ಅಳಬ್ಯಾಡೋ ನನ ಕಂದ ನಾ ಹಾಲ ಮಾರಿ ಬರತೀನಿ
ಹಾಲ ಮಾರಿ ಬರತೀನಿ ನಿನಗ ಹವಳದ ಅಂಗಿ ತರತೀನಿ
ಅಳಬ್ಯಾಡೋ ನನ ಕಂದ ನಾ ಮಸರ ಮಾರಿ ಬರತೀನಿ
ಮಸರ ಮಾರಿ ಬರತೀನಿ ನಿನಗ ಕುಸಲದ ಗೆಜ್ಜಿ ತರತೀನಿ
(ಬೀದಿ ಬಯಲಾಟಗಳು, ಪು.)

ಅಂತ್ಯಪ್ರಾಸದಂತೆ ಆದಿಪ್ರಾಸದ ಬಗ್ಗೆಯೂ ಶಿಷ್ಟರಲ್ಲಿ ಮತ್ತು ಜನಪದರಲ್ಲಿ ಭಿನ್ನ ಬಗೆಯ ತಿಳುವಳಿಕೆಗಳಿವೆ. ಶಿಷ್ಟರ ಪ್ರಕಾರ ಸಾಲಿನ ಎರಡನೇ ಅಕ್ಷರವನ್ನು ಆದಿಪ್ರಾಸವೆಂದು ಗಣಿಸಲಾಗುತ್ತದೆ. ಆದರೆ ಜನಪದರಲ್ಲಿ ತೀರ ಮೊದಲನೇ ಅಕ್ಷರವನ್ನು ಅಥವಾ ಎರಡನೇ ಅಕ್ಷರನ್ನು ಆದಿಪ್ರಾಸವೆಂದು ಗಣಿಸಲಾಗುತ್ತದೆ. ಈ ಪ್ರಾಸವು ಇಡೀ ಹಾಡಿಗೆ ಅಥವಾ ಕನಿಷ್ಟ ಒಂದು ನುಡಿಗಾದರೂ ಸಮಾನವಾಗಿರಬೇಕು.

ಕೃಷ್ಣ : ಹಾಲ ಮಾರುತ ಹೊಂಟಾಳಿವಳು ಹವಳದ ನಾಮದ ಗೊಲ್ಲರ ಹುಡುಗಿ
ಹಾಲಿನ ಸುಂಕ ಕೊಟ್ಹೋಗಂದರ ಬಾಲ ಸತ್ತಂಗಳುಹುವಳಿವಳು

ಗೊಲ್ಲತಿ: ಹಾಲ ಮಾರುತ ನಾ ಹೋದೇನ ಹಾರರಗೇರ್ಯಾಗ ಇವನೇ ಬಂದ
ಹಾಲಿನ ಸುಂಕ ಕೊಟ್ಹೋಗಂತ ಇಪರೀತ ಕಾಡುವನಮಮ
(ಬೀದಿ ಬಯಲಾಟಗಳು, ಪು.)

ಆದಿಪ್ರಾಸವೆಂದು ಗಣಿಸುವ ಮೊದಲೆರಡು ಅಕ್ಷರಗಳ ನಂತರ ಅಂತ್ಯಪ್ರಾಸದವರೆಗೆ, ಸಾಲುಗಳ ರಚನೆಯಲ್ಲಿ ನಿಯಮಿತವಾದ ಲಯಗಳಲ್ಲಿ ಬರುವ ಪ್ರಾಸಗಳು ಒಳಪ್ರಾಸ ಎನಿಸುತ್ತವೆ. ಇವು ಕೇವಲ ಒಂದು ಸಾಲಿಗೆ ಸಂಬಂಧಪಟ್ಟಿದ್ದು, ಮೊದಲರ್ಧ ಮತ್ತು ಕೊನೆಯರ್ಧ ಸಾಲಿನಲ್ಲಿ ಸಮಾನವಾಗಿ, ಸಮಾನ ಸ್ಥಾನಗಳಲ್ಲಿ ಬಳಕೆಯಾಗುತ್ತವೆ.

ಎಲೆ ನಾರಿ ಸುಂದರಿ
ಎಲೆ ನಾರಿ ಸುಂದರಿ
ಎನ್ನ ಗೋಕುಲ ನಗರಕ ಬಂದವರ್ಯಾರೆ
ಹಾಲ ಮಾರೆ ನೀ ಕೈಯ ತೋರೆ
ಹಾಲ ಮಾರೆ ನೀ ಕೈಯ ತೋರೆ
ಮಾಸಿಲ ಕೊಟ್ಟು ಮನಿಗ ಹೋಗೆಲೆ ಚದುರೆ (ಬೀದಿಬಯಲಾಟಗಳು, ಪು.)

ಈ ಉದಾಹರಣೆಯಲ್ಲಿ ಆದಿಪ್ರಾಸದಲ್ಲಿ ಮೊದಲಕ್ಷರ ಮತ್ತು ದ್ವಿತೀಯಾಕ್ಷರ ಎರಡನ್ನೂ ಆದಿಪ್ರಾಸವಾಗಿ ಬಳಸಿದ್ದನ್ನು ಕಾಣುತ್ತೇವೆ. ಅಂತ್ಯಪ್ರಾಸವಾಗಿ ‘ರ’ ಕಾರ ಬಂದಿದೆ. ಮತ್ತೆ ‘ರ’ ಕಾರವನ್ನು ಒಳಪ್ರಾಸವಾಗಿ ಬಳಸಿರುವುದನ್ನೂ ಕಾಣಬಹುದಾಗಿದೆ.

ಇದು ಜನಪದ ಕವಿಗಳಲ್ಲಿ ಪ್ರಾಸಿನ ಬಗ್ಗೆ ಇರುವ ಸಾಮಾನ್ಯ ಕಲ್ಪನೆ. ಇಲ್ಲಿ ಕೊಡಬಹುದಾದ ಉದಾಹರಣೆಗಳು ಶಿಷ್ಟರ ಅನೇಕ ರೀತಿಯ ಇತರ ಪ್ರಾಸಗಳಿಗೆ ಉದಾಹರಣೆಗಳಾಗಬಹುದಾಗಿದೆ.

ಪ್ರಾಸವಿಲ್ಲದ ಹಾಡು ತಾಸು ಹಾಡಿದರೇನು
ಸಾಸುವೆ ಎಣ್ಣೆ ಹದ ಮಾಡಿ ಕಣ್ಣಿಗೆ
ಹೂಸಿಕೊಂಡಂತೆ ಸರ್ವಜ್ಞ

ಪ್ರಾಸಿಗೆ ಪ್ರಾಸ ಕೂಡಿಸಿ ಸರಸಾ
ಮಾಡುದಕ ಕಲತಿಲ್ಲೊ ಕವಿತಾನಾ (ಹೇ..೭೯)

ಕುಂತ ಸರ್ವಜನರ ವಿಚಾರ
ಮಾಡಲಿ ಪದದ ಪ್ರಾಸಗಳನ (ಗಂ..ಹಾ.೫೨)

ಇವು ಜನಪದರಲ್ಲಿರುವ ಪ್ರಾಸದ ಬಗೆಗಿನ ಕಲ್ಪನೆಯನ್ನು ಹೇಳಿಕೊಡುವ ಮಾತುಗ ಳಾಗಿವೆ. ಜನಪದರಲ್ಲಿ ಪ್ರಾಸಗಳಿಂದಲೇ ಕಾವ್ಯದ ಮೃದುತ್ವ ಮತ್ತು ಕಟುತ್ವ ಗುಣಗಳನ್ನು ನಿರ್ಧರಿಸಲಾಗುತ್ತದೆ. ಮೃದುತ್ವವೆಂದರೆ ಗುಣಗಳಿಂದ ಕೂಡಿದ, ಕಿವಿಗೆ ಕೇಳಲು ಇಂಪಾದ, ಉಚಿತ ಪ್ರಾಸಗಳುಳ್ಳ ನುಡಿ. ಕಟುತ್ವವು ದೋಷವೆಂದು ಪರಿಗಣಿಸಲಾಗುತ್ತದೆ. ಇವರಲ್ಲಿ ಶಿಷ್ಟರ ಶೃತಿಕಷ್ಟ ಹಾಗೂ ಶೃತಿದುಷ್ಟ ಎರಡೂ ಪ್ರಕಾರಗಳು ಸಮಾವೇಶವಾಗುತ್ತವೆ. ಕರ್ಕಶವ ನ್ನುಂಟು ಮಾಡುವ ಪ್ರಾಸವು ಕಿವಿಗೆ ಹಿತವೆನಿಸದೆ, ಶೃತಿಕಷ್ಟವೆನಿಸುತ್ತದೆ. ಕಟುತ್ವದಲ್ಲಿಯೇ ಅಶ್ಲೀಲದ ಪ್ರಶ್ನೆಯೂ ಬಂದು ಹೋಗುತ್ತದೆ. ಬಹುಶಃ ಇದು ಶೃತಿದುಷ್ಟದ ಲಕ್ಷಣವಾಗಿದೆ. ಈ ಪ್ರಶ್ನೆಯ ಬಗೆಗಂತೂ ಜನಪದ ಕವಿಗಳು ಬಹಳ ಎಚ್ಚರಿಕೆಯಿಂದ ವರ್ತಿಸುತ್ತಾರೆ. ಹೀಗಾಗಿ ಅಶ್ಲೀಲ ಕಾವ್ಯ ನಿರ್ಮಾಣ ಕ್ವಚಿತ್ತ್ತಾಗಿ, ಅದು ಕೆಟ್ಟ ಅಭಿರುಚಿಯ ನರಕವಿಗಳಿಂದ ಮಾತ್ರ ನಿರ್ಮಾಣವಾಗುತ್ತದೆ. ಕವಿಯ ದೋಷಗಳಲ್ಲಿ ಇದೂ ಒಂದು. ಅಶ್ಲೀಲ ಪ್ರವೃತ್ತಿಯ ಕವಿಯನ್ನು ಅಥವಾ ಕಾವ್ಯವನ್ನು ಬಹುಮಟ್ಟಿನ ಜನಪದರು ಆದರದಿಂದ ಸ್ವೀಕರಿಸಲಾರರು. ಒಳ್ಳೇ ಶೀಲವಂತ ವ್ಯಕ್ತಿತ್ವವು ಕವಿಯ ಪ್ರಭಾವವನ್ನು ಇನ್ನಷ್ಟು ಬೆಳಗಿಸಬಲ್ಲುದು. 

ಅನುಬಂಧ

ಸ್ವರಗತಿಗಳುಸೊಲ್ಲುಗಳು

ಶುಭಕಾರ್ಯದ ಹಾಡುಗಳ ಧಾಟಿಗಳಲ್ಲಿ ಬಳಕೆಯಾಗುವವು :

೧. ಸೋ

೨. ಸೋಬಾನವ

೩. ಸೋ ನಿಂಗವ್ವ

೪. ಸೋ ಎನ್ನಿ(ರೆ) ಸೋಬಾನವೆನ್ನಿ(ರೆ)

೫. ಸೋ ಎನ್ನಿರಿ ಜನರೆಲ್ಲ

೬. ಸುವಂದಾರ

೭. ಸುಯ್ಯ ಬೀಗತಿ ಸುಯ್ಯ

೮. ನಂದಿಮನಾರಿ ಸೋ

೯. ಸುವ್ವಿ

೧೦. ಸುವ್ವೆ

೧೧. ಸುಯಿ

೧೨. ಸುವಯ್ಯ

೧೩. ಸುವ್ವನಾರಿ

೧೪. ಸುವ್ವಿ(ವ್ವ) ಲಾಲೇ(ಲೋ)

೧೫. ಸುವ್ವಿ ಸುವ್ವಿ ಸುವ್ವಾಲೆ

೧೬. ಸುವ್ವಾ ಬಾ ಸುವ್ವಿ ಸುವ್ವಾ ಬಾ

೧೭. ಸುವ್ವಿ ಸುವಮ್ಮಲಾಲಿ ಸುವ್ವಲಾಲಿ ಜಾಣೆ ಜಾಗರದ್ಹೆಣ್ಣೆ ಸುವ್ವಲಾಲಿ

೧೮. ಶಿವ

೧೯. ಶಿವಶಿವ

೨೦. ಶಿವಲಾಲಿ

೨೧. ಶಿವಬನ್ನಿರೆ

೨೨. ಶಿವೋ

೨೩. ಶಂಭೋ ಶಂಕರನೆ

೨೪. ಶಂಭುವೇ ಶಂಭುಲಿಂಗವೇ

೨೫. ಶರಣ ಕುಸುಮನಾಥ

೨೬. ಕೋಲ

೨೭. ಕೋಲು ಕೋಲ

೨೮. ಕೋಲೆಣ್ಣ ಕೋಲ

೨೯. ಕೋಲೆಣ್ಣ ಕೋಲ್ ಕೋಲ

೩೦. ತಂಗಿ ಕೋಲೆಣ್ಣ ಕೋಲ

೩೧. ಕೋಲು ಕೋಲೆಣ್ಣ ಕೋಲ

೩೨. ಕೋಲ ಕೋಲೆ ಕೋಲೆನ್ನ ಕೋಲೆ

೩೩. ಕೋಲು ಮುತ್ತಿನ ಕೋಲ

೩೪. ಕೋಲು ಕೋಲ ಮುತ್ತಿನ ಕೋಲ

೩೫. ಕೋಲ ಮಲ್ಲಿಗಿ ಕೋಲ

೩೬. ಕೋಲು ಮಲ್ಲಿಗಿ ಕೋಲ ಕೋಲು ಸಂಪಿಗಿ ಕೋಲ

೩೭. ಕೋಲು ಕೋಲೆನ್ನಿರೆ ಹೂವಿನ ಕೋಲು ಕೋಲೆನ್ನಿರೆ

೩೮. ಕೋಲು ಕೋಲೆನ್ನಿರೆ ಹೂವಿನ ಕೋಲು ಮೇಲೆನ್ನಿರೆ

೩೯. ಕೋಲು ಕೋಲೆನ್ನ ಕೋಲೆ ಸುವ್ವನಾರಿ ಕಮಲೆ ಸುರಹೊನ್ನೆ ಕೋಲೆ

೪೦. ರನ್ನದ

೪೧. ರನ್ನದ ಕೋಲು ಕೋಲ

೪೨. ರನ್ನದ ಕೋಲೆಣ್ಣ ಕೋಲ

೪೩. ಕೋಲು ರನ್ನದ ಕೋಲ

೪೪. ರನ್ನದ ಕೋಲು ಕೋಲ ಏ ಹೂವಿನ ಕೋಲು ಕೋಲ

೪೫. ಹೂವಿನ

೪೬. ಮಲ್ಲಿಗಿ ನೆನಿ

೪೭. ಮಲ್ಲಿಗಿ ಗುಂಪ

೪೮. ಮಲ್ಲಿಗೆ ಸಣ್ಣ ಮಲ್ಲಿಗೆ

೪೯. ಮಲ್ಲಿಗೆ ದುಂಡು ಮಲ್ಲಿಗೆ

೫೦. ಕುಸುಮಾಲೆ

೫೧. ಏ (ಲೇ) ಗಿಣಿ ಏ(ಲೇ) ಗಿಣಿಯೇ

೫೨. ನಡದರ ಗಿಡ ಮರಿಯ

೫೩. ತೆಂಗಿನ ಬರುಡೆ

೫೪. ಕೇಳೇ (ಳೇ)

೫೫. ಕೇಳೋ(ಲೋ)

೫೬. ಕೇಳೆನ್ನ ನುಡಿಯ

೫೭. ಕಾನ್ ಕಾನ್ ಕನ್ನಡಿ

೫೮. ಚೆನ್ನಬಸವ ಬಂದಾನ ಬನ್ನಿರೆ

೫೯. ಚೆನ್ನಬಸವ ಬಂದಾನ ನೋಡೀರೆ

೬೦. ಬಾಗಿಲ ತೋಳ ಬಿಟ್ಟೇನ ಕಾಲ

೬೧. ನವಲೆ ದುಂಬಿ

೬೨. ನಮ ಜೀವ ಹೋದವ ಕೈಲಾಸಕ

೬೩. ಹೋಗುವರ ಗೊಡಿಯೇನ ಬುಕಿಟದ ಪುಡಿಯೇನ

೬೪. ಹಲ್ಕಿನ ಹಕ್ಕಿ ನಾರಿ ನಾರಾಯಣ

೬೫. ಗಳಲಂದಾವಲ್ಲೊ ಮುತ್ತಿನನಾಭರಣವು ಸುಳದಂಬಿನಿಲ್ಲ

೬೬. ಲಿಂಗವೆ

೬೭. ಗುರುವಿಗೆ ನೆನಿಯಮ್ಮ

೬೮. ಮಾಲತಿ ಮಧುಮಾಲತಿ

ತೊಟ್ಟಿಲಲ್ಲಿ ಹಾಕುವಾಗ :

೬೯. ಜೋ

೭೦. ಜೋ ಜೋ

೭೧. ಜೋ ಜೋ ಜೋ ಜೋ

೭೨. ಜೋ ಜೋ ಎಂದು ಜೋಗುಳ ಪಾಡಿ

೭೩. ಜೋ ಜೋ ಎನ್ನ ಗೋಪಿಯ ಕಂದ ಜೋಜೋ

೭೪. ತೊಟ್ಟಿಲ ತೂಗನು ಬನ್ನಿರೆ

೭೫. ತೂಗಿರೆ ನೀವು ತೂಗಿರೆ

೭೬. ಜೋಗುಳ ಹಾಡಲೇನ ಬಾಲ ನಿನ ಮ್ಯಾಲ

೭೭. ತೂಗ ತೂಗೆನ್ನಿರೆ ತೂಗಿರಿ ಮನವೈಚಾರದಲೆ

ಎಣ್ಣೆ ಹಚ್ಚುವಾಗ:

೭೮. ಎಣ್ಣೆ ಹಚ್ಚನು ಬನ್ನಿರೆ

೭೯. ಹಚ್ಚೀರೆ ನಯ್ಯಣ್ಣೆ

೮೦. ಹರ ಹರ ನಮ ಶಿವಗ ನಯ್ಯಣ್ಣೆ

೮೧. ಹರಹರ ಶಿವಗ ಸುರಗನ್ನೆ

ಕುಬ್ಬಸ ಮಾಡುವಾಗ:

೮೨. ಬಂಕಿ ಕಾಡತಾವ

೮೩. ಎದ್ದಾವೇಳವ್ವಾ ಬ್ಯಾನಿ ತಾಳಲಾರೇನ ಬ್ಯಾನಿ

ಬೀಸುವಾಗ :

೮೪. ಕಲ್ಲ ಜಾಡಿಸಬ್ಯಾಡ ಕಡಿನುಚ್ಚ ಉದರ್ಯಾವ ಮಲ್ಲೀಗಿ ತುರುಬ ಅದರ್ಯಾವ

೮೫. ಸಣ್ಣ ಕೋಗಿಲ ಸಮುದುರ ದಂಡಿಗಿ ಮೈ ಮುರಿದಾಡಿತ ಅದು ಬೆಳಗ ಮಾಡಿತ

೮೬. ಮಲ್ಲಯ್ಯ ನೆನಸಲೇನ ನಾ

೮೭. ಹೋಗತೀನ್ಹೋಗರೆವ್ವ

೮೮. ದೂರ ಸರೀರೆ ದಾರಿ ಬಿಡರೆ

೮೯. ದಣದು ಬಂದ ಮನಿಗೆ

ಕುಟ್ಟುವಾಗ:

೯೦. ಸುವ್ವ ಸುವ್ವ

೯೧. ಸುವ್ವಕ್ಕ ನಾರಿ

೯೨. ಸುವ್ವಕ್ಕ ಸುಗನಾರಿ ಹಾಕವ್ವ ಯಾರಿ

೯೩. ನಾರಿ ಹಾಕವ್ವ ಯಾರಿ

೯೪. ಕೋಗಿಲ ಕುಂಬಿ ಮ್ಯಾಲ ಕೂಗ

ಸಂಪ್ರದಾಯದ ಹಾಡುಗಳಿಗೆ:

೯೫. ರಾಮಾ ರಾಮಾ

೯೬. ತಂದಾನಾನಾ

೯೭. ತಂದಾನ ತಾನ

೯೮. ತಾನ ತಂದಾನ

೯೯. ಶಿವ ಎನ್ನ ಮಹಾದೇವ

೧೦೦. ಶಿವಶಿವ ಮಹಾದೇವ

೧೦೧. ಜೋಕುಮಾರ

ಸೀಗಿಗೌರಿ :

೧೦೨. ಹೋಗ ಹೋಗ ಬಿಸಲ ನೀ ಬಾರ ಬೆಳದಿಂಗಳ

೧೦೩. ಮುತ್ತಿನ ಕಂಟಿರಿ ಗೌರಮ್ಮಗ ಮುತ್ತಿನ ಕಂಟಿರಿ ಸೀಗೆಮ್ಮಗ

೧೦೪. ಹಸೂರ ತಾಬುತೆ ಈ ಮನಿ ದಸರಿಗೆ ಸೌಭಾಗ್ಯ

ಮಂಗಳಾರುತಿ :

೧೦೫. ಜಯ ಜಯ ಮಂಗಳ

೧೦೬. ಜಯ ಮಂಗಳಂ ನಿತ್ಯ ಶುಭ ಮಂಗಳಂ

೧೦೭. ಜಯ ಜಯ

೧೦೮. ಓಂ ನಮ ಶಿವ ಎನ್ನಿರೆ

೧೦೯. ಬೆಳಗೂವೆನಾರುತಿಯ

೧೧೦. ಜಯದೇವ ಜಯದೇವ

೧೧೧. ಮಂಗಳಾರುತಿ ತಂದು ಬೆಳಗಿರಿ

೧೧೨. ಶುಭಮಂಗಳ

೧೧೩. ಸ್ವಾಮಿಗಾರುತಿಯ ಬೆಳಗ್ಯಾರೆ ಸೋ

೧೧೪. ಮಂಗಳಂ

ಲಾವಣಿ, ಕಲ್ಗಿತುರಾ:

೧೧೫. ಜೀ (ಗೀ )

೧೧೬. ಗೀಗೀ ( ಜೀ ಜೀ)

೧೧೭. ಗೀಯ ಗೀಯಗ ಹಾಂ ಗೀಯಗ ಹಾಂ ಗೀ

ಮೋಹರಂ :

೧೧೮. ಹಾಂ ಹಾಂ

೧೧೯. ಸೈ

೧೨೦. ಚಲ್

೧೨೧. ಬೋಲ್

ಹೋಳಿ :

೧೨೨. ದಿಮ್‌ಸಾಲ್

೧೨೩. ದುಮ್ಮಸಾಲಿಗ್ಯೋ

೧೨೪. ದುಮ್ಮ ಸಾಲಿಗಿ ಲೌಡಿ ದುಮ್ಮ ಹೋ ಹೋ ಹೋ

೧೨೫. ದುಮ್‌ದುಮ್ಯೋ

೧೨೬. ದುಂದುವಿ

೧೨೭. ದುಂದುಮಿ ದುಂದುಮಿ

ದೋಣಿ ಹಾಡು :

೧೨೮. ಹೊಯ್‌ ಹೊಯ್ ರಾಮಾ ರಾಮಾ ಹೊಯ್‌

೧೨೯. ಜಯ ರಾಮನೋ ಜಯ ರಾಮಾನೋ

೧೩೦. ಹೂಂತತ್ತಯ್ಯ

—-
* ಈ ಸ್ವರಗತಿಗಳನ್ನು ಸಂಗ್ರಹಿಸುವಲ್ಲಿ ನೆರವಾದ ಶ್ರೀಮತಿ ಸುಮಿತ್ರಾದೇವಿ ಅಂಗಡಿ, ಶ್ರೀಮತಿ ರಂಗಮ್ಮ ರಾವೂರ ಎಂ.ಎ., ಶ್ರೀಮತಿ ಮಹಾನಂದಾ ಹಿರೇಮಠ ಎಂ.ಎ., ಶ್ರೀಮತಿ ಅಣ್ಣೆಮ್ಮ ಕುಂಬಾರ ಎಂ.ಎ. ಅವರಿಗೆಲ್ಲ ನಾನು ಕೃತಜ್ಞ.

* * *