ವೇರಿ’ ಅಥವಾ ‘ಜೋಹಾರಿ’ಯನ್ನು ಜವಾಹಿರ್ ಪದದಿಂದ ಗುರುತಿಸಲಾಗಿದೆ. ಅದರ ಅರ್ಥ ‘ಆಭರಣ’. ಆಭರಣ ಕೆಲಸ ಇವರ ಸಾಂಪ್ರದಾಯಿಕ ವೃತ್ತಿಯಾದ್ದರಿಂದ ಇವರಿಗೆ ಈ ಹೆಸರು ಬಂದಿದೆ. ಇವರು ದೇಶದ ಎಲ್ಲ ರಾಜ್ಯಗಳಲ್ಲೂ ಇದ್ದಾರೆ. ಕರ್ನಾಟಕದಲ್ಲಿ ಬೆಳಗಾವಿ, ಧಾರವಾಡ, ಬೆಂಗಳೂರು, ಮೈಸೂರು ಹಾಗೂ ಚಿತ್ರದುರ್ಗ ಜಿಲ್ಲೆಗಳಲ್ಲಿ ಕಂಡುಬರುತ್ತಾರೆ. ಹೆಚ್ಚಾಗಿ ಕರ್ನಾಟಕದ ಎಲ್ಲಾ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಇವರು ಕಂಡುಬರುತ್ತಾರೆ. ಇವರು ಗುಜರಾತಿನಿಂದ ವಲಸೆ ಬಂದವರಾಗಿದ್ದಾರೆ. ಇವರಿಗೆ ಮಾರವಾಡಿ, ಕನ್ನಡ ಹಾಗೂ ಹಿಂದಿ ಭಾಷೆಗಳು ತಿಳಿದಿವೆ. ಇವರಲ್ಲಿ ಹೊರಬಾಂಧವ್ಯದ ಬೆಡಗುಗಳು-ರಾಥೋಡ, ಬರಡಾಭಟ್ಟ, ಸೋಲಂಕಿ, ಗಾಂಧಿ, ಪರಿವಾರ, ಬಟ್ನಾಂಜಂದ, ನಥಿವನ ಇತ್ಯಾದಿ. ಸಮುದಾಯದ ಮಟ್ಟದಲ್ಲಿ ಒಳಬಾಂಧವ್ಯ ಹಾಗೂ ಬೆಡಗು ಮಟ್ಟದಲ್ಲಿ ಹೊರಬಾಂಧವ್ಯ ವಿವಾಹ ಪದ್ಧತಿಯನ್ನು ಪಾಲಿಸುತ್ತಾರೆ. ವಿಚ್ಛೇದನೆಗೆ ಅವಕಾಶವಿದೆ. ವಿಚ್ಛೇದಿತರು ವಿವಾಹವಾಗಬಹುದು. ವಿಭಕ್ತ ಕುಟುಂಬಗಳು ಇವರಲ್ಲಿವೆ. ಹಿರಿಯ ಮಗ ತಂದೆಯ ನಂತರ ಮನೆಯ ವಾರಸುದಾರನಾಗುತ್ತಾನೆ. ಹೆಂಗಸರು ಸಾಮಾಜಿಕ, ಧಾರ್ಮಿಕ ಆಚರಣೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಹೆರಿಗೆಗೆ ಮುನ್ನ ‘ಗೋದ್ ಭರನಾ’ ಆಚರಣೆಯನ್ನು ಗರ್ಭಿಣಿಯ ಏಳನೆಯ ತಿಂಗಳಲ್ಲಿ ಮಾಡುತ್ತಾರೆ. ಋತುಮತಿಯಾದಾಗ ‘ಖೋಪಡಾಹಾನ’ ಎನ್ನುವ ಕಾರ್ಯ ಮಾಡುತ್ತಾರೆ. ವಧುವಿನ ಪೋಷಕರ ಮನೆಯಲ್ಲಿಯೇ ಮದುವೆಯ ಆಚರಣೆಗಳ ನಡೆಯುತ್ತದೆ. ಶವವನ್ನು ಹೂಳುತ್ತಾರೆ ಅಥವಾ ಸುಡುತ್ತಾರೆ, ಸೂತಕವು ಹನ್ನೆರಡು ದಿನಗಳವರೆಗೆ ಇರುತ್ತದೆ.

ಇವರ ಸಾಂಪ್ರದಾಯಿಕ ವೃತ್ತಿ ಆಭರಣಗಳ ವ್ಯಾಪಾರ. ಇತರೆ ಸಣ್ಣ ಹಾಗೂ ದೊಡ್ಡ ಪ್ರಮಾಣದ ವ್ಯಾಪಾರದಲ್ಲಿ ಇತ್ತೀಚೆಗೆ ತೊಡಗಿಕೊಂಡಿದ್ದಾರೆ. ಸರ್ಕಾರಿ ಹಾಗೂ ಖಾಸಗಿ ಉದ್ಯೋಗಗಳಲ್ಲಿಯೂ ಕೆಲವರು ಇದ್ದಾರೆ. ಇವರು ರಾಮ, ಹನುಮ, ಆಶಾಪುಕಿ, ಅಂಬಾಮಾತಾ, ಸುಂದ್ರಿಮಾತಾ, ದುರ್ಗಾ, ಮುಂತಾದ ದೇವರುಗಳನ್ನು ಪೂಜಿಸುತ್ತಾರೆ. ಈ ಜನರು ಸಾಂಪ್ರದಾಯಿಕ ‘ಅಂಬಾಮಾತೆಯ ಉತ್ಸವ’ ಆಚರಿಸುತ್ತಾರೆ. ಆಧುನಿಕ ಶಿಕ್ಷಣದ ಕಡೆಗೆ ಇವರ ಒಲವು ಇದೆ. ಆಧುನಿಕ ಸಾಮಾಜಿಕ ವ್ಯವಸ್ಥೆಗಳಿಂದ ಸಿಗುತ್ತಿರುವ ಉಪಯೋಗಗಳನ್ನು ಇವರು ಪಡೆದುಕೊಳ್ಳುತ್ತಿದ್ದಾರೆ.