ಜೇನುಕುರುಬರು, ಕಾಡಿನೊಳಗೆ ವಾಸಿಸುವ ಒಂದು ಬುಡಕಟ್ಟು ಸಮುದಾಯ. ಪ್ರಮುಖವಾಗಿ ಜೇನು ಸಂ‌ಗ್ರಹಿಸುವುದನ್ನು ತಮ್ಮ ಸಾಂಪ್ರದಾಯಿಕ ವೃತ್ತಿ ಮಾಡಿಕೊಂಡಿರುವುದರಿಂದ ಇವರು ಜೇನು ಕುರುಬರೆಂದು ಗುರುಸಿಸಲ್ಪಡುತ್ತಾರೆ. ಪ್ರಮುಖವಾಗಿ ಮೈಸೂರು ಜಿಲ್ಲೆಯ  ಹೆಗ್ಗಡದೇವನಕೋಟೆ ಮತ್ತು ಹುಣಸೂರು ತಾಲೂಕಿನಲ್ಲಿ, ಕೊಡಗು ಜಿಲ್ಲೆಯ ಕುಶಾಲನಗರ, ಸೋಮವಾರ ಪೇಟೆ ಮತ್ತು ಮಡಿಕೇರಿ ತಾಲೂಕುಗಳಲ್ಲಿ ಕಂಡುಬರುತ್ತಾರೆ. ೧೯೭೦ರ ಕೊಡಗಿನ ಗೆಜೆಟಿಯರ್‌ನಲ್ಲಿ ಜೇನು ಕುರುಬರ ಪ್ರತ್ಯೇಕವಾದ ವರ್ಗೀಕರಣ ಕಂಡುಬರುತ್ತದೆ. ರಿಕ್ಟರ್ ಅವರು “ಜೇನು ಕುರುಬರು ಕಕೇಷಿಯನ್ನರಿಗಿಂತ ಮಂಗೋಲಿಯನ್ ಜನಾಂಗದವರನ್ನು ಹೋಲುತ್ತಾರೆಂದು, ಇವರ ಕೆನ್ನೆ ಮೂಳೆಯು ಉಬ್ಬಿಕೊಂಡು ಎದ್ದು ಕಾಣುವ ಹಾಗಿದೆ” ಎಂದು ತಿಳಿಸಿದ್ದಾರೆ. ೧೯೩೯ರಲ್ಲಿ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಇವರ ಸಂಸ್ಕೃತಿ ಜೀವನ ಕ್ರಮವನ್ನು ವಿಶಿಷ್ಠವಾದವು  ಎಂದು ಗಮನಿಸಿ ಇವರ ಜೀವನ ಕ್ರಮ, ಲೋಕ ದೃಷ್ಟಿ, ಪ್ರಕೃತಿಯ ಬಗ್ಗೆ ಕಾಳಜಿ, ಇವೆಲ್ಲವನ್ನು ಮೂಲವಾಗಿ ಇಟ್ಟುಕೊಂಡು ‘ಕಾಕನಕೋಟೆ’ ಎಂಬ ನಾಟಕವನ್ನು ರಚಿಸಿದ್ದಾರೆ. ಹತ್ತು ಹದಿನೈದು ಗುಡಿಸಲುಗಳನ್ನು ಕಟ್ಟಿಕೊಂಡು ವಾಸಿಸುವ ಇವರ ಜೀವನ ಕ್ರಮ ವಿಶಿಷ್ಟವಾಗಿದೆ.

ಜೇನುಕುರುಬ ಮಹಿಳೆ

ಜೇನುಕುರುಬ ಮಹಿಳೆ

ಸೋದರ ಸಂಬಂಧಿ ವಿವಾಹಗಳು ಇವರಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ವಿಧವೆ, ವಿಧುರ ಹಾಗೂ ವಿಚ್ಛೇದಿತರಿಗೆ ವಿವಾಹಕ್ಕೆ ಅವಕಾಶವಿದೆ. ಗಂಡು ಮಗುವನ್ನು ವಂಶೋದ್ಧಾರಕನೆಂದು ಭಾವಿಸುತ್ತಾರೆ. ತಂದೆಯ ನಂತರ ಹಿರಿಯ ಮಗನು ಮನೆಯ ವಾರಸುದಾರನಾಗುತ್ತಾನೆ. ಹೆಂಗಸರು ಎಲ್ಲ ಆರ್ಥಿಕ ಕೆಲಸಗಳಲ್ಲಿ ಭಾಗವಹಿಸಿ ಮನೆಯ ಆದಾಯಕ್ಕೆ ಸಹಾಯಕವಾಗುತ್ತಾರೆ. ಶವವನ್ನು ಹೂಳುತ್ತಾರೆ ಹಾಗೂ ಸೂತಕ ಹನ್ನೆರಡು ದಿನಗಳವರೆಗೆ ಇರುತ್ತದೆ. ಜೇನು ಸಂಗ್ರಹಿಸುವುದು. ಗಿಡ ಮೂಲಿಕೆ, ಹಣ್ಣು ಹಂಪಲು, ಗಡ್ಡೆ ಗೆಣಸು ಸಂಗ್ರಹಿಸುವುದು ಇವರ ಸಾಂಪ್ರದಾಯಿಕ ವೃತ್ತಿಯಾಗಿದೆ.

ಸರ್ಕಾರವು ಇವರಲ್ಲಿ ಕೆಲವರಿಗೆ ಉಳುಮೆ ಮಾಡುವ ಭೂಮಿಯನ್ನು ನೀಡಿದೆ. ಚಿಕ್ಕಮ್ಮ, ದೊಡ್ಡಮ್ಮ, ಪಟಾಲಮ್ಮ ಇತ್ಯಾದಿಗಳು ಇವರ ದೇವತೆಗಳು. ಕುಟುಂಬ ಕಲ್ಯಾಣ ಯೋಜನೆಯ ಬಗ್ಗೆ ಅವರಿಗೆ ಅಷ್ಟಾಗಿ ಆಸಕ್ತಿಯಿಲ್ಲ. ಸರ್ಕಾರವು ಇವರಿಗೆ ವಸತಿ ಯೋಜನೆಗಳನ್ನು ರೂಪಿಸಿದೆ. ಆದರೆ ಇವುಗಳು ಸರಿಯಾಗಿ  ಕಾರ್ಯರೂಪಕ್ಕೆ ಬರುತ್ತಿಲ್ಲ. ಆಧುನಿಕ ಸಾಮಾಜಿಕ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ಹಿಂದುಳಿದ ಬುಡಕಟ್ಟು ಸಮುದಾಯವಾಗಿದೆ.

ಜೇನುಕುರುಬರ ಕುಟುಂಬ

ಜೇನುಕುರುಬರ ಕುಟುಂಬ

ನೋಡಿ

ಲಲಿತ ಎ.ಸಿ., ೧೯೯೩. ಕಾಡುಕುರುಬ ಮತ್ತು ಸಂಸ್ಕೃತಿ,  ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು.

Hayavadana Rao, C., 1909. ‘The Kurubas : A Forest Tribe of the Nilgiris’ Anthropomous,  4 : 178:181

Iyer L.K. Anantha Krishna., 1929. ‘Kadu Kuruba’, Man in India. Vol. 9(4). 223-229

Iyer, L.K. Anantha Krishna., 1948. ‘Kuruba (Betta)’ The Coorg Tribes and Castes : Garden press, Madras.

Krishna, M., 1963. ‘Kuruba a Vanishing Tribe’ Bulletion of Institute of Traditional Culture,  Parts I and II

Kundaiah, K.Narayana, and M.K.Umadevi., 1982. Jenunudi – I Mysore Central Institute of Indian Languges

Kurup, A.M. and B.K.Roy Burman., 1961. Jenukuruba and Kadu (Betta) Kuruba In : Census of India., Part V –B(i) (Ethnographic notes) : Manager of Publications, Delhi Misra, P.K., 1970. ‘Economic development among the Jenu Kurubas’, Man in India, Vol 50 (1) 78-86

Misra P.K., 1969. ‘Jenu Kuruba’, Bulletin of the Anthropological Survey of India 18(3)

Misra, P.K. 1977. ‘The Jenu Kuruba’ In : Primitive Tribe : The First Step,  S.Sinha and B.D.Sharma (ed): Government of India, Ministry of Home affairs, New Delhi

Mutharayappa R., 1993. ‘Socio-Cultural Factors and Marriage Among Jenukuruba and Kadu Kuruba Tribes of Karnataka’, Man in India 73(1), 17-27

Mutharayappa. R., 1997. Socio-Cultural Factors and Marriages Among Jenukuruba and Kadu Kuruba Tribes of Karnataka, Man in India 77(4)397-408

Raghavan, M.D., 1929. ‘Jainu Kurubas – An Accounts of Their Life and Habits’, Man in India,  Vol 9, pp -54-65.

Sadasivaiah, H.M., 1967. ‘Kadu Kurubas’ Journal of the Mysore University,  23: 48-54

Shanthi, 1996. Women in Tribal Society, A Sociological Study of Jenu Kurubas  (Unpublished), Ph.d. Thesis, Dept of Sociology, University of Mysore, Mysore.

Velrathapa, K., 1965. ‘The Cultural Trends of Hill Tribe : Kadu Kuruba in Mysore’, Quarterly Journal of the Mithic Society, 53(3-4) : 107-112