ಓರ್ವ ಹಿಂದೂಸ್ತಾನಿ ಗಾಯಕಿಯಾದ ನಾನು ನನ್ನ ಪಿ.ಎಚ್.ಡಿ ಅಧ್ಯಯನದ ಸಂದರ್ಭದಲ್ಲಿ ಜಾನಪದ ಸಂಗೀತವನ್ನು ಅಧ್ಯಯನ ಮಾಡುವ ಅವಕಾಶ ದೊರೆಯಿತು. ನಂತರವು ನಾನು ಈ ಅಧ್ಯಯನವನ್ನು ಮುಂದುವರೆಸಿದ್ದು ಈಗ ಬಾಳಪ್ಪ ಹುಕ್ಕೇರಿಯವರ ಜಾನಪದ ಸಂಗೀತದ ಬಗ್ಗೆ ಒಂದು ಪುಸ್ತಕವನ್ನು ಬರೆದಿದ್ದೇನೆ. ಅದನ್ನು ಸಹೃದಯ ಓದುಗರು ಓದುವರೆಂದು ಭಾವಿಸಿದ್ದೇನೆ.

ಈ ಪುಸ್ತಕ ಪ್ರಕಟಣೆಗೆ ವಿದ್ವಾಂಸರು ಹಾಗೂ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎ. ಮರಿಗೆಪ್ಪ ಅವರ ಪ್ರೋತ್ಸಾಹ ದೊರೆತಿದ್ದು ನಾನು ಅವರಿಗೆ ಋಣಿ. ಪ್ರಸಾರಾಂಗದ ನಿರ್ದೇಶಕರಾದ ಡಾ. ಎ. ಮೋಹನ ಕುಂಟಾರ ಹಾಗೂ ಕರಡು ತಿದ್ದಿ ಸಹಕರಿಸಿದ ಡಾ. ಎಸ್. ಮೋಹನ್ ಅವರಿಗೆ ಧನ್ಯವಾದಗಳು.

ಡಾ. ನಂದಾ ಎಂ. ಪಾಟೀಲ
ಪ್ರಾಧ್ಯಾಪಕರು