Categories
e-ದಿನ

ಜನವರಿ-02

ಪ್ರಮುಖಘಟನಾವಳಿಗಳು:

1777: ಅಮೆರಿಕಾದ ಕ್ರಾಂತಿಕಾರಿ ಯುದ್ಧ: ಜಾರ್ಜ್ ವಾಷಿಂಗ್ಟನ್ ನೇತೃತ್ವದ ಅಮೇರಿಕದ ಪಡೆಗಳು ನ್ಯೂಜೆರ್ಸಿಯ ಟ್ರೆಂಟನ್  ಬಳಿ ‘ಬ್ಯಾಟಲ್ ಆಫ್ ದಿ ಆಸುನ್ಪಿಂಕ್ ಕ್ರೀಕ್’ ಎಂದು ಪ್ರಸಿದ್ಧಿಗೊಂಡಿರುವ ಯುದ್ಧದಲ್ಲಿ ಬ್ರಿಟಿಷ್ ಪಡೆಗಳನ್ನು ಹಿಮ್ಮೆಟ್ಟಿಸಿದವು.

1839: ಅತ್ಯಂತ ಸೂಕ್ಷ್ಮವಾದ ಅಂಶಗಳೂ ಕಾಣಬರುವಂತಹ ಡಾಗ್ಯುಯೆರಿಯೋ ಟೈಪ್ಸ್ ಎಂಬ ತಂತ್ರಜ್ಞಾನವನ್ನು ಉಪಯೋಗಿಸಿ ಮೊಟ್ಟಮೊದಲ ಬಾರಿಗೆ ಚಂದ್ರನ ಚಿತ್ರವನ್ನು ಛಾಯಾಗ್ರಹಣ ಮಾಡಿದ್ದರು. ಡಾಗ್ಯುಯೆರಿಯೋ ಟೈಪ್ಸ್ ಛಾಯಾಗ್ರಹಣ ಒಂದೆರಡು ದಶಕಗಳ ಕಾಲ ಖಗೋಳಜ್ಞರಿಗೆ ಮುಂದಿನ ತಂತ್ರಜ್ಞಾನಗಳು ಅಭಿವೃದ್ಧಿ ಆಗುವವರೆಗೂ ಸಾಕಷ್ಟು ಉಪಯುಕ್ತವಾಗಿತ್ತು.

1954: ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನದ ಸ್ಥಾಪನೆಯನ್ನು ಪ್ರಕಟಿಸಲಾಯಿತು.

1959: ಸೋವಿಯತ್‌ ರಷ್ಯಾದ ಬಾಹ್ಯಾಕಾಶ ನೌಕೆ ಲ್ಯೂನಾ-1 ಟೈರಾಟಮ್ಮಿಂದ ಬಾಹ್ಯಾಕಾಶಕ್ಕೆ ಏರಿತು. ಇದು ಚಂದ್ರನ ಅತ್ಯಂತ ಸಮೀಪಕ್ಕೆ ಮತ್ತು ಕಕ್ಷೆಗೆ ತಲುಪಿದ ಪ್ರಥಮ ಗಗನನೌಕೆ ಎಂಬ ಕೀರ್ತಿಗೆ ಪಾತ್ರವಾಗಿದೆ.

2016: ವಿಭಾಗದ ಮೇಲೆ ಸಶಸ್ತ್ರ ಭಯೋತ್ಪಾದಕರ ಗುಂಪು ದಾಳಿಮಾಡಿತು.  ಈ ದಾಳಿಯಲ್ಲಿ ಐದು ಜನ ಆಯುಧರಹಿತರಾಗಿದ್ದ  ಭಾರತೀಯ ಯೋಧರು  ಪ್ರಾಣ ಕಳೆದುಕೊಳ್ಳುವುದರ ಜೊತೆಗೆ, ಉಗ್ರರೊಂದಿಗೆ ಹೋರಾಡಿದ ಗರುಡ್ ಕಮಾಂಡೋ ಗುರುಸೇವಕ ಸಿಂಗ್ ಹಾಗೂ ಬಾಂಬ್ ನಿಷ್ಕ್ರಿಯಗೊಳಿಸುವ ವೇಳೆ ಸ್ಫೋಟಗೊಂಡ ಕಾರಣದಿಂದ  ಲೆಫ್ಟಿನೆಂಟ್ ಕರ್ನಲ್ ನಿರಂಜನ್ ತಮ್ಮ ಪ್ರಾಣ ತೆತ್ತರು.  ಈ ಸಂಬಂಧವಾದ ‘ಆಪರೇಷನ್ ಧಂಗು’ ಎಂಬ  ಕಾರ್ಯಾಚರಣೆ ಜನವರಿ 2ರಂದು ಸಂಜೆ ಆರಂಭಗೊಂಡು ಜನವರಿ 03ರಂದು ಮಧ್ಯಾಹ್ನ 1.30ರ ವರೆಗೆ 17 ಗಂಟೆಗಳ ಕಾಲ ನಡೆದು, ಭಾರತೀಯ ಸೇನೆ ಆರು ಉಗ್ರರನ್ನು ಹತ್ಯೆಗೈದು ತನ್ನ ವಾಯುನೆಲೆಯನ್ನು ಉಗ್ರರಿಂದ ಮುಕ್ತಗೊಳಿಸಿಕೊಂಡಿತು.

ಪ್ರಮುಖಜನನ/ಮರಣ:

1923: ಅವರು ಉತ್ತರ ಕನ್ನಡ ಕುಮಟಾದ ಹೊಲನಗದ್ದೆಯಲ್ಲಿ ಜನಿಸಿದರು.  ವಿವಿಧ ಜನಾಂಗಗಳ ಉಪಸಂಸ್ಕೃತಿಯನ್ನು ಆಳವಾಗಿ ಅಧ್ಯಯನ ನಡೆಸಿ  ಮುಕ್ತಿ ಹೊಲೆಯರ ಪದಗಳು, ಕುವರಿ ಮರಾಠಿ ಕಥೆಗಳು, ಗುಮಟೆಯ ಪದಗಳು, ಕರಾವಳಿಯ ಜನಪದ ಕಥೆಗಳು, ತಿಮ್ಮಕ್ಕನ ಪದಗಳು ಪರಮೇಶ್ವರಿಯ ಪದಗಳು, ಉತ್ತರ ಕನ್ನಡ ಜಿಲ್ಲೆಯ ಜಾನಪದ ಕಥೆಗಳು, ಮೂಢನಂಬಿಕೆಗಳು, ಹಾಲಿನ ತೆನೆ, ಹಾಡಲುಂಟೇ ನಿನ್ನ ಮಡಿಲಲ್ಲಿ ಮುಂತಾದ ಮಹತ್ವದ ಕೃತಿಗಳನ್ನು ರಚಿಸಿದ್ದೇ ಅಲ್ಲದೆ ಜಾನಪದ ಗೀತೆ, ಕಥನ ಗೀತೆ ಮತ್ತು ವಿಮರ್ಶೆಯ ಕ್ಷೇತ್ರಗಳಲ್ಲಿಯೂ ಅಪಾರ ಸಾಧನೆ ಮಾಡಿದ್ದಾರೆ. ಅವರಿಂದ  ಕಾವ್ಯ, ನಾಟಕ, ಕಥೆ, ಲಘು-ಬರಹ, ವ್ಯಕ್ತಿ ಚಿತ್ರ, ಆಯುರ್ವೇದ, ಹೋಮಿಯೋಪತಿ ಹಾಗೂ ಜಾನಪದ ವೈದ್ಯ ಕ್ಷೇತ್ರಗಳಲ್ಲಿಯೂ ಸಾಹಿತ್ಯ ಸೇವೆ ಸಂದಿವೆ.  2005ರಲ್ಲಿ ಈ ಲೋಕವನ್ನಗಲಿದರು.

1928: ಪಂಡಿತ ಪುಟ್ಟರಾಜ ಗವಾಯಿಗಳ ಶಿಷ್ಯತ್ವದೊಂದಿಗೆ ಅನೇಕ ರಾಗಗಳನ್ನು ಸಾಕ್ಷಾತ್ಕರಿಸಿಕೊಂಡು ನಾಕೋಡ ಅವರು ಪಂಚಾಕ್ಷರಿ ಗವಾಯಿಗಳು ಪ್ರಾರಂಭಿಸಿದ್ದ ‘ಶ್ರೀ ಕುಮಾರೇಶ್ವರ ನಾಟ್ಯಸಂಘ’ದಲ್ಲಿ ಕಲಾವಿದರಾಗಿ ಖ್ಯಾತಿ ಗಳಿಸಿದ್ದಲ್ಲದೆ ದೇಶಾದಾದ್ಯಂತ ತಮ್ಮ ಸಂಗೀತ ಕಛೇರಿಗಳನ್ನು ಮೊಳಗಿಸಿ ಪ್ರಖ್ಯಾತರಾಗಿದ್ದರು. ಕರ್ನಾಟಕ ಸಂಗೀತ ನಾಟಕ ಅಕಾಡಮಿ ‘ಸಂಗೀತ ಕಲಾತಿಲಕ’ ಸೇರಿದಂತೆ ಅನೇಕ ಗೌರವಗಳು ಅರ್ಜುನ ಸಾ ನಾಕೋಡರಿಗೆ ಸಂದಿದ್ದವು.  ಜನವರಿ 4, 2001ರ ವರ್ಷದಲ್ಲಿ ಈ ಲೋಕವನ್ನಗಲಿದರು.

1937: ಸಾಹಿತ್ಯ, ಸಿನಿಮಾ, ರಂಗಭೂಮಿ, ಸಂಗೀತ, ಜಾನಪದ, ಅಧ್ಯಾಪನ, ಆಡಳಿತ  ಹೀಗೆ ವಿವಿಧಮುಖೀ ವಿದ್ವಾಂಸರೂ, ಸಾಹಿತ್ಯದ ಔನ್ನತ್ಯದ ಸಾಧನೆಗಾಗಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ  ಡಾ.  ಚಂದ್ರಶೇಖರ ಕಂಬಾರರು  ಬೆಳಗಾವಿಯ ಘೋಡಗೇರಿಯಲ್ಲಿ ಜನಿಸಿದರು. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಮೊಟ್ಟಮೊದಲ ಕುಲಪತಿಗಳಾದವರು. ಸರ್ಕಾರದ ಹಲವು ಅಕಾಡೆಮಿಗಳ ಪದಾಧಿಕಾರಿಗಳಾಗಿ, ದೆಹಲಿಯ ‘ನ್ಯಾಷನಲ್ ಸ್ಕೂಲ್ ಆಫ್ ಡ್ರಾಮ’ ಶಾಲೆಯ ಅಧ್ಯಕ್ಷರಾಗಿ ಹೀಗೆ  ವಿವಿಧ ರಂಗಗಳಲ್ಲಿ ಅವರು ಸೇವೆ ಸಲ್ಲಿಸಿದ್ದಾರೆ.   ಸುಮಾರು ಇಪ್ಪತ್ತೈದು ನಾಟಕಗಳು, ಹತ್ತಕ್ಕೂ ಹೆಚ್ಚು ಕವನ ಸಂಕಲನಗಳು, ಮೂರು ಕಾದಂಬರಿಗಳು, ಹತ್ತಕ್ಕೂ ಹೆಚ್ಚು ಜಾನಪದ ಕೃತಿಗಳನ್ನು ರಚಿಸಿದ್ದಾರೆ.  5 ಚಲನ ಚಿತ್ರಗಳನ್ನೂ, 8 ಸಾಕ್ಷಚಿತ್ರಗಳನ್ನೂ ತಯಾರಿಸಿದ್ದಾರೆ.  ವಿಶ್ವದಾದ್ಯಂತ ಪ್ರಮುಖ ವೇದಿಕೆಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ.  ‘ಕನ್ನಡ ಜಾನಪದ ವಿಶ್ವಕೋಶ’ವನ್ನು ಸಂಪಾದಿಸಿದ್ದಾರೆ.

1940: ಭಾರತೀಯ ಮೂಲದ ಅಮೆರಿಕಾ ಪ್ರಜೆ ಶ್ರೇಷ್ಠ ಗಣಿತಜ್ಞ ಎಸ್. ಆರ್. ಶ್ರೀನಿವಾಸ ವರದನ್ ಅವರು ಚೆನ್ನೈನಲ್ಲಿ ಜನಿಸಿದರು. ಗಣಿತದ ‘ಸಂಭವನೀಯತಾ ಸಿದ್ಧಾಂತ’ (ಪ್ರಾಬಬಲಿಟಿ ಥಿಯರಿ)ಗಳಿಗೆ ನೀಡಿರುವ ಮೂಲಭೂತ ಕೊಡುಗೆಗಳಿಗಾಗಿ ಅದರಲ್ಲೂ ಪ್ರಮುಖವಾಗಿ ‘ಮಾರ್ಟಿಂಗೇಲ್ ಸಮಸ್ಯೆಗಳು’ ಮತ್ತು  ‘ಲಾರ್ಜ್ ಡೀವಿಯೇಶನ್’ ಕುರಿತಾದ ಶ್ರೇಷ್ಠ ಕೊಡುಗೆಗಳಿಗಾಗಿ  ವಿಶ್ವಪ್ರಸಿದ್ಧಿ ಪಡೆದಿದ್ದಾರೆ.  ವಿಜ್ಞಾನ, ಸಂಶೋಧನೆ, ತಂತ್ರಜ್ಞರಿಗೆ ಅಮೇರಿಕದಲ್ಲಿ ಸಲ್ಲುವ ಅತ್ಯುನ್ನತ ಗೌರವವಾದ ‘ನ್ಯಾಷನಲ್ ಮೆಡಲ್ ಆಫ್ ಸೈನ್ಸ್’,  ಭಾರತ ಸರ್ಕಾರದ ಪದ್ಮಭೂಷಣ, ಏಬೆಲ್ ಪ್ರೈಜ್, ಸ್ಟೀಲ್ ಪ್ರೈಜ್, ಬರ್ಕ್ ಹಾಫ್ ಪ್ರೈಜ್ ಮುಂತಾದ ಅನೇಕ ಪ್ರಶಸ್ತಿಗಳೂ,  ರಾಯಲ್ ಸೊಸೈಟಿ ಒಳಗೊಂಡಂತೆ ವಿಶ್ವದ ಪ್ರತಿಷ್ಟಿತ ಸಂಸ್ಥೆಗಳ  ಫೆಲೋಷಿಪ್ ಗೌರವಗಳೂ ಅವರದ್ದಾಗಿವೆ.