂದ ನಿರ್ಮಿಸಲಾಗಿರುವ ಈ ದೇವಾಲಯ ಕೋಟೆಯ ಮಧ್ಯದ ಆಕರ್ಷಣೆಗಳಲ್ಲಿ ಒಂದು.

ಸಂಪಿಗೆ ಸಿದ್ದೇಶ್ವರ ದೇವಾಲಯದ ಒಳಗಿನ ಗಾರೆಶಿಲ್ಪಗಳು ಹಾಗೂ ವಿಶಾಲವಾದ ಅಂಗಳ

 

ಚಿತ್ರದುರ್ಗದ ಕೋಟೆಯ ದೃಶ್ಯಾವಳಿಯ ವಿಹಂಗಮ ನೋಟ

ಚಿತ್ರದುರ್ಗದ ಕೋಟೆಯ ಮೇಲೆ ನೋಡಬಹುದಾದ ಪ್ರವಾಸಿ ಆಕರ್ಷಣೆಗಳೆಂದರೆ ಗಾಳಿಮಂಟಪ, ಉಯ್ಯಾಲೆ ಕಂಬ, ಮುರುಘಾಮಠ, ಆನೆ-ಕುದುರೆ ಹೆಜ್ಜೆಗಳು, ಎಣ್ಣೆಕೊಳ, ತುಪ್ಪದಕೊಳ, ಪಾಳುಬಿದ್ದ ಅರಮನೆ, ಗೋಪಾಲಸ್ವಾಮಿ ಹೊಂಡ, ಏಕನಾಥೇಶ್ವರಿ, ಹಿಡಿಂಬೇಶ್ವರ, ಸಂಪಿಗೆ ಸಿದ್ದೇಶ್ವರ, ಒಂಟಿಕಲ್ಲು ಬಸವ, ಬನಶಂಕರಿ, ಗಣಪತಿ, ಗೋಪಾಲಸ್ವಾಮಿ, ಆಂಜನೇಯಸ್ವಾಮಿ ದೇವಾಲಯಗಳು, ಬತೇರಿ ಮತ್ತು ಕಾವಲು ಗೋಪುರಗಳು, ಒನಕೆ ಓಬವ್ವನ ಕಿಂಡಿ ಇವು ಪ್ರಮುಖವಾದರೆ ಇನ್ನು ಹಲವಾರು ಚಿಕ್ಕಪುಟ್ಟ ಅಂಶಗಳು ಸೇರಿವೆ.

 

ಗೋಪಾಲಸ್ವಾಮಿ ಹೊಂಡ

ಮೇಲುದುರ್ಗಕ್ಕೆ (ಕೋಟೆಯ ಒಳಭಾಗ) ನೀರಿನ ಮೂಲವಾದ ಐತಿಹಾಸಿಕ ಗೋಪಾಲಸ್ವಾಮಿ ಹೊಂಡ. ಈ ಹೊಂಡ ಬೆಟ್ಟದ ಮೇಲಿದ್ದರೂ ಎಂದೂ ನೀರು ಬತ್ತದಿರುವುದು ವಿಶೇಷ.

ಬತೇರಿಗೆ ಹೋಗುವ ಮೆಟ್ಟಿಲು


ಗೋಪಾಲಸ್ವಾಮಿ ದೇವಾಲಯ

ವಿಶಾಲವಾದ ಜಗಲಿಯ ಮೇಲೆ ಗ್ರಾನೈಟ್‌ಕಲ್ಲು ಹಾಗೂ ಗಾರೆಯಿಂದ ನಿರ್ಮಾಣವಾಗಿರುವ ಗೋಪಾಲಸ್ವಾಮಿ ದೇವಾಲಯ ಕೋಟೆಯೊಳಗಿನ ಮುಖ್ಯವಾದ ದೇವಾಲಯಗಳಲ್ಲಿ ಒಂದಗಿದೆ. ಹೊಂಡದ ಎದುರಿಗಿರುವ ಈ ದೇವಾಲಯ ಪೂರ್ವಾಭಿಮುಖವಾಗಿದೆ.

 

ಗೋಪಾಲಸ್ವಾಮಿ ಉತ್ಸವಮೂರ್ತಿ

 

ಅಕ್ಕತಂಗಿ ಹೊಂಡ

ಗೋಪಾಲಸ್ವಾಮಿ ಹೊಂಡದ ದಾರಿಯಲ್ಲಿ ಸಿಗುವ ಅಕ್ಕ-ತಂಗಿ ಜೋಡಿ ಹೊಂಡ.

ತಂಗಿ ಹೊಂಡದ ಬದಿಯಲ್ಲಿಯೇ ಸಿವ ಹಾಗೂ ಆಂಜನೇಯನ ದೇವಾಲಯಗಳ ನೋಟ

 

ತಣ್ಣೀರು ದೊಣೆ

ವರ್ಷದ ಎಲ್ಲಾ ದಿನಗಳಲ್ಲಿಯೂ ತಂಪಾದ ಸಿಹಿನೀರಿನ ಮೂಲ. ಕೋಟೆಯ ಎಲ್ಲಾ ಸ್ಥಳಗಳನ್ನು ನೋಡಿದ ದಣಿದ ಪ್ರವಾಸಿಗರ ತೃಷೆಯನ್ನು ಶತಮಾನಗಳಿಂದ ತಣಿಸುತ್ತಿದೆ ಈ ತಣ್ಣೀರುದೊಣೆ.

ಒನಕೆ ಓಬವ್ವನ ಕಿಂಡಿಯ ಬಳಿಯ ಆಂಜನೇಯಸ್ವಾಮಿಯ ದೇವಾಲಯ


ಒನಕೆ ಓಬವ್ವನ ಕಿಂಡಿ

ಚಿತ್ರದುರ್ಗದ ಕೋಟೆಯ ವಾಯುವ್ಯ ದಿಕ್ಕಿನಲ್ಲಿ ಕಾಣುವ ಈ ಸ್ಥಳ ಬಹಳ ವಿಶಿಷ್ಟವಾದದ್ದು, ಹೈದರಾಲಿಯು ಚಿತ್ರದುರ್ಗದ ಕೋಟೆಯನ್ನು ಮುತ್ತಿದಾಗ ಗತ್ಯಂತರವಿಲ್ಲದೆ ಈ ಗುಪ್ತದ್ವಾರದ ಮುಖಾಂತರ ಸೈನಿಕರು ಕೋಟೆಯನ್ನು ಪ್ರವೇಶಿಸಲು ಪ್ರಯತ್ನ ಮಾಡುತ್ತಾರೆ, ಕಾವಲುಗಾರನ ಹೆಂಡತಿ ಓಬವ್ವ ಕಿಂಡಿಯಿಂದ ನುಸುಳುತ್ತಿದ್ದ ಸೈನಿಕರನ್ನು ಕೊಂದು ಕೋಟೆಯನ್ನು ರಕ್ಷಿಸಿದ ಕಥೆ ಜನಜನಿತವಾಗಿದೆ.

ಉಕ್ಕಿನ ಕೋಟೆಯ ಅಭೇದ್ಯ ಗೋಡೆಗಳು

 

ಶ್ರೀ ರಾಜ ಉತ್ಸವಾಂಬ ಉಚ್ಚಂಗಿ ಎಲ್ಲಮ್ಮ ದೇವಾಲಯ

ಕೋಟೆಯಿಂದ ಕೆಳಗೆ ಇಳಿದು ಬಂದರೆ ಆನೆಬಾಗಿಲು ದಾರಿಯಲ್ಲಿ ಕಾಣಸಿಗುವ ರಾಜಉತ್ಸವಾಂಬ ಉಚ್ಚಂಗಿ ಎಲ್ಲಮ್ಮನ ದೇವಾಲಯ.

ಉಚ್ಚಂಗಿ ಎಲ್ಲಮ್ಮನ ದೇವಾಲಯದ ಒಳಗಿನ ಮಂಟಪ

ಉಚ್ಚಂಗಿ ಎಲ್ಲಮ್ಮನ ಉತ್ಸವಮೂರ್ತಿ

 

ಪ್ರಾಚ್ಯವಸ್ತು ಸಂಗ್ರಹಾಲಯ

ಉಚ್ಚಂಗಿ ಎಲ್ಲಮ್ಮನ ಉತ್ಸವಮೂರ್ತಿ

ಏಳುಸುತ್ತಿನ ಕೋಟೆಯ ಬಾಗಿಲುಗಳಲ್ಲಿ ಒಂದಾದ ರಂಗಯ್ಯನ ಬಾಗಿಲು ಬಳಿ ಇರುವ ಪ್ರಾಚ್ಯವಸ್ತು ಸಂಗ್ರಹಾಲಯ.

 

ಆಕಾಶವಾಣಿ ಕೇಂದ್ರ ಚಿತ್ರದುರ್ಗ

ಮಧ್ಯಕರ್ನಾಟಕದ ಅತ್ಯಂತ ಜನಪ್ರಿಯವಾದ ಎಫ್‌.ಎಂ. ಆಕಾಶವಾಣಿ ಕೇಂದ್ರವಾದ ಚಿತ್ರದುರ್ಗ ಆಕಾಶವಾಣಿ ಕೇಂದ್ರವು ಶೈಕ್ಷಣಿಕವಾಗಿ ಅಷ್ಟೇ ಅಲ್ಲದೆ, ಸಮೂಹ ಶಿಕ್ಷಣ ಮಾಧ್ಯಮವಾಗಿ ತುಂಬಾ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಲ್ಪಡುತ್ತಿದೆ. ೧೯೯೧ರಲ್ಲಿ ಸ್ಥಾಪನೆಯಾಗಿ ಅತ್ಯಂತ ಯಶಸ್ವಿಯಾಗಿ ಮಕ್ಕಳ ಶೈಕ್ಷಣಿಕ ಕಾರ್ಯಕ್ರಮಗಳನ್ನು ಬಿತ್ತರಗೊಳಿಸುತ್ತಿದೆ. ಮಕ್ಕಳ ಶೈಕ್ಷಣಿಕ ಪ್ರವಾಸದ ದೃಷ್ಟಿಯಿಂದ ನೋಡಲೇಬೇಕಾದ ಕೇಂದ್ರವಾಗಿದೆ.