ಕುರುವನ್, ಸಮುದಾಯವನ್ನು ಮಂಗನಾಡಿಸವವರು, ಅದೆಕಾರ್, ಕಾಲಕೊರನ್ ಎಂದೂ ಕರೆಯುತ್ತಾರೆ. ಅವರು ತಮಿಳುನಾಡಿನಿಂದ ವಲಸೆ ಬಂದವರು. ಕರ್ನಾಟಕ ಎಲ್ಲಾ ಪ್ರದೇಶಗಳಲ್ಲಿ ಅತ್ಯಂತ ವಿರಳವಾಗಿ ಕಂಡುಬರುವ ಒಂದು ಸಮುದಾಯವಾಗಿದೆ. ಮನೆಯಲ್ಲಿ ತಮಿಳನ ಒಂದು ಉಪಭಾಷೆಯನ್ನು ಮಾತನಾಡಿ, ಇತರರೊಂದಿಗೆ ತುಳು ಮತ್ತು ಕನ್ನಡ ಭಾಷೆಗಳಲ್ಲಿ ಮಾತನಾಡುತ್ತಾರೆ. ಇವರನ್ನು ಪುರುಷ ಮೂಲದ ಮೂರು ಹೊರಬಾಂಧವ್ಯದ ಬಳ್ಳಿಗಳಲ್ಲಿ ಗುರುತಿಸಲಾಗುತ್ತದೆ ಕವಾಡಿ, ಮಣಿಪುರೆ ಹಾಗೂ ಮಾಲ್ತೆ. ಇವರ ಸಾಂಪ್ರದಾಯಿಕ ವೃತ್ತಿಯೆಂದರೆ ಮಂಗನನ್ನು ಆಡಿಸುವುದು, ಹಾವಾಡಿಸುವುದು, ಭವಿಷ್ಯ ಹೇಳುವುದು ಮತ್ತು ಭಿಕ್ಷೆ ಬೇಡುವುದು. ಇವರಿಗೆ ಈಶ್ವರ, ಪಾರ್ವತಿ ಹಾಗೂ ಆದಿಶೇಷ ಆರಾಧ್ಯ ದೈವಗಳು. ಇವರಲ್ಲಿ ಕೆಲವರು ’ರಾಹು’ವನ್ನೂ ದೇವರೆಂದು ಪೂಜಿಸುತ್ತಾರೆ. ಆಧುನಿಕ ವಿದ್ಯಾಭ್ಯಾಸದ ಬಗ್ಗೆ ಇವರಿಗೆ ಅಷ್ಟಾಗಿ ಆಸಕ್ತಿಯಿಲ್ಲ. ಇವರು ಆಧುನಿಕತೆಯ ಯಾವುದೇ ಪ್ರಯೋಜನವನ್ನು ಪಡೆದುಕೊಳ್ಳದೆ ಅತ್ಯಂತ ಹಿಂದುಳಿದವರಾಗಿದ್ದಾರೆ.