ಣಿಯಾರನ್ನು, ಕಣಿಯನ್, ಕಣಿಸನ್, ಕನಿಯ ಎಂದೂ ಕರೆಯುತ್ತಾರೆ. ಹಿಂದೆ ಇವರು ಮಲಬಾರನ ನಿವಾಸಿಗಳಾಗಿದ್ದರು. ಈಗ ಬೆಂಗಳೂರು, ಮೈಸೂರು, ಮಂಡ್ಯ,  ಹಾಸನ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಾಗಿ ನೆಲೆಸಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ ಈ ಸಮುದಾಯದವರನ್ನು ಹಿಂದುಳಿದ ಪಂಗಡ ಎಂದು ಪರಿಗಣಿಸಿದ್ದಾರೆ. ಮೊದಲಿನ ಹೊರಬಾಂಧವ್ಯವದ ಬಳ್ಳಿಗಳು ಈಗ ಇವರಲ್ಲಿ ಉಳಿದಿಲ್ಲ. ಮದುವೆಗಳು ಸೋದರ ಸಂಬಂದಿಗಳಲ್ಲಿ ಹೆಚ್ಚು ನಡೆಯುತ್ತವೆ. ಕಣಿಯರ ಹೆಂಗಸರು ಕುಟುಂಬದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಶವವನ್ನು ಹೂಳಿ ಪ್ರತಿವರ್ಷ ಹಿರಿಯರ ಪೂಜೆಯನ್ನು ಮಾಡುತ್ತಾರೆ. ಕಣಿ ಹೇಳುವುದು, ಗಿಡಮೂಲಿಕೆಗಳಿಂದ ಔಷಧಿ ತಯಾರಿಸುವುದು ಇವರ ಸಾಂಪ್ರದಾಯಿಕ ವೃತ್ತಿಗಳು.

ಸಾಂಪ್ರದಾಯಿಕವಾಗಿ ಈ ಸಮುದಾಯದ ಜನರು ಅಲೆಮಾರಿಗಳು. ಇವರು ಊರಿಂದ ಊರಿಗೆ ಹೋಗಿ ಕಣಿ ಹೇಳುತ್ತಿದ್ದರು. ಆದರೆ ಇತ್ತೀಚಿನನ ದಿನಗಳಲ್ಲಿ ಇವರು ಕೆಲವು ಹಳ್ಳಿಗಳಲ್ಲಿ ನೆಲೆ ನಿಂತಿರುವುದು ಕಂಡುಬರುತ್ತದೆ. ಇವರಲ್ಲಿ ಕೆಲವರು ಕೃಷಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. “ಕಣಿಯರ ಸಂಘ” ಮತ್ತು “ಕಣಿಯರ ಸೇವಾ ಸಮಾಜ” ಸಂಘಟನೆಗಳು ಇವೆ. ಈ ಸಂಘಟನೆಗಳು ಸಮುದಾಯದ ಅಭಿವೃದ್ಧಿಗೆ ಪ್ರಯತ್ನಿಸುತ್ತಿವೆ. ಸಾಮಾಜಿಕ ಸಂಪರ್ಕವನ್ನು ಒಕ್ಕಲಿಗ ಹಾಗೂ ಲಿಂಗಾಯತರೊಂದಿಗೆ ಹೆಚ್ಚಾಗಿ ಹೊಂದಿದ್ದಾರೆ. ಆಧುನಿಕ ಶಿಕ್ಷಣ ಪದ್ಧತಿ, ಇತರ ಅಭಿವೃದ್ಧಿ ಯೋಜನೆಗಳನ್ನು ಇವರು ಪಡೆದುಕೊಳ್ಳುತ್ತಿದ್ದಾರೆ. ಇವರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪರಿಸ್ಥಿತಿ ಸುಧಾರಣೆಯಾಗಬೇಕಾಗಿದೆ.

ನೋಡಿ:

Gnanmabm K., 1954. ‘The Kanikkar of Travancore- Their Religion and Magical Practices’, Bulletin of The Department of Anthropology III, 1:- 22

Halbar, B.G., 1982. ‘Kannada Intellectuals and Social Change in Karnataka’, In: South Asain Intellectuals and Social change, Yogendra K.Malikm (ed.), Heritage Publishers, New Delhi

Nag, M.K., 1954. ‘Family Structure of the Kanikkars and Uralis of Travancore’, Bulletion of the Department of Anthropology

Sen Gupta, P.N. & S.K. Biswas., 1956. ‘Studies Andhra Diet and Nutritional Status of The Kanikkar and Urali Tribes of Travancore’, Bullentin of the Department of Anthropology