ಬಿತರು, ಉತ್ತರಕನ್ನಡ ಜಿಲ್ಲೆಯ ಕುಮಟ, ಹೊನ್ನಾವರ, ಅಂಕೋಲ ಮತ್ತು ಕಾರವಾರ ತಾಲೂಕುಗಳಲ್ಲಿ ವಾಸಿಸುವರು. ಇವರು ಗೋವಾದಿಂದ ವಲಸೆ ಬಂದ ಮೀನುಗಾರು. ಸಮುದಾಯದ ಒಳಗೆ ಕೊಂಕಣಿಯನ್ನು  ಮಾತನಾಡಿ, ಬೇರೆಯವರೊಂದಿಗೆ ಕನ್ನಡ ಭಾಷೆಯಲ್ಲಿ ಮಾತನಾಡಿ ಕನ್ನಡ ಲಿಪಿಯನ್ನು ಬಳಸುವರು. ಇವರನ್ನು ಹತ್ತು ಗೋತ್ರಗಳಾಗಿ ವಿಂಗಡಿಸಬಹುದು ಅತ್ರಿ, ಬಾಬ್ರವ್ಸ, ಭಾರಧ್ವಜ, ಗಾರ್ಗ್ಯ, ಕಪಿಲ, ಕೌಶಿಕ, ವಿಶ್ವಾಮಿತ್ರ, ಶಾಂಡಿಲ್ಯ, ವಸಿಷ್ಠ ಮತ್ತು ವತ್ಸ. ಇವರ ಸಾಮಾಜಿಕ ಮತ್ತು ಸಾಂಸ್ಕೃತಿಕ ಆಚರಣೆಗಳು ಗೋವಾ ಗಬಿತರನ್ನು ಹೊಲುತ್ತದೆ.

ಗಬಿತರಲ್ಲಿ ಹೆಚ್ಚಿನ ಜನರು ಮೀನುಹಿಡುಯುವ, ವೃತ್ತಿಯಲ್ಲಿ ತೋಡಗಿದ್ದಾರೆ. ಇವರಲ್ಲಿ ಕೆಲವರು ಬುಟ್ಟಿಗಳನ್ನು ಮಾರುವ ಕೆಲಸದಲ್ಲಿ ತೋಡಗಿದ್ದಾರೆ. ಗಬಿತರು ಸಾಂಪ್ರದಾಯಿಕವಾದ ಪಂಚಾಯಿತಿಯನ್ನು ಹೊಂದಿರುವರು. ಆರ್ಥಿಕವಾಗಿ, ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದ್ದಾರೆ.