ಪರಮ ಮಂಗಳ ಜ್ಞಾನಾನಂದ ಗುರುವೇ ಗುರುವೇ
ಸರ್ವವಿನುತೆ ಶಾಂತಿ ಮೂರ್ತಿಗುರುವೇ || ಪ ||
ಪಾರಮಾರ್ಥ ಇಷ್ಟಾರ್ಥ ಕೊಡುವ ಗುರುವೇ
ಸಂಕಟಪಡುವ ಎನ್ನಭವವ ತಂದೆ
ಗುರುವೇ ಗುರುವೇ ಅಂದಕಾರದೂರನೆ ನಿಗಮಸಾರನೆ
ಗುರುವೆ ಗುರುವೇ ಅಂತರಂಗದೊಳು ಇರುವ ಆನಂದವ ತೋರಿದೆ
ಗುರುವೇ ಗುರುವೇ ಜನನ ಮರಣ ದುಃಖವ ಹರಿಸಿದೆ
ಶಂಭುಲಿಂಗನೊಳು ಬೆರೆಯುವಂತೆ ನಿಸನಿದೆನುಗುರುವೆ || ಪ ||
ಪರಮ ಮಂಗಳ ಜ್ಞಾನಾನಂದ ಗುರುವೇ ಗುರುವೇ ಸರ್ವವಿನುತೆ
ಶಾಂತಿಮೂರ್ತಿ ಗುರುವೇ ಗುರುವೇ || ಪರಮ ||