Categories
e-ದಿನ

ಜನವರಿ-13

ಘಟನೆಗಳು:
[fusion_accordion divider_line=”” hide_on_mobile=”small-visibility,medium-visibility,large-visibility” class=”” id=””][fusion_toggle title=”1793: ನಿಕೊಲಸ್ ಜೀನ್ ಹ್ಯೂಗನ್ ಡಿ ಬಸ್ಸವಿಲ್ಲೆಯನ್ನು ಗಲ್ಲಿಗೇರಿಸಿದ ಜನಗುಂಪು” open=”no”]

ಫ್ರೆಂಚ್ ಕ್ರಾಂತಿಕಾರಿಯಾದ ನಿಕೊಲಸ್ ಜೀನ್ ಹ್ಯೂಗನ್ ಡಿ ಬಸ್ಸವಿಲ್ಲೆ ಎಂಬಾತನನ್ನು ಜನರ ಗುಂಪೊಂದು ನೇಣುಹಾಕಿತು.

[/fusion_toggle][fusion_toggle title=”1842: ನಿರ್ನಾಮವಾದ 4500 ಸೈನ್ಯ ಪಡೆ ಮತ್ತು 12,000 ಶಿಬಿರ ಸಹಾಯಕ ಪಡೆಯ ನಡುವೆ ಉಳಿದವ ಒಬ್ಬನೇ ಒಬ್ಬ!” open=”no”]

ಪ್ರಥಮ ಆಂಗ್ಲ – ಆಫ್ಘನ್ ಯುದ್ಧದಲ್ಲಿ ಬ್ರಿಟಿಷ್ ಸೇನೆಯಲ್ಲಿದ್ದ 4500 ಸೇನಾನಿಗಳು ಮತ್ತು 12,000 ಶಿಬಿರ ವ್ಯವಸ್ಥಾಪಕರ ಪಡೆಯಲ್ಲಿ ಎಲ್ಲರೂ ಅಳಿದು ಹೋದರೂ, ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ಸೈನ್ಯದ  ವೈದ್ಯರಾದ ಡಾ. ವಿಲಿಯಂ ಬ್ರೈಡನ್ ಎಂಬಾತ ಮಾತ್ರಾ,  ಅಚ್ಚರಿ ಎಂಬಂತೆ ಕ್ಷೇಮವಾಗಿ ಆಫ್ಘಾನಿಸ್ಥಾನದ ಜಲಾಲಾ ಬಾದ್ ಎಂಬಲ್ಲಿದ್ದ ಬ್ರಿಟಿಷ್ ಶಿಬಿರಕ್ಕೆ ತಲುಪಿ ಪ್ರಸಿದ್ಧರಾದರು.    

[/fusion_toggle][fusion_toggle title=”1849: ಚಿಲಿಯನ್ ವಾಲಾದಲ್ಲಿ ಬ್ರಿಟಿಷರೊಂದಿಗೆ ಸಿಖ್ಖರ ವೀರಾವೇಶ ಹೋರಾಟ” open=”no”]

ಎರಡನೇ ಸಿಖ್ ಸಮರವು ಲಾಹೋರ್ ಪ್ರಾಂತ್ಯದ  ಚಿಲಿಯನ್ ವಾಲಾದಲ್ಲಿ ನಡೆಯಿತು. ಬ್ರಿಟಿಷ್ ಸೇನಾಧಿಕಾರಿ ಸರ್  ಹಗ್ ಗೌಗ್ ಹೂಡಿದ ಯುದ್ಧದಲ್ಲಿ ಬ್ರಿಟಿಷ್ ಸೇನೆಗೆ ಗೆಲುವು ದೊರೆಯಿತಾದರೂ, ಸಿಖ್ಖರ ವೀರಾವೇಶ ಹೋರಾಟದಿಂದ ಬ್ರಿಟಿಷ್ ಸೇನೆಯಲ್ಲಿ ಅಪಾರ  ಸೇನೆ ನಷ್ಟವಾಗಿ,  ಸರ್ ಹಗ್ ಗೌಗ್  ತೀವ್ರ ಟೀಕೆಗೆ ಗುರಿಯಾದ.

[/fusion_toggle][fusion_toggle title=”1888: ವಾಷಿಂಗ್ಟನ್ನಿನಲ್ಲಿ ನ್ಯಾಷನಲ್ ಜಿಯೋಗ್ರಾಫಿಕ್ ಸೊಸೈಟಿ ಆರಂಭ” open=”no”]

‘ಭೌಗೋಳಿಕ ಜ್ಞಾನ’ ಹೆಚ್ಚಿಸುವ ಸಲುವಾಗಿ ಸಮುದಾಯವೊಂದನ್ನು ಸ್ಥಾಪಿಸಲು ವಾಷಿಂಗ್ಟನ್ನಿನ ಕಾಸ್ಮೋಸ್ ಕ್ಲಬ್ಬಿನಲ್ಲಿ 33 ಜನ ಸಭೆ ಸೇರಿದರು. ಇದು ನ್ಯಾಷನಲ್ ಜಿಯೋಗ್ರಾಫಿಕ್ ಸೊಸೈಟಿ ಆರಂಭಕ್ಕೆ ಮೂಲವಾಯಿತು. ಗಾರ್ಡಿನರ್ ಹಬ್ಬರ್ಡ್, 1888ರ ಫೆಬ್ರುವರಿ 17ರಂದು ಇದರ ಪ್ರಥಮ ಅಧ್ಯಕ್ಷರಾದರು. ಮೊತ್ತಮೊದಲ ‘ನ್ಯಾಷನಲ್ ಜಿಯೋಗ್ರಾಫಿಕ್ ಮ್ಯಾಗಜಿನ್’ ಅದೇ ವರ್ಷ ಪ್ರಕಟಗೊಂಡಿತು.

[/fusion_toggle][fusion_toggle title=”1910: ಆಕಾಶವಾಣಿಯಲ್ಲಿ ಪ್ರಥಮ ನೇರ ಪ್ರಸಾರ” open=”no”]

ನ್ಯೂಯಾರ್ಕ್ ನಗರದ ಮೆಟ್ರೋಪಾಲಿಟನ್ ಒಪೆರಾ ಹೌಸ್ನಲ್ಲಿ ನಡೆದ ‘ಕ್ಯಾವಲ್ಲೇರಿಯ ರಸ್ಟಿಕಾನಾ ಅಂಡ್ ಪಗ್ಲಿಯಾಸ್ಸಿ’ ತಂಡದ ಒಪೆರಾ ಕಾರ್ಯಕ್ರಮವು ಆಕಾಶವಾಣಿಯಲ್ಲಿ  ನೇರ ಪ್ರಸಾರಗೊಂಡ ಪ್ರಪ್ರಥಮ ಕಾರ್ಯಕ್ರಮವೆನಿಸಿತು. 

[/fusion_toggle][fusion_toggle title=”1913: ಡೆಲ್ಟಾ ಸಿಗ್ಮಾ ಥೀಟ ಮಹಿಳಾ ಸಮಾಜ ಪ್ರಾರಂಭ” open=”no”]

ಹೊವಾರ್ಡ್ ವಿಶ್ವವಿದ್ಯಾಲಯದ ಆವರಣದಲ್ಲಿ ಪ್ರಸಿದ್ಧ ಡೆಲ್ಟಾ ಸಿಗ್ಮಾ ಥೀಟ ಮಹಿಳಾ ಸಮಾಜವು ಅಸ್ತಿತ್ವಕ್ಕೆ ಬಂತು.  ಇದು ಕಾಲೇಜು ವಿದ್ಯಾಭಾಸ ಮಾಡಿದ ಮಹಿಳೆಯರಿಂದ ಸಮಾಜಸೇವೆಯ ಉದ್ದೇಶದಿಂದ, ಪ್ರಮುಖವಾಗಿ ಅಮೆರಿಕದಲ್ಲಿನ ಆಫ್ರಿಕನ್ನರನ್ನು ಗಮನದಲ್ಲಿಟ್ಟುಕೊಂಡು ಸ್ಥಾಪನೆಗೊಂಡ ಸಂಸ್ಥೆ.

[/fusion_toggle][fusion_toggle title=”1915: ಇಟಲಿಯಲ್ಲಿನ ಭೂಕಂಪದಲ್ಲಿ 30,000ಕ್ಕೂ ಹೆಚ್ಚು ಮರಣ” open=”no”]

ಇಟಲಿಯ ಲ-ಅಕ್ವಿಲಾ ಪ್ರಾಂತ್ಯದಲ್ಲಿ ಸಂಭವಿಸಿದ  6.7  ಪ್ರಮಾಣದ ಅವೆಝಾನೊ ಭೂಕಂಪದಲ್ಲಿ  29,978ರಿಂದ 32,610 ಜನರು ಸಾವಿಗೀಡಾದರು.

[/fusion_toggle][fusion_toggle title=”1942: ಪ್ಲಾಸ್ಟಿಕ್ ವಾಹನಕ್ಕೆ ಪೇಟೆಂಟ್ ಪಡೆದ ಹೆನ್ರಿ ಫೋರ್ಡ್ ” open=”no”]

ಅಂದಿನ ದಿನಗಳಲ್ಲಿ ಉಪಯೋಗದಲ್ಲಿದ್ದ ಕಾರುಗಳಿಗಿಂತ ಶೇಕಡಾ 30 ಕಡಿಮೆ ತೂಕದ ಪ್ಲಾಸ್ಟಿಕ್ ವಾಹನಕ್ಕೆ ಹೆನ್ರಿ ಫೋರ್ಡ್ ಅವರು ಪೇಟೆಂಟ್ ಪಡೆದುಕೊಂಡರು. 

[/fusion_toggle][fusion_toggle title=”1942: ಪ್ರಥಮ ಬಾರಿಗೆ ವಿಮಾನದ ಅಪಾಯದಿಂದ ಪಾರಾಗಲು ಎಜೆಕ್ಷನ್ ಸೀಟ್ ವ್ಯವಸ್ಥೆ ಬಳಕೆ” open=”no”]

ವಿಮಾನಗಳಲ್ಲಿ ಅದರಲ್ಲೂ ಪ್ರಮುಖವಾಗಿ ಯುದ್ಧ ವಿಮಾನಗಳಲ್ಲಿ ಅಪಘಾತ ಉಂಟಾಗುವಂತಹ ಪರಿಸ್ಥಿತಿಗಳಲ್ಲಿ ವಿಮಾನ ಚಾಲಕರನ್ನು ರಕ್ಷಿಸುವ ಸಲುವಾಗಿ ವಿಮಾನದಿಂದ ಹೊರಕ್ಕೆ ಹಾರುವ  ಎಜೆಕ್ಷನ್ ಸೀಟ್ ವ್ಯವಸ್ಥೆ ನಿರ್ಮಿಸಲಾಗಿರುತ್ತದೆ.  ಈ ವ್ಯವಸ್ಥೆಯನ್ನು ಪ್ರಥಮ ಬಾರಿಗೆ, ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜರ್ಮನಿಯ ಪ್ರಾಯೋಗಿಕ ಪೈಲಟ್ ಒಬ್ಬರು ‘ಹೀನಕೆಲ್ ಹೆ 280 ಜೆಟ್ ಯುದ್ಧ ವಿಮಾನ’ದಲ್ಲಿ ಬಳಸಿದರು. 

[/fusion_toggle][fusion_toggle title=”1966: ಪ್ರಥಮ ಆಫ್ರಿಕನ್ ಅಮೆರಿಕನ್ ಕ್ಯಾಬಿನೆಟ್ ಸದಸ್ಯರಾದ ರಾಬರ್ಟ್ ಸಿ. ವೀವರ್ ” open=”no”]

ಅಮೆರಿಕ ಸರ್ಕಾರ ಪ್ರಥಮ ಬಾರಿಗೆ ಆಫ್ರಿಕನ್ ಮೂಲದವರೊಬ್ಬರನ್ನು ಕ್ಯಾಬಿನೆಟ್ ಸದಸ್ಯರನ್ನಾಗಿ ನೇಮಕಮಾಡಿತು.  ಅಮೆರಿಕದ ಹೌಸಿಂಗ್ ಮತ್ತು ಅರ್ಬನ್ ಡೆವೆಲಪ್ಮೆಂಟ್  ಖಾತೆಗೆ ಸಚಿವರಾದ  ರಾಬರ್ಟ್ ಸಿ. ವೀವರ್ ಅವರು ಹೀಗೆ ನೇಮಕಗೊಂಡ ಪ್ರಥಮರೆಂಬ ಗೌರವಕ್ಕೆ ಪಾತ್ರರಾದರು. 

[/fusion_toggle][fusion_toggle title=”1990: ಪ್ರಥಮ ಆಫ್ರಿಕನ್ ಅಮೇರಿಕನ್ ಗವರ್ನರ್ ಆದ ಡೌಗ್ಲಾಸ್ ವೈಲ್ಡರ್” open=”no”]

ಡೌಗ್ಲಾಸ್ ವೈಲ್ಡರ್  ಅವರು ಪ್ರಥಮ ಆಫ್ರಿಕನ್ ಅಮೇರಿಕನ್ ಗೌರ್ನರ್ ಎಂಬ ಗೌರವಕ್ಕೆ ಪಾತ್ರರಾದರು.  ಅವರು ವರ್ಜೀನೀಯಾದ ರಿಚ್ಮಂಡ್ನಲ್ಲಿನ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು.

[/fusion_toggle][fusion_toggle title=”1993: ಮೂರನೆ ಬಾರಿ ಬಾಹ್ಯಾಕಾಶ ಪ್ರವೇಶಿಸಿದ ಎಂಡೀವರ್” open=”no”]

ನಾಸಾದ ‘ಎಸ್.ಟಿ.ಎಸ್-54’ನ್ನು ಬಾಹ್ಯಾಕಾಶಕ್ಕೆ ಸೇರಿಸಲು ‘ಎಂಡೀವರ್’  ಮೂರನೆಯ ಬಾರಿ ಆಗಸದತ್ತ ಚಿಮ್ಮಿತು.

[/fusion_toggle][fusion_toggle title=”2000: ಮೈಕ್ರೋಸಾಫ್ಟ್ ಅಧ್ಯಕ್ಷ ಪಟ್ಟದಿಂದ ಕೆಳಗಿಳಿದ ಬಿಲ್ ಗೇಟ್ಸ್” open=”no”]

ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಆ ಸಂಸ್ಥೆಯಲ್ಲಿನ  ಪ್ರಧಾನ ಅಧ್ಯಕ್ಷತೆ  ಹುದ್ದೆಯ ಅಧಿಕಾರವನ್ನು  ಬಿಟ್ಟುಕೊಟ್ಟರು.   ಅವರ ಸ್ಥಾನದಲ್ಲಿ ಸ್ಟೀವ್ ಬಾಮರ್ ಅವರು ಮೈಕ್ರೋಸಾಫ್ಟ್ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದರು.

2007: ವಿಶ್ವದ ಪ್ರಥಮ ಪ್ರನಾಳ ಶಿಶು ಲೂಯಿ ಬ್ರೌನ್ ಗಂಡು ಮಗುವಿಗೆ ಜನ್ಮ ನೀಡಿದರು. ವೆಸ್ಲೆ ಮುಲಿಂದರ್ ಪತ್ನಿಯಾಗಿರುವ 28 ರ ಹರೆಯದ ಲೂಯಿ ಬ್ರೌನ್ ಸ್ವಾಭಾವಿಕವಾಗಿ ಗರ್ಭ ಧರಿಸಿ ಮಗುವಿಗೆ ಜನ್ಮ ನೀಡಿದರು.

[/fusion_toggle][fusion_toggle title=”2007: ಟಾಟಾ ಸಮೂಹದಿಂದ ಅಮೇರಿಕದ ಪ್ರಸಿದ್ಧ ಹೋಟೆಲ್ ಖರೀದಿ” open=”no”]

ಟಾಟಾ ಸಮೂಹದ ತಾಜ್ ಹೋಟೆಲ್ಸ್ ರಿಸಾರ್ಟ್ಸ್ ಅಂಡ್ ಪ್ಯಾಲೇಸಸ್ ಸಂಸ್ಥೆಯು ಅಮೆರಿಕದ ಬೋಸ್ಟನ್ನಿನ 80 ವರ್ಷ ಇತಿಹಾಸ ಹೊಂದಿರುವ ರಿಜ್ ಹೋಟೆಲನ್ನು 7650 ಕೋಟಿ ರೂಪಾಯಿಗಳಿಗೆ ಖರೀದಿಸಿತು.

[/fusion_toggle][fusion_toggle title=”2008: ವಿಶ್ವದ ವಿಶಿಷ್ಟ 25 ರೈಲುಗಳ ಪಟ್ಟಿಯಲ್ಲಿ ಭಾರತದ ಮೂರು ರೈಲುಗಳು” open=”no”]

ವಿಶ್ವದ ವಿಶಿಷ್ಟ 25 ರೈಲುಗಳ ಪಟ್ಟಿಯಲ್ಲಿ ಭಾರತದ ‘ಡೆಕ್ಕನ್ ಒಡಿಸ್ಸಿ ಎಕ್ಸ್ ಪ್ರೆಸ್’, 100 ವರ್ಷದ ಹಿಂದೆ ಸಂಚರಿಸುತ್ತಿದ್ದ ‘ಉಗಿಯಂತ್ರದ ರೈಲು’ ಮತ್ತು  ‘ಗಾಲಿಗಳ ಮೇಲೆ ಅರಮನೆ` ಸ್ಥಾನ ಗಳಿಸಿವೆ. ಈ ಪಟ್ಟಿಯನ್ನು ಅಂತಾರಾಷ್ಟ್ರೀಯ ರೈಲು ಪ್ರಯಾಣಿಕರ ಸಂಘ ತನ್ನ 25ನೇ ವಾರ್ಷಿಕೋತ್ಸವದ ಅಂಗವಾಗಿ ಹ್ಯೂಸ್ಟನ್ನಿನಲ್ಲಿ ತಯಾರಿಸಿತು. ಅದರಲ್ಲಿ ಅತ್ಯಂತ ಐಷಾರಾಮಿ ಸೌಲಭ್ಯ ಹೊಂದಿರುವ ‘ಗೋಲ್ಡನ್ ಈಗಲ್ ಟ್ರಾನ್ಸಿಬ್ರೈನ್ ಎಕ್ಸ್ ಪ್ರೆಸ್’  ಮೊದಲನೆ ಸ್ಥಾನ ಪಡೆದಿದೆ.

[/fusion_toggle][fusion_toggle title=”2008: ಆಫ್ಘಾನಿಸ್ಥಾನದ ಕಾಬೂಲಿನಲ್ಲಿ ಭಯಂಕರ ಚಳಿ ಮತ್ತು ಹಿಮಪಾತದಿಂದ ಸಾವು ನೋವು” open=”no”]

ಪಶ್ಚಿಮ ಆಫ್ಘಾನಿಸ್ಥಾನದ ಕಾಬೂಲನ್ನು ತತ್ತರಿಸುವಂತೆ ಮಾಡಿದ ನಿರಂತರ ಹಿಮಪಾತ ಮತ್ತು ಚಳಿಗೆ ಕನಿಷ್ಠ 52 ಮಂದಿ ಮೃತರಾದರು.  ಇದು ಇತ್ತೀಚಿನ ವರ್ಷಗಳಲ್ಲಿ ಚಳಿ ಮತ್ತು ಹಿಮಕ್ಕೆ ಸಂಭವಿಸಿದ ಅತ್ಯಧಿಕ ಸಾವು ನೋವಿನ ಪ್ರಮಾಣವೆಂದು ಹೇಳಲಾಗಿದೆ.

[/fusion_toggle][fusion_toggle title=”2009: ಆಸ್ಟ್ರೇಲಿಯಾದ ಪ್ರಖ್ಯಾತ ಆಟಗಾರ ಮ್ಯಾಥ್ಯು ಹೇಡನ್ ಕ್ರಿಕೆಟ್ಟಿಗೆ ವಿದಾಯ” open=”no”]

ಆಸ್ಟ್ರೇಲಿಯಾದ ಪ್ರಬಲ ಬ್ಯಾಟ್ಸ್ ಮನ್ ಎನಿಸಿದ್ದ  ಮ್ಯಾಥ್ಯು ಹೇಡನ್,  ಬ್ರಿಸ್ಬೇನಿನಲ್ಲಿ ಕ್ರಿಕೆಟ್ ಆಟಕ್ಕೆ ವಿದಾಯ ಹೇಳಿದರು. 

[/fusion_toggle][fusion_toggle title=”2017: ತಿರುವಯ್ಯಾರಿನಲ್ಲಿ ಸಂತ ತ್ಯಾಗರಾಜ ಆರಾಧನಾ ಮಹೋತ್ಸವ ಆರಂಭ” open=”no”]

ಕರ್ನಾಟಕ ಸಂಗೀತದ ಮಹಾನ್ ವಾಗ್ಗೇಯಕಾರರಾದ ಸಂತ ತ್ಯಾಗರಾಜರ ಆರಾಧನಾ ಮಹೋತ್ಸವವು ಜನವರಿ 13 ರಿಂದ ಜನವರಿ 17ರ ವರೆವಿಗೆ ನಡೆಯಲಿದೆ.  ಈ ಸಂದರ್ಭದಲ್ಲಿ ವಿಶ್ವದೆಲ್ಲೆಡೆಯಿಂದ ಸಂಗೀತಗಾರರು ತಿರುವಯ್ಯಾರಿನಲ್ಲಿ ಬಂದು ಸೇರಿ ಕಛೇರಿ ನಡೆಸುತ್ತಾರಲ್ಲದೆ, ಆರಾಧನೆಯ ಕೊನೆಯ ದಿನದಂದು ಒಟ್ಟಾಗಿ ತ್ಯಾಗರಾಜರ ಪಂಚರತ್ನ ಕೀರ್ತನೆಗಳನ್ನು ಹಾಡುತ್ತಾರೆ. ಪುಷ್ಯ ಬಹಳ ಪಂಚಮಿ ದಿನದಂದು ತ್ಯಾಗರಾಜರು ಸಮಾಧಿಸ್ಥರಾದ  ದಿನಕ್ಕೆ ಹೊಂದಿಕೊಂಡಂತೆ ಈ ಆಚರಣೆ ನಡೆಯುತ್ತದೆ. 

[/fusion_toggle][/fusion_accordion]
ಜನನ:
[fusion_accordion divider_line=”” hide_on_mobile=”small-visibility,medium-visibility,large-visibility” class=”” id=””][fusion_toggle title=”1596: ಡಚ್ ಚಿತ್ರಕಾರ ಜಾನ್ ವಾನ್ ಗೋಯೆನ್ ಜನನ” open=”no”]

ಡಚ್ ಚಿತ್ರಕಾರ ಜಾನ್ ವಾನ್ ಗೋಯೆನ್ ಲೀಡನ್ ಎಂಬಲ್ಲಿ ಜನಿಸಿದರು.  ಲ್ಯಾಂಡ್ಸ್ಕೇಪ್  ಪ್ರಕೃತಿ ಚಿತ್ರಣಕ್ಕೆ ಹೆಸರಾದ ಅವರು 1200 ವರ್ಣ ಚಿತ್ರ ಮತ್ತು 1000ಕ್ಕೂ ಹೆಚ್ಚು ರೇಖಾಚಿತ್ರಗಳನ್ನು ರಚಿಸಿದ್ದರು.

[/fusion_toggle][fusion_toggle title=”1832: ಅಮೆರಿಕದ ಲೇಖಕ ಮತ್ತು ಪತ್ರಕರ್ತ ಹೊರಾಟಿಗೋ ಅಲ್ಗರ್ ಜನನ” open=”no”]

ಅಮೆರಿಕದ ಲೇಖಕ ಮತ್ತು ಪತ್ರಕರ್ತ ಹೊರಾಟಿಗೋ ಅಲ್ಗರ್ ಮೆಸಚುಸೆಟ್ಸ್ ಪ್ರಾಂತ್ಯದ ಚೆಲ್ಸಿಯಾದಲ್ಲಿ ಜನಿಸಿದರು.  ಇವರ ಬಹುತೇಕ ಕಥೆಗಳು “ಸಾಮಾನ್ಯ ಅಥವಾ ಬಡತನ ವಾತಾವರಣದಲ್ಲಿ ಬೆಳೆದು, ಮುಂದೆ ಶ್ರದ್ಧಾವಂತ ದುಡಿಮೆ, ಛಲ ಮತ್ತು ಪ್ರಾಮಾಣಿಕತೆಗಳಿಂದ ಮೇಲೇರಿದ ವ್ಯಕ್ತಿತ್ವಗಳನ್ನು ಬಿಂಬಿಸುವಂತದ್ದಾಗಿವೆ”.  ‘ರಾಗಡ್ ಡಿಕ್’ (Ragged Dick) ಅವರ ಅತ್ಯಂತ ಪ್ರಸಿದ್ಧ ಕೃತಿ

[/fusion_toggle][fusion_toggle title=”1864: ನೊಬೆಲ್ ಪುರಸ್ಕೃತ ಭೌತವಿಜ್ಞಾನಿ ವಿಲ್ ಹೆಲ್ಮ್ ವೀನ್ ಜನನ” open=”no”]

ಜರ್ಮನ್ ಭೌತವಿಜ್ಞಾನಿ ನೊಬೆಲ್ ಪುರಸ್ಕೃತ ವಿಲ್ ಹೆಲ್ಮ್ ವೀನ್ ಅವರು ಜರ್ಮನಿಯ ಫಿಸ್ಚ್ ಹೌಸೇನ್ ಬಳಿಯ, ಗಫ್ಕೇನ್ ಎಂಬಲ್ಲಿ ಜನಿಸಿದರು.  ಇವರು ಶಾಖ ಮತ್ತು ಎಲೆಕ್ಟ್ರೋ ಮ್ಯಾಗ್ನೆಟಿಸಂ ಸಿದ್ಧಾಂತಗಳನ್ನು ಉಪಯೋಗಿಸಿ ‘ವೀನಸ್ ಡಿಸ್ಪ್ಲೇಸ್ಮೆಂಟ್ ಲಾ’ ಎಂಬ ಸಂಶೋಧನೆಯನ್ನು ಮಂಡಿಸಿದರು.  ಇದು ಶಾಖಕ್ಕೊಳಗಾದ ವಸ್ತು (blackbody) ಯಾವುದೇ  ಉಷ್ಣಾಂಶಗಳಲ್ಲಿ  ಹೊರಹೊಮ್ಮಿಸುವ ಸೂಸುವಿಕೆಯನ್ನ(emission ಅನ್ನು) ಲೆಕ್ಕಮಾಡಿ ಹೇಳಲು ಸಹಾಯಮಾಡುತ್ತದೆ. 

[/fusion_toggle][fusion_toggle title=”1885: ಪ್ರಖ್ಯಾತ ಫುಲ್ಲರ್ ಬ್ರಷ್ ಕಂಪೆನಿ ನಿರ್ಮಿಸಿದ ಆಲ್ಫ್ರೆಡ್ ಫುಲ್ಲರ್ ಜನನ” open=”no”]

ಪ್ರಖ್ಯಾತ ಫುಲ್ಲರ್ ಬ್ರಷ್ ಕಂಪೆನಿ ನಿರ್ಮಿಸಿದ ಆಲ್ಫ್ರೆಡ್ ಫುಲ್ಲರ್ ಅವರು, ಕೆನಡಾದ ನೊವಾ ಸ್ಕೋಟಿಯ ಪ್ರಾಂತ್ಯದ, ಕಿಂಗ್ಸ್ ಕೌಂಟಿ ಬಳಿಯ ವೆಲ್ಸ್ ಫೋರ್ಡ್ ಎಂಬಲ್ಲಿ  ಜನಿಸಿದರು.  ಮುಂದೆ ಅಮೆರಿಕಕ್ಕೆ ಬಂದ ಅವರು 1906 ವರ್ಷದಲ್ಲಿ ಕೇವಲ 75 ಡಾಲರ್ ಬಂಡವಾಳದಿಂದ ಸಣ್ಣ ಬ್ರಷ್ ಉದ್ಯಮ ಸ್ಥಾಪಿಸಿದರು. ಪ್ರಾರಂಭಿಕ ವರ್ಷಗಳಲ್ಲಿ ಮನೆ ಮನೆಗೂ ಹೋಗಿ ಮಾರುತ್ತಿದ್ದ ಈತ, 1919ರ ವೇಳೆಗೆ ಒಂದು ಮಿಲಿಯನ್ ಡಾಲರ್ ಮಾರಾಟದ ಉದ್ಯಮವನ್ನು ಬೆಳೆಸಿದ್ದರು. 

[/fusion_toggle][fusion_toggle title=”1898: ಪ್ರಸಿದ್ಧ ನಾಟಕಕಾರ, ಸಾಹಿತಿ ‘ಸಂಸ’ ಜನನ ” open=”no”]

‘ಸಂಸ’ ಎಂದೇ ಖ್ಯಾತರಾದ ಖ್ಯಾತ ನಾಟಕಕಾರ, ಸಾಹಿತಿ ಎ. ಎನ್. ಸ್ವಾಮಿ ವೆಂಕಟಾದ್ರಿ ಅಯ್ಯರ್ ಯಳಂದೂರು ತಾಲ್ಲೂಕಿನ ಅಗರ ಗ್ರಾಮದಲ್ಲಿ ಜನಿಸಿದರು. 1919ರಲ್ಲಿ  ‘ಶ್ರೀಕಂಠೀರವ ನರಸರಾಜ ಕನ್ನಡ ನಾಟಕ ರಚನಾ ಸ್ಪರ್ಧೆ’ಯಲ್ಲಿ ಬಿ.ಎಂ.ಶ್ರೀ  ನೇತೃತ್ವದ ತೀರ್ಪುಮಂಡಲಿಯಿಂದ ಸಂಸರ ‘ಸುಗುಣ ಗಂಭೀರ’ ನಾಟಕ ಬಹುಮಾನ ಪಡೆಯಿತು.  ಹೀಗೆ ಪ್ರಸಿದ್ಧರಾದ ‘ಸಂಸ’ರು,  ಮೈಸೂರಿನ ಅರಸರ ಚರಿತ್ರೆಗೆ ಸಂಬಂಧಿಸಿದಂತೆ 23 ನಾಟಕಗಳನ್ನು ರಚಿಸಿದ್ದರೂ, ಕೆಲವು ಮಾತ್ರಾ ಉಳಿದು ಪ್ರಸಿದ್ಧಗೊಂಡಿವೆ.  1939ರಲ್ಲಿ ಆತ್ಮಹತ್ಯೆ ಮಾಡಿಕೊಂಡ ‘ಸಂಸ’ರು ಎರಡು ಕಾದಂಬರಿಗಳು ಮತ್ತು ಹಲವು ಪದ್ಯಕಾವ್ಯಗಳನ್ನೂ ರಚಿಸಿದ್ದರು. 

[/fusion_toggle][fusion_toggle title=”1914: ಇಂಗ್ಲಿಷ್ ನಾಟಕಕಾರ, ಬರಹಗಾರ, ಚಿತ್ರಕಥೆಗಾರ ಟೆಡ್ ವಿಲ್ಲಿಸ್ ಜನನ” open=”no”]

ಇಂಗ್ಲಿಷ್ ನಾಟಕಕಾರ, ಬರಹಗಾರ ಮತ್ತು  ಚಿತ್ರಕಥೆಗಾರರಾದ ಟೆಡ್ ವಿಲ್ಲಿಸ್ ಜನಿಸಿದರು.  ಇವರು ಟೆಲಿವಿಷನ್ನಿನಲ್ಲಿ 34 ನಾಟಕಗಳನ್ನೂ,  34 ಚಿತ್ರಕಥೆಗಳನ್ನೂ ರಚಿಸಿ ಗಿನ್ನೆಸ್ ದಾಖಲೆ ನಿರ್ಮಿಸಿದ್ದರು. 

[/fusion_toggle][fusion_toggle title=”1924: ಫ್ರೆಂಚ್ ನೃತ್ಯ ಕಲಾವಿದ, ನಿರ್ದೇಶಕ ಮತ್ತು ಸಂಯೋಜಕ ರೋಲ್ಯಾಂಡ್ ಪೆಟಿಟ್ ಜನನ” open=”no”]

ಪ್ರಸಿದ್ಧ ಬ್ಯಾಲೆ ನೃತ್ಯ ಕಲೆಗೆ ಹೆಸರಾಗಿದ್ದ, ಫ್ರೆಂಚ್ ನೃತ್ಯ ಕಲಾವಿದ, ನಿರ್ದೇಶಕ  ಮತ್ತು ಸಂಯೋಜಕ ರೋಲ್ಯಾಂಡ್ ಪೆಟಿಟ್ ಅವರು, ಸ್ವಿಟ್ಜರ್ಲ್ಯಾಂಡ್ ದೇಶದ ಜಿನೀವಾದಲ್ಲಿ ಜನಿಸಿದರು. 

[/fusion_toggle][fusion_toggle title=”1926: ಇಂಗ್ಲಿಷ್ ಬರಹಗಾರ ಮತ್ತು ಸೇನಾನಿ ಮೈಖೇಲ್ ಬಾಂಡ್ ಜನನ” open=”no”]

ಇಂಗ್ಲಿಷ್ ಬರಹಗಾರ ಮತ್ತು ಸೇನಾನಿ ಮೈಖೇಲ್ ಬಾಂಡ್ ಅವರು, ಬರ್ಕ್ ಶೈರಿನ ನ್ಯೂಬರಿ ಎಂಬಲ್ಲಿ ಜನಿಸಿದರು.  ಅವರ ಸೃಷ್ಟಿಯಾದ  ‘ಪ್ಯಾಡಿಂಗ್ ಟನ್ ಬೇರ್’ ಸರಣಿ ಕೃತಿಶ್ರೇಣಿ  ಪ್ರಸಿದ್ಧಿ ಪಡೆದಿದೆ.

[/fusion_toggle][fusion_toggle title=”1927: ದಕ್ಷಿಣಾ ಆಫ್ರಿಕಾದ ನೊಬೆಲ್ ಪುರಸ್ಕೃತ ಜೀವವಿಜ್ಞಾನಿ ಮತ್ತು ಶಿಕ್ಷಕ ಸಿಡ್ನಿ ಬ್ರೆನ್ನರ್ ಜನನ” open=”no”]

ದಕ್ಷಿಣ ಆಫ್ರಿಕಾದ ನೊಬೆಲ್ ಪುರಸ್ಕೃತ ಜೀವವಿಜ್ಞಾನಿ ಮತ್ತು ಶಿಕ್ಷಕ ಸಿಡ್ನಿ ಬ್ರೆನ್ನರ್ ಅವರು, ಗೌತೆಂಗ್ ಬಳಿಯ ಜೆರ್ಮಿಸ್ಟನ್ ಎಂಬಲ್ಲಿ ಜನಿಸಿದರು.   ವಂಶವಾಹಿನಿಗಳ  ಕುರಿತಾದ ‘ಜೆನೆಟಿಕ್ ಕೋಡ್’ ವಿಷಯದಲ್ಲಿ ಮಹತ್ವದ ಕೊಡುಗೆಗಳನ್ನು ನೀಡಿರುವ ಅವರಿಗೆ 2002 ವರ್ಷದಲ್ಲಿ ನೊಬೆಲ್ ಪುರಸ್ಕಾರ ಸಂದಿದೆ. 

[/fusion_toggle][fusion_toggle title=”1938: ಸಂಗೀತ ವಿದ್ವಾಂಸ, ಸಂತೂರ್ ವಾದಕ, ಸಂಯೋಜಕ ಪಂಡಿತ್ ಶಿವಕುಮಾರ ಶರ್ಮ ಜನನ” open=”no”]

ಪ್ರಖ್ಯಾಂತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ವಿದ್ವಾಂಸ, ಸಂತೂರ್ ವಾದಕ, ಸಂಗೀತ ಸಂಯೋಜಕ ಪಂಡಿತ್ ಶಿವಕುಮಾರ ಶರ್ಮ ಅವರು ಜಮ್ಮುವಿನಲ್ಲಿ ಜನಿಸಿದರು.  ಸಂತೂರ್ ನಾದವನ್ನು ವಿಶ್ವದೆಲ್ಲೆಡೆ ಹರಿಸುತ್ತಿರುವ ಇವರು, ಪಂಡಿತ್ ಹರಿ ಪ್ರಸಾದ್ ಚೌರಾಸಿಯಾ ಅವರೊಡಗೂಡಿ ‘ಶಿವ್-ಹರಿ’ ಹೆಸರಿನಿಂದ  ಚಲನಚಿತ್ರಗಳಿಗೆ ಸಂಗೀತ ನಿರ್ದೇಶಕ ಜೋಡಿಯಾಗಿಯೂ ಪ್ರಸಿದ್ಧಿ ಪಡೆದಿದ್ದಾರೆ.  ಹಲವಾರು ಆಲ್ಬಂ ಮತ್ತು ಚಲನಚಿತ್ರ ಸಂಗೀತದ  ಪ್ಲಾಟಿನಂ ಡಿಸ್ಕ್, ಪದ್ಮಶ್ರೀ, ಪದ್ಮವಿಭೂಷಣ, ಕೇಂದ್ರೀಯ ಸಂಗೀತ ನಾಟಕ ಅಕಾಡೆಮಿ ಗೌರವ ಮುಂತಾದ ಅನೇಕ ಪ್ರಶಸ್ತಿ ಗೌರವಗಳಿಗೆ ಪಾತ್ರರಾಗಿದ್ದಾರೆ. 

[/fusion_toggle][fusion_toggle title=”1949: ಭಾರತದ ಬಾಹ್ಯಾಕಾಶ ಯಾತ್ರಿ ಮತ್ತು ಸೇನಾಧಿಕಾರಿ ರಾಕೇಶ್ ಶರ್ಮಾ ಜನನ” open=”no”]

ಭಾರತದ ಪ್ರಥಮ ಗಗನಯಾತ್ರಿಯಾಗಿ ಪ್ರಸಿದ್ಧರಾಗಿರುವ ಭಾರತೀಯ ವಾಯುಸೇನಾ ಅಧಿಕಾರಿ ರಾಕೇಶ್ ಶರ್ಮಾ ಅವರು, ಪಂಜಾಬಿನ ಪಾಟಿಯಾಲದಲ್ಲಿ ಜನಿಸಿದರು.  ಭಾರತ ಮತ್ತು ಸೋವಿಯತ್ ರಷ್ಯಾ ಬಾಹ್ಯಾಕಾಶ ಸಹಯೋಗದ  ‘ಇಂಟರ್ ಕಾಸ್ಮೊಸ್’ ಕಾರ್ಯಕ್ರಮದಡಿಯಲ್ಲಿ ಅವರು ಏಪ್ರಿಲ್ 2, 1984ರಂದು ‘ಸೋಯುಜ್ ಟಿ-11’ರಲ್ಲಿ ಯಶಸ್ವೀ ಬಾಹ್ಯಾಕಾಶ ಕೈಗೊಂಡಿದ್ದರು. ಹೀರೋ ಆಫ್ ದಿ ಸೋವಿಯತ್ ಯೂನಿಯನ್ ಮತ್ತು ಭಾರತ ಸರ್ಕಾರದ ಅಮೂಲ್ಯ ಸೈನ್ಯ ಸೇವೆಗೆ ಸಲ್ಲುವ  ಶಾಂತಿಕಾಲದ ‘ಅಶೋಕ ಚಕ್ರ’ ಪುರಸ್ಕಾರಗಳು ಅವರಿಗೆ ಸಂದಿವೆ.

[/fusion_toggle][fusion_toggle title=”1952: ‘ದಿ ಇಂಡಿಪೆಂಡೆಂಟ್’ ಪತ್ರಿಕೆಯ ಸಂಸ್ಥಾಪಕ ಸ್ಟೀಫನ್ ಗ್ಲೋವರ್ ಜನನ” open=”no”]

ಬ್ರಿಟಿಷ್ ಪತ್ರಕರ್ತ ಹಾಗೂ ‘ದಿ ಇಂಡಿಪೆಂಡೆಂಟ್’ ಪತ್ರಿಕೆಯ ಸಂಸ್ಥಾಪಕಾರಲ್ಲಿ ಒಬ್ಬರಾದ ಸ್ಟೀಫನ್ ಗ್ಲೋವರ್ ಜನಿಸಿದರು.

[/fusion_toggle][fusion_toggle title=”1960: ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮೆರಿಕದ ಭೌತವಿಜ್ಞಾನಿ ಮತ್ತು ರಸಾಯನ ಶಾಸ್ತ್ರಜ್ಞ ಎರಿಕ್ ಬೆಟ್ಸಿಗ್ ಜನನ” open=”no”]

ಅಮೆರಿಕದ ಭೌತವಿಜ್ಞಾನಿ ಮತ್ತು ರಸಾಯನ ಶಾಸ್ತ್ರಜ್ಞ ಎರಿಕ್ ಬೆಟ್ಸಿಗ್ ಅವರು ಮಿಚಿಗನ್ ಬಳಿಯ ಆನ್ ಅರ್ಬರ್ ಎಂಬಲ್ಲಿ ಜನಿಸಿದರು.   ಅವರಿಗೆ 2014ರಲ್ಲಿ ಅತ್ಯುತ್ಕೃಷ್ಟ ‘ಫ್ಲೋರೋಸೆನ್ಸ್ ಸೂಕ್ಷ್ಮದರ್ಶಕ ತಂತ್ರಜ್ಞಾನ’ (super-resolved fluorescence microscopy)  ಅಭಿವೃದ್ಧಿ ಪಡಿಸಿದ್ದಕ್ಕಾಗಿ ರಸಾಯನ ಶಾಸ್ತ್ರದಲ್ಲಿನ ನೊಬೆಲ್ ಪುರಸ್ಕಾರ ಸಂದಿತು. 

[/fusion_toggle][/fusion_accordion]
ನಿಧನ:
[fusion_accordion divider_line=”” hide_on_mobile=”small-visibility,medium-visibility,large-visibility” class=”” id=””][fusion_toggle title=”1151: ಫ್ರೆಂಚ್ ಇತಿಹಾಸಜ್ಞ ಮತ್ತು ಗೊಥಿಕ್ ವಿನ್ಯಾಸದ ಪ್ರಾರಂಭಿಕ ಪೋಷಕರಲ್ಲೊಬ್ಬರಾದ ಸುಗೇರ್ ನಿಧನ” open=”no”]

ಫ್ರೆಂಚ್ ಇತಿಹಾಸಜ್ಞ ಮತ್ತು ಗೊಥಿಕ್ ಕಟ್ಟಡ ವಿನ್ಯಾಸದ ಪ್ರಾರಂಭಿಕ ಪೋಷಕರಲ್ಲೊಬ್ಬರೆನಿಸಿರುವ  ಸುಗೇರ್ ನಿಧನರಾದರು.

[/fusion_toggle][fusion_toggle title=”1599: ಹೊಸ ಇಂಗ್ಲಿಷ್ ಕಾವ್ಯದ ಪ್ರಧಾನ ಕವಿಗಳಲ್ಲೊಬ್ಬರಾದ ಎಡ್ಮಂಡ್ ಸ್ಪೆನ್ಸರ್ ನಿಧನ” open=”no”]

ಹೊಸ ಇಂಗ್ಲಿಷ್ ಕಾವ್ಯದ ಪ್ರಧಾನ ಕವಿಗಳಲ್ಲೊಬ್ಬರಾದ ಎಡ್ಮಂಡ್ ಸ್ಪೆನ್ಸರ್ ಲಂಡನ್ನಿನಲ್ಲಿ ನಿಧನರಾದರು. ಅವರ  ‘ದಿ ಫೇರಿ ಕ್ವೀನ್’, ‘ಅಲ್ಲಿಗೊರಿ’ ಮುಂತಾದ ಅವರ ಕವಿತೆಗಳು ಅತ್ಯಂತ ಪ್ರಸಿದ್ಧಿ ಪಡೆದಿವೆ. 

[/fusion_toggle][fusion_toggle title=”1625: ಪ್ರಖ್ಯಾತ ಫ್ಲೆಮಿಶ್ ವರ್ಣಕಲಾವಿದ ಜಾನ್ ಬ್ರೂಘೆಲ್ ನಿಧನ” open=”no”]

ಫ್ಲೆಮಿಶ್ ಚಿತ್ರಕಲೆಯ ಪುನರುತ್ಥಾನ ಚಿತ್ರಕಾರರಾದ ಪೀಟರ್ ಬ್ರೂಘೇಲರ ಮಗನಾದ ಜಾನ್ ಬ್ರೂಘೆಲ್ ನಿಧನರಾದರು.  ಜಾನ್ ಬ್ರೂಘೆಲ್ ಮತ್ತು ಆತನ ಗೆಳೆಯ ರೂಬೆನ್, 17ನೇ ಶತಮಾನದಲ್ಲಿನ ಮೊದಲ ಮೂರು ದಶಕಗಳಲ್ಲಿ,   ಫ್ಲೆಮಿಶ್ ಚಿತ್ರಕಲೆಯಲ್ಲಿನ ಪ್ರಮುಖ ಕಲಾವಿದರೆಂದು ಪರಿಗಣಿತರಾಗಿದ್ದಾರೆ. 

[/fusion_toggle][fusion_toggle title=”1832: ಇಂಗ್ಲಿಷ್ ಕ್ರಿಕೆಟ್ಟಿಗ ಮತ್ತು ಲಾರ್ಡ್ಸ್ ಕ್ರಿಕೆಟ್ ಮೈದಾನದ ಸ್ಥಾಪಕ ಥಾಮಸ್ ಲಾರ್ಡ್ ನಿಧನ” open=”no”]

ವಿಶ್ವಪ್ರಸಿದ್ಧವಾದ ಇಂಗ್ಲೆಂಡಿನ ಲಾರ್ಡ್ಸ್ ಕ್ರಿಕೆಟ್ ಮೈದಾನವನ್ನು ಸ್ಥಾಪಿಸಿದ,  ಕ್ರಿಕೆಟ್ಟಿಗ ಥಾಮಸ್ ಲಾರ್ಡ್ ಅವರು ಹ್ಯಾಂಪ್ ಶೈರಿನ ವೆಸ್ಟ್ ಮಿಯಾನ್ ಎಂಬಲ್ಲಿ ನಿಧನರಾದರು. 

[/fusion_toggle][/fusion_accordion]