ಡಿಗರು ಗುಣಗಿ ಮತ್ತು ಘಡಿಗರೆಂಬ ಹೆಸರುಗಳನ್ನು ಹೊಂದಿದ್ದಾರೆ. ಇವರು ಮುಖ್ಯವಾಗಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕಂಡುಬರುತ್ತಾರೆ. ದ್ರಾವಿಡ ಭಾಷೆಯಾದ ಕನ್ನಡ ಹಾಗೂ ಇಂಡೋ-ಆರ್ಯನ್ ಭಾಷೆಯಾದ ಕೊಂಕಣಿಯನ್ನು ಮನೆಯಲ್ಲಿ ಮಾತನಾಡಿ, ಕನ್ನಡ ಲಿಪಿಯನ್ನು ಉಪಯೋಗಿಸುವರು. ಸೋದರ ಸಂಬಂಧಿ ವಿವಾಹಗಳು ಇವರಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಇವರ ಪ್ರಮುಖ ವಿವಾಹ ಶಾಸ್ತ್ರ ವಿಧಿಗಳು ಎಂದರೆ ಅರಿಸಿನ ಹಚ್ಚುವುದು ಹಾಗೂ ತಾಳಿ ಕಟ್ಟುವುದು ಒಳಗೊಂಡಿದೆ. ಶವವನ್ನು ಸುಟ್ಟು ಹದಿಮೂರನೆಯ ದಿನ ತಿಥಿಯನ್ನು ಮಾಡಲಾಗುವುದು.

ಇತ್ತೀಚೆಗೆ ಕೃಷಿ, ಕಲ್ಲಿನ ಕೆಲಸ ಮತ್ತು ಬುಟ್ಟಿ ಹೆಣೆಯುವ ವೃತ್ತಿಗಳಲ್ಲಿ ತೊಡಗಿದ್ದಾರೆ. ಮಹಿಳೆಯರು, ಮನೆಗೆಲಸಗಳ ಜೊತೆಗೆ ಕೂಳಿಗಳಾಗಿಯೂ ಸಹ ಕೆಲಸ ಮಾಡುವರು. ಸಾಂಪ್ರದಾಯಿಕ ಜಾತಿ ಪಂಚಾಯತಿ ಇವರಲ್ಲಿ ಇದೆ. ಇವರು ಆರಾಧಿಸುವ ಕೆಲವು ದೇವತೆಗಳೆಂದರೆ, ಶಂಕರ, ವೆಂಕಟೇಶ್ವರ ಹಾಗೂ ಚೌಡಿ. ಇವರ ವಿವಾಹ ಶಾಸ್ತ್ರ ವಿಧಿಗಳನ್ನು ಬ್ರಾಹ್ಮಣ ಪುರೋಹಿತರು ನಡೆಸುವರು. ಇವರ ಪವಿತ್ರ ಧಾರ್ಮಿಕ ಸ್ಥಳಗಳೆಂದರೆ ತಿರುಪತಿ ಮತ್ತು ಧರ್ಮಸ್ಥಳ. ಸಾಂಪ್ರದಾಯಿಕ ಬಂಡಿಹಬ್ಬದಲ್ಲಿ ಇವರು ಭಾಗವಹಿಸುತ್ತಾರೆ. ಇವರು ಶಿಕ್ಷಣ, ಬ್ಯಾಂಕ್ ಮತ್ತಿತರೆ ಅಭಿವೃದ್ಧಿ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇವರ ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಶೈಕ್ಷಣಿಕ ಪರಿಸ್ಥಿತಿ ಸುಧಾರಿಸಬೇಕಾಗಿದೆ.