ರಿ ಕರ್ನಾಟಕಕ್ಕೆ ವಲಸೆ ಬಂದ ಒಂದು ಪಂಗಡ. ಇವರು ಸುಮಾರು ನಾಲ್ಕುನೂರು ವರ್ಷಗಳ ಹಿಂದೆ ಕೇರಳದಿಂದ ವಲಸೆ ಬಂದದ್ದನ್ನು ನೆನಪಿಸಿಕೊಳ್ಳುತ್ತಾರೆ. ಇವರನ್ನು ಕೇರಳದಿಂದ  ‘ಮುಲ್ಕುನಾಡು’ ಎಂಬ ಪ್ರದೇಶದಲ್ಲಿ ಅರಮನೆಯನ್ನು ಕಟ್ಟಲು ಕರೆತರಲಾಯಿತು. ಈಗ ಇವರು ಕೊಡಗು ಜಿಲ್ಲೆಯಲ್ಲಿ ಹಂಚಿಹೋಗಿದ್ದಾರೆ. ಇವರು ದ್ರಾವಿಡ ಭಾಷೆಗಳಲ್ಲಿ ಒಂದಾದ ಕೊಡವ ಭಾಷೆ ಮಾತನಾಡುತ್ತಾರೆ. ಇವರು ಕನ್ನಡದಲ್ಲಿ ಮಾತನಾಡಿ, ಕನ್ನಡ ಲಿಪಿಯನ್ನು ಬಳಸುತ್ತಾರೆ. ಮದುವೆಯ ಸಂದರ್ಭಗಳನ್ನು ನಿರ್ದೇಶಿಸಲು ಇವರಲ್ಲಿ ಉಪಜಾತಿ ಕುಲಗಳಿವೆ. ತಾಯಿಯ ಸಹೋದರನ ಮಗಳ ಜೊತೆ ಮತ್ತು ತಂದೆಯ ಸಹೋದರಿ ಮಗಳ ಜೊತೆಯ ಮದುವೆಗಳು ಜರುಗುತ್ತವೆ. ವಿಧವೆ/ವಿಧುರರು ಹಾಗೂ ವಿವಾಹ ವಿಚ್ಛೇದಿತರು ಕೂಡಿಕೆಯಾಗಲು ಅವಕಾಶವಿದೆ. ಕೊಡಗಿನ ಇತರೆ ಸಮುದಾಯಗಳಿರುವಂತೆ ಇವರಿಗೂ ಸಹ ಐನ್‌ಮನೆಗಳಿವೆ. ‘ಐನ್‌ಮನೆ’ಯೆಂದರೆ ಶತಮಾನಗಳಷ್ಟು ಹಳೆಯ ಅವಿಭಕ್ತ ಕುಟುಂಬ. ಇವರಿಗೆ ಯಾರಿಗೂ ಪರಭಾರೆ ಮಾಡಲಾಗದ ‘

ಜಮ್ಮಾ’ಭೂಮಿ ಇದೆ. ಇದರಲ್ಲಿಯೂ ಕಾರಣನನ್ನು ಪೂಜಿಸುವ ಪದ್ಧತಿ ಇದೆ. ‘ಕಾರಣ’ ಎಂದರೆ ಕುಟುಂಬದ ಮೂಲ ಪುರುಷ. ಪಿತೃಪ್ರಧಾನ ವ್ಯವಸ್ಥೆಯ ರೀತಿಯಲ್ಲಿ ಹಿರಿಯಮಗ ತಂದೆಯ ನಂತರ ಮನೆಯ ವಾರಸುದಾರರಾಗುವುದು ನಿಯಮ. ಮಗು ಹುಟ್ಟಿದ ಹನ್ನೆರಡನೇ ದಿನಕ್ಕೆ ನಾಮಕರಣ ಮಾಡಲಾಗುತ್ತದೆ. ಮದುವೆಯ ಕ್ರಿಯಾವಿಧಿಯಲ್ಲಿ ಮದುಮಗ ಬಾಳೆಗಿಡವನ್ನು ಕತ್ತರಿಸುವುದು, ಎರಡೂ ಕಡೆಯ ಪೋಷಕರು ಪರಸ್ಪರ ಬಾಯಲ್ಲಿ ಹಾಲು ಸುರಿಯುವುದು ಇತ್ಯಾದಿ ಇರುತ್ತವೆ. ನವ ದಂಪತಿಗಳು ಕಿಂಡಿಯಂತಹ ಪಾತ್ರೆಯ ಮೂಲಕ ಸಂಬಂಧಿಗಳಿಂದ, ಹಿರಿಯರಿಂದ ಆಶೀರ್ವಾ ಪಡೆಯುತ್ತಾರೆ. ಇವರ ಸಾಂಪ್ರದಾಯಿಕ ವೃತ್ತಿಗಳೆಂದರೆ ಮರಗೆಲಸ, ಚಿನ್ನ ಆಭರಣ ಕೆಲಸ, ಕೆತ್ತನೆ ಕೆಲಸ. ಹೆಚ್ಚಿನವರು ವ್ಯವಸಾಯ ಮಾಡುತ್ತಾರೆ. ಭೂರಹಿತರು ದಿನಗೂಲಿಗಳಾಗಿ ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ಪೊಹಗಾವತಿ ಕಾವೇರಿ ಹಾಗೂ ಇಗ್ಗುತಪ್ಪರನ್ನು ಪೂಜಿಸುತ್ತಾರೆ. ಆಧುನಿಕ ಶಿ‌ಕ್ಷಣ, ವೈದ್ಯಕೀಯ ಪದ್ಧತಿ ಹಾಗೂ ಕುಟುಂಬ ಯೋಜನೆಯ ಬಗ್ಗೆ ಆಸಕ್ತಿಯುಳ್ಳವರಾಗಿದ್ದಾರೆ. ಇವರ ರಾಜಕೀಯ, ಆರ್ಥಿಕ, ಶೈಕ್ಷಣಿಕ ಪರಿಸ್ಥಿತಿ ಸುಧಾರಣೆಯಾಗಬೇಕಾಗಿದೆ.

ನೋಡಿ:

ವಿಜಯ. ಡಿ.ಪಿ. ೧೯೯೩. ಆಧುನಿಕ ಕೊಡಗು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

Srinivas, M.N., 1965. Religion and society Among the Coorgs of South India,  ASia Publishing House (Reprint 1952), London