ಅನುಬಂಧ ಭಾಗ2

ಅನುಬಂಧ ಕೋಷ್ಟಕ2.1 : ಅಕ್ಷರಸ್ಥರು ಮತ್ತು ಅನಕ್ಷರಸ್ಥರು : 2001

 (ಲಕ್ಷಗಳಲ್ಲಿ)

ವಿವರಗಳು ಗುಲಬರ್ಗಾ ವಿಭಾಗ ಕರ್ನಾಟಕ ರಾಜ್ಯ
ಒಟ್ಟು ಪುರುಷರು ಮಹಿಳೆಯರು ಒಟ್ಟು ಪುರುಷರು ಮಹಿಳೆಯರು
ಒಟ್ಟು ಜನಸಂಖ್ಯೆ 95.26 48.39 46.87 528.51 268.98 259.51
0 – 6
ವಯೋಮಾನದ
ಮಕ್ಕಳ ಸಂಖ್ಯೆ
15.88 8.16 7.72 71.82 36.90 34.91
[51.8]
[48.62] [51.37] [48.63].
+7
ವಯೋಮಾನದ ಜನಸಂಖ್ಯೆ
79.38 40.23 39.15 456.68 232.08 224.60
[50.68] [49.32] [50.81] [49.19]
ಅಕ್ಷರಸ್ಥರು (ಸಾಕ್ಷರತೆಯ ಪ್ರಮಾಣ) 42.58 26.50 16.08 304.34 176.61 127.73
 (53.64) [62.23] [27.77]  (66.64) [58.03] [41.97]
 (65.87)  (41.07)  (76.01)  (56.87)
ಅನಕ್ಷರಸ್ಥರು 36.80 13.73 23.07 152.34 55.47 96.87
 (46.36)  (34.13)  (58.93)  (33.36)  (23.99)  (43.13)

ಮೂಲ : ಸೆನ್ಸ್‌ಸ್ ಆಫ್ ಇಂಡಿಯಾ 2001. ಕರ್ನಾಟಕ. ಸಿರೀಸ್ 30. ಪ್ರೈಮರಿ ಸೆನ್ಸಸ್ ಅಬ್‌ಸ್ಟ್ರಾಕ್ಟ್. ಡೈರೆಕ್ಟರೇಟ್ ಆಫ್ ಸೆನ್ಸಸ್ ಆಫರೇಶನ್, ಕರ್ನಾಟಕ

ಟಿಪ್ಪಣಿ : ಗುಂಡಾಕಾರದ ಆವರಣದಲ್ಲಿರುವ ಅಂಕಿಗಳು ಸಾಕ್ಷರತೆಯ ಪ್ರಮಾಣವನ್ನು ಮತ್ತು ಅನಕ್ಷರಸ್ಥರ ಪ್ರಮಾಣವನ್ನು ತೋರಿಸುತ್ತದೆ. ಚೌಕಾಕಾರದ ಅಂಕಿಗಳು ಒಟ್ಟು ಮೊತ್ತದಲ್ಲಿನ ಶೇಕಡಾ ಪ್ರಮಾಣವನ್ನು ತೋರಿಸುತ್ತವೆ.

ಅನುಬಂಧ ಕೋಷ್ಟಕ – 1 ಅನೇಕ ದೃಷ್ಟಿಯಿಂದ ಕುತೂಹಲಕಾರಿಯಾಗಿದೆ. ಸಾಕ್ಷರತೆಗೆ ಸಂಬಂಧಿಸಿದ ಎಲ್ಲ ವಿವರಗಳನ್ನು ಇಲ್ಲಿ ನೀಡುತ್ತಿರುವುದಕ್ಕೆ ಒಂದು ಉದ್ದೇಶವಿದೆ. ಸಾಕ್ಷರತಾ ಪ್ರಮಾಣವನ್ನು ಲೆಕ್ಕ ಹಾಕುವುದಕ್ಕೆ ಒಂದು ಕ್ರಮವಿದೆ. ಇದು ಅರ್ಥಶಾಸ್ತ್ರದ ಪಠ್ಯಗಳಲ್ಲಿ ದೊರೆಯುವುದಿಲ್ಲ. ಆದರೆ ಅದನ್ನು ಕಲಿತುಕೊಳ್ಳಬೇಕಾಗುತ್ತದೆ. ಈ ಕಲಿಕೆಯು ಸಾಧ್ಯವಾಗಲೆಂದು ಇಲ್ಲಿ ಅದರ ವಿವರವಾದ ಮಾಹಿತಿಯನ್ನು ನೀಡಲಾಗಿದೆ. ಸಾಕ್ಷರತೆಯ ಪ್ರಮಾಣವನ್ನು ಲೆಕ್ಕ ಹಾಕುವಾಗ ಒಟ್ಟು ಜನಸಂಖ್ಯೆಯನ್ನು ಪರಿಗಣಿಸುವುದಿಲ್ಲ. ಇಲ್ಲಿ ಅದನ್ನು ಏಳು ವರ್ಷಕ್ಕೆ ಮೇಲ್ಪಟ್ಟ ಜನಸಂಖ್ಯೆಗೆ ಮಾತ್ರ ಗಣನೆ ಮಾಡಲಾಗುತ್ತದೆ. ಇಲ್ಲಿ 0 – 6 ವಯೋಮಾನದ ಮಕ್ಕಳು ಅಕ್ಷರಸ್ಥರೂ ಅಲ್ಲ ಅಥವಾ ಅನಕ್ಷರಸ್ಥರೂ ಅಲ್ಲ. ಅದಕ್ಕೆ ಇಲ್ಲಿ ಒಟ್ಟು ಜನಸಂಖ್ಯೆ, 0 – 6 ವಯೋಮಾನದ ಮಕ್ಕಳ ಜನಸಂಖ್ಯೆ ಮತ್ತು ಏಳು ವರ್ಷಕ್ಕೆ ಮೆಲ್ಪಟ್ಟವರ ಜನಸಂಖ್ಯೆಯ ವಿವರಗಳನ್ನು ನೀಡಲಾಗಿದೆ. ಸಾಕ್ಷರತೆಯನ್ನು ಹೇಗೆ ಗಣನೆ ಮಾಡಲಾಗುತ್ತಿದೆಯೆಂಬುದು ಇಲ್ಲಿ ತಿಳಿಯುತ್ತದೆ.

ಈ ಕೋಷ್ಟಕವು ಸಾಕ್ಷರತೆಯ ಲಿಂಗಸಂಬಂಧಿ ಆಯಾಮವನ್ನು ಮತ್ತು ಅದರ ಪ್ರಾದೇಶಿಕ ನೆಲೆಯನ್ನು ತೋರಿಸುತ್ತದೆ. ಕೋಷ್ಟಕದಲ್ಲಿ ತೋರಿಸಿರುವಂತೆ ಅಕ್ಷರಸ್ಥರಲ್ಲಿ ಪುರುಷರ ಸಂಖ್ಯೆ ಅಧಿಕವಾಗಿದ್ದರೆ ಅನಕ್ಷರಸ್ಥರಲ್ಲಿ ಮಹಿಳೆಯರ ಸಂಖ್ಯೆ ಅಧಿಕವಾಗಿದೆ. ಇದು ಸಾಕ್ಷರತೆಗೆ ಸಂಬಂಧಿಸಿದ ಲಿಂಗಸಂಬಂಧಿ ಅಸಮಾನತೆಯನ್ನು ಅನಾವರಣ ಮಾಡುತ್ತದೆ. ಆದರೆ ಈ ಅಸಮಾನತೆಯ ಪ್ರಮಾಣವು ರಾಜ್ಯಮಟ್ಟದಲ್ಲಿರುವುದಕ್ಕಿಂತ ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಅಧಿಕವಾಗಿದೆ. ರಾಜ್ಯದ ಜನಸಂಖ್ಯೆಯಲ್ಲಿ ಹೈ.ಕ.ಪ್ರ.ದ ಪಾಲು ಶೇ. 18.02 ರಷ್ಟಿದೆ. ಆದರೆ ರಾಜ್ಯದ ಒಟ್ಟು ಅಕ್ಷರಸ್ಥರಲ್ಲಿ ಹೈ.ಕ.ಪ್ರ.ದ ಪಾಲು ಕೇವಲ ಶೇ. 14.00ರಷ್ಟಾಗಿದೆ. ಜನಸಂಖ್ಯೆಯಲ್ಲಿ ಹೈ.ಕ.ಪ್ರ.ವು ಎಷ್ಟು ಪಾಲು ಪಡೆದಿದೆಯೋ ಅದಕ್ಕೆ ಸಾಪೇಕ್ಷವಾಗಿ ರಾಜ್ಯದ ಒಟ್ಟು ಅಕ್ಷರಸ್ಥರಲ್ಲಿ ಅದು ಪಡೆದಿರುವ ಪಾಲು ಕಡಿಮೆ. ಹೈ.ಕ.ಪ್ರ.ದ ಸಾಕ್ಷರತೆಯು (ಶೇ. 53.64) ರಾಜ್ಯಮಟ್ಟದ ಸಾಕ್ಷರತೆಯ (66.64) ಶೇ. 80.49ರಷ್ಟಿದೆ. ಇದು ಅಭಿವೃದ್ಧಿ ಸಂಬಂಧಿ ಪ್ರಾದೇಶಿಕ ಅಸಮಾನತೆಯ ನೆಲೆಯನ್ನು ತೋರಿಸುತ್ತದೆ.

ಅನುಬಂಧ ಕೋಷ್ಟಕ2.2

ಕರ್ನಾಟಕ ರಾಜ್ಯದಲ್ಲಿ ಒಟ್ಟು ಆಂತರಿಕ ಉತ್ಪನ್ನ ಮತ್ತು ತಲಾ ವರಮಾನ (ಚಾಲ್ತಿ ಬೆಲೆಗಳಲ್ಲಿ)
 (2003 – 04 ರಿಂದ 2006 – 07)


 

ವಿವರಗಳು ಕರ್ನಾಟಕ ರಾಜ್ಯ ಹೈದರಾಬಾದ್ ಕರ್ನಾಟಕ ಪ್ರದೇಶ
  1999 – 00 2006 – 07 1999 – 00 2006 – 07
ಒಟ್ಟು ಆಂತರಿಕ ಉತ್ಪನ್ನ (ಚಾಲ್ತಿ ಬೆಲೆಗಳಲ್ಲಿ) (ರೂಪಾಯಿ ಕೋಟಿಗಳಲ್ಲಿ) 96178.60 200922.35 12736.76 29258.40
ಒಟ್ಟು ತಲಾ ವರಮಾನ (ಚಾಲ್ತಿ ಬೆಲೆಗಳಲ್ಲಿ) (ರೂಪಾಯಿಗಳಲ್ಲಿ 18561 35469 13458 28769

ಮೂಲ : 1 ಕರ್ನಾಟಕ ಸರ್ಕಾರ 2002. ರಾಜ್ಯ ಆಂತರಿಕ ಉತ್ಪನ್ನ : ಕರ್ನಾಟಕ : 199394 ರಿಂದ 200001.

ಆರ್ಥಿಕ ಮತ್ತು ಸ್ಯಾಂಖಿಕ ನಿರ್ದೇಶನಾಲಯ, ಬೆಂಗಳೂರು. ಪು: 40.

  1. ಕರ್ನಾಟಕಸರ್ಕಾರ 2009. ಆರ್ಥಿಕಸಮೀಕ್ಷೆ : 2008 – 09.

ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆ. ಬೆಂಗಳೂರು. ಪು: ಎ.56.

ಈ ಕೋಷ್ಟಕವು ಅನೇಕ ದೃಷ್ಟಿಯಿಂದ ಅಧ್ಯಯನ ಯೋಗ್ಯವಾಗಿದೆ. ಏಕೆಂದರೆ ರಾಜ್ಯಮಟ್ಟದಲ್ಲಿ ಒಟ್ಟು ಆಂತರಿಕ ಉತ್ಪನ್ನವು 1999 – 00 ರಿಂದ 2006 – 07ರ ಅವಧಿಯಲ್ಲಿ ವಾರ್ಷಿಕ ಶೇ. 13.61ರ ಗತಿಯಲ್ಲಿ ಏರಿಕೆಯಾಗಿದ್ದರೆ ಹೈ.ಕ.ಪ್ರದಲ್ಲಿ ಅದು ವಾರ್ಷಿಕ ಶೇ. 16.21 ಗತಿಯಲ್ಲಿ ಏರಿಕೆಯಾಗಿದೆ. ಅದೇ ರೀತಿಯಲ್ಲಿ ತಲಾ ವರಮಾನದಲ್ಲಿ ರಾಜ್ಯಮಟ್ಟದಲ್ಲಿನ ಏರಿಕೆ ಗತಿಯು ವಾರ್ಷಿಕ ಶೇ. 11.38 ಪ್ರಮಾಣದಲ್ಲಿದ್ದರೆ ಹೈ.ಕ.ಪ್ರ.ದಲ್ಲಿ ಅದರ ಏರಿಕೆ ಗತಿಯು ಶೇ. 14.22ರಷ್ಟಾಗಿದೆ. ಅಂದರೆ ಒಟ್ಟು ವರಮಾನ ಮತ್ತು ತಲಾ ವರಮಾನಗಳೆರಡೂ 1999 – 00 ರಿಂದ 2006 – 07ರ ಅವಧಿಯಲ್ಲಿ ರಾಜ್ಯಮಟ್ಟದಲ್ಲಿನ ಏರಿಕೆಗಿಂತ ಅಧಿಕ ಗತಿಯಲ್ಲಿ ಹೈ.ಕ.ಪ್ರ.ದಲ್ಲಿ ಏರಿಕೆಯಾಗಿರುವುದು ಅತ್ಯಂತ ಸ್ವಾಗತಾರ್ಹ ಸಂಗತಿಯಾಗಿದೆ. ಇನ್ನು ಒಂದು ಸಂಗತಿಯೆಂದರೆ ಹೈ.ಕ.ಪ್ರ.ದ ವರಮಾನವು ರಾಜ್ಯದ ಒಟ್ಟು ವರಮಾನದಲ್ಲಿ 1999 – 00ರಲ್ಲಿ ಶೇ. 13.24 ರಷ್ಟಿದ್ದುದು 2003 – 04ರಲ್ಲಿ ಅದು ಶೇ. 14.69ಕ್ಕೇರಿದೆ. ಅದೇ ರೀತಿಯಲ್ಲಿ ಹೈ.ಕ.ಪ್ರ.ದ ತಲಾ ವರಮಾನವು 1999 – 00ರಲ್ಲಿ ರಾಜ್ಯಮಟ್ಟದ ತಲಾ ವರಮಾನದ ಶೇ. 72.51ರಷ್ಟಿದ್ದರೆ 2006 – 07ರಲ್ಲಿ ಅದು ಶೇ.81.11ರಷ್ಟಾಗಿದೆ. ಇದು ಗಮನಿಸಬೇಕಾದ ಸಂಗತಿಯಾಗಿದೆ. ಏಕೆಂದರೆ ಹೈ.ಕ.ಪ್ರ.ದಲ್ಲಿ ವರಮಾನವು ತೀವ್ರಗತಿಯಲ್ಲಿ ವರ್ಧಿಸುತ್ತಿರುವುದನ್ನು ಇದು ತೋರಿಸಿಕೊಡುತ್ತಿದೆ. ಇಷ್ಟಾದರೂ ಈ ಪ್ರದೇಶವು ರಾಜ್ಯದ ವರಮಾನದಲ್ಲಿ ಪಡೆದಿರುವ (ಶೇ. 14.69) ಪಾಲು ಅದು ಜನಸಂಖ್ಯೆಯಲ್ಲಿ ಪಡೆದಿರುವ (ಶೇ. 18.34) ಪಾಲಿಗಿಂತ ಕಡಿಮೆ. ಆದರೆ ಅದು ಇಂದು ಏರಿಕೆಯಾಗುತ್ತಿದೆ. ಇದು ಆಶಾದಾಯಕ ಸಂಗತಿಯಾಗಿದೆ. ಈ ಪ್ರದೇಶವು ಹಿಂದುಳಿದಿದೆ, ನಿಜ. ಆದರೆ ಅಲ್ಲಿ ಆರ್ಥಿಕ ಅಭಿವೃದ್ಧಿಯು ಸ್ಥಗಿತಗೊಂಡಿದೆಯೆಂದು ತಿಳಿಯಬಾರದು. ಹೈ.ಕ.ಪ್ರ.ದಲ್ಲಿ ವರಮಾನದ ಬೆಳವಣಿಗೆ ಪ್ರಮಾಣವು ರಾಜ್ಯ ಮಟ್ಟದ ವರಮಾನವು ಬೆಳವಣಿಗೆ ಪ್ರಮಾಣಕ್ಕಿಂತ ಅಧಿಕವಾಗಿದೆ. ಇಷ್ಟಾದರೂ ಅದು ರಾಜ್ಯ ವರಮಾನದಲ್ಲಿ ಪಡೆದಿರುವ ಪಾಲು ಮಾತ್ರ ತಾನು ಜನಸಂಖ್ಯೆಯಲ್ಲಿ ಪಡೆದಿರುವ ಪಾಲಿಗಿಂತ ಕಡಿಮೆಯಿದೆ.

ರಾಜ್ಯದ ಜನಸಂಖ್ಯೆಯಲ್ಲಿ ಹೈ.ಕ.ಪ್ರ.ದ ಪಾಲು 2001ರಲ್ಲಿ ಶೇ.18.02ರಷ್ಟಿತ್ತು. ಇದು 2006 – 07ರಲ್ಲಿ ಶೇ.

18.22ರಷ್ಟಾಗಿದೆ. ಆದರೆ ರಾಜ್ಯದ ಒಟ್ಟು ಆಂತರಿಕ ಉತ್ಪನ್ನದಲ್ಲಿ ಹೈ.ಕ.ಪ್ರ.ದ ಪಾಲು 1999 – 2000ದಲ್ಲಿ ಶೇ. 13.24ರಷ್ಟಿದ್ದುದು 2006 – 07ರಲ್ಲಿ ಶೇ. 14.69 ರಷ್ಟಾಗಿದೆ. ರಾಜ್ಯದ ಜನಸಂಖ್ಯೆಯಲ್ಲಿ ಎಷ್ಟು ಪಾಲು ಪಡೆದಿದೆಯೋ ಅದಕ್ಕಿಂತ ಕಡಿಮೆ ಪಾಲನ್ನು ರಾಜ್ಯದ ವರಮಾನದಲ್ಲಿ ಪಡೆದಿದೆ. ಇದು ಒಂದು ರೀತಿಯಲ್ಲಿ ಅಭಿವೃದ್ಧಿ ಸಂಬಂಧಿ ಪ್ರಾದೇಶಿಕ ಅಸಮಾನತೆಯ ಪರಿಮಾಣವನ್ನು ತೋರಿಸುತ್ತದೆ.

ಅನುಬಂಧ ಕೋಷ್ಟಕ2.3 : ಕರ್ನಾಟಕದಲ್ಲಿ ಜನಸಂಖ್ಯಾ ಬೆಳವಣಿಗೆಯ ಪ್ರಾದೇಶಿಕ ಸ್ವರೂಪ 19812001

ವಿವರಗಳು ಜನಸಂಖ್ಯೆ ಮತ್ತು ಅದರ ಬೆಳವಣಿಗೆ ಪ್ರಮಾಣ
1981 1991 2001 1981 – 1991 1991 – 2001
 (ಶೇಕಡ ಬೆಳವಣಿಗೆ ಪ್ರಮಾಣ)  (ಶೇಕಡ ಬೆಳವಣಿಗೆ ಪ್ರಮಾಣ)
ಕರ್ನಾಟಕ ರಾಜ್ಯ 371.35 449.77 528.50 21.11 17.50
 (27 ಜಿಲ್ಲೆಗಳು) ಲಕ್ಷ ಲಕ್ಷ ಲಕ್ಷ  (2.11)  (1.75)
ಹೈ.ಕ.ಪ್ರ. 63.49 80.37 95.26 26.58 18.52
 (05 ಜಿಲ್ಲೆಗಳು) ಲಕ್ಷ ಲಕ್ಷ ಲಕ್ಷ  (2.29)  (2.21)
ಹೈ.ಕ.ಪ್ರ.ಬಿಟ್ಟು 307.86 369.40 433.24 19.98 17.28
ಉಳಿದ ಕರ್ನಾಟಕ ಲಕ್ಷ ಲಕ್ಷ ಲಕ್ಷ  (2.07)  (1.65)

ಟಿಪ್ಪಣಿ : ಆವರಣದಲ್ಲಿನ ಅಂಕಿಗಳು ಜನಸಂಖ್ಯೆಯ ವಾರ್ಷಿಕ ಬೆಳವಣಿಗೆ ಪ್ರಮಾಣವನ್ನು ತೋರಿಸುತ್ತವೆ.

ಮೂಲ : 1. ಸೆನ್ಸಸ್ ಆಫ್ ಇಂಡಿಯಾ 1991 ಸಿರೀಸ್ 11.ಕರ್ನಾಟಕ ಪ್ರೈಮರಿ ಸೆನ್ಸಸ್ ಅಬ್‌ಸ್ಟ್ರಾಕ್ಟ್. ಜನರಲ್ ಪಾಪುಲೇಶನ್. ಡೈರೆಕ್ಟರೇಟ್ ಆಫ್ ಸೆನ್ಸಸ್ ಆಫರೇಶನ್, ಕರ್ನಾಟಕ, ಪು:33

  1. ಸೆನ್ಸಸ್ಆಫ್ಇಂಡಿಯಾ 2001 ಸಿರೀಸ್ 30. ಕರ್ನಾಟಕ. ಪ್ರೈಮರಿ ಸೆನ್ಸಸ್ ಅಬ್‌ಸ್ಟ್ರಾಕ್ಟ್. ಜನರಲ್ ಪಾಪುಲೇಶನ್. ಡೈರೆಕ್ಟರೇಟ್ ಆಫ್ ಸೆನ್ಸಸ್ ಅಫರೇಶನ್, ಕರ್ನಾಟಕ.

ಅಭಿವೃದ್ಧಿಗೆ ಸಂಬಂಧಿಸಿದ ಸೂಚಿಗಳನ್ನು ಒಟ್ಟು ಮೊತ್ತದಲ್ಲಿ ಪರಿಭಾವಿಸಿಕೊಳ್ಳುವುದರಿಂದ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಈ ಸಂಗತಿಗೆ ಪ್ರಸ್ತುತ ಕೋಷ್ಟಕವು ಮಾರ್ಗಸೂಚಿಯಾಗಿದೆ. ಇಡೀ ಕರ್ನಾಟಕವನ್ನು ಒಂದು ಘಟಕವಾಗಿ ತೆಗೆದುಕೊಂಡರೆ 1981 – 1991ರ ದಶಕದಲ್ಲಿ ಜನಸಂಖ್ಯೆಯ ಬೆಳವಣಿಗೆ ಪ್ರಮಾಣ ಶೇ. 21.11. ಆದರೆ ಅದೇ ಅವಧಿಯಲ್ಲಿ ಹೈ.ಕ.ಪ್ರ.ದಲ್ಲಿ ಅದರ ಬೆಳವಣಿಗೆ ಪ್ರಮಾಣ ಶೇ. 22.92. ಹೈ.ಕ.ಪ್ರ.ವನ್ನು ಬಿಟ್ಟು ಉಳಿದ ಕರ್ನಾಟಕಕ್ಕೆ ಇದನ್ನು ಲೆಕ್ಕ ಹಾಕಿದರೆ ಅದರ ಬೆಳವಣಿಗೆ ಪ್ರಮಾಣ ಶೇ. 20.74 ರಷ್ಟಾಗುತ್ತದೆ. ಕರ್ನಾಟಕ ಮತ್ತು ಹೈ.ಕ.ಪ್ರ.ಗಳ ಜನಸಂಖ್ಯಾ ಬೆಳವಣಿಗೆಯಲ್ಲಿ ತುಂಬಾ ಭಿನ್ನತೆ ಇಲ್ಲಿ ಕಂಡು ಬರುವುದಿಲ್ಲ. ಇಲ್ಲಿ ವ್ಯತ್ಯಾಸ ಕೇವಲ ಶೇ. 1.81 ಅಂಶಗಳಷ್ಟಿದೆ. ಈಗ 1991 – 2001ರ ದಶಕದಲ್ಲಿ ಇದು ಹೇಗೆ ಬದಲಾಗಿದೆ ಎಂಬುದನ್ನು ನೋಡಿದರೆ ನಮಗೆ ಸಮಸ್ಯೆಯ ನೆಲೆ ಅರ್ಥವಾಗುತ್ತದೆ. ಇಡೀ ಕರ್ನಾಟಕವನ್ನು ಒಂದು ಘಟಕವಾಗಿ ತೆಗೆದುಕೊಂಡರೆ 1991 – 2001ರ ದಶಕದಲ್ಲಿ ಜನಸಂಖ್ಯೆಯ ಬೆಳವಣಿಗೆ ಪ್ರಮಾಣ ಶೇ. 17.50. ಆದರೆ ಅದೇ ಅವಧಿಯಲ್ಲಿ ಹೈ.ಕ.ಪ್ರ.ದಲ್ಲಿ ಅದರ ಬೆಳವಣಿಗೆ ಪ್ರಮಾಣ ಶೇ. 22.06. ಹೈ.ಕ.ಪ್ರ.ವನ್ನು ಬಿಟ್ಟು ಉಳಿದ ಕರ್ನಾಟಕಕ್ಕೆ ಇದನ್ನು ಲೆಕ್ಕ ಹಾಕಿದರೆ ಅದರ ಬೆಳವಣಿಗೆ ಪ್ರಮಾಣ ಶೇ. 16.55ರಷ್ಟಾಗುತ್ತದೆ. ಕರ್ನಾಟಕ ಮತ್ತು ಹೈ.ಕ.ಪ್ರ.ಗಳ ಜನಸಂಖ್ಯಾ ಬೆಳವಣಿಗೆಯಲ್ಲಿ ತುಂಬಾ ವ್ಯತ್ಯಾಸ ಇಲ್ಲಿ ಉಂಟಾಗಿರುವುದನ್ನು ನೋಡಬಹುದು. ಇಲ್ಲಿ ವ್ಯತ್ಯಾಸ ಶೇ. 4.56 ಅಂಶಗಳಷ್ಟಿದೆ. ಈಗ ಕರ್ನಾಟಕದಲ್ಲಿ ಜನಸಂಖ್ಯೆಯ ಸಮಸ್ಯೆ ಯಾವ ಸ್ವರೂಪದಲ್ಲಿದೆ ಎಂಬುದು ತಿಳಿಯುತ್ತದೆ. ಇಡೀ ಕರ್ನಾಟಕವನ್ನು ಗಮನದಲ್ಲಿಟ್ಟುಕೊಂಡು ಮಾತನಾಡುವುದು ಸರಿಯಲ್ಲ. ನಮ್ಮ ರಾಜ್ಯದಲ್ಲಿ ಜನಸಂಖ್ಯೆಯ ಸಮಸ್ಯೆಯಿದ್ದರೆ ಅದು ಹೈ.ಕ.ಪ್ರ.ದಲ್ಲಿ ಮಡುಗಟ್ಟಿಕೊಂಡಿದೆ. ಇದನ್ನು ತಿಳಿದುಕೊಳ್ಳದೆ ಚೀನಾ ಮಾದರಿಯನ್ನು ನಮ್ಮಲ್ಲಿ ಅನುಸರಿಸುತ್ತೇವೆಂದು ಮಾತನಾಡುವುದು ತಪ್ಪಾಗುತ್ತದೆ. ಏಕೆಂದರೆ ನಮ್ಮಲ್ಲಿ ಜನಸಂಖ್ಯೆಯ ಬೆಳವಣಿಗೆ ಪ್ರಮಾಣವು ಕಡಿಮೆಯಾಗುತ್ತಿದೆ. ಅದು ಅಧಿಕವಾಗಿದ್ದರೆ ಅದು ಹಿಂದುಳಿದ ಜಿಲ್ಲೆಗಳಲ್ಲಿದೆ. ಅದು ಕರ್ನಾಟಕದ ಹೈ.ಕ.ಪ್ರ.ದ ಹಿಂದುಳಿದಿರುವಿಕೆಗೆ ಸಂಬಂಧಿಸಿದ ಸಂಗತಿಯಾಗಿದೆ. ಈ ಕಾರಣಕ್ಕೆ ಹಿಂದುಳಿದಿರುವಿಕೆಯನ್ನು ಕೇವಲ ಬಂಡವಾಳದ ನೆಲೆಯಲ್ಲಿ ನೋಡಬಾರದೆಂದು ಹೇಳಲಾಗುತ್ತದೆ. ಇಲ್ಲಿ ಸಾಕ್ಷರತೆ, ಅದರಲ್ಲೂ ಮಹಿಳೆಯರ ಸಾಕ್ಷರತೆಯ ಪಾತ್ರ ಬಹಳ ನಿರ್ಣಾಯಕವಾದುದಾಗಿದೆ. ಈ ಬಗ್ಗೆ ನಾವು ಮಾತನಾಡಬೇಕಾಗುತ್ತದೆ. ಅದು ಬಿಟ್ಟು ಎರಡು ಮಕ್ಕಳ ನೀತಿಯನ್ನು ಅಳವಡಿಸಿಕೊಳ್ಳುತ್ತೇವೆ ಎಂದು ಹೇಳುವುದು ‘ಚಕ್ಕಡಿಯನ್ನು ಎತ್ತುಗಳ ಹಿಂದೆ ಇಡುವುದಕ್ಕೆ ಪ್ರತಿಯಾಗಿ ಅವುಗಳ ಮುಂದಿಟ್ಟಂತಾಗುತ್ತದೆ’. ಜನಸಂಖ್ಯೆಯ ಬೆಳವಣಿಗೆ ಪ್ರಕ್ರಿಯೆಯನ್ನು ಮಾನವ ಅಭಿವೃದ್ಧಿಯ ಸಂಗತಿಯಾಗಿ ಪರಿಭಾವಿಸಿಕೊಳ್ಳುವ ಅಗತ್ಯವಿದೆ.

ಅನುಬಂಧ ಕೊಷ್ಟಕ2.4 : ಡಾ. ಡಿ.ಎಂ.ನಂಜುಂಡಪ್ಪ ಸಮಿತಿಯ ಶಿಫಾರಸ್ಸಾದ ಎಂಟು ವರ್ಷದ ವಿಶೇಷ ಅಭಿವೃದ್ಧಿ ಯೋಜನೆ.

2007 – 08ನೆಯ ಸಾಲಿನಲ್ಲಿ ಅನುದಾನ ಹಂಚಿಕೆ ವಿವರ (ಸರ್ಕಾರಿ ಸೂತ್ರ ಮತ್ತು ಸಮಿತಿ ಸೂತ್ರಗಳು ಮತ್ತು ಅವುಗಳ ನಡುವಿನ ಭಿನ್ನತೆ)

 (ಕೋಟಿ ರೂಪಾಯಿಗಳಲ್ಲಿ)

ವಿಭಾಗಗಳು ಸರ್ಕಾರಿ ಸೂತ್ರ ಸಮಿತಿ ಸೂತ್ರ
ಹಿಂದುಳಿದ ತಾಲ್ಲೂಕುಗಳು ಅತಿ ಹಿಂದುಳಿದ ತಾಲ್ಲೂಕುಗಳು ಅತ್ಯಂತ ಹಿಂದುಳಿದ ತಾಲ್ಲೂಕುಗಳು ಒಟ್ಟು ಹಿಂದುಳಿದ ತಾಲ್ಲೂಕುಗಳು ಅತಿ ಹಿಂದುಳಿದ ತಾಲ್ಲೂಕುಗಳು ಅತ್ಯಂತ ಹಿಂದುಳಿದ ತಾಲ್ಲೂಕುಗಳು ಒಟ್ಟು
ಬೆಂಗಳೂರು 80.82 153.22 221.62 455.66 78.56 117.86 196.44 392.86
ಮೈಸೂರು 89.80 117.86 40.30 247.96 47.15 70.72 117.86 235.73
ದಕ್ಷಿಣ ಕರ್ನಾಟಕ ಪ್ರದೇಶ 170.62 217.08 261.92 703.62 125.71 188.58 314.30 628.59
ಬೆಳಗಾವಿ 125.72 141.44 100.74 367.90 62.86 94.29 157.15 314.30
ಗುಲಬರ್ಗಾ 17.96 58.73 423.09 499.88 125.72 188.50 317.30 628.52
ಉತ್ತರ ಕರ್ನಾಟಕ ಪ್ರದೇಶ 143.68 200.37 523.83 867.88 188.58 282.79 471.45 942.82
ಕರ್ನಾಟಕ ರಾಜ್ಯ 314.30 471.75 785.75 1571.50 314.30 471.75 785.75 1571.50

ಟಿಪ್ಪಣಿ:

ಈ ಕೋಷ್ಟಕದಲ್ಲಿ ಸ್ಪಷ್ಟವಾಗಿ ಅನುದಾನ ಹಂಚಿಕೆಗೆ ಸಂಬಂಧಿಸಿದಂತೆ ಹೇಗೆ ಬೆಂಗಳೂರು, ಮೈಸೂರು ಮತ್ತು ಬೆಳಗಾವಿ ವಿಭಾಗಗಳಿಗೆ ಅನುಕೂಲವಾಗಿದೆ ಹಾಗೂ ಗುಲಬರ್ಗಾ ವಿಭಾಗಕ್ಕೆ ಅನ್ಯಾಯವಾಗಿದೆ ಎಂಬುದನ್ನು ತೋರಿಸಲಾಗಿದೆ. ಇದು ಎಂಟು ವರ್ಷದ ವಿಶೇಷ ಅಭಿವೃದ್ಧಿ ಯೋಜನೆಯ ಮೂಲ ವರ್ಷವಾದ 2007 – 08ನೆಯ ಸಾಲಿಗೆ ಸಂಬಂಧಿಸಿದ ಚಿತ್ರ. ಈ ವರ್ಷದಲ್ಲಿ ಗುಲಬರ್ಗಾ ವಿಭಾಗಕ್ಕೆ ಸರ್ಕಾರಿ ಸೂತ್ರದಿಂದಾಗಿ ಉಂಟಾದ ಕಡಿತ ರೂ. 128.54 ಕೋಟಿ. ಸರ್ಕಾರಿ ಸೂತ್ರದ ಪ್ರಕಾರ ಗುಲಬರ್ಗಾ ವಿಭಾಗಕ್ಕೆ ದೊರೆಯುವ ಮೊತ್ತ ರೂ. 499.88 ಕೋಟಿ. ಆದರೆ ಸಮಿತಿಯ ಸೂತ್ರ ಅನುಸರಿಸಿದ್ದಾದರೆ ದೊರೆಯುವ ಅನುದಾನ ರೂ. 628.52 ಕೋಟಿ. ಇವೆರಡರ ವ್ಯತ್ಯಾಸ ರೂ. 128.54 ಕೋಟಿ. ಸರ್ಕಾರವು ಅಳವಡಿಸಿದ ಅನುದಾನ ಹಂಚಿಕೆ ಸೂತ್ರದಿಂದಾಗಿ ಮೂಲ ಉದ್ಧೇಶವಾದ ಪ್ರಾದೇಶಿಕ ಅಸಮಾನತೆ ನಿವಾರಣೆಯು ಇಲ್ಲಿ ಬಿದ್ದು ಹೋಗಿರುವುದನ್ನು ನೋಡಬಹುದಾಗಿದೆ. ರಾಜ್ಯದಲ್ಲಿ ಅತ್ಯಂತ ಹಿಂದುಳಿದ ತಾಲ್ಲೂಕುಗಳನ್ನು ಅತಿ ಹೆಚ್ಚಾಗಿ ಪಡೆದಿರುವ ಗುಲಬರ್ಗಾ ವಿಭಾಗಕ್ಕೆ ಅನುದಾನ ಕಡಿಮೆಯಾಗಿ ಉಳಿದ ವಿಭಾಗಗಳಿಗೆ ಅನುದಾನ ಅಧಿಕವಾಗಿರುವುದು ಆಶ್ಚರ್ಯವನ್ನುಂಟು ಮಾಡುತ್ತದೆ. ಆದರೆ ವಾಸ್ತವ ಸಂಗತಿಯೆಂದರೆ ಇದು ಆಶ್ಚರ್ಯ ಉಂಟು ಮಾಡಬೇಕಾಗಿಲ್ಲ. ಸರ್ಕಾರವು ಅನುದಾನ ಹಂಚಿಕೆಗೆ ಸಂಬಂಧಿಸಿದಂತೆ ಸಮಿತಿಯ ಸೂತ್ರವನ್ನು ಕೈ ಬಿಟ್ಟು ತನ್ನದೇ ಸೂತ್ರವನ್ನು ಅಳವಡಿಸಿಕೊಳ್ಳುವಾಗ ಅದರ ಪರಿಣಾಮಗಳನ್ನು ಪರ್ಯಾಲೋಚಿಸಿಲ್ಲ. ಕುರುಡು ಲೆಕ್ಕದಲ್ಲಿ ಸಮಿತಿಯ ಸೂತ್ರವನ್ನು ಕೈಬಿಟ್ಟು ತನ್ನದೇ ಸೂತ್ರವನ್ನು ಅಳವಡಿಸಿಕೊಂಡಿದೆ. ಇದು ಏನನ್ನು ಸೂಚಿಸುತ್ತದೆ? ಪ್ರಾದೇಶಿಕ ಅಸಮಾನತೆಯನ್ನು ಸರ್ಕಾರಗಳು ಗಂಭೀರವಾಗಿ ಪರಿಗಣಿಸಿಲ್ಲವೆಂಬುದಕ್ಕೆ ಇದು ಸಾಕ್ಷಿಯಾಗಿದೆ.

ಅನುಬಂಧ ಕೋಷ್ಟಕ2.5 : ಎಂಟು ವರ್ಷಗಳಲ್ಲಿ ಅನುದಾನ ಹಂಚಿಕೆಗೆ ಸಂಬಂಧಿಸಿದ ವಿಕೃತಿ (2007 – 08 ರಿಂದ 2014 – 15)

ವಿಭಾಗಗಳು/ಪ್ರದೇಶಗಳು ಸರ್ಕಾರಿ ಸೂತ್ರ ಸಮಿತಿ ಸೂತ್ರ ವ್ಯತ್ಯಯ
 (ಕೋಟಿ ರೂಪಾಯಿಗಳಲ್ಲಿ)
ಬೆಂಗಳೂರು ವಿಭಾಗ 4639.26 4000.00 +639.26
ಮೈಸೂರು ವಿಭಾಗ 2524.55 2400.00 +124.55
ದಕ್ಷಿಣ ಕರ್ನಾಟಕ ಪ್ರದೇಶ 7163.81 6400.00 +763.81
ಬೆಳಗಾವಿ ವಿಭಾಗ 3745.65 3200.00 +545.65
ಗುಲಬರ್ಗಾ ವಿಭಾಗ 5090.00 6400.00  – 1309.46
ಉತ್ತರ ಕರ್ನಾಟಕ ಪ್ರದೇಶ 8836.19 9600.00  – 763.46
ಕರ್ನಾಟಕ ರಾಜ್ಯ 16000.00 16000.00 —-

ಟಿಪ್ಪಣಿ : ಕೋಷ್ಟಕದ ಕೊನೆಯ ಅಂಕಣದಲ್ಲಿನ ವ್ಯವಕಲನ ಚಿನ್ಹೆಯು ಅನುದಾನ ಹಂಚಿಕೆಗೆ ಸಮಿತಿಯ ಸೂತ್ರವನ್ನು ಅಳವಡಿಸಿಕೊಳ್ಳುವುದಕ್ಕೆ ಪ್ರತಿಯಾಗಿ ಸರ್ಕಾರಿ ಸೂತ್ರವನ್ನು ಅಳವಡಿಸಿಕೊಂಡಿದ್ದರಿಂದ ಉಂಟಾಗಲು ಅನುದಾನದ ಕಡಿತವನ್ನು ತೋರಿಸುತ್ತದೆ. ಅದಕ್ಕೆ ಪ್ರತಿಯಾಗಿ ಅಲ್ಲಿನ ಸಂಕಲನ ಚಿನ್ಹೆಗಳು ಸರ್ಕಾರಿ ಸೂತ್ರದಿಂದಾಗಿ ದೊರೆಯುವ ಹೆಚ್ಚಿನ ಅನುದಾನದ ಮೊತ್ತವನ್ನು ತೋರಿಸುತ್ತದೆ. ಅಂದಮೇಲೆ ಸರ್ಕಾರಿ ಸೂತ್ರದಿಂದ ಗುಲಬರ್ಗಾ ವಿಭಾಗಕ್ಕೆ ಅನುದಾನದ ಮೊತ್ತ ರೂ. 1309.46 ಕೋಟಿ. ಈ ಅನ್ಯಾಯವನ್ನು ಸರಿಪಡಿಸುವ ಉದ್ಧೇಶದಿಂದ ನಾವು ಪ್ರಯತ್ನ ನಡೆಸಬೇಕಾಯಿತು. ಅದರ ವಿವರಗಳನ್ನು ಈ ಕೃತಿಯ ಅನುಬಂಧದಲ್ಲಿ ನೀಡಲಾಗಿದೆ.

ಅನುಬಂಧ ಕೋಷ್ಟಕ2.6 : ಕರ್ನಾಟಕದಲ್ಲಿ ಜಿಲ್ಲಾವಾರು ಮಾನವ ಅಭಿವೃದ್ಧಿ ಸೂಚ್ಯಂಕ : 1991

ಕ್ರ.ಸಂ. ಜಿಲ್ಲೆಗಳು ಆರೋಗ್ಯ ಸೂಚ್ಯಂಕ ಶೈಕ್ಷಣಿಕ ಸಾಧನಾ ಸೂಚ್ಯಂಕ ವರಮಾನ ಸೂಚ್ಯಂಕ ಮಾನವ ಅಭಿವೃದ್ಧಿ ಸೂಚ್ಯಂಕ
ಬೆಂಗಳೂರು ವಿಭಾಗ
1. ಬೆಂಗಳೂರು (ಗ್ರಾ) 0.657 0.582 0.378 0.539
2. ಬೆಂಗಳೂರು (ನ್ರ) 0.663 0.757 0.449 0.623
3. ಚಿತ್ರದುರ್ಗ 0.630 0.590 0.384 0.535
4. ದಾವಣಗೆರೆ 0.633 0.623 0.388 0.548
5. ಕೋಲಾರ 0.617 0.576 0.372 0.522
6. ಶಿವಮೊಗ್ಗ 0.680 0.662 0.410 0.584
7. ತುಮಕೂರು 0.633 0.612 0.370 0.539
ಮೈಸೂರು ವಿಭಾಗ
1. ಚಿಕ್ಕಮಗಳೂರು 0.585 0.639 0.434 0.559
2. ದಕ್ಷಿಣ ಕನ್ನಡ 0.683 0.799 0.500 0.661
3. ಹಾಸನ 0.575 0.599 0.384 0.519
4. ಮಂಡ್ಯ 0.598 0.548 0.386 0.511
5. ಮೈಸೂರು 0.632 0.550 0.389 0.524
6. ಕೊಡಗು 0.600 0.739 0.631 0.623
7. ಉಡುಪಿ 0.685 0.830 0.463 0.659
8. ಚಾ.ರಾ.ನಗರ 0.625 0.446 0.392 0.488
ಬೆಳಗಾವಿ ವಿಭಾಗ
1. ಬೆಳಗಾವಿ 0.657 0.586 0.393 0.545
2. ವಿಜಾಪುರ 0.570 0.561 0.381 0.504
3. ಧಾರವಾಡ 0.568 0.637 0.412 0.539
4. ಗದಗ 0.583 0.601 0.364 0.516
5. ಹಾವೇರಿ 0.577 0.582 0.331 0.496
6. ಬಾಗಲಕೋಟೆ 0.567 0.567 0.380 0.505
7. ಉತ್ತರ ಕನ್ನಡ 0.598 0.682 0.410 0.567
ಗುಲಬರ್ಗಾ ವಿಭಾಗ
1. ಬೀದರ್ 0.600 0.547 0.340 0.496
2. ಬಳ್ಳಾರಿ 0.630 0.506 0.399 0.512
3. ಗುಲಬರ್ಗಾ 0.575 10.431 0.352 0.453
4. ರಾಯಚೂರು 0.590 0.372 0.367 0.443
5. ಕೊಪ್ಪಳ 0.583 0.403 0.351 0.446
ಕರ್ನಾಟಕ 0.618 0.602 0.402 0.541

ಮೂಲ : ಕರ್ನಾಟಕ ಸರ್ಕಾರ. 2006 ಕರ್ನಾಟಕದಲ್ಲಿ ಮಾನವ ಅಭಿವೃದ್ಧಿ2005.

ಅನುಬಂಧ ಕೋಷ್ಟಕ2.7 : ಕರ್ನಾಟಕದಲ್ಲಿ ಜಿಲ್ಲಾವಾರು ಮಾನ ಅಭಿವೃದ್ಧಿ ಸೂಚ್ಯಂಕ : 2001

ಕ್ರ.ಸಂ. ಜಿಲ್ಲೆಗಳು ಆರೋಗ್ಯ ಸೂಚ್ಯಂಕ ಶೈಕ್ಷಣಿಕ ಸಾಧನಾ ಸೂಚ್ಯಂಕ ವರಮಾನ ಸೂಚ್ಯಂಕ ಮಾನವ ಅಭಿವೃದ್ಧಿ ಸೂಚ್ಯಂಕ
ಬೆಂಗಳೂರು ವಿಭಾಗ
1. ಬೆಂಗಳೂರು (ಗ್ರಾ) 0.692 0.662 0.605 0.653
2. ಬೆಂಗಳೂರು (ನ್ರ) 0.705 0.887 0.666 0.753
3. ಚಿತ್ರದುರ್ಗ 0.600 0.704 0.517 0.627
4. ದಾವಣಗೆರೆ 680 0.711 0.515 0.625
5. ಕೋಲಾರ 0.653 0.713 0.508 0.635
6. ಶಿವಮೊಗ್ಗ 0.707 0.766 0.547 0.673
7. ತುಮಕೂರು 0.672 0.714 0.505 0.630
ಮೈಸೂರು ವಿಭಾಗ
1. ಚಿಕ್ಕಮಗಳೂರು 0.637 0.742 0.563 0.647
2. ದಕ್ಷಿಣ ಕನ್ನಡ 0.707 0.823 0.636 0.722
3. ಹಾಸನ 0.670 0.729 0.519 0.639
4. ಮಂಡ್ಯ 0.632 0.682 0.513 0.609
5. ಮೈಸೂರು 0.663 0.669 0.561 0.631
6. ಕೊಡಗು 0.638 0.833 0.621 0.697
7. ಉಡುಪಿ 0.713 0.842 0.588 0.714
8. ಚಾ.ರಾ.ನಗರ 0.642 0.570 0.518 0.576
ಬೆಳಗಾವಿ ವಿಭಾಗ
1. ಬೆಳಗಾವಿ 0.712 0.699 0.532 0.648
2. ವಿಜಾಪುರ 0.627 0.624 0.499 0.589
3. ಧಾರವಾಡ 0.615 0.758 0.553 0.642
4. ಗದಗ 0.628 0.750 0.525 0.634
5. ಹಾವೇರಿ 0.620 0.699 0.491 0.603
6. ಬಾಗಲಕೋಟೆ 0.597 0.636 0.539 0.591
7. ಉತ್ತರ ಕನ್ನಡ 0.632 0.781 0.546 0.654
ಗುಲಬರ್ಗಾ ವಿಭಾಗ
1. ಬೀದರ್ 0.638 0.689 0.470 0.599
2. ಬಳ್ಳಾರಿ 0.685 0.618 0.549 0.617
3. ಗುಲಬರ್ಗಾ 0.632 0.572 0.490 0.564
4. ರಾಯಚೂರು 0.648 0.524 0.469 0.547
5. ಕೊಪ್ಪಳ 0.642 0.576 0.529 0.582
ಕರ್ನಾಟಕ 0.680 0.712 0.559 0.650

ಮೂಲ: ಕರ್ನಾಟಕ ಸರ್ಕಾರ. 2006 ಕರ್ನಾಟಕದಲ್ಲಿ ಮಾನವ ಅಭಿವೃದ್ಧಿ2005

 

ಅನುಬಂಧ ಕೋಷ್ಟಕ2.8 : ಕರ್ನಾಟಕದಲ್ಲಿ ಜಿಲ್ಲಾವಾರು ಲಿಂಗ ಸಂಬಂಧಿ ಅಭಿವೃದ್ಧಿ ಸೂಚ್ಯಂಕ : 1991

ಕ್ರ.ಸಂ. ಜಿಲ್ಲೆಗಳು ಆರೋಗ್ಯ ಸೂಚ್ಯಂಕ ಶೈಕ್ಷಣಿಕ ಸಾಧನಾ ಸೂಚ್ಯಂಕ ವರಮಾನ ಸೂಚ್ಯಂಕ ಮಾನವ ಅಭಿವೃದ್ಧಿ ಸೂಚ್ಯಂಕ
ಬೆಂಗಳೂರು ವಿಭಾಗ
1. ಬೆಂಗಳೂರು (ಗ್ರಾ) 0.657 0.564 0.351 0.524
2. ಬೆಂಗಳೂರು (ನ್ರ) 0.664 0.754 0.357 0.592
3. ಚಿತ್ರದುರ್ಗ 0.630 0.575 0.337 0.514
4. ದಾವಣಗೆರೆ 0.633 0.614 0.344 0.530
5. ಕೋಲಾರ 0.616 0.556 0.344 0.505
6. ಶಿವಮೊಗ್ಗ 0.680 0.655 0.381 0.572
7. ತುಮಕೂರು 0.633 0.594 0.358 0.528
ಮೈಸೂರು ವಿಭಾಗ
1. ಚಿಕ್ಕಮಗಳೂರು 0.583 0.631 0.434 0.550
2. ದಕ್ಷಿಣ ಕನ್ನಡ 0.683 0.795 0.456 0.645
3. ಹಾಸನ 0.573 0.583 0.366 0.507
4. ಮಂಡ್ಯ 0.597 0.531 0.344 0.491
5. ಮೈಸೂರು 0.630 0.514 0.317 0.496
6. ಕೊಡಗು 0.599 0.733 0.519 0.617
7. ಉಡುಪಿ 0.684 0.815 0.433 0.644
8. ಚಾ.ರಾ.ನಗರ 0.625 0.433 0.359 0.472
ಬೆಳಗಾವಿ ವಿಭಾಗ
1. ಬೆಳಗಾವಿ 0.656 0.562 0.351 0.525
2. ವಿಜಾಪುರ 0.509 0.540 0.351 0.486
3. ಧಾರವಾಡ 0.568 0.625 0.401 0.531
4. ಗದಗ 0.583 0.578 0.346 0.502
5. ಹಾವೇರಿ 0.576 0.564 0.301 0.480
6. ಬಾಗಲಕೋಟೆ 0.566 0.538 0.347 0.483
7. ಉತ್ತರ ಕನ್ನಡ 0.597 0.684 0.365 0.548
ಗುಲಬರ್ಗಾ ವಿಭಾಗ
1. ಬೀದರ್ 0.600 0.507 0.324 0.477
2. ಬಳ್ಳಾರಿ 0.629 0.484 0.385 0.499
3. ಗುಲಬರ್ಗಾ 0.574 0.396 0.326 0.432
4. ರಾಯಚೂರು 0.588 0.341 0.338 0.422
5. ಕೊಪ್ಪಳ 0.583 0.370 0.331 0.428
ಕರ್ನಾಟಕ 0.618 0.587 0.371 0.525

ಮೂಲ : ಕರ್ನಾಟಕ ಸರ್ಕಾರ. 2006 ಕರ್ನಾಟಕದಲ್ಲಿರು ಮಾನವ ಅಭಿವೃದ್ಧಿ2005