ದಿಯ ಕರ್ನಾಟಕದಲ್ಲಿ ಅತ್ಯಂತ ಹಿಂದುಳಿದ ಒಂದು ಸಮುದಾಯ. ಇವರನ್ನು ಆದಿಯನ್ ಅಥವಾ ಆದಿಯಾರ್ ಎಂದು ಕರೆಯುತ್ತಾರೆ. ಸೇವೆಮಾಡುವವರನ್ನು ಆದಿಯರು ಎಂದು ಹೇಳಲಾಗುತ್ತದೆ. ಇವರು ಕೇರಳದಿಂದ ವಲಸೆ ಬಂದು ಕೊಡಗಿನಲ್ಲಿ ವಾಸಿಸಿದ್ದಾರೆ. ಮನೆಯಲ್ಲಿ ಮಲೆಯಾಳಂ ಹಾಗೂ ಕೊಡಗು ಭಾಷೆಯನ್ನು ಮಾತನಾಡುತ್ತಾರೆ. ಇವರಲ್ಲಿ ಸ್ತ್ರೀ ಮೂಲದ ವಿವಾಹದ ಕುಲಗಳಿವೆ. ಅವೆಂದರೆ ಪಾಪಿನರ, ಕುಟ್ಟೀರ, ಚೋರಕದೀರ, ಪಿಟ್ಟಕಾದಿರ, ಬಿಲ್ಲಿಯಾರ, ಬಡಕ್ಕರಿ, ನೆರಿಪುದಿರ ಇತ್ಯಾದಿ. ಇವರಲ್ಲಿ ಒಳಬಾಂಧವ್ಯ ವಿವಾಹ ಸರ್ವೇಸಾಮಾನ್ಯವಾದರೂ ತಮ್ಮದೇ ಜಾತಿಯಲ್ಲಿ ಹೊರಬಾಂಧವ್ಯ ವಿವಾಹಗಳು ಜರುಗುತ್ತವೆ. ತಾಯಿಯ ಸಹೋದರನ ಮಗಳು ಅಥವಾ ತಂದೆಯ ಸಹೋದರಿಯ ಮಗಳ ಜೊತೆಗಿನ ಮದುವೆಯನ್ನು ಒಪ್ಪಿಕೊಳ್ಳಲಾಗುತ್ತದೆ.

ಆದಿಯರ ಮಹಿಳೆಯರು ಕುಟುಂಬದ ಆರ್ಥಿಕ ಚಟುವಟಿಕೆಗೆ ನೆರವಾಗುತ್ತಾರೆ. ಬಹಳಷ್ಟು ಜನರಿಗೆ ವ್ಯವಸಾಯದ ಭೂಮಿಯಿಲ್ಲ, ಬಹುಮಂದಿ ಕೃಷಿ ಕಾರ್ಮಿಕರಾಗಿದ್ದಾರೆ. ಬುಟ್ಟಿಗಳನ್ನು ಹೆಣೆಯುವುದು ಹಾಗೂ ಹಬ್ಬ ಹರಿದಿನಗಳಲ್ಲಿ ಸಂಗೀತ ವಾದ್ಯಗಳನ್ನು ಬಾರಿಸುವುದು ಇವರ ಸಾಂಪ್ರದಾಯಿಕ ವೃತ್ತಿಗಳಾಗಿವೆ. ಇವರು ಹಿಂದೂ ಧರ್ಮವನ್ನು ಅನುಸರಿಸುತ್ತಾರೆ. ಪ್ರಸನ್ನ ಮೂರ್ತಿ, ಭಗವತಿಯಂತಹ ಮನೆ ದೇವರುಗಳ ಜೊತೆಗೆ ಗ್ರಾಮ ದೇವತೆಗಳನ್ನು ಹಾಗೂ ಭೂತಗಳನ್ನು ಇವರು ಆರಾಧಿಸುತ್ತಾರೆ. ಬ್ರಾಹ್ಮಣರು ಇವರ ಕೆಲವು ಧಾರ್ಮಿಕ ಕಾರ್ಯಗಳನ್ನು ನೆರವೇರಿಸುತ್ತಾರೆ. ಇವರಲ್ಲಿ ಮಹಿಳೆಯರ ಶಿಕ್ಷಣಕ್ಕೆ ಹೆಚ್ಚಿನ ಮಹತ್ವವಿಲ್ಲ. ಆಧುನಿಕ ಸಂಸ್ಥೆಗಳ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ಅತ್ಯಂತ ಹಿಂದುಳಿದಿದ್ದಾರೆ. ಇವರ ಸಾಮಾಜಿಕ, ಆರ್ಥಿಕ, ರಾಜಕೀಯ ಹಾಗೂ ಶೈಕ್ಷಣಿಕ ಪರಿಸ್ಥಿತಿ ಸುಧಾರಣೆಯಾಗುವ ಆದ್ಯತೆ ಇದೆ.

ನೋಡಿ:

Moffatt, M., 1979. An untouchable Community in South India  Princeton University Press, Princeton

Bhanu, B.A., 1969. ‘Adiyan’ In : Encylopaedia of Dravidian Tribes,  T.Madhava Menon (ed.) Vol.I & II : DLA Publications, Thiruvananthapuram.