ಅಂಗ್ಲೋ ಇಂಡಿಯನ್ನರನ್ನು ಯುರೋಪ್ ಮತ್ತು ಏಷ್ಯ ಜನಾಂಗಗಳ ಮಿಶ್ರಸಂತತಿಯವರು ಎಂದು ಹೇಳಲಾಗುತ್ತದೆ. ಇಂಗ್ಲಿಷ್ ಇವರ ಮಾತೃಭಾಷೆ. ಇತ್ತೀಚಿಗೆ ಇತರೊಂದಿಗೆ ಮಾತನಾಡುವಾಗ ಕನ್ನಡ, ಇಂಗ್ಲೀಷ್ ಎರಡನ್ನೂ ಬಳಸುತ್ತಾರೆ. ರೋಮನ್ ಮತ್ತು ಕನ್ನಡ ಲಿಪಿಯನ್ನು ಬಳಸುತ್ತಾರೆ. ಆಂಗ್ಲೊ ಇಂಡಿಯನ್ನರು ಕರ್ನಾಟಕದಲ್ಲಿ ಹೆಚ್ಚಾಗಿ ಬೆಂಗಳೂರು, ಮೈಸೂರು, ಮಂಗಳೂರು, ಬೆಳಗಾವಿ ಹಾಗೂ ಹುಬ್ಬಳ್ಳಿ ನಗರಗಳಲ್ಲಿ ಕಂಡುಬರುತ್ತಾರೆ. ಸಾಮಾನ್ಯವಾಗಿ ಆಂಗ್ಲೋ ಇಂಡಿಯನ್ನರಲ್ಲಿ ಒಳಭಾಂದವ್ಯ ಮದುವೆಗಳು ಜರುತುತ್ತವೆ. ಚಿಕ್ಕಸೋದರಿಯ ಕಡೆಯ ಸಂಬಂಧಗಳಿಗೆ ವೈವಾಹಿಕ ಅವಕಾಶವಿದೆ. ಮದುವೆಗಳು ಒಪ್ಪಿಗೆ ಹಾಗೂ ಸಂಧಾನಗಳ ಮೂಲಕ ನಡೆಯುತ್ತವೆ. ವಿವಾಹ ವಿಚ್ಛೇದನೆಗೆ ನ್ಯಾಯಾಲಯದ ಮೊರೆಹೋಗುವ ಅವಕಾಶವಿದೆ. ಸಾಮಾನ್ಯವಾಗಿ ವಿಧವೆ, ವಿಧುರರ ಹಾಗೂ ವಿಚ್ಛೇದಿತರ ವಿವಾಹಕ್ಕೆ ಅವಕಾಶವಿದೆ.

ಇವರಲ್ಲಿ ಹೆಂಗಸರು ಕುಟುಂಬದ ಅರ್ಥಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಕುಟುಂಬಕ್ಕೆ ಸಂಬಂಧಿಸಿದ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಪ್ರಮುಖ ಪಾತ್ರವಹಿಸುತ್ತಾರೆ. ಇವರಲ್ಲಿ ಸ್ತ್ರೀಯರಿಗೆ ಹೆಚ್ಚಿನ ಸ್ಥಾನಮಾನಗಳಿವೆ. ನಾಮಕರಣ, ದೀಕ್ಷಾಸ್ನಾನಗಳನ್ನು ಮಗು ಹುಟ್ಟಿದ ನಲವತ್ತನೇ ದಿನದಂದು ಮಾಡುತ್ತಾರೆ. ಮದುವೆಯು ಸುಗಮವಾಗಿ ಆಗಲಿ ಎಂದು ನಿಶ್ಚಿತಾರ್ಥ ಕಾರ್ಯವನ್ನು ಮಾಡಲಾಗುತ್ತದೆ. ಮದುವೆಯ ಕಾಯ್ಯಗಳಲ್ಲಿ ಪುಣ್ಯಸ್ನಾನ, ಚರ್ಚಿನಲ್ಲಿ ನೊಂದಾಯಿಸುವುದು, ಪುಣ್ಯತೀರ್ಥ ಪ್ರೋಕ್ಷಣೆ ಹಾಗೂ ಉಂಗುರಗಳನ್ನು ಬದಲಾಯಿಸಿಕೊಳ್ಳುವುದು ಸೇರಿವೆ. ಮದುವೆಯು ಚರ್ಚ್‌ನಲ್ಲಿ ನಡೆಯುತ್ತದೆ. ಸ್ವಾತಂತ್ರ್ಯಪೂರ್ವದಲ್ಲಿ ಇವರು ಆಡಳಿತದಲ್ಲಿ ಪ್ರಮುಖ ಹುದ್ದೆಗಳನ್ನು ಪಡೆದಿದ್ದರು. ಈಗ ಇವರು ಶಿಕ್ಷಕರಾಗಿ, ರೈಲ್ವೇ ನೌಕರರಾಗಿ, ಖಾಸಗಿ ಹಾಗೂ ಸರ್ಕಾರಿ ಸೇವೆಗಳಲ್ಲಿ ಇದ್ದಾರೆ. “ಆಲ್ ಇಂಡಿಯ ಆಂಗ್ಲೋ ಇಂಡಿಯನ್ ಅಸೋಸಿಯೇಷನ್”ಎಂಬ ಸಂಘಟನೆಯು ಇವರ ಅಭಿವೃದ್ಧಿಗಾಗಿ ಶ್ರಮಿಸುತ್ತದೆ. ಇವರಲ್ಲಿ ಬಹುಪಾಲು ಜನ ರೋಮನ್ ಕ್ಯಾಥೋಲಿಕ್‌ರು. ಇವರನ್ನು ಅಲ್ಪಸಂಖ್ಯಾತರು ಎಂದು ಪರಿಗಣಿಸಿ ಲೋಕಸಭೆಗೆ ನಾಮಕರಣವನ್ನು ಮಾಡಲಾತುತದೆ.

ನೋಡಿ:

Abel, Evelyn., 1988. The Anglo-Indian Community: Survival in India, Chanakya Publications, Delhi.

Anthony, Frank., 1969. Britain’s Betrayal in India: The Story of the Anglo-Indian Community, Allied Publishers, Bombay.

Gaikwad, V.R., 1967. The Anglo-Indians: A Study in the Problems and Process Involved in Emotional and Cultural Integration: Asia Publishing House, Bombay.

Gist, Noel Pitts and R.D. Wright., 1993. Marginality and Identity : Auglo-Indians as a Racially Mixed Minority in India,  Brill Publishers, Leiden.

Grimshaw, Allen D., 1958-1989. “The Anglo-Indian Community; The Intergration of a Marginal Group’, Journal of Asian Studies 18, pp.22-40.

Gupta, S.K., 1968. Marriage among the Anglo, Indians : Ethnographic and Folk Culture Society, Lucknow

Maher, Reiginal., 1962. Today’s’ Auglo-Indians, Swallow Press, Calcutta.

Naidis, Mark, 1963. ‘British Attitude Toward The Anglo-Indians’ South Atlantic Quaterly  62, pp: 40-22.

Sarakar, S.S., B.N.Das & K.K.Agarwal., 1953. ‘Anglo-Indians of Calcutta’, Man in India, Vol.33.