ಪಲ್ಲವಿ : ಜಗನ್ನಾಥ ಜಗದೀಶ ಜಯ ಜಯ ಗೋವಿಂದ

ಚರಣ :  ಗಜರಕ್ಷ ಜಗಪಾಲ ಜಯ ಜನ ಚಿತ್ತ
ನಾಥ ! ನನ್ನಯ ದಾತ ಮಾತಾ ಪಿತನು ನೀ

ಥಂ-ದಂ-ನಂ-ಕ್ಲಿಂ ಮಂತ್ರಮಯ ಪ್ರಾಣ ಉಪಾಯ ನನ್ನ
ಜನ್ಮ ಜನ್ಮದ ಸ್ವಾಮಿ ನಿನ್ನಯ ನಾಮ ಬಲುರುಚಿ

ಗಂಭೀರ ನಂದ ಚಿತ್ತ ಚೋರ ಭಕ್ತಜನ ಚಿತ್ತ
ದೀನ ನಾಥ ಸಾಮಪ್ರಿಯ ಕರುಣಾ ಮಯ

ಶಂಖ ಪ್ರಿಯ ಕಿಂಕಿಣಿಧರ ಯಾರಿಗೂ ಸಮವಲ್ಲ
ಜಯವಾಗಲಿ ಜಯವಿರಲಿ ಜಯ ಜಯ ಗೋವಿಂದ