ಕೊಡವರ ಮೂಲದ ಬಗ್ಗೆ ಬಿ.ಎಲ್. ರೈಸ್ ಅವರು ಹೀಗೆ ಅಭಿಪ್ರಾಯಪಡುತ್ತಾರೆ. “ಭಾರತದಲ್ಲಿ ಕಂಡು ಬರುವ ಸಿಂಧೂದ್ರಾವಿಡ ಪಂಗಡಕ್ಕೆ ಸೇರಿದವರು. ಅವರಲ್ಲಿ ಕೆಲವರು ಇಂಡೋ ಆರ್ಯನ್, ಪಾಂಡವರ ವಂಶಸ್ಥರಾಗಿರಬಹುದು” ಇತ್ತೀಚೆಗೆ ಇವರ ಮೂಲದ ಬಗ್ಗೆ ಇರುವ ವಾದವೆಂದರೆ ಕೊಡವರು ಅರಬ್ ದೇಶದಿಂದ ಓಡಿಬಂದ ಕುರ್ದಿ ಸಮುದಾಯದವರೆಂದು, ಕೆಲವರು ಕೊಡವರು ದ್ರಾವಿಡರು ಎಂದು ವಾದಿಸುತ್ತಾರೆ.

ಇವರು ಕೊಡಗು ಜಿಲ್ಲೆಯಲ್ಲಿ ಹೆಚ್ಚಾಗಿ ಕಂಡು ಬಂದರೂ ಬೆಂಗಳೂರು ಮತ್ತು ಮೈಸೂರು ನಗರ ಪ್ರದೇಶಗಳಲ್ಲಿ ಇತ್ತೀಚೆಗೆ ಹೆಚ್ಚಾಗಿ ವಾಸಿಸು‌ತ್ತಿದ್ದಾರೆ. ಇವರ ಮಾತೃಭಾಷೆ ಕೊಡವ, ಜೊತೆಗೆ ಕನ್ನಡ  ಹಾಗೂ ಮಲಯಾಳಂ ಮಾತನಾಡಿ, ಕನ್ನಡ ಲಿಪಿಯನ್ನು ಬಳಸುತ್ತಾರೆ. ಕೊಡಗಿನಲ್ಲಿರುವ ಅನೇಕ ಮೂಲನಿವಾಸಿಗಳಿಗಿರುವಂತೆ ಕೂಡವರಿಗೂ ಐನ್‌ಮನೆಗಳಿವೆ. ‘ಐನ್ ಮನೆಯೆಂದರೆ ಅವಿಭಕ್ರ ಕುಟುಂಬ ಶತಮಾನಗಳ ಹಳೆಯ ಮನೆ’. ಇವರು ಕುಟುಂಬದ ಮೂಲ ಪುರುಷ ‘ಕಾರಣ’ನನ್ನು ಪೂಜಿಸುತ್ತಾರೆ. ಪ್ರತಿಯೊಂದು ಐನ್‌ಮನೆಗು ಒಬ್ಬ ಕಾರಣ ನಿರುತ್ತಾನೆ.

ಕೊಡವರಲ್ಲಿ ನಾಲ್ಕು ರೀತಿಯ ವಿವಾಹ ಪದ್ಧತಿಗಳಿವೆ. ಅವುಗಳೆಂದರೆ ಕನ್ನಿಮಂಗಲ, ಕೂಡಾವಳಿಮಂಗಲ, ಒಕ್ಕಪರಿಜೆ ಮತ್ತು ಮಕ್ಕಪರಿಜೆ. ಒಕ್ಕಪರಿಜೆಗೆ ಕುತ್ತಿಕ್‌ನಿಪ್ಪದ್  ಮತ್ತು ಮಕ್ಕಪರಿಜೆಗೆ ಪಚ್ಚಡರ್ ನಡಪದ್ ಎಂದು ಹೇಳುತ್ತಾರೆ. ಇವರಲ್ಲಿ ಕನ್ನಿಮಂಗಲ ವಿವಾಹ ಪದ್ಧತಿಯು ಸಾಮಾನ್ಯವಾಗಿ ಕೊಡಗಿನ ಎಲ್ಲಾ ಸಮುದಾಯಗಳಲ್ಲಿ ಕಂಡುಬರುವಂತಹ ರೀತಿಯಲ್ಲಿ ನಡೆಯುತ್ತದೆ. ಆದರೆ ಇವರಲ್ಲಿ ಕೂಡಾವಳಿಮಂಗಲ, ಒಕ್ಕಪರಿಜೆ ವಿಶೇಷ ರೀತಿಯ ವಿವಾಹ ಪದ್ಧತಿಗಳಾಗಿ ಕಂಡುಬರುತ್ತದೆ. ಕೂಡಾವಳಿ ವಿವಾಹ ಪದ್ಧತಿಯಲ್ಲಿ ಮೂರು ರೀತಿಗಳಿವೆ. ಒಂದನೆಯದು ಗಂಡು ಸತ್ತುಹೋದ ಮೇಲೆ ವಿಧವೆಯು ಸತ್ತ ಗಂಡನ ಸಹೋದರನನ್ನು ಮದುವೆಯಾಗಬಹುದು. ಎರಡನೆಯದು, ಬೇರೆ ಕುಟುಂಬದವರನ್ನು ಮದುವೆಯಾಗುವುದು. ಮೂರನೆಯದು, ಗಂಡ ತನ್ನ ಹೆಂಡತಿಯನ್ನು ಬಿಟ್ಟಾಗ ಆಕೆಯನ್ನು ಮತ್ತೊಬ್ಬನು ಮದುವೆಯಾಗುವುದು. ಒಕ್ಕಪರಿಜೆ ವಿವಾಹ ಪದ್ಧತಿಯನ್ನು ಕುತ್ತಿಕ್‌ನಿಪ್ಪದ್ ಎಂದು ಕರೆಯುತ್ತಾರೆ. ಈ ವಿವಾಹ ಪದ್ಧತಿಯಲ್ಲಿ ಒಂದು ಕುಟುಂಬದಲ್ಲಿ ಗಂಡು ಮಕ್ಕಳಿಲ್ಲದೆ, ಗಂಡು ಮಕ್ಕಳೆಲ್ಲ ಸತ್ತುಹೋಗಿ ಒಂದು ಹೆಣ್ಣು ಮಾತ್ರ ಇಡೀ ಮನೆತನಕ್ಕಾಗಿ ಉಳಿದಿದ್ದರೆ, ಆಕೆಯನ್ನು ಬೇರೆ ಮನೆಗೆ ಮದುವೆಮಾಡಿಕೊಡಲಾಗುವುದಿಲ್ಲ. ಇದರ ಪ್ರಕಾರ ಮದುವೆಯಾದ ಮೇಲೆ ಹೆಣ್ಣು ತನ್ನ ತಂದೆಯ ಮನೆಯಲ್ಲೆ ಉಳಿದುಕೊಳ್ಳುತ್ತಾರೆ. ಇವರಲ್ಲಿ ಕಂಡು ಬರುವ ಮತ್ತೊಂದು ವಿವಾಹ ಪದ್ಧತಿ ಎಂದರೆ ಮಕ್ಕಪರಿಜೆ. ಆದರೆ ಇತ್ತೀಚಿನ ದಿನಗಳಲ್ಲಿ ಇವರ ವಿವಾಹ ಪದ್ಧತಿಗಳಲ್ಲಿ ಹಾಗೂ ವಿವಾಹ ಶಾಸ್ತ್ರಗಳಲ್ಲಿ ಹಲವಾರು ಬದಲಾವಣೆಗಳು ಕಂಡುಬರುತ್ತಿವೆ. ಸೋದರಿ ಸಂಬಂಧ ಹಾಗೂ ಸತ್ತವನ ಸೋದರನ ಜೊತೆ ವಿವಾಹಗಳು ಚಾಲ್ತಿಯಲ್ಲಿವೆ. ಮದುವೆಗಳನ್ನು ಮಾತುಕತೆ ಹಾಗೂ ಸಂಧಾನದ ಮೂಲಕ ಮಾಡಲಾಗುತ್ತದೆ. ಆದರೆ ಪರಸ್ಪರ ಒಪ್ಪಿಗೆ ತರುವ ಪದ್ಧತಿಗಳಿಂದಲೂ ಮದುವೆಗಳು ನಡೆಯುತ್ತವೆ. ಪುರುಷ ಪ್ರಧಾನದ ಚಿಕ್ಕ ಕುಟುಂಬ ಮಾದರಿಗಳು ಇವರಲ್ಲಿ ಬಳಕೆಯಲ್ಲಿವೆ. ವಿವಾಹ ವಿಚ್ಛೇದನವನ್ನು ಸ್ತ್ರೀ, ಪುರುಷರಿಬ್ಬರು ಪಡೆಯಬಹುದು. ವಿಧವೆ, ವಿಧುರ ಹಾಗೂ ವಿಚ್ಛೇದಿತರು ಮರುಮದುವೆಯಾಗಬಹುದು. ಗಂಡು ಮಕ್ಕಳಿಗೆ ಪ್ರಾಧಾನ್ಯತೆ, ಹಿರಿಯ ಗಂಡು ಮಗ ತಂದೆಯ ನಂತರ ಮನೆಯ ವಾರಸುದಾರನಾಗುತ್ತಾನೆ. ಜನನ ಸೂತಕವು ಹನ್ನೆರಡು ದಿನಗಳವರೆಗೆ ಇರುತ್ತದೆ. ನಾಮಕರಣವನ್ನು ಹನ್ನೆರಡನೆ ದಿನದಿಂದ ಹದಿನಾರನೆ ದಿನದೊಳಗೆ ಮಾಡುತ್ತಾರೆ. ಶವವನ್ನು ಸುಡುವ ಹಾಗೂ ಹೂಳುವ ಪದ್ಧತಿಗಳಿವೆ.

ಕೊಡವರು

ಕೊಡವರು

ಇವರ ಸಾಂಪ್ರದಾಯಿಕ ವೃತ್ತಿಯೆಂದರೆ ವ್ಯವಸಾಯ. ಇವರಲ್ಲಿ ಹೆಚ್ಚು ಜನ ಈಗಲೂ ಭೂಮಿಯ ಮೇಲೆ ಅವಲಂಬಿತರಾಗಿದ್ದಾರೆ. ಇವರು ಕಾಫಿ, ಮೆಣಸು, ಲವಂಗ, ಕಿತ್ತಳೆ, ಏಲಕ್ಕಿ ಮುಂತಾದ ವಾಣಿಜ್ಯ ಬೆಳೆಯ ಕೃಷಿಯಲ್ಲಿ ಹೆಚ್ಚಾಗಿ ತೊಡಗಿದ್ದಾರೆ. ಇವರಲ್ಲಿ ಕೆಲವರು ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ನೌಕರಿಗಳಲ್ಲಿದ್ದಾರೆ. ಕೊಡವರು ಕಾವೇರಿ, ಶಿವ, ವಿಷ್ಣು, ರಾಮ, ಕೃಷ್ಣ, ಐಯ್ಯಪ್ಪ, ಸುಬ್ರಹ್ಮಣ್ಯ, ಮಂಜುನಾಥ ಮುಂತಾದ ದೇವತೆಗಳನ್ನು ಪೂಜಿಸುತ್ತಾರೆ. ತುಂಬಾ ಮುಖ್ಯವಾದ ಧಾರ್ಮಿಕ ಸಮಾರಂಭವೆಂದರೆ ಹಿರಿಯರ ಪೂಜೆ ‘ಕಾರಣ’. ವರ್ಷಕ್ಕೊಮ್ಮೆ, ಕೈಲ್ ಪೊದು ಅಥವಾ ಕೈಲ್ ಮೂರ್ತವನ್ನು ತಮ್ಮ ಆಯುಧ ಹಾಗೂ ಸಲಕರಣೆಗಳನ್ನು ಪೂಜಿಸುವ ಮೂಲಕ ಆಚರಿಸುತ್ತಾರೆ. ಹುತ್ತರಿ ಇವರಲ್ಲಿ ವಿಶೇಷ ಕೊಯ್ಲು ಹಬ್ಬ. ಆಧುನಿಕ ವಿದ್ಯಾಭ್ಯಾಸದ ಬಗ್ಗೆ ಒಲವಿದೆ, ಗಂಡು ಹಾಗೂ ಹೆಣ್ಣುಮಕ್ಕಳು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಕೆಲವರು ಸ್ವಯಂ-ಉದ್ಯೋಗವನ್ನು ಕಲ್ಪಿಸಿಕೊಂಡಿದ್ದಾರೆ. ಈ ಸಮುದಾಯದ ಜನರು ಆಧುನಿಕ ಸಾಮಾಜಿಕ ವ್ಯವಸ್ಥೆಯ ಎಲ್ಲಾ ಕ್ಷೇತ್ರಗಳಲ್ಲಿ ಕಂಡುಬರುತ್ತಿದ್ದಾರೆ. ಆಧುನಿಕ ಸಾಮಾಜಿಕ ಸಂಸ್ಥೆಗಳ ಬಗ್ಗೆ ಇವರಿಗೆ ಹೆಚ್ಚು ಆಕಸ್ತಿ ಇದೆ, ಈ ಸಂಸ್ಥೆಗಳ ಪ್ರಯೋಜನಗಳನ್ನು ವ್ಯವಸ್ಥಿತವಾಗಿ ಉಪಯೋಗಿಸಕೊಂಡು ಅಭಿವೃದ್ಧಿಯನ್ನು ಹೊಂದಿದ್ದಾರೆ. ಕೊಡಗಿನ ಇತರೆ ಸಮುದಾಯಗಳಿಗೆ ಹೋಲಿಸಿದ್ದರೆ ಆರ್ಥಿಕವಾಗಿ, ರಾಜಕೀಯವಾಗಿ, ಶೈಕ್ಷಣಿಕವಾಗಿ ಸ್ವಲ್ಪಮಟ್ಟಿಗೆ ಇವರು ಹೆಚ್ಚಿನ ಪ್ರಗತಿಯನ್ನು ಹೊಂದಿದ್ದಾರೆ.

ನೋಡಿ :

ಅಮೃತ ಸೋಮೇಶ್ವರ, ೧೯೮೨. ಕೊಡವರು, ಐ.ಬಿ.ಎಚ್.ಪಬ್ಲಿಕೇಷನ್, ಬೆಂಗಳೂರು.

ಗಣಪತಿ ಬಿ.ಡಿ., ೧೯೮೧. ಕೊಡವರ ಜೀವನ ಪ್ರಗತಿಗಳು, ಐ.ಬಿ.ಎಚ್. ಪಬ್ಲಿಕೇಷನ್, ಬೆಂಗಳೂರು

ರಾಮಾನುಜಂ ಪಿ.ಎಸ್., ೧೯೭೫. ಕೊಡವರು, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು.

Dutta Gupta Arabinda, 1978. ‘Occupational Mobility Among Some Castes in Ponnampet, A Coorg Village’, Bulletin of the Department of Anthropology. Vol.27.

Emeneau, Murray Barson, 1938. ‘Kinship and Marriage Among the Coorgs’, Jouranl of the Royal Asiatic Society of Bengal.  4 : 12-47

Ganesh, M.B., 1985. The kodava Mopillas : Their life and Culture, M.A. dissertation (unpublished), :University of Mysore, Mysore.

Holland, T.H., 1901. ‘The Coorgs and Yeruvans and Ethnological Contrast’, Journal of the Asiatic Society of Bengal 70(3), pp.5-98.

Iyer, L.K. Anantha Krishna, 1948. The Coorg Tribes and Castes, Garden Press, Madras.

Kalam, Mohammed Abdul, 1989. A Study of Family Among The Coorgs of South India,  Ph.D. Thesis : University of Madras, Madras

khan, C.G. Husain., 1977. ‘Okka The Basic Unit of Kodava Social Organization’, The Eastern Anthropologist Vol. 30, No.1 : 1

Pooncha, Veena, 1995. ‘Redefining Gender Relationships : The Impact of The Colonial State onthe Coorg/Kodava Norms of Marriage and Sexuality’, Contibutions to Indian Sociology,  29, 1 & 2, 3-64.

Richter, G., 1887. Ethnographic Compendium on The Castes and Tribes Found in The Province of Coorg, Morning Star Press, Banglore

Saheb, S.Y., Gulati, C.M.Raju, and M.Sirajuddin, 1981.

‘Ages at First Patetnity and Maternity in Kodava and Amma Kodava Population of Karnataka’,  Bulletion Department of Anthropology.  Vol 34.

Saheb, S.Y., edit, 1979. ‘PTC Taste Sensitivity in Kodava Population of Kodagu’, Bulletion of the Anthropological Survey of India, XX VIII (1&2) : 67-75

Saheb, S.Y., S.M.Sirajuddin, C.Mohan Raju, D.B. Sastry and R.K. Gulati (nd) ‘Consanguinity and its Effects on Fertility and Morality in Kodava and Amma Koddava populations of Kodagu district’, Indian Anthropologist.

Saheb, S.Y., R.K. Gulati, Mohan Raju, C., S.M. Sirajuddin and D.B. Sastry, 1981. ‘Demographic Structure of Kodava and Amma Kodava populations of Kodagu’, Journal of Social Reasearch

Saheb, S.Y., C.Mohan Raju, S.M. Sirajuddin, D.B. Sastryand R.K. Gulati, 1982. ‘Matrimonial Distance in Kodava and Amma Kodava populations of Kodagu’, Indian Journal of Physical Anthropology & Human Genetics Vol. 8 2&3 10-117

Saheb, S.Y., R.K. Gulati, S.M.Sirajuddin, C.M. Raju and D.B.Sastry, 1981. ‘Fertility Diffrenitals and Selection Intensiry among Kodava and Amma Kodava Populations of Kodagu, Karnataka’, Acta. Anthtopomise Genetica Sirajuddin, S.M., 1980. ‘Anthropometry of Amma Kodava’ (unpublisged Report) Anthropological Survey of India, Mysore.

Srinnivas, M.N, 1965. Religion and Society Among the Coorgs of South India, Asia Publishing House (Reprint  1952), London

Srinivas, M.N., 1944. The Coorgs : A Socio-Ethnic Study Ph.D. Thesis, Bombay University, Bombay.