ದಂಡಿಗ ದಾಸರನ್ನು ಚೆನ್ನ ದಾಸರು, ಜಂಬೂದಾಸರು ಹಾಗೂ ಹರಿದಾಸರು ಎಂದೂ ಕರೆಯುತ್ತಾರೆ. ಇವರು ಧಾರವಾಡ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ. ದಂಡಿಗ ದಾಸ ಎಂಬ ಪದವು ‘ದಂಡ’ ಎಂಬ ಪದದಿಂದ ಬಂದಿದೆ. ಹಾಗೆಂದರೆ “ಕೋಲು” ಎಂದರ್ಥ. ಅದನ್ನವರು ಭಿಕ್ಷೆ ಬೇಡುವಾಗ ಸಹಾಯಕ್ಕೆ ಹಾಗೂ ಚೀಲ ಹೊರಲು ಬಳಸುತ್ತಾರೆ. ಇವರ ಸಾಂಪ್ರದಾಯಿಕ ವೃತ್ತಿಯೇ ಭಿಕ್ಷೆ ಬೇಡುವುದು. ಕನ್ನಡವನ್ನು ಮಾತನಾಡಿ ಕನ್ನಡ ಲಿಪಿಯನ್ನು ಬಳಸುತ್ತಾರೆ. ಇವರಲ್ಲಿ ಹಲವಾರು ಬಳ್ಳಿಗಳಿವೆ, ಅವುಗಳು ಮದುವೆಯ ಸಂಬಂಧಗಳು ನಿರ್ದೇಶಿಸುತ್ತವೆ. ದಂಡಿಗ ದಾಸರು ವೈಷ್ಣವ ಭಕ್ತರು. ಇವರು ತಿರುಪತಿಯ ವೆಂಕಟೇಶ್ವರ ಸ್ವಾಮಿಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ.

ಇತ್ತೀಚೆಗೆ ಇವರಲ್ಲಿ ಕೆಲವರು ವಿಭಿನ್ನ ವೃತ್ತಿಗಳಲ್ಲಿ ತೋಡಗಿದ್ದಾರೆ. ಹೆಚ್ಚಿನ ಜನ ವ್ಯವಸಾಯದಲ್ಲಿ ದಿನಗೂಲಿಯನ್ನು ಮಾಡುತ್ತಿದ್ದಾರೆ. ಹನುಮಂತ ಮತ್ತು ಯಲ್ಲಮ್ಮ ಇವರ ಮುಖ್ಯ ದೇವರುಗಳು. ಸಾಂಪ್ರದಾಯಿಕ ಧಾರ್ಮಿಕ ಆಚರಣೆಗಳಲ್ಲಿ ಸಮಾಜದ ಇತರೆ ಜಾತಿಗಳೊಂದಿಗೆ ಭಾಗವಹಿಸುತ್ತಾರೆ. ಇವರು ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಹಿಂದುಳಿದಿದ್ದಾರೆ.