ಅ. ಜಿಲ್ಲೆಯ ಪ್ರಶಸ್ತಿ ಪಡೆದ ಕಲಾವಿದರು

೧. ನಿಂಗಪ್ಪ ಶಿವಪ್ಪ ಖೈರಾಟಿ (ಕಲೆ : ಲಾವಣಿ ಹಾಗೂ ಗೀಗೀ ಪದಗಳು)

ಶ್ರೀಯುತರು ೧೯೧೨ ರಲ್ಲಿ ಜನಿಸಿದರು. ತಂದೆ ಶಿವಪ್ಪ, ತಾಯಿ ನೀಲವ್ವ, ದಲಿತ ವರ್ಗಕ್ಕೆ ಸೇರಿದ ಕ್ಷೌರಿಕ ಮತದವರು. ಇವರ ಮನೆತನ ಹರದೇಶಿ ನಾಗೇಶಿಗಳಿಗೆ ಪ್ರಸಿದ್ಧಿ ಪಡೆದವು. ಇಂಥ ಪ್ರಖ್ಯಾತ ಜಿಲ್ಲೆಯ ಈ ಕಲಾವಿದರು ಅನುಭಾವದ ಮೇಲೆ ಹಾಡನ್ನು ಕಟ್ಟುವಂಥ ಪ್ರತಿಭೆ ಉಳ್ಳವರು. ಲಾವಣಿ ಹಾಗೂ ಗೀಗೀ ಪದಗಳನ್ನು ಹಾಡುವುದು ಅಷ್ಟೇ ಅಲ್ಲದೇ ದೊಡ್ಡಾಟ ಸಣ್ಣಾಟಗಳಲ್ಲೂ ಅನುಭವ ಪಡೆದವರು.

ಮನೆತನದ ಹಿರಿಯರಿಂದ ಲಾವಣಿ ಕಲಿತವರು. ಸಿಂದಗಿ ತಾಲೂಕಿನ ಕೊರಳ್ಳಿ ಗ್ರಾಮದಿಂದ ಮೌಲಾಸಾ ಅವರಿಂದ ಲಾವಣಿಗಳು, ಬೆಳಗಾಂವ ಜಿಲ್ಲೆಯ ಹುಲಕುಂದ ಗ್ರಾಮದ ಭೀಮಕವಿ ಅವರಿಂದ ಗೀಗೀ ಪದ ಹೀಗೆ ಅನೇಕರಿಂದ ಅನೇಕ ಪದಗಳನ್ನು ಕಲಿತರು. ಇಷ್ಟಲ್ಲದೆ ಸುಮಾರು ೬೦ ವರ್ಷಗಳಿಂದ ವಿವಿಧ ಕಲಾರಂಗಗಳಲ್ಲಿಯೂ ಸೇವೆಯನ್ನು ಸಲ್ಲಿಸಿದ್ದಾರೆ.

ಕರ್ನಾಟಕ ರಾಜ್ಯದ ಎಲ್ಲ ಭಾಗಗಳಲ್ಲಿ ಆಂಧ್ರಪ್ರದೇಶದ ಕನ್ನಡ ಭಾಗಗಳಲ್ಲಿ ಮಹಾರಾಷ್ಟ್ರದ ಕನ್ನಡ ಪ್ರದೇಶಗಳಲ್ಲಿ, ದೂರದರ್ಶನ, ಆಕಾಶವಾಣಿಗಳಲ್ಲಿ, ಪ್ರದರ್ಶನ ನೀಡಿದ್ದಾರೆ. ಸಭೆ ಸಮಾರಂಭಗಳಲ್ಲಿ ಭಾಗವಹಿಸಿದ್ದಾರೆ. ಪ್ರಶಸ್ತಿ ಪತ್ರಗಳ ಸುರಿ ಮಳೆಯನ್ನೇ ಸಂಪಾದಿಸಿದ ಪ್ರತಿಭಾವಂತರು.

ಇವರ ಈ ಅಮೋಘವಾದ ಕಲೆಯನ್ನು ಗುರುತಿಸಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯು ೧೯೯೦ ರಲ್ಲಿ ಪ್ರಶಸ್ತಿಯನ್ನಿತ್ತು ಗೌರವಿಸಿದೆ. ಇದು ಕೇವಲ ವ್ಯಕ್ತಿಯ ಗೌರವವಲ್ಲ. ಉತ್ತರ ಕರ್ನಾಟಕದ ಕಲೆಗಳಿಗೆ ಕಲಾಕಾರರಿಗೆ ಸಂದ ಗೌರವ ಎಂದು ಹೆಮ್ಮೆ ಪಡುವಂಥದು.

೨. ಮಾದಣ್ಣ ‘ಒಲೆಕಾರ’ (ಕಲೆ : ಲಾವಣಿ)

ಶ್ರೀಯುತರು ೧೯೦೭ ರಲ್ಲಿ ನಿಂಗಪ್ಪ ಸತ್ಯವ್ವ ಎಂಬ ದಂಪತಿಗಳಲ್ಲಿ ಹಲಸಂಗಿಯಲ್ಲಿ ಜನ್ಮ ತಾಳಿದರು. ಮನೆತನದ ವೃತ್ತಿ ‘ಒಲೆಗಾರಿಕೆ’. ಹಿಂದುಳಿದ ತಳವಾರ ಜನಾಂಗಕ್ಕೆ ಸೇರಿದವರು. ಬಾಲ್ಯದಿಂದಲೇ ಹಾಡಿನ ಅಭಿರುಚಿ ಅದು ತನ್ನಿಂದ ತಾನೇ ಬೆಳೆಯತೊಡಗಿತು. ೭ನೇ ಇಯತ್ತೆವರೆಗೆ ಶಿಕ್ಷಣ ಪಡೆದವರು.

ಲಾವಣಿ ಕವಿ ಎಂದು ಹೆಸರಾದ ಶ್ರೀ ಪಿ. ಧೂಲಾ ಸಾಹೇಬರ ಮನೆಯಲ್ಲಿಯೇ ಹೆಚ್ಚಾಗಿ ಇರುತ್ತಿದ್ದುದರಿಂದ ಅಲ್ಲಿಯೇ ಶ್ರೀ ಮಧುರಚೆನ್ನರ ಪರಿಚಯವಾಯಿತು. ಮುಂದೆ ಜೀವನದುದ್ದಕ್ಕೂ ಅವರ ಒಡನಾಡಿ ಆಗಿ ಇರುವ ಸೌಭಾಗ್ಯ ಇವರ ಪಾಲಿನದಾಯಿತು. ಹಲಸಂಗಿ ಗೆಳೆಯರ ಗುಂಪಿನಲ್ಲಿದ್ದು ಅವರ ಸಾಹಿತ್ಯ ಸೇವೆಗೆ ಹಾಗೂ ಜಾನಪದ ಸಂಗ್ರಹ ಕಾರ್ಯಕ್ಕೆ ನೆರವಾಗುವ ಮೂಲಕ ತಾವು ಬೆಳೆದರು ಹಾಗೂ ಕೇಳಿಕೆಯಲ್ಲಿದ್ದ ಲಾವಣಿಗಳನ್ನು ಜನಪದ ಗೀತೆಗಳನ್ನು ಹಾಡುವ ಹುಚ್ಚನ್ನು ಬೆಳೆಸಿಕೊಂಡರು. ನಾಡಹಬ್ಬ, ಬಸವ ಜಯಂತಿ, ಗಾಂದೀ ಜಯಂತಿ, ಗಣೇಶೋತ್ಸವ ಮೊದಲಾದ ಸಂದರ್ಭಗಳಲ್ಲಿ ಸ್ವಗ್ರಾಮದಲ್ಲಾಗಲಿ, ಪರ ಊರಿನಲ್ಲಾಗಲಿ ಕರೆ ಬಂದರೆ ಹೋಗಿ ಹಾಡಿ ಕಾರ್ಯಕ್ರಮ ಯಶಸ್ವಿಗೊಳಿಸಿ ಬರುತ್ತಿದ್ದರು. ಡಾ. ಶಿವರಾಮ ಕಾರಂತರ ಆಮಂತ್ರಣ ಮೇರೆಗೆ ಪುತ್ತೂರಿನಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಭಾಗವಹಿಸಿ ಲಾವಣಿ ಹಾಡಿದರು. ಈ ಸಮಾರಂಭಕ್ಕೆ ಉಪಸ್ಥಿತರಿದ್ದ ನಾ. ಕಸ್ತೂರಿ ಅವರಿಂದ “ಉತ್ತರ ಕರ್ನಾಟಕ ಕೋಗಿಲೆ” ಎಂದು ಕರೆಸಿಕೊಂಡು ಬಂದರು. ಶ್ರೀ ಮಧುರಚೆನ್ನರೇ ಹೇಳುವಂತೆ “ಮಧುರ ಸಾಧನೆಯಲ್ಲಿ ಮಾದಣ್ಣನನ್ನೇ ಬಳಸಿಕೊಂಡು ಮಧುರಚೆನ್ನನಾದೆ” ‘ನನ್ನ ನಲ್ಲ’ ಎಂಬ ಕವನ ಸಂಕಲನದಲ್ಲಿಯ ಗೀತೆಯನ್ನು ನೋಡಿದರೆ ಮಾದಣ್ಣನ ಒಳಧ್ವನಿ ಅರ್ಥವಾಗುವುದು.

ಕರ್ನಾಟಕ ಅನೇಕ ಭಾಗಗಳಾದ ಪುತ್ತೂರು, ಧಾರವಾಡ, ಬೆಳಗಾಂ, ಗುಲ್ಬರ್ಗಾ, ವಿಜಾಪುರ ಹಾಗೂ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಮಾದಣ್ಣ ‘ಒಲೇಕಾರ ಅವರ ಸೇವೆಯನ್ನು ಗುರುತಿಸಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯು ೧೯೮೨ರ ಪ್ರಶಸ್ತಿಯನ್ನಿತ್ತು ಗೌರವಿಸಿದೆ.

೩. ಬಸಯ್ಯ ಪರ್ವತಯ್ಯ ಮಠಪತಿ (ಕಲೆ : ಗೀಗೀ ಹಾಡುಗಾರಿಕೆ)

ಇವರ ತಂದೆ ಪರ್ವತಯ್ಯ ತಾಯಿ ಗುರುಲಿಂಗಮ್ಮ ಊರು ಸಾಲೋಟಗಿ. ಮನೆತನದ ಬಡತನ ಪರಿಸ್ಥಿತಿಯಿಂದಾಗಿ ಇವರ ಪ್ರಾಥಮಿಕ ೭ನೇ ಇಯತ್ತೆವರೆಗೆ ಮಾತ್ರ ಓದಿದರು. ಪರಂಪರಾನುಗತವಾಗಿ ಬಂದ ಭಜನೆ ಹಾಗೂ ಜಾನಪದ ಹಾಡುಗಳನ್ನು ಹಾಡುವುದೆಂದರೆ ಬಲು ಪ್ರೀತಿ. ಭಜನೆ ಮತ್ತು ದೊಡ್ಡಾಟಗಳನ್ನು ಮಾಡಿದರು, ಹಾಡಿದರು. ನಾಟಕಗಳಲ್ಲಿ ಸ್ತ್ರೀ ಪಾತ್ರ ಹಾಗೂ ಪುರುಷ ಪಾತ್ರ ಮಾಡಿ ಜನಾನುರಾಗಕ್ಕೆ ಪಾತ್ರರಾದರು. ಬರಬರುತ್ತ ಗೀಗೀ ಮೇಳ ಮಾಡಿಕೊಂಡು ಸುಮಧುರವಾಗಿ ಹಾಡುತ್ತ ಕೀರ್ತಿ ಗಳಿಸಿದರು. ಸುಮಾರು ೭೫ ಜನ ಶಿಷ್ಯರಿಗೆ ಲಾವಣಿ ಜಾನಪದ ಹಾಡುಗಳನ್ನು ಕಲಿಸಿದ್ದಾರೆ.

ಇಂಥ ಹಿರಿಯ ಕಲಾವಿದರಿಗೆ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯು ೧೯೮೪ ರಲ್ಲಿ ರಾಜ್ಯ ಪ್ರಶಸ್ತಿಯನ್ನಿತ್ತು ಗೌರವಿಸಿದೆ.

೪. ಈರವ್ವ ಹುಚ್ಚವ್ವ ಮಾದರ (ಕಲೆ : ಪಾರಿಜಾತ)

ಇವರು ವಿಜಾಪುರ ಜಿಲ್ಲೆಯ ಸಾರವಾಡ ಗ್ರಾಮದವರು. ಪಾರಿಜಾತ ಕಲಾವಿದೆ. ಬದುಕಿನಲ್ಲಿ ನಂಜುಂಡು ನಗೆ ಚೆಲ್ಲಿದವರು. ಬಾಲ್ಯದಲ್ಲಿಯೇ ತನ್ನ ತಾಯಿ ದೇವದಾಸಿ ಹುಚ್ಚವ್ವಳನ್ನು ಕಳೆದುಕೊಂಡು ಅನ್ಯರ ಆಶ್ರಯದಲ್ಲಿ ಬೆಳೆದ ಇವರು ವಯಸ್ಸಿಗೆ ಬಂದಾಗ ದೇವದಾಸಿ ಪಟ್ಟವನ್ನು ತಿರಸ್ಕರಿಸಿ ಪಾರಿಜಾತ ಕಲೆಯನ್ನು ತನ್ನ ಸರ್ವಸ್ವವಾಗಿಸಿಕೊಂಡವರು. ದೇವಣಾಚಾರಿ ಕಾಖಂಡಕಿ ಅವರಲ್ಲಿ ಪಾರಿಜಾತ ಕಲೆಯ ಅಭ್ಯಾಸ ಮಾಡಿರುವ ಇವರು ರುಕ್ಮೀಣಿ ನಾರದ ಮೊದಲಾದ ಪಾತ್ರಗಳನ್ನು ನಿರ್ವಹಿಸುವಲ್ಲಿ ಎತ್ತಿದ ಕೈ. ಮೂವತ್ತು ವರ್ಷಗಳಿಂದ ಕಲಾಸೇವೆ ಮಾಡಿರುವ ಇವರು ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಮೇಳಗಳಲ್ಲಿ ಭಾಗವಹಿಸಿ ಹೆಸರು ಗಳಿಸಿದ್ದಾರೆ. ಇವರನ್ನು ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯು ೧೯೯೪ ರಲ್ಲಿ ಪ್ರಶಸ್ತಿ ನೀಡಿ ಗೌರವಿಸಿದೆ.

ಆ. ಜಿಲ್ಲೆಯ ಜಾನಪದ ಕಲಾ ತಂಡಗಳು

೧. ಸಂಬಾಳವಾದ್ಯ ಮೇಳಗಳು

೧. ವಿಠೋಬಾ ರಾಮಚಂದ್ರ ಹೂಗಾರ (ಸಾವಳಸಂಗ ಇಂಡಿ ತಾಲೂಕ)

೨. ಲಕ್ಷ್ಮಣ ನಾಗೇನವರ (ಬರಡೋಲ ಇಂಡಿ ತಾಲೂಕ)

೨. ಡೊಳ್ಳಿನ ಕುಣಿತ ಹಾಗೂ ಪದಗಳು

          ೧. ತುಕಾರಾಮ ಯಲ್ಲಪ್ಪ ಲಂಗೋಟೆ (ಬಿಜ್ಜರಗಿ ವಿಜಾಪುರ ತಾಲೂಕ)

೩. ಚೌಡಕಿ ಪದಗಳ ಮೇಳಗಳು

          ೧. ಗೌರಮ್ಮ ಮಾದರ (ತಿಕೋಟಾ, ವಿಜಾಪುರ ತಾಲೂಕ)

೨. ಪುತಳವ್ವ ಯಲ್ಲಪ್ಪ ದೊಡಮನಿ (ಬಬಲೇಶ್ವರ ವಿಜಾಪುರ ತಾಲೂಕ)

೩. ರಾಮಣ್ಣ ಶಿ. ಪೂಜಾರಿ (ಗೋಠೆ ವಿಜಾಪುರ ತಾಲೂಕ)

೪. ಗೀಗೀ ಪದಗಳ ಮೇಳಗಳು

          ೧. ಬಸಯ್ಯ ಪರ್ವತಯ್ಯ ಪಠಪತಿ (ಸಾಲೋಟಗಿ ಇಂಡಿ ತಾಲೂಕ)

೨. ಪಿರಸಾ ಅಲ್ಲಿಸಾ ಮುಲ್ಲಾ (ಬೇಕಿಹಾಳ ಸಿಂದಗಿ ತಾಲೂಕ) (ಸ್ವತಃ ಹಾಡುಗಳ ರಚನಾಕಾರ)

೫. ಭಜನಾ ಮೇಳಗಳು

೧. ಸುಕದೇವ ಧರ್ಮಣ್ಣ ಹರಿಜನ (ಇಂಚಗೇರಿ ಇಂಡಿ ತಾಲೂಕ)

೨. ಶಾಂತಾಬಾಯಿ ಚೆನ್ನಯ ಮಂಗಳೂರು (ಸಾಲೋಟಗಿ ಇಂಡಿ ತಾಲೂಕ)

೩. ಸಿದ್ರಾಮ ಚಂದಪ್ಪಾ ಜಿಗಜೀವನಗಿ (ಅಥರ್ಗಾ ಇಂಡಿ ತಾಲೂಕ)

೬. ಹೆಜ್ಜೆ ಮೇಳ (ಕರಬಲ ಕುಣಿತ)

೧. ವಿಜಾಪುರ ತಾಲೂಕಿನ (ಕಣಬೂರ ಹಾಗೂ ಮುಚನಾಳ)

೨. ಸಿಂದಗಿ ತಾಲೂಕಿನ (ಆಲಮೇಲ)

೩. ಇಂಡಿ ತಾಲೂಕಿನ (ಸಾಲೋಟಗಿ, ಮೂರು ಮೇಳಗಳಿವೆ)

೭. ಕೀಲು ಕುದುರೆ ಕುಣಿತ ಮೇಳಗಳು

೧. ಪರಸಪ್ಪ ಮಾದರ (ಸಾರವಾಡ ವಿಜಾಪುರ ತಾಲೂಕ)

೨. ಮಹಾನಿಂಗಪ್ಪ ವಾಲಿ (ಸಾರವಾಡ)

೩. ಚನ್ನಪ್ಪ ಹನುಮಂತ ಎಂಟ್ಟೆತ್ತ (ಕುಂಬಾರಹಳ್ಳ ವಿಜಾಪುರ ತಾಲೂಕ)

೪. ಯಲ್ಲಪ್ಪ ಮಾಳಪ್ಪ ಪಕಾಲಿ (ಕುಂಬಾರಹಳ್ಳ ವಿಜಾಪುರ ತಾಲೂಕ)

೫. ಅಲ್ಲಾ ಉದ್ದೀನ ನದಾಫ (ಹಲಸಂಗಿ ಇಂಡಿ ತಾಲೂಕ)

೮. ಲಂಬಾಣಿ ನೃತ್ಯಗಳು

೧. ಹೇಮಾಬಾಯಿ ಹೇಮಲು ಚವ್ವಾಣ (ಸಾಲೋಟಗಿ ಫನಪ್ಪನ ತಾಂಡೆ ತಾ ಇಂಡಿ)

೨. ರುಕ್ಮೀಣಿಬಾಯಿ ಉಮೇಶ ನಾಯಕ (ಅಲ್ಲಾಪುರ ತಾಂಡೆ ತಾ ವಿಜಾಪುರ)

೩. ಘಮಣಾಬಾಯಿ ಖೀರು ಪವಾರ (ರಾಜನಾಳ ತಾಂಡೆ ಇಂಡಿ ತಾಲೂಕ)

೪. ರಮಕಾಬಾಯಿ ಚಾಪ್ಲು ನಾಯಕ (ರಾಜನಾಳ ತಾಂಡೆ ಇಂಡಿ ತಾಲೂಕ)

೫. ಧಾನಾಬಾಯಿ ಗುಂಡು ರಾಠೋಡ (ಸಾವಳಸಂಗ ತಾಂಡೆ ಇಂಡಿ ತಾಲೂಕ)

೬. ಚಾಂದುಬಾಯಿ ಧರಮಾ ರಾಠೋಡ (ಹಡಲಸಂಗ ಗಾಂಜಾಳ ತಾಂಡೆ ತಾ ಇಂಡಿ)

೯. ತೊಗಲು ಗೊಂಬೆಯಾಟ

೧. ಗಣಪತಿ ಕಟಬರ (ಶಿರಶ್ಯಾಡ ಇಂಡಿ ತಾಲೂಕ)

೨. ಗಡ್ಡೆಪ್ಪ ಶೆಟವಾಜಿ ಕಟಬರ (ಸಾಲೋಟಗಿ ಇಂಡಿ ತಾಲೂಕ)

೧೦. ಮುಂಬೈ ದೇಖ ಖೇಲ ಬಾಜಾ

          ೧. ಸೈಪನಸಾ ಬಡಿಗೇರ (ಅಗರಖೇಡ ಇಂಡಿ ತಾಲೂಕ)

೧೧. ಗೊಂದಲಿಗರ ಪದಗಳು

          ೧. ಜಗನ್ನಾಥ ಮಾರುತಿ ಕಾಳೆ (ವಿಜಾಪುರ)

೨. ಬಾವು ಮಾಣಿಕ ಭಿಸೆ (ಹಲಸಂಗಿ ಇಂಡಿ ತಾಲೂಕ)

೩. ಯಲ್ಲಪ್ಪ ಯಮನಪ್ಪ ಗುರುಡಕರ (ವಿಜಾಪುರ)

೪. ದೇವಜಿ ಶಿವರಾಂ ಭಿಸೆ (ವಿಜಾಪುರ)

೫. ಭೀಮಸಿ ಸೂರ್ಯವಂಶಿ (ಬಸವನ ಬಾಗೇವಾಡಿ)

೬. ಶಂಕರ ತುಕಾರಾಮ ಭಿಸೆ (ಇಂಗಳಗಿ ಇಂಡಿ ತಾಲೂಕ)

೭. ಇಂಡಿ, ತಾಂಬಾ ತಡವಲಗಾಗಳಲ್ಲಿ ಹಲವಾರು ಮೇಳಗಳಿವೆ.

೧೨. ಲಂಬಾಣಿ ಭಜನಾ ಮೇಳಗಳು

೧. ಗುಜ್ಜು ತುಳಜು ಪವಾರ (ರಾಜನಾಳ ತಾಂಡಾ ಇಂಡಿ ತಾಲೂಕ)

೨. ನಂದು ಲಾಲು ನಾಯಕ (ರಾಜನಾಳ ತಾಂಡಾ ಇಂಡಿ ತಾಲೂಕ)

೩. ಮುನಷಾ ನಂದು ರಾಠೋಡ (ಹಡಲಸಂಗ ತಾಂಡಾ ಇಂಡಿ ತಾಲೂಕ)

೪. ಪುನ್ನು ಲಾಲು ರಾಠೋಡ (ಬಸನಾಳ ತಾಂಡಾ ಇಂಡಿ ತಾಲೂಕ)

೫. ಮಾದು ರಾಠೋಡ (ಹಡಗಲಿ ತಾಂಡಾ ಸಿಂದಗಿ ತಾಲೂಕ)

೬. ಭೀಮು ಲಮಾಣಿ (ರಾಮತೀರ್ಥ ತಾಂಡಾ ಇಂಡಿ ತಾಲೂಕ)

೧೩. ಏಕತಾರಿ ಹಾಡುಗಳು

೧. ಹನುಮಂತ ಮಾದರ (ಝಳಕಿ ಇಂಡಿ ತಾಲೂಕ)

೨. ಗುರುಪಾದಯ್ಯ ಜಲಗಾಂವ (ಚಡಚಣ ಇಂಡಿ ತಾಲೂಕ)

೩. ಭೀಮರಾಯ ಇಂಗಳೆ (ಸಾಲೋಟಗಿ ಇಂಡಿ ತಾಲೂಕ)

೪. ಮಹಾದೇವ ಮಾದರ (ತಿಡಗುಂದಿ ವಿಜಾಪುರ ತಾಲೂಕ)

೫. ದುಂಡಪ್ಪ ಬೋರಗಿ (ಶಿವಣಗಿ ಸಿಂದಗಿ ತಾಲೂಕ)

೧೪. ಸುಂದರಿ ವಾದನ

          ೧. ಲಕ್ಕಪ್ಪ ನಾಗೇನವರ (ಬರಡೋಲ ಇಂಡಿ ತಾಲೂಕ)

೧೫. ಮೈಲಾರ ಲಿಂಗನ ಪದಗಳು

          ೧. ಭೀರಪ್ಪ ಹಂಜಗಿ (ಭೂಂಯ್ಯಾರ ಇಂಡಿ ತಾಲೂಕ)

೧೬. ಲಾವಣಿ ಹಾಡುವವರು

೧. ಶಿವಮ್ಮ ತಾಯಿ ಮರೆವ್ವ ಹೊಸಮನಿ (ನಿಂಬಾಳ ಇಂಡಿ ತಾಲೂಕ)

೨. ಭೀರಪ್ಪ ಸಿದ್ದಪ್ಪ ಹೆಗಡೆ (ಸಾತಪುರ ಬಸವನಬಾಗೇವಾಡಿ ತಾಲೂಕ)

೩. ಸೈಫನಸಾ ನಧಾಪ (ಸಾತಪುರ ಬಸವನಬಾಗೇವಾಡಿ ತಾಲೂಕ)

೪. ಕಲ್ಲಣ್ಣ ದೊಡ್ಡಪ್ಪ ಓಲೇಕಾರ (ಹಲಸಂಗಿ ಇಂಡಿ ತಾಲೂಕ)

೫. ಶಿವಪ್ಪ ಮರೆಪ್ಪ ಹೊಸಮನಿ (ನಿಂಬಾಳ ಇಂಡಿ ತಾಲೂಕ)

೬. ಲಾಲಾ ಸಾಹೇಬ ಇಂಗಳೇಶ್ವರ (ತಾ. ಬಸವನ ಬಾಗೇವಾಡಿ)

೭. ಶ್ರೀಮತಿ ನೀಲವ್ವ ಕರೆಪ್ಪ ಡಬ್ಬನದ (ಗೊಳಸಂಗಿ ತಾ. ಬಸವನ ಬಾಗೇವಾಡಿ)

೮. ಮದರಸಾಬ (ಗೊಳಸಂಗಿ ತಾ. ಬಸವನ ಬಾಗೇವಾಡಿ)

೯. ಲಕ್ಷ್ಮಣ ರಾಮಪ್ಪ ರಾಠೋಡ (ಮಸಿಬನಾಳ ತಾ. ಬಸವನ ಬಾಗೇವಾಡಿ)

೧೦. ಶಾಂತಾಬಾಯಿ ನಡುವಿನ ಮನಿ (ಬಬಲೇಶ್ವರ ತಾ. ಬಿಜಾಪುರ)

೧೭. ಕೀರ್ತನಕಾರರು

          ೧. ದಾನಪ್ಪ ಜತ್ತಿ (ತಿಕೋಟಾ ವಿಜಾಪುರ ತಾಲೂಕ)

೨. ಬಸವರಾಜ ಶಾಸ್ತ್ರೀ (ಹಂದಿಗನೂರ ಸಿಂದಗಿ ತಾಲೂಕ)

೧೮. ಬೈಲಾಟಗಳು

          ೧. ಈಶ್ವರಪ್ಪ ಹುಚ್ಚಪ್ಪ ಮಾದರ (ನಾರೂಡ ವಿಜಾಪುರ ತಾಲೂಕ)

೨.ಈರಪ್ಪ ಮಾದನಶೆಟ್ಟಿ (ಬಸವನ ಬಾಗೇವಾಡಿ)

೧೯. ಸಂಗ್ಯಾ ಬಾಳ್ಯಾ

          ೧. ಸಾವಳಸಂಗದಲ್ಲಿ ಒಂದು ತಂಡವಿದೆ.

೨. ಮನೋಹರ ಹುಚ್ಚಪ್ಪ ಕಾಳೆ (ನಿಂಬಾಳ) (ದೀಪಾವಳಿ)