ಪಲ್ಲವಿ : ಜಗಮೋಹನ ಜಗದೀಶನ ನಿನ್ನ ಚರಣಕೆ ಜಯ ಜಯ

ಚರಣ :  ಗಂಧಲೇಪನ ಮಾಡುವೆನು ಶ್ಯಾಮಾಂಗನೆ ನೋಡೆನ್ನ
ಮೋಹನಾಂಗ ಶ್ರೀಹರಿಯೇ ಶೃಂಗಾರದ ವಿಕಚ       

ಹಂಸಕಪಾದ ಗೋವಿಂದ ದಯತೋರೋ ಕರುಣಾಕರ
ನಂದನಂದನ ಗೋಪಾಲ ಶ್ರೀಹರಿ ಮುಕುಂದ ನಾರಾಯಣ

ಜಗನ್ನಾಥ ಹರೇ ಕೃಷ್ಣ ಎರಗುವೆ ನಾ ನಿನ್ನ ಪಾದಕ್ಕೆ
ಗಂಡಭೇರುಂಡ ವಾಹನ ಅಂಡ ಪಿಂಡ ಬ್ರಹ್ಮಾಂಡಜ

ದೀನದಯಾಳೋ ರಕ್ಷಿಸು ಹರೇಕೃಣ ದೇವಕಿತನಯ
ಶಂಖಪಾಣಿಯೇ ಮಾಧವ ಶರಣುಬಂದನು ಶರೀರಜ

ನೇಮದಿ ನಿನ್ನದಿ ಭಜಿಪೆನು ಸಚ್ಚಿದಾನಂದ ದಯತೋರಯ