೧೯೧೧ ಮುರುಗೋಡಿನಲ್ಲಿ ಬಾಳಪ್ಪ ಹುಕ್ಕೇರಿಯವರ ಜನನ ೨೧ ನೆಯ ಆಗಸ್ಟ್
೧೯೨೫-೨೮ ಮುರುಗೋಡಿನ ಶಿವಲಿಂಗಯ್ಯಸ್ವಾಮಿಯವರ ಹತ್ತಿರ ಸಂಗೀತ ಅಧ್ಯಯನ
೧೯೩೦ ಕಾಯ್ದೆ ಭಂಗ ಚಳುವಳಿಯಲ್ಲಿ ಭಾಗವಹಿಸಿದ ಪ್ರಯುಕ್ತ ಆರು ತಿಂಗಳ ಕಾಲ ಕಾರಾಗೃಹ ವಾಸ
೧೯೩೨-೪೦ ನಾಟಕ ಕ್ಷೇತ್ರದಲ್ಲಿ ಸಾಧನೆ
೧೯೪೨-೭೯ “ಹೆಚ್ಚು ಆಹಾರಧಾನ್ಯ ಬೆಳೆಯಿರಿ” ಎಂಬ ಆಂದೋಲನದಲ್ಲಿ ಕ್ಷೇತ್ರ ಪ್ರಚಾರ
೧೯೫೨ ಪುಣೆಯಲ್ಲಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಕನ್ನಡ, ಮರಾಠಿ ಮತ್ತು ಹಿಂದಿ ಭಾಷೆಗಳಲ್ಲಿ ಗಾಯನ
೧೯೫೪ ಹುಬ್ಬಳ್ಳಿಯಲ್ಲಿ ನಡೆದ ಒಕ್ಕಲುತನ ಪ್ರದರ್ಶನದಲ್ಲಿ “ಸಭಾ ಭೂಷಣ” ಬಿರುದು ಪ್ರಧಾನ
೧೯೫೫ ದೆಹಲಿಯಲ್ಲಿ ನೆಹರು ನಿವಾಸದಲ್ಲಿ ನೆಹರೂರೊಡನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು
೧೯೫೫ ದೆಹಲಿಯಲ್ಲಿ ನಡೆದ ಯುವ ಜನ ಮೇಳದಲ್ಲಿ ಭಾಗವಹಿಸಿದ್ದಾರೆ
೧೯೫೬-೫೯ ಭಾರತ ಯಾತ್ರೆ
೧೯೫೯ ಡಾ.ರಾಜೀಂದ್ರ ಪ್ರಸಾದರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ
೧೯೬೨ ಬಿಜಾಪುರದಲ್ಲಿ ನಡೆದ ಇಂದಿರಾ ಗಾಂಧಿಯವರ ತುಲಾಭಾರ ಕಾರ್ಯಕ್ರಮದಲ್ಲಿ ಗಾಯನ
೧೯೬೭ ದೆಹಲಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಗಾಯನ
೧೯೬೭ ದೆಹಲಿಯ ಅಪೆಕ್ಸ್ ಥೇಟರಿನಲ್ಲಿ ರಾಷ್ಟ್ರಪತಿ ಡಾ. ಝಕೀರ ಹುಸೇನರೊಂದಿಗೆ ಕಾರ್ಯಕ್ರಮ
೧೯೭೧ ಹೈದರಾಬಾದಿನ ಟಿ.ವಿ. ಸಂಸ್ಥೆಯಿಂದ ಬಾಳಪ್ಪನವರ ಹಾಡುಗಳ ಪ್ರಸಾರ
೧೯೭೫ ವಿಜಯನಗರ ಉತ್ಸವದಲ್ಲಿ ಭಾಗವಹಿಸಿದ್ದಾರೆ
೧೯೭೭ ದೆಹಲಿಯಲ್ಲಿ ನಡೆದ ಕನ್ನಡ ರಾಜ್ಯೋತ್ಸವದಲ್ಲಿ ಭಾಗವಹಿಸಿದ್ದಾರೆ
೧೯೭೮ ಗೋವಾ ಕನ್ನಡ ಸಂಘದಲ್ಲಿ ಬಾಳಪ್ಪನವರ ಭಾಷಣ ಕಾರ್ಯಕ್ರಮ
೧೯೭೯ ಹುಬ್ಬಳ್ಳಿಯಲ್ಲಿ ನಡೆದ ರೈತ ಸಮ್ಮೇಳನದಲ್ಲಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡೀಸ್ ಅವರಿಂದ ಅಭಿನಂದನೆ
೧೯೮೦ ರಾಮದುರ್ಗದ ಕಾಲೇಜಿನಲ್ಲಿ ಗದುಗಿನ ಜಗದ್ಗುರು ಶ್ರೀ ತೋಂಟದಾರ್ಯ ಮಹಾಸ್ವಾಮಿಗಳವರಿಂದ ಆಶೀರ್ವಾದ
೧೯೮೦ ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ಖ್ಯಾತ ಪತ್ರಕರ್ತ ಪಾಟೀಲ ಪುಟ್ಟಪ್ಪನವರಿಂದ ಅಭಿನಂದನೆ
೧೯೮೦ ರಾಷ್ಟ್ರಪ್ರಶಸ್ತಿ ಪ್ರಧಾನ
೧‘೯೮೧ ದೆಹಲಿಯ ರವೀಂದ್ರ ಕಲಾಕ್ಷೇತ್ರದಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷೆ ಶ್ರೀಮತಿ ಕಮಲಾದೇವಿ ಚಟ್ಟೋಪಾಧ್ಯಾಯ ಅವರಿಂದ ಬಾಳಪ್ಪನವರಿಗೆ ಪ್ರಶಸ್ತಿ ಪಧಾನ
೧೯೮೨ ಕೇರಳದ ತಿರುವಾಂಕೂರಿನ ದಕ್ಷಿಣ ಹಿಂದೂಸ್ತಾನದ ಸಾಂಸ್ಕೃತಿಕ ಸೊಸೈಟಿಯವರಿಂದ ೧೯೮೨ ರ ಪ್ರಶಸ್ತಿ ಪ್ರಧಾನ
೧೯೮೪ ಕನ್ನಡ ಜಾನಪದ ಅಕಾಡೆಮಿ ಸನ್ಮಾನ
೧೯೮೬ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
೧೯೯೦-೯೧ ೧೯೯೧ ನೇ ಸಾಲಿನ ಮಧ್ಯಪ್ರದೇಶ ಸರಕಾರದ “ತುಳಸೀ ಸಮ್ಮಾನ” ಪ್ರಶಸ್ತಿ