ಪಲ್ಲವಿ : ಚಿತ್ರ ಚಿತ್ರ ಅವತಾರ ಚಿತ್ತದಲ್ಲಿ ನೀನೇ ಸ್ವಾಮಿ
ಮತ್ತೆ ಮತ್ತೆ ಬೇಡಿಕೊಂಡೆ ಶ್ರೀಕೃಷ್ಣನೇ

ಚರಣ :  ಹೊತ್ತು ಗೊತ್ತು ಇಲ್ಲ ಸ್ವಾಮಿ ನಿನ್ನ ಭಜನೆ ಮಾಡೋದಕ್ಕೆ
ಎಲ್ಲ ಕಾಲದಲ್ಲಿ ನಿನ್ನ ಕೂಗುವೆನು ಕೃಷ್ಣಾ !

ನನ್ನ ಬಂಧು ಬಳಗ ನೀನೇ ಕಂದನಂತೆ ನೋಡೋ ಕೃಷ್ಣಾ !
ಅಂದು ಇಂದು ಎಂದೆಂದಿಗೂ ನಿನ್ನವನೇ ಕೃಷ್ಣಾ !

ದೊಡ್ಡಹಾವು ಕೊಂದೆಯಂತೆ ದೊಡ್ಡ ದೇವ ನೀನಂತೇ
ಕಾಡುತಿಹವು ಮದ ಮೋಹ ಚಿವುಟಿ ಹಾಕೋ ಬೇಗ ಕೃಷ್ಣಾ !

ಸುದಾಮ ತಂದ ಅವಲಕ್ಕಿ ಮೂರುಹಿಡಿಯ ತಿಂದೆಯಂತೆ
ಮೂರುಲೋಕ ಭಾಗ್ಯವನ್ನು ಭರದಿಂದ ಕೊಟ್ಟೆಯಂತೆ

ಒಂದು ಕಣದ ಭಕ್ತಿಕೊಟ್ಟು ಉದ್ಧರಿಸೊ ನನ್ನ ಕೃಷ್ಣಾ !
ಜಯಕಾರ ಮಾಡುವೆನು ಜಯ ಜಯ ಕೃಷ್ಣಾ