“ಹಸಿರಾಗಿ ಹೊರವಾಗಿ ಬೆಳೇದ ಗಿಡ. ಅದರ ಹಸಿರಾದ ಎಲೆಗಳ ಮೈ ಸೂರ್ಯನ ಬೆಳಕಿಗೆ ಮಿರಿ ಮಿರಿ ಮಿಂಚುತ್ತದೆ. ಒಂದು ಎಲೆಯನ್ನು ಕೀಳಬೇಕು ಎನಿಸುತ್ತದೆ. ಸರಿ, ಕಿತ್ತು ಬಿಡುತ್ತೇವೆ. ಆಗ ಗಿಡದಲ್ಲಿ ಏನಾಗುತ್ತದೆ ಎಂದು ಯಾವಾಗಲಾದರೂ ಯೋಚನೆ ಮಾಡುತ್ತವೆಯೇ? ನಮ್ಮ ಭಾವನೆ, ಗಿಡಕ್ಕೆ ಏನೂ ಆಗುವುದಿಲ್ಲ ಎಂದು, ಅಲ್ಲವೇ? ಆದರೆ ನಿಜವಾಗಿ ಗಿಡದ ನಾಡಿಯ ಚಲನೆ ಅಲ್ಲಿ ನಿಂತುಹೋಗುತ್ತದೆ. ಸ್ವಲ್ಪ ಕಾಲದ ಮೇಲೆ ನಿಧಾನವಾಗಿ ಬಡಿಯಲಾರಂಭಿಸಿ ಅನಂತರ ಅಲ್ಲಿ ಪೂರ್ತಿ ನಿಂತುಹೋಗುವುದು. ಆ ಜಾಗ ಗಿಡದ ಪಾಲಿಗೆ ಸತಂತತೆಯೇ ಸರಿ.

ಗಿಡಗಳಿಗೂ ನಮ್ಮ ಹಾಗೆಯೇ ನೋವುಂಟು. ಇದನ್ನು ಜಗತ್ತಿಗೆ ತಿಳೀಸಿಕೊಟ್ಟವರು ಭಾರತದ ವಿಜ್ಞಾನಿ ಜಗದೀಶ ಚಂದ್ರ ಬೋಸ್ ಅವರು. ಅವರು ವಿಜ್ಞಾನದ ಇನ್ನೂ ಹಲವು ಕ್ಷೇತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಆದರೂ  ಅವರ ಹೆಸರು ಬಹಳ ಪ್ರಸಿದ್ಧವಾಗಿ ಇರುವುದು ಸಸ್ಯ ಸಂಬಂಧ ವಿಷಯವಾದ ಅವರ ಸಂಶೋಧನೆಗಳಿಗೆ.

ಬಾಲ್ಯ,ವಿದ್ಯಾಬ್ಯಾಸ :

ಜಗದೀಶ ಚಂದ್ರಬೋಸರು ೧೮೫೮ನೆಯ ಇಸವಿ ನವೆಂಬರ ೩ ರಂದು ಜನಿಸಿದರು. ಡಕ್ಕಾ ಜಿಲ್ಲೆಯಲ್ಲಿರುವ ಪರೀದಪುರ ಅವರ‍ ಹುಟ್ಟೂರು.  ೧೮೪೭ರವರೆಗೆ ಇದು ಭಾರತದಲ್ಲಿತ್ತು. (ಬಾಂಗ್ಲಾದೇಶಕ್ಕೆ ಸೇರಿದೆ). ಗುಣವಂತ ತಂದೆ, ವಾತ್ಸಲ್ಯಮಯಿ ತಾಯಿ. ತಂದೆ ಭಗವಾನ್ ಚಂದ್ರ ಬೋಸ್ ಫರೀದಪುರದ ಡೆಪ್ಯೂಟಿ ಮ್ಯಾಜಿಸ್ಟ್ರೇಟರಾಗಿದ್ದರು. ಅವರ ಬಡ ಜನರಿಗೆ, ಕಷ್ಟದಲ್ಲಿ ಇರುವವರಿಗೆ ಬಿಡುಗೈಯ ಸಹಾಯ ನೀಡುತ್ತಿದ್ದರು. ಸಂತೈಸುತ್ತಿದ್ದರು. ೧೮೭೪ರಲ್ಲಿ ಮಲೇರಿಯಾ ವ್ಯಾಧಿಯು ನೂರಾರು ಸಂಸಾರಗಳನ್ನು ಪೀಡಿಸಿತು. ಭಗವಾನ್ ಚಂದ್ರರು ಆಗ ತಂದೆ-ತಾಯಿಗಳನ್ನು ಕಳೆದುಕೊಂಡು ಅನಾಥರಾದ ಸಾವಿರಾರು ಮಕ್ಕಳಿಗೆ ತಮ್ಮ ಹಣದಲ್ಲಿ ಒಂದು ಕಾರ್ಖಾನೆಯನ್ನು ಸ್ಥಾಪಿಸಿ ಕೆಲಸ ಒದಗಿಸಿಕೊಟ್ಟು ನೆರವಾದರು. ಇದಕ್ಕೆಲ್ಲ ಎಷ್ಟು ಹಣ ಖರ್ಚಾಗುತ್ತದೆ! ಆದರೆ ಭಗವಾನ ಚಂಧ್ರ ಬೋಸರಿಗೆ ಇದರಿಂದ ಸ್ವಲ್ಪವಾದರೂ ದುಃಖವಾಗುತ್ತಿರಲಿಲ್ಲ.

ಜಗದೀಶ ಚಂದ್ರರ ಬಾಲ್ಯದಲ್ಲಿ ಹಣವಂತರೂ, ವಿದ್ಯಾವಂತರೂ, ಪಾಶ್ಚಾತ್ಯ, ಸಂಸ್ಕೃತಿಯ ಕಡೆಕಗೆ ವಾಲುತ್ತಿದ್ದ ಕಾಲ.ಇಂಗ್ಲೀಷಿನ ಅಭ್ಯಾಸ ಎಂದರೆ ಪ್ರತಿಷ್ಠೆಯ ಗುರುತು. ಆದರೆ ಭಗವಾನ ಚಂದ್ರಬೋಸರು ತಮ್ಮ ಮಗನಿಗೆ ವಿದ್ಯಾಭ್ಯಾಸ ಕೊಡಿಸಿದ ರೀತಿ ನಿಜವಾಗಿ ಬೆರಗುಂಟು ಮಾಡುವಂತಹದು. ಒಂದು ನೂರು ವರ್ಷಗಳಿಗೂ  ಹಿಂದೆಯೇ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅವರು ಒಂದು ಪಾಠಶಾಲೆಯನ್ನು  ಸ್ಥಾಪಿಸಿದರು. ಅಲ್ಲಿ ಶಿಕ್ಷಣ ಕೊಡುತ್ತಿದ್ದುದು ಬಂಗಾಳಿ ಭಾಷೆಯಲ್ಲಿಯೇ. ಅದರಲ್ಲಿಯೇ ಕಿರಿಯ ಜಗಧೀಶ ಚಂದ್ರನ ವಿದ್ಯಾಭ್ಯಾಸವು ನಡೆಯಿತು. ಬಡತನವನ್ನೂ, ಬಡವರ ಜೀವನದ ಸ್ಥಿತಿಗಳನ್ನೂ ಅಲ್ಲಿನ ಗೆಳೆಯರೊಡನೆ ಬೆರೆತು ಚೆನ್ನಾಗಿ ಅವನೂ ಅರಿತುಕೊಂಡ. ಅಷ್ಟೇ ಅಲ್ಲ, ದೊಡ್ಡ ನದಿಗಳಲ್ಲಿ ದೋಣಿಗಳಲ್ಲಿ ಸಂಚರಿಸಿ ಮೀನು ಹಿಡಿಯುವ ಬಗ್ಗೆ ಹರಿಯುವ ನೀರಿನಲ್ಲಿ ಗಾಳ ಬೀಸಿ ಮೀನು ಸೆಳೆಯುವ ರೀತಿ, ದೂರದ ಬೆಟ್ಟಗುಡ್ಡಗಳಲ್ಲಿ ದನಕರುಗಳನ್ನು ಮೇಯಿಸುವುದು ಇವೆಲ್ಲವನ್ನೂ ಮೈಯೆಲ್ಲ ಕಿವಿಯಾಗಿ  ಕೇಳೂತ್ತಿದ್ದ. ಅವರ ಸಾಹಸಗಳನ್ನು ಕೇಳೀ ಅವನು ಪುಳಕಿತನಾಗುತ್ತಿದ್ದ.  ಅವನಲ್ಲಿದ್ದ ಸಾಹಸ ಪ್ರವೃತ್ತಿಗೆ ಇದು ನೀರೆರೆಯಿತು.

ಒಂದು ವಿಸ್ಮಯಕಾರಿ ವಿಷಯ, ಜಗದೀಶ ಚಂಧ್ರನನ್ನು ದಿನವೂ ಸ್ಕೂಲಿಗೆ ಕರೆದೊಯ್ಯುತ್ತಿದ್ದ ಮನೆಯಾಳೀನದು. ಇವನು ಮೊದಲಿಗೆ ಒಬ್ಬ ಡಕಾಯಿತನಾಗಿದ್ದ! ನ್ಯಾಯಾಧೀಶರಾಗಿದ್ದ ಭಗವಾನ ಚಂದ್ರರೇ ಅವನಿಗೆ ಶಿಕ್ಷೆ ವಿಧಿಸಿದ್ದರು. ಉದಾತ್ತ ಸ್ವಭಾವದ ಭಗವಾನ್ ಚಂದ್ರರು ಅವನು ಸೆರೆಮನೆಯಿಂದ ಬಂದಾಗ ಅವನಿಗೂ ಒಂದು ದಾರಿ ಮಾಡಿ ಕೊಡಬೇಕೆಂದು ಕೆಲಸಕ್ಕೆ ಇರಿಸಿಕೊಂಡಿದ್ದರು.  ಅವನಿಂದ ಜಗದೀಶಚಂದ್ರನು ಅವನ ಘೋರಕೃತ್ಯಗಳು, ಅವನ ಜೀವನದ ರೀತಿ ಇವುಗಳನ್ನೂ ಕೇಳಿ ತಿಳಿದುಕೊಂಡಿದ್ದ. ಡಕಾಯಿತನ ಸಾಹಸಗಳೂ ಮಾತ್ರ ಅವನ ಧೀರ ಮನೋವೃತ್ತಿಗೆ ಪೂರಕವಾಗಿದ್ದರೆ ಅದಲರಲ್ಲಿ ಅಶ್ಚರ್ಯವೇನಿಲ್ಲ.

ಪುಟ್ಟ ಜಗದೀಶಚಂದ್ರನು ತಾನು ಕಂಡ ಎಲ್ಲ ಘಟನೆಗಳನ್ನೂ ವಿಷಯಗಳನ್ನೂ ತಿಳೀದುಕೊಳ್ಳಬೇಕೆಂಬ ಆಸೆ. ಮಿಂಚು ಹುಳು ಏನು, ಬೆಂಕಿಯ ಕಿಡಿಯೇ? ಗಾಳಿ ಬಿಸುವುದೇಕೆ? ನೀರು ಹರಿಯುವುದೇಕೆ? ಹೀಗೆ ಪ್ರಶ್ನೆಗಳ ಮಾಲೆಯೇ ಅವನದು. ಭಗವಾನ ಚಂದ್ರರು ಎಲ್ಲ ಗೊತ್ತಿದೆಯೆಂದು ಎಂದೂ ಮಗನ ಮುಂದೆ ತೋರಿಸಿಕೊಂಡವರಲ್ಲ. ಗೊತ್ತಿದ್ದರೆ ಬೇಸರಾಗದೇ ವಿವರಿಸುವರು, ಇಲ್ಲದಿದ್ದರೆ ತಿಳೀಯದು ಎಂದು ಸರಳವಾಗಿ ಹೇಳಿಬಿಡುತ್ತಿದ್ದರು.  ಹೀಗೆ ವಿದ್ಯೆಯೆಷ್ಟೆ ಅಲ್ಲ, ನಡೆದ ನುಡಿಗಳಲ್ಲಿಯೂ ಜಗದೀಶಚಂದ್ರನ ತಂದೆ ತಾಯಿಗಳು ಅಸ್ಥೆ ವಹಿಸುತ್ತಿದ್ದರು. ರಾಮಾಯಣ, ಮಹಭಾರತದ ಕಥೆಗಳನ್ನು ಹುಡುಗನಿಗೆ ಹೇಳುತ್ತಿದ್ದರು. ಮಹಾಭಾರತದ ಕರ್ಣ ಜಗದೀಶಚಂದ್ರನ ಆದರ್ಶ ವ್ಯಕ್ತಿ. ಬಯಲು ನಾಟಕ ನೋಡಲು ತಂದೆ ತಾಯಿಗಳು ಕರೆದುಕೊಂಡು ಹೋಗುತ್ತಿದ್ದರು. ಜಗದೀಶನ ಸಹಪಾಠಿಗಳನ್ನು ಯಾವುದೇ ಭೇದವೂ ಇಲ್ಲದೆ ಅವರು ಆದರಿಸಿ ಉಪಚರಿಸುತ್ತಿದ್ದರು. ಇಂತಹ ಪರಿಪೂರ್ಣ ವಾತಾವರಣದಲ್ಲಿ ಜಗದೀಶಚಂರ್ದರನು ವಿಶಾಲ ಮನೋಭಾವದವನೂ, ದೇಶ ಅಣ್ಣ ತಮ್ಮ ಅಕ್ಕ ತಂಗಿಯರೆಂದರೆ ಪ್ರೀತಿ.  ಶ್ರೀಮಂತರಾಗಲಿ, ಬಡವರಾಗಲಿ ಎಲ್ಲರನ್ನು ಒಂದೇ ರೀತಿ ಕಾಣುವುದು ಇವೆಲ್ಲ ಅವನಲ್ಲಿ ಸಹಜ ಗುಣಗಳಾಗಿದ್ದವು.

ಇನ್ನೊಂದು ಭಾಷೆಯಲ್ಲಿ ವಿಷಯಗಳನ್ನು ಅರ್ಥಮಾಡಿಕೊಳ್ಳುವುದು ಕಷ್ಟ.  ನಮ್ಮ ತಾಯಿ ಭಾಷೆಯಲ್ಲಿ ಬಹು ಸುಲಭ. ತನ್ನ ಭಾಷೆಯಲ್ಲಿಯೇ ವಿದ್ಯಾಭ್ಯಾಸ ಆರಂಭಿಸಿದುದರಿಂದ ಜಗಧೀಶಚಂದ್ರನಿಗೆ ವಿಷಯಗಳನ್ನು ಅರಿತುಕೊಳ್ಳುವುದು ಬಹು ಸುಲಭವಾಯಿತು. ಓದಿದುದನ್ನು ಕುರಿತು ತಾನೇ ಯೋಚಿಸುವುದು ಅವನ ಅಭ್ಯಾಸ. ಎಷ್ಟೊ ವಿಷಯಗಳನ್ನು ಮನೆಯಲ್ಲಿಯೇ ಓದಿ ತಿಳಿದುಕೊಂಡ. ಆದರೂ ಪುಸ್ತಕ ಪಿಶಾಚಿಯಂತೆ ಓದುವುದು ಜಗದೀಶ ಚಂದ್ರನಿಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಓದಿನಲ್ಲಿ ಎಷ್ಟು ಹುಮ್ಮಸ್ಸೋ ಅಷ್ಟೇ ಆಟಗಳಲ್ಲಿಯೂ ಹುಮ್ಮಸ್ಸು. ಅದರಲ್ಲಿಯೂ ಕ್ರಿಕೇಟ ಮೆಚ್ಚಿನಾಟ..

ಒಂಬತ್ತನೆಯ ವಯಸ್ಸಿನ ವೇಳೆಗೆ ಆತನ ಜೀವನದಲ್ಲಿ ಒಂದು ಮುಖ್ಯ ಬದಲಾವಣೆಯಾಯಿತು. ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಕಲ್ಕತ್ತಾ ಮಹಾನಗರವನ್ನು ಅವನು ಪ್ರವೇಶಿಸಿದ್ದ. ಸಂತ ಕೆಸೇವಿಯರ್ ಶಾಲೆಯ ವಿದ್ಯಾರ್ಥಿಯಾದ. ಈ ಹಿಂದೆ ಅವನು ಓದಿದ ಶಾಲೆಗೂ ಈ ಶಾಲೆಗೂ ಸಂಬಂಧವೇ ಇಲ್ಲ. ಇಲ್ಲಿನ ಸಹಪಾಠಿಗಳಿಗೆ ಇಂಗ್ಲೀಷ್ ಬಿಟ್ಟರೆ ಬೇರೆ ಭಾಷೆಯೇ ಬರುತ್ತಿರಲಿಲ್ಲ. ಸಂಪೂರ್ಣ ಮಾತೃಭಾಷೆಯೆಲ್ಲೇ ಅದುವರೆಗೆ ಓದಿದ ಜಗದೀಶಚಂದ್ರನನ್ನು ಪಟ್ಟಣದ, ಅದರಲ್ಲಿಯೂ ಆಂಗ್ಲ ಸಹಪಾಠಿಗಳು ರೇಗಿಸುತ್ತಿದ್ದರು. ಒಂದು ಬಾರಿ ಒಬದ್ಬ ಹುಡುಗನು ಮುಷ್ಟಿಯುದ್ಧದಲ್ಲಿ ಅವನಿಗೆ ಬಲವಾದ ಗಾಯ ಮಾಡಿದ.  ಇದರಿಂದ ರೊಚ್ಚಿಗೆದ್ದು ಜಗದೀಶಚಂದ್ರನು ಆಹುಡುಗನಿಗೆ ಸರಿಯಾಧ ಪಾಠ ಕಲಿಸಿದ. ಮುಂದೆ ಈ ಬಗೆಯ  ಕಿರುಕುಳ ತಪ್ಪಿತ್ತು. ಆಗ ಅವನು ವಾಸ ಮಾಡುತ್ತಿದ್ದುದು ಒಂದು ವಸತಿ ಗೃಹದಲ್ಲಿ. ಅಲ್ಲಿ ಅವನ ಜೊತೆಗಾರರು ಇಲ್ಲ.ಚಿಕ್ಕಂದಿನಿಂದಲೂ ಜಗದೀಶ ಚಂಧ್ರನಿಗೆ ಹಲವು ಬಗೆಯ ಹವ್ಯಾಸಗಳಿದ್ದವು. ಮನೆಯ ತೋಟದ ಚಿಕ್ಕ ಕೊಳದಲ್ಲಿ ಕಪ್ಪೆ ಮೀನುಗಳನ್ನು ಬೆಳೆಸುವುದು, ಬೀಜ ಬಿತ್ತಿ ಮೊಳಕೆ ಬಂದ ಗಿಡವನ್ನು ಕಿತ್ತು ಅದರ ಬೇರುಗಳನ್ನು ಪರೀಕ್ಷಿಸುವುದು, ವಿಷವಲ್ಲದ ಹಾವು, ಮೊದಲ ,ಅಳಿಲು, ಮುಂತಾದ ಪ್ರಾಣಿಗೋಳನ್ನು ಸಾಕುವುದು- ಹೀಗೆ ನಾನಾ ವಿಧದ ಚಟುವಟಿಕೆಗಳನ್ನು ರೂಢಿಸಿಕೊಂಡಿದ್ದ. ಕಲ್ಕತ್ತದಲ್ಲಿಯೂ ತನ್ನ ಒಂಟಿತನ ಕಳೆಯಲು ಹೂವಿನ ಗಿಡಗಳನ್ನು ಬೆಳೆಸಿದ. ಪ್ರಣಿ ಪಕ್ಷಿಗಳನ್ನು ಸಾಕಿದ. ಬಹು ಬೇಗ ಶಾಲೆಯ ಪಾಠಗಳಲ್ಲೂ ಅವನು ಮುಂದು. ಉಪಾಧ್ಯಾಯರು ಇವನ ಬುದ್ಧಿವಂತಿಕೆಯನ್ನು ಮೆಚ್ಚಿಕೊಂಡರು. ಶಾಲೆಯ ಕೊನೆಯ ವರ್ಷದ ಪರೀಕ್ಷೆಯಲ್ಲಿ ಅವನು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾದ.

ಕಾಲೇಜಿನಲ್ಲಿ  ಜಗದೀಶ ಚಂದ್ರಭೋಸರು ಬಿ.ಎ.ತರಗತಿ ಸೇರಿದರು.   ಈಪದವಿಗೆ ಆಗ ವಿಜ್ಞಾನ ವಿಷಯಗಳೂ ಸೇರಿದ್ದವು. ಜೀವ ವಿಜ್ಞಾನದಲ್ಲಿ ಕಡೆಗೆ ಜಗದೀಶಚಂದ್ರರಿಗೆ ಹೆಚ್ಚಿನ ಒಲವು. ಆದರೆ ಫಾದರ ಲೆಫಾಂಟ್ ಎಂಬ ಭೌವಿಜ್ಞಾನ ಪ್ರಾಧ್ಯಾಪಕರು ಇವರಿಗೆ ಭೌತ ವಿಜ್ಞಾನದಲ್ಲಿ ಆಸಕ್ತಿ ಕೆರಳಿಸಿದುದರಿಂದ ಭೋಸರು ಲೆಫಾಂಟರ ಒಲವಿನ ಶಿಷ್ಯರಾದರು. ವಿಜ್ಞಾನ ವಿಷಯಗಳಲ್ಲಿ ಬೋಸರಿಗೆ ತುಂಬ ಕುತೂಹಲ. ಸಸ್ಯ ವಿಜ್ಞಾನದ ಆಕರ್ಷಣೆಯು ಅವರಿಗೆ ಬಲವತ್ತರವಾದುದೂ ಇದೇ ಕಾಲದಲ್ಲೆ.

ತಮ್ಮ ಹತ್ತೊಂಬತ್ತನೆಯ ವಯಸ್ಸಿನ ವೇಳೆಗೆ ಜಗದೀಶಚಂದ್ರರು ಬಿ.ಎ. ಪದವಿ ಪಡೆದರು. ಅನಂತರ ಇಂಗ್ಲೇಂಡಿಗೆ ಹೋಗಿ ಐ.ಸಿ.ಎಸ್. (ಇಂಡಿಯನ್ ಸಿವಿಲ್ ಸರ್ವಿಸ್) ಅಥವಾ ವೈದ್ಯಶಾಸ್ತ್ರವನ್ನಾದರೂ ಕಲಿಯಬೇಕೆಂಬ ಹಂಬಲ. ಐ.ಸಿ.ಎಸ್. ಆದರೆ ಸರಕಾರಿ ಕೆಲಸ. ಇತರರ ಅಧೀನದಲ್ಲಿ ಮಗ ಹೀಗೆ ಕೆಲಸ ಮಾಡುವುದು ಅವರ ತಂದೆಯವರಿಗೆ ಬೇಡವಾಗಿತ್ತು. ಇಂಗ್ಲೇಂಡಿಗೆ ಕಳೂಹಿಸುವುದಕ್ಕೆ ಅವರಿಗೆ ಹಣದ ತೊಂದರೆಯೂ ಇದ್ದಿತು. ಪ್ರಜಾಸೇವೆ, ದೇಶಸೇವೆ ಮಾಡಲಿ, ಇದಕ್ಕಾಗಿ ಶಿಕ್ಷಕನಾಗಲಿ ಎಂದು ಅವರ ಅಭಿಪ್ರಾಯ. ತಾಯಿಗಾದರೂ ಮಗ ಸಮುದ್ರದಾಚೆಯ ದೇಶಕ್ಕೆ ಹೋಗುವುದು ಧರ್ಮಕ್ಕೆ ಹೊರತಾದುದು ಎಂದಬ ಅಳುಕು. ಅಲ್ಲದೇ ಇದ್ದ ಒಬ್ಬ ಮಗನನ್ನು ಬಿಟ್ಟಿರಬೇಕಾದ ದುಃಖ ಬೇರೆ. ಈ ಸಮಯದಲ್ಲಿ ಬೋಸರು ತಂದೆ ತಾಯಿಯರ ವಿರುದ್ಧ ಹೋಗಲಿಲ್ಲ.

ಕೊನೆಗೆ ತ್ಯಾಗಮಯಿ ತಾಯಿ ಇಂಗ್ಲೇಂಡಿಗೆ ಮಗ ಹೋಗುವುದಕ್ಕಾಗಿ ಅನುವು ಮಾಡಿಕೊಟ್ಟಳೂ.  ತನ್ನ ಒಡವೆಗಳನ್ನು ಮಾರಿ, ಜೊತೆಗೆ ತಾನು ಕೂಡಿಸಿಟ್ಟ ಅಲ್ಪಸ್ವಲ್ಪ ಹಣ ಸೇರಿಸಿ ಅವನ ಪ್ರಯಣದ ಖರ್ಚನ್ನು ವಹಿಸುವುದೆಂದು ನಿರ್ಧರಿಸಿದಳು. ಆದರೆ   ತಂದೆಯ ಇದಕ್ಕೆ ಒಪ್ಪದೇ ಹೇಗೋ ತಾನು ಸೇರಿಸಿಟ್ಟ ಹಣವನ್ನು ಮಗನಿಗೆ ಸರಿ ಮಾಡಿಕೊಟ್ಟರು.

೧೮೮೦ರಲ್ಲಿ ಬೋಸರು ಹಡಗನ್ನು ಹತ್ತಿದರು. ಆಗ ಬೋಸರಿಗೆ ಇಪ್ಪತ್ತೆರಡು ವರ್ಷ ವಯಸ್ಸು. ಉಜ್ವಲ ಭವಿಷ್ಯಕ್ಕಾಗಿ ನಂದಿಯಾಗಲಿದ್ದ ಜೀವನ ಘಟ್ಟವನ್ನು ತಲುಪಿದರು. ಲಂಡನ್ನಿನಲ್ಲಿ ವೈದ್ಯ ವಿದ್ಯಾರ್ಥಿಯಾಗಿ ಸೇರಿಕೊಂಡರು. ಆದರೆ ಅವರ ಅರೋಗ್ಯ ಹದಗೆಟ್ಟುದರಿಂದ ಅದನ್ನ ಬಿಟ್ಟು ಕೇಂಬ್ರಿಜ್ ಕ್ರೈಸ್ಟ್ ಚರ್ಚ ಕಾಲೇಜಿಗೆ ಸೇರಿ ಪ್ರಕೃತಿ ವಿಜ್ಞಾನ ವಿಷಯವನ್ನು ಅಧ್ಯಯನಕ್ಕಾಗಿ ಆರಿಸಿಕೊಂಡರು. ಇದನ್ನು ಕಲಿಯಲು ಅವಶ್ಯವಿದ್ದ ಲ್ಯಾಟಿನ ಭಾಷೆಯನ್ನೂ ಜಗಧೀಶಚಂದ್ರರು ಈ ವೇಳೆಗೆ ಕಲಿತ್ತಿದ್ದರು. ಬಿ.ಎಸ.ಸಿ. ಪದವಿ ಪರೀಕ್ಷೆಯಲ್ಲಿ ಟ್ರೈಪಾಸ್ ಉನ್ನತ ಪ್ರಶಸ್ತಿಯನ್ನು ಗಳಿಸಿದರು. ಕೇಂಬ್ರಿಜ್ ಅಷ್ಟೇ ಅಲ್ಲದೇಲಂಡನ್ ವಿಶ್ವವಿದ್ಯಾನಿಲಯದ ಬಿ.ಎಸ್.ಸಿ.ಯನ್ನೂ ಮಾಡಿಕೊಂಡರು.

ತರುಣ ಸಂಶೋಧಕಉಪಕರಣಗಳ ಕಮ್ಮಾರ:

ಜಗದೀಶ ಚಂದ್ರ ಬೋಸರು ಭಾರತಕ್ಕೆ ಮರಳಿದರು. ಕಲ್ಕತ್ತೆಯ ಪ್ರಸಿಡೆನ್ಸಿ ಕಾಲೇಜಿನಲ್ಲಿ ಸಂಬಳವಿಲ್ಲದೆ ಕೆಲಸ ಮಾಢಿದರು. ಇದರ ಕಾರಣ ಹೀಗಿದೆ. ಆ ಕಾಲೇಜಿನಲ್ಲಿ ಒಂದು ವಿಚಿತ್ರ  ಪದ್ಧತಿಯಿದ್ದಿತು. ಆಂಗ್ಲ ಅಧ್ಯಾಪಕರಿಗೆ ಎಷ್ಟು ಸಂಬಳ ಕೊಡುತ್ತಿದ್ದರೋ ಅದರ ಮೂರನೆಯ  ಒಂದು ಭಾಗದಷ್ಟು ಮಾತ್ರ ಭಾರತೀಯ ಅಧ್ಯಾಪಕರಿಗೆ! ಜಗದೀಶ ಚಂದ್ರರು ಮೂರು ವರ್ಷಗಳ ಕಾಲ ವೇತನವನ್ನೇ ಸ್ವೀಕರಿಸದೇ ಕೆಲಸ ಮಾಡಿದರು. ಅವರಿಗೆ ತಕ್ಕ ಗೌರವಸ್ಥಾನವಾಗಲೀ, ಹೊಸ ಹೊಸ ಸಂಶೋಧನೆಗಳನ್ನು ಮಾಡುವುದಕ್ಕೆ ಬೇಕಾದ ಉಪಕರಣಗಳಾಗಲೀ ದೊರೆಯಲಿಲ್ಲ. ಆದರೆ ಈ ಅವಧಿಯಲ್ಲಿ ಅವರ ಅಪಾರ ಜ್ಞಾನ, ಕಾರ್ಯದಲ್ಲಿ ಅವರ ಆಸಕ್ತಿ, ಸಂಪನ್ನ ನಡತೆಗಳಿಂದ ಕಾಲೇಜಿನ ಹಿರಿಯರು ಆಕರ್ಷಿತರಾದರು. ಜಗದೀರ್ಶ ಚಂದ್ರಭೋಸರಿಗೆ ಸಂಪೂರ್ಣ ವೇತನ ಕೊಡಿಸಿದರು.

ಬೋಸರದು ಬಹು ಲವಲವಿಕೆಯ ಬುದ್ಧಿಶಕ್ತಿ. ಪ್ರತಿ ವರ್ಷವೂ ಒಂದೇ ಪಾಠ ಹೇಳುವ ಕೆಲಸ ಅವರಿಗೆ ಹಿಡಿಸಲಿಲ್ಲ. ಸತತವಾಗಿ ಸಂಶೋಧನೆ ಮಾಡುತ್ತಲೇ ಇರಬೇಕು. ಹೊಸ ಹೊಸ ವಿಷಯಗಳನ್ನು ತಿಳೀಯಬೇಕು, ಕಂಡುಹಿಡಿಯಬೇಕು ಎಂಬ ತವಕ.

ಸಂಶೋಧನೆಗೆ ಒಂದು ಪ್ರಯೋಗಶಾಲೆ ಬೇಕಲ್ಲವೇ? ಎಷ್ಟೋ ಸಲಕರಣೆಗಳೂ ಬೇಕಲ್ಲವೇ? ಜಗದೀಶಚಂದ್ರ ಬೋಸರಿಗೆ ಅವರ ಸಂಶೋಧನೆಗೆ ತಕ್ಕ ಪ್ರಯೋಗ ಶಲೆಯು ದೊರೆಯಲಿಲ್ಲ.ಸಲಕರಣೆಗಳೂ ಸಿಕ್ಕಲಿಲ್ಲ. ಆದರೆ ಅವರು ಅಷ್ಟಕ್ಕೆ ನಿರಾಶರಾಗಿ ಕೈಕಟ್ಟಿಕೊಂಡು ಕೂತು ಬಿಡಲಿಲ್ಲ.

ಎಂಟು ಹತ್ತು ವರ್ಷಗಳ ಕಾಲ ತಮ್ಮ ಖರ್ಚನ್ನು ಬಹು ಹಿಡಿತದಲ್ಲಿಟ್ಟರು. ಬರುತ್ತಿದ್ದ ಸಂಬಳಧಲ್ಲಿಯೇ ಹಣ ಉಳಿಸಿದರು. ಒಂದು ಪ್ರಯೋಗ ಶಾಲೆಯನ್ನೇ ಕೊಂಡುಕೊಂಡರು.

ರೇಡಿಯೋ ಸಾಧ್ಯಮಾಢಿದವನು ಎಂದರೆ ಮಾರ್ಕೊನಿ ಎಂಬಾತ ಎಂದೇ ಸಾಮಾನ್ಯವಾಗಿ ಹೆಳುವುದು.ಆದರೆ ನಿಜವಾಗಿ ಬೋಸರು ಈ ಶೋಧವನ್ನು ಸ್ವತಂತ್ರವಾಗಿ ನಡೆಸಿದ್ದರು. ಮಾರ್ಕೊನೀ ಅವರಿಗಿಂದ ಮೊದಲೇ ಈ ಶೋಧ ನಡೆಸಿದ್ದರಿಂದ ಅವನ ಹೆಸರೇ ಕೇಳಿಬರುತ್ತಿತ್ತು. ೧೮೬೯ರಲ್ಲಿ ಬೋಸರು ವಿದ್ಯುತ್ ಅಲೆಗಳ ಬಗೆಗೆ ಒಂದು ಹಿರಿಯ  ಪ್ರಬಂಧ ಬರೆದುಕೊಟ್ಟಿದ್ದರು. ಇದನ್ನು ಇಂಗ್ಲೇಂಡಿನ ರಾಯಲ್ ಸೊಸೈಟಿಯು ಮೆಚ್ಚಿಕೊಂಡಿತು (ರಾಯಲ್ ಸೋಸೈಟಿ  ನೂರಾರು ವರ್ಷಗಳಿಂದ ಪ್ರಪಂಚದಲ್ಲಿ ಹೆಸರಾದ ಸಂಸ್ಥೆ) ಅವರಿಗೆ ಡಾಕ್ಟರ್ ಆರ್ಫ ಸೈನ್ಸ್ ಪ್ರಶಸಿತ ಕೊಟ್ಟು ಗೌರವಿಸಿತು.  ಬಂಗಾಳವು ಅವರ ಸಂಸೋಧನೆಯ ಖರ್ಚನ್ನು ಕೊಟ್ಟು ಅವರಿಗೆ ಧನ ಸಹಾಯವನ್ನು ಮುಂದುವರೆಸಿತು. ಆಗಿನ ಕಾಲಕ್ಕೆ ಸರಕಾರದ ಖರ್ಚಿನಲ್ಲಿ ಒಬ್ಬ ಭಾರತೀಯನನನ್ನು ಹೊರ ದೇಶಕ್ಕೆ ಅಭ್ಯಾಸ ಮಾಡುವುದಕ್ಕಾಗಲಿ, ಸಂಶೋಧನೆಗಾಗಲೀ ಕಳುಹಿಸಿಕೊಡುತ್ತಿರಲಿಲ್ಲ. ಆದರೆ ಈ ಸದಾವಕಾಶವೂ ಬೋಸರಿಗೆ ದೊರೆಯಿತು.  ಅವರು ಅದನ್ನು ಚೆನ್ನಾಗಿ ಉಪಯೋಗಿಸಿಕೊಂಡರು.

ಜಗದೀಶ ಚಂದ್ರ ಬೋಸರ ಕೀರ್ತಿ ವಿಜ್ಞಾನ ಜಗತ್ತಿನಲ್ಲಿ ಹರಡಲಾರಂಭಿಸಿತು. ವಿಜ್ಞಾನ ಕ್ಷೇತ್ರದಲ್ಲಿ ಪಾಶ್ಚಾತ್ಯರು ಮಾತ್ರ ದೊಡ್ಡ ಕೆಲಸ ಮಾಡಬಲ್ಲರು. ಎಂಬ ನಂಬಿಕೆ ನಮ್ಮ ದೇಶದಲ್ಲಿ ಬೇರೆ ದೇಶಗಳಲ್ಲಿ ಇದ್ದ ಕಾಲ ಅದು. ಇತರೆ ದೇಶಗಳಲ್ಲಿಯೂ ಪ್ರತಿಭಾವಂತ ವಿಜ್ಞಾನಿಗಳಿದ್ದಾರೆ ಎಂದು ತೋರಿಸಿ ಕೊಟ್ಟರು.  ಜಗದೀಶಚಂದ್ರರು. ತಮ್ಮ  ಸಂಶೋಧನೆಗಳ ವಿಷಯವನ್ನು ಪಾಶ್ಚಾತ್ಯರ ಮುಂದೆ ತೋರಿಸಿ ಉಪನ್ಯಾಸ ಕೊಡಲು ಅವರು ಇಂಗ್ಲೇಂಡಿಗೆ ಪ್ರಯಾಣ ಬೆಳೆಸಿದರು.

ಬೋಸರು ನಡೆಸುತ್ತಿದ್ದ ಪ್ರಯೋಗಗಳಿಗೆ ಅಗತ್ಯವಾದ ಉಪಕರಣಗಳು ಸಿಕ್ಕುತ್ತಿರಲಿಲ್ಲ. ಆದರೆ ಅವರು ಆ ಕಾರಣಕ್ಕಾಗಿ ತಮ್ಮ ಕೆಲಸ ನಿಲ್ಲಿಸಲಿಲ್ಲ. ಚಿಕ್ ವಯಸ್ಸಿನಲ್ಲಿಯೇ ಬೇಕಾದ ಉಪಕರಣಗಳನ್ನು ತಾವೇ ತಯ್ಯಾರಿಸುವುದನ್ನೂ ಕಲಿತಿದ್ದರು. ಅವರು ತೆಗೆದುಕೊಂಡು ಹೋದದ್ದು ತಾವೇ ತಯಾರಿಸಿದ ಉಪಕರಣಗಳನ್ನು.

ಬೋಸರು ವಿದ್ಯುಚ್ಛಕ್ತಿಯನ್ನು ವಿಶೇಷವಾಗಿ ಅಭಿವೃದ್ಧಿ ಮಾಡಿದ್ದರು. ವಿದ್ಯುಚ್ಛಕ್ತಿಯ ಅಲೆಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕಳುಹಿಸಬೇಕಾಧರೆ, ಅದು ಹೊರಡುವ ಸ್ಥಳದಲ್ಲಿ ಎಂತಹ ಉಪಕರಣಗಳಿರಬೇಕು, ಅವು ಸೇರುವ ಸ್ಥಳದಲ್ಲಿ ಎಂತಹ ಉಪಕರಣಗಳಿರಬೇಕು, ಅವು ಸೇರುವ ಸ್ಥಳದಲ್ಲಿ ಎಂತಹ ಉಪಕರಣಗಳಿರಬೇಕು. ಎರಡು ಸ್ಥಳಗಳಿಗೆ ಎಷ್ಟು ದೂರ ಇರಬೇಕು. ಈ ಮೂರು ವಿಷಯಗಳನ್ನು ಕುರಿತು ಸಂಶೋಧನೆ ಮಾಡಿದ್ದರು. ಈ ಅದಕ್ಕೆ ಅಗತ್ಯವಾದ ಉಪಕರಣಗಳನ್ನು ರಚಿಸಿಕೊಂಡಿದ್ದರು. ಇಂಗ್ಲೇಂಡಿನ ರಾಯಲ್ ಸೊಸೈಟಿಯಲ್ಲಿ ಅವರು ತಮ್ಮ ಈ ಶೋಧವನ್ನು ಸಕಾರಣವಾಗಿ ಪ್ರದರ್ಶಿಸಿದರು. ಅಲ್ಲಿ ನೆರೆದಿದ್ದ ವಿಜ್ಞಾನಿಗಳು ಬೋಸರ ಈ ಸಾಧನೆಗೆ ಬೆರಗಾದರು. ಧರ್ಮ, ವೇದಾಂತ, ವಿಷಯಗಳಿಗೆ ಖ್ಯಾತವಾಗಿದ್ದ ಭಾರತದ ಪ್ರಜೆಯೊಬ್ಬ ವಿಜ್ಞಾನದಲ್ಲಿ ಅಸಾಧಾರಣ ಕಾರ್ಯ ಸಾಧಿಸಿರುವುದು ಇದೇ ಮೊದಲು ಎಂದು ಕೊಂಡಾಡಿದರು.  ಜಗತ್ತು ಜಗದೀಶಚಂದ್ರ ಬೋಸರಿಂದ ಭಾರತೀಯರ ಬಗೆಗೆ ಗೌರವ ಭಾವ ತಿಳಿಯಿತು. ಲಂಡನ್ನಿನ ಹೆಸರಾಂತ “ಸ್ಪೆಕ್ಟೇರ್” ಹಾಗೂ “ಟೈಮ್ಸ್” ಪತ್ರಿಕೆಯವರು, ಅನುಕೂಲತೆಗಳಿಲ್ಲದಿದ್ದರೂ ಇರುವ ಸಾಮಗ್ರಿಯನ್ನೇ ಅಳವಡಿಸಿಕೊಂಡು, ತಮ್ಮ ಶಿಕ್ಷಕ ವೃತ್ತಿಯನ್ನು ನಿರ್ವಹಿಸುತ್ತ ಗಳಿಸಿದ ಈ ಫಲಿತಾಂಶಗಳಿಗಾಗಿ ಅವರನ್ನು ಹೊಗಳಿದರು.

ಖ್ಯಾತಿಸವಾಲು :

ರಾಯಲ್ ಸೋಸೈಟಿಯ ಉಪನ್ಯಾಸದಿಂದ ಬೋಸರಿಗೆ ಮೇಲಿಂದ ಮೇಲೆ ಬೇರೆ ದೇಶಗಳಿಂದ ಅಹ್ವಾನಗಳು ಬಂದವು. ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ಅಮೇರಿಕ, ಜಪಾನ್, ಮೊದಲಾದ ದೇಶಗಳಲ್ಲಿ ಪ್ರವಾಸ ಮಾಡಿ, ಅಲ್ಲಿನ ವಿಜ್ಞಾನ ಸಂಸ್ಥೆಗಳಲ್ಲಿ ಅವರು ತಮ್ಮ ಸಂಶೋಧನೆಗಳನ್ನು ವಿವರಿಸಿದರು.

ಮನುಷ್ಯನಿಗಾಗಿಲಿ, ಪ್ರಾಣಿಗಳಿಗಾಗಲಿ,ಗಿಡಕ್ಕಾಗಿಲಿ, ವಿದ್ಯುತ್ ತಾಗಿದರೆ “ಷಾಕ್’ ಉಂಟಾಗುತ್ತದೆ ಎನ್ನುತ್ತೇವೆ.  ಹೀಗೆ ತಾಗಿದರೆ “ಷಾಕ್” ಉಂಟಾಗುತ್ತದೆ ಎನ್ನುತ್ತೇವೆ. ಹೀಗೆ ತಾಗಿದರೆ “ಷಾಕ್: ಉಂಟಾಗುತ್ತದೆ ಎನ್ನುತ್ತೇವೆ. ಹೀಗೆ ತಾಗಿದಾಗ ಅವು  ಉದ್ರಿಕ್ತವಾಗುತ್ತವೆ. ಕೆರಳುತ್ತವೆ.  ಅವುಗಳ ಈ ಪ್ರತಿಕ್ರಿಯೆಯನ್ನು ರೇಖೆಗಳ ಮೂಲಕ ತೋರಿಸುವ ಚಿತ್ರವನ್ನು ಬೋಸರು ಉಪಕರಣಗಳ ಮೂಲಕ ತಯಾರಿಸಿದರು. ತವರಂಥ ನಿರ್ಜಿವ ವಸ್ತುವಿಗೆ ವಿದ್ಯುತ್ ಪ್ರಯೋಗಿಸಿದಾಗಲೂ ಇದೇ ಬಗೆಯ ರೇಖಾಚಿತ್ರ ದೊರೆಯಿತು. ಎಂದರೆ ಇಂಥ ಹಲವು ಪ್ರತಿಕ್ರಿಯೆಗಳಲ್ಲಿ ಜೀವಂತ ಹಾಗೂ ನಿರ್ಜಿವ ವಸ್ತುಗಳಲ್ಲಿ ವ್ಯತ್ಯಾಸವಿಲ್ಲ. ಅವು ಒಂದೇ ಎಂಬ ನಿರ್ಧಾರಕ್ಕೆ ಬೋಸರು ಬಂದರು.

ಹೀಗೆ ಜೀವ ಪ್ರಪಂಚಕ್ಕೂ, ನಿರ್ಜಿವ ಪ್ರಪಂಚಕ್ಕೂ ಇರುವ ಹೋಲಿಕೆ, ಅವುಗಳನ್ನು ಕಂಡು ಬರುವ ಏಕತೆಗಳು ಅವರು ಒಮ್ಮೆ ಪ್ಯಾರಿಸನಲ್ಲಿ ಮಾಡಿದ ಭಾಷಣದ ವಿಷಯವಾಯಿತು. ಇವರು ಕಂಡುಹಿಡಿದ ಕೆಲವು ಮೂಲಭೂತ ವಿವರಗಳೂ ಇಂದು “ರಾಡಾರ್” ಎಂಬ ವಿಜ್ಞಾನದ ಅದ್ಭುತ ನಿಯಂತ್ರಕ ವ್ಯವಸ್ಥೆಯಲ್ಲಿ ಉಪಯೋಗಿಸಲ್ಪಡುತ್ತಿವೆ. ಪುನಃ ಇನ್ನೊಮ್ಮೆ ಅವರು ಇಂಗ್ಲೇಂಡಿಗೆ ಹೋದಾಗ ಕೇಂಬ್ರಿಜ್ ವಿಶ್ವವಿದ್ಯಾನಿಲಯ ಅವರಿಗೆ ಪ್ರೋಫೆಸರ್ ಪದವಿಕೊಟ್ಟು ಗೌರವಿಸಿತು.

ಹೊಸ ವಿಷಯಗಳನ್ನು ಕಂಡುಹಿಡಿದವರು ಸಾಮಾನ್ಯವಾಗಿ ಅದನ್ನು ತಮ್ಮ ಅಪ್ಪಣೆಯಿಲ್ಲದೆ ಯಾರು ಉಪಯೋಗಿಸಕೂಡದು ಎನ್ನುತ್ತಾರೆ. ಅದನ್ನು ಉಪಯೋಗಿಸಕೂಡದು ಎನ್ನುತ್ತಾರೆ. ಅದನ್ನು ಉಪಯೋಗಿಸುವಾಗ ಅವರಿಗೆ ಹಣ ಕೊಡಬೇಕು. ಏಕೆಂದರೆ ಅದು ಅವರ ಶ್ರಮದಿಂದ ಕಂಡುಹಿಡಿದದ್ದು. ಒಂದೆಎರಡು ಅದು ಅವರ ಶ್ರಮದಿಂದ ಕಂಡುಹಿಡಿದದ್ದು. ಒಂದೆರಡು ಹೊಸ ವಿಷಯಗಳನ್ನು ಕಂಡುಹಿಡಿದೇ ಲಕ್ಷಾಂತರ ರೂಪಾಯಿ ಸಂಪಾದಿಸುವವರಿದ್ದಾರೆ. ಜಗದೀಶಚಂದ್ರ ಬೋಸರು ರೂಪಿಸಿದ ಯಂತ್ರಗಳನ್ನೂ ಉಪಕರಣಗಳನ್ನೂ  ಎಷ್ಟೋ ಕೈಗಾರಿಕಾ ಸಂಸ್ಥೆಗಳು ಉಪಯೋಗಿಸಿಕೊಂಡವು. ಅವು ಬೋಸರಿಗೆ ಗೌರವಧನ ಕೊಡಲು ಮುಂದೆ ಬಂದವು. ಆದರೆ ಬೋಸರು ತಮ್ಮ ಸಂಶೋಧನೆಯನ್ನು ಯಾರು ಬೇಕಾದರೂ ಹಣ ಕೊಡದೇ ಉಪಯೋಗಿಸಿಕೊಳ್ಳಬಹುದು ಎಂದು ಬಿಟ್ಟರು. ಜ್ಞಾನ ಯಾರೊಬ್ಬರ ಆಸ್ತಿಯಲ್ಲ ಎಂಬ ಉದಾರ ಮನೋಭಾವ ಅವರದು.

 

ಗಿಡಕ್ಕೆ ವಿಷಯ ಚುಚ್ಚಿದರೆ ಅದು ಬಾಡಿ ಮುದುರಿ ಸಾಯುತ್ತದೆ ಎಂದು ಬೋಸರು ತೋರಿಸಿಕೊಟ್ಟ

ಢೆವಿ-ಫ್ಯಾರಡೆ ಸಂಶೋಧನಾಲಯ ಇಂಗ್ಲೇಂಡಿನಲ್ಲಿ ಪ್ರಸಿದ್ಧವಾದುದು. ಬೋರು ತಮ್ಮ ವೈಜ್ಞಾನಿಕ ಕಾರ್ಯವನ್ನು ಅಲ್ಲಿ ಮುಂದುವರೆಸಬೇಕೆಂ ಕೋರಿಕೆ ಬಂದಿತು. ವಿಖ್ಯಾತ ವಿಜ್ಞಾನಿಗಳ ಒತ್ತಾಯದಿಂದ ಸ್ವಲ್ಪಕಾಲ ಡೇವಿ-ಫ್ಯಾರಡೆ ಸಂಶೋಧನಾಲಯದಲ್ಲಿ ಕೆಲಸ ಮಾಡಿದರು. ಅಲ್ಲಿಯೂ ಹೊಸ ವಿಷಯಗಳು ಬೆಳಕಿಗೆ ಬಂದವು. ಮನುಷ್ಯರ ಮಾಂಸಖಂಡಗಳಲ್ಲಿ, ಖನಿಜಗಳಲ್ಲಿ ಹೊರಗಿನ ವಸ್ತುಗಳು ಉದ್ರೇಕವುಂಟು ಮಾಡುವಂತೆಯೇ ಸಸ್ಯಗಳಲ್ಲಿಯೂ ಉಂಟು ಮಾಡಬಹುದೇ ಎಂದು ಯೋಚಿಸಿದರು. ಕೂಡಲೇ ತೋಟದಿಂದ ಒಂದು ಎಲೆ, ಕ್ಯಾರೆಟ್ ಹಾಗೂ ಟರ್ನಿಪ್ ಗೆಡ್ಡೆಗಳು ಇವನ್ನು ತಂದು ಉಪಯೋಗಿಸಿ ಪ್ರಯೋಗಗಳನ್ನು ಮಾಡಿದರು.  ಸಸ್ಯ ವರ್ಗವೂ ಹೊರಗಿನ ಪ್ರಚೋದಕ ವಸ್ತುಗಳಿಂದ ಉದ್ರೇಕಗೊಳ್ಳುವುದು ಎಂದು ಸ್ಪಷ್ಟ ಮಾಡಿಕೊಂಡರು. ಈ ವಿಷಯವನ್ನು ರಾಯಲ್ ಸೋಸೈಟಿಯ ಸಭೆಯಲ್ಲಿ ವಿವರಿಸುತ್ತ, ವಿಶ್ವದಲ್ಲಿ ಕಂಡು ಬರುವ ಈ ತತ್ವವನ್ನು ಭಾರತೀಯ ಜ್ಞಾನೋಪಾಸಕರು-  ಮಹರ್ಷಿಗಳು- ಸಾವಿರಾರು ವರ್ಷಗಳಿಗೆ ಹಿಂದೆಯೇ ಕಂಡುಕೊಂಡಿದ್ದರು.  ಅವರು ಕಂಡ ಈ ಹಿರಿಯ ಸತ್ಯದ ಒಂದು ತುಣಕನ್ನು ಮಾತ್ರ ನಾನು ಈಗ ಕಂಡುಕೊಂಡೇ ಎಂದು ಹೇಳಿದರು. ಇಷ್ಟೊಂದು ವಿನಯ ಆ ಮಹಾ ವಿಜ್ಞಾನಿಯದು.

ಬೋಸರ ಸಂಶೋಧನೆಗಳಿಗೆ ಸವಾಲು ಹಾಕಿದ ಕೆಲವರು, ಅದರಲ್ಲಿ ಹುರುಳಿಲ್ಲವೆಂದರು. “ಲೀನಿಯನ್ ಸೊಸೈಟಿ” ಎಂಬ ವಿಜ್ಞಾನ ಸಂಸ್ಥೆಯಲ್ಲಿ ಮರು ವರ್ಷ ವಿಜ್ಞಾನಿಗಳ ಎದುರಿಗೆ ಪ್ರಯೋಗ ಪೂರ್ಣವಾಗಿ ಸಸ್ಯಗಳೂ ಸಹ ಹೊರಚಿನ ಪ್ರಚೋದನಕಾರಿ ವಸ್ತುಗಳಿಂದ ಉತ್ತೇಜನ ಗೊಳ್ಳುತ್ತವೆ ಎಂಬುವುದನ್ನು ವಿವರಿಸಿದರು.  ಅಲ್ಲಿ ನೆರೆದಿದ್ದ ವಿಜ್ಞಾನಿಗಳು ಅದನ್ನು ಮರು ಮಾತಿಲ್ಲದೇ ಒಪ್ಪಿಕೊಳ್ಳುವಂತಾಯಿತು.

ಬೋಸರು ಇಂಗ್ಲೇಂಡಿನಲ್ಲಿ ಕೆಲಸ ಮಾಡುವಾಗ ನಡೆದ ಒಂದು ಪ್ರಕರಣ ಸ್ವಾರಸ್ಯವಾಗಿದೆ.  ಸಸ್ಯಗಳು ಪ್ರಾಣಿ ಗಳಂತೆ ನೋವನ್ನು ಅನುಭವಿಸುತ್ತವೆ, ಚುವಿಟಿದಾಗ ಬಳಲುತ್ತವೆ, ವಿಷಯ ಹೊಕ್ಕಾಗ ಕೆಲವೇ ನಿಮಿಷಗಳಲ್ಲಿ ಸಾಯುತ್ತವೆ ಎಂದೆಲ್ಲ ಅವರು ಕಂಡುಕೊಂಡಿದ್ದರು. ಇದಕ್ಕಾಗಿ  ವಿಜ್ಞಾನಿಗಳೆದುರಿಗೆ ಒಂದು ಪ್ರಯೋಗವನ್ನು ನೋಡಲು ಉಳಿದ  ವಿಜ್ಞಾನಿಗಳೆದುರಿಗೆ ಒಂದು ಪ್ರಯೋಗವನ್ನು ಕೂಡ ಮಾಡಿ ತೋರಿಸಲಿದ್ದರು.  ಈ ಪ್ರಯೋಗವನ್ನು ನೋಡಲು ಉಳಿದ ವಿಜ್ಞಾನಿಗಳೂ, ಅನೇಕ ಗಣ್ಯ ವ್ಯಕ್ತಿಗಳೂ ಬಂದು ಸೇರಿದರು. ಆವರೆದುರಿಗೆ ಬೋಸರು ಒಂದು ಗಿಡಕ್ಕೆ ವಿಷವನ್ನು ಚುಚ್ಚಿದರು. ಕೆಲವೇ ವಿಷಯಗಳಲ್ಲಿ ಸಾಯಬೇಕಿದ್ದ ಗಿಡಕ್ಕೆ ಏನೂ ಆಗಲಿಲ್ಲ. ಸಭಾಂಗಣದಲ್ಲಿದ್ದವರೆಲ್ಲರೂ ನಗಲು ಪ್ರಾರಂಭಿಸಿದರು. ಇಂತಹ ಸಂದರ್ಭದಲ್ಲಿ ಬೋಸರು ತೋರಿಸಿದ ಮನೋಸ್ಥೈರ್ಯವು ಮೆಚ್ಚುವಂತಹದು. ಅವರು ಸ್ವಲ್ಪವೂ ಕಂಗೆಡಲಿಲ್ಲ. ಹೀಗೆಂದು ಯೋಚಿಸಿದರು: ಇದು ಗಿಡಕ್ಕೆ ಅಪಾಯವನ್ನು ಉಂಟು ಮಾಡದಿದ್ದ ಮೇಲೆ ನನಗೂ ಏನನ್ನೂ ಮಾಡಲಾರದು. ಆತ್ಮವಿಶ್ವಾಸದಿಂದ ಅದೇ ವಿಷದ ಮದ್ದನ್ನು ತಮಗೇ ಚುಚ್ಚಿಕೊಳ್ಳಲು ಸಿದ್ಧರಾದರು! ಕೂಡಲೇ ಒಬ್ಬಾತ ಎದ್ದು ನೀಂತು ತಾನು ವಿಷಕ್ಕೆ ಬದಲಾಗಿ ಅದೇ ಬಣ್ಣದ ನೀರನ್ನು ತುಂಬಿಸಿರುವುದಾಗಿ ಒಪ್ಪಿಕೊಂಡ!! ಅನಂತರ ಬೋಸರು ನಿಜವಾದ ವಿಷಯವನ್ನು ಗಿಡಕ್ಕೆ ಚುಚ್ಚಿದಾಗ ಅದು ಬಾಡಿ, ಮುದುರಿ ಸತ್ತುಹೋಯಿತು.

ಜಗದೀಶಚಂದ್ರ ಬೋಸರು ಇನ್ನೂ  ಹಲವು ಸಂಗತಿಗಳನ್ನು ಕಂಡು ಹಿಡಿದರು. ರಾತ್ರಿಯ ಕಾಲದಲ್ಲಿ ಒಂದು ಗಿಡದ ಗಾತ್ರ ಸ್ವಲ್ಪ ಕಡಿಮೆಯಾಗುತ್ತದೆ  ಎಂಬುವುದನ್ನು ಕಂಡುಹಿಡಿದರು. ಬೆಳಕಿನ ಕಡೆಗೇ ಸಸ್ಯ ಬಾಗಿ ಬೆಳೆಯುವುದಕ್ಕೆ, ಕೆಲವು ಡೊಂಕಾಗಿ, ಕೆಲವು ನೆಟ್ಟಗೆ ಏತಕ್ಕೆ ಬೆಳೆಯುತ್ತವೆ ಎಂಬಿವೇ ವಿಚಾರಗಳನ್ನು ಅವರು ಪ್ರಯೋಗಗಳ ಮೂಲಕ ತಿಳಿದುಕೊಂಡರು. ಇವುಗಳೀಗೆ ಸಸ್ಯಗಳ “ನಾಡಿಯ ಮಿಡಿತ ” ಕಾರಣ :ಉಷ್ಣವು ಗಿಡದ ಈ ಮಿಡಿತವನ್ನು  ಹೆಚ್ಚಿಸುತ್ತದೆ, ಶೀತವು ಅದನ್ನು ತಗ್ಗಿಸುತ್ತದೆ ಎಂದು ತಿಳಿಯಿತು.  ಅವರ ಸಂಶೋಧನೆ ಯನ್ನು ಹಲವರು ವಿರೊಧಿಸುತ್ತಲೇ ಇದ್ದರು. ಇದರಿಂದ ರಾಯಲ್ ಸೊಸೈಟಿಯಂತಹ ಪ್ರತಿಷ್ಠಿತ ಸಂಸ್ಥೆಗಳು ಹೊರಡಿಸುತ್ತಿದ್ದ ಪತ್ರಿಕೆಗಳಿಗೆ ಈ ಫಲಿತಾಂಶ ಕಳೂಹಿಸಿದಾಗ ಅದು ಪ್ರಕಟವಾಗುವುದಕ್ಕೆ ವಿಳಂಭ ಆಗುತ್ತಿ‌ತ್ತು. ಬೋಸರದು ಇದರಲ್ಲೆಲ್ಲ ಬಹಳ ಸ್ವತಂತ್ಯ್ರ ಮನೋಭಾವ- ವರ್ಷಗಟ್ಟಲೆ ಸಂಶೋಧನೆಯಿಂದ ತಾವು ಕಂಡು ಹಿಡಿದ ವಿಷಯಗಳು ಸತ್ಯವೆಂದು ಇವರ  ದೃಢ ವಿಶ್ವಾಸ. ಪ್ರಕಟಣೆಗೆ ಪ್ರಸಿದ್ಧ ವೈಜ್ಞಾನಿಕ ಪತ್ರಿಕೆಗಳೇ ಆಗಬೇಕೆಂದು ಅವರಿಗೆ ಅನಿಸಲಿಲ್ಲ. ತಾವೇ ಪುಸ್ತಕಗಳನ್ನ ಬರೆದು ಪ್ರಕಟಿಸಿದರು.

ಬೋಸರ ಕೀರ್ತಿ ಬೆಳೆದು ಅವರು ಅಳವಡಿಸಿದ ಉಪಕರಣಗಳನ್ನು ಹಲವು ಪಾಶ್ಚಾತ್ಯ ದೇಶಗಳಲ್ಲಿ ಬಳಸುವುದು ಪ್ರಾರಂಭವಾಯಿತು. ೧೯೦೭ರಲ್ಲಿ ಮತ್ತು ೧೯೧೪ರಲ್ಲಿ ಯೂರೋಪ ಮತ್ತು ಅಮೇರಿಕಗಳಲ್ಲಿ ವಿಖ್ಯಾತ ವಿಜ್ಞಾನ ಸಂಸ್ಥೆಗಳಲ್ಲಿ ತಮ್ಮ ಸಂಶೋಧನೆಗಳನ್ನು ವಿವರಿಸಿದರು.. ಜಪಾನಿಗೂ ಭೇಟಿಕೊಟ್ಟರು.  “ಮುಟ್ಟಿದರೆ ಮುನಿ ” ಗಿಡದ ಒಂದು ಎಲೆಯನ್ನು ಮುಟ್ಟಿದಾಗ ಸಾಲುಸಾಲಾಗಿ ಅದರ ಎಲೆಗಳು ಮುಚ್ಚಿ ಕೊಳ್ಳುವುದನ್ನೂ ನೀವೆಲ್ಲ ಕಂಡಿದ್ದೀರಿ. ನಾವು ಇದನ್ನು ಮುಟ್ಟುವಾಗ ಉಪಯೋಗಿಸಿದ ಶಕ್ತಿ  ಹೆಚ್ಚಾಗಿದ್ದರೆ ಮುಚ್ಚಿಕೊಳ್ಳುವ ಎಲೆಗಳ ಸಂಖ್ಯೆಯೂ ಹೆಚ್ಚಾಗಿರುತ್ತದೆ. ಮುಟ್ಟಿದ ಎಲೆ, ಅದು ಇರುವ ಕವಲಿನ ಎಲೆಗಳೂ ಮುಚ್ಚಿಕೊಳ್ಳುತ್ತಗವೆ. ಇಂತಹ ಪ್ರತಿಕ್ರಿಯೆ ಇತರ ಗಿಡಮರಳಲ್ಲೂ ಇರುತ್ತದೆ. ಮುಟ್ಟಿದರೆ ಮುನಿಯಲ್ಲಾದರೆ ಇದು ನಮ್ಮ ಕಣ್ಣೀಗೆ ಕಾಣುವಂತೆ ನಡೆಯುತ್ತದೆ. ಆದರೆ ಬೇರೆ ಸಸ್ಯಗಳಲ್ಲಿ ಜರುಗುವ ಇಂತಹ ಪ್ರತಿಕ್ರಿಯೆಗಳನ್ನು ತೋಋಇಸಬಲ್ಲ ಸೂಕ್ಷ್ಮಯಂತ್ರಗಳನ್ನೂ ತೆಗೆದುಕೊಂಡು ಬೋಸರು ವಿದೇಶ ಪ್ರಯಣ ಬೆಳೆಸಿದರು. ಈ ಗಿಡವನ್ನು ಪಾಶ್ಚಾತ್ಯ ವಾಯುಗುಣದಲ್ಲಿ ಕಾಪಾಡುವದೇ ಕಷ್ಟವಾಯಿತು. ಕೇಂಬ್ರಿಜ್ ಹಾಗೂ ಆಕ್ಸ್ ಫರ್ಡ ವಿಶ್ವವಿದ್ಯಾಲಯಗಳಲ್ಲಿ ವಿಜ್ಞಾನಿಗಳ ಮುಂದೆ ತಮ್ಮ ಪ್ರಯೋಗಗಳನ್ನು ನಡೆಸಿದರು. ಅವರು ಸಸ್ಯಗಳ ಈ ಸೂಕ್ಷ್ಮ ಸಂವೇದನೆಯನ್ನು ತೋರಿಸಿದಾಗ, ಅಲ್ಲದೆ ತಾವೇ ರಚಿಸಿದ ಯಂತ್ರಗಳನ್ನು ತೋರಿಸಿದಾಗಲಂತೂ ನೆರೆದವರು ಬೆರಗಾದರು. ಮತ್ತೇ ಅಭಿನಂದಿಸಿದರು. ಜೀವ ವಿಜ್ಞಾನದಲ್ಲಿ ಇಂತಹ ಪ್ರಯೋಗಗಳೇ ಅದಕ್ಕೆ ಹಿಂದೆ ನಡೆದಿರಲಿಲ್ಲ. ಸಸ್ಯಗಳೂ ನಮ್ಮಂತೆ ವಿವಿಧ ಅನುಭವ ಗಳೀಗೆ ಗುರಿಯಾಗುವುವೆಂಬುವುದು ಅತಿ ನೂತನ ವಿಷಯವಾಯಿತು.

ಜಗದೀಶಚಂದ್ರ ಬೋಸರ ಸಾಧನೆಗಳು ಒಂದಾದ ಮೇಲೊಂದರಂತೆ ಎಡೆತಡೆಯಿಲ್ಲದೆ ಹೊರಬಂದವು. ಬ್ರಿಟಿಷ್ ಸರಕಾರದಿಂದ  ಬೋಸರಿಗೆ ಹಲವು ಬಗೆಯ ಪ್ರಶಸ್ತಿ ದೊರೆತವು. ಅಲ್ಲದೆ ೧೯೧೫ರಲ್ಲಿ ಅವರು ನಿವೃತ್ತಿ ಹೊಂದಿದಾಗ “ಎಮಿರಿಟಸ್ ಪ್ರೊಫೆಸರ್” ಎಂದರೆ ವಿಶ್ರಾಂತಿ ಮಹೋಪಾಧ್ಯಯರಾಗಿ ಆರಿಸಲ್ಪಟ್ಟರು. ಅವರು ಜೀವಿಸಿರುವಷ್ಟು ಕಾಲ ಅವರಿಗೆ ತಿಂಗಳಿಗೆ ೧,೫೦೦ ರೂ.ಗಳ ವೇತನ ಕೊಡುವಂತೆ ನಿರ್ಧರಿಸಿತು.

೧೯೨೦ರಲ್ಲಿ ಜಗದೀಶ ಚಂದ್ರರಿಗೆ “ಫೆಲೋ ಆರ್ಫ ದಿ ರಾಯಲ್ ಸೊಸೈಟಿ “(ಎರ್ಫ.ಆರ್.ಎಸ್) ಎಂಬ ಗೌರವ ದೊರೆಯಿತು. ೧೯೨೭ರಲ್ಲಿ ಅವರು “ಇಂಡಿಯನ್ ಸೈನ್ಸ್ ಕಾಂಗ್ರೆಸ್”ನ ಅಧ್ಯಕ್ಷರಾಗಿ ಆಯ್ಕೆಯಾದರು.

ಹೊಸದೊಂದು ದೇವಾಲಯ :

ಉಪಕರಣಗಳ ತಯ್ಯಾರಿಕೆಯಲ್ಲಿತಾವು ಪ್ಟ ಕಷ್ಟ, ಪ್ರಯೋಗಾಲಯವಿಲ್ಲದೆ ತಮಗಾದ ಭವಣೆ ಇವುಗಳಿಂದ ಬೋಸರಿಗೆ ಒಂದು ಪ್ರಯೋಗ ಮಂದಿರವನ್ನು ಕಟ್ಟಬೇಕೆಂಬ ಆಸೆ ಮೊದಲಿನಿಂದಲೂ ಇದ್ದಿತು. ಇದರ ಫಲಿತಾಂಶವೇ ಈಗಲೂ ಪ್ರಸಿದ್ಧವಾಗಿರುವ :”ಭೋಸ್ ಸಂಶೋಧನಾ ಶಾಲೆ”. ಇದು ಕಲ್ಕತ್ತೆಯಲ್ಲಿದೆ. ಇದಕ್ಕಾಗಿ ಬಹಳ ಕಾಲದಿಂದ ನಿಧಿಯನ್ನು ಅವರು ಸಂಗ್ರಹಿಸಿದ್ದರು. ವಿಜ್ಞಾನ ಸಂಶೋಧನೆಯು ದೇಶಕ್ಕೆ ಎಷ್ಟು ಅವಶ್ಯವೆಂಬುವುದನ್ನು ಇಂದಿಗೆ ೬೫ ವರ್ಷಗಳೀಗೆ ಹಿಂದೆಯೇ ಅವರು ತಿಳೀದುಕೊಂಡಿದ್ದರು. ಬೋಸ್ ಸಂಶೋಧನಾ ಮಂದಿರದ  ಪ್ರಾರಂಭೋತ್ಸವ ನಡೆಸಿದಾಗ ಅವರು “ಇದು ದೇಶಕ್ಕೆಒಂದು ಪ್ರಯೋಗಶಾಲೆಯಲ್ಲ… ಒಂದು ದೇವಾಲಯ” ಎಂದು ನುಡಿದರು. ವಿಜ್ಞಾನ ಸಂಶೋಧನೆಯಲ್ಲಿ ಪ್ರಜೆಗಳಿಗೆ ಇರಬೇಕಾದ ಶ್ರದ್ದೇಯನ್ನು  ಈ ಎರಡು ಮಾತುಗಳು ತಿಳಿಸುತ್ತವೆ. ಬೋಸರು ಹೆಸರುಗಳಿಸಿದ ಭೌತ ಹಾಗೂ ಸಸ್ಯ ವಿಜ್ಞಾನ ಕ್ಷೇತ್ರಗಳಲ್ಲಿ ಮಂದಿರದಲ್ಲಿ ಪ್ರಯೋಗಗಳು ನಡೆಯುತ್ತವೆ. ತಮ್ಮ ಕಡೆಗಾಲದವರೆಗೆ, ಎಂದರೆ ಸುಮಾರು ೭೦ ವರ್ಷಗಳ ಕಾಲ ಬೋಸರು, ಈ ಸಂಸ್ಥೆಯಲ್ಲಿ ಸಂಶೋಧನೆಗಳನ್ನು ಮಾಡುತಲೇ ಇದ್ದರು. ಬೇರೆಯವರನ್ನು ನಮ್ಮ ಬೇಕು ಬೇಡಗಳಿಗಾಗಿ ಆಶ್ರಯಿಸದೇ ನಾವೆ ನಮ್ಮ ಕೆಲಸ ಮಾಡಿಕೊಳ್ಳಬೇಕು. ಇದಕ್ಕೆ ಮೊದಲು ನಾವು ಕಲಿಯಬೇಕಾದ ಪಾಠ, ನಮ್ಮ ಜಂಭವನ್ನು ನಾವು ಗೆಲ್ಲಬೇಕು- ಈ ಎಲ್ಲವನ್ನು ತಾನು ತಂದೆ- ತಾಯಿಗಳಿಂದ ಕಲಿತೆನೆಂದು ಅವರು ಹೇಳಿಕೊಂಡಿದ್ದಾರೆ.

ಕುತೂಹಲ ತುಳುಕುತ್ತಿದ್ದ ಬಾಲಕ=ಜ್ಞಾನದ ಭಗೀರಥ:

ಬೋಸರಿಗೆ ಚಿಕ್ಕಂದಿನಿಂದಲೂ ಪ್ರಕೃತಿಯಲ್ಲಿ ಬಹಳ ಆಸಕ್ತಿ. ಗಿಡದಲ್ಲಿ ಹೂವು ಅನಂತ ಹಣ್ಣೂಗಳು ಬಿಡುತ್ತವೆ, ಗಿಡದ ಎಲೆಗಳು ಉದುರುತ್ತವೆ. ತೊರೆಯಲ್ಲಿ  ನೀರು ಹರಿಯುತ್ತದೆ, ಬೀಜಗಳು ಮೊಳೆತು ಗಿಡ ಗಳಾಗುತ್ತವೆ- ದಿನವೂ ನಾವು ಲೆಕ್ಕವಿಲ್ಲದಷ್ಟು  ಬಾರಿ ಕಾಣುವ ಇಂಥ ವಿಷಯಗಳೇ ಅವರ ಕುತೂಹಲಕ್ಕೆ ಕಾರಣವಾದವು. ಅವರ ಈ ಎಲ್ಲ ಕುತೂಹಲಗಳಿಗೆ ಆಗ ಸರಿಯಾದ ಉತ್ತರಗಳು ದೊರೆಯುತ್ತಿರಲಿಲ್ಲ. ಆದರೆ ತಮ್ಮ ಮುಂದಿನ ಜೀವನದಲ್ಲಿ ಇಂಥ ಎಲ್ಲ ಸಮಸ್ಯೆಗಳಿಗೂ ಉತ್ತರ ಹುಡುಕಲು ಬೋಸರು ಶ್ರಮಿಸುತ್ತಲೇ ಇದ್ದರು.

ಅವರು ಕಂಡು ಹಿಡಿದ ವಿಷಯಗಳಲ್ಲಿ ಮುಖ್ಯ ವಾದುವನ್ನಿಲ್ಲಿ ಹೇಳಬಹುದು. ಗಿಡಗಳು ಹೊರಗಿನ ಪ್ರೋಚದನೆಗೆ ಪ್ರತಿಕ್ರಿಯೆ ತೋರಿಸುತ್ತವೆ. ನಾವು ಬೆಂಕಿ ತಗುಲಿದರೆ ಕೂಡಲೇ ಕೈಯನ್ನು  ಎಳೆದುಕೊಳ್ಳುತ್ತೇವೆ . ಬಹು ಶೀತವನ್ನು ತಡೆಯಲಾರೇವು. ವಿಪರೀತ ಚಳಿಯಾದರೆ ಸತ್ತೇ  ಹೋಗುತ್ತೇವೆ. ಬಿಸಿ-ಶೀತಗಳ ಅನುಭವ ಸಸ್ಯಗಳಿಗೂ ಉಂಟು. ಉಷ್ಣ ಅಳೆಯಲು ಉಷ್ಣಮಾಪಕ ಯಂರ- ಥರ್ಮಾಮೀಟರ್ ಬಳಸುತ್ತೇವೆ, ಅಲ್ಲವೇ? ೬೦ ಡಿಗ್ರಿ ಸೆಂಟಿಗ್ರೇಡನಷ್ಟು ಉಷ್ಣವಾದರೆ ಗಿಡಗಳು ಮೂರ್ಛೆ  ಹೋಗುತ್ತವೆ. ಸೆಂಟ್ರ ಗ್ರೇಡನಷ್ಟು ಉಷ್ಣವಾಧರೆ ಗಿಡಗಳು ಮೂರ್ಚೆ ಹೋಗುತ್ತವೆ.  ೨೩ ಡಿಗ್ರ ಸೆಂಟಿಗ್ರೇಡನಷ್ಟು ಶೀತವಾದರೂ ಅಷ್ಟೇ. ಸುತ್ತಲಿನ ಶಾಖದ ಮಟ್ಟ ಸ್ವಲ್ಪ ಹೆಚ್ಚಿದರೂ ಅಥವಾ ತಗ್ಗಿ ಸ್ವಲ್ಪ ಶೀತವಾದರೂ ಸಸ್ಯಗಳು ಮೂರ್ಛೆ ಹೋದಂತಾಗುವುವು. ಸಾಯಲೂಬಹುದು. ಎಂದು ಸೂಕ್ಷ್ಮ ಉಪಕರಣಗಳ ಮೂಲಕ ಬೋಸರು ಕಂಡು ಹಿಡಿದರು. ಸಸ್ಯದ ಒಂದು ಭಾಗಕ್ಕೆ ಎಟು ತಗುಲಿದರೆ ಉಳಿದೆಲ್ಲ ಭಾಗಗಳಿಗೂ ಅದರ ಅಘಾತವು ತಲುಪಿ ಗಿಡದ ಬಳಲಿದಂತೆ ಬಾಗುತ್ತದೆ. ಒಂದು ಸೆಕೆಂಡಿನಲ್ಲಿ ಸಸ್ಯವು ಒಂದು ಅಂಗುಲದ ಐವತ್ತು ಸಾವಿರ ಭಾಗಗಳಳ ಒಂದು ಭಾಗದಷ್ಟು (೧/೫೦,೦೦೦) ಬೆಳೆಯುತ್ತಿರುತ್ತದೆ. ಇಂತಹ ಸೂಕ್ಷ್ಮ ವಿಷಯಗಳನ್ನು ತೋರಿಸುವಂತಹ ಉಪಕರಣಗಳನ್ನು ಬೋಸರು ಸೃಷ್ಟಿಸಿದರು.

ಗಿಡಗಳಲ್ಲಿ ಧನ ಹಾಗೂ ಋಣವೆಂಬ ಉದ್ವೇಗಗಳಿವೆ.  ಇವುಗಳಲ್ಲಿ ಒಂದು, ಗಿಡದ ಯಾವುದೇ ಭಾಗವನ್ನು ಮುಂದಕ್ಕೆ ನೂಕಿದರೆ ಇನ್ನೊಂದು ಹಿಂದಕ್ಕೆ ತಳ್ಳುತತದೆ. ಇದರಿಂದಲೇ ಗಿಡದ ಬೆಳವಣೀಗೆ ಗೆರ ಎಳೆದಂತೆ ನೇರರಾಗಿರದೆ ಸ್ವಲ್ಪ ಅಂಕು ಡೊಂಕಾಗಿ ಇರುತ್ತದೆ. ಅಲ್ಲದೇ ಕತ್ತಲೆಯಲ್ಲಿಟ್ಟರೆ ಬೆಳಕಿನ ಕಡೆ ಬೆಳೆಯುವುದೇಕೆ, ಬೇರು ನೆಲದೊಳಕ್ಕೆ ಇಳಿದು ಬೆಳೆಯುವುದೇಕೆ , ಎಂಬಿವೇ ಮೊದಲಾದ ವಿಷಯಗಳಿಗೆ ಹೊಸ ವಿವರಗಳನ್ನು ಬೋಸರು ಕೊಟ್ಟರು.

ಕಮಲದ ಹೂವು ಮೇಲೇರುವಾಗ ಅರಳುತ್ತದೆ, ಸೂರ್ಯ ಮುಳುಗಿದಾಗ ಮುಚ್ಚಿಕೊಳ್ಳುತ್ತದೆ. ಇದಕ್ಕೆ ಕಾರಣವೇನು? ನಾವು ಎಂದುಕೊಳ್ಳುತ್ತೇವೆ, ಕಮಲದ ಹೂವಿಗೆ ಸೂರ್ಯನೆಂದರೆ ಪ್ರೀತಿ.  ಅದರಿಂದ ಹಾಗೆ ಮಾಡುತ್ತದೆ ಎಂದು. ಆದರೆ ಬೋಸರು, ಉಷ್ಣವು ಹೆಚ್ಚಿದಂತೆಲ್ಲಾ ಅದು ಅರಳುತ್ತದೆ. ಉಷ್ಣವು ತಗ್ಗಿದಂತೆ ಅದುಬಾಗಿ ಮುಚ್ಚಿಕೊಳ್ಳುತ್ತದೆ ಎಂದು ತೋರಿಸಿದರು. ಸೂರ್ಯಕಾಂತಿಯ ಗಿಡವಾದರೂ ಹೀಗೆಯೇ. ಇವುಗಳಿಗೆ ಕಾಂತಿದಾಹವೆಂದು ಅವರು ಹೇಳಿದರು. ಬೋಸರು ಇನ್ನೊಂದು ಸ್ವಾರಸ್ಯವಾದ ವಿಷಯವನ್ನು ತೋರಿಸಿಕೊಟ್ಟರು.  ಬೆಳಿಗ್ಗೆ ಆರರಿಂದ ಮಧ್ಯಾಹ್ನ ೩ ಗಂಟೆಯವರೆಗೆ ಗಿಡ ಒಂದು ರೀತಿ ವತಿಋಸುತ್ತದೆ. ಮಧ್ಯಾಹ್ನ ೩ ರಿಂದ ಪ್ರಾತಃಕಾಲ ೬ರ ವರೆಗೆ ಮತ್ತೊಂದು ರೀತಿಯಾಗಿ ವರ್ತಿಸುತ್ತದೆ. ಇದನ್ನು ಒಂದು ವಿಚಿತ್ರ ಮರದ ಮೇಲೆಯೂ ಪ್ರಯೋಗ ಮಾಢಿ ಸಿದ್ಧಪಡಿಸಿದರು.

ಫರೀದಪುರ ಎಂಬ ಊರಿನಲ್ಲಿ  ಒಂದು ವಿಲಕ್ಷಣ ಈಚಲ ಮರವಿದ್ದಿತು. ದಿನವೂ ಸಂಜೆಯ ಸಮಯದಲ್ಲಿ ಇದು ಬಾಗುತ್ತಿತ್ತು. ಸಂಜೆಯ ಹತ್ತಿರವೇ ಇದ್ದ ದೇವಸ್ಥಾನದಲ್ಲಿ ಆಗುತ್ತಿದ್ದ ಗಂಟೆಯ ನಾದ ಕೇಳೀ ಇದು ಭಕ್ತಿಯಿಂದ ಬಾಗುತ್ತದೆ, ಇದರಲ್ಲಿ ಯಾರೋ ಮಹಾನುಭಾವರೂ ವಾಸಿಸುತ್ತಿರಬೇಕು ಎಂದು ಜನ ತಿಳಿದಿದ್ದರು. ಆದರೆ ಗ ಈ ಗಿಡ ಉಷ್ಣ  ಹಾಗೂ ಶೀತಗಳಿಂದ ಉಂಟಾಗುವ ವ್ಯತ್ಯಾಸಗಳಿಂದಾಗಿ ಅದು ಹೀಗೆ ವರ್ತಿಸುತ್ತದೆ ಎಂಬುವುದಾಗಿ  ಬೋಸ್ ಅವರ ವಿವರಣೆಕೊಟ್ಟರು.

ಬೋಸರು ಇನ್ನೂ ಹಲವು ವಿಷಯಗಳನ್ನು ಕಂಡು ಕೊಂಡರು. ಗಿಡಕ್ಕೆ  ನೀರು ಅವಶ್ಯಕ ಎಂದು ಎಲ್ಲರಿಗೂ ಗೊತ್ತು. ಬೇರು ನೀರನ್ನು ಪಡೆಯುತ್ತದೆ. ಆದರೆ ಬೇರುಗಳೀಲ್ಲದೆಯೂ ಗಿಡ ಈ ನೀರನ್ನು  ಪಡೆಯಬಲ್ಲುದು ಎಂದು ತೋರಿಸಿಕೊಟ್ಟವರು ಅವರು.  ಒಂದು ಗಿಡದ ಬೇರನ್ನು ಕತ್ತರಿಸಿ ಕಾಂಡವನ್ನು ನೀರಿನಲ್ಲಿಟ್ಟರೂ ಅದು ನೀರು ಹೀರಿಕೊಳ್ಳುತ್ತದೆ. ಬೇರು ಕಿತ್ತ ಸಸ್ಯವನ್ನು ಬುಡಮೇಲು ಮಾಡಿಟ್ಟರೂ, ಎಲೆ ಕಾಂಡಗಳು ನೀರನ್ನು ಹೀರಿಕೊಳ್ಳುತ್ತವೆ ಎಂದೂ ತೋರಿಸಿದರು.

ನಮ್ಮ ಹೃದಯದ ಹಿಗ್ಗುತ್ತದೆ. ಕುಗ್ಗುತ್ತದೆ. ದೇಹದಲ್ಲಿ ರಕ್ತ ಸಂಚಾರವನ್ನು ಅದು ಹೀಗೆ ನಡೆಸುತ್ತದೆ. ಗಿಡದ “ಸೆಲ್” ಅಥವಾ ಜೀವಕೋಶಗಳು ಹೀಗೆಯೇ ಹಿಗ್ಗಿ  ಕುಗ್ಗಿ ಹೃದಯದಂತೆ ಕೆಲಸವನ್ನು ಮಾಡುತ್ತವೆ. ಇದನ್ನು ಗುರುತಿಸುವ ಒಂದು ಉಪಕರಣವನ್ನು ಅವರು ಕಂಡು ಹಿಡಿದರು.

ಸಾಹಸಿ ಬಾಲಕ :ದೃಢಮನಸ್ಸಿನ ವಿಜ್ಞಾನಿ:

ಜೀವನದಲ್ಲಿ ಜಗದೀಶಚಂದ್ರರುಎಷ್ಟೋ ಕಷ್ಟಗಳನ್ನು ಎದುರಿಸಬೇಕಾಯಿತು. ಆದರೆ ಎಂದೂ ಅವರು ಧೈರ್ಯ ಗೆಟ್ಟವರಲ್ಲ. ಎಂತಹ ದಿಕ್ಕುಗೆಡಿಸುವ ಸನ್ನಿವೇಶದಲ್ಲಿಯೂ ಸ್ಪಷ್ಟವಾಗಿ ಯೋಚಿಸಿ ಕೆಲಸ ಮಾಡುವ ಅವರ ಸಾಮರ್ಥ್ಯ ಬಾಲ್ಯದಲ್ಲಿಯೇ  ವ್ಯಕ್ತವಾಯಿತು. ಕೇವಲ ಐದು  ವರ್ಷದ ಹುಡುಗನಲ್ಲೇ ಜಗದೀಶಚಂದ್ರರು ಕುದುರೆ ಸವಾರಿ ಮಾಡಿಕೊಂಡು ಶಾಲೆಗೆ ಹೋಗುತ್ತಿದ್ದರು. ಒಮ್ಮೆ ಕುದುರೆ ಪಂದ್ಯವನ್ನು ನೋಡಲು ಹೋದಾಗ ಕೆಲವರು “ನೀನು ಓಡಿಸು” ಎಂದು ಹುರಿದುಂಬಿಸಿದರು. ಕೂಡಲೇ ಕುದುರೆಯನ್ನು ಜಗದೀಶ ಚಂದ್ರರು ತಟ್ಟಿ ಓಡಿಸಲಾರಂಭಿಸಿದರು.  ಕುದುರೆಗೆ ಹಾಕುವ ಜೀನಿಲ್ಲ. ಸವಾರ ಕಾಲಿಗೆ ಹಾಕಿಕೊಳ್ಳುವ ರಿಕಾಪಿಲ್ಲ.  ಹೀಗೆ ಓಡಿದಾಗ ಬಾಲಕ ಜಗದೀಶಚಂದ್ರರ ತೊಡೆಯಲ್ಲಿ ಗಾಯಗಳಾಗಿ ರಕ್ತ ಹರಿಯಲಾರಂಭಿಸಿತು. ಆದರೂ ಕುದುರೆಯೂ, ಸವಾರನೂ ಪಂದ್ಯದ ಕಣದ ಎಂದು ಸುತ್ತು ಸುತ್ತಿ ಬಂದರು. ಬಾಲಕನ ಧೈರ್ಯವನ್ನು ಕಂಡು ಜನ ಮೆಚ್ಚಿದರು.

ಮತ್ತೊಂದು ಬಾರಿ ಅವರು ಅತಿ ಅಪಾಯ ಪರಿಸ್ಥಿತಿಯಲ್ಲಿ ಹೀಗೆಯೇ ಕುದುರೆ ಸವಾರಿ ಮಾಡಿದರು. ಅವರು ಇನ್ನೂ ತರುಣರಾಗಿದ್ದರು. ಭೇಟೆಯಿಂದ ಹಿಂತಿರುಗುವಾಗ ಜ್ವರದ ತಾಪ ಬಹಳವಾಗಿ ಕಾಡಲಾರಂಭಿಸಿತು. ಮನೆಗೆ ಹೋಗಲು ಜೊತೆಯಿಲ್ಲ. ಸವಾರಿಗೆ ಇದ್ಧ ಕುದುರೆಯೋ ತುಂಟ ಕುಕದುರೆ. ಅವರ ಹತ್ತಿದ ಕುದುರೆಯೋ ತುಂಟ ಕುದುರೆ.  ಅವರು ಹತ್ತಿದ ಕೂಡಲೇ ಕುದುರೆ ನಾಗಲೋಟದಲ್ಲಿ ಓಡಲಾರಂಭಿಸಿತು. ಒಂದುಸೇತುವೆಯ ಮೇಲೆ ರ‍್ಸ್ತೆ ಹಾದು ಹೋಗುತ್ತಿತ್ತು. ಆದರೆ ಈ ಸೇತುವೆ ಪ್ರವಾಹ ದಲ್ಲಿ ಕೊಚ್ಚಿಹೋಗಿತ್ತು. ಕುದುರೆ ಮಾತ್ರ ಓಡುತ್ತಲೇ ಇದ್ದಿತು. ಜ್ವರದ ಬಳಲಿಕೆಯಲ್ಲಿಯೂ ಜಗದೀಶಚಂಧ್ರರು ಕುದುರೆಯ ಕಡಿವಾಣವನ್ನು ತಟ್ಟಕ್ಕನೆ ಒಂದು ಕಡೆಗೆ ಎಳೆದರು. ಆಗ ಕುದುರೆ ಒಂದು ಪಕ್ಕಕ್ಕೆ ತಿರುಗಿ ಪಕ್ಕದಲ್ಲಿಯೇ ಇದ್ದ ಇನ್ನೊಂದು ಬಿದಿರಿನ ಸೇತುವೆಯ ಮೇಲೆ ದಾಟಿತು.

ವಿಜ್ಞಾನಿಸಾಹಿತಿ :

ಜಗದೀಶಚಂದ್ರರು ವಿಜ್ಞಾನಿಯಾಗಿ ತಮ್ಮಮತ್ತು ತಮ್ಮ ದೇಶದ ಕೀರ್ತಿಯನ್ನು ಪಾಶ್ಚಾತ್ಯ ದೇಶಗಳಲ್ಲಿ ಸಹ ಬೆಳಗಿಸಿದರು. ಆದರೆ ಇವರಿಗೆ ವಿಜ್ಞಾನದಲ್ಲಿ ಮಾತ್ರವೇ ಆಸಕ್ತಿಯಿಲ್ಲ. ಸಾಹಿತ್ಯ ಮತ್ತು ಲಲಿತಕಲೆಗಳಲ್ಲಿ ವಿಶೇಷ ಆದರ. ರವಿಂದ್ರನಾಥ ಠಾಕೂರರು ಅವರನ್ನು ಮೊದಲಬಾರಿ ನೋಡಲು ಹೋದಾಗ ಬೋಸರು ಮನೆಯಲ್ಲಿರಲಿಲ್ಲ. ಠಾಕೂರರು ಹೀಗೆ ಸಂಪಿಗೆಯ ಗುಚ್ಛವನ್ನು ಇರಿಸಿ ಹೋದರು. ಹೀಗೆ ಪ್ರಾರಂಭವಾದ ಅವರ ಸ್ನೇಹ ಜಗದೀಶರು ಬದುಕಿದ್ದಷ್ಟು ಕಾಲ ಗಾಢವಾಗುತ್ತ ಹೋಯಿತು.

ಒಮ್ಮೆ ರವಿಂದ್ರರು ಬೋಸರು ತಮ್ಮಮನೆಯಲ್ಲಿ ಕೆಲವು ದಿಗನಳಿರಬೇಕೆಂದು ಆಹ್ವನಿಸಿದರು. ಬೋಸರು ಒಪ್ಪಿದರು. ಆದರೆ ಒಂದು ಷರತ್ತಿನ ಮೇಲೆ: ಪ್ರತಿದಿನ ರವಿಂದ್ರರು ಒಂದು ಕಥೆಯನ್ನು ಬರೆದು ಹೆಳಬೇಕು. ರವೀ ರವೀಂದ್ರರ ಎಷ್ಟೋ ಕಥೆಗಳು ಹೀಗೆ ರಚಿತವಾದವು. “ಕಾಬೂಲಿವಾಲ” ಕಥೆ ಓದಿದ್ದೀರ? ಒರಟು ಪಠಾನ ಮತ್ತು ಪುಟ್ಟ ಬಂಗಾಳಿ ಹುಡುಗಿ ಇವರ ವಿಲಕ್ಷಣ ಸ್ನೇಹದ ಕಥೆ. ಇದು ಹಲವು ಭಾಷೆಗಳಿಗೆ ಅನುವಾದವಾಗಿದೆ. ಹಲವು ದೇಶಗಳಲ್ಲಿ ಪ್ರಸಿದ್ಧವಾಗಿದೆ. ಇದನ್ನು ರವಿಂದ್ರರು ಬರೆದದ್ದು ಬೋಸರು ಅವರ ಅತಿಥಿಯಾಗಿದ್ದಾಗಲೇ ಬಂಗಾಳದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು  ಈ ಮಹಾ ವಿಜ್ಞಾಣಿ.!

ದೇಶಾಭಿಮಾನಸ್ನೇಹವಿಶ್ವಾಸಗಳ ಗಣಿ:

ವಿಜ್ಞಾನದಲ್ಲಿ ಮಹತ್ವದ ಸಂಶೋಧನೆಗಳನ್ನು ಬೋಸರು ಕಂಡುಹಿಡಿದರೆಂದು ಹಲವು ದೇಶದ ವಿಜ್ಞಾನಿಗಳು ಹೊಗಳಿದಾಗ ಬೋಸರು, :”ಇವೆಲ್ಲವನ್ನು ಭಾರತದ ಮಹಾ ಋಷಿಗಳು ಹಿಂದೆಯೇ ಕಂಡು ಕೊಂಡಿದ್ದರು.” ಎಂದು ಹೇಳಿದುದನ್ನು ಕಂಡಿದ್ದೇವೆ.

ಸಮಯ ದೊರೆತಾಗಲೆಲ್ಲ ಭಾರತದ ಪುಣ್ಯ ಕ್ಷೇತ್ರಗಳಿಗೆ ಪತ್ನಿಯೊಡನೆ ಹೋಗಿ ನೋಡಿಕೊಂಡು ಬರುವುದು ಬೋಸರ ಕಾರ್ಯಕ್ರಮವಾಗಿತ್ತು. ಹೀಗೆ ಹೋದಲೆಲ್ಲ ತಾನು ಕಂಡುದರ ಚಿತ್ರಗಳನ್ನು ಕ್ಯಾಮರಾದಿಂದ  ತೆಗೆಯುತ್ತಿದ್ದರು. ಇವುಗಳೆಲ್ಲವನ್ನೂ ಸಂಗ್ರಹಿಸಿಡುತ್ತಿದ್ದರು.  ಈ ಐತಿಹಾಸಿಕ ಹಾಗೂ ಪುರಾಣ ಪ್ರಸಿದ್ಧ ಸ್ಥಳಗಳು, ವಿಖ್ಯಾತ ಶಿಲ್ಪ ಕಟ್ಟಡಗಳೂ, ದೇವಾಲಯಗಳನ್ನು ಕಂಡು ಅವರ  ಭಾರತೀಯ ಅಭಿಮಾನವು ಗರಿಗೆದರುತ್ತಿತ್ತು. ಅವರು ಆನಂದಿತರಾಗುತ್ತಿದ್ದರು. ಸಾಂಚಿ, ಚಿತ್ತೂರು,  ಅಜ್ಮೀರ, ನೈನಿತಾಲಗಳನ್ನು ಸಂದರ್ಶಿಸಿದರು. ಒರಿಸ್ಸಾದಲ್ಲಿರುವ ಗುಹೆಯೊಳಗೆ ಕೊರೆದ ದೇವಾಲಯವನ್ನು ನೋಡಿದರು. ಎಲ್ಲೋರ ಅಜಂತ ಗುಹೆಗಳು, ಪೂರಿಯ ಜಗನ್ನಾಥ ಸ್ವಾಮಿ, ದಕ್ಷಿಣ ಭಾರತದ ಮುಖ್ಯ ಊರುಗಳಾದ ರಾಮೇಶ್ವರ, ಮಧುರೆ, ತಂಜಾವೂರು ಗಳನ್ನೂ ಶ್ರೀಲಮಖಾದ್ವೀಪವನ್ನೂ ಕಂಡು ಹ ಬಂದರು. ಅಲ್ಲಿನ ಕೇದಾರನಾಥ ಅವರ ಕ್ಷೇತ್ರ ಅವರ ಮನಸ್ಸಿಗೆ ಬಹಳ ಹಿಡಿಯಿತು.

ಸ್ವಲ್ಪವೂ ಗರ್ವವಿಲ್ಲದೆ, ಹೃದಯವಂತಿಕೆಯ ಬೋಸರಿಗೆ ಸ್ನೆಹ ಸಂಪತ್ತು ಅಪಾರವಾಗಿತ್ತು. ರವಿಂದ್ರರ ಸ್ನೇಹದ ವಿಷಯವನ್ನು ಅಗಲೇ ಹೇಳಿದೆ. ಹೆಸರಾಂತ ವಿಜ್ಞಾನಿ ಪ್ರಪುಲ್ಲ ಚಂದ್ರರೇ ಬೋಸರ ಆತ್ಮೀಯ ಗೆಳೆಯರು. ಗೋಪಾಲಕೃಷ್ಣ ಗೋಖಲೆ, ಮಹಾತ್ಮ ಗಾಂಧಿ ಎಲ್ಲರಿಗೂ ಪರಿಚಿತರು ಜಗಧೀಶ ಚಂದ್ರರು. ಇಂಗ್ಲೇಂಡಿಗೆ ಮಾರ್ಗರೇಟ ನೋಬೆಲ್ , ಎಂಬಾಕೆ ಸ್ವಾಮಿ ವಿವೇಕಾನಂದರ ಶಿಷ್ಯಯಾಗಿ, “ನಿವೇದಿತ” ಎಂಬ ಹೆಸರು ಪಡೆದರು. ಈಕೆ ಭಾರತದಲ್ಲಿ ನೆಲೆಸಿ ತಮ್ಮ ಬಾಳನ್ನು ಸೇವೆಗೆ ಮುಡಿಪಾಗಿಟ್ಟರು. ಭೋಸರ ಪ್ರತಿಭೆ ಜನಕ್ಕೆ ವಿಜ್ಞಾನ ಎಷ್ಟು ಮುಖ್ಯ ಎಂಬುವುದನ್ನು ತಿಳೀಸಿಕೊಡಲು ಅವರು ಪಡುತ್ತಿದ್ದ ಶ್ರಮ ಇವನ್ನು ಅವರು ಮೆಚ್ಚಿದರು. ಜಗದೀಶ ಚಂದ್ರರ ಸಂಶೋಧನಾಲಯದ ಸ್ಥಾಪನೆಯ ವಿಷಯದಲ್ಲಿ ಈಕೆಗೆ ತುಂಬ ಆಸಕ್ತಿ,. ಸಂಶೋಧನಾಲಯ ಸ್ಥಾಪಿಸಿದಾಗ ಬೋಸರು, ಸೋದರಿ ನಿವೇದಿತಾಳ ನೆನಪಿಗಾಗಿ ಜ್ಯೋತಿಯನ್ನು ಹಿಡಿದು ಮುನ್ನಡೆಯುತ್ತಿರುವ ಹೆಂಗಸಿನ ವಿಗ್ರಹವೊಂದನ್ನು ಇರಿಸಿದರು.

ಅಮೇರಿಕದಲ್ಲಿ ಅವರು ಕೆಲವು ದಿನಗಳು ಮಿಸೆಸ್ ಬುಲ್ ಎಂಬಾಕೆಯ ಅತಿಥಿಯಾಗಿದ್ದರು. ಈಕೆ ಇವರನ್ನು ಮಗನಂತೆ  ನೋಡಿಕೊಂಡರು.  ಬೋಸರು ಪ್ಯಾರಿಸನಲ್ಲಿ ಕಾಯಿಲೆ ಮಲಗಿದಾಗ ಆಕೆ ಪ್ಯಾರಿಸಿಗೆ ಬಂದು ಅವರು ಚಿಕಿತ್ಸೆಗೆ ಏರ್ಪಾಟು ಮಾಡಿ ತಾನೇ ದಾದಿಯಾಗಿ ನಿಂತಳು. ಜಗತ್ಪ್ರಸಿದ್ಧ ಇಂಗ್ಲೀಷ ನಾಟಕಕಾರ ಜಾರ್ಜ ಬರ್ನಾರ್ಡ ಷಾ, ಪ್ರಸಿದ್ಧ ಫ್ರೆಂಚ ಸಾಹಿತಿ ರೋಮೆನ್ ರೋಲಾ ಮೊದಲಾದವರಿಗೆ ಜಗದೀಶಚಂದ್ರರಲ್ಲಿ ಬಹುಗೌರವ: ಇವರಿಬ್ಬರೂ ತಮ್ಮ ಪುಸ್ತಕಗಳನ್ನು ಜಗದೀಶ ಚಂದ್ರರಿಗೆ ಅರ್ಪಿಸಿದ್ದಾರೆ.

ಬೋಸರಿಗೆ ಅನುರೂಪಳಾದ ಪತ್ನಿ :

ಇಷ್ಟೆಲ್ಲ ಸಂಶೋಧನೆಯಲ್ಲಿ ತೊಡಗಿರುತ್ತಿದ್ದ ಬೋಸರಿಗೆ ಮನೆಯ ವಿಚಾರಗಳ ಬಗೆಗೆ ಸ್ವಲ್ಪವಾದರೂ ಯೋಚನೆ ಬರದಂತೆ ಗೃಹಕೃತ್ಯವನ್ನು ನಡೆಸಿಕೊಂಡ ಕೀರ್ತಿ ಅವರ ಪತ್ನಿ ಅಬಲಾಬೋಸ್ ಅವರದು. ಆಕೆ ಮದುವೆಯಾದಾಗ ವೈದ್ಯಶಾಸ್ತ್ರದಲ್ಲಿ ಓದುತ್ತಿದ್ದವರು. ಜಗದೀಶಚಂದ್ರರ ತಂದೆ ತಾಯಿ ತಮ್ಮ ಉದಾರಭಾವದಿಂದ ಬೇಕಾದಷ್ಟು ಖರ್ಚು ಮಾಡಿ ಲದ ಹೊರೆಯನ್ನು ಹೊತ್ತಿದ್ದರು. ಇದನ್ನೆಲ್ಲ ಬೋಸರೇ ನಿರ್ವಹಿಸಿದಾಗ ಸಂಸಾರವನ್ನು ಅಬಲಾ ಆದಷ್ಟು ಮಿತವ್ಯಯದಿಂದ ತೂಗಿಸಿಕೊಂಡು ಹೋದರು. ಬೋಸ್ ದಂಪತಿಗಳಿಗೆ ಆದದ್ದೇ ಒಂದು ಮಗು, ಅದೂ ತೀರಿಕೊಂಡಿತು. ಅವರಿಬ್ಬರೂ ವಿದ್ಯಾರ್ಥಿಗಳನ್ನೇ ತಮ್ಮ ಮಕ್ಕಳಂತೆ ನೋಡಿಕೊಂಡರು. ಕಲ್ಕತಾ ನಗರದಲ್ಲಿ ಹೆಣ್ಣು ಮಕ್ಕಳ ಪ್ರೌಢ ಶಾಲೆಯೊಂದನ್ನು ಸ್ಥಾಪಿಸಿ ಅದರ ಹೊರೆಯನ್ನು ಅಬಲಾ ಬೋಸ್ ನಿರ್ವಹಿಸುತ್ತಿದ್ದರು.  ಪತಿಯಡೊನೆ ವಿದೇಶ ಪ್ರವಾಸ ಕೈಗೊಂಡು, ಅವರ ವೈಜ್ಞಾನಿಕ ವ್ಯವಹಾರಗಳಲ್ಲಿಯೂ ಸಹಕಾರ  ನೀಡುತ್ತಿದ್ದರು. ಅವಕಾಸ ದೊರೆತಾಗ ಪತಿ ಪತ್ನಿ ಯರಿಬ್ಬರೂ ಪವಿತ್ರ ಸ್ಥಳಗಳ ಸಂದರ್ಶನ ಮಾಡಿ ಬರುತ್ತಿದ್ದರು.

ಜಗದೀಶ ಚಂದ್ರಬೋಸರನ್ನು  ವಿಜ್ಞಾನವು ಎಂದಿಗೂ ಸ್ಮರಿಸುತ್ತದೆ. ಅವರ ಹೆಸರು ಸಸ್ಯ ವಿಜ್ಞಾನದಲ್ಲಿ ಶಾಶ್ವತವಾಗಿ ಉಳಿದುಕೊಂಡಿದೆ.  ಆಧುನಿಕ ವಿಜ್ಞಾನ ಯುಗವನ್ನು ಭಾರತದಲ್ಲಿ ಆರಂಭಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಒಳ್ಳೆಯ ಸಂಶೋಧಕನಲ್ಲಿರಬೇಕಾದ ಸಹನೆ ಹಾಗೂ ತೀಕ್ಷ್ಣ ಬುದ್ಧಿಗಳು ಅವರಲ್ಲಿದ್ದವು. ಅವರು ಪಾಠ ಮಾಡುವ ವಿಧಾನ ವಿದ್ಯಾರ್ಥಿಗಳಿಗೆ ಬಹಳ ಆಕರ್ಷಕವಾಗಿದ್ದಿತು. ಪರೀಕ್ಷೆಗೆ ಎಷ್ಟು ಬೇಕೋ ಅಷ್ಟು ಹೇಳಿಕೊಡುವುದು ಬೋಸರ ಗುರಿಯಾಗಿರಲಿಲ್ಲ. ಪಾಠವನ್ನು ಓದಬೇಕು, ಆದರೆ ಸ್ವತಂತ್ಯ್ರವಾಗಿ ವಿಚಾರ ಮಾಡುವ ಆಸೆ ಇರಬೇಕು. ಹೀಗೆ ಮಾಡಿ ಹೊಸ ಶೋಧನೆ, ಹೊಸ ವಿಚಾರಗಳನ್ನು ಕಾಣಬೇಕು ಎಂದು ಅವರು ವಿದ್ಯಾರ್ಥಿಗಳನ್ನು  ಕಾಣಬೇಕು ಎಂದು ಅವರು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಿದ್ದರು. ಇದಕ್ಕಾಗಿ ಸಂಶೋಧನೆಗೆ ತಕ್ಕ ವಾತಾವರಣವನ್ನು ಅವರಿಗೆ ಒದಗಿಸುವುದಕ್ಕೆ ಅವರು ಪ್ರಯತ್ನಿಸಿದರು.

ಸಂಪತ್ತು, ಅಧಿಕಾರ ಮುಂತಾದ ಯಾವುದೇ ಇಂತಹ ಆಡಂಬರಗಳಿಗೆ ಸ್ವಲ್ಪವಾದರೂ ಗಮನ ಕೊಡದೇ ಯೋಗಿಯಂತೆ ವಿಜ್ಞಾನ ಕ್ಷೇತ್ರದಲ್ಲಿ ಶ್ರಮಿಸಿದ ಜಗದೀಶ ಚಂದ್ರ ಬೋಸರು ನಮಗೊಂದು ಮೇಲ್ಪಂಕ್ತಿ.