ಗುರುಪರಂಪರೆ : ಪಂ. ಸೋಮಶೇಖರ ಹಿರೇಮಠ ಹಾಗೂ ಸಿದ್ಧಲಿಂಗ ಶಿವಾಚಾರ್ಯರ ಬಳಿ ಆರು ವರ್ಷಗಳ ಸಂಗೀತ ಶಿಕ್ಷಣ ಅನಂತರ ಪಂಢರಪುರದಲ್ಲಿ ಜಗನ್ನಥ ಬುವಾ ಅವರ ಬಳಿಯೂ ಶಿಷ್ಯತ್ವ ಮಾಡಿರುತ್ತಾರೆ. ಅಂಧ ಕಲಾವಿದರು.

ಸಾಧನೆ : ಇವರ ವಿಶೇಷವೆಂದರೆ ತೋಡಿ ರಾಗಕ್ಕೆ ಬಸವೇಶ್ವರ ವಚನಗಳನ್ನು ಅಳವಡಿಸಿ ಹಾಡುತ್ತಿದ್ದು ವಚನಗಳಿಗೆ ಒಂದು ಮೆರುಗು ಕೊಟ್ಟವರು. ಧಾರವಾಡ ಆಕಾಶವಾಣಿಯಿಂದ ಇವರ ಕಾರ್ಯಕ್ರಮಗಳು ಪ್ರಸಾರಗೊಂಡಿವೆ. ಭೈರವಿ, ತೋಡಿ, ಕೇದಾರ, ಮಾಲ್‌ಕೌಂಸ್ ಮುಂತಾದ ರಾಗಗಳನ್ನು ಅಳವಡಿಸಿ ಭಾವಗೀತೆ, ವಚನಗಳಿಗೆ ಶಾಸ್ತ್ರೀಯ ಸೊಗಡನ್ನು ನೀಡಿ ಹಾಡುತ್ತಿದ್ದರು. ನಾಡಿನಾದ್ಯಂತ ಪ್ರಮುಖವಾಗಿ ಉತ್ತರ ಕರ್ನಾಟಕ ಭಾಗಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿರುತ್ತಾರೆ. ವಿಶೇಷವೆಂದರೆ ಇವರು ನೀರಕ್ಷರಸ್ಥರು. ಅಂಧತ್ವ ಬೇರೆ. ಆದರೆ ಒಳಗಿನ ಕಣ್ಣು ತೆರೆದು ಹಾಡಿ ಬಾಹ್ಯ ಚಕ್ಷುವಿನ ವಿಕಲತೆಯನ್ನು ಮೆರೆಯುತ್ತಿದ್ದರು.

ಪ್ರಶಸ್ತಿ- ಸನ್ಮಾನ : ಗಾನ ತಪಸ್ವಿ, ಗಾನವೀರ ಮುಂತಾದ ಬಿರುದುಗಳಿಗೆ ಭಾಜನರಾಗಿರುವ ಚೆನ್ನವೀರಪ್ಪನವರಿಗೆ ೧೯೯೨ ರಲ್ಲಿ ರಾಜ್ಯೋತ್ಸವ ಪ್ರಶಸ್ತಿ. ೧೯೯೮-೯೯ರ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಕರ್ನಾಟಕ ಕ.ಲಾಶ್ರೀ ಪ್ರಶಸ್ತಿ ಸಂದಿದೆ