ಮ್ಮ ಸಮುದಾಯದವರು ತಮ್ಮ ಹೆಸರಿನ ಜೊತೆಗೆ ನಾಯ್ಡು, ರೆಡ್ಡಿ, ಗೌಡ ಮುಂತಾದ ಹೆಸರುಗಳನ್ನು ಸೇರಿಸಿಕೊಳ್ಳುತ್ತಾರೆ. ಇವರು ಆಂಧ್ರದಿಂದ ವಲಸೆ ಬಂದು ಬಳ್ಳಾರಿ, ಚಿತ್ರದುರ್ಗ, ತುಮಕೂರು, ಗುಲ್ಬರ್ಗಾ, ರಾಯಚೂರು, ಕೋಲಾರ ಹಾಗೂ ಬೆಂಗಳೂರು ಜಿಲ್ಲೆಗಳಲ್ಲಿ ಹೆಚ್ಚಾಗಿ ನೆಲೆಸಿದ್ದಾರೆ. ಆಂಧ್ರಪ್ರದೇಶದಲ್ಲಿ ಇವರು ಹೆಚ್ಚು ಭೂಹಿಡುವಳಿ ಹೊಂದಿದವರಾಗಿದ್ದಾರೆ. ಕಮ್ಮ ಸಮುದಾಯದಲ್ಲಿ ಹೊರಬಾಂಧವ್ಯದ ಬೆಡಗುಗಳಿವೆ – ಮಲ್ಲೇಲ, ಚೆನಿ, ಪಾಯಿ ಗಾಲಿ, ಇತ್ಯಾದಕ. ಮದುವೆಯ ಸೋದರ ಸಂಬಂಧಗಳಲ್ಲಿ ಹೆಚ್ಚಾಗಿ ನಡೆಯುತ್ತವೆ. ವಿಚ್ಛೇದನೆ ಹಾಗೂ ಮರುವಿವಾಹಗಳಿಗೆ ಅವಕಾಶವಿದೆ. ಹಿರಿಯ ಮಗ ತಂದೆ ನಂತರ ಕುಟುಂಬದ ವಾರಸುದಾರನಾಗುತ್ತಾನೆ. ಜನನ ಸೂತಕವು ಹನ್ನೊಂದು ದಿನಗಳವರೆಗೆ ಇರುತ್ತದೆ. ಋತುಮತಿಯಾದಾಗ ಐದು ದಿನಗಳ ಕಾಲ ಸೂತಕ ಆಚರಿಸುತ್ತಾರೆ. ಶವವನ್ನು ಹೂಳುತ್ತಾರೆ ಅಥವಾ ಸುಡುತ್ತಾರೆ. ಸಾವಿನ ಸೂತಕ ಹನ್ನೊಂದು ದಿನಗಳವರೆಗೆ ಇರುತ್ತದೆ.

ಸಾಂಪ್ರದಾಯಿಕವಾಗಿ ಇವರು ಕೃಷಿಕರು ವ್ಯಾಪಾರ, ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ನೌಕರಿ ಇವರ ಇತರೆ ವೃತ್ತಿಗಳು. ಬ್ರಾಹ್ಮಣರು ಇವರ ಧಾರ್ಮಿಕ ಕಾರ್ಯಗಳನ್ನು ನಡೆಸುತ್ತಾರೆ. ಇವರು ಆಂಧ್ರಪ್ರದೇಶದ ರಾಜಕೀಯದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಇದೇ ರೀತಿ ಕರ್ನಾಟಕದಲ್ಲಿ ಇವರು ವಾಸಿಸುತ್ತಿರುವ ಪ್ರದೇಶಗಳಲ್ಲಿ ರಾಜಕೀಯ ಪ್ರಾಬಲ್ಯವನ್ನು ಹೊಂದಿದ್ದಾರೆ. ಆಧುನಿಕ ಸಾಮಾಜಿಕ ಸಂಸ್ಥೆಗಳ ಪ್ರಯೋಜನಗಳನ್ನು ಇವರು ಪಡೆದುಕೊಂಡಿದ್ದಾರೆ.