ಕುಣಬಿಯವರನ್ನು ಕುಂಬಿ, ಕುನಲಿ ಎಂದೂ ಸಹ ಕರೆಯುತ್ತಾರೆ. ಇವರಲ್ಲಿ ಎರಡು ಉಪಗುಂಪುಗಳಿವೆ. ಅವೆಂದರೆ ಅತ್ತೆ ಕುಂಬಿ ಹಾಗೂ ಅಟ್ಟೆ ಕುಂಬಿ. ಇವರ ಸಮಾನಾರ್ಥ ಹೆಸರುಗಳೆಂದರೆ ಅತ್ತೆ ವೊಕ್ಕಲ್ ಮತ್ತು ಅ‌ಟ್ಟೆ ವೊಜಲ್ ಅಟ್ಟೆ ಎಂದರೆ ಇವರು ಬಳಸುವ ಹಲ್ಲುಗಳಲ ಥರವಿರುವ ಒಂದು ಕೋಲು. ಕೆಲವರ ಪ್ರಕಾರ ಎಂಟು (ಅಷ್ಟ ಅಟ್ಟೆ). ಅಟ್ಟೆ ಕುಣ್ಬಿಯರಿಗೆ ತಮ್ಮದೇ ಆದ ‘ಕುಣ್ಬಿ’ ಭಾಷೆಯಿದೆ, ಇತರೆ ಕುಣಬಿಯರು ಮರಾಠಿ ಮಾತನಾಡುತ್ತಾರೆ. ಇವರು ಕನ್ನಡವನ್ನು ಮಾತನಾಡಿ, ಕನ್ನಡ ಲಿಪಿಯನ್ನು  ಬಳಸುತ್ತಾರೆ.

ಕುಣಬಿ ಪುರುಷ

ಕುಣಬಿ ಪುರುಷ

ಕುಡುಬಿ ಮತ್ತು ಕುಣಬಿಯರ ಮೂಲ ಒಂದೆ ಆಗಿರುತ್ತದೆ. ಆದರೆ ಕುಡಬಿಯರು ಕರಾವಳಿ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ಆದರೆ ಕುಣಬಿಯರು ಘಟ್ಟ ಪ್ರದೇಶದ ಮೇಲೆ ಮಲೆನಾಡು ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತಾರೆ. ಇವರುಗಳ ಆಚರಣೆಗಳಲ್ಲಿ ಸ್ವಲ್ಪ  ಮಟ್ಟಿನ ವ್ಯತ್ಯಾಸವನ್ನು ಗುರುತಿಸಬಹುದು. ಅಟ್ಟೆ ಕುಣಬಿ ಉಪಗುಂಪಿನವರಲ್ಲಿ ‘ಪ್ರಾಣಿಯ ಜೊತೆಗಿರುವ ಸಂಬಂಧದ ಆಧಾರದ ಮೇಲೆ ಇವರ ಬಳ್ಳಿಗಳ ಹೆಸರುಗಳನ್ನು ಇಡಲಾಗಿದೆ. ಅವೆಂದರೆ ಹುಲಿ, ಮೊಲ, ಎಮ್ಮೆ ಇತ್ಯಾದಿ. ಸಮುದಾಯದ ಮಟ್ಟದಲ್ಲಿ ಒಳಬಾಂಧವ್ಯ ವಿವಾಹ. ಬಳ್ಳಿಗಳ ಮಟ್ಟದಲ್ಲಿ ಹೊರಬಾಂಧವ್ಯ ವಿವಾಹ ಪದ್ಧತಿ ಅನುಸರಿಸುತ್ತಾರೆ. ಇತರೆ ಗುಂಪಿನವರು ತಮ್ಮ ಬಳ್ಳಿಗಳನ್ನು ನೆನಪಿಸಿಕೊಂಡಿಲ್ಲ. ಸೋದರಿ ಸಂಬಂಧದ ಮದುವೆಗಳು ಇವರಲ್ಲಿ ಸಾಧ್ಯವಿದೆ. ವಿವಾಹ ವಿಚ್ಛೇದನೆ ಹಾಗೂ ಮರುವಿವಾಹಗಳಿಗೆ ಅವಕಾಶವಿದೆ. ಅಟ್ಟೆಕುಣಬಿಯವರಲ್ಲಿ ಸಾಂಪ್ರದಾಯಿಕ ಜಾತಿಯ ಸಂಘಟೆನೆಯಿದೆ. ಇವರಿಗೆ ಶಿಕ್ಷಣದ ಬಗ್ಗೆ ಅಷ್ಟೊಂದು ಆಕಸ್ತಿ ಇಲ್ಲ. ಸಾಂಪ್ರದಾಯಿಕ ವೈದ್ಯಕೀಯ ಪದ್ಧತಿಯ ಬಗ್ಗೆ ಇವರಿಗೆ ಒಲವಿದೆ. ಇವರು ಆಧುನಿಕ ಸಾಮಾಜಿಕ ವ್ಯವಸ್ಥೆ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪಡೆದುಕೊಳ್ಳುವಲ್ಲಿ ಅತ್ಯಂತ ಹಿಂದುಳಿದಿದ್ದಾರೆ. ಇವರ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪರಿಸ್ಥಿತಿ ಸುಧಾರಣೆಯಾಗಬೇಕಾಗಿದೆ.