ಕೊಲ್ಲರು ಸುಮಾರು ಒಂದು ಶತಮಾನದ ಹಿಂದೆ ಮಲಬಾರ್ ಪ್ರದೇಶದಿಂದ ಕರ್ನಾಟಕಕ್ಕೆ ವಲಸೆ ಬಂದರು. ‘ಕೊಲ್ಲ’ ಎಂದರೆ ಮಲಯಾಳಂನಲ್ಲಿ ಕಮ್ಮಾರ ಎಂದರ್ಥ. ಕಮ್ಮಾರಿಕ ಇವರ ಸಾಂಪ್ರದಾಯಿಕ ವೃತ್ತಿ ಎಂದು ಥರ್ಸ್ಟನ್ (೧೯೦೯) ಹೇಳುತ್ತಾರೆ. ಇವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತ್ಯಂತ ವಿರಳವಾಗಿ ಕಂಡುಬರುತ್ತಾರೆ. ಮಲಯಾಳಂ ಇವರ ಮಾತೃಭಾಷೆ, ತುಳು, ಕನ್ನಡ ಭಾಷೆಗಳನ್ನು ಇವರು ಮಾತನಾಡುತ್ತಾರೆ.

ಇವರಲ್ಲಿ ಮಾತೃ ಪ್ರಧಾನ ಬಳ್ಳಿಗಳು ಇವೆಯಾದರೂ, ಮನೆಯ ಹೆಸರುಗಳು ತಂದೆಯ ಮೂಲದಿಂದ ಬಂದಿರುವುದಾಗಿ ತಿಳಿಯುತ್ತದೆ. ಸಮುದಾಯದ ಹಂತದಲ್ಲಿ ಒಳ್ಳಬಾಂಧವ್ಯ ಹಾಗೂ ಬಳ್ಳಿಗಳಲ್ಲಿ ಹೊರ ಬಾಂಧವ್ಯ ವಿವಾಹ ಇವರಲ್ಲಿ ನಡೆಯುತ್ತದೆ. ಮದುವೆಯ ತಾಯಿಯ ಸಹೋದರನ ಮಗಳು ಅಥವಾ ತಂದೆಯ ಸಹೋದರಿಯ ಮಗಳ ಜೊತೆ ಸಾಧ್ಯವಿದೆ. ಏಕಪತ್ನಿತ್ವ/ಏಕಪತಿತ್ವ ಇದು ಮದವೆಯ ರೀತಿ. ವಯಸ್ಕ  ಮದುವೆಗಳು ಮಾತುಕತೆಯ ಮೂಲಕ ಏರ್ಪಡುತ್ತದೆ. ಸಮಾಜದ ಅನುಮತಿಯೊಂದಿಗೆ ವಿವಾಹ ವಿಚ್ಛೇದನ ಸಾಧ್ಯವಿದೆ. ವಿಧವೆ, ವಿಧುರ, ವಿಚ್ಛೇದಿತರಿಗೆ ವಿವಾಹಗಳಿಗೆ ಅವಕಾಶವಿದೆ. ತಂದೆಯ ನಂತರ ಹಿರಿಯ ಮಗ ಮನೆಯ ವಾರಸುದಾರನಾಗುತ್ತಾನೆ. ಹೆರಿಗೆಯ ನಂತರದ ಸೂತಕವು ಹದಿನೈದು ದಿನಗಳವರೆಗೆ ಇರುತ್ತದೆ. ಶವವನ್ನು ಸುಡುತ್ತಾರೆ, ಸಾವಿನ ಸೂತಕವು ಹತ್ತು ದಿನಗಳವರೆಗೆ ಇರುತ್ತದೆ.

‘ಕಮ್ಮಾರಿಕೆ’ ಇವರ ಸಾಂಪ್ರದಾಯಿಕ ವೃತ್ತಿ. ಸಮುದಾಯದಲ್ಲಿನ ಜಗಳಗಳನ್ನು ಹಿರಿಯರು ಮಧ್ಯಸ್ಥಿಕೆ ವಹಿಸಿ ಬಗೆಹರಿಸುತ್ತಾರೆ. ಇತ್ತೀಚೆಗೆ ಶಿಕ್ಷಣದ ಬಗ್ಗೆ ಹೆಚ್ಚಿನ ಆಸಕ್ತಿ ಇದೆ. ಸಾರ್ವಜನಿಕ ಸೌಲಭ್ಯಗಳು ಮತ್ತು ಸರ್ಕಾರಿ ಅಭಿವೃದ್ಧಿ ಕಾರ್ಯಕ್ರಮಗಳು ಸ್ವಲ್ಪಮಟ್ಟಿಗೆ ಇವರಿಗೆ ದೊರಕುತ್ತಿವೆ. ಇವರ ಸಾಮಾಜಿಕ, ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಬೇಕಾದ ಅಗತ್ಯವಿದೆ.