ಜಗತ್ತಿನ ಪ್ರತಿಯೊಂದು ರಾಷ್ಟ್ರಕ್ಕೂ ಒಂದೊಂದು ಧರ್ಮ, ಸಂಸ್ಕೃತಿ, ಪರಂಪರೆಗಳಂತೆ ಇತರೆ ಚಾರಿತ್ರಿಕ ಸಂಗತಿಗಳು ಆ ದೇಶದ ಹೆಮ್ಮೆಯನ್ನು ಸಾರುತ್ತವೆ. ಭೂಮಿಯ ಬೇಲಿರುವ ೭ ಖಂಡಗಳಲ್ಲಿಯು ಸಂಸ್ಕೃತಿ ಏಕರೀತಿಯಾಗಿಲ್ಲ. ಯುರೋಪ್, ಏಷ್ಯಾ, ಆಫ್ರಿಕಾ, ಆಸ್ಟ್ರೇಲಿಯಾ ಹೀಗೆ ಇತರ ಖಂಡಗಳಲ್ಲಿ ಜನಜೀವನ, ಸಂಸ್ಕೃತಿ ಮತ್ತು ರಾಜಕೀಯ ಪ್ರಭುತ್ವವು ವೈವಿಧ್ಯಮಯವಾಗಿದ್ದು, ಭಾರತ ಇತರ ದೇಶಗಳಿಗೆ ಮಾದರಿಯಾಗಿರುವುದು ಗಮನಾರ್ಹ.

ಯೂರೋಪ್‌ನಲ್ಲಿ ನಡೆದಂಥ ಪುನರುಜ್ಜೀವನ, ಧರ್ಮಸುಧಾರಣೆಗಳಂತೆ ಭಾರತದಲ್ಲಿ ಇಂಥಾ ಯಾವ ಕ್ರಾಂತಿ, ಬದಲಾವಣೆಗಳಾಗಲಿಲ್ಲ. ಅಮೆರಿಕಾಕ್ರಾಂತಿ (ಸ್ವಾತಂತ್ರ್ಯ), ಫ್ರಾನ್ಸಿನ ಇಂಥಾ ಪರಿವರ್ತನೆ ಭಾರತದಲ್ಲಾದುದು ಬಹಳ ತಡವಾಗಿ ಎನ್ನಬಹುದು. ಏಷ್ಯಾ ರಾಷ್ಟ್ರಗಳು ವಸಾಹತುಶಾಹಿಗೊಳಗಾದ ಸಂದರ್ಭದಲ್ಲಿ ಅವು ಅನುಭವಿಸಿದ ಯಾತನೆ ನರಕ ಸದೃಶ್ಯವೇ ಸರಿ. ಈ ರಾಷ್ಟ್ರಗಳಲ್ಲಿ ಮರೆಯಾದ ಜನಾಂಗಿಕ ಕುರುಹುಗಳನ್ನು ಚರಿತ್ರೆಯ ಮೂಲಕ ಕಟ್ಟಿಕೊಡುವುದು ಕಠಿಣ. ಅವರ ಆಳ್ವಿಕೆಗೆ ತಕ್ಕಂತೆ ಜನರ ಮನವೊಲಿಸಲು ಸ್ಥಳೀಯರು ಸ್ಪಂಧಿಸಲಿಲ್ಲ. ಈ ಬಗೆಯ ಪರಿಣಾಮಗಳಿಂದ ತಮ್ಮನ್ನು ತಾವು ಹೇಗೆ ತೋರ್ಪಡಿಸಿಕೊಳ್ಳಬೇಕೆಂದು ಈ ಸಮುದಾಯಗಳು ಕಾತರಿಸುತ್ತವೆ. ಭಾರತದಂಥ ಸಂಪ್ರದಾಯಶೀಲ ರಾಷ್ಟ್ರದಲ್ಲಿ ಹಿಂದೂ ಧರ್ಮದ ನೆರಳಲ್ಲಿಯೇ ಅನೇಕರು (ಇತರ ಧರ್ಮಗಳು) ಬದುಕುತ್ತಿದ್ದಾರೆ. ಕೆಲವರು ಅಪ್ರಸ್ತುತ ಸಂಪ್ರದಾಯಗಳಿಗೆ ವಿದಾಯ ಹೇಳಲು, ಹಿಂದೂ ಧರ್ಮವನ್ನು ಪರಿಷ್ಕರಿಸಿಕೊಳ್ಳಲು ಮುಂದಾಗುತ್ತಿದ್ದಾರೆ. ದೇಶದ ಭವಿಷ್ಯವು ಅಡಗಿರುವುದು ಇಂಥಾ ಅಲಕ್ಷಿತ, ದಲಿತ ಬುಡಕಟ್ಟು ವರ್ಗಗಳಿಂದಲೇ ಎಂಬುದು ಸತ್ಯ. ದಕ್ಷಿಣಭಾರತದ ಕರ್ನಾಟಕದಲ್ಲಿ ಸಾಂಸ್ಕೃತಿಕ ಚರಿತ್ರೆಯ ಮೂಲಕ ಭಾರತೀಯ ಸಂಸ್ಕೃತಿಯನ್ನು ಗ್ರಹಿಸುತ್ತೇವೆ. ಭಾರತೀಯ ಸಂಸ್ಕೃತಿಯನ್ನು ಗ್ರಹಿಸುತ್ತೇವೆ. ಭಾರತೀಯ ಸಂಸ್ಕೃತಿಯ ಚೌಕಟ್ಟಿನಲ್ಲಿ ಕರ್ನಾಟಕದ ಸಂಸ್ಕೃತಿಯನ್ನು ವಿಶ್ಲೇಷಿಸಲಾಗುವುದು. ಅದು ಮೌಖಿಕ ಪರಂಪರೆಯನ್ನು ಹೆಚ್ಚಾಗಿ ಒಳಗೊಂಡಿರುತ್ತದೆ. ಚಿತ್ರದುರ್ಗ ಜಿಲ್ಲೆಯ ಬೇಡ ಬುಡಕಟ್ಟು ವೀರರನ್ನು ಪಾಳೆಯಗಾರ, ಅರಸ, ಒಡೆಯ,, ದೊರೆ ಎಂದು ಕರೆಯದೇ ಸಾಂಸ್ಕೃತಿಕ ಮುಖಂಡನಾಗಿ ನೋಡಿರುವುದು ವಾಸ್ತವ, ಒಂದೆಡೆ ಸಂಸ್ಕೃತಿ ನಿರ್ಮಾಣದ ಕನಸು. ಇನ್ನೊಂದೆಡೆ ಮುಖಂಡನಾಗಿ ಸಂಸ್ಕೃತಿ ಪ್ರಸಾರ, ನ್ಯಾಯಸಮ್ಮತ ಜೀವನಕ್ಕೆ ಒಳಪಡಿಸುವುದು ಸ್ಪಷ್ಟ. ಪಾಳೆಯಗಾರರಂತೆ ಆಳ್ವಿಕೆ ನಡೆಸದೇ ಹೋದರೂ ಬುಡಕಟ್ಟು ವೀರರಿಗೆ ವ್ರಯಾಪಕ ಪ್ರಚಾರ ಸಿಕ್ಕಿರುವುದು ಆರಾಧನೆ ಮೂಲಕ. ಆಳುವ ಲಕ್ಷಣಗಳು ಮರೆಯಾಗಿ, ಸಮಾಜದೊಡನೆ ಪರಸ್ಪರ ಬಾಂಧವ್ಯ, ಒಡನಾಟ ಬೆಳೆಸಿರುವುದು ಔಚಿತ್ಯಪೂರ್ಣಸಂಗತಿ. ವೀರರನ್ನು ಬುಡಕಟ್ಟಿನ ನೆಲೆಯಲ್ಲಿ ಅವಲೋಕಿಸಿದರೂ ಸಾಂಸ್ಕೃತಿಕ ವೀರರಾಗಿಯೇ ಅವರು ಅಪ್ರತಿಮ ಮೆರುಗು ಪಡೆದಿರುವರು.

ಬೇಡ ಬುಡಕಟ್ಟಿನಂತೆ ಇತರರಲ್ಲಿ ಬುಡಕಟ್ಟಿ ವೀರರು ಕಂಡುಬರುತ್ತಾರೆ. ವಿಶೇಷವಾಗಿ ಮ್ಯಾಸಬೇಡರು ತಮ್ಮ ಪ್ರಾಚೀನ ಪರಂಪರೆಯನ್ನು ಮೌಖಿಕ ರೂಪದಲ್ಲಿ ಅನೂಚಾನವಾಗಿ ಉಳಿಸಿಕೊಂಡು ಬಂದಿರುವರು. ಬೆಟ್ಟ – ಗುಡ್ಡ, ಕಾಡುಗಳಲ್ಲಿ ಅಲೆದಾಡಿ ಆಹಾರಕ್ಕೆ ಬೇಟೆಯಾಡುತ್ತಾ ಅಲ್ಲಲ್ಲಿ ವಾಸಿಸುತ್ತಿದ್ದರು. ಬೇಟೆಯ ವಿಕಸನವು ವಿವಿಧ ವೃತ್ತಿಗಳ ಅಲೆದಾಟಕ್ಕೆ ಆಸ್ಪದವಾಯಿತು. ಪಶುಪಾಲನಾ ಸಂದರ್ಭದಲ್ಲಿ ಕಾಡಿನ ಕ್ರೂರ ಪ್ರಾಣಿಗಳ ಹತ್ಯ ನಿರಂತರವಾಗಿತ್ತು. ಪ್ರಾಣಿಗಳನ್ನು ಕೊಲ್ಲುವುದು ಅಂದು ಇಲ್ಲಾ ಬುಡಕಟ್ಟು ಜನರಿಗೆ ಸರ್ವಮಾನ್ಯವಾಗಿರುವಂತಿತ್ತು. ಕೃಷಿ ವ್ಯವಸ್ಥೆಯಲ್ಲಿ ಹೊಂದಾಣಿಕೆಯ ಪ್ರವೃತ್ತಿಯನ್ನು ಕಾಣುವ ಹಂಬಲವಿದೆ. ಗ್ರಾಮೀಣ ಆರ್ಥಿಕ ಪರಿಸ್ಥಿತಿ ಹಿನ್ನೆಡೆಗೆ ಕಾರಣವಾಗಿ ಜನರು ವಲಸೆ ಹೋಗುತ್ತಿದ್ದರು. ಅವಿಭಕ್ತ ಕುಟುಂಬಗಳಿದ್ದು, ಸಾಮಾನ್ಯ ಜನಜೀವನ ಚಾಲ್ತಿಯಲ್ಲಿತ್ತು. ಇಡೀ ಗುಂಪಿಗೆ ಒಬ್ಬ ನಾಯಕ, ಒಂದು ದೇವರು ಒಮದು ಆಚಾರ – ವಿಚಾರವಿದ್ದರೂ, ಕುಟುಂಬಗಳ ದ್ವಿಗುಣದಿಂದ ಮೊದಲಿದ್ದ ಕಟ್ಟುನಿಟ್ಟಿನ ಸಂಪ್ರದಾಯಗಳು ಸಡಿಲಗೊಂಡವು.

ಬೇಡರ ಮೂಲದ ಬಗೆಗೆ ಒಮ್ಮತಾಭಿಪ್ರಾಯ ಇಲ್ಲವಾದರೂ, ಕೆಲವು ಸಿದ್ಧಾಂತಗಳು ಸಾಕ್ಷಿಯಾಗಿವೆ. ಇವರು ಮೂಲತಃ ಉತ್ತರ ಭಾರತದಿಂದ ಬಂದವರೆಂದು ಬಹುಜನರ ಅಭಿಪ್ರಾಯ. ಇಲ್ಲಿನ ಬೇಡನಾಯಕರ ಕಥಾಪ್ರಸಂಗಗಳು ಬಹುತೇಕ ಕರ್ಣಾ (ನಾ) ಟಕಾಂಧ್ರವನ್ನು ಕೇಂದ್ರಿಕರಿಸಿಕೊಂಡಿವೆ. ಕರ್ನಾಟಕದ ಬೇಡರು ಆಂಧ್ರದ ಶ್ರೀಶೈಲ (ನಲಮಲ – ಯರಮಲ) ಮತ್ತಿತರ ಪ್ರದೇಶಗಳಿಂದ ಒವಲೆ ಬಂದವರೆಂದು ಹೇಳಗಾಗುತ್ತಿದೆ. ಆದರೆ ಇದಕ್ಕೂ ಪೂರ್ವದಲ್ಲಿ ಇಲ್ಲಿ ಬೇಡರಿದ್ದರು. ಶಿಲಾಯುಗದಲ್ಲಿ ಬೇಟೆಗಾರರ ಸಮುದಾಯಗಳಿದ್ದವು. ಬೇಟೆಗಾರರು ಕ್ರಮೇಣ ಬೇಡರಾದರು. ವಿವಿಧ ರಾಜ್ಯಾಳ್ವಿಕೆಗಳಲ್ಲಿ ಇವರು ಸಿಂಹಪಾಲನ್ನು ಪಡೆದಿರುವುದು ತಮ್ಮ ಸೇವಾ ಮನೋಭಾವದಿಂದ. ಇವರ ಪರಂಪರೆಯು ಬೆಳೆದಂತೆ ಸಮುದಾಯ ಇಬ್ಭಾಗವಾಯಿತು. ಊರುಬೇಡರು ಮತ್ತು ಮ್ಯಾಸಬೇಡರೆಂದು, ಊರಬೇಡರು ನಾಗರಿಕ ಜನರಾದರೆ, ಮ್ಯಾಸಬೇಡರು ಆದಿವಾಸಿ (ಬುಡಕಟ್ಟು), ಕಾಡಿನ ಜನರೆಂದು ಗುರುತಿಸುತ್ತಾರೆ. ಸಂಪದ್ಬರಿತ ಸಂಸ್ಕೃತಿ ಹೊಂದಿದವರು ಮ್ಯಾಸಬೇಡರು. ಇವರು ಇಲ್ಲಿಯವರೆಗೆ ಕಟ್ಟಿನಿಟ್ಟಿನ ಜೀವನ ಅನುಸರಿಸಿಕೊಂಡು ಬಂದಿದ್ದಋಎ. ಕೋಳಿ ತಿನ್ನುವಂತಿಲ್ಲ, ಕಪ್ಪುಬಣ್ಣದ ಬಟ್ಟೆಗೊಡುವಂತಿಲ್ಲ. ಕೆಲವರು ತಾಳಿಕಟ್ಟಿದ ಕರಿಮಣಿ ಕಟ್ಟಕೊಳ್ಳುತ್ತಾರೆ. ವಡೆಲಾರು ಎಂಬುವರು ನವಣೆ ಹೊಲದಲ್ಲಿ ನಡೆಯುವುದಿಲ್ಲ ಮತ್ತು ನವಣೆ ತಿನ್ನುವುದಿಲ್ಲ. ಕೆಲ ಮಹಿಳೆಯರು ಕುಪ್ಪಸ ತೊಡುವುದಿಲ್ಲ. ಗಂಡರಲ್ಲಿ ಪುಡಗೋಸಿ, ಚಲ್ಯಾಣ, ದೊತ್ರಿ ಚಾಲ್ತಿಯಲ್ಲಿವೆ. ತಲೆಗೆ ರೂಮಾಲು ಸುತ್ತುವವರು ತಮ್ಮ ತಲೆಗೂದಲನ್ನು ಕತ್ತಿರಿಸಕೊಳ್ಳುವುದಿಲ್ಲ.

ಜಾತಿ ವ್ಯವಸ್ಥೆ ಜಡ್ಡು ಗಟ್ಟಿದ ಬಗ್ಗೆ ಅನೇಕ ಉಲ್ಲೇಖಗಳಿವೆ. ಬಿಗಿ ಕ್ರಮಗಳಿಂದ ಜನರು ತತ್ತರಿಸಿದ್ದರು. ಇಲ್ಲಿ ಊರು ಮತ್ತು ಮ್ಯಾಸನಾಯಕರಲ್ಲಿ ಉಟೋಪಚಾರವಾಗಲಿ, ಮದುವೆ – ಮುಂಜಿಯಾಗಲಿ ನಡೆಯುತ್ತಿರಲಿಲ್ಲ. ಹಾಗೇನಾದರೂ ಸಂಭವಿಸಿದರೆ ಅಂಥ ವ್ಯಕ್ತಿಯನ್ನು ಜಾತಿಯಿಂದ ಬಹಿಷ್ಕರಿಸುತ್ತಿದ್ದರು. ಇಲ್ಲವೆ ಪಂಚಾಯ್ತಿ ಕಟ್ಟೆಯಲ್ಲಿ ದಂಡಿಸುತ್ತಿದ್ದರು. ದಂಡವನ್ನು ಕಟ್ಟಸಿಕೊಂಡು ಅವನನ್ನು ಶುದ್ಧಮಾಡಲಾಗುತ್ತಿತ್ತು. ಇವಕ್ಕೆ ಉದಾಹರಣೆಯೆಂದರೆ ೧೯೨೪ರಲ್ಲಿ ಹೊಳಕ್ಕೆರೆ ತಾಲೂಕಿನ ಗೋರ್ಲಹಳ್ಳಿ ರಂಗಪ್ಪನು ಚಿತ್ರದುರ್ಗ ತಾಲೂಕಿನ ಮುಚ್ಚುಗುಂಟೆಯಲ್ಲಿ ಮದುವೆಡ ಮಾಡಕೊಂಡು, ಊಟೋಪಚಾರ ಮಾಡುವುದರ ಮೂಲಕ ಜಾತಿಯ ನಿಯಮಗಳನ್ನು ಉಲ್ಲಂಘಿಸಿರುವನೆಂದು ಪಂಚಾಯ್ತಿ ನಡೆದು ಕೋರ್ಟಿಗೂ ಸಹ ಹೋಗಿದ್ದರು. ಹೀಗೆ ಮ್ಯಾಸಬೇಡರ ಪುರುಷ ಅಥವಾ ಮಹಿಳೆಯರು ಕಟ್ಟಿನಿಟ್ಟಿನ ಬದುಕನ್ನು ರೂಪಸಿಕೊಂಡಿದ್ದರು. ಇವರು ತಮ್ಮ ಸಂಸ್ಕೃತಿಯ ಅಭಿವೃದ್ಧಗಾಗಿ ೧೨ ಪೆಟ್ಟಗೆ ದೇವರು, ೭ ಜನ ಹಿರಿಯರು, ೩ ಜನ ನಾಯಕರು, ೩ ಜನ ಪೂಜಾರಿಗಳನ್ನು ನೇಮಿಸಿಕೊಂಡಿದ್ದರು. ಯರಮಂಚಿನಾಯಕನೇ ಎಲ್ಲರಿಗೂ ಹಿರಿಯ ಮತ್ತು ನಾಯಕ. ಈತ ಜಾತಿಯಿಲ್ಲದವರಿಗೆ ಜಾತಿಯ ದೀಕ್ಷೆ ಕೊಟ್ಟವನು. ಚಳ್ಳಕೆರೆ ತಾಲೂಕಿನ ಕೆಲವು ಮಾದಿಗರನ್ನು ಬಂಜಿಗೆರೆ ಓಬಳದೇವರಿಗೆ ಪರಿವರ್ತಿಸುವನು. ಜಾತಿ ಸಂಘಟನೆ ಮತ್ತು ಅಭಿವೃದ್ಧಯನ್ನು ಆಧ್ಯಾತ್ತಿಕ ನೆಲೆಯಲ್ಲಿಯೇ ಸಾಧಿಸುತ್ತಿದ್ದನು. ಮಧ್ಯಕಾಲೀನ ಸಂದರ್ಭದಲ್ಲಿ ಕಟ್ಟುನಿಟ್ಟಿನ ಸಂಪ್ರದಾಯಗಳಿದ್ದವು. ಇತ್ತೀಚೆಗೆ ಜನಸಂಖ್ಯೆ ಬೆಳದಂತೆ ನಾಗರಿಕತೆಯ ಪ್ರಭಾವ ಹೆಚ್ಚಿದಂತೆ ಆಚಾರ – ವಿಚಾರಗಳು ಮುಸುಕಾಗುತ್ತವೆ.

ಕರ್ನಾಟದ ಮಧ್ಯಭಾಗದ ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಜಿಲ್ಲೆಗಳಲ್ಲಿ ಇವರು ಜನಸಂಖ್ಯೆ ಹೆಚ್ಚಾಗಿದೆ. ಇಲ್ಲಿ ಮ್ಯಾಸಬೇಡರೇ ವ್ಯಾಪಕವಾಗಿ ನೆಲೆಸಿರುವುದು ವಿಶೇಷ. ಇವರು ಉಡುಗೆತೊಡುಗೆ, ಆಹಾರ ಸೇವನೆಯಲ್ಲಿಯೂ ಮಾತೃಭಾಷೆಗಳಲ್ಲಿ ತೆಲುಗನ್ನು ಅವಲಂಬಿಸಿರುವುದು ಇತರರಿಗಿಂತ ಭಿನ್ನ ಅಂಶಗಳನ್ನು ತೋರಿಸಿದಂತಾಗುತ್ತದೆ. ಹೆಚ್ಚಿನ ಸಂಖ್ಯೆಯ ಬೇಡರು ಚಲ್ಲಾಣ ತೊಟ್ಟು, ಕಂಬಳಿಯನ್ನು ಹೆಗಲಲ್ಲಿ ಧರಿಸುವರು. ಮಹಿಳೆಯರು ಸಹಾ ವಿಶಿಷ್ಟ ಉಡುಗೆತೊಡುಗೆಗಳನ್ನು ರೂಢಿಸಿಕೊಂಡಿದ್ದು, ಗರ್ಭಿಣಿ, ಮದುವೆ, ಮದುಮಗ, ಜನನ, ನಾಮಕರಣ ಮೊದಲಾದ ಸಂಸದರ್ಭಗಳಲ್ಲಿ ಇವರ ರೂಢಿಸಂಪ್ರದಾಯಗಳು ಮಹತ್ವದಿಂದ ಕೂಡಿವೆ.

ತಲೆಮಾರುಗಳಿಂದಲೂ ಶೋಷಣೆಗೊಳಗಾದ ಬೇಡರ ಬದುಕು ದುರಂತದಿಂದ ಕೂಡಿದ್ದಾಗಿದೆ. ಈ ಮೇಲಿನ ಲಕ್ಷಣಗಳನ್ನು ಹೊಂದದ ಬೇಡರು ಆಗಾಗ ಪಿತೃ ಆರಾಧನೆಗೆ ಹೆಚ್ಚಿನ ಒಲವನ್ನು ತೋರಿಸಿದ್ದಾರೆ. ಇವರಲ್ಲಿ ಆರ್ಯ ಮತ್ತು ದ್ರಾವಿಢ ಸಂಸ್ಕೃತಿಗಳ ದಟ್ಟವಾದ ಪ್ರಭಾವವಿದೆ. ಹಿರಿಯ ವಂಶಸ್ಥರಾದ ಕುಟುಂಬದ ಯಜಮಾನ ತೀರಿಕೊಂಡರೆ ಹಬ್ಬವೆಂದು ಪ್ರತಿವರ್ಷ ಮಾಡುತ್ತಾರೆ. ಆಯುಧಗಳಿಗೆ ಪೂಜೆ ಸಲ್ಲಿಸುವರು. ತಾತ, ಮುತ್ತಾತಂದಿರು ಮೊಮ್ಮಕ್ಕಳಿಗೆ ದೇವರಾಗುವ ನಂಬಿಕೆಗಳು ಬೇಡರಲ್ಲಿವೆ. ಶೀಲ ಸಂಪನ್ನನಿಗೆ, ಸಾಹಸಿ ವೀರನಿಗೆ, ಅಪ್ರತಿಮ ಶಕ್ತಿಶಾಲಿಗೆ ಇಲ್ಲಿ ಗಣನೀಯ ಸ್ಥಾನಮಾನ ಕಲ್ಪಿಸಲಾಗಿದೆ. ಲೋಕಮಾನ್ಯರಾದ ವೀರರು ಕಾಲಾಂತರದಲ್ಲಿ ದೇವರಾಗಿದ್ದು ಸೋಜಿಗವೇನಲ್ಲ. ಆದರೂ ಚರಿತ್ರೆಯಲ್ಲಿ ಇವರು ದಾಖಲಾಗಿಲ್ಲದಿರುವುದು ಖೇದಕರ.

ಬುಡಕಟ್ಟು ವೀರರು ಸಾಂಸ್ಕೃತಿಕ ಪರದೆಯಲ್ಲಿ ತಮ್ಮದೇ ಆದ ಪಾತ್ರ ಚಿತ್ರಣಗಳನ್ನು ಬಿಟ್ಟುಹೋಗಿರುವರು. ಜನಪದರು ಆವರ ಬಗೆಗೆ ಹೇಳುವಾಗ ಮೌಖಿಕ ಚರಿತ್ರೆಯನ್ನು ಆಯಾ ಪ್ರಾದೇಶಿಕವಾಗಿ ಭಾವನಾತ್ಮಕತೆಗೊಳಿಸುವುದು ಸ್ಪಷ್ಟ. ಹೀಗಾಗಿ ಚರಿತ್ರೆಯಲ್ಲಿ ಅರಸರು, ಸಂಸ್ಕೃತಿ ನಿರ್ಮಾಪಕರು, ವೀರರೆಂದು ಈವರೆಗೆ ದಾಖಲಾಗಿಲ್ಲ. ಶಾಸನ, ಸನದ್ದು, ಕಾಗದ ಪತ್ರಗಳ ಲೆಕ್ಕಚಾರವು ವ್ಯವಸ್ಥಿತವಾಗಿಲ್ಲ. ಇವರ ಪರಸ್ಪರ ನಂಬಿಕೆಯಿಂದ ಎಲೆ – ಅಡಿಕೆ ವಿನಿಮಯ ಮಾಡಿಕೊಂಡರೆ ಸಾಕು ಅದು ಪ್ರಮಾಣ ಮಾಡಿದಷ್ಟು ಮಹತ್ವ ಬೀರಿದೆ.

ಜನಜೀವನಕ್ಕೆ ಮಹತ್ವಕೊಟ್ಟು ಉತ್ತಮ ಕೆಲಸಗಳನ್ನು ಮಾಡಿದವರು ಬುಡಕಟ್ಟು ವೀರರು; ಕೆರೆ, ಕಟ್ಟೆ ಬಾವಿ, ಗ್ರಾಮಗಳ ನಿರ್ಮಾಣವು ಆ ಕಾಲದ ಅಗತ್ಯತೆಗೆ ಅನಿವಾರ್ಯವಾಗಿದ್ದವು. ವೀರರು ಇಂಥಾ ಗಂಭೀರ ಕೆಲಸಕ್ಕೆ ಕೈ ಹಾಕಿದ್ದು ಶ್ಲಾಘನೀಯ. ದುರಾಡಳಿತ ನಡೆಸುವಲ್ಲಿ ವೀರರು ಇಂಥಾ ಗಂಭೀರ ಕೆಲಸಕ್ಕೆ ಕೈ ಹಾಕಿದ್ದು ಶ್ಲಾಘನೀಯ. ದುರಾಡಳಿತ ನಡೆಸುವಲ್ಲಿ ವೀರರು ಅವನತಿಯ ಹಾದಿ ಹಿಡಿದಿದ್ದು ತೆರೆದ ಸತ್ಯ. ಇಲ್ಲರೂ ದೈವದ ನಂಬಿಕೆಯಿಂದ ಕಟ್ಟುನಿಟ್ಟಿನ ಜೀವನ ನಡೆಸಿದವರಾಗಿದ್ದಾರೆ. ಸಂಸ್ಕೃತಿ ರೀತಿ – ನೀತಿ ನಿಯಮಗಳ ಹದ್ದುಮೀರಿ ಜಾತಿಬಾಹಿರನಾಗುವ ಸಂದರ್ಭಗಳುಂಟು. ಇದಕ್ಕಾಗಿ ಹೋರಾಟ, ಸಂಘರ್ಷಗಳ ಮಹಾಪೂರವೇ ಮುಗಿಲು ಮುಟ್ಟಿತು.

ಇಂದು ಪ್ರತಿಯೊಬ್ಬ ಬುಡಕಟ್ಟು ವೀರನ ಬಗ್ಗೆ ಹಬ್ಬ ಜಾತ್ರಗಳನ್ನು ಮಾಡಿಕೊಂಡು ಬಂದುರುವುದು ಗಮನಾರ್ಹ. ದೇವಾಲಯ, ಗುಡಿ ಇತರ ಧಾರ್ಮಿಕ ನೆಲೆಗಳನ್ನು ಇಲ್ಲಿ ಆರಾಧಿಸುವುದು ಪ್ರಚಲಿತದಲ್ಲಿದೆ. ಗಾದರಿಪಾಲನಾಯಕನ ಪೂರ್ವದಲ್ಲಿ ಮ್ಯಾಸಬೇಡರ ವಂಶಪರಂಪರೆ ಬೆಳೆದುಬಂದಿತ್ತು. ಮಂದಭೂಪಾಲ, ಶುಕ್ಲಮಲ್ಲಿನಾಯಕ, ಯರಮಂಚಿನಾಯಕ ಹೀಗೆ ಅನೇಕರ ಶ್ರಮದಿಂದ ಸಂಸ್ಕೃತಿ ಸಾರ್ಥಕತೆ ಪಡೆದುಕೊಂಡಿತ್ತು. ಗಾದರಿಪಾಲನಾಯಕ ಪಶುಪಾಲಕನಾಗಿ, ಹುಲಿಗಳೊಂದಿಗೆ ಹೋರಾಡಿ ಮುಡಿಯುವುದು ವೀರತ್ವದ ಸಂಕೇತವೆಂದರೂ, ಮುಲತಃ ಅವರು ಅಹಿಂಸಾವಾದಿಯಾಗಿ ರೂಪುಗೊಂಡಿದ್ದಾನೆ. ಹುಲಿ ಮರಿಗಳನ್ನು ಸಾಕುವುದು, ತನ್ನ ಸಮಾಜಕ್ಕೆ ಹಿಂಸೆಯ ಮೆಟ್ಟಿಲನ್ನು ತುಳಿಯದಂತೆ ಸಹಕರಿಸುತ್ತಿದ್ದ. ಆದೇ ರೀತಿ ಕೊಳಗಲು ಬೊಮ್ಮಯ್ಯ, ಹಸಿವಿಗಾಗಿ ಬೇಟೆಯಾಡುವಾಗ ದುರಾಡಳಿತ ನಡೆಸುವುದು ಅವನ ಸಾವಿಗೆ ಕಾರಣವಾಯಿತು. ಯರಗಾಟನಾಯಕನು ಪರಸ್ತ್ರೀ ವ್ಯಾಮೋಹಕ್ಕೆ ಬಲಿಯಾಗಿ ಲಂಪಟನೆಂದು ಕರೆಸಿಕೊಂಡ. ಓಬವ್ವನೆಂಬ ಸುಂದರಿಯನ್ನು ಪಡೆದರೂ ಇವನು ವಿರೋಧಿಗಳಿಂದ ಹತನಾದದ್ದು ದುರದೃಷ್ಟಕರ. ದಡ್ಡಿಸೂರನಾಯಕನು ಅಪಹರಿಸಿದ್ದ ಪ್ರೇಯಿಸಿಯನ್ನೇ ಕಾಡುಪ್ರಾಣಿಯೆಂದು ತಿಳಿದು ಕೊಲ್ಲುವುದು ಎಷ್ಟು ಮೂಡತನ. ಕುರಿ ಮುಂದೆಗೆ ಧಾಲಿ ಮಾಡಿದ ಚಿರತೆಯನ್ನು ಕೊಲ್ಲುವುದು ಯರಮಂಚಯ್ಯನ ಮಗ ಪೆದ್ದಯ್ಯನ ಸಾಹಸಗಳಲ್ಲೊಂದು. ಹೀಗೆ ನಾಯಕನಹಟ್ಟಿ ತಿಪ್ಪೇಸ್ವಾಮಿ, ಕಾಟಪ್ಪನಾಯಕ, ನಲುಜೆರುವಯ್ಯ ಮೊದಲಾದವರು ಕಂಡುಬರುತ್ತಾರೆ.

ಗಾದರಿಪಾಲನಾಯಕ ದೇವರ ಪೂಜಾರಿ ನೆಲಗುಡಿಸಲಲ್ಲಿರುವ ಬನ್ನಿನಾಯ್ಕನಹಟ್ಟಿ ಪಾಲಯ್ಯ ಚನ್ನಬಸಯ್ಯನಹಟ್ಟಿ

 ಬುಡಕಟ್ಟು ವೀರರ ಸಾಧನೆಗಳಿಗೆ ಚಾರಿತ್ರಿಕವಾದ ಕಾರ್ಯಕಾರಣ ಸಂಬಂಧವಿದೆ. ಯಾವುದೇ ಒಂದು ಸ್ಥಳ ಅವರ ಪಾಲಿಗಿದ್ದರೆ, ಅಲ್ಲಿ ಅವನ ದೇವಾಲಯ, ಗುಡಿಗಳನ್ನು ಶಿಲ್ಪಗಳನ್ನು ನೋಡುತ್ತೇವೆ. ಈ ಹಿನ್ನಲೆಯಲ್ಲಿ ಸತ್ಯಕ್ಕೆ ಹತ್ತಿರವಾದ ಘಟನೆಗಳನ್ನು ವಿಶ್ಲೇಷಿಸುವಲ್ಲಿ ಅನುಮಾನವಿಲ್ಲ. ವಾಸ್ತವ ಪರಧಿಯಿಂದ ಘಟನೆಗಳು ಸಂಭವಿಸಿದ್ದು, ವೀರರು ಅಸಮಾನ್ಯವಾಗಿ ವರ್ತಿಸಿದ ಬಗೆ, ಯಾವುದೋ ಅಸಾಧ್ಯವೋ ಅಂಥಾದ್ದನ್ನು ಸಾಧಿಸುವ ಗುರಿ, ಛಲ ಇವರಲ್ಲಿತ್ತು. ಮಧ್ಯಕಾಲೀನ ಸಾಂಸ್ಕೃತಿಕ ಚರಿತ್ರೆಯಲ್ಲಿ ತನ್ನ ನಾಡಿನ, ಜನರ, ಸಂಸ್ಕೃತಿಯ ಅನನ್ಯತೆಯನ್ನು ರಕ್ಷಿಸಿ ಪೋಷಿಸಿದ ವೀರರು ದೇಶದ ಭದ್ರತೆಗೆ, ಐಕ್ಯತೆಗೆ ಅಲ್ಲ, ಕಾಣಿಕೆ ಸಲ್ಲಿಸೆ ಭದ್ರಬುನಾದಿ ಹಾದಿದ್ದಾರೆಂದರೆ ಅತಿಶಯೋಕ್ತಿಯಾಗಲಾರದು.

ಈ ದೇಶದ ಚರಿತ್ರೆಯನ್ನು ರಚಿಸಿದವರು ವಸಾಹತು ವಿದ್ವಾಂಸರು; ಪಾಶ್ಚಾತ್ಯ ಸಂಸ್ಕೃತಿ ಮತ್ತು ತಮ್ಮ ಆಳ್ವಿಕೆಗೆ ತಕ್ಕಂತೆ ಇಲ್ಲಿನ ಜನಜೀವನವನ್ನು ಅರ್ಥೈಸಿದ್ದು, ಅರ್ಧಸತ್ಯದ ಇತಿಹಾಸವೆಂದು ಮತ್ತೊಮ್ಮೆ ಹೇಳಬೇಕಾಗಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ದೇಶಿವಿದ್ವಾಂಸರು, ವಸಾಹತುಶಿಕ್ಷಣ ಪಡೆದ ಪಂಡಿತರು ಅವರ ಜಾಡಿನಲ್ಲಿ ನಮ್ಮ ಚರಿತ್ರೆಯನ್ನು ವಿಶ್ಲೇಷಿಸುವಾಗ ಮೇಲ್ವರ್ಗದವರಲ್ಲಿ ಪುರೋಹಿತ, ಬಂಡವಾಳ ಮತ್ತು ಸಾಮ್ರಾಜ್ಯಶಾಹಿಗಳನ್ನು ನಂಬಿಸುವಂತೆ ಚರಿತ್ರೆ ರಚಿಸಿದರು. ಹೀಗೆ ಈ ಪ್ರಕ್ರಿಯೆಯಲ್ಲಿ ಸ್ಥಳಿಯವ್ಯಕ್ತಿ, ಸಾಂಸ್ಕೃತಿಕ ನಾಯಕ, ಅನುಭಾವಿ, ಪಶುಪಾಲಕ, ಬೇಟೆಗಾರ ಹೀಗೆ (ಉನ್ನತ ವರ್ಗ ವಿಷಯಗಳನ್ನು ಬಿಟ್ಟು), ಕನಿಷ್ಟ ಜೀವನ ನಡೆಸುವವರ ಬಗ್ಗೆ ಚಿಂತಿಸುವ ಹೊಸ ಆಯಾಮ ಹುಟ್ಟಿಕೊಂಡದ್ದು ಇತ್ತೀಚೆಗೆ, ಅಲಕ್ಷಿಗರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನಗಳು ನಡೆಯುತ್ತಿರುವುದು ಸ್ವಾಗತಾರ್ಹ. ಈವರೆಗೆ ರಾಜ್ಯಾಳ್ವಿಕೆ ಮಾಡಿದ ವ್ಯಕ್ತಿಗಳನ್ನೇ ಚರಿತ್ರೆಯಲ್ಲಿ ಬಿಂಬಿಸಿ ದಾಖಲಿಸಲಾಗಿತ್ತು. ಸಾಂಸ್ಕೃತಿಕವಾಗಿ ಮಹತ್ವ ಪಡೆದ ವ್ಯಕ್ತಿಗಳ ಹುಡುಕಾಟ, ಪರಿಚಯ ಇತ್ತೀಚೆಗೆ ನಡೆಯವುದು ಸ್ಪಷ್ಟ. ಈ ಪೈಕಿ ಚಿತ್ರದುರ್ಗ ಜಿಲ್ಲೆಯ ಮ್ಯಾಸಬೇಡರ ಬುಡಕಟ್ಟಿನ ವೀರರು ಈ ಬಗ್ಗೆ ಪ್ರಸ್ತುತವಾಗಿ ನಿಲ್ಲುತ್ತಾರೆ. ಗಾದರಿಪಾಲನಾಯಕ ಇವರ ಪೈಕಿ ಒಬ್ಬ ಅನುಭಾವಿಯಾಗಿ ಪಶುಪಾಲಕನಾಗಿ ಕಂಡುಬರುತ್ತಾನೆ. ಇವನಂತೆ ಈ ಭಾಗದಲ್ಲಿ ಆರಾಧನೆಗೊಳಪಟ್ಟಿರುವುದು ಗಮನಾರ್ಹ.

ಮಧ್ಯಕಾಲೀನ ಜಗತ್ತು ಪರಿವರ್ಗನೆಯ ಕಾಲಘಟ್ಟ (Turning Point), ಎಲ್ಲಾ ಕ್ಷೇತ್ರಗಳ ಪರಿವರ್ತನೆಗೆ ನಾಂದಿಹಾಡಿದ ಕಾಲಾವಧಿ. ಇಂಗ್ಲೆಂಡಿನಲ್ಲಿ ಮ್ಯಾಗ್ನಕಾರ್ಟ ಎಂಬ ಹೊಸ ಸಂವಿಧಾನ ರಚನೆಗೆ ಮುಂದಾಗಿರುವಾಗತ್ತು. ಯುರೋಪಿನಲ್ಲಿ ರಾಜ್ಯಮ ಚರ್ಚ್‌ಗಳ ನಡೆಉವೆ ಸಂಘರ್ಷ ತಲೆದೋರಿ ನಿರ<ಕುಶ ಪ್ರಭುತ್ವ ಅಟ್ಟಹಾಸವನ್ನು ಎತ್ತಿ ತೋರಿಸಿತ್ತು. ಅಂದಿನದು ಉಳುವರಿ ಮತ್ತು ಅನುವಂಶಿಕರೇ ಆಳುವ ಪ್ರಕ್ರಿಯೆ ಮುಂದುವರಿದ ವ್ಯವಸ್ಥೆಯಾಗಿತ್ತು. ಮತ ಸುಧಾರಣೆ, ಭೌಗೋಳಿಕ ನೆಲೆಗಳ ಶೋಧ, ಪುನರುಜ್ಜೀವನ ಮೊದಲಾದ ಪರಿಗಣನಾರ್ಹ ಘಟನೆಗಳು ಜರುಗಿದವು. ಅಮೆರಕಾ ಕ್ರಾಂತಿ, ಫ್ರಾನ್ಸ್ ಮಹಾಕ್ರಾಂತಿಗಳ ಪರಿಣಾಮ ಯುರೋಪ್ ಮತ್ತು ಏಷ್ಯಾ ರಾಷ್ಟ್ರಗಳಲ್ಲಿ, ಸಾಮರಸ್ಯ ಮನೋಭಾವ ಮಧ್ಯಕಾಲದಲ್ಲಿ ಹೆಪ್ಪುಗಟ್ಟಿತ್ತು. ಇಂಥ ವಿಷಮ ಪರಿಸ್ಥಿತಿಗಳಿಂದ ಏಷ್ಯಾದಲ್ಲಿ ಭಾರತವು ಹೊರತಾಗಿರಲಿಲ್ಲ. ಪಶ್ಚಿಮದಿಂದ ಮಹಮದೀಯರ ಆಕ್ರಮಣದ ನಂತರ ದೆಹಲಿ ಸುಲ್ತಾನರ ಆಳ್ವಿಕೆ (ಗುಲಾಮಿ, ಖಿಲ್ಜಿ, ತೊಘಲಕ್ ಲೂದಿ ಮತ್ತು ಸಯ್ಯದ್) ಆರಂಭವಾಗುವುದು. ಇವರ ತರುವಾಯ ಮೊಘಲರು ದೆಹಲಿ ಸಿಂಹಾಸನವನ್ನು ತಮ್ಮದಾಗಿಸಿಕೊಂಡು (೧೫೨೬ – ೧೭೦೭) ಆಳ್ವಿಕೆ ನಡೆಸಿದರು. ಇಂಥ ಫಟ್ಟಭದ್ರರ ನಡುವೆ ಬುಡಕಟ್ಟುಗಳ ಚರಿತ್ರೆ ಹೇಗಿತ್ತು ಎಂದು ಊಹಿಸಿಕೊಂಡರೆ ನಿಜಕ್ಕೂ ಸೋಜಿಗವಾಗುತ್ತದೆ. ಮೌರ್ಯರ ಅಶೋಕನ ಕಾಲದಲ್ಲಿ ಬೇಟೆಯಾಡುತ್ತಿದ್ದ ಬುಡಕಟ್ಟು ಜನರು ಗುಪ್ತರ ಕಾಲದಲ್ಲಿ ಸೈನಿಕರು, ಮಂತ್ರಿ, ರಾಜರಾಗಿ ಆಳಿದ್ದಾರೆ. ಮಧ್ಯಕಾಲದಲ್ಲಿ ಬುಡಕಟ್ಟು ಸಂಘಟನೆಗಳು ತೀವ್ರಗೊಂಡು ರಾಜಪ್ರಭುತ್ವವನ್ನೇ ಬುಡಮೇಲು ಮಾಡುವ ಶಕ್ತಿ ಪಡೆದಿದ್ದವು. ಈ ಹಿನ್ನೆಲೆಯಲ್ಲಿ ಅನೇಕ ರಾಜಮನೆಗನಗಳು ಉದಯವಾದವು. ಹೊಯ್ಸಳ, ಕಮ್ಮಟದುರ್ಗ, ವಿಜಯನಗರ ಮತ್ತು ಪಾಳೆಯಗಾರರು (ತರೀಕೆರೆ, ಚಿತ್ರದುರ್ಗ, ನಾಯ್ಕನಹಟ್ಟಿ, ಹರಪನಹಳ್ಳಿ) ಆಳ್ವಿಕೆ ನಡೆಸಿದ್ದು, ಸ್ಮರಣೀಯ. ಬುಡಕಟ್ಟು ಜನರು ಮಾತ್ರ ರಾಜಪ್ರಭುತ್ವದಿಂದ ದೂರವೇ ಉಳಿದು ತಮ್ಮ ಪ್ರತ್ಯೇಕತೆಯನ್ನು ಉಳಿಸಿಕೊಂಡ ಉದಾಹರಣೆಗಳಿವೆ. ಹಾಗೆಯೇ ಸಂಸ್ಕೃತಿ ಮತ್ತು ನಾಗರೀಕತೆಯಲ್ಲಿ ತಮ್ಮ ಅದಮ್ಯ ಉದಾಹರಣೆಗಳಿವೆ. ಹಾಗೆಯೇ ಸಂಸ್ಕೃತಿ ಮತ್ತು ನಾಗರಿಕತೆಯಲ್ಲಿ ತಮ್ಮ ಅದಮ್ಯ ಪಾತ್ರವನ್ನು ಗುರುತಿಸಿಕೊಂಡಂಘವುಗಳಿವೆ. ಕೆಲವು ಗುಂಪುಗಳು ತಮ್ಮ ಗುರುತನ್ನು (Identity) ಸಾಂಸ್ಕೃತಿಕವಾಗಿ ಉಳಿಸಕೊಂಡು ಬಂದಿರುವುದು ಗಮನಾರ್ಹ. ಚರಿತ್ರೆಯುದ್ಧಕ್ಕೂ ತಮ್ಮ ಅಪ್ರತಿಮ ಸಾಧನೆಗಳನ್ನು ಸುಪ್ತವಾಗಿ ಉಳಿಸಿಕೊಂಡು ಬಂದಿರುವ ಬುಡಕಟ್ಟು ಜನರ ಸಾಂಸ್ಕೃತಿಕ ಚರಿತ್ರೆ ಇಂದು ಅನಾವರಣಗೊಳ್ಳಬೇಕಾದ ಅವಶ್ಯಕತೆಯಿದೆ. ಬ್ರಿಟಿಷರ ವಿರುದ್ಧ ಹೋರಾಡಿದ ಸಂತಾಲ, ಮುಂಡಾ, ಬಿಲ್ಲರು ಬುಡಕಟ್ಟು ಜನರೇ ಆಗಿದ್ದರು. ೧೮೫೭ರ ದಂಗೆಯನ್ನು ಕರ್ನಾಟಕದಲ್ಲಿ ಆರಂಭಿಸಿದವರು ಹಲಗಲಿಯಬೇಡರು ಎಂಬುದು ಗಮನಾರ್ಹ. ಇವರಲ್ಲಿ ಹುಟ್ಟಿದ ಜಾಗೃತಿ ಮತ್ತು ಸ್ವಹಿತಾಸಕ್ತಿಗಳೆರಡು ರಾಷ್ಟ್ರ ನಿರ್ಮಾನಕ್ಕೆ ಹಾಸುಹೊಕ್ಕಾಗಿದ್ದವು.

ಯರೋಪಿನ ಪ್ರಭಾವ ಭಾರತದ ಮೇಲೆ ಆದದ್ದುಇಲ್ಲಿನ ಪುನರುಜ್ಜೀವನಕ್ಕೆ ನಾಂಣದಿಯಾಯಿತು. ಅದಕ್ಕೂ ಮುನ್ನ ಯುರೋಪಿನ ಧರ್ಮಸುಧಾರಣೆ, ಪುನರುಜ್ಜೀವನಗಳ ಅನುಭಾವಿಗಳು, ವಚನಕಾರರು, ಶಿವಶರಣರು, ಸಾಂಸ್ಕೃತಿಕ ನಾಯಕರು ಇಲ್ಲಿ ಕ್ರಾತಿಕಾರಿ ಬದಲಾವಣೆಗೆ ಸನ್ನದ್ಧರಾಗಿದ್ದರು. ಬಸವಣ್ಣ, ಅಲ್ಲಮ, ಅಕ್ಕಮಹಾದೇವಿ, ಕೋಡೇಕಲ್ ಬಸವಣ್ಣ, ಸಾವಳಗಿ ಶಿವಲಿಂಗೇಶ್ವರ, ಎಡೆಯೂರು ಸಿದ್ಧಲಿಂಗೇಶ್ವರ, ತಿಂತಿಣಿ ಮೋನಪ್ಪ ಖ್ವಾಜಾ ಬಂದೇ ನವಾಜ, ಮಂಟೇಸ್ವಾಮಿ, ಮಲೆಮಾದೇಶ್ವರ, ಬಬಲಾದಿ ಮೊದಲಾದವರು ಸುಂದರ ಸಮಾಜವನ್ನು ಕಟ್ಟಲು ಹಂಬಲಿಸಿದವರು. ಇಂದು ಇವರ ಬಗ್ಗೆ ಚಿಂತಿಸುವ ಕಾರ್ಯ ನಡೆಯಬೇಕಾಗಿದೆ.

ಬೇಡ ಬುಡಕಟ್ಟಿನಲ್ಲಿ ಪಶುಪಾಲಕನಾಗಿ, ಅನುಭಾವಿ ಎಂಬ ಪಟ್ಟ ಹೊತ್ತು ಭಕ್ತರಿಂದ ದೇವರೆಂದು ಕರೆಸಿಕೊಂಡವನು ಗಾದರಿಪಾಲನಾಯಕ. ಇವನ ಸಮಕಾಲೀನ ನಾಯಕರ ಸಾಂಸ್ಕೃತಿಕ ಸಂದರ್ಭಗಳು ಸಮಾಜದಲ್ಲಿ ಮುಖಾಮುಖಿಯಾಗುವುದು ಸಹಜ. ಪ್ರಸಿದ್ಧ ತತ್ತ್ವಜ್ಞಾನಿ, ವೈಚಾರಿಕ ಚಿಂತಕದ ಕಾರ್ಲ್‌ಮಾರ್ಕ್ಸ ‘ದಿ ಕಮುನಿಸ್ಟ್ ಮ್ಯಾನಿಪೆಸ್ಟೊ’ ಮತ್ತು ದಾಸ್‌ಕ್ಯಾಪಿಟಲ್ ಬರೆಯುತ್ತಿದ್ದರೆ, ಭಾರತದ ಸಣ್ಣ ಹಳ್ಳಯೊಂದರಲ್ಲಿ ನಾಯಕನಹಟ್ಟಿ ತಿಪ್ಪೇಸ್ವಾಮಿ ಎಂಬ ಶೋಷಿತರ ಪ್ರತಿನಿಧಿ, ಸಮಾಜ ಸುಧಾರಕ, ಕೂಲಿ ಕಾರ್ಮಿಕರ ಬಗ್ಗೆ ಪ್ರಾಯೋಗಿಕವಾಗಿ ಚಿಂತಿಸುತ್ತಿದ್ದನು. ಮಾಕ್ಸ್ ಸೈದ್ಧಾಂತಿಕವಾಗಿ ಚಿಂತಿಸಿದರೆ ತಿಪ್ಪೇಸ್ವಾಮಿ ಸಾಮಾಜಿಕ ನೆಲೆಯಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳು ಮುಂದಾದರು. ಸಾರ್ವಜನಿಕ ಕೆಲಸಕಾರ್ಯಗಳಲ್ಲಿ ತಪಡಗಿರುವರೆಗೆ ಕೂಲಿಕಾರ್ಮಿಕರಿಗೆ ಕೂಲಿ ಕೊಡುವಾಗ ‘ಮಾಡಿದವರಿಗೆ ನೀಡು ಭಿಕ್ಷೆ’ ಎಂಬ ಶ್ರಮದ ಆಳವನ್ನು ಮನವರಿಕೆ ಮಾಡಿಕೊಟ್ಟ ಮಹಾತ್ಮ ಅವರು. ಮಾರ್ಕ್ಸ್‌ನು ತಳವರ್ಗದ ಜನರ ಜೀವನ ಹಸನಾಗಬೇಕೆಂದು ‘ಉಳ್ಳವರು ಮತ್ತು ಇಲ್ಲದವರ ನಡುವಿನ ಹೋರಾಟವನ್ನು (ಗುರುತಿಸುತ್ತಾ) ಚರಿತ್ರೆ’ಯೆಂದು ಕರೆಯುತ್ತಾನೆ. ಯುರೋಪಿನಲ್ಲಿ ಧರ್ಮಸುಧಾರಣೆ ನೇತೃತ್ವ ವಹಿಸಿದ್ದ ಮಾರ್ಟಿನ್ ಲೂಥರ್ನಂತೆ, ತಮ್ಮ ಸನಾತನ ಸಂಸ್ಕೃತಿಯ ಪರಿಷ್ಕರಣೆ, ಜಾತಿಯಿಲ್ಲದವರಿಗೆ, ಬಾಹಿರರಿಗೆ, ಧರ್ಮ ಮತ್ತು ಸಂಗತಿಗಳಿಲ್ಲದವರಿಗೆ ಸಾಂಸ್ಕೃತಿಕ ಜವಾಬ್ದಾರಿ ಮತ್ತು ಒಡೆತನವನ್ನು ಕೊಟ್ಟವನು ಶ್ರೀಗುರು ಯರಮಂಚಿನಾಯಕ, ಬಸವಣ್ಣನಂತೆ ಸಾಮಾಜಿಕ ಆಂದೋಲನವನ್ನು ಮಾಡಿದವನು ಈ ನಾಯಕ. ಮಧ್ಯಕಾಲದಲ್ಲಿದ್ದ ಈಗನ ಊರು ಓಬಣ್ಣನಹಳ್ಳಿ, ಮೊಳಕಾಲ್ಮುರು ತಾಲೂಕು ಮತ್ತು ಮ್ಯಾಸಬೇಡರು ನೆಲಸಿರುವ ಪ್ರದೇಶಗಳಲ್ಲಿ ಈತನು ಆರಾಧನಾ ದೇವತೆಯಾಗಿರುವನು. ಫ್ರಾನ್ಸ್‌ನಲ್ಲಿ (ಟೊರ್ಬನ್) ಲೂಯಿಗಳ ನಿರಂಕುಶ ಪ್ರಭುತ್ವ, ವೈಭೋಗದ ವಿರುದ್ಧ ಜರನ ಪ್ರತಿಭಟನೆಯನ್ನು ಮರೆಯುಂತಿಲ್ಲ. ೧೪ನೆಯ ಲೂಯಿ ‘ನಾನಾದವೆಲು ಪ್ರಳಯ’, ೧೬ನೆಯ ಲೂಯಿ ‘ನಾನೇ ರಾಜ್ಯ’ ಎಂದು ಅಹಂಕಾರದಿಂದ ದುರಾಡಳಿತ ನಡೆಸಿದ್ದು, ಫ್ರಾನ್ಸಿನ ಮಹಾಕ್ರಾಂತಿಗೆ ಕಾರಣವಾಯಿತು. ಹೀಗೆ ಕರ್ನಾಟಕ ಮ್ಯಾಸಬೇಡರ ನಾಯಕ ಕೊಡಗುಬೊಮ್ಮ ಎಂಬುವನು ಆನೆಗುಂದಿ ಕೋಟೆಯನ್ನು ಹೊಕ್ಕು ಅಲ್ಲಿನ ಅರಸನನ್ನು ಸೋಲಿಸಿ ತಮ್ಮ ದೇವರುಗಳನ್ನು ಬಿಡಿಸಿಕೊಂಡು ಬರುತ್ತಾನೆ. ಸಾಧನೆಯಿಂದ ರಾಜನಾದ ಕೊಡಗುಬೊಮ್ಮನು ನಿರಂಕುಶ ಪ್ರಭುವಾಗಿ ಮೋಜಿನ ಜೀವನ ನಡೆಸುತ್ತಾ ಜನರ ಪ್ರಾಣಕ್ಕೆ ಕುತ್ತು ತಂದನು. ಅಸಾಧ್ಯವಾದ ತೆರಿಗೆ ವಿಧಿಸಿ ಜನರಿಗೆ ನರಕಯಾತನೆ ಅನುಭವಿಸಲು ಕಾರಣನಾದ. ಹುಟ್ಟಿದ ಎಲ್ಲಾ ಗಂಡು ಪ್ರಾಣಿಗಳು, ಬೆಣ್ಣೆ ತುಪ್ಪಗಳಲ್ಲದೆ ಹೊಸದಾಗಿ ಮದುವೆಯಾದವರು ತೆರಿಗೆ ಕೊಡಬೇಕಾಗಿತ್ತು (ಮೊಗ್ಗಲ ಗೆರಿಗೆ). ತೆರಿಗೆ ಕೊಡಲಿಲ್ಲ ಎಂದರೆ ಹೊಸಮಧುಮತಿಗೆ ಕೊಡಗುಬೊಮ್ಮನೊಂದಿಗೆ ಮೊದಲ ರಾತ್ರಿಯನ್ನು ಕಳೆಯಬೇಕಾಗಿತ್ತು. ಈತನು ಅವಸಾನ ಹೊಂದಿದ ಸ್ಥಾನ ಈಗನ ಬಿ.ಜಿ. ಕೆರೆ ಪ್ರದೇಶದ ರಾವಲುಕುಂಟೆ ಮತ್ತು ಮುತ್ತಿಗಾರಹಳ್ಳಿ, ಚೀನಾದ ಬಹುಶ್ರೇಷ್ಟ ತತ್ವಜ್ಞಾನಿ ತಾವೋ ಧರ್ಮದ ಸ್ಥಾಪಕ ಲಾವೊತ್ಸೆಯಂತೆ ಪಶುಪಾಲಕನು, ಪವಾಡಪುರುಷ, ಅನುಭಾವಿಯಾದ ಜಗಳೂರು ಪಾಪನಾಯಕನು ತತ್ವಜ್ಞಾನಿಯಾಗಿ ಕಂಡುಬರುತ್ತಾನೆ. ಈತನು ತಿರುಪತಿಯಾತ್ರೆ ಮಾಡಿ, ಜಗಪತಿ ರಾಜನನ್ನು ಹುಟ್ಟಡಗಿಸಿದ್ದು, ಅವಸಾನಕ್ಕೆ ಕಾರಣವಾಯಿತು. ಈಗೆ ಪಶುಪಾಲಕರು ಬುಡಕಟ್ಟು ಸಂಸ್ಕೃತಿ ನಿರ್ಮಾಪಕರೂ ಆದ ದಡ್ಡಿಸೂರನಾಯಕ, ಗಾಜನಾಯಕ, ಯರಗಾಟನಾಯಕ ಮೊದಲಾದವರು ಹೆಣ್ಣಿನ ವ್ಯಾಮೋಹಕ್ಕೆ ಒಳಗಾಗಿ ಪ್ರಾಣಾರ್ಪಣೆ ಮಾಡಿಕೊಳ್ಳುವುದು ಇತಿಹಾಸ. ಇವರ ಹೆಸರಲ್ಲಿ ದೇವಾಲಯ, ಸ್ಥಳ ಮತ್ತು ಅನುಯಾಯಿಗಳಿರುವುದು ಗಮನಾರ್ಹ. ಇತ್ತೀಚಿನ ೧೦೦ ವರ್ಷಗಳ ಹಿಂದೆ ಯರಮಂಚಯ್ಯನ ಮಗ, ಪೆದ್ದಯ್ಯನೆಂಬ ವೀರ ಚಿರತೆಯೊಡನೆ ಹೋರಾಡಿ ಮಡಿದುದಕ್ಕೆ ಇಂದು ಕಂಡುಬರುವ ವೀರಗಲ್ಲೇ ಸಾಕ್ಷಿ. ಹೀಗೆ ಇಲ್ಲಿ ಕಂಡುಬರುವ ಪ್ರತಿಯೊಬ್ಬ ನಾಯಕರು ಸುಶಿಕ್ಷಿತರಲ್ಲ. ಹಾಗಾಗಿ ತಕ್ಕಮಟ್ಟಿಗೆ ಸಾಧನೆ ತೋರಿ ಸಮಾಜಕ್ಕೆ ಮಾದರಿಯಾಗಿರುವುದುಂಟು. ಇವರಲ್ಲಿ ಗಾದರಿಪಾಲನಾಯಕ ಪೂರ್ವದಲ್ಲಿ ಪಶುಪಾಲಕನಷ್ಟೇ ಆಗಿದ್ದ. ಅವನು ಹುಲಿಗಳೊಂದಿಗೆ ಹೋರಾಡಿ ಮಡಿದಾಗ ಅವನ ಪತ್ನಿಯರಿಬ್ಬರು ಸಹಗಮನ ಅನುಸರಿಸುವುದು ಸ್ಮರಣೀಯ. ಹೀಗಾಗಿ ಅತನಿಂದು ಮಾನವತಾದಿ, ಸಮಾಜ ಸುಧಾರಕ, ತತ್ವಜ್ಞಾನಿ, ದಾರ್ಶನಿಕ ವ್ಯಕ್ತಿ, ಅನುಭಾವಿಯನ್ನಾಗಿ ಮಾಡಿದ್ದಾರೆ ಆಗನ ಅನುಯಾಯಿಗಳು.