(ಕೂಲಿ ಮಾಡಿ ಬದುಕುವಂಥವರ ಒಂದು ಮನೆ. ಒಳಗೊಂದು ಅಡಿಗೆ ಮನೆ. ಹೊರಗೊಂದು ಪಡಸಾಲೆ. ರಂಗದ ಎಡಬದಿಗೆ ಒಂದು ಬಾಗಿಲು. ಬಲ ಬದಿಗೊಂದು. ಎಡಬಾಗಿಲಿನಿಂದ ಊರರಸ್ತೆಗೂ, ಬಲ ಬಾಗಿಲನಿಂದ ಹಿತ್ತಲಕ್ಕೂ ಹೋಗಬಹುದು. ತೆರೆ ಎದ್ದಾಗ ಅಡಿಗೆ ಮನೆಯ ಬಾಗಿಲಲ್ಲಿ ಬಂಗಾರಿ ಅಳುತ್ತ ನಿಂತಿದ್ದಾಳೆ. ರಾಮಕ್ಕ ಮುದುಕಿ ಅತ್ತಿತ್ತ ಚಲಿಸುತ್ತ ದುಃಖದಿಂದ ಯಾರನ್ನೋ ಬೈಯುತ್ತಿದ್ದಾಳೆ.)
ರಾಮಕ್ಕ : ಮಂತ್ರಿ ಅಂತ ಮಂತ್ರೀ. ಅಪ್ಪ ಮಂತ್ರೀ ಆದರ ಮಗನ್ನ ಹಿಂಗ ಜೋಕುಮಾರ ಮಾಡೂದೈತಿ? ನಾವು ಹೋಟ ಬರೀಬೇಕು. ಇವರ ಮಲ ಹೊರಬೇಕು. ಇವರು ಮಂತ್ರಿ ಆಗಿ ಮೆಣಸ ಅರ್ಯಾಕ ಬಂದರ ನಮ್ಮ ತಲಿ ಕೊಟ್ಟ ಸುಮ್ಮನs ಕುಂತಿರಬೇಕು. ಯಾಕಂದರ ನಾವು ಕೀಳು ಕುಲದವರು ನೋಡು,
ಅವರು ಲೇ ಅನ್ನಬೇಕು. ನಾವು ಧಣೇರs ಅನ್ನಬೇಕು. ಅವರು ಕಾಲಿನಿಂದ ತೋರಿಸಿದ್ದನ್ನ ನಾವು ನೆತ್ಯಾಗ ಹೊತ್ತ ಮಾಡಬೇಕು. ಹೆಚ್ಚೂ ಕಮ್ಮಿ ಆದರ ಕೂಲಿ ತಪ್ಪಸ್ತಾರ, ಊರ ಬಿಡಸ್ತಾರ. ಅದಕ್ಕ ಅವರ ನಾಯೀ ಹಾಂಗ ಇರಬೇಕು. ಯಾಕಂದರ ನಾವು ಕಡಿಮಿಯವರು ನೋಡು.
ಇವರ ಹೆಂಗಸರಾದರ ಬುರುಕಾ ಹಾಕ್ಕೊಂಡ ಬೇಕಾದ್ದ ಬ್ಯಾಡಾದ್ದ ತಿಂದ ಬಿಳಿ ಹಂದೀ ಹಾಂಗೀರಬೇಕು. ನಾವು ಪಡಿಕಿ ಉಟಗೊಂಡ ಹರಕಿನಾಗ ಮೈ ತೋರಿಸಿಕೋತ, ಇವರು ನೋಡಿದಾಗೆಲ್ಲ ನಕ್ಕೋತ ಇರಬೇಕು. ನಕ್ಕಾಗೊಮ್ಮೆ ಈ ಊಚ ಭಾಡೇರ ಕೈ ಮಾಡಿ ಕರೀತಾರ. ಕರದಾಗೊಮ್ಮೆ ಇವರಿಗಿ ಸೀರಿ ಸೆರಗ ಹಾಸಬೇಕು. ಯಾಕಂದರ ನಾವ ಹೊಲೇರ ನೋಡು. ಯಾಕಳತೀ ಸುಮ್ಮನಿರಬಾರದ? ಆ ಊಚ ಭಾಡ್ಯಾ ನಿನ್ನ ಮಾನಾ ತಗದರ ಸುಮ್ಮನ ನಗತಿರಬೇಕು. ಅವನ ಸುಖ ದೊಡ್ಡದೊ? ನಿನ್ನ ಮಾನ ದೊಡ್ಡದೊ? ನಿನಗ ಸಿಟ್ಟ ಇರಬಾರದು, ಮಾನ ಮರ್ಯಾದಿ ಇರಬಾರದು, ಅವರು ಹೇಳಿಧಾಂಗ ಕುಣ್ಯಾಕ ಒಂದ ಮೈ ಇರಬೇಕಷ್ಟs. ಯಾಕಂದರ ನೀ ಹೊಲತಿ ನೋಡು. (ಅವಳು ಹೀಗೆ ಮಾತಾಡಿಕೊಳ್ಳುತ್ತಿದ್ದಾಗ ಕರಿನಿಂಗ ಓಡಿ ಬಂದು ಬಾಗಿಲಕ್ಕಿ ಅಗಳಿ ಹಾಕವನು. ಇನ್ನೇನು ಕಾದಿದೆಯೋ ಎಂದು ಬಂಗಾರಿ, ರಾಮಕ್ಕ ಇಬ್ಬರಿಗೂ ದಿಗಿಲಾಗುತ್ತದೆ. ಹೊರಗೆ ಜನ ಗದ್ದಲ ಮಾಡುತ್ತಿದ್ದಾರೆ. ಕರಿನಿಂಗ ಬಂದವನೇ ರಾಮಕ್ಕನ ಕಾಲು ಹಿಡಿದುಕೊಳ್ಳುವನು. ಹುಡುಗ ಗಾಬರಿಯಿಂದ ನಡುಗುತ್ತಿದ್ದಾನೆ.)
ಕರಿನಿಂಗ : ಎವ್ವಾ ಕಾಪಾಡ, ತಾಯೀ……
ರಾಮಕ್ಕ : ಮತ್ತೇನಾತೊs?
ಕರಿನಿಂಗ : ಎಲ್ಲಾರೂ ಬೆನ್ನ ಹತ್ಯಾರಬೇ.
ರಾಮಕ್ಕ : ಎಲ್ಲಾ ಬಿಟ್ಟ ಬೆನ್ನ ಯಾಕ ಹತ್ತ್ಯಾರ?
ಕರಿನಿಂಗ : ಪೋಜದಾರನ ಮುಂದ ಸಾಕ್ಷಿ ಹೇಳಿಲ್ಲೇನಬೇ?
ರಾಮಕ್ಕ : ಹೇಳಿದರ….?
ಕರಿನಿಂಗ : ಆ ಕಡಿಂದ ಮುಸಲೇರ ಬೆನ್ನ ಹತ್ಯಾರ. ಈ ಕಡಿಂದ ಹಾರೂರ ಬೆನ್ನ ಹತ್ತ್ಯಾರ…. ರಾಮಕ್ಕ ನನ್ನ ಕೊಲ್ಲತಾರಬೇ….
ರಾಮಕ್ಕ : ಖರೇ ಸಾಕ್ಷಿ ಹೇಳೀದಿ ಅಂದಮ್ಯಾಲ ಅಂಜತೀ ಯಾಕೊ? ಬಷೀರ ನನ್ನ ಮಗಳನ್ನ ಕೆಡಿಸಿದ್ದ ಸುಳ್ಳ?
ಕರಿನಿಂಗ : ಸುಳ್ಳಲ್ಲಬೇ, ಆದರ ಅವ ಮಂತ್ರೀ ಮಗ.
ರಾಮಕ್ಕ : ಮಂತ್ರೀ ಮಗ ಆದರ ಅವರಿಗಷ್ಟs ಬ್ಯಾರೆ ಕಾಯ್ದ ಇರತಾವೇನ?
ಕರಿನಿಂಗ : ಹೂನಬೇ, ತಕರಾರ ಬರಕೊಟ್ಟ ಬಂದೀವಲ್ಲ. ಆ ಪೋಜದಾರ ಪೊಲೀಸರೆಲ್ಲ ಈಗ ಮಂತ್ರೀ ಮನೀಗೇ ಬಂದಾರ. ಮಂತ್ರೀನೂ ಊರಿಗೆ ಬಂದಾನಂತ.
ರಾಮಕ್ಕ : ಮಗ ಪುಂಡತನ ಮಾಡ್ಯಾನಂತ ಹಾರಾತುರಾಯಿ ನಡದೈತೇನೊ, ಅದಕ್ಕ, ಗದ್ದಲ ನಡದೈತಿ.
ಕರಿನಿಂಗ : ಗದ್ದಲ ಅದಕ್ಕಲ್ಲಬೇ, ನಾ ಸಾಕ್ಷಿ ನಿಂತೇನಲ್ಲ, ಅದಕ್ಕ ನನ್ನ ಬ್ಯಾಟಿ ಆಡಾಕ ಓಡ್ಯಾಡತಾರ….
ರಾಮಕ್ಕ : ಕಾರಬಾರ ಮಾಡೂದಲ್ಲದ ಸಾಕ್ಷಿಬ್ಯಾರಿ ಒಡಕೊಳ್ಯಾಕ ಹೊಂಟಾರೇನು ಭಾಡೇರು? ಬರಲಿ, ಬರಲಿ, ದೇವರಿಗಾದರೂ ಕಣ್ಣ ಅದಾವೋ ಇಲ್ಲೋ ನಾನೂ ನೋಡೋಬಿಡತೀನಿ.
ಕರಿನಿಂಗ : ದೇವರೆಲ್ಲಾ ಊಚ ಮಂದೀ ಕಡೆ ಇರತಾವಬೇ ನಮ್ಮನ್ನ ಯಾರು ಕೇಳೂದಿಲ್ಲ. ನಾ ಯಾಕಾದರೂ ಸಾಕ್ಷಿ ನಿಂತೆನೋ…
ರಾಮಕ್ಕ : ನನ್ನ ಹಾಟ್ಯಾ ನೀ ಹೆಂಗಸೋ ಗಂಡಸೋ ಅಂತೀನಿ. ನಿನ್ನ ಹೆಂತೀ ಶೀಲಾ ಕೆಡಸ್ಯಾನ, ಸಿಟ್ಟಿಲ್ಲಾ ನಿನಗ? ಹೋಗಲಿ, ಎಲ್ಲಾದರೂ ಎಂಟ ದಿನ ಊರಬಿಟ್ಟ ಹೋಗಬಾರದ?
ಕರಿನಿಂಗ : ಎಲ್ಲಿ ಹೋಗಲಿ? ಸೀಮೀ ಕಾಯಕ ಹತ್ಯಾರ. ನೀನs ಎಲ್ಲಾದರೂ ಅಡಗಿಸಿಡಬೇ….
ರಾಮಕ್ಕ : ಹರೇದ ಹೆಣಮಕ್ಕಳು ಹಾಡಾಹಗಲಿ ಊರಾಗ ಅಡ್ಡಾಡಧಾಂಗ ಆಗೇತಿ. ಅವನ ಕೈಗಿ ಹಾವ ಹರೀಲಿ. ನನ್ನ ಮಗಳ ಮ್ಯಾಲ ಕೈ ಮಾಡಿದ್ದೇನ ಆ ಮುಸಲ? ಅಲ್ಲೆಲ್ಲಿ ಕಲ್ಲಿ ಇರಾಕಿಲ್ಲಾ? ಇಬ್ಬರಿದ್ದಿರಿ. ಜಿಗಿದ ಬೀಳೂ ಹಾಂಗ ಅವನ ನೆತ್ತಿಗೊಂದು ಕಲ್ಲ ಹೇರಬಾರದಿತ್ತ?
(ಬಾಗಿಲು ಬಡಿದ ಸದ್ದು. ಕರಿನಿಂಗ ನಡುಗತೊಡಗುವನು. ಇಬ್ಬರೂ ತುಸು ಹೊತ್ತು ಸುಮ್ಮನಾಗುವರು. ಬಾಗಿಲ ಬಡಿತ ಜೋರಾಗುವುದು, ರಾಮಕ್ಕ ಬಾಗಿಲು ತೆಗೆಯಲು ಹೊರಡುತ್ತಲೂ ಕರಿನಿಂಗ ಗಟ್ಟಿಯಾಗಿ ಅವಳ ಕಾಲು ಹಿಡಿದುಕೊಳ್ಳುವನು. ತುಸು ಹೊತ್ತಾದ ಮೇಲೆ ಬಾಗಿಲ ಬಡಿತ ನಿಲ್ಲುತ್ತದೆ.)
ಕರಿನಿಂಗ : ಅತ್ತೀ, ಅತ್ತೀ, ಬಾಗಿಲಾ ತಗೀಬ್ಯಾಡ ಎವ್ವಾ ನನ್ನ ಕೊಂದ ಹಾಕತಾರ. ನನ್ನನ್ನ ಕೊಲ್ಲತಾರಬೇ….
ರಾಮಕ್ಕ : ಅಂಜಬ್ಯಾಡೋ ಭಾಡ್ಯಾ. ಶೀಲ ಕಳಕೊಂಡ ಹೇಂತಿ ಶಿವನs ಅಂತ ಕುಂತಾಳ. ಇನ್ನ ನೀ ಅಕಿ ಗಂಡ, ನಡುಗಾಕ ಹತ್ತೀದಿ. ತಕರಾರ ಕೊಟ್ಟಾಕಿ ನಾನು, ನೀ ಅಲ್ಲ.ಗಂಡ್ಸಾಗಿ ಬರೀ ಸಾಕ್ಷಿ ಹೇಳಿದ್ದಕ್ಕ ಇಷ್ಟ ನಡಗತೀಯಲ್ಲೋ?
ಕರಿನಿಂಗ : ನಾವೂ ಕೀಳುಕುಲದವರು, ಏನ ಮಾಡಿದರೂ ತೆಪ್ಪ ಆಗತೈತಿ. ‘ಮಂತ್ರೀ ಮಗನ ವಿರುದ್ಧ ಸಹಿ ಮಾಡಿದ್ದೇನೋ ಮಗನs? ನಿನ್ನ ಪೀಸ್ ಪೀಸ್ ಮಾಡತೇವಂತ’ ಮುಸಲೇರ ಬೆನ್ನ ಹತ್ಯಾರ. ‘ಮಗನs ಬಂದದ್ದ ಬರಲಿ, ಮಾತ ಬದಲೀ ಮಾಡಬ್ಯಾಡಂತ’ ಹಿಂದೂ ಮಂದಿ ನಿಂತಾರ. ಎತ್ತಂತ ಸಾಯಲಿ? ನೀನs ಹೇಳಬೇ….
(ಮತ್ತೆ ಬಾಗಿಲ ಬಡಿತ ಕೇಳಿಸುತ್ತದೆ.)
ಎಪ್ಪಾ ಬಂದರೋ…. ರಾಮಕ್ಕಾ….
ರಾಮಕ್ಕ : ಮೆತ್ತಗ ಹಿತ್ತಲಾಗ ಹೋಗಿ ಬಿದ್ದಕಾ. ಹಂಗೇನಾರ ಹಿತ್ತಲ ಬಾಗಲ ಸಪ್ಪಳಾದರ ಡೊಗ್ಗಾಲ ಮಂಡಿ ಚೆಲ್ಲಿಕೊಂಡ ಆ ಹಾಳ್ ಗುಡಸಲಿಗಿ ಹೋಗಿ ಬಿದ್ದಕೊ. ಅವರೆಲ್ಲಾ ಹ್ವಾದ ಮ್ಯಾಲ ನಾ ಕರೀತೀನಿ.
(ನಡುಗುತ್ತ ಹಿತ್ತಲ ಬಾಗಿಲಲ್ಲಿ ಮರೆಯಾಗುವನು. ಆ ಬಾಗಿಲು ಹಾಕಿಕೊಂಡು ಬಂದು ಮುಂಬಾಗಿಲು ತೆರೆಯುವಳು. ಶಾಸ್ತ್ರಿ, ಅವನೊಂದಿಗೊಬ್ಬ ಪತ್ರಕರ್ತ ಹಾಗೂ ಸೀಮೆ ಎಣ್ಣೆ ಡಬ್ಬ ಹಿಡಿದುಕೊಂಡು ಐದಾರು ಜನ ಹುಡುಗರು ಬರುತ್ತಾರೆ. ಒಳಗೆ ಬರುವ ಮುನ್ನ ಶಾಸ್ತ್ರಿ ತನ್ನ ಜನಿವಾರವನ್ನು ಕಿವಿಗೇರಿಸಿಕೊಳ್ಳುತ್ತಾನೆ.)
ಶಾಸ್ತ್ರಿ : ಹಾ, ಹೆದರಬೇಡ ರಾಮೀ, ನೋಡು ನಿನಗೊಸ್ಕರ ಯಾರ್ಯಾರು ಬಂದಾರs! ಎಷ್ಟು ದೂರದಿಂದ ಬಂದಾರ! ಬರ್ರೀ ಸಾಹೇಬರs, ಬರ್ರೀ. ಇಕೀನs ನೋಡ್ರಿ ರಾಮಕ್ಕ. ಈಕಿ ಬಂಗಾರಿ.
ರಾಮಕ್ಕ : ಇವ ಯಾರು?
ಶಾಸ್ತ್ರಿ : ಇವ ಅಲ್ಲಬೆ, ಇವರು ಅನ್ನು. ದೊಡ್ಡ ಸಾಹೇಬರು. ಬೆಂಗಳೂರಿನವರು. ವರ್ತಮಾನ ಪೇಪರ ಬರತೈತಲ್ಲ, ಅದರ ಸಂಪಾದಕರು. ಇವರ ಪೇಪರಂದರ, ನಿನ್ನೆ ನಿನ್ನ ಮಗಳು ವಿಷಯ ಬಂತಲ್ಲ, ಅಂಥ ಸಣ್ಣ ಪೇಪರಲ್ಲ ಮತ್ತ.
ರಾಮಕ್ಕ : (ದುಃಖ ತಡೆಯದೆ)
ಹಾದ ಹೋಗವರೆಲ್ಲಾ ಬಂದ ಬಂದ ನೋಡಿ ಹೋಗೋ ಹಾಂಗಾಯ್ತೆಪ್ಪ ನಮ್ಮ ಬಾಳ್ವೆ, ನೀನು ಕಣ್ತುಂಬ ನೋಡಿ ಹೋಗು. ನಮ್ಮ ಮಾನಂದರ ಮಾರ್ಕೆಟದಾಗಿನ ಪಲ್ಲೆ ಆಗೇತಿ. ನಾವತ್ತರೂ ಸತ್ತರೂ ಯಾರ ಕೇಳತಾರ?
ಶಾಸ್ತ್ರಿ : ಹಂಗೇಲ್ಲಾ ಹೇಳಬ್ಯಾಡಬೇ; ನಾವಿಲ್ಲೇನು? ಇದನ್ನ ಇಷ್ಟಕ್ಕs ಬಿಡತೀವಿ ಅಂತ ತಿಳಕೋಬ್ಯಾಡ. ಬಂಗಾರೀ ಮ್ಯಾಲ ಕೈ ಮಾಡೋದು ಒಂದ ಮಾತು ತಿಳಿ. (ಬಂಗಾರಿಗೆ) ಬಂಗಾರೀ ಮುಖ ಮುಚ್ಚಿಕೋಬ್ಯಾಡs ಬೇಕಾದರ ಮುಖ ತಗದ ಅಳು. ಸಾಹೇಬರು ಒಂದ ಸಲ ನಿನ್ನ ಮುಖ ನೋಡಲಿ.
(ಭಾವಾವೇಶದಿಂದೆಂಬಂತೆ ಬಾಗಿಲ ಬಳಿಯಿದ್ದ ಬಂಗಾರಿಯನ್ನು ಮುಟ್ಟಿ ಸಮೀಪ ಕರೆತಂದು, ಮುಖದ ಮೇಲಿನ ಕೈ ತೆಗೆದು ಪತ್ರಕರ್ತನಿಗೆ ತೋರಿಸುತ್ತ.)
ನೋಡ್ರಿ, ಸಾಹೇಬ್ರ, ನಾ ಹೇಳೋ ಮಾತು ಖರೇನೋ ಸುಳ್ಳೋ ನೀವs ನೋಡ್ರಿ…. ಎಂಥಾ ಎಳೀ ವಯಸ್ಸು ಏನ ಕೋಮಲ ಶರೀರ…. ಇಂಥ ಕೂಸಿನ ಮ್ಯಾಲ ಕೈ ಮಾಡಿದನಲ್ಲರೀ ಚಂಡಾಲ!
(ಬಂಗಾರಿಯನ್ನು ತಿರುಗಿಸಿ ಹರಿದ ಕುಪ್ಪಸ ತೋರಿಸುತ್ತ).
ನೋಡ್ರಿ, ಇಲ್ಲಿ ನೋಡ್ರಿ ಆ ಲಫಂಗ ಬಲಾತ್ಕಾರ ಮಾಡಿದ್ದಕ್ಕ ಇದಕ್ಕಿಂತ ಸಾಕ್ಷಿ ಬೇಕೇನ್ರಿ? ನಾನಿವತ್ತು ಇಡೀ ಪ್ರಪಂಚಕ್ಕೆ ಒಂದ ಪ್ರಶ್ನಾ ಕೇಳಬೇಕಂತೀನಿ- ಹಿಂದೂ ಸ್ತ್ರೀಯರು ಈ ದೇಶದಲ್ಲಿ ಮಾನವಂತರಾಗಿ ಬದುಕಬೇಕೊ? ಬದುಕಬಾರದೋ? ಹಿಂದೂಧರ್ಮ ಉಳೀಬೇಕೋ? ಬ್ಯಾಡೋ? ಸಾಹೇಬರ, ಇದನ್ನೆಲ್ಲಾ ನೀವು ನಿಮ್ಮ ಪೇಪರದಾಗ ಬರೀಬೇಕ್ರಿ. ಇದು ನಮ್ಮ ದೇಶದ ಅಳಿವು-ಉಳಿವಿನ ಪ್ರಶ್ನೆ. ಈ ಪ್ರಶ್ನೆ ನಾ ಕೇಳಿದೆ ಅಂತ ಬರೀರಿ. ರಾಮೀ, ಸಾಹೇಬರಿಗೆ ನಿನ್ನ ಕತಿ ಹೇಳು. ಸಾಹೇಬರs ಈ ಕತಿ ಕೇಳಿದರ ಕಣ್ಣಾಗ ಕಣ್ಣೀರಲ್ಲರೀ ರಕ್ತ ಬರತದ ರಕ್ತ! ಇದು ಮಹಾಭಾರತ. ನಾವು ನೀವೆಲ್ಲಾ ಇದರ ಪಾತ್ರಧಾರಿಗಳು, ಅವನಿದ್ದಾನಲ್ಲ ಆ ತುರುಕ, ಮ್ಲೇಂಛ ಮಂತ್ರಿ ಮಗನೋ ಭೋಸೆಡಿ ಮಗನೋ ಅವನು ದುಶ್ಯಾಸನೋಪಾದಿಯಲ್ಲಿ ಬಂದು ಬಂಗಾರಿ ಅಲ್ಲ ಭಾರತಾಂಬೆಯ ಸೀರೆ ಸೆಳೀತಿದಾನ…..
ರಾಮಕ್ಕ : ನಿಮ್ಮ ಹೆಂಗಸರಿಗಾದರ ಸೀರೀ ಕೊಡಾಕ ದೇವರಾದರೂ ಮುಂದ ಬರತಾನ, ನಮಗ್ಯಾರದಾರೋ ಎಪ್ಪಾ?
ಪತ್ರಕರ್ತ : ಹಿಯರ, ಹಿಯರ!
ಶಾಸ್ತ್ರಿ : ಅಳಬ್ಯಾಡ ರಾಮೀ, ನಿನ್ನ ಒಂದೊಂದ ಕಣ್ಣೀರ ಹನಿ ಕೂಡಾ ಒಂದೊಂದು ರಕ್ತದ ಹನಿ ಆಗತದ. ನಾವಿನ್ನೂ ಜೀವಂತ ಇದ್ದೀವಿ. ನಮ್ಮ ಎದೆಗುಂಡಿಗೆಯಲ್ಲಿ ಕೊನೇ ಹನಿ ರಕ್ತ ಇರೋತನಕಾ ಹಿಂದೂ ಧರ್ಮಕ್ಕಾಗಿ ಹೋರಾಡತೀವಿ. ಇನ್ನೇನು ನೆತ್ತರಯಜ್ಞ ಸುರುವಾಯ್ತಂತ ತಿಳಿ.
ರಾಮಕ್ಕ : (ಅದೇ ದಾಟಿಯಲ್ಲಿ ಅಳುತ್ತ)
ನೀವಾದರೂ ಏನ ಸುದ್ದುಳ್ಳವರಂತ ನಂಬೂಣ್ರಿ? ಹೋದ ತಿಂಗಳು ನೀವೂ ಬಂಗಾರೀ ಮ್ಯಾಲ ಕೈ ಮಾಡಿದಿರಿ. ಕರಿನಿಂಗ ಬಂದಾಂತ ಓಡಿ ಹೋದಿರಿ.
ಶಾಸ್ತ್ರಿ : (ತಪ್ಪಿತಸ್ಥನೆನ್ನಿಸಿ ಅದನ್ನು ಮುಚ್ಚಿಕೊಳ್ಳಲು ದೊಡ್ಡ ದನಿಯಲ್ಲಿ)
ಛೇ ಛೇ ರಾಮೀ ಬುದ್ದೀ ಎಲ್ಲಿಟ್ಟೀದಿ? ನಂನಮ್ಮ ಜಗಳಾ ಬಯಲಿಗಿಡತಿ? ಬೆಂಗಳೂರಿನ ಸಾಹೇಬರಂದರ ಪೇಪರ್ ಹುಲಿ ಇದ್ಧಾಂಗ. ಒಮ್ಮೆ ಪೇಪರದಾಗ ನಿನ್ನ ಹೆಸರ ತಗೊಂಡ ಗರ್ಜನಾ ಹೊಡೆದರ ದೇಶಕ್ಕೆ ದೇಶ ನಡಗತದ. ಅವರ ಮುಂದ ನಿನ್ನ ಕತಿ ಹೇಳು. ನಮ್ಮದ ಇದ್ದs ಇರತದ.
ಪತ್ರಕರ್ತ : ರಾಮವ್ವಾ, ನೀವು ಹರಿಜನರೇನು?
ರಾಮಕ್ಕ : ಅಲ್ಲರೀ, ಹೊಲೆಮಾದಿಗರು.
ಶಾಸ್ತ್ರಿ : ಹಿಂದೂ ಅನ್ನೂ.
ಪತ್ರಕರ್ತ : ನೀವು ಕೋಪ ಮಾಡಿಕೊಳ್ಳೊದಿಲ್ಲ ಅಂದರೆ ಒಂದು ಪ್ರಶ್ನೆ ಕೇಳತೀನಿ. ನಿಮ್ಮ ಮಗಳ ಮೇಲೆ ಹ್ಯಾಗೆ ಅತ್ಯಾಚಾರ ನಡೀತು ಅಂತ ಸ್ವಲ್ಪ ವಿವರವಾಗಿ ಹೇಳ್ತೀರಾ?
ರಾಮಕ್ಕ : ಅದೊಂದು ಕತೀನೋ ಎಪ್ಪ. ನಾವೂ ಹೊಲ್ಯಾರು. ಅದೊಂದು ಮಗಳೈತಿ. ನನ್ನ ತಮ್ಮಗ ಗಂಟ ಹಾಕಿದ್ದೆ. ಮೂವರು ಕೂಲಿ ನಾಲಿ ಮಾಡಿಕೊಂಡ ಜೀವನ ಮಾಡತೀವ್ರಿ. ಮಗಳ ಚಂದ ಅದಾಳ ನೋಡ್ರಿ, ಊರ ಹದ್ದಗೊಳ ಕಣ್ಣೆಲ್ಲಾ ಅಕೀ ಮ್ಯಾಲ ಬಿದ್ದುವರಿ, ಮದಿವ್ಯಾಗಿನ್ನೂ ತಿಂಗಳಾಗಿಲ್ಲ….
ಶಾಸ್ತ್ರಿ : ಮೊನ್ನಿ, ನಡೀತಲ್ಲಾ, ಆ ತುರುಕ ನಿನ್ನ ಮಗಳ ಮ್ಯಾಲ ಮಾಡಿದ್ದು, ಅದನ್ನ ಹೇಳು-
ರಾಮಕ್ಕ : ಹಾಂಗs ಬಸೀರ ಸಾಬರ ಕಣ್ಣೂ ಈಕೀ ಮಾಲ್ಯ ಬಿತ್ತರಿ. ಹೇಳಿಕೇಳಿ ಮಂತ್ರೀ ಮಗ. ನಾವು ನೋಡಿದರ ಹೊಲ್ಯಾರು. ಕಾವಲಿಲ್ಲದ ಹೊಲ. ಒಂದು ದಿನ “ನಿನ್ನ ಮಗಳ್ನ ಕಳಸಬೇ” ಅಂತಂದರು. “ನಾವು ಸೂಳೇರಲ್ಲರಿ” ಅಂದೆ. “ಎಲಾ ಬೋಸಡೀ,ನಿನಗಿಷ್ಟ ಧೈರ್ಯ ಬಂತs?” ಅಂತಂದವರು ಮೈತುಂಬ ಒದ್ದರ್ರಿ ಇಕಾ ಇನ್ನೂ ಆ ಕಲಿ ಐತಿ ನೋಡ್ರಿದs…. ಇನ್ನs ಈ ನೋವs ಮಾಸಿಲ್ಲ, ಅಷ್ಟರಾಗ ಮೊನ್ನಿ ಈಕೀನ್ನ ಹೊತ್ತಕೊಂಡ ಹೋಗಿ ಈ ಪರಿ ಮಾಡಿ ಕಳಿಸ್ಯಾರ ನೋಡ್ರಿ…..
ಶಾಸ್ತ್ರಿ : ನನ್ನ ಕರುಳು ನೀರಾಗಿ ಹರಿತದ ಸಾಹೇಬರs….
(ಥಟ್ಟನೆ ಕಣ್ಣೀರು ಒರೆಸಿಕೊಂಡು ಅದನ್ನ ಪತ್ರಕರ್ತರಿಗೆ ತೋರಿಸುತ್ತಾ)
ಬೇಕಾದರೆ ಇದನ್ನೆಲ್ಲಾ ಪೋಟೋ ಹಿಡಿಸಿ ನಿಮ್ಮ ಪೇಪರದಾಗ ಹಾಕಿರಿ.
ಪತ್ರಕರ್ತ : ನೀವು ಪೊಲೀಸ್ ಕಪ್ಲೇಂಟ್ ಕೊಟ್ಟಿರಲ್ಲ, ಅದರಿಂದ ನಿಮಗೆ ತೊಂದರೆ ಆಗತದಂತ ಹೆದರಿಕಿ ಆಗಲಿಲ್ಲೇನು?
ರಾಮಕ್ಕ : ಹೆದರಿಕಿ ಯಾವಾಗಿಲ್ಲರಿ? ನಾವು ಹೋಲ್ಯಾರಾಗಿ ಹುಟ್ಟಿದಾಗಿನಿಂದ ಅದಿದ್ದದ್ದs ನಮ್ಮ ಪಾಡಿಗೆ ನಾವು ದುಡಕೊಂಡ ತಿಂದೇವಂದರ ಬ್ಯಾರೆ ಕಡೆ ಕೂಲಿ ಸಿಗಾಕಿಲ್ಲ, ಇವರ ಅಡಕೊತ್ತಿನಾಗ ಅಡಿಕ್ಯಾಗೇವರಿಯಪ್ಪ ಏನ ಹೇಳಲಿ…
ಶಾಸ್ತ್ರಿ : ಅಡಕೊತ್ತಂದರ ತಿಳಿತಲ್ಲ ಸಾಹೇಬರ? ಅಡಿಕೀ ಕತ್ತರಿಸ್ತೇವಲ್ಲ, ಅದು, ಒಂದು ಕಡೆ ಅ ಪಾಖಂಡಿ ಸರಕಾರ, ಇನ್ನೊಂದು ಕಡೆ ಆ ತುರುಕರುs ಇಬ್ಬರೂ ಸೇರಿ ಹಿಂದೂ ಧರ್ಮ ಹಿಂಗ ಕತ್ತರಿಸಾಕ ಹತ್ಯಾರ ನೋಡ್ರಿ (ಅಭಿನಯಿಸಿ ತೋರಿಸುವನು).
ಪತ್ರಕರ್ತ : ನೀವು ಪೊಲೀಸ್ ಕಪ್ಲೇಂಟ್ ಕೊಟ್ಟಿರಲ್ಲ, ಅದರಿಂದ ಏನಾದರೂ ಪ್ರಯೋಜನ ಆದೀತು ಅಂತ ನಿಮಗೆ ಭರವಸೆ ಇದೆಯೇ?
ರಾಮಕ್ಕ : ಭಾಳ್ವೇದಾಗs ಭರೋಸ ಇಲ್ಲಾ, ಇನ್ನ ಪೊಲೀಸರ ಮ್ಯಾಲ ಎಲ್ಲಿಂದ ಬರಬೇಕ್ರಿ? ಎಷ್ಟಂದರೂ ಅವರೂ ಸರಕಾರದ ಮಂದಿ. ಮಂತ್ರೀ ಮಾತ ಬಿಟ್ಟ ನಮ್ಮ ಮಾತ ಹೆಂಗ ಕೇಳ್ಯಾರು? ಸಿಟ್ಟು ಬಂತು. ತಡ್ಯಾಕಾಗಲಿಲ್ಲ, ಆದದ್ದಾಗಲಿ ಅಂತ ಬರಕೊಟ್ಟ ಬಂದಿವಿ.
ಪತ್ರಕರ್ತ : ಇದರೊಳಗೆ ನಿಮ್ಮ ಅಳಿಯನ ಪಾತ್ರವೇನು?
ರಾಮಕ್ಕ : ನಾ ಕಣ್ಣಾರೆ ನೋಡೇನಂತ ಸಾಕ್ಷಿ ಹೇಳಿ ಸೈ ಹಾಕ್ಯಾನ್ರಿ. ಅಷ್ಟಕ್ಕs ಅವನ್ನ ಹುಡಿಕ್ಯಾಡಿ ಕೊಲ್ಲಬೇಕಂತ ನಿಂತಾರ್ರಿ. ಹೆಂತೀನ ಕೆಡಿಸಿದ್ದಕ್ಕೂ ಅವ ಸುಮ್ಮನ್ನ ಇರಬೇಕಿತ್ತ ನೋಡ್ರಿ. ಅಂದರ ಸುಮ್ಮನಿರತಿದ್ದರು….
ಪತ್ರಕರ್ತ : ಮಂತ್ರೀ ಕಡೆಯವರು ನಿಮ್ಮ ಅಳಿಯನಿಗೆ ತೊಂದರೆ ಕೊಡ್ತಾ ಇದ್ದಾರಲ್ಲಾ, ನಿಮಗೂ ಏನಾದರೂ ಮಾಡಿದರೆ?….
ರಾಮಕ್ಕ : ಮಾನಾ ತಗದರು, ಇನ್ನ ಬಾಳಂದರ ಪ್ರಾಣಾ ತಗೀತಾರ ಅಷ್ಟ.
ಶಾಸ್ತ್ರಿ : ಈಗ ಕರಿನಿಂಗ ಎಲ್ಲಿದ್ದಾನ?
ರಾಮಕ್ಕ : ನನಗ್ಗೊತ್ತಿಲ್ಲರಿ.
ಶಾಸ್ತ್ರಿ : ಅವನ್ನ ಮುಗಿಸಬೇಕಂತ ತುರುಕರೆಲ್ಲಾ ಹುಡಿಕಾಡ್ಯಾಕ ಹತ್ಯಾರ. ಈ ಹೊತ್ತ ಅವನ ಕೂದಲು ಕೊಂಕಿದರೂ ನಾವ್ಯಾರೂ ಸುಮ್ಮನಿರೋ ಪೈಕಿ ಅಲ್ಲ ಮತ್ತ. ಅವನ ಬಚಾವ ಮಾಡಬೇಕಂತs ನಾವು ಬಂದೀವಿ; ತಿಳೀತ? ಎಲ್ಲಿದ್ದಾನ?
ರಾಮಕ್ಕ : ನನಗ್ಗೊತ್ತಿಲ್ಲರಿ. ಅವ ಮನೀಗಿ ಬಂದs ಇಲ್ಲ.
ಶಾಸ್ತ್ರಿ : ಏ ಹುಡಕರ್ಯೋ…
(ಶಾಸ್ತ್ರಿ ಜೊತೆಗಿದ್ದ ಹುಡುಗರು ಅಡಿಗೆ ಮನೆಯಲ್ಲಿ ಇಣಿಕಿ ಹುಡುಕುವರು)
ಕರಿನಿಂಗ ನೀ ಹೇಳಬೇಕು ರಾಮೀ, ಪ್ರಾಣ ಹೋದರೂ ಸಾಕ್ಷಿ ಬದಲೀ ಮಾಡಬ್ಯಾಡಂತ ಹೇಳು.
(ಅಷ್ಟರಲ್ಲಿ ಹುಡುಗರು, ಹಿತ್ತಲ ಬಾಗಿಲ ಕಡೆ ನುಗ್ಗಿದಾಗ ರಾಮಕ್ಕ ಓಡಿಹೋಗಿ ಅಡ್ಡಗಟ್ಟುವಳು.)
ರಾಮಕ್ಕ : ಹೇಳ್ಲಿಲ್ಲರಿ ಅವ ಇಲ್ಲಂತ? ನಮಗ ಮೊದಲs ಅಂಜಿಕೆ ಬರತೈತಿ.
(ಶಾಸ್ತ್ರಿ ಮತ್ತು ಹುಡುಗರು ಪರಸ್ಪರ ಮುಖ ನೋಡಿಕೊಳ್ಳುವರು. ತಕ್ಷಣ ನಾಟಕೀಯವಾಗಿ ಶಾಸ್ತ್ರಿ ಮುಖ ಚರ್ಯೆ ಬದಲಿಸುವನು)
ಶಾಸ್ತ್ರಿ : ಹೊರಟೆ ರಾಮೀ ಹೊರಟೆ
ರಾಮಕ್ಕ : ಎಲ್ಲಿಗಿರಿ?
ಶಾಸ್ತ್ರಿ : ಧರ್ಮಯುದ್ಧಕ್ಕೆ. ತುರುಕರು ರುಂಡಗಳನ್ನು ಚೆಂಡಾಡಲಿಕ್ಕೆ, ದೇಶ ದ್ರೋಹಿಗಳನ್ನ ಜೀವಂತ ಸುಡೋದಕ್ಕೆ, ಬೋಲೋ ಭಾರತ ಮಾತಾಕೀ
ಹುಡುಗರು : ಜೈ
(ಎಲ್ಲರೂ ಹೋಗುವರು. ರಾಮಕ್ಕ ಹಿತ್ತಲಲ್ಲಿದ ಕರಿನಿಂಗನನ್ನು ಕರೆಯಲು ಹೋಗುತ್ತಿರುವಾಗ ಮುಂಬಾಗಿಲಲ್ಲಿ ಶೆಟ್ಟಿ ಹಾಜರಾಗುವನು.)
ಶೆಟ್ಟಿ : ಇದ್ದಿಯಾ ರಾಮವ್ವಾ? ಯಾರಿಲ್ಲೇನು?
(ಒಳಬಂದು ಬಾಗಿಲಿಕ್ಕಿಕೊಳ್ಳುವನು)
ಗುರುತು ಸಿಗಲಿಲ್ಲೇನು? ನಾನು ಪಂಚಾಯ್ತಿ ಚೇರಮನ್ ಕೋದಂಡ ರಾಮಶೆಟ್ಟಿ, ಗುರುತು ಸಿಕ್ಕಿತೇನು?
ರಾಮಕ್ಕ : ಬಾಗಿಲಾ ಯಾಕ ಹಾಕಿದಿರಿ?
ಶೆಟ್ಟಿ : ಸುಮ್ಕಿರವಾ, ಊರಿಗೊರs ಹೊತ್ತಿ ಉರ್ಯಾಕ ಹತ್ತೇತಿ. ನಿಮ್ಮ ಮನೀಗಿ ನಾ ಬಂದಿದ್ದ ನೋಡಿದರ ಮಂದಿ ಏನಂದುಕೊಂಡಾರು? ಹಾ ಈಕೀನs ಅಲ್ಲ ಬಂಗಾರಿ? ಪೇಪರದಾಗ ಸುದ್ದಿ ಓದಿದೆ… ಛೇ ಛೇ ಛೇ…. ನನಗೆ ಭಾಳ ದುಃಖ ಆಯ್ತು. ಆ ಕರಿನಿಂಗ್ಯಾ ಹಾಂಗ ಮಾಡಬಾರದಿತ್ತು.
ರಾಮಕ್ಕ : ಅವೇನ ಮಾಡಾನ್ರಿ?
ಶೆಟ್ಟಿ : ಅಲ್ಲೇನ ಮತ್ತ? ಮಾಡೋ ಕಾರಭಾರ ಮಾಡಿ ಅದನ್ನ ಬಷೀರ ಸಾಹೇಬರ ಮ್ಯಾಲ ಹಾಕತಾನಂದರ?…
ರಾಮಕ್ಕ : ಅಂದರ?
ಶೆಟ್ಟಿ : ಪೊಲೀಸ್ ಸ್ಟೇಶನಿಗೆ ಹೋಗಿದ್ದೆ. ಒಂದs, ಎರಡ? ಮೂರನಾಕ ತಕರಾರು ಅರ್ಜಿ ಬಂದಾವ, ನೀ ಬರಕೊಟ್ಟಿದ್ದ ಒಂದು, ಆ ಬಷೀರ ಸಾಹೇಬರು ಬರಕೊಟ್ಟಿದ್ದ ಒಂದು. ಅದಕ್ಕs ಹಣಗಲಾಗಿ ಮಂದೀನ ಕೇಳಿದೆ; ಎಲ್ಲಾರು ಬಷೀರ ಸಾಹೇಬರು ಬರಕೊಟ್ಟಿದ್ದs ಖರೆ ಅಂತಾರ.
ರಾಮಕ್ಕ : ಅವೇನಂತ ಬರಕೊಟ್ಟಾನ?
ಶೆಟ್ಟಿ : ಅದs. ನಿನ್ನ ಮಗಳ ಮ್ಯಾಲ ಆ ಕರಿನಿಂಗ್ಯಾ ಹಾರಿ ಕೆಡಿಸಾಕ ಹತ್ತಿದ್ದನಂತ. ಬಷೀರ ಸಾಹೇಬರು ಬಂದು ಬಿಡಿಸಿಕೊಂಡರಂತಲ್ಲ? ಇನ್ನೇನ ಮಾತಾಡ್ಯಾರೇನೋ ಅಂತಂಜಿ ಕರಿನಿಂಗ್ಯಾ ತಾನs ಮೊದಲು ನಿನ್ನ ಹಂತ್ಯಾಕ ಬಂದ ಹೇಳಿದ, ಬಷೀರ ಸಾಹೇಬರು ಅತ್ಯಾಚಾರ ಮಾಡ್ಯಾರಂತ. ನೀ ಅವನ ಮಾತ ನಂಬಿ ತಕರಾರ ಬರಕೊಟ್ಟಿ, ಅವ ಸಾಕ್ಷಿ ಹೇಳಿದಾ….
ರಾಮಕ್ಕ : ಶೆಟ್ಟರ, ಕರಿನಿಂಗ ಆಕೀ ಗಂಡ. ಅವನs ಬಂಗಾರೀನ್ಯಾಕ ಕೆಡಸ್ತಾನ?
ಶೆಟ್ಟಿ : ಮದಿವ್ಯಾಗೇತೇನ? ಅರೇರೇ ನನಗ ಗೊತ್ತs ಇಲ್ಲ. ಇರಲಿ, ಅಲ್ಲವಾ, ಹೋಗೀ ಹೋಗೀ ಮಂತ್ರೀ ಮಗ ಬಷೀರನ ಮ್ಯಾಲ ಹೊಲೇರ ತಕರಾರ ಕೊಡೋದಂದರೇನು? ಹೋಗಲಿ ನನ್ನ ಮಾತ ಕೇಳು, ನಾ ಅದನ್ನೆಲ್ಲಾ ಬರಕೊಂಡ ಬಂದೀನಿ, ಅದಕ್ಕ ಬಟ್ಟ ಒತ್ತು, (ಜೇಬಿನಿಂದ ಕಾಗದ ತೆಗೆಯುತ್ತಾ) ಏನೋ, ರಾಮವ್ವ, ನಮ್ಮೂರಾಕಿ, ನಮ್ಮ ಮಾನಾ ಉಳಿಸ್ತಾಳಂತ ಇಲ್ಲಿಗೆ ಬಂದೆ. ಬಾ, ಸಹಿ ಹಾಕ ಬಾ.
ರಾಮಕ್ಕ : ಹಾಕೋದಿಲ್ಲರಿ,
ಶೆಟ್ಟಿ : ಯಾಕ?
ರಾಮಕ್ಕ : ಯಾಕಂದರ ಅದು ಸುಳ್ಳು ಐತಿ.
ಶೆಟ್ಟಿ : ಸುಳ್ಳೋ, ಖರೇನೋ, ಜೀವಾ ಉಳಿಸಿಕೊಳ್ಳೋದ ನೋಡಿಕೊ! ಖರೇ ಹೇಳಿ ಜೈಲಿಗೆ ಹೋಗತೀಯೇನು? ಬಾ ಬಾ, ಹೆಬ್ಬೆಟ್ಟ ಒತ್ತ ಬಾ, ಮುಂದಿಂದ ನಾ ನೋಡಕೋತೀನಿ,
ರಾಮಕ್ಕ : ಅದಾಗೋದಿಲ್ಲರಿ.
ಶೆಟ್ಟಿ : ಹಾಂಗಿದ್ದರ ಪೊಲೀಸರು ಬರತಾರ.
ರಾಮಕ್ಕ : ಬರಲಿ, ನಾ ಖರೇನs ಹೇಳತೀನಿ.
ಶೆಟ್ಟಿ : ಇದರರ್ಥ ಬರೀ ಮಗನ್ನಲ್ಲ, ಮಂತ್ರೀನ್ನೂ ಎದರ ಹಾಕ್ಕೊಂಡಾಗ.
ರಾಮಕ್ಕ : ಮಂತ್ರೀ ಆಗಲಿ, ಮಂತ್ರೀ ಮಗ ಆಗಿರಲಿ, ಹಾಂಗಂತ ನಮ್ಮಂಥವರ್ನ ಕೆಡಿಸೋದೇನ್ರಿ?
ಶೆಟ್ಟಿ : ಅವರು ಕೆಡಿಸಿಲ್ಲ, ಒಂದು ವೇಳೆ ಕೆಡಿಸಿದರು ಅನ್ನೋಣ. ಯಾರನ್ನ ಕೆಡಿಸಿದರು? ಹೊಲತೀನ್ನ! ಹೊಲತೇರ ಯಾರಾದರೂ ಕೆಡಿಸ್ತಾರ? ರೊಕ್ಕ ಕೊಡತಾರ ಮಲಗತಾರ, ಅಷ್ಟೆ. ಯಾರಾದರೂ ಊಚ ಜಾತಿಯವರ ಮ್ಯಾಲ ಕೈ ಮಾಡಿದರ ಅದು ಕೆಡಿಸಿಧಾಂಗ. ಇದಕ್ಕ ಕೆಡಿಸಿದರು ಅಂತ ಹೆಂಗಂತೀಯವ್ವಾ? ರೊಕ್ಕ ಬೇಕೇನು? ನೂರ, ಐನೂರ್ರೂಪಾಯಿ ಬೇಕ? ಸಾವಿರ ಬೇಕ? ಇಷ್ಟ ರೊಕ್ಕಾ ನೀ ಸಾಯೋತನಕಾ ಕೂಲೀ ಮಾಡಿದರೂ ಗಳಿಸಾಕ ಆಗಾಣಿಲ್ಲ ಮತ್ತ.
ರಾಮಕ್ಕ : ನಮ್ಮ ಮಾನ ಕೊಳ್ಯಾಕ ಬಂದೀರೇನ್ರಿ?
ಶೆಟ್ಟಿ : ಎರಡ ಸಾವಿರ…
ರಾಮಕ್ಕ : ಯಾರ ಬಂದರೂ ನಮ್ಮಿಂದ ಏನಾರ ಕೇಳಾಕs ಬರತಾರ, ನಮಗೇ-ನಾಗೇತಂತ ನೋಡಾಕ ನಿಮಗ್ಯಾರಿಗೂ ಕಣ್ಣs ಇಲ್ಲ.
ಶೆಟ್ಟಿ : ಕೊಡಾಕ ಬಂದೀನಲ್ಲವ್ವಾ. ಒಮ್ಮಿ ಓದತೀನಿ ಕೇಳು, ಆ ಮ್ಯಾಲೆ ಹೆಬ್ಬೆಟ್ಟ ಒತ್ತು….
ರಾಮಕ್ಕ : ಅದರಾಗೇನೈತಿ ನನಗ್ಗೊತ್ತರಿ.
ಶೆಟ್ಟಿ : ಕಡೀ ಮಾತು, ಎರಡೂವರಿ ಸಾವಿರ. ನನಗಿದರಾಗೇನೂ ಕಮೀಶನ್ ಬ್ಯಾಡ, ಮತ್ತೇನು? ನೀ ಸೈ ಹಾಕಿದರ ಇಡೀ ಊರಿಗೆ ಉಪಕಾರ ಆಗತೈತಿ, ಬಾ, ತಗೊ.
(ನೋಟಿನ ಕಂತೆ ತೆಗೆಯುವನು)
ರಾಮಕ್ಕ : ನನಗೆ ಬ್ಯಾಡ್ರಿ.
ಶೆಟ್ಟಿ : ಇನ್ನೇನ ಪುಕ್ಕಟ ಹಾಕ್ತಿ?
ರಾಮಕ್ಕ : ದೊಡ್ಡ ಮನಿಶಾರಿದ್ದೀರಿ, ಎದ್ದ ಹೋಗರಿ, ಏನೋ ಹಿಂಗಾಯ್ತಲ್ಲಾ ಅಂತ ಊರ ದೊಡ್ಡಮನಿಶಾ ಸಮಾಧಾನ ಮಾಡಾಕ ಬಂದಾನಂದರ ಸೈ ಹಾಕಿಸಿ ಕೊಳ್ಳಾಕ ಬಂದಾನ, ಎದ್ದೇಳ್ರಿ….
ಶೆಟ್ಟಿ : ಹೋಗತೀನವಾ, ಇಲ್ಲೇ ಇರಾಕ ಬಂದಿಲ್ಲ. ತುಸ ವಿಚಾರ ಮಾಡು…..
(ಬಾಗಿಲು ಬಡಿದ ಸದ್ದು, ಹೊರಗಡೆಯಿಂದ ‘ಪೊಲೀಸ್, ಪೊಲೀಸ್ ಇನ್ಸ್ಪೆಕ್ಟರ ಬಂದಾರ, ಬಾಗಿಲಾ ತಗೀರಿ’ ಎಂದು ಕೇಳಿಸುವುದು. ಶೆಟ್ಟಿ ಗಾಬರಿಯಾಗುವನು. ರಾಮಕ್ಕ ಬಾಗಿಲು ತೆಗೆಯಲು ಹೋಗಿ ಮಗಳ ಕಡೆ ನೋಡಿ ಬಂಗಾರೀ ನೀ– ಒಳಗನಡಿ’ ಎನ್ನುತ್ತಾಳೆ. ಬಾಗಿಲ ಬಡಿತ ಜಾಸ್ತಿಯಾಗುತ್ತಲೆ ಇದೆ. ಹೋಗಿ ತೆಗೆಯುವಷ್ಟರಲ್ಲಿ ಶೆಟ್ಟಿ ಕೈಯಲ್ಲಿಯ ಒಂದು ನೋಟನ್ನು ಅಲ್ಲೊಂದು ಮಾಡದಲ್ಲಿರಿಸಿ ತಾನೂ ಬಂಗಾರಿ ಹೊಕ್ಕ ಅಡಿಗೆ ಮನೆಯಲ್ಲೇ ಮಾಯವಾಗಿ ಬಾಗಿಲು ಮುಂದೆ ಮಾಡಿಕೊಳ್ಳುವನು. ಅಷ್ಟರಲ್ಲಿ ಬಾಗಿಲು ತೆಗೆದಾಗಿದೆ. ಪೊಲೀಸ್ ಇನ್ಸ್ಪೆಕ್ಟರ್ ಇಬ್ಬರು ಪೇದೆಗಳೊಂದಿಗೆ ಬರವನು. ಸುತ್ತ ಕಣ್ಣಾಡಿಸುವನು.)
ಇನ್ಸ್ಪೆಕ್ಟರ್ : ರಾಮವ್ವ ಅಂದರ ನೀನs ಏನು?
ರಾಮಕ್ಕ : ಹೌಂದರಿ.
(ಮಾಡದಲ್ಲಿ ಶೆಟ್ಟಿ ಇಟ್ಟಿದ್ದ ನೋಟು ಕಣ್ಣಿಗೆ ಬೀಳುತ್ತದೆ.)
ಇನ್ಸ್ಪೆಕ್ಟರ್ : ಇಡಾಕ ಜಾಗಾ ಸಾಲದಷ್ಟ ರೊಕ್ಕ ಐತಿ?
ರಾಮಕ್ಕ : ಅದು ಆ ಶೆಟ್ಟೀದರಿ.
ಇನ್ಸ್ಪೆಕ್ಟರ್ : ಕೇಳಿದ್ದಕ್ಕಷ್ಟs ಉತ್ತರಾ ಕೊಡು, ಹೆಚ್ಚು ಕಮ್ಮಿ ಮಾತಾಡಿದರ ಒದೀತೀನಿ. ನಿನ್ನ ಮಗಳೆಲ್ಲಿ?
ರಾಮಕ್ಕ : ಒಳಗದಾಳ.
(ಇನ್ಸ್ಪೆಕ್ಟರ್ ಸನ್ನೆ ಮಾಡುವನು. ಪೇದೆಗಳಿಬ್ಬರೂ ಅಡಿಗೆ ಮನೆಗೆ ನುಗ್ಗುವರು. ಇನ್ಸ್ಪೆಕ್ಟರ್ ಮನೆ ತುಂಬ ಕಣ್ಣಾಡಿಸುತ್ತಿರುವಂತೆ ಪೇದೆಗಳಿಬ್ಬರೂ ಬಂಗಾರಿ ಮತ್ತು ಶೆಟ್ಟಿಯನ್ನು ಹಿಡಿದು ತರುವರು. ಶೆಟ್ಟಿ ತನ್ನ ಕೋಟು ಸರಿಪಡಿಸುತ್ತಿರುವನು. ಇನ್ಸ್ಪೆಕ್ಟರ್ ಮನೆ ತುಂಬ ಕಣ್ಣಾಡಿಸುತ್ತಿರುವಂತೆ ಪೇದೆಗಳಿಬ್ಬರೂ ಬಂಗಾರಿ ಮತ್ತು ಶೆಟ್ಟಿಯನ್ನು ಹಿಡಿದು ತರುವರು. ಶೆಟ್ಟಿ ತನ್ನ ಕೋಟು ಸರಿಪಡಿಸುತ್ತಿರುವನು. ಇನ್ಪೆಕ್ಟರ್ ಆಶ್ಚರ್ಯ ಅಭಿನಯಿಸುವನು.)
ಇನ್ಸ್ಪೆಕ್ಟರ್ : ಲೈಸನ್ಸ್ ಇಲ್ಲದs ಸೂಳಿಗಾರಿಕೀ ಮಾಡೋದು ಅಪರಾಧಂತ ಗೊತ್ತಿಲ್ಲಾ?
ರಾಮಕ್ಕ : ಸೂಳಿಗೀಳಿ ಅಂದರ ನಾ ಸುಮ್ಕಿರಾಕಿಲ್ಲರಿ.
ಇನ್ಸ್ಪೆಕ್ಟರ್ : (ಸಿಟ್ಟನ್ನು ಸಂಯಮಿಸಿಕೊಳ್ಳುತ್ತ) ಈ ನೋಟ ಎಲ್ಲಿಂದ ಬಂತು?
ಶೆಟ್ಟಿ : ಅದು ನಂದರಿ.
ಇನ್ಸ್ಪೆಕ್ಟರ್ : ನೀ ಯಾಕ ಕೊಟ್ಟಿ?
ಶೆಟ್ಟಿ : ಏನೋ ಹೆ ಹೆ..
(ರಾಮಕ್ಕನಿಗೆ ಆಘಾತವಾಗುತ್ತದೆ)
ಇನ್ಸ್ಪೆಕ್ಟರ್ : ಇದು ಮೊದಲ್ನೆ ಸಲ ಏನು?
ಶೆಟ್ಟಿ : ನಾ ಇಲ್ಲಿ ಖಾಯಂ ಗಿರಾಕಿ…. ಈಕಿ ವಯಸ್ಸಿಗಿ ಬಂದಾಗಿಂದ…
ರಾಮಕ್ಕ : (ಕೋಪತಾಪಗಳನ್ನು ತಡೆಯಲಾರದೆ) ಎಲಾ ನನ್ನ ಹಾಟ್ಯಾ ಶೆಟ್ಟಿ, ಇವರೆಲ್ಲಾ ಸಾಮೀಲ ಮಾಡಿಕೊಂಡ ಬಂದಿದ್ದೆನೋ…..
(ಇನ್ಸ್ಪೆಕ್ಟರ್ ತಕ್ಷಣ ಅವಳ ಕೆನ್ನೆಗೊಂದು ಬಾರಿಸುವನು. ಏಟು ತಡೆಯಲಾರದೆ ರಾಮಕ್ಕ ಬೀಳುವಳು. ಬಂಗಾರಿ ‘ಎವ್ವಾ?’ ಎಂದು ಒದರಿ ತಾಯಿಯ ಬಳಿ ಓಡುವಳು. ಇನ್ಪೆಕ್ಟರ್ ಅವಳನ್ನು ಸರಿಸಿ ಏಳಲಿದ್ದ ರಾಮಕ್ಕನ ಮೇಲೆ ಉಗುಳು ಸಿಡಿಸುತ್ತ ಒದರುವನು.)
ಇನ್ಸ್ಪೆಕ್ಟರ್ : ಹುಚ್ಚ ಭೋಸಡೆ, ಸೂಳಿ ಅಂದರ ಸಿಟ್ಟ ಬರತೈತಿ. ಹೊರಗ ಬಾಗಲಾ ಹಾಕೀದಿ. ಒಳಗ ಬಂದರ ಅಡಗೀ ಮನ್ಯಾಗ ಶೆಟ್ಟೀ ಜೋಡಿ ಮಗಳ್ನ ಮಲಗ್ಸೀದಿ. ಮತ್ತ ಇದಕ್ಕ ಸೂಳಿತನ ಅಲ್ಲಂತಿ? ಹಲಕಟ್ಟ ರಂಡೇ (ಶೆಟ್ಟಿಗೆ) ಸಹಿ ಮಾಡಿದಳೇನ?
ಶೆಟ್ಟಿ : ಇಲ್ಲರಿ.
ಇನ್ಸ್ಪೆಕ್ಟರ್ : ಕಾಗದಾ ತಾತಾ ಇಲ್ಲಿ. (ಶೆಟ್ಟಿ ತನ್ನ ಜೇಬಿನಿಂದ ಕಾಗದ ಕೊಡುವನು) ಇಕಾ ಇಲ್ಲಿ ನನ್ನ ಪೆನ್ ಐತಿ, ತಗೊ. ಬಟ್ಟ ಒತ್ತು.
ರಾಮಕ್ಕ : (ಕಿರಚಿ) ನಾ ಒತ್ತೂದಿಲ್ಲ.
ಇನ್ಸ್ಪೆಕ್ಟರ್ : ಈಕೀನ ಎಳಕೊಂಡ ಸ್ಟೇಷನ್ನಿಗೆ ನಡೀರ್ಯೋ ಸೂಳಿತನದ ಕೇಸ್ ಹಾಕರಿ. (ರಾಮಕ್ಕ ಸಂಕಟದಿಂದ ಕಿತ್ತುಕೊಂಡೆದ್ದು ‘ಅಯ್ಯೋ ಎಪ್ಪಾ ಬರ್ಯೋ…. ಊರಾಗ ಯಾರಾದರೂ ದರಮವಂತರಿದ್ದರ ಕಾಪಾಡರ್ಯೋ…..’ ಎಂದು ಕಿರುಚುತ್ತಾ ಓಡುವಳು. ಪೊಲೀಸರು ಬಾಗಿಲಿಗೆ ಅಡ್ಡಗಟ್ಟಿದ್ದರಿಂದ ತಪ್ಪಿಸಿಕೊಂಡು ಮನೆ ತುಂಬ ಮೇಲಿನ ಮಾತನ್ನೇ ಮತ್ತೆ ಮತ್ತೆ ಕಿರುಚುತ್ತ ಬೇಟೆಯ ಬೆನ್ನು ಹತ್ತಿದಂತೆ ಹಿಂದೆ ಹಿಂದೆ ಬರುತ್ತಿದ್ದ ಪೊಲೀಸರನ್ನು ತಪ್ಪಿಸಕೊಂಡು ಮತ್ತೆ ಕಿರುಚುವಳು. ಅವಳೊಂದಿಗೆ ಬಂಗಾರಿಯೂ ‘ಎವ್ವಾs’ ಎಂದು ಕಿರುಚುತ್ತಿದ್ದಾಳೆ. ಆ ಹೊತ್ತಿಗೆ ಸರಿಯಾಗಿ ಮಂತ್ರಿ ಬಾಗಿಲಲ್ಲಿ ನಿಂತಿದ್ದಾನೆ. ಎಲ್ಲರೂ ಅವನನ್ನು ನೋಡಿ ಸ್ತಬ್ದರಾಗುವರು. ರಾಮಕ್ಕ ಹೆಣ್ಣು ನಾಯಿಯಂತೆ ಅಳುತ್ತಿದ್ದಾಳೆ.)
ಮಂತ್ರಿ : ಏನ್ರೆಪಾ ಇದೆಲ್ಲಾ? ಏನು ಮಾಡ್ತಾ ಇದ್ದೀರಿ? ಬಿಡಿ ಅವಳನ್ನ.
ಶೆಟ್ಟಿ : (ರಾಮಕ್ಕನಿಗೆ) ನೋಡು ಸ್ವಥಾ ಸನ್ಮಾನ್ಯ ಮಂತ್ರಿಸಾಹೇಬರs ನಿನ್ನ ಮನೀಗಿ ಬಂದಾರ.
ಮಂತ್ರಿ : ಇವಳು ನಮ್ಮ ರಾಮಕ್ಕನಲ್ಲವೆ?
ಶೆಟ್ಟಿ : ಇವಳೆ.
ಮಂತ್ರಿ : ಏನಂತೆ?
ಇನ್ಸ್ಪೆಕ್ಟರ್ : ಸಹಿ ಮಾಡೋದಿಲ್ಲಂತ.
ಮಂತ್ರಿ : ಅಲ್ಲಿಗೆ ಮುಗೀತಲ್ಲ. ತನ್ನ ಮನಸ್ಸಿಗೆ ವಿರುದ್ಧವಾಗಿ ಸಹಿ ಹಾಕಲಿಕ್ಕೆ ಅವಳಿಗಿಷ್ಟವಿಲ್ಲ ಅಷ್ಟೆ. ಅದಕ್ಕೆ ಅವಳ್ನ ಈ ಥರ ಬೇಟೆ ಆಡೋದಾ ನೀವೆಲ್ಲ? ಏನ್ರಿ ಇದೆಲ್ಲಾ? ಬೇಲಿ ಎದ್ದು ಹೊಲಾ ಮೇಧಂಗೆ. ಪ್ರಜೆಗಳನ್ನ ಕಾಪಾಡಬೇಕಾದ ನೀವೇ ಈ ರೀತಿ ಅವಳಿಗೆ ಹೆರಾಸ್ ಮಾಡಿದರೆ?
ರಾಮಕ್ಕ : (ತುಂಬಿಕೊಂಡ ದುಃಖ ಗಾಬರಿಗಳನ್ನು ಹೊರಹಾಕುವಂತೆ) ಹೇಳ್ರಿಯಪ್ಪ, ನೀವs ಹೇಳ್ರಿ. ಈ ಶೆಟ್ಟಿ ಸೈ ಹಾಕು ರೊಕ್ಕ ಕೊಡ್ತೇನಂತ ಬಂದ. ನಾ ಆಗಾಣಿಲ್ಲ ಅನ್ನೂದರಾಗs ಪೊಲೀಸರು ಬಂದರು. ಶೆಟ್ಟಿ ಹೋಗಿ ಅಡಿಗಿ ಮನ್ಯಾಗ ಅಡಗಿದ : ಆಹಾ ಸೂಳಿತನ ಮಾಡ್ತಿ, ಸ್ಟೇಷನ್ನಿಗಿ ನಡಿ ಅಂತಾರ. ಇದ್ಯಾವ ಸೀಮಿ ನ್ಯಾಯ ನೀವ ಹೇಳ್ರಿ.
ಮಂತ್ರಿ : ಛೇ ರಾಮಕ್ಕ ಸೂಳೇಥರ ಕಂಡಳೇನ್ರಿ ನಿಮಗೆ? ಏನ್ರಿ ಇನ್ಸ್ಪೆಕ್ಟರ್ ಇಷ್ಟ ವರ್ಷ ಸರ್ವೀಸ್ ಮಾಡಿದೀರಿ. ಸೂಳೆ ಯಾರು, ಗರತಿ ಯಾರು ಅಂತ ತಿಳಿಯೋಲ್ಲೇನ್ರಿ? ಹೊರಗೆ ನಡ್ರಿ..ಛೇ.
(ಶೆಟ್ಟಿ, ಪೊಲೀಸ್ ಪೊಜದಾರರು ಸಹಿ ಹಾಕಬೇಕಾದ ಕಾಗದವನ್ನು ಕೊಟ್ಟು ಹೊರಗೆ ಹೋಗುವರು.)
ನನಗೆ ನಿಜ ಬೇಕು ತಾಯಿ, ನನ್ನ ಮಗನ ಮೇಲೆ ನನಗೆ ನಂಬಿಕೆಯಿಲ್ಲ. ಅಥವಾ ನನ್ನ ಮಗನಾದ್ದರಿಂದ ಆತ ಹೇಳುವ ಸತ್ಯದಲ್ಲಿ ನನಗೆ ಅನುಮಾನ ಬರುತ್ತಿರಬಹುದು. ಒಂದು ಸಲ ನಿನ್ನನ್ನ ಕೇಳಿ ಹೋಗೋಣಂತ ಬಂದೆ. ಹೇಳು ರಾಮಕ್ಕ, ನೀನು ಪೊಲೀಸ್ ಕಂಪ್ಲೇಂಟ್ ಕೊಟ್ಟದ್ದು ನಿಜ ಏನಮ್ಮಾ?
ರಾಮಕ್ಕ : ಹೌಂದರಿ.
ಮಂತ್ರಿ : ನನ್ನ ಮಗ ನಿನ್ನ ಮಗಳ ಮೇಲೆ ಅತ್ಯಾಚಾರ ಮಾಡಿದ್ದು ನಿಜ ಹಾಗಿದ್ದರೆ?
ರಾಮಕ್ಕ : ಹೌಂದರಿ.
ಮಂತ್ರಿ : ಕರೆಕ್ಟ್! ನಾನು ಮಾಡ್ತಾ ಇರೋದು ಸರಿ ಅಂತ ನನಗೆ ಖಾತ್ರಿಯಾಯ್ತು. ಇಂಥ ಸಂದರ್ಭದಲ್ಲೂ ನೀನು ನಿಜ ಹೇಳುತ್ತಿರುವುದು ಅಭಿನಂದನೀಯ. ತಾಯಿ, ಈ ದಿನ ನೀನು ನನಗೊಂದು ಪಾಠ ಕಲಿಸಿದೆ. ನಾನು ಪ್ರಾಮಾಣಿಕನೇ, ನಿನ್ನ ಹಾಗೆ. ಗಾಂಧೀಜಿ ಜೊತೆ ಇದ್ದೆ, ರಾಮಕ್ಕಾ ನನ್ನ ಮುಖ ನೋಡು. (ರಾಮಕ್ಕ ನೋಡುವಳು.) ನಿನ್ನ ಕಣ್ಣಿನಲ್ಲಿ ಒಬ್ಬ ತಾಯಿಯನ್ನು ಕಂಡೆ. ನೀನು ಬಂಗಾರಿಯ ತಾಯಿ. ಮಗಳಿಗಾದ ಅನ್ಯಾಯ ಕಂಡು ನಿನ್ನ ಕಣ್ಣಿನಲ್ಲಿ ಉರಿಯುತ್ತಿರುವ ಬೆಂಕಿಯನ್ನು ಕಂಡೆ! ಆದರೆ ನಿನ್ನ ಕಣ್ಣಿನಲ್ಲಿ ಬರೀ ಬೆಂಕಿಯಲ್ಲ ತಾಯೀ, ಅದನ್ನು ಆರಿಸುವ ಕಣ್ಣೀರೂ, ಇದೆ. ಅದನ್ನೂ ಕಂಡೆ.
ಸುದ್ದಿ ಕೇಳಿ ಆಘಾತವಾಯ್ತು. ಇಂಥ ಒಬ್ಬ ನೀಚ ಮಗನಿದ್ದಾನಲ್ಲಾ ಎಂದು ಪಶ್ಚಾತ್ತಾಪ ಪಟ್ಟೆ. ಊರಿನ ನಾರಿಯರಿಗೆ ಸಹೋದರನಾಗಬೇಕಿದ್ದವನು ಚಂಡಾಲನಾದರೆ ಇನ್ನು ಆ ಊರನ್ನು ದೇವರೇ ಕಾಪಾಡಬೇಕು. ಇಂಥವನಿಗೆ ನಾನು ತಂದೆ! ಭೂಮಿಗೆ ಭಾರವಾದ ಮಗ ಇರಲೇಕೂಡದೆಂದು ಬಂದೂಕು ಲೋಡುಮಾಡಿಕೊಂಡೇ ಇಲ್ಲಿಗೆ ಬಂದೆ. ಅವನಿನ್ನೂ ಹಾಸಿಗೆಯಲ್ಲೇ ಇದ್ದ. ನನ್ನ ರೌದ್ರಾವತಾರ ನೋಡಿ ಕಿಟಾರನೆ ಕಿರುಚಿದ. ಒಂದು ಕ್ಷಣ ಯಾಕೋ ಏನೋ, ಬೆಳಕು ಮಿಂಚಿದಂತಾಯ್ತು. ಕಣ್ಣೇದರು ನೋಡಿದರೆ ಅವನ ತಾಯಿ, ಯಾವಳು ಆ ಚಂಡಾಲನನ್ನು ನವಮಾಸ ಗರ್ಭದಲ್ಲಿ ಹೊತ್ತು ಹೆತ್ತಳೋ ಆ ತಾಯಿ, ಮಗನನ್ನು ಹಿಂದೆ ನಿಲ್ಲಿಸಿಕೊಂಡು “ಮೊದಲು ನನ್ನನ್ನು ಕೊಲ್ಲಿ” ಎಂದು ಅಳುತ್ತಿದ್ದಳು! ನಿನ್ನ ಮುಖ ನೋಡಿದಾಗ ನನಗೆ ಆ ಮುಖ ನೆನಪಾಯಿತು. (ಕಣ್ಣೀರು ಒರೆಸಿಕೊಳ್ಳುವನು.)
ನೀನು ಸತ್ಯ ಹೇಳಿ ನಿನ್ನ ಕರ್ತವ್ಯ ಪಾಲಿಸಿದೆ. ಈಗ ಬಾಕಿ ಉಳಿದದ್ದು ನನ್ನ ಕರ್ತವ್ಯ ಮಾತ್ರ. ಬರ್ತೀನಿ ತಾಯಿ. ಬರ್ತೀನಮ್ಮ ಬಂಗಾರಿ. ಆದರೆ ಒಂದು ಮಾತು. ಅಂಥಾ ಚಂಡಾಲ ಮಗನ ತಂದೆ ತಾಯಿಗಳನ್ನ ದಯವಿಟ್ಟು ಕ್ಷಮಿಸಮ್ಮಾ. (ಕೈ ಮುಗಿಯುವನು) ಆಯ್ತು ಕ್ಷಮೆ ಸಿಗಲಿಲ್ಲವೆಂದಾಯ್ತು. (ಅವರು ಸುಮ್ಮನಿರುವರು.) (ಹೊರಡುವನು.)
ರಾಮಕ್ಕ : ಸಾಹೇಬರs
ಮಂತ್ರಿ : ಕ್ಷಮಿಸಿದ್ದೀಯಾ ಅಮ್ಮಾ? ನನಗೆ ಗೊತ್ತು ಒಬ್ಬ ತಾಯಿಯನ್ನು ಇನ್ನೊಬ್ಬ ತಾಯಿ ಮಾತ್ರ ಗುರುತಿಸಬಲ್ಲಳು. ಈಗ ನಿನ್ನ ಮನಸ್ಸಿನಲ್ಲಿ ಆ ನನ್ನ ಹೆಂಡತಿ ತಾನೇ ಇರೋದು?
ರಾಮಕ್ಕ : ಹೌದು.
ಮಂತ್ರಿ : ತಾಯಂದಿರೆಲ್ಲಾ ಹಾಗೇ. ಅವಳು ಹೇಳಿದ್ಲು; ರಾಮಕ್ಕ ಒಬ್ಬ ನೊಂದ ತಾಯಿ, ನಾನೇ ಹೋಗಿ ನನ್ನ ಮಗನಿಗೆ ಜೀವದಾನ ಮಾಡು ಅಂತ ಕಾಲಿಹಿಡಿದು ಕೇಳುತ್ತೇನೆ ಅಂತ. ನಾನಂದೆ; ರಾಮಕ್ಕ ನಿನಗೆ ತಾಯಿಯಾದರೆ ನನಗೆ ತಂಗಿ. ತಂಗೀ ಹತ್ತಿರ ಹೋಗಿ ನಾನೇ ಕ್ಷಮೆ ಕೇಳುತ್ತೇನೆ, ಅಂತ ಬಂದೆ.
ರಾಮಕ್ಕ : ಅವರು ಹೆಂಗದಾರ್ರೀ?
ಮಂತ್ರಿ : ನಿನ್ನ ಹಾಂಗೇ. ನೀವಿಬ್ಬರೂ ಭಾರತಾಂಬೆಯ ಪಡಿಯಚ್ಚು.
ರಾಮಕ್ಕ : ಭಾರತಾಂಬೆ ಯಾರ್ರೀ?
ಮಂತ್ರಿ : ಅವಳು ನಮ್ಮೆಲ್ಲರ ತಾಯಿ.
ರಾಮಕ್ಕ : ಹೋಗಿ ಏನ್ಮಾಡತೀರಿ?
ಮಂತ್ರಿ : ಆ ತಾಯಿ ಬಾಗಿಲಲ್ಲೇ ನಿಂತುಕೊಂಡು ದಾರಿ ಕಾಯ್ತಿರತ್ತಾಳೆ. ನಿನಗೆ ನಿನ್ನ ಮಗ ಸಿಕ್ಕಲಿಲ್ಲ ಅಂತ ಸುಲಭವಾಗಿ ಹೇಳಬಲ್ಲೆ. ಭಾರತಾಂಬೆಗೇನು ಹೇಳಲಿ?
ರಾಮಕ್ಕ : ಅಂದರ?
ಮಂತ್ರಿ : ಈಗ ನೀನೆ ಹೇಳು ರಾಮಕ್ಕಾ. ಬಷೀರ ನನ್ನ ಮಗನೇ ಇರಬಹುದು. ಆತ ಮುಸಲ್ಮಾನ, ಹೌದೋ? ನಿನ್ನ ಮಗಳು ಹಿಂದೂ ಸ್ತ್ರೀ ಹೌದೊ?
ರಾಮಕ್ಕ : ಹೌದು.
ಮಂತ್ರಿ : ಅಷ್ಟೆ.
ರಾಮಕ್ಕ : ಅಂದರ?
ಮಂತ್ರಿ : ಅದರರ್ಥ ನನ್ನ ಮಗ ನಿನ್ನ ಮಗಳ ಮೇಲೆ ಅತ್ಯಾಚಾರ ಮಾಡಿದ ಅಂತಲ್ಲ ತಾಯೀ. ಅಷ್ಟೇ ಆಗಿದ್ದರೆ ಬಷೀರನನ್ನ ಯಾವಾಗಲೋ ಕೊಂದು ಹಾಕತಿದ್ದೆ.
ಇಲ್ಲಿರೋದು ಒಬ್ಬ ಮುಸಲ್ಮಾನ ಒಬ್ಬ ಹಿಂದೂ ನಾರಿಯ ಮೇಲೆ ಅತ್ಯಾಚಾರ ಮಾಡಿದ-ಇದು! ಆಗಲೇ ಇಡೀ ಊರಿನ ಹಿಂದೂಗಳೆಲ್ಲಾ ಸೇರಿ ಮುಸಲ್ಮಾನರ ರುಂಡಗಳನ್ನು ಚೆಂಡಾಡಬೇಕೂಂತ ಇದ್ದಾರೆ. ಮುಸಲ್ಮಾನರೂ ಒಂದಾಗ್ತಾ ಇದಾರೆ. ನಾಳೆ ಬೆಳಗಾಗೋದರೊಳಗೆ ಎಷ್ಟು ಜನ ತಾಯಂದಿರು ಮಕ್ಕಳ್ನ ಕಳಕೊಂಡಿರತಾರೋ! ಈ ಸುದ್ದಿ ದೇಶಕ್ಕೆ ತಲುಪಿ ದೇಶದ ತುಂಬ ಹಿಂದೂ ಮುಸ್ಲಿಂ ಗಲಭೆ ಸುರುವಾಗುತ್ತೆ. ನೋಡು ನೋಡುವಷ್ಟರಲ್ಲಿ ಕೋಟಿ ಹೆಣ ಬೀಳುತ್ತವೆ. ಈಗ ನೀ ಹೇಳು ತಾಯಿ. ನಿನ್ನ ಒಬ್ಬಳೇ ಮಗಳಿಗೆ ಅನ್ಯಾಯವಾದಾಗ ನಿನ್ನ ಕರುಳಿಗೆ ಎಂಥ ವೇದನೆಯಾಯ್ತು. ಇನ್ನು ನಮ್ಮೆಲ್ಲರ ತಾಯಿಯಾದ ಆ ಭಾರತಾಂಬೆ – ಕೋಟಿ ಕೋಟಿ ಮಕ್ಕಳು ತಮ್ಮ ತಮ್ಮಲೇ ಬಡಿದಾಡಿ ಸಾಯುತ್ತಿರುವ ದೃಶ್ಯವನ್ನು ಮೌನವಾಗಿ ನಿಂತುಕೊಂಡು ನೋಡಬೇಕಾದ ಆ ತಾಯಿ – ಅವಳ ಗತಿಯೇನಾಗಬೇಕು? (ದನಿ ನಡುಗಿಸುತ್ತ) ತಾಯೀ ಭಾರತಾಂಬೇ ಇಷ್ಟಕ್ಕೆಲ್ಲಾ ಕಾರಣನಾದ ಮಗನಿಗೆ ಜನ್ಮ ನೀಡಿದ ಈ ಪಾಪಿಯನ್ನು ಕ್ಷಮಿಸಮ್ಮ ಕ್ಷಮಿಸು…. ಈಗ ಸ್ವಯಂ ಮಹಾತ್ಮಾ ಗಾಂಧೀಜಿಯವರೇ ನಿನ್ನ ಮನೆತನಕ ಬಂದು ಕೇಳಿದರೂಂತ ಇಟ್ಟುಕೊ; ಮಗಳೇ ರಾಮಕ್ಕಾ ಒಂದು ಕಡೆ ನಿನ್ನ ಮಗಳಿಗಾದ ಅನ್ಯಾಯ ಇದೆ; ಇನ್ನೊಂದು ಕಡೆ ಕೋಟಿ ಕೋಟಿ ಜನರ ಜೀವ ಇದೆ. ಇವೆರಡರಲ್ಲಿ ಯಾವುದು ದೊಡ್ಡದು ತಾಯಿ?
ರಾಮಕ್ಕ : ಗಾಂಧಿ ಸತ್ತಾರ. ನಮ್ಮ ಮನೀಗ್ಯಾಕ ಬಂದಾರ ಬಿಡರೀ.
ಮಂತ್ರಿ : ನಾ ಬಂದೀನಲ್ಲಮ್ಮಾ. ನನಗೆ ಹೇಳು ಯಾವುದು ದೊಡ್ಡದು?
ರಾಮಕ್ಕ : ಗಾಂಧೀ ಆಗಿದ್ದರ ಇಂಥಾ ಸುಳ್ಳಿಗೆಲ್ಲ ಸೈ ಹಾಕಂತಿದ್ದರೇನ್ರಿ?
ಮಂತ್ರಿ : ಸತ್ಯ ಅಂದರೆ ಸೂಕ್ಷ್ಮ ತಾಯೀ. ನಿನ್ನ ಮಗಳಿಗಾದ ಅನ್ಯಾಯವೂ ಸತ್ಯ. ಲಕ್ಷಾಂತರ ಜೀವಿಗಳ ಸಾವೂ ಸತ್ಯ. ಇದರಲ್ಲಿ ದೊಡ್ಡ ಸತ್ಯ ಯಾವುದು? ನೀನು ಕೇವಲ ಬಂಗಾರಿಯ ತಾಯಿಯಾಗಿ ವಿಚಾರ ಮಾಡಬಾರದು; ಎಲ್ಲರ ತಾಯಿಯಾಗಿ ಭಾರತಾಂಬೆಯಾಗಿ ಚಿಂತನೆ ಮಾಡಬೇಕು. ಇಲ್ಲವೆ ಬಂಗಾರಿಯ ತಾಯಿಯಾಗಿ ವಿಚಾರ ಮಾಡಬೇಕು.
ರಾಮಕ್ಕ : ನೀವೇನ ಹೇಳ್ತೀರೊ ತಿಳೀವೊಲ್ದು.
ಮಂತ್ರಿ : ನೀ ಈಗೇನ ಹೇಳ್ತಿ ಅಂತ ನಾ ಹೇಳ್ಲೆ? ನಿನಗೆ ನಿನ್ನ ಸತ್ಯ, ನಿನ್ನ ದುಃಖ ದೊಡ್ಡದು. ಸರಿ ತಾನೆ? ಅದಕ್ಕೇ ಸಹಿ ಮಾಡು.
ರಾಮಕ್ಕ : ಅಂದರ?
ಮಂತ್ರಿ : ಸೇಡಿನಿಂದ ನಿನ್ನ ಕಣ್ಣು ಕುರುಡಾಗಿದೆ ತಾಯೀ, ಆಗಲೇ ಇಲ್ಲಿ ಶಾಸ್ತ್ರಿ ಬಂದಿದ್ದ ತಾನೆ?
ರಾಮಕ್ಕ : ಹೌಂದು.
ಮಂತ್ರಿ : ಕರಿನಿಂಗ ಎಲ್ಲಿ ಅಂತ ಕೇಳಿದ ತಾನೆ?
ರಾಮಕ್ಕ : ಹೌಂದು.
ಮಂತ್ರಿ : ಅಷ್ಟೆ.
ರಾಮಕ್ಕ : ಅಂದರೆ?
ಮಂತ್ರಿ : ಹಿಂದು ಮುಸ್ಲಿಮರಿಗೆ ಯುದ್ಧವಾಗ್ತದೆ ಅಂದೆ. ಆಗಲ. ಕೊನೇ ಪಕ್ಷ ನಿನ್ನ ಮಗಳ ಸೌಭಾಗ್ಯದ ಬಗ್ಗೆ ಆದರೂ ಕಾಳಜಿ ಇಲ್ಲವೆ?
ರಾಮಕ್ಕ : ಅಂದರ?
ಮಂತ್ರಿ : ಶಿಕ್ಷೆ ದುಷ್ಟರಿಗೆ ಸಿಕ್ಕುದಾದರೆ ಸಿಕ್ಕಲಿ. ಆದರೆ ಆ ನಿನ್ನ ಅಳಿಯ ಕರಿನಿಂಗನಿಗೂ ಶಿಕ್ಷೆ ಆಗುತ್ತೆ ಗೊತ್ತ?
ರಾಮಕ್ಕ : ಅಂಧೆಂಗ?
ಮಂತ್ರಿ : ಹಿಂಗ; (ಬಂಗಾರಿಯನ್ನು ತೋರಿಸುತ್ತ) ಹೊಲೆಯರ ಜಾತಿಯಲ್ಲಿ ಇಷ್ಟು ಸುಂದರ ಹುಡುಗಿ ಇದ್ದರೆ ಉಚ್ಚ ಜಾತಿಯವರ ಕಣ್ಣು ಅರಳುತ್ತವೆ ತಾಯೀ. ಅವರಿಗೆ ನಿಮ್ಮ ಜಾತಿಯೆಂದರೆ ಬರೀ ಸೂಳೆಯರ ಜಾತಿ. ನೀವಿರೋದೇ ಅವರ ಭೋಗಕ್ಕೆ. ನೀನು ಮಗಳನ್ನು ಕರಿನಿಂಗನಿಗೆ ಮದುವೆ ಮಾಡಿದಾಗಿನಿಂದ ಅವರಿಗಾದ ನಿರಾಸೆ ಅಷ್ಟಿಷ್ಟಲ್ಲ. ಕರಿನಂಗನನ್ನ ಈಗ ಕೊಲ್ಲುತಾರೆ. ಸಾಕ್ಷಿ ಹೇಳಿದ್ದರಿಂದ ಮಂತ್ರಿ ಕಡೆಯವರೇ ಕೊಲ್ಲಿಸಿದರು ಅಂತ ಅದನ್ನು ಸುಲಭವಾಗಿ ನಮ್ಮ ಕಡೆ ತಳ್ಳುತ್ತಾರೆ. ಹೋದ ತಿಂಗಳು ಶಾಸ್ತ್ರಿಗಳು ಬಂಗಾರಿಯ ಮೇಲೇ ಕೈಮಾಡಿ ಕರಿನಿಂಗನಿಂದ ಉಗಿಸಿಕೊಂಡು ಹೋದದ್ದು ನಿನಗೂ ಗೊತ್ತಿದೆ. ಈಗ ತಿಳಿಯಿತೋ ಅವರ ಉಪಾಯ?
ರಾಮಕ್ಕ : (ಗೊಂದಲದಲ್ಲಿ) ಈ ಕಾಗದಕ್ಕೆ ಸೈ ಹಾಕಬೇಕಂತೀರೇನು?
ಮಂತ್ರಿ : (ಉತ್ಸಾಸಹದಿಂದ) ಊರು ಉಳಿಯಬೇಕಾದರೆ, ಲಕ್ಷಾಂತರ ಜೀವಿಗಳು ಉಳಿಯಬೇಕಾದರೆ, ಭಾರತಾಂಬೆ ನೆಮ್ಮದಿಯಿಂದಿರಬೇಕಾದರೆ, ನಿನ್ನ ಮಗಳ ಸೌಭಾಗ್ಯ ನಿನಗೆ ಬೇಕಿದ್ದರೆ – ಹೌದು ಸಹಿ ಹಾಕಬೇಕು.
(ಹೊರಗಡೆ ಗಲಾಟೆ ಸುರುವಾಗಿದೆ)
ನನ್ನಲ್ಲಿ ನಂಬಿಕೆಯಿರಲಿ ತಾಯೀ.
ರಾಮಕ್ಕ : ನಂಬಿದರ.
ಮಂತ್ರಿ : ಸಹಿ ಹಾಕಬೇಕು.
ರಾಮಕ್ಕ : ನಾ ಸೈ ಒತ್ತಿದರೆ ಕರಿನಿಂಗ ಉಳೀತಾನಲ್ಲ?
ಮಂತ್ರಿ : ಅಷ್ಟೇ ಅಲ್ಲ, ಊರವರೆಲ್ಲ ನಿನಗೆ ತಾಯೀ ಅಂತಾರೆ. ಇಡೀ ನಾಡು, ಇಡೀ ದೇಶ ನಿನ್ನ ಹೆಸರಿಗೆ ಜೈಕಾರ ಹಾಕುತ್ತೆ. ಸ್ವರ್ಗದಲ್ಲಿರೋ ಗಾಂಧೀಜಿ ಕುಲು ಕುಲು ನಗುತ್ತ ‘ಭೇಷ್ ಮಗಳೇ ರಾಮಕ್ಕಾ’ ಎಂದು ಆಶೀರ್ವಾದ ಮಾಡ್ತಾರ. ಸ್ವಯಂ ನನ್ನ ಮಂತ್ರಿ ಮಂಡಳ ನಿನ್ನನ್ನ ಅಭಿನಂದಿಸುತ್ತದೆ ತಾಯೀ.
ರಾಮಕ್ಕ : ತರ್ರಿ ಬಟ್ಟ ಒತ್ತತೀನಿ.
(ರಾಮಕ್ಕ ಹೆಬ್ಬೆಟ್ಟು ಒತ್ತಿಸುವನು.)
ಮಂತ್ರಿ : ಇಲ್ಲಗೆ ಮುಗಿಯಲಿಲ್ಲ ತಾಯೀ. ಈ ಥರ ಹೆಬ್ಬೆಟ್ಟನ್ನು ಬೇರೆಯವರಿಂದಲೂ ಒತ್ತಿಸುತ್ತಿದ್ದೆ. ಆದರೆ ಪೇಪರಿನವರು ಬರ್ತಾರೆ ಅದೆಲ್ಲಾ ನಾ ನೋಡಿಕೊಳ್ತೇನೆ. ಅವರು ಬಂದಾಗ ನಾನೇ ಮಾತಾಡ್ತೇನೆ. ಆಗ ನೀನು ಅತ್ಯಾಚಾರ ಆಗಿಲ್ಲ ಅಂತ ಹೇಳಬೇಕು. ಅಥವಾ ನಾ ಹೇಳಿದ್ದಕ್ಕೆಲ್ಲ ಹೌದು ಅನ್ನಬೇಕು.
(ರಾಮಕ್ಕ ಕತ್ತು ಹಾಕುವಳು)
ಬರಲೇ ತಾಯೀ? ಮನೆಯಲ್ಲಿ ನಿನ್ನ ತಂಗಿ ಕಾಯುತ್ತಿದ್ದಾಳೆ. ಜೈಹಿಂದ್!
(ನಮಸ್ಕರಿಸಿ ಹೋಗುವನು. ತಾನೇನು ಮಾಡಿದೆನೆಂದು ರಾಮಕ್ಕನಿಗೆ ತಿಳಿಯುವ ಮೊದಲೇ ಹೊರಗೆ ಗಲಾಟೆ ಕಿರಿಚಾಟ ಜಾಸ್ತಿಯಾಗಿದೆ. ರಾಮಕ್ಕನಿಗೆ ಆ ಕಡೆ ಗಮನವಿದ್ದಂತಿಲ್ಲ. ಬಂಗಾರಿ ಹೋಗಿ ಹಿತ್ತಲ ಬಾಗಿಲು ತೆರೆಯುತ್ತಾಳೆ. ಗಲಾಟೆ ಇನ್ನೂ ಜಾಸ್ತಿ ಕೇಳುತ್ತದೆ. ಕೂಡಲೇ ಬಂಗಾರಿ “ಎವ್ವಾs” ಎಂದು ಕಿರುಚುತ್ತಾಳೆ. ರಾಮಕ್ಕ ಆ ಕಡೆ ನೋಡುತ್ತಾಳೆ.)
ಬಂಗಾರಿ : ಎವ್ವಾ, ಕರಿನಿಂಗ ಅಡಗಿದ್ದ ಗುಡಿಸಲಕ ಬೆಂಕಿ ಹಾಕ್ಯಾರಬೇ…..
– ಎಂದು ಕಿರುಚುತ್ತಾ ಹಿತ್ತಿಲ ಬಾಗಿಲಿನಿಂದ ಹೊರಗೋಡುತ್ತಾಳೆ. ರಾಮಕ್ಕ ತಬ್ಬಿಬ್ಬಾಗಿ ಬರದ ಚಿತ್ರದ ಹಾಗೆ ತೆರೆದ ಕಣ್ಣು ತೆರೆದ ಹಾಗೇ ನಿಂತಿದ್ದಾಳೆ. ಹೊರಗಡೆಯ ಬೆಂಕಿಯ ಜ್ವಾಲೆಗಳು ಅವಳ ಮುಖದಲ್ಲೂ ಹೊಳೆಯುತ್ತಿದ್ದಾಗ-
-ತೆರೆ-
ಪ್ರೇರಣೆ: ಜೀನ್ಪಾಲ್ ಸಾರ್ತ್ರ್ರವರ ನಾಟಕ The Respectful prostitute.
ದೃಶ್ಯಒಂದು
(ಕೈಬಳೆಗಳಉಲುಹು. ಪೆಟ್ಟಿಗೆತೆರೆದ–ಮುಚ್ಚಿದಸಪ್ಪಳ. ಕುರ್ಚಿಆಚೀಚೆಸರಿಸಿದಪುಸ್ತಕಚೆಲ್ಲಿದಸದ್ದು. ತುಂಬಗಡಿಬಿಡಿ)
ಲಕ್ಷ್ಮೀ: (ಒಳಗಿನಿಂದ)ಓಬಂದೆ…. (ಬಳಿಬಂದು)ಏನ್ರೆಮ್ಮಾ….? …. ಇದೇನ್ರೀಸಾಮಾನೆಲ್ಲಚೆಲ್ಲಾಪಿಲ್ಲಿ? ಈಗತಾನೇಸರಿಯಾಗಿಜೋಡ್ಸಿಇಟ್ಟುಹೋಗಿದ್ದೆ.
ಧ್ವನಿ:ಕೂಡದು! ಈಮನೆಶಿಸ್ತಿನಲ್ಲಿಎಂದೂಇರಕೂಡದು!
ಉಷಾ:ನನ್ನನ್ನೇಆಕ್ಷೇಪಿಸುತ್ತೀಏನೇ? ಇರಲಿ. ಈಬೀಗದಕೈಯಾರೇಇಲ್ಲಿಇಟ್ಟಿದ್ದು?
ಧ್ವನಿ:ಅರಸುತಿಹಲತೆಕಾಲತೊಡಕಲುಹರಿದುಬಿಸಡುವರುಂಟೆ?
ಲಕ್ಷ್ಮೀ:ಸಾಹೇಬರೇಮರೆತುಇಟ್ಟಿರಬೇಕು.
ಉಷಾ:ಸರಿ. ನೀನುನಿನ್ನಕೆಲಸಕ್ಕೆಹೊರಟ್ಹೋಗು.
(ಒಮ್ಮೆಲೆಶಾಂತವಾತಾವರಣ. ತನಗೆತಾನೇನುಡಿವವರಂತೆಉಷಾ)
ಉಷಾ:ಬೀಗದಕೈ! ಅವರುಬೇಕೆಂದೇಇದನ್ನಿಲ್ಲಿಇಟ್ಟಿರಲಾರರಷ್ಟೇ? (ಮತ್ತೆತುಸುಹೊತ್ತುನೀರವ.)ಲಕ್ಷ್ಮೀ… ಈಸೀರೆರವಿಕೆಗಳನ್ನೆಲ್ಲಸರಿಯಾಗಿಮಡಿಚಿಬ್ಯಾಗಿಗೆಸೇರಿಸು. ವೇಳೆಇಲ್ಲ. ಬೇಗಮುಗೀಬೇಕು.
ಲಕ್ಷ್ಮಿ:ಆಗಲ್ರಮ್ಮ. (ಸೀರೆಮಡಚಿಬ್ಯಾಗಿಗೆಸೇರಿಸುವಸಪ್ಪಳ.)
ಉಷಾ:ಲಕ್ಷ್ಮೀಅವರೇನಾದರೂಹೋಗುವಾಗಹೇಳಿದ್ದಾರೇನು?
ಲಕ್ಷ್ಮಿ:ಏನೂಇಲ್ರಿ. ಅಡ್ಡಾಡಿಕೊಂಡುಬರ್ತೀನೀಂತಶಂಕರನಕೈಹಿಡಿದುಕೊಂಡುಹೋದರು.
ಉಷಾ:ಸರಿ, ಸರಿ. ಈಸೀರೆನನಗೆಹ್ಯಾಗೆಒಪ್ಪುತ್ತೆನೋಡು?…
ಲಕ್ಷ್ಮೀ:ಏನ್ಹೇಳ್ಬೇಕ್ರೆಮ್ಮಾ? ಲಕ್ಷ್ಮಿ! –ಸಾಕ್ಷಾತ್ ಲಕ್ಷ್ಮಿಇಳಿದುಬಂದ್ಹಾಗಕಾಣ್ತೀರಿ.
ಉಷಾ:ಶೀನೂಕೂಡಹಾಗೇಹೇಳ್ತಿದ್ದಕಣೇ– ಸ್ವರ್ಗದಿಂದಊರ್ವಶಿಇಳಿದುಬಂದಹಾಗೆಕಾಣ್ತೀರಿ– ಅಂತಅಲ್ವೇನೆ?
ಲಕ್ಷ್ಮಿ:ಅದ್ಸರಿ, ಇದೇನ್ರೆಮ್ಮಾಈಹೊತ್ತಿನಲ್ಲಿಸೀರೀನೆಲ್ಲಾಗಂಟುಕಟ್ತಾಇದೀರಿ?
ಉಷಾ: (ಪೆಚ್ಚಾಗಿ)ಓ…ಹ್… ನಾನುಇನ್ನೆರಡುದಿನಗಳಲ್ಲಿತೌರಿಗೆಹೋಗೋಳಿಲ್ಲವೆ? ಈಗಿನಿಂದಲೇಸಿದ್ಧತೆಮಾಡಿಟ್ಟಕೋ– ಬೇಕೂಂತ. ಹೊರಟದಿನವೇಅವಸರಮಾಡಿದರೆತುಂಬಕಷ್ಟವಾಗುತ್ತಲ್ಲವೆ?
ಲಕ್ಷ್ಮೀ:ಹೌದ್ರಿ…. ಆಂ. ಒಂದುಸುದ್ದಿಕೇಳಿದಿರಾತಾಯಿ?
ಉಷಾ:ಏನು?
ಲಕ್ಷ್ಮಿ:ನಮ್ಮಸಾಹೇಬರಿರೋಸ್ಕೂಲಿನಹತ್ತಿರರತ್ನಮಾಂತಒಂದುಹುಡುಗಿಇತ್ತುಗೊತ್ತಾ?
ಉಷಾ:ಆಶಿವರಾಮರಾಯರಹಿರಿಯಮಗಳು?
ಲಕ್ಷ್ಮಿ:ಹೂಂ. ಅವಳೇ. ತನ್ನಗಂಡನಬಿಟ್ಟುಗೌಡರಮಗನ್ನಕೂಡಿಕೊಂಡುಓಡಿಹೋದಳಂತೆ!
ಉಷಾ: (ಉದ್ವೇಗದಿಂದ)ಲಕ್ಷ್ಮೀ(ಬಿರುಸಾಗಿತೇಗುತ್ತ)ಯಾರುಹೇಳಿದರುನಿನಗೀಸುದ್ದೀನ್ನ?
ಲಕ್ಷ್ಮಿ:ಅದ್ಯಾಕ್ರಮ್ಮಾ? ಊರತುಂಬಹಬ್ಬೇತಲ್ಲ– ಡಣಾಡಂಗುರದ್ಹಂಗ! ನೀವಾಕ್ಯಿಷ್ಟುಮನಸ್ಸಿಗೆಹಚ್ಚಿಕೊಳ್ಳಬೇಕುಬಿಡಿ. ಯಾರದೋಸುದ್ದಿ– ಯಾರದೋಮಾತು. ನಮಗೇನು? ಸಧ್ಯನಮಗೆಸಂಬಂಧಿಸಿದ್ದೇನೊಅಲ್ಲಲ್ಲ, ಪಾಪ…. ಗಂಡಭಾಳಸತ್ಯಮನುಷ್ಯ! ಅವಳಿಗೂಕೈಕೊಟ್ಟಳುಚಾಂಡಾಲಿನಿ.
ಉಷಾ: (ಎತ್ತರದಧ್ವನಿ)ಚಾಂಡಾಲಿನಿ? ಯಾರಿಗೆನೀನಂದದ್ದುಹಾಗೆ? ಲಕ್ಷ್ಮೀ ….ಯಾರುಚಾಂಡಾಲಿನಿ? ಯಾರಿಗೆನೀನಂದದ್ದು?
ಲಕ್ಷ್ಮಿ:ಇದೇನ್ರಿಈಹೊತ್ತುಹೀಗೆಲ್ಲಾಆಡ್ತಾಇದ್ದೀರಿ? ಅವಳಿಗೆ– ಆಹುಡಿಗೆಗೆನಾನಂದದ್ದು? ಅಲ್ವೇನ್ರಿಮತ್ತೆ? ಆಕಳಂಥಾಗಂಡ. ಅಂಥವನಿಗೂಕೈಕೊಡೋದಂದ್ರೆ– ಎಂಥಚಾಂಡಾಲಿನಿಈಕಾಲದಹುಡಿಗೀರೇಹೀಗೆ…. ಇದೇನ್ರಿ, ನಿಮ್ಮಮುಖದಮೇಲೆಬೆವರು?
ಉಷಾ: (ಚೇತರಿಸಿಕೊಂಡು)ಓಹ್…. ಏ…. ನಿಲ್ಲ…. ತುಂಬಶಕೆಆಗ್ತಾಇದೆಅಲ್ಲವೇ? ಈಬೇಸಿಗೆಬೇರೆಎಂದುಹಾಳಾಗಿಹೋಗುತ್ತೋ?
ಲಕ್ಷ್ಮಿ: (ಕುಲುಕುಲುನಕ್ಕು)ಬಿಡ್ರಿ…. ನಮ್ಮಂಥಾದಡ್ಡರುಮಾತನಾಡೋಹಾಂಗಮಾತನಾಡ್ತೀರಿ…. ಮಳೆಗಾಲಇದ್ದದ್ದನ್ನಬ್ಯಾಸ್ಗಿಅಂದಬಿಟ್ರಿ.
ಧ್ವನಿ:ಹೊರಗೆಮಳೆಗಾಲವಿದ್ದರೂಅವಳುಮಾತ್ರಇನ್ನೂಸುಡುವಬೇಸಿಗೆಯಲ್ಲೇಇದ್ದಾಳೆ.
ಉಷಾ:ಓಹ್…. ಮರೆತುಹೋಗಿತ್ತು. ಸೀರೆಇಟ್ಟಾಯ್ತೇನು? ಸರಿಸರಿನೀನಿನ್ನುಹೊರಟ್ಹೋಗು.
ಲಕ್ಷ್ಮಿ:… ಹೂಂನ್ರಿ(ಹೋಗುವಳು)
(ತುಸುಸಮಯನೀರವ. ಆಮೇಲೆಬೀಗದಕೈಸದ್ದು, ಪೆಟ್ಟಿಗೆತೆರೆದುಆಭರಣ, ದುಡ್ಡುತೆಗೆದುಕೊಂಡಸಪ್ಪಳ.)
ಲಕ್ಷ್ಮಿ: (ಒಳಗಿನಿಂದ)ಅಮ್ಮಾವ್ರs…. ಬಿಳೀರವಿಕೆಒಳಗೇಇದೆ. ಅದನ್ನುತರಲೇನು?
(ಗಡಬಡಿಸಿಒಮ್ಮೆಲೆಪೆಟ್ಟಿಗೆಮುಚ್ಚಿದಸಪ್ಪಳ. ಕೆಲಹೊತ್ತುನೀರವ.)
ಉಷಾ:ಅಡಿಗಡಿಗೂನನ್ನನ್ನುಈಮನೆತಡೆಯುತ್ತಿದೆ. ಇಂಥಕಟುಕರಿಂದದೂರ– ಅತಿದೂರ– ನನ್ನಸುಖಕ್ಕೆಯಾರಿಂದಲೂಬಾಧೆಬಾರದಷ್ಟುದೂರ– ಓಡಿಹೋಗಬೇಕೆಂದರೆನನ್ನಮಟ್ಟಿಗೆನನ್ನನ್ನುಈಜಗತ್ತುಬಿಡುತ್ತಿಲ್ಲ! ಓಹ್– ನಾನುಇರಲಾರೆ– ಖಂಡಿತಇರಲಾರೆ– ನನ್ನಂಥವರುಈಮನೆಯಲ್ಲಿಖಂಡಿತಇರಬಾರದು!
ಧ್ವನಿ:ಖಂಡಿತಇರಬಾರದು. ಸುರೆಇದ್ದೂಹಾಲಿನಭ್ರಾಂತಿಹುಟ್ಟಿಸುವಜನ, ಈಮನೆಯಲ್ಲಿಖಂಡಿತಇರಬಾರದು!
ಉಷಾ: (ಕೇಳಿದವರಂತೆ)ಯಾರು? ಯಾರದುಹಾಗೆಮಾತನಾಡಿದವರು? ಲಕ್ಷ್ಮೀ… ಏಲಕ್ಷ್ಮೀ….
ಲಕ್ಷ್ಮಿ: (ಓಡಿಬಂದಸದ್ದು)ಏನ್ರೆಮ್ಮ?
ಉಷಾ:ಅವರುಬಂದಿದ್ದಾರೆಯೇ?
ಧ್ವನಿ:ಅವರೂಎಂದಾದರೂನಿನ್ನದಾರಿಗೆಅಡ್ಡಬಂದುದುಂಟೆ?
ಉಷಾ: (ಉದ್ರಿಕ್ತವಾಗಿ)ಲಕ್ಷ್ಮೀ! ಲಕ್ಷ್ಮೀ! ಕೇಳಿದೆಯಾ? ಯಾರೋಹೀಗೆಹಿಂದೆನಿಂತುನನ್ನನ್ನುಅಣಕಿಸಿಮಾತನಾಡುತ್ತಿದ್ದಾರೆ! ಕೇಳಲಿಲ್ಲನಿನಗೆ?
ಲಕ್ಷ್ಮಿ:ಇದೇನ್ರಮ್ಮಾಹೀಗೆಹುಚ್ಚುಚ್ಚಾರಆಡ್ತಾಇದೀರಿ?
ಧ್ವನಿ:ಅಹುದು– ನಿಜವಾಗಿಯೇಹುಚ್ಚು!
ಉಷಾ:ಕೇಳಿದೆಯಾ? ನೀನುಹುಚ್ಚಳೆಂದರೆಅದೂಹುಚ್ಚಳೆನ್ನುತ್ತಿದೆ. ನೀವಿಬ್ಬರೂಮಾತನಾಡಿಕೊಂಡಂತೆಆಡುತ್ತಿದ್ದೀರಿ! ಹಿಂದೆನೀನುಯಾರನ್ನೋಬಚ್ಚಿಟ್ಟುಬಂದಿರಬೇಕು! ಲಕ್ಷ್ಮೀ…. ಯಾರವನು? ಯಾರನ್ನುನೀನುಬಚ್ಚಿಟ್ಟುಬಂದದ್ದು?
ಧ್ವನಿ:ಯಾರನ್ನುನೀನುಬಹುದಿನಗಳಿಂದಮರೆತಿರುವೆಯೋಅವನನ್ನು!
ಉಷಾ:ಕೇಳಿದೆಯಾ? ಏನಂತಾನೆಈಪಾಪಿ? (ಬಿಕ್ಕುತ್ತ)ಹೋಗು– ಹೊರಟ್ಹೋಗು… ನಿನ್ನಮನೆಗೆಹೊರಟ್ಹೋಗು…. (ಬಿಕ್ಕುಅಸ್ಪಷ್ಟವಾಗುತ್ತಿರುವಾಗ.)
ಲಕ್ಷ್ಮಿ:ಅಮ್ಮಾವ್ರನಾಳಿನದಿನಸ್ವಲ್ಪತಡಮಾಡಿಬರ್ತೀನ್ರಿ…. (ನಿಷ್ಕ್ರಮಣ, ಕೆಲಹೊತ್ತುನೀರವ.)
ಶಂಕರ: (ಪ್ರವೇಶಿಸಿ)ಕಳ್ಳನಜೀವಹುಳ್ಳುಳ್ಳಗಂತ….
ಉಷಾ: (ಚೀರಿ)ಯಾರವನು?
ಶಂಕರ:ನಾನುಶಂಕರಅಕ್ಕವರ, ನೋಡಿ… ಆಶಾರಿಸ್ಕೂಲಿನಲ್ಲಿಈಹೊತ್ತುನನ್ನಪುಸ್ತಕಕದ್ದುಕೊಂಡುಇಲ್ಲಾಂತಹೇಳ್ತಾಇದ್ಳು. ನಾನುಗುರುಗಳಹತ್ರಹೋಗಿಹೇಳಿದಕೂಡಲೇಅಳಲಿಕ್ಕೆ….
ಉಷಾ: (ನಡುವೇತಡೆದು)ಸತ್ತುಹೋಗಲಿನಿನ್ನಶಾರಿ… ಶಂಕರ…. ನೀನೇನಾದರೂಇದೀಗಹಿಂದೆನಿಂತುಮಾತನಾಡಿದೆಯಾ?
ಶಂಕರ:ನಾನು? ಇಲ್ಲಾಂದ್ರೆ. ಈಗತಾನೇಸಾಹೇಬರನ್ನಕ್ಲಬ್ಬಿನಲ್ಲಿಬಿಟ್ಟುಬಂದೆ. ತಿರುಗಾಡಿಕೊಂಡುಇನ್ನೊಂದುತಾಸಿನಮೇಲೆಬಾಂತಹೇಳಿದರು. ಬಂದೆ…. ಯಾಕ್ರೀಅಕ್ಕಾವರಹೀಗಿದ್ದೀರಿ?
ಉಷಾ:…. ಅ…. ಹ್…. ಯಾಕಿಲ್ಲ. ಚೆನ್ನಾಗೇಇದ್ದೀನಲ್ಲ. ಚೆನ್ನಾಗೇಇದ್ದೀನಲ್ಲ– ಅದೇನೋಕೈಯಲ್ಲಿ?
ಶಂಕರ:ಈಫೋಟೋಕೆಳಗೆಬಿದ್ದಿತ್ತು. ಕುರ್ಚಿಯಮೇಲೆಇಡ್ತಾಇದೀನಿ.
ಉಷಾ:ಯಾರದು?…. (ಚಿಟ್ಟನೆಚೀರಿ)ಹೊರಟ್ಹೋಗುಶಂಕರಾಹೊರಟ್ಹೋಗು!…. ಓನಾನುಹೋಗಲಾರೆ…. ಹೋಗಲಾರೆ…. ನಾನುಎಲ್ಲಿಯೂಹೋಗಲಾರೆ!…. ಎಲ್ಲಿಯೂಹೋಗಲಾರೆ(ಬಿಕ್ಕುತ್ತ)ಇನ್ನೂನಿಂತಿರುವಿಯಲ್ಲಹಾಗೇ, ಅವರಹತ್ತಿರಹೊರಟ್ಹೋಗು(ಶಂಕರಹೋಗುತ್ತಾನೆ.)
ಶೀನೂಧ್ವನಿ:ಏನುಮಾಡಲುಉಷಾ? ನಿನ್ನನ್ನುಬಿಟ್ಟುಒಂದುಕ್ಷಣಕೂಡಬಾಳಲಾರೆ. ಕ್ಷಣಕ್ಷಣವೂನಿನ್ನಈಮೋಹಭರಿತಮುಖವನ್ನುನೋಡುತ್ತಿರಬೇಕು, ಸ್ಪರ್ಶಿಸುತ್ತಿರಬೇಕು! ಬಾರಿಬಾರಿಗೂಈಕರುಳುಗಳನ್ನುನೇವರಿಸುತ್ತಿರಬೇಕು! ದಿನದಇಪ್ಪತ್ತನಾಲ್ಕುತಾಸುಗಳೆಲ್ಲಾನಿನ್ನಸೆರಗಿನಮರೆಯಲ್ಲಿರಬೇಕು– ನಿನ್ನಧ್ವನಿಕೇಳುತ್ತಿರಬೇಕು– ನಿನ್ನಓರೆನೋಟಕ್ಕೆಪಕ್ಕಾಗಬೇಕು…. ಓಹ್…. ನಿನ್ನತೋಳಿನಲ್ಲಿತೃಪ್ತಿಎಂಬುದುಭ್ರಾಂತಿಉಷಾ, ತೃಪ್ತಿಎಂಬುದುಭ್ರಾಂತಿ!…. … ಉ… ಷಾ! ನಿನ್ನನ್ನುಬಿಟ್ಟುನಾನುಖಂಡಿತಬಾಳಲಾರೆ! ಎಲ್ಲಿಯಾದರೂದೂರಹೋಗೋಣ. ಈಜನ– ಈಸಮಾಜಎಲ್ಲವನ್ನೂಬಿಟ್ಟುದೂರ– ಅತೀದೂರಹೋಗೋಣ. ಇಂದುರಾತ್ರಿಟಿಕೆಟ್ಟುಕೊಂಡುಇಟ್ಟಿರುತ್ತೇನೆ. ಅವಶ್ಯವಾಗಿಬರಬೇಕು. ಬರುತ್ತೀಯಾ? ನಮ್ಮಿಬ್ಬರದುನಿಜವಾದಪ್ರೇಮವೇಆಗಿದ್ದರೆಖಂಡಿತಬರುತ್ತಿ. ಖಂಡಿತಬರಬೇಕು. ಹಾಂ…. ಹೋಗುವಾಗೊಂದುಟಾಂಗಾಹೇಳಿಹೋಗು…. ಸಿಕ್ಕಷ್ಟುದುಡ್ಡು, ಆಭರಣತರಲುಮಾತ್ರಮರೆಯಬೇಡ. ನಾನೂತರುತ್ತೇನೆ. ಬರುತ್ತೀಯಾಉಷಾ?
ಉಷಾ: (ಬಿಕ್ಕುತ್ತ)ನನಗೆಭಯವಾಗುತ್ತಿದೆ. ನಾವುಮಾಡುತ್ತಿರುವುದುಅನ್ಯಾಯವೆನಿಸುತ್ತದೆ. ನಾನುಬರಲಾರೆ…. ಬರಲಾರೆ….
(ಮನೆಯಮುಂದೆಟಾಂಗಾನಿಂತಸಪ್ಪಳ)
ಉಷಾ: (ಅಳುತ್ತ)ನಾನುಬರಲಾರೆ…. ಬರಲಾರೆ….
ಟಾಂಗಾವಾಲಾ: (ಪ್ರವೇಶಿಸಿ)ಮೇಮ್ಸಾಬ್ ಟಾಂಗಾತಯಾರಹೈ.
ಶೀನೂಧ್ವನಿ:ನಿನ್ನತೋಳಿನಲ್ಲಿತೃಪ್ತಿಎಂಬುದುಭ್ರಾಂತಿಉಷಾತೃಪ್ತಿಎಂಬುದುಭ್ರಾಂತಿ!
ಉಷಾ:ಹೊರಗೆಯಾರೂಇಲ್ಲವೇ?
ಟಾಂಗಾವಾಲಾ:ನಹೀಂ
ಉಷಾ:ಈಬ್ಯಾಗುತೆಗೆದುಕೊ….
(ಬಿಕ್ಕು…. ತೇಗು…. ಬರಬರುತ್ತಅಸ್ಪಷ್ಟವಾಗುತ್ತಲೂಟಾಂಗಾಹೊರಟಸಪ್ಪಳ….)
Leave A Comment