ಚಂದ್ರವಳ್ಳಿ ಕೆರೆ, ಹಿನ್ನೆಲೆಯಲ್ಲಿ ಧವಳಪ್ಪನ ಗುಡ್ಡ
“ಚಿತ್ರದುರ್ಗ” ಎಂದು ಕರೆಯುವುದಕ್ಕಿಂತ ಮೊದಲು ಇದನ್ನು ಚಂದ್ರವಳ್ಳಿ, ಚಿನ್ಮೂಲಾದ್ರಿ ಎಂದು ಕರೆಯಲಾಗುತ್ತಿತ್ತು ಎಂದು ಇತಿಹಾಸ ಹೇಳುತ್ತದೆ. ಚಿತ್ರದುರ್ಗಕ್ಕೆ ಈಗಿರುವ ಹೆಸರು ಬರಲು ಇತಿಹಾಸಕಾರರು ಹಲವಾರು ಕಾರಣಗಳನ್ನು ನೀಡುತ್ತಾರೆ. ಅದರಲ್ಲಿ ಧವಳಪ್ಪನಗುಡ್ಡವೂ ಸಹ ಒಂದಾಗಿದೆ. ಏಕೆಂದರೆ ಈ ಧವಳಪ್ಪನಗುಡ್ಡ ದೂರದಿಂದ ಬಿಚ್ಚಿದ ಛತ್ರಿಯಂತೆ ಕಾಣುತ್ತದೆ. ಅದಕ್ಕಾಗಿ ಛತ್ರಿಕಲ್ಲುದುರ್ಗ ಕ್ರಮೇಣ ಚಿತ್ರಕಲ್ಲುದುರ್ಗ, ಚಿತ್ರದುರ್ಗ ಆಯಿತು ಎಂದು ಹೇಳಲಾಗುತ್ತದೆ.
ಅಂಕಲಿಮಠ
ಚಂದ್ರವಳ್ಳಿ ಕೆರೆಯ ಮುಂಭಾಗದಲ್ಲಿ ನೋಡಬಹುದಾದ ಅಂಕಲಿಮಠವು ಆಧ್ಯಾತ್ಮಿಕವಾಗಿ, ಐತಿಹಾಸಿಕವಾಗಿ ವಿಶೇಷತೆಯನ್ನು ಹೊಂದಿದೆ. ಗುಹೆ ಹಾಗೂ ಸುರಂಗ ಮಾರ್ಗದಿಂದ ಗಮನ ಸೆಳೆಯುವ ಅಂಕಲಿಮಠವು ಐತಿಹಾಸಿಕ ಪುರಾವೆಗಳನ್ನು ಸಹ ಹೊಂದಿದೆ. ನೆಲಮಟ್ಟದಿಮದ ೪೦ ಅಡಿ ಆಳಕ್ಕೆ ಹೋದರು ಗಾಳಿಯ ಕೊರತೆಯಾಗದಂತೆ ನಿರ್ಮಿಸಲಾಗಿರುವ ಇದು ವೈಜ್ಞಾನಿಕವಾಗಿಯೂ ವಿಶೇಷವಾಗಿದೆ.
ಆಡುಮಲ್ಲೇಶ್ವರ ಬಾಲವನ
ಚಿತ್ರದುರ್ಗ ನಗರದಿಂದ ದಕ್ಷಿಣಕ್ಕೆ ೩ ಕಿ.ಮೀ. ದೂರದಲ್ಲಿರುವ ಆಡುಮಲ್ಲೇಶ್ವರ ಬಾಲೋದ್ಯಾನದಲ್ಲಿ ಮಕ್ಕಳಿಗೆ ಕಿರುಪ್ರಾಣಿಸಂಗ್ರಹಾಲಯ, ಸಸ್ಯೋದ್ಯಾನ ನಿರ್ಮಿಸಲಾಗಿದೆ.
ಗಾಳಿ ವಿದ್ಯುತ್ಯಂತ್ರ
ಚಿತ್ರದುರ್ಗ ನಗರದಿಂದ ದಕ್ಷಿಣಕ್ಕೆ ೧೫ ಕಿ.ಮೀ. ದೂರದಲ್ಲಿರುವ ಜೋಗಿಮಟ್ಟಿ ಗಿರಿಧಾಮವು ಸಮುದ್ರ ಮಟ್ಟದಿಂದ ೩೬೪೨ ಮೀ. ಎತ್ತರದಲ್ಲಿದೆ. ಜುಲೈ/ಆಗಸ್ಟ್ತಿಂಗಳುಗಳಲ್ಲಿ ಏಷ್ಯಾದಲ್ಲೇ ಅತ್ಯಂತ ಹೆಚ್ಚಿನ ಗಾಳಿ ವೇಗವನ್ನು ಇಲ್ಲಿ ಗಮನಿಸಲಾಗಿದೆ ಹಾಗಾಗಿ ನವೀಕೃತ ವಿದ್ಯುತ್ಮೂಲವಾದ ಪವನಶಕ್ತಿ ಬಳಸಿ ರಾಷ್ಟ್ರದಲ್ಲೇ ಮೊದಲ ಬಾರಿಗೆ ಈ ಪ್ರಾಂತ್ಯದಲ್ಲಿ ವಿದ್ಯುತ್ಉತ್ಪಾದನೆ ಮಾಡಲಾಗಿದೆ.
ಸಿರಿಗೆರೆ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಐಕ್ಯಮಂಟಪ
ತಲುಪುವುದು ಹೇಗೆ ?
ಚಿತ್ರದುರ್ಗ-ದಾವಣಗೆರೆ ರಸ್ತೆ
(ರಾ.ಹೆ. ಸಂಖ್ಯೆ – ೪) ಸಿರಿಗೆರೆ ಕ್ರಾಸ್ನಿಂದ ೮ ಕಿ.ಮೀ. ದೂರದಲ್ಲಿದೆ.
ದೂರ
ಜಿಲ್ಲಾಕೇಂದ್ರದಿಂದ: ೩೦ ಕಿ.ಮೀ.
ತಾಲ್ಲೂಕು ಕೇಂದ್ರದಿಂದ: ೩೦ ಕಿ.ಮೀ.
ಚಿತ್ರದುರ್ಗ ನಗರದಿಂದ ಪಶ್ಚಿಮಕ್ಕೆ ೩೦ ಕಿ.ಮೀ. ದೂರದಲ್ಲಿರುವ ಸಿರಿಗೆರೆ ಧಾರ್ಮಿಕ, ಶಿಕ್ಷಣ ಕೇಂದ್ರವಾಗಿ ಹಾಗೂ ಪ್ರವಾಸಿ ತಾಣವಾಗಿಯೂ ಗಮನ ಸೆಳೆದಿದೆ. ಚಿತ್ರದಲ್ಲಿ ಕಾಣುತ್ತಿರುವುದು ತರಳಬಾಳು ಜಗದ್ಗುರು ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳ ಲಿಂಗೈಕ್ಯ ಮಂಟಪ.
Leave A Comment